ಮೃದು ಕೋಮಲ ಚರ್ಮಕ್ಕೆ ಆಯುರ್ವೇದ ಪರಿಹಾರ

ಮೃದು ಕೋಮಲ ಚರ್ಮಕ್ಕೆ ಆಯುರ್ವೇದ ಪರಿಹಾರಮೃದು ಕೋಮಲ ಚರ್ಮಕ್ಕೆ ಆಯುರ್ವೇದ ಚಿಕಿತ್ಸೆ ಮತ್ತು ಉತ್ತಮ ಜೀವನಶೈಲಿ ಒಳ್ಳೆಯದು. ನಿಯತವಾಗಿ ಯೋಗ ಮತ್ತು ಧ್ಯಾನ ಅಭ್ಯಾಸ ಮಾಡಿ.ಸೂರ್ಯನ ಪ್ರಖರ ಝಳದಲ್ಲಿ ಹೊರಗೆ ಹೋಗಬೇಡಿ.

ಚರ್ಮವು ಸಾಮಾನ್ಯವಾಗಿ ಮೂರು ಪದರಗಳಿಂದ ನಿರ್ಮಾಣವಾಗಿರುತ್ತದೆ. ಅವುಗಳೆಂದರೆ ಎಪಿಡರ್ಮಿಸ್, ಡರ್ಮಿಸ್ ಮತ್ತು ಸಬ್‍ಕುಟಾನಿಯಸ್ ಅಂಗಾಂಶ. ಎಪಿಡರ್ಮಿಸ್ ಹೊರ ಪದರವಾಗಿದೆ. ಎಪಿಡರ್ಮಿಸ್‍ನ ಕೋಶಗಳು ಎಪಿಡರ್ಮಿಸ್‍ನ ಕೆಳ ಪದರದಿಂದ ಮೇಲ್ಪದರಕ್ಕೆ ಚಲಿಸುತ್ತದೆ. ಎಪಿಡರ್ಮಿಸ್ ಬಾಹ್ಯ ಪರಿಸರಕ್ಕೆ ರಕ್ಷಣಾ ಪದರವಾಗಿ ಕಾರ್ಯನಿರ್ವಹಿಸುತ್ತದೆ. ಕೋಶಗಳು ಮೇಲ್ಪದರವನ್ನು ತಲುಪುತ್ತಿದ್ದಂತೆ ಅವು ಪೊರೆ ಬಿಟ್ಟುಕೊಳ್ಳುತ್ತವೆ.  ಎರಡನೇ ಪದರ ಡರ್ಮಿಸ್. ಇದು ಸಂಪರ್ಕ ಅಂಗಾಂಶಗಳನ್ನು ಒಳಗೊಂಡಿದ್ದು, ಚರ್ಮದ ವಿನ್ಯಾಸಾತ್ಮಕ ಅಂಶಗಳಾಗಿರುತ್ತವೆ. ಈ ಅಂಗಾಂಶಗಳು ಚರ್ಮಕ್ಕೆ ದೃಢತೆ (ಕೊಲಾಜಿನ್ ಫೈಬರ್‍ಗಳು), ಸ್ಥಿತಿ ಸ್ಥಾಪಕತ್ವ, ಹೊಂದಿಕೊಳ್ಳುವ ಗುಣ (ಎಲಾಸ್ಟಿನ್) ಇತ್ಯಾದಿ ನೀಡುತ್ತದೆ. ಎಪಿಡರ್ಮಿಸ್‍ನ ಕೋಶಗಳು ಡರ್ಮಿಸ್‍ನಲ್ಲಿನ ರಕ್ತನಾಳಗಳಿಂದ ಅವುಗಳ ಪೋಷಕಾಂಶಗಳನ್ನು ಸ್ವೀಕರಿಸುತ್ತವೆ. ಡರ್ಮಿಸ್ ಕೆಳಗೆ ಇರುವ ಸಬ್‍ಕುಟಾನಿಯಸ್ ಅಂಗಾಂಶವು ಕೊಬ್ಬು ಕೋಶಗಳನ್ನು ಒಳಗೊಂಡಿರುತ್ತವೆ. ಈ ಫ್ಯಾಟ್ ಸೆಲ್‍ಗಳು ದೇಹಕ್ಕೆ ರಕ್ಷಣೆ (ಇನ್ಸುಲೇಷನ್) ಒದಗಿಸುತ್ತದೆ. ಫ್ಯಾಟ್ ಸೆಲ್‍ಗಳಿಂದಾಗಿ ಚರ್ಮವು ಕೊಬ್ಬಿದಂತೆ ಕಾಣುತ್ತದೆ.

ವಯಸ್ಸಾದಂತೆ ಚರ್ಮದಲ್ಲಿ ಬದಲಾವಣೆಗಳು

ಎಪಿಡರ್ಮಿಸ್‍ನಲ್ಲಿ ಬದಲಾವಣೆಗಳು : ವಯಸ್ಸಾದಂತೆ ಎಪಿಡರ್ಮಲ್ ಕೋಶಗಳು ತೆಳುವಾಗುತ್ತವೆ. ಅವು ತಮ್ಮ ಸ್ಥಿರತೆಯನ್ನು ಸಹ ಕಳೆದುಕೊಳ್ಳುತ್ತವೆ. ಎಪಿಡರ್ಮಲ್ ಕೋಶಗಳಲ್ಲಿನ ಈ ಬದಲಾವಣೆ ತೇವಾಂಶವನ್ನು ಉಳಿಸಿಕೊಳ್ಳುವ ಬದಲು ಅದು ಹೊರ ಹೋಗಲು ಅವಕಾಶ ನೀಡುತ್ತವೆ. ಇದರಿಂದ ಚರ್ಮ ಒಣಗುತ್ತದೆ. ನಮಗೆ ವಯಸ್ಸಾದಂತೆ ಎಪಿಡರ್ಮಲ್ ಕೋಶಗಳು ನಿಧಾನವಾಗಿ ವಿಭಜನೆಯಾಗಲು ಆರಂಭವಾಗುತ್ತದೆ ಹಾಗೂ ದುರಸ್ತಿಗೊಳ್ಳುವ ಪ್ರಕ್ರಿಯೆಯ ಪ್ರಮಾಣ ಕೂಡ ಕ್ಷೀಣಿಸುತ್ತದೆ.

Also Read: ಚರ್ಮ ಸುಕ್ಕು..!! ಮತ್ತು ಕಣ್ಣಿನ ಕಪ್ಪು ವರ್ತುಲ – ಕಾರಣಗಳೇನು?

ಡರ್ಮಿಸ್‍ನಲ್ಲಿ ಬದಲಾವಣೆಗಳು

1. ಕೊಲಾಜಿನ್ ಫೈಬರ್ ಉತ್ಪಾದನೆ ಕಡಿಮೆಯಾಗುತ್ತದೆ

2. ಎಲಾಸ್ಟಿನ್ ಫೈಬರ್‍ಗಳು ಸವೆದು ಹೋಗುತ್ತವೆ

3. ಸೆಬಾಷಿಯಸ್ ಗ್ರಂಥಿಗಳಿಂದ ಸೆಬಮ್ ಉತ್ಪಾದನೆ ಕಡಿಮೆಯಾಗುತ್ತದೆ.

4. ಬೆವರು ಗ್ರಂಥಿಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತದೆ.

5. ಪೋಷಕಾಂಶಗಳ ಪೂರೈಕೆಯೂ ಕುಂಠಿತವಾಗುತ್ತದೆ.

6. ಸಬ್‍ಕುಟಾನಿಯಸ್ ಅಂಗಾಂಶಗಳಲ್ಲಿ ಬದಲಾವಣೆಗಳು

7. ವಯಸ್ಸಾದಂತೆ ಫ್ಯಾಟ್ ಸೆಲ್‍ಗಳು ಸಣ್ಣದಾಗುತ್ತವೆ

8. ಚರ್ಮದ ಮೂರು ಪದರಗಳಲ್ಲಿನ ಈ ಎಲ್ಲ ಬದಲಾವಣೆಗಳು ಚರ್ಮ ಸುಕ್ಕುಗಟ್ಟಲು ಮತ್ತು ಕುಂದಲು ಕಾರಣವಾಗುತ್ತದೆ.

ಅವಧಿಗೆ ಮುನ್ನವೇ ವಯಸ್ಸಾಗುವಿಕೆಗೆ ಕಾರಣ – ಸೂಕ್ತ ಸಲಹೆಗಳು

ಸೂರ್ಯನಿಂದ ನಿರಂತರವಾಗಿ ಆಲ್ಟ್ರಾವಯೋಲೆಟ್ ವಿಕರಣಕ್ಕೆ ಒಳಗಾಗುವುದರಿಂದ ಅವಧಿಗೆ ಮುನ್ನವೇ ಚರ್ಮಕ್ಕೆ ವಯಸ್ಸಾಗುತ್ತದೆ. ಸೂರ್ಯನ ಪ್ರಕರಣ ಕಿರಣಗಳಿಗೆ ಅಗಾಗ ಒಳಗಾಗುವುದರಿಂದ ಎಪಿಡರ್ಮಿಸ್ ತೆಳುವಾಗಿ ಬಾಸಲ್ ಸೆಲ್ ಕಾರ್ಸಿನೊಮಾ ಮತ್ತು ಸ್ಕಾವಮೊಸ್ ಸೆಲ್ ಕಾರ್ಸಿನೊಮಾದಂಥ ಅನೇಕ ಹಾನಿಕಾರಕ ಚರ್ಮರೋಗಗಳಿಗೆ ಕಾರಣವಾಗುತ್ತದೆ. ಸೂರ್ಯ ಕಿರಣಗಳಿಂದ ಡರ್ಮಿಸ್‍ನ ಕೊಲಾಜಿನ್ ಫೈಬರ್‍ಗಳಿಗೂ ಸಹ ಹಾನಿಯಾಗಿ ವಯಸ್ಸಿಗೆ ಮುನ್ನವೇ ವಯಸ್ಸಾಗುವುದಕ್ಕೆ ಕಾರಣವಾಗುತ್ತದೆ.

1. ನಿಯತವಾಗಿ ಮಾಯಿಶ್ಚರೈಸರ್‍ಗಳನ್ನು ಲೇಪಿಸಬೇಕು.

2. ಏರ್ ಕಂಡಿಷನರ್‍ಗಳು ಮತ್ತು ರೂಮ್ ಹೀಟರ್‍ಗಳು ಚರ್ಮವನ್ನು ಒಣಗಿಸುತ್ತವೆ. ಆದ್ದರಿಂದ ಇಂಥ ಸ್ಥಿತಿಗಳಲ್ಲಿ ಕೆಲಸ ಮಾಡುವಾಗ ಹೆವಿಯರ್ ಮಾಯಿಶ್ಚರೈಸರ್‍ಗಳನ್ನು ಲೇಪಿಸಬೇಕು.

3. ಅಧಿಕ ದೈಹಿಕ ಕೆಲಸದ ನಂತರ ತಕ್ಷಣ ತಣ್ಣೀರಿನ ಸ್ನಾನ ಮಾಡುವಿಕೆ ಸೂಕ್ತ.

4. ಕಣ್ಣಿನ ಕೆಳಭಾಗದ ಸೂಕ್ಷ್ಮ ಚರ್ಮ ಅಥವಾ ಮುಖದ ಚರ್ಮವನ್ನು ಹಿಗ್ಗಿಸಬೇಡಿ ಅಥವಾ ಎಳೆಯಬೇಡಿ.

5. ಸೂರ್ಯನ ಪ್ರಖರ ಝಳದಲ್ಲಿ ಹೊರಗೆ ಹೋಗಬೇಡಿ. ಜೊತೆಯಲ್ಲಿ ಛತ್ರಿ ಕೊಂಡ್ಯೊಯಿರಿ, ಸನ್ ಗ್ಲಾಸ್‍ಗಳನ್ನು ಧರಿಸಿ ಮತ್ತು ಸ್ಕಿನ್ ಲೋಷನ್‍ಗಳನ್ನು ಲೇಪಿಸಿ.

turmeric and skin care6. ಧೂಮಪಾನ ತ್ಯಜಿಸಿ.

7. ನಿಯಮಿತವಾಗಿ ಕಡಲೆಕಾಳು ಮತ್ತು ಸೋಯಾ ಬೀನ್ಸ್ ಸೇವಿಸಿ.

8. ಸಾಕಷ್ಟು ಹಾಲು ಕುಡಿಯಿರಿ.

9. ನಿಯತವಾಗಿ ಯೋಗ ಮತ್ತು ಧ್ಯಾನ ಅಭ್ಯಾಸ ಮಾಡಿ.

ಮನೆ ಮದ್ದು

1. ವಾರಕ್ಕೊಮ್ಮೆ 10 ನಿಮಿಷಗಳ ಕಾಲ ಮೊಟ್ಟೆಯ ಲೋಳೆಯನ್ನು ಲೇಪಿಸಿ.

2. ಜೇನುತುಪ್ಪ, ಆಲಿವ್ ಆಯಿಲ್ ಮತ್ತು ಕ್ರೀಮ್ ಮಿಶ್ರಣವು ಉತ್ತಮ ಫಲಿತಾಂಶ ನೀಡುತ್ತದೆ.

3. ವಾರಕ್ಕೊಮ್ಮೆ ಪೋಷಣೆ ನೀಡುವ ಮಾಸ್ಕ್ ಲೇಪಿಸಿ.

ಡಾ. ಎಸ್.ಎಸ್. ಹಿರೇಮಠ ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ #1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10 ದೂ.: 080-2350 5777, ಮೊಬೈಲ್ : 9341226614 Email : dhanvantari.ayurveda@gmail.com

ಡಾ. ಎಸ್.ಎಸ್. ಹಿರೇಮಠ
ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ
#1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್,  ರಾಜಾಜಿನಗರ, ಬೆಂಗಳೂರು-10
ದೂ.: 080-2350 5777, ಮೊಬೈಲ್ : 9341226614
Email : dhanvantari.ayurveda@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!