ಕಳರಿ ಮರ್ಮ ಚಿಕಿತ್ಸೆ ಅಥವಾ ಕಳರಿ ಚಿಕಿತ್ಸೆ – ಬೆನ್ನು ನೋವಿನ ಸಮಸ್ಯೆಗೆ ಕೇರಳದ ಆಯುರ್ವೇದ ಚಿಕಿತ್ಸೆ

ಕಳರಿ ಮರ್ಮ ಚಿಕಿತ್ಸೆ ಅಥವಾ ಕಳರಿ ಚಿಕಿತ್ಸೆ – ಬೆನ್ನು ನೋವು/ ಡಿಸ್ಕ್ ತೊಂದರೆ/ ಸಯಾಟಿಕಾ ಸಿಂಡ್ರೋಮ್‍ಗೆ  ವಿಶೇಷ  ಕೇರಳದ ಆಯುರ್ವೇದ ಚಿಕಿತ್ಸೆ . ಕೇರಳದ ಕಳರಿ ಚಿಕಿತ್ಸಾ ತಜ್ಞರಿಂದ ತರಬೇತಿ ಪಡೆದ ಉಕ್ಕಿನಡ್ಕಾಸ್ ಆಯುರ್ವೇದದ ತಜ್ಞ ವೈದ್ಯರು ಈ ಚಿಕಿತ್ಸೆಯನ್ನು ನೀಡುತ್ತಾರೆ.

kalari-marma-chikitseಇಂದು ಪ್ರಪಂಚದಲ್ಲೇ ಬೆನ್ನು ನೋವು ಸಮಸ್ಯೆ ಅತ್ಯಂತ ಹೆಚ್ಚು ಜನರನ್ನು ಕಾಡುವಂತಹ ಸಮಸ್ಯೆ. ಕಚೇರಿಗಳಲ್ಲಿ ರಜಾ ಹಾಕುವ ಆರೋಗ್ಯ ಸಮಸ್ಯೆಗಳಲ್ಲಿ ಬೆನ್ನು ನೋವಿಗೆ ಪ್ರಪಂಚದಲ್ಲೇ ಅಗ್ರ ಸ್ಥಾನ. ಬೆನ್ನು ನೋವಿನ ಸಮಸ್ಯೆಯನ್ನು ಕಟಿಶೂಲ ವಾತ, ಕಟಿಗ್ರಹ ವಾತ, ಗೃಧ್ರಸೀ ವಾತ ಎಂದು ಬೇರೆ ಬೇರೆ ಹೆಸರಿನಿಂದ ಕಾರಣಾನುಸಾರ ಆಯುರ್ವೇದದಲ್ಲಿ ವಿವರಿಸಿರುತ್ತಾರೆ.

Also Read: ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು!

ಕಳರಿ ಚಿಕಿತ್ಸೆ ಅಥವಾ ಕಳರಿ ಮರ್ಮ ಚಿಕಿತ್ಸೆ:

ಕಳರಿಯಟ್ ಅಥವಾ ಕಳರಿ ಕುಸ್ತಿ ವಿದ್ಯೆ ಎನ್ನುವಂಥದ್ದು ಬಹಳ ಪುರಾತನ ಕೇರಳೀಯ ಜ್ಞಾನ. ಇದನ್ನು ಅಭ್ಯಾಸ ಮಾಡುವಾಗ ಸಂಧುಗಳ ಉಳುಕು, ಬೆನ್ನು ನೋವು ಕಾಡುವುದು ಸಾಮಾನ್ಯ. ಇಂತಹ ಸಮಸ್ಯೆಗಳಿಗೆ ಸಂಧುಗಳನ್ನು ಕೆಲವು ವಿಶಿಷ್ಟ ವಿಧಾನಗಳ ಮೂಲಕ ಪುನಃ ಜೋಡಣೆ ಮಾಡುವ ವಿಧಾನವೂ ಅಷ್ಟೇ ರೋಚಕ. ಇದನ್ನು ಕಳರಿ ಚಿಕಿತ್ಸೆ ಅಥವಾ ಕಳರಿ ಮರ್ಮ ಚಿಕಿತ್ಸೆ ಎಂದೂ ಕರೆಯಲಾಗುತ್ತದೆ.

ಈ ಚಿಕಿತ್ಸೆ ಸಾಮಾನ್ಯ ದಕ್ಷಿಣ ಹಾಗೂ ಮಧ್ಯ ಕೇರಳದಲ್ಲಿ ಮಾತ್ರ ಲಭ್ಯವಿದ್ದು ಉತ್ತರ ಕೇರಳದಲ್ಲಿ ಬಹಳ ವಿರಳ. ಆದರೆ ಈಗ ಉತ್ತರ ಕೇರಳ ಮತ್ತು ಕರ್ನಾಟಕದ ಜನತೆ ಈ ಚಿಕಿತ್ಸೆಗೆ ಬಹಳ ದೂರ ಕ್ರಮಿಸಬೇಕಿಲ್ಲ. ಕೇರಳದ ಕಳರಿ ಚಿಕಿತ್ಸಾ ತಜ್ಞರಿಂದ ತರಬೇತಿ ಪಡೆದ ಉಕ್ಕಿನಡ್ಕಾಸ್ ಆಯುರ್ವೇದದ ತಜ್ಞ ವೈದ್ಯರು ಈ ಚಿಕಿತ್ಸೆಯನ್ನು ನೀಡುತ್ತಾರೆ. ಕಳೆದ 5 ವರ್ಷಗಳಿಂದ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದು ಬಹುತೇಕ ಜನರು ಈ ಚಿಕಿತ್ಸೆಯ ಫಲಾನುಭವಿಗಳಾಗಿರುತ್ತಾರೆ.

ಯಾವೆಲ್ಲಾ ಸಮಸ್ಯೆಗಳಿಗೆ ಕಳರಿ ಮರ್ಮ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ?

1. ಬೆನ್ನು ನೋವು, ಡಿಸ್ಕ್ ಸಮಸ್ಯೆ, ಸಯಾಟಿಕ ಸಿಂಡ್ರೋಮ್, ಲಂಬೋ ಸೇಕ್ರಲ್ ಸ್ಟ್ರೇನ್, ಸಾಕ್ರೋ ಇಲಿಯೈಟಿಸ್, ಸರ್ವೈಕಲ್ ಸ್ಪಾಂಡಿಲೈಟಿಸ್, ಸರ್ವೈಕಲ್ ರಾಡಿಕುಲೋಪತಿ (ಕುತ್ತಿಗೆ ನೋವು), ಥೊರಾಸಿಕ್ ಡಿಸ್ಕ್ ಡಾಮೇಜ್, ಸಮಸ್ಯೆ ಇರುವ ರೋಗಿಗಳಿಗೆ ಈ ಚಿಕಿತ್ಸೆ ವರದಾನವಾಗಿದೆ.

2. ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದ 98% ರೋಗಿಗಳು ಈ ಚಿಕಿತ್ಸಾ ವಿಧಾನದಿಂದ ಗುಣಮುಖರಾಗಿರುತ್ತಾರೆ.

3. ಬೆನ್ನು ಹಾಗೂ ಕುತ್ತಿಗೆ ನೋವು ಅಲ್ಲದೆ ಫ಼್ರೋಜನ್ ಶೋಲ್ಡರ್, ಭುಜ ನೋವು, ಸಂದು ನೋವು ಹಾಗೂ ಉಳುಕು ನೋವುಗಳಿಗೂ ಈ ಚಿಕಿತ್ಸೆ ಫಲಪ್ರದವಾಗಿರುತ್ತದೆ.

4. ಲಕ್ವ/ ಪಕ್ಷವಾತ ರೋಗಿಗಳಿಗೂ ಈ ಚಿಕಿತ್ಸೆ ಪ್ರಯೋಜನಕಾರಿಯಾಗಿದ್ದು ಪಕ್ಷವಾತ ರೋಗಿಗಳು ಉಕ್ಕಿನಡ್ಕದಲ್ಲಿ ಒಳರೋಗಿಯಾಗಿಯೇ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಈ ಚಿಕಿತ್ಸೆ ಪಡೆಯಲು ಎಷ್ಟು ಸಮಯ ಬೇಕು?

ಉಕ್ಕಿನಡ್ಕಾಸ್ ಆಯುರ್ವೇದದ ಉಕ್ಕಿನಡ್ಕ, ಮಂಗಳೂರು ಹಾಗೂ ಬೆಂಗಳೂರು ಶಾಖೆಯಲ್ಲಿ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಚಿಕಿತ್ಸೆಯನ್ನು ಹೊರರೋಗಿ ಚಿಕಿತ್ಸಾ ವಿಭಾಗದಲ್ಲೇ ನೀಡಲಾಗುತ್ತದೆ. ಮೇಲೆ ಹೇಳಿದ ಶಾಖೆಗಳಲ್ಲಿ ಮುಂಗಡ ಸಮಯ ಕಾದಿರಿಸಿ (ಅಪಾಯಿಂಟ್‍ಮೆಂಟ್ ಪಡೆದು) ಬಂದಲ್ಲಿ ಬಹಳ ಉತ್ತಮ. ಉಕ್ಕಿನಡ್ಕದಲ್ಲಿ ಬುಧವಾರ ಮತ್ತು ಶುಕ್ರವಾರ ಹೊರತು ಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಹಾಗೂ ಮಂಗಳೂರಿನಲ್ಲಿ ಪ್ರತೀ ಶುಕ್ರವಾರ ಈ ಚಿಕಿತ್ಸೆ ಲಭ್ಯವಿದೆ. ಬೆಂಗಳೂರಿನ ಹನುಮಂತನಗರದ ಉಕ್ಕಿನಡಾಸ್ ಆಯುರ್ವೇದ ಶಾಖೆಯಲ್ಲಿ ಪ್ರತೀ ತಿಂಗಳ ಮೊದಲ ಬುಧವಾರ ಮರ್ಮ ಚಿಕಿತ್ಸೆ ಲಭ್ಯವಿದೆ.

ಜೊತೆಯಲ್ಲಿ ಇತರ ಔಷಧಿಗಳ ಸೇವನೆ ಅಗತ್ಯವಿದೆಯೇ?

ಹೌದು, ಡಿಸ್ಕ್ ಸಮಸ್ಯೆಗೆ ಮರ್ಮ ಚಿಕಿತ್ಸೆ ಜೊತೆಯಲ್ಲಿ 3 ತಿಂಗಳುಗಳ ಕಾಲ ಆಯುರ್ವೇದ ಔಷಧಿಗಳನ್ನು ಹಾಗೂ ಹಚ್ಚಲು ತೈಲ/ ಮುಲಾಮುಗಳನ್ನು ಉಪಯೋಗಿಸಬೇಕಾಗುವುದು ಹಾಗೂ ಸೂಚಿಸಿದ ಯೋಗಾಸನಗಳನ್ನು ಮುಂದಿನ 6-24 ತಿಂಗಳುಗಳ ಕಾಲ ಮಾಡಬೇಕು.

ಈ ಸಮಸ್ಯೆ ಇರುವವರಿಗೆ ಒಳರೋಗಿ ಚಿಕಿತ್ಸೆ ಅಗತ್ಯವಿದೆಯೇ?

ಅತ್ಯಂತ ತೀವ್ರ ಸಮಸ್ಯೆಯಿದ್ದು, ಡಿಸ್ಕ್ ಗೆ ಅತೀವ ಹಾನಿಯಾಗಿದ್ದಲ್ಲಿ ಪರೀಕ್ಷಿಸಿ ಪಂಚಕರ್ಮ ಚಿಕಿತ್ಸೆ ಪಡೆಯಲು ಸೂಚಿಸಿದಲ್ಲಿ, ಉಕ್ಕಿನಡ್ಕದ  ಆಯುರ್ವೇದ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ 10, 14 ಅಥವಾ 21 ದಿನಗಳ ಪಂಚಕರ್ಮ ಕೋರ್ಸ್ ಪಡೆಯಬೇಕಾಗಿ ಬರಲೂಬಹುದು.

ಉಕ್ಕಿನಡ್ಕಾಸ್ ಆಯುರ್ವೇದದಲ್ಲಿ ಇತರ ಯಾವ ಯಾವ ರೋಗಗಳಿಗೆ ಚಿಕಿತ್ಸಾ ಸೌಲಭ್ಯವಿದೆ?

ukkinadkas-ayurveda-hospita1. ಪಕ್ಷವಾತ (stroke, paralysis due to vessel block or hemorrhage in brain), ಅರ್ದಿತ (Bell’s Palsy), ವಾತರೋಗಗಳು, ಗಂಟುವಾತ (osteo arthritis), ರಕ್ತವಾತ-ಸಂದು ಸಂದುಗಳಲ್ಲಿ ಬರುವ ಬಾವಿನಿಂದ ಕೂಡಿದ ನೋವು (Rheumatoid arthritis), ಆಮಜ ರಕ್ತವಾತ (Gouty arthritis), ಆಮವಾತ-ಶರೀರವಿಡೀ ನೋವು ಬರುವುದು, ಶರೀರದಲ್ಲಿ ನೀರು ತುಂಬುವುದು (Fibromyalgia), ಗೃಧ್ರಸೀವಾತ-ಬೆನ್ನು ಸೊಂಟ ಮತ್ತು ಕಾಲಿಗೆ ಬರುವ ನೋವು (sciatica-disc problems, back pain), ವಿಶ್ವಾಚಿ-ಕುತ್ತಿಗೆ ಹಾಗೂ ಕೈಗೆ ಬರುವ ನೋವು (cervical spondylitis), ಸರ್ವಾಂಗ ವಾತ (Multiple sclerosis), ಅವಬಾಹುಕ ಮತ್ತು ಅಂಸಶೋಷ-ಭುಜ ಮತ್ತು ತೋಳಿನಲ್ಲಿ ಬರುವ ವಾತದ ನೋವು (Frozen shoulder, periarteritis of shoulder joint), ವಾತಕಂಟಕ-ಕಾಲಹಿಮ್ಮಡಿ ನೋವು (Plantar fasciitis), ಪಾಶ್ರ್ನಿ ಶೂಲ ವಾತ-ಕಾಲ ಪಾದದ ಹಿಂಭಾಗ ನೋವು (calcaneal spur), ಊರುಸ್ತಂಭ (G B syndrome, Transverse myelitis), ಟೆನಿಸ್ ಎಲ್ಬೊ-ಕೈ ಮೊಣಗಂಟು ನೋವು, ಸಿ ಟಿ ಸಿಂಡ್ರೋಮ್, ಕ್ಯುಬಿಟಲ್ ಟನೆಲ್ ಸಿಂಡ್ರೋಮ್-ಅಂಗೈಯಲ್ಲಿ ನೋವು ಇರುವೆ ಬಂದಂತೆ ಆಗುವುದು, ಬಲ ಕಡಿಮೆ ಆಗುವುದು ಇತ್ಯಾದಿ ಹಲವು ವಾತರೋಗಗಳು.

2. ಆಸಿಡಿಟಿ (Acidity, APD), ಅಮ್ಲಪಿತ್ತ (Gastro esophageal reflux disease- GERD), ಗ್ರಹಣೀ-ಮೃದು (Irritable bowel syndrome), ಗ್ರಹಣೀ-ಮಧ್ಯಮ- ಆಮಶಂಕೆ ರೋಗ (non specific colitis, chronic amoebic dysentery), ಗ್ರಹಣೀ-ತೀವ್ರ (Ulcerative colitis, Crohn’s disease), ಬಾಯಿ ಹುಣ್ಣು, ಲಿವರ್ ಸಂಬಂಧೀ ಸಮಸ್ಯೆಗಳಾದ ಸಿರೋಸಿಸ್ ಆ‌ಫ಼್ ಲಿವರ್, ವಿವಿಧ ಕಾರಣಗಳಿಂದ ಬರುವ ಜಾಂಡೀಸ್‍ಗಳು, ಕ್ರಾನಿಕ್ ಪಾಂಕ್ರಿಯಾಟೈಟಿಸ್, ಪೈಲ್ಸ್, ಫಿ಼ಶರ್, ದೀರ್ಘಕಾಲಿಕ ಮಲಬದ್ದತೆ, ರಿಕರೆಂಟ್ ಅಪಂಡಿಸೈಟಿಸ್ ಇತ್ಯಾದಿ

3. ಚರ್ಮ ರೋಗಗಳು– ಸೋರಿಯಾಸಿಸ್, ವಿಸರ್ಪ (Pempigus Vulgaris), ಲೈಚನ್ ಪ್ಲೇನಸ್, ಎಕ್ಸಿಮಾ, ಸರ್ಪಸುತ್ತು, ಚರ್ಮದ ಗಸ್ ಸೋಂಕುಗಳು, ರಿಂಗ್ ವರ್ಮ್ ಇತ್ಯಾದಿ, ಸಿಬ್ಬ, ಅರ್ಟಿಕೇರಿಯ (ಬಿಸುರ್ಪು) ಇತ್ಯಾದಿ.

4. ಉಬ್ಬಸ ರೋಗ (Asthma), ಕಾಸ-ಕೆಮ್ಮು (Bronchitis), ಸಿ ಒ ಪಿ ಡಿ, ಅಲರ್ಜಿ ಶೀತ, ಸೈನುಸೈಟಿಸ್, ಫ಼ರಿಂಜೈಟಿಸ್, ಲಾರಿಂಜೈಟಿಸ್ (ಸ್ವರ ಬೀಳುವುದು), ಇತ್ಯಾದಿ ಶ್ವಾಸ ಸಂಬಂಧೀ ಸಮಸ್ಯೆಗಳು, ಮಕ್ಕಳಲ್ಲಿ ಪದೇ ಪದೇ ಕಂಡುಬರುವ ಶ್ವಾಸಕೋಶದ ಸೋಂಕು (ರಿಕರೆಂಟ್ ರೆಸ್ಪಿರೇಟರೀ ಇನ್ಫೆಕ್ಷನ್)
ಮೈಗ್ರೇನ್ ತಲೆನೋವು, ಸೈನುಸೈಟಿಸ್, ಟ್ರೈಜೆಮಿನಲ್ ನ್ಯುರಾಲ್ಜಿಯಾ,ನಿದ್ರಾಹೀನತೆ, ಖಿನ್ನತೆ ಹಾಗೂ ಇತರ ಮಾನಸಿಕ ರೋಗಗಳು

5. ಬೊಜ್ಜು (obesity)

6. ಮೂತ್ರಕೋಶದ ಕಲ್ಲು, ಮೂತ್ರದ ಸೋಂಕು, ಪ್ರಾಸ್ಟೇಟ್ ಸಮಸ್ಯೆ

7. ಮಧುಮೇಹ (Diabetes mellitus type 2), ಹೈ ಬ್ಲಡ್ ಪ್ರೆಶರ್ ಇತ್ಯಾದಿ

8. ಮುಖದ ಮೊಡವೆ/ಪಿಂಪಲ್, ಮುಖಕಾಂತಿ ಚಿಕಿತ್ಸೆ, ತಲೆಕೂದಲಿನ ಸಮಸ್ಯೆ ಇತ್ಯಾದಿ ಸೌಂದರ್ಯ ಚಿಕಿತ್ಸೆ

9. ಸ್ತ್ರೀ ರೋಗಗಳು– ಅಧಿಕ ರಕ್ತಸ್ರಾವ, ಅನಿಯಮಿತ ಋತುಸ್ರಾವ, ಬಿಳಿಸೆರಗು, ಋತುಬಂಧದ ಸಮಸ್ಯೆಗಳು ಇತ್ಯಾದಿ

10. ಬಂಜೆತನ, ನಪುಂಸಕತ್ವ, ನಿಮಿರು ದೌರ್ಬಲ್ಯ ಇತ್ಯಾದಿ

Also Read: ಬಂಜೆತನ- ಆಯುರ್ವೇದ ಚಿಕಿತ್ಸೆ ಒಂದು ವರದಾನ

ಸುಖ ಚಿಕಿತ್ಸೆ ಅಥವಾ ಕಾಯಕಲ್ಪ ಚಿಕಿತ್ಸೆ: ಯಾವುದೇ ರೋಗವಿಲ್ಲದೇ ಇದ್ದರೂ ರೋಗ ತಡೆಗಟ್ಟುವ ಉದ್ದೇಶದಿಂದ ಆರೋಗ್ಯವಂತರೂ ಪಂಚಕರ್ಮ ಚಿಕಿತ್ಸೆಯನ್ನು ಪಡೆಯುವುದು ಉತ್ತಮ. ಆಯುರ್ವೇದದ ನಿರ್ದೇಶದಂತೆ ವರ್ಷಕ್ಕೆ ಒಮ್ಮೆ ಪಂಚಕರ್ಮ ಚಿಕಿತ್ಸೆ ಪಡೆಯುವುದರಿಂದ ಶರೀರದಲ್ಲಿ ಶೇಖರಗೊಳ್ಳುವ ಕಶ್ಮಲದ ಕಾರಣದಿಂದ ಬರುವ ರೋಗಗಳನ್ನು ತಡೆಗಟ್ಟಬಹುದು.

ಉಕ್ಕಿನಡ್ಕಾಸ್ ಆಯುರ್ವೇದದಲ್ಲಿ ದೊರಕುವ ಇತರ ಚಿಕಿತ್ಸಾ ಸೌಲಭ್ಯಗಳು:

ukkinadkas-ayurveda1. ಆಯುರ್ವೇದ ಹೊರ ರೋಗಿ ಚಿಕಿತ್ಸಾ ವಿಭಾಗ
2. 20 ಹಾಸಿಗೆಗಳುಳ್ಳ ಒಳರೋಗಿ ಮತ್ತು ಪಂಚಕರ್ಮ ಚಿಕಿತ್ಸಾ ವಿಭಾಗ
3. ಹೊರರೋಗಿ ಪಂಚಕರ್ಮ ವಿಭಾಗ
4. ಯೋಗ ಚಿಕಿತ್ಸೆ
5. ಫಿಸಿಯೋಥೆರಪಿ-ರಿ ಹಾಬಿಲಿಟೇಶನ್ ಚಿಕಿತ್ಸೆ
6. ಅಕ್ಯುಪಂಕ್ಚರ್
7. 24×7 ಕ್ಲಿನಿಕಲ್ ಲಾಬ್- ಬಯೋಕೆಮೆಸ್ಟ್ರಿ ಸೆಮಿ ಅಟೊ ಅನಲೈಸರ್, ಸೆಲ್ ಕೌಂಟರ್- ಕಂಪ್ಯೂಟರೈಸ್‍ಡ್ ಲಾಬ್
8. ಇಸಿಜಿ ಸೌಲಭ್ಯ
9. ತುರ್ತು ಚಿಕಿತ್ಸಾ ವಿಭಾಗ

dr-Jayagonda-ukkinadka ಡಾ|| ಜಯಗೋವಿಂದ ಉಕ್ಕಿನಡ್ಕ ಉಕ್ಕಿನಡ್ಕಾಸ್ ಆಯುರ್ವೇದ, ಉಕ್ಕಿನಡ್ಕ, ಕಾಸರಗೋಡು ಜಿಲ್ಲೆ, ಕೇರಳ-671 552 ಮೊ : +91 94002 12222, 04998 225406, ಮತ್ತು 225685 Email: drjayagovind@gmail.com www.ukkinadkas.com

ಡಾ|| ಜಯಗೋವಿಂದ ಉಕ್ಕಿನಡ್ಕ
ಉಕ್ಕಿನಡ್ಕಾಸ್ ಆಯುರ್ವೇದ, ಉಕ್ಕಿನಡ್ಕ, ಕಾಸರಗೋಡು ಜಿಲ್ಲೆ, ಕೇರಳ-671 552
ಮೊ : +91 94002 12222, 04998 225406, ಮತ್ತು 225685
Email: drjayagovind@gmail.com
www.ukkinadkas.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!