ಬಂಜೆತನ- ಆಯುರ್ವೇದ ಚಿಕಿತ್ಸೆ ಒಂದು ವರದಾನ

ಬಂಜೆತನ ಗಂಡಸರ, ಹೆಂಗಸರ ಅಥವಾ ಇಬ್ಬರಲ್ಲೂ ತೊಂದರೆಯಿರುವ ಕಾರಣದಿಂದ ಕಂಡು ಬರಬಹುದು. ದಂಪತಿಗಳು ಒಂದು ವರ್ಷಗಳ ಕಾಲ ಯಾವುದೇ ಗರ್ಭ ನಿರೋಧಕಗಳನ್ನು ಉಪಯೋಗಿಸದೆ ಲೈಂಗಿಕ ಕ್ರಿಯೆ ನಡೆಸಿಯೂ ಮಕ್ಕಳಾಗದೇ ಇದ್ದಲ್ಲಿ ಅದನ್ನು ಬಂಜೆತನ ಎನ್ನಲಾಗುತ್ತದೆ. ಒಟ್ಟು ಸರಾಸರಿ 15 ಶೇಕಡಾ ದಂಪತಿಗಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ.

ಬಂಜೆತನ ಗಂಡಸರ, ಹೆಂಗಸರ ಅಥವಾ ಇಬ್ಬರಲ್ಲೂ ತೊಂದರೆಯಿರುವ ಕಾರಣದಿಂದ ಕಂಡು ಬರಬಹುದು. ಸಾಮಾನ್ಯ 35 ಶೇಕಡಾ ಕೇವಲ ಗಂಡಸರ ಕಾರಣದಿಂದ, 35 ಶೇಕಡಾ ಕೇವಲ ಹೆಂಗಸರ ಕಾರಣದಿಂದ, 20 ಶೇಕಡಾ ಇಬ್ಬರಲ್ಲೂ ತೊಂದರೆಯಿರುವ ಕಾರಣದಿಂದ ಕಂಡುಬರುತ್ತದೆ, ಹಾಗೂ 10 ಶೇಕಡಾ ದಂಪತಿಗಳಲ್ಲಿ ಬಂಜೆತನವಿದ್ದರೂ ಇಬ್ಬರಲ್ಲೂ ಯಾವುದೇ ತೊಂದರೆ ಕಂಡು ಬರುವುದಿಲ್ಲ. ಬಂಜೆತನವಿದ್ದಾಗ ನಿರ್ದಿಷ್ಟ ಕಾರಣ ತಿಳಿದು ಚಿಕಿತ್ಸೆ ನೀಡುವ ಉದ್ದೇಶದಿಂದ ಹಲವಾರು ಪರೀಕ್ಷೆಗಳನ್ನು ಮಾಡಬೇಕಾಗಿ ಬರಬಹುದು. ಅಂತಹ ಸಂದರ್ಭದಲ್ಲಿ ವೈದ್ಯರ ಸೂಚನೆ ಮೇರೆಗೆ ಗಂಡ ಹಾಗೂ ಹೆಂಡತಿ ಇಬ್ಬರೂ ವಿವಿಧ ಪರೀಕ್ಷೆಗಳಿಗೆ ಒಳಗಾಗಬೇಕಾಗಬಹುದು. ಅದರಲ್ಲಿ ಉದಾಸೀನ ಸಲ್ಲ.

ಕಾರಣವನ್ನು ಕಂಡು ಹಿಡಿಯಲು ಮಾಡುವ ಪರೀಕ್ಷೆಗಳು ಗಂಡಸರಲ್ಲಿ ಕಡಿಮೆ ಮೊತ್ತ ಮತ್ತು ಕಡಿಮೆ ಅವಧಿಯಲ್ಲಿ ನಡೆಸಬಹುದಾದುದು. ಆದರೆ ಹೆಂಗಸರಲ್ಲಿ ಕಾರಣವನ್ನು ನಿಖರವಾಗಿ ಗುರುತಿಸಲು ಅನೇಕ ಬಾರಿ ಕೆಲವು ತಿಂಗಳುಗಳಿಂದ ಹಿಡಿದು ಕೆಲವೊಮ್ಮೆ ಎರಡು ವರ್ಷಗಳ ಅವಧಿ ಬೇಕಾಗಬಹುದು. ಆದ್ದರಿಂದ ಹೆಂಗಸರಲ್ಲಿ ಮಾಸಿಕ ಋತುಸ್ರಾವ ನಿಯಮಿತವಾಗಿ ಆಗುತ್ತಿದ್ದು ಯಾವುದೇ ತೊಂದರೆ ಇಲ್ಲದಲ್ಲಿ ಪ್ರಾರಂಭದಲ್ಲಿ ಗಂಡಸರ ಸಮಗ್ರ ಪರೀಕ್ಷೆ ನಡೆಸುವುದು ಉತ್ತಮ, ಹಾಗೂ ಗಂಡಸರಲ್ಲಿ ಸಮಸ್ಯೆ ಗುರುತಿಸಲ್ಪಟ್ಟಲ್ಲಿ ಹೆಂಗಸರಲ್ಲಿ ಕೇವಲ ಅತ್ಯಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ ಚಿಕಿತ್ಸೆಯಲ್ಲಿ ಮುಂದುವರಿದಲ್ಲಿ ಅನೇಕ ಬಾರಿ ಸಮಯ ಹಾಗೂ ಹಣವನ್ನೂ ಉಳಿಸಲು ಸಾಧ್ಯವಾಗುವುದು. ಆದರೆ ಹೆಂಗಸರಲ್ಲೂ ಸಮಸ್ಯೆ ಕಂಡು ಬಂದಲ್ಲಿ ಇಬ್ಬರೂ ವೈದ್ಯರ ನಿರ್ದೇಶನದಂತೆ ಚಿಕಿತ್ಸೆ ಪಡೆಯಬೇಕಾಗುತ್ತದೆ.

ಗಂಡಸರಲ್ಲಿ ಸಂತಾನಹೀನತೆ:

ಬಂಜೆತನ- ಆಯುರ್ವೇದ ಚಿಕಿತ್ಸೆ ಒಂದು ವರದಾನಭಾರತೀಯರಲ್ಲಿ ಸಾಮಾಜಿಕ ಹಾಗೂ ಮಾಹಿತಿಯ ಕೊರತೆಯ ಕಾರಣದಿಂದ ಅನೇಕ ಬಾರಿ ಗಂಡಸರು ಪರೀಕ್ಷೆಗೊಳಲ್ಪಡಲು ಹಿಂಜರಿಯುವುದು ಸಾಮಾನ್ಯ. ಗಂಡಸರು ಸಮಸ್ಯೆ ಎಂದೊಡನೆ ತನ್ನ ಪೌರುಷ ಅಥವಾ ಲೈಂಗಿಗ ಸಾಮಥ್ರ್ಯದ ಮೇಲೆ ಸಂದೇಹಿಸುತ್ತಾರೆಂದು ಕೋಪಿಸಿಕೊಳ್ಳುವುದೇ ಜಾಸ್ತಿ. ವಾಸ್ತವದಲ್ಲಿ ವೀರ್ಯ ಕಣದ ಉತ್ಪಾದನೆ ಮತ್ತು ಲೈಂಗಿಕ ಸಾಮಥ್ರ್ಯಕ್ಕೆ ನೇರ ಸಂಬಂಧ ಇರುವುದಿಲ್ಲ, ಆದ್ದರಿಂದ ಯಾವುದೇ ಸಂಕೋಚ ಪಡದೇ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಗೆ ಸಹಕರಿಸಿದಲ್ಲಿ ಸಮಸ್ಯೆಯನ್ನು ಬೇಗನೆ ನಿವಾರಿಸಿಕೊಳ್ಳಲು ಸಾಧ್ಯ.

ಗಂಡಸರಲ್ಲಿ ಸಂತಾನಹೀನತೆಗೆ ಕಂಡು ಬರುವ ಕೆಲವು ಸಾಮಾನ್ಯ ಕಾರಣಗಳು ಇಂತಿವೆ. ಅಗತ್ಯಕ್ಕಿಂತ ಕಡಿಮೆ ವೀರ್ಯ ಕಣಗಳ ಉತ್ಪತ್ತಿ, ವೀರ್ಯ ಕಣಗಳಲ್ಲಿ ಕುಂದಿದ ಚಲನಾ ಸಾಮಥ್ರ್ಯ, ವೀರ್ಯ ಅತ್ಯಂತ ದಪ್ಪಗಾಗುವುದು, ವೀರ್ಯ ಸ್ಖಲನವಾದೊಡನೆ ಗಟ್ಟಿಯಾದ ವೀರ್ಯ ಅರ್ಧ ಗಂಟೆಗಳೊಳಗಾಗಿ ನೀರಾಗದೇ ಇರುವುದು, ವೀರ್ಯ ದಲ್ಲಿ ಕೀವು ಕಾಣಿಸಿಕೊಳ್ಳುವುದು, ವೃಷಣ ಚೀಲದಲ್ಲಿ ರಕ್ತನಾಳ ದಪ್ಪಗಾಗುವುದು (ವೆರಿಕೋಸೀಲ್), ವೃಷಣದಿಂದ ವೀರ್ಯ ಸಾಗುವ ನಾಳದಲ್ಲಿ ತಡೆಯುಂಟಾಗುವುದು, ಮಂಪ್ಸ್ (ಕೆಪ್ಪಟ್ರಾಯ)ನಿಂದ ವೃಷಣ ಬೀಜಕ್ಕೆ ಹಾನಿಯಾಗಿ ವೀರ್ಯಕಣ ಉತ್ಪಾದನೆ ಆಗದೇ ಇರುವುದು, ವೃಷಣ ಚೀಲದ ಉಷ್ಣತೆ ಏರಿರುವುದು, ವೀರ್ಯಕಣದ ರಚನೆಯಲ್ಲಿ ಏರುಪೇರಾಗುವುದು, ಕೆಲವೊಂದು ನಿರ್ದಿಷ್ಟ ಹಾರ್ಮೋನುಗಳ ಏರುಪೇರು ಇತ್ಯಾದಿ ಹಲವು ಕಾರಣಗಳಿಂದ ಸಂತಾನಹೀನತೆ ಉಂಟಾಗಬಹುದು. ಇವುಗಳಲ್ಲಿ ಹೆಚ್ಚಿನೆಲ್ಲಾ ಸಮಸ್ಯೆಗಳನ್ನು ಆಯುರ್ವೇದ ಚಿಕಿತ್ಸೆಯಿಂದ ನಿವಾರಿಸಲು ಸಾಧ್ಯ.

ಸ್ತ್ರೀಯರಲ್ಲಿ ಸಂತಾನಹೀನತೆ:

ಅದೇ ರೀತಿ ಹೆಂಗಸರಲ್ಲೂ ಅನೇಕ ಕಾರಣಗಳಿಂದ ಸಂತಾನ ಹೀನತೆ ಉಂಟಾಗಬಹುದು. ಅವುಗಳಲ್ಲಿ ಕೆಲವು ಮುಖ್ಯವಾದವು ಇಂತಿವೆ. ಇಂದು ಹಲವರಲ್ಲಿ ‘ಪಿಸಿಒಡಿ’ ಅನ್ನುವ ಹಾರ್ಮೋನು ಏರುಪೇರಿನಿಂದುಂಟಾಗುವ ಸಮಸ್ಯೆ ಬಹಳ ಸಾಮಾನ್ಯ. ಈ ಸಮಸ್ಯೆ ಹಲವರಲ್ಲಿ ಗರ್ಭಧಾರಣೆಗೆ ತೊಂದರೆಯನ್ನುಂಟು ಮಾಡುವುದು. ಸೂಕ್ತ ಆಯುರ್ವೇದ ಔಷಧಿ ಸೇವನೆಯಿಂದ ಇದನ್ನು ಸುಲಭವಾಗಿ ನಿವಾರಿಸಿ ಗರ್ಭಧಾರಣೆಯಾಗುವುದು ಸಾಧ್ಯ. ಇನ್ನೊಂದು ಮುಖ್ಯ ಕಾರಣ ಗರ್ಭನಾಳ ಮುಖದ ಅಥವಾ, ಗರ್ಭಕೋಶದ ಅಥವಾ ಅಂಡಾಶಯದಲ್ಲಿ ಉಂಟಾಗುವ ಸಬ್ ಕ್ಲಿನಿಕಲ್ ಇನ್ಫೆಕ್ಷನ್/ ಇನ್ಫೆಕ್ಷನ್ ಅಂದರೆ ಸಣ್ಣ ಮಟ್ಟದ/ ದೀರ್ಘಕಾಲಿಕ ಸೋಂಕು, ಇಂತಹ ಕೆಲವು ರೋಗಿಗಳಲ್ಲಿ ಸೋಂಕು ಇದ್ದರೂ ಯಾವುದೇ ಲಕ್ಷಣಗಳು ಇಲ್ಲದೇ ಇರಬಹುದು. ಸೂಕ್ತ ಆಯುರ್ವೇದ ಚಿಕಿತ್ಸೆಯಿಂದ ಇದನ್ನು ನಿವಾರಿಸಲು ಸಾಧ್ಯ.

ಹಾರ್ಮೋನುಗಳ ಏರುಪೇರು ಉದಾಹರಣೆಗೆ ಈಸ್ಟ್ರೋಜನ್ ಕೊರತೆ, ಪ್ರೊಲಾಕ್ಟಿನ್ ನ ಅಧಿಕ ಸಾಂದ್ರತೆ, ಹಾರ್ಮೋನಿನ ಅಧಿಕ ಉತ್ಪಾದನೆ, ಥೈರಾಯಿಡ್ ಹಾರ್ಮೋನಿನ ಏರುಪೇರು ಕೂಡ ವಿವಿಧ ಕಾರಣಗಳಿಂದ ಗರ್ಭಧಾರಣೆಗೆ ತೊಡಕಾಗುವುವು. ಸೂಕ್ತ ಚಿಕಿತ್ಸೆಯಿಂದ ಇವುಗಳಲ್ಲಿ ಹಲವು ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಇನ್ನು ಕೆಲವರಲ್ಲಿ ಗರ್ಭಕೋಶ, ಅಂಡಾಶಯ ರಚನೆಯಲ್ಲಿ ಉಂಟಾಗುವ ವ್ಯತ್ಯಯ ಕೂಡ ಬಂಜೆತನಕ್ಕೆ ಕಾರಣವಾಗಬಹುದು. ಹಾಗೆಯೇ ಹಲವು ಬಾರಿ ಸ್ತ್ರೀಯರ ಯೋನಿದ್ರವದಲ್ಲಿ ಪುರುಷ ವೀರ್ಯಾಣುವನ್ನು ನಾಶ ಮಾಡುವ ಕೆಲವು ಜೈವಿಕ ಕೋಶಗಳು ಬೆಳೆಯುವ ಸಾಧ್ಯತೆಗಳಿರುತ್ತವೆ. ಅಂತಹ ಸಂದರ್ಬದಲ್ಲೂ ಕೇವಲ ಎರಡು ಮೂರು ತಿಂಗಳುಗಳ ಆಯುರ್ವೇದ ಚಿಕಿತ್ಸೆಯಿಂದ ಸಂತಾನ ಭಾಗ್ಯ ಪಡೆಯಲು ಸಾಧ್ಯ.

ಅಷ್ಟೇ ಅಲ್ಲದೆ ಸ್ತ್ರೀಯರಲ್ಲಿ ಗರ್ಭಧಾರಣಾ ಸಾಮಥ್ರ್ಯವನ್ನು ತಿಳಿಯುವ ಸಲುವಾಗಿಯೂ ಹಾರ್ಮೋನ್ ಪರೀಕ್ಷೆ ನಡೆಸಿ (ಆನ್ಟಿ ಮುಲೇರಿಯನ್ ಹಾರ್ಮೋನ್) ಆ ಸ್ತ್ರೀಯಲ್ಲಿ ಒಟ್ಟು ಗರ್ಭಧಾರಣಾ ಸಾಮಥ್ರ್ಯವನ್ನು ತಿಳಿಯುವುದೂ ಈಗ ಸಾಧ್ಯ. ಆದರೆ ಗರ್ಭಧಾರಣಾ ಸಾಮಥ್ರ್ಯ ಕ್ಷೀಣಿಸಿದವರಲ್ಲೂ ಸೂಕ್ತ ಆಯುರ್ವೇದ ಚಿಕಿತ್ಸೆ ಪಡೆಯುವುದರಿಂದ ಅನೇಕ ಬಾರಿ ಗರ್ಭ ಧರಿಸುವುದು ಸಾಧ್ಯವಿದೆ. ಇನ್ನು ಹಲವು ಬಾರಿ ದಂಪತಿಗಳಲ್ಲಿ ಸೂಕ್ತ ಮಾಹಿತಿಯ ಕೊರತೆ, ಅವಕಾಶಗಳ ಕೊರತೆ ಕೂಡ ಗರ್ಭಧಾರಣೆಯಲ್ಲಿ ತೊಡಕುಂಟಾಗಲು ಕಾರಣವಾಗುವುದಿದೆ.

ಗರ್ಭೋತ್ಪತ್ತಿ ಕಾಲದ ಬಗ್ಗೆ ಮಾಹಿತಿಯ ಕೊರತೆ, ಗರ್ಭೋತ್ಪತ್ತಿ ಕಾಲದಲ್ಲಿ ನಾನಾ ಕಾರಣಗಳಿಂದ ಸೇರಲು ಸಾಧ್ಯವಾಗದೇ ಇರುವುದು ಇತ್ಯಾದಿ ಕೂಡ ಹಲವು ಬಾರಿ ಬಂಜೆತನಕ್ಕೆ ಕಾರಣವಾಗುವುದಿದೆ. ಸಾಮಾನ್ಯವಾಗಿ 28-30 ದಿನಗಳ ಋತುಚಕ್ರವಿರುವಲ್ಲಿ 10ನೇ ದಿನದಿಂದ 20ನೇ ದಿನದ ವರೆಗೆ ದಿನ ಬಿಟ್ಟು ದಿನ ಸೇರುವುದು ಅತ್ಯಂತ ಪ್ರಶಸ್ತ, ಆಗದೇ ಇದ್ದಲ್ಲಿ 14ನೇ ದಿನದಿಂದ 18 ನೇ ದಿನಗಳೊಳಗಾಗಿ 2-3 ಬಾರಿ ಸೇರಿದಲ್ಲಿ ಯಾವುದೇ ಸಮಸ್ಯೆ ಇಲ್ಲದ ದಂಪತಿಗಳಲ್ಲಿ ಗರ್ಭ ನಿಲ್ಲುವುದು ಸುಲಭ ಸಾಧ್ಯ. ಕೆಲವೊಂದು ಬಾರಿ ಗಂಡಸಿನಲ್ಲಿ ಮಾತ್ರ, ಕೆಲವೊಮ್ಮೆ ಸ್ತ್ರೀಯರಲ್ಲಿ ಮಾತ್ರ, ಇನ್ನು ಕೆಲವೊಮ್ಮೆ ಇಬ್ಬರಲ್ಲೂ ಹಾಗು ಮತ್ತೆ ಕೆಲವರಲ್ಲಿ ಎಲ್ಲಾ ವೈದ್ಯಕೀಯ ಪರೀಕ್ಷೆಗಳು ಸಹಜವಾಗಿದ್ದರೂ ಗರ್ಭ ನಿಲ್ಲದೇ ಇರುವುದೂ ಸಾಧ್ಯ.

ಆಯುರ್ವೇದ ಚಿಕಿತ್ಸೆ:

ಉಕ್ಕಿನಡ್ಕಾಸ್ ಆಯುರ್ವೇದದಲ್ಲಿ ಆಯುರ್ವೇದ ಚಿಕಿತ್ಸೆ ನೀಡುವಾಗ ಸ್ತ್ರೀಯರಲ್ಲಾದರೆ ಕಾರಣವನ್ನು ಗುರುತಿಸಿ ಪ್ರಾರಂಭದ ಮೂರು ತಿಂಗಳುಗಳ ಕಾಲ ಗರ್ಭಾಶಯ ಶೋಧಕ ಔಷಧಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಎಷ್ಟೋ ಬಾರಿ ಹಲವಾರು ತೊಂದರೆಗಳು ಈ ಚಿಕಿತ್ಸೆಯಿಂದಲೇ ಪರಿಹಾರಗೊಂಡು ಗರ್ಭ ನಿಲ್ಲುವಲ್ಲಿ ಸಹಕಾರಿಯಾಗುತ್ತದೆ. ಇನ್ನು ಹಲವರಲ್ಲಿ ಮೂರು ತಿಂಗಳುಗಳ ನಂತರವೂ ಕಾರಣಾನುಸಾರ ವಿವಿಧ ರೀತಿಯ ಚಿಕಿತ್ಸೆಯನ್ನು ಸಂದರ್ಭಾನುಸಾರ ನೀಡಲಾಗುತ್ತದೆ.

ಗಂಡಸರಲ್ಲೂ ಪ್ರಾರಂಭದಲ್ಲಿ ಶೋಧಕ ಹಾಗೂ ಕ್ರಿಮಿ ನಿವಾರಕ ಚಿಕಿತ್ಸೆಯನ್ನು ನೀಡಿ ನಂತರ ಕಾರಣಾನುಸಾರ ಚಿಕಿತ್ಸೆಯನ್ನು ನೀಡಲಾಗುತ್ತದೆ. ಚಿಕಿತ್ಸಾ ಅವಧಿ ಹಲವರಲ್ಲಿ ಮೂರರಿಂದ ಆರು ತಿಂಗಳುಗಳಾದರೆ ಇನ್ನು ಕೆಲವರಲ್ಲಿ ಒಂದರಿಂದ ಎರಡು ವರ್ಷಗಳ ಕಾಲ ಚಿಕಿತ್ಸೆ ಅಗತ್ಯ ಬೀಳುವುದಿದೆ. ಅಗತ್ಯ ಬಿದ್ದಲ್ಲಿ ಹಲವರಲ್ಲಿ ಪಂಚಕರ್ಮ ಚಿಕಿತ್ಸೆಯನ್ನೂ ನೀಡಲಾಗುತ್ತದೆ. ಒಟ್ಟಿನಲ್ಲಿ ಬಂಜೆತನವಿದ್ದಾಗ ಆಯುರ್ವೇದ ಚಿಕಿತ್ಸೆಯ ಸಹಾಯದಿಂದ ಆಧುನಿಕ ಚಿಕಿತ್ಸೆಗೆ ಬಹಳ ಕಷ್ಟವೆಂದು ಪರಿಗಣಿಸಲ್ಪಟ್ಟ ಹಲವು ರೋಗಗಳನ್ನು ಅನಾಯಾಸವಾಗಿ ಗುಣಪಡಿಸಲು ಸಾಧ್ಯ.

dr-Jayagonda-ukkinadka ಡಾ|| ಜಯಗೋವಿಂದ ಉಕ್ಕಿನಡ್ಕ ಉಕ್ಕಿನಡ್ಕಾಸ್ ಆಯುರ್ವೇದ, ಉಕ್ಕಿನಡ್ಕ, ಕಾಸರಗೋಡು ಜಿಲ್ಲೆ, ಕೇರಳ-671 552 ಮೊ.: +91 94002 12222 email: drjayagovind@gmail.com www.ukkinadkas.com

ಡಾ|| ಜಯಗೋವಿಂದ ಉಕ್ಕಿನಡ್ಕ
ಉಕ್ಕಿನಡ್ಕಾಸ್ ಆಯುರ್ವೇದ, ಉಕ್ಕಿನಡ್ಕ, ಕಾಸರಗೋಡು ಜಿಲ್ಲೆ, ಕೇರಳ-671 552
ಮೊ : +91 94002 12222
email: drjayagovind@gmail.com
www.ukkinadkas.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!