ಜ್ಯೇಷ್ಠಮಧು – ವೈರಸ್ ನಿರೋಧಕ ಗುಣಹೊಂದಿದ ಗಿಡಮೂಲಿಕೆ

ಜ್ಯೇಷ್ಠಮಧು – ವೈರಸ್ ನಿರೋಧಕ ಗುಣಹೊಂದಿದ ಗಿಡಮೂಲಿಕೆ. ಇದರ ವೈರಸ್ ನಿರೋಧಕ ಗುಣ ಆಧುನಿಕ ಸಂಶೋಧನೆಗಳಿಂದ ಋಜುವಾತಾಗಿದೆ. ಅದರಲ್ಲಿಯೂ ವಿಶೇಷವಾಗಿ ಶ್ವಾಸಕೋಶಗಳಿಗೆ ತೊಂದರೆ ಕೊಡುವ ವೈರಸ್ ಗಳನ್ನು ನಿರೋಧಿಸುವ ಗುಣ ಇದಕ್ಕಿದೆ. 

venkatramana

ಇಂದು ವೈರಸ್ ನಿರೋಧಕ ಗುಣವನ್ನು ಹೊಂದಿದ ಇನ್ನೊಂದು ಗಿಡಮೂಲಿಕೆಯ ಪರಿಚಯ ಮಾಡಿಕೊಳ್ಳೋಣ. ಅದೇ ಜ್ಯೇಷ್ಠಮಧು. ಅಂದರೆ ಹೆಚ್ಚಿನ ಸಿಹಿಯುಳ್ಳದ್ದು ಎಂಬ ಅರ್ಥ. ಇದಕ್ಕೆ ಎಷ್ಟೋ ಕಡೆ ಜ್ಯೇಷ್ಠಮದ್ದು ಎಂದೂ ಕರೆಯುವ ರೂಢಿಯಿದೆ. ಅದು ತಪ್ಪು ಉಚ್ಛಾರವಾದರೂ ಒಂದರ್ಥದಲ್ಲಿ ಸರಿಯೇ. ಏಕೆಂದರೆ ಅದಕ್ಕೆ ಅಷ್ಟು ಒಳ್ಳೆಯ ಮದ್ದಿನ ಗುಣವಿದೆ. ತಲೆಕೂದಲ ಬುಡವನ್ನು ಗಟ್ಟಿಗೊಳಿಸುವುದರಿಂದ ಹಿಡಿದು ಪಾದದ ಒಡಕು ಗುಣಮಾಡುವವರೆಗೆ ಅಂದರೆ ಬಹುತೇಕ ಇಡೀ ದೇಹಕ್ಕೆ ಅನುಕೂಲ ಮಾಡಿಕೊಡುವ ಮದ್ದಿನ ಗುಣ ಇದಕ್ಕಿದೆ.

jyestamadhu-ಜೇಷ್ಠಮಧು-ಇದು-ವೈರಸ್-ನಿರೋಧಕ.ತಂಪುಗುಣವನ್ನು ಹೊಂದಿದ್ದು ದೇಹಕ್ಕೆ ಉಷ್ಣವಾದರೆ ಸರಿಪಡಿಸುತ್ತದೆ ಅದರಲ್ಲಿಯೂ ವಿಶೇಷವಾಗಿ ಹೊಟ್ಟೆ ಉರಿ, ಗಂಟಲು ಉರಿಗಳಲ್ಲಿ ಸಹಾಯಕವಾಗಿದೆ. ಭಾವಪ್ರಕಾಶ ನಿಘಂಟುವಿನಲ್ಲಿ “ಚಕ್ಷುಷ್ಯಾ ಬಲವರ್ಣ ಕೃತ್” ಎಂದಿದ್ದಾರೆ. ಅಂದರೆ ಕಣ್ಣುಗಳ ಮತ್ತು ದೇಹದ ಶಕ್ತಿಯನ್ನು ಹೆಚ್ಚಿಸುವುದರೆ ಜೊತೆಗೆ ಚರ್ಮದ ಬಣ್ಣವನ್ನು ಅಂದರೆ ಸೌಂದರ್ಯವನ್ನು ಹೆಚ್ಚಿಸುತ್ತದೆ ಎಂದರ್ಥ.  ಮನಸ್ಸಿಗೂ ಶಕ್ತಿಯನ್ನು ಕೊಡುವುದರಿಂದ ನಿದ್ರಾಹೀನತೆ, ಖಿನ್ನತೆ, ಒತ್ತಡದಲ್ಲಿರುವವರಿಗೆ ಸಹಕಾರಿ.

1. ಹಾಡುಗಾರರಿಗೆ ಇದು ಅತ್ಯಂತ ಪ್ರಿಯವಾದದ್ದು; ಧ್ವನಿಯನ್ನು ಸುಂದರವಾಗಿಸುವುದರ ಜೊತೆಗೆ ಧ್ವನಿಪೆಟ್ಟಿಗೆಯ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಬಾಯಲ್ಲಿಟ್ಟುಕೊಂಡು ರಸ ನುಂಗುತ್ತಿದ್ದರೆ ಹಾಡುಗಾರರು, ಅಧ್ಯಾಪಕರಂಥವರಿಗೆ ತುಂಬಾ ಅನುಕೂಲವಾಗುತ್ತದೆ.

2. ಶ್ವಾಸಕೋಶಕ್ಕೆ ಶಕ್ತಿ ನೀಡಿ ಕಫವನ್ನು ಹೊರಹಾಕುವ ಗುಣವಿರುವುದರಿಂದ ಶ್ವಾಸಾಂಗವ್ಯೂಹದ ಸಮಸ್ಯೆಗಳಾದ ಕೆಮ್ಮು, ಅಸ್ತಮಾ, ನ್ಯೂಮೋನಿಯಾದಂತಹವುಗಳಲ್ಲಿ ಅರ್ಧ ಚಮಚದಷ್ಟು ಪುಡಿಯನ್ನು ದಿನಕ್ಕೆರಡು ಬಾರಿ ಜೇನುತುಪ್ಪ ಅಥವಾ ಬೆಲ್ಲದ ಜೊತೆ ತೆಗೆದುಕೊಳ್ಳಬೇಕು.

3. ಆಯುರ್ವೇದ ಗ್ರಂಥಗಳ ಪ್ರಕಾರ ಕ್ಷಯರೋಗದಲ್ಲಿಯೂ ಇದು ಪ್ರಯೋಜನಕಾರಿ.

4. ದೇಹದಲ್ಲಿ ವಿಷ ಸೇರಿಕೊಂಡಿದ್ದರೆ, ಗುಣವಾಗದ ಗಾಯವಿದ್ದರೆ, ಪದೇ ಪದೇ ವಾಂತಿಯಾಗುತ್ತಿದ್ದರೆ ಇದರಿಂದ ಪ್ರಯೋಜನವಾಗುತ್ತದೆ.

5. ನಮ್ಮ ಜಠರದ ಆಮ್ಲೀಯತೆಯನ್ನು ಹತೋಟಿಗೆ ತಂದು ಎಚ್ ಪೈಲೋರಿ ಬ್ಯಾಕ್ಟೀರಿಯಾವನ್ನು ನಾಶಪಡಿಸುವ ಗುಣ ಇದಕ್ಕಿದೆ ಎಂಬುದು ಸಾಬೀತಾಗಿದೆ.

6. ಮಲಬದ್ಧತೆಯಲ್ಲಿ ಸಂಜೆ ಹಾಲಿನ ಜೊತೆ ಅರ್ಧ ಚಮಚ ಇದರ ಪುಡಿಯನ್ನು ಹಾಕಿ ಕುಡಿದರೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಪರಿಹಾರವಾಗುತ್ತದೆ.

7. ಮೂತ್ರ ಸಲೀಸಾಗಿ ಆಗುತಿಲ್ಲದಿದ್ದರೆ, ಉರಿಮೂತ್ರವಿದ್ದರೆ ಇದನ್ನು ಬಳಸಬಹುದು.

8. ಎದೆಹಾಲನ್ನು ಹೆಚ್ಚಿಸುವ ಗುಣ ಇದಕ್ಕಿದೆ. ವೀರ್ಯವೃದ್ಧಿ ಮಾಡಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ.

immune aid

ಕಷಾಯ ಅಥವಾ ಹರ್ಬಲ್ ಟೀ :

ಇದು ಸಿಹಿಯಾಗಿದ್ದರೂ ಮಧುಮೇಹದಲ್ಲಿ ಸಹಕಾರಿಯೇ ಆಗಿರುವುದರಿಂದ ಇದನ್ನು ಸಿಹಿಕೊಡುವ ವಸ್ತುವಿನಂತೆ ಬಳಸಬಹುದು. ಹಾಗಾಗಿ ಬಾಯಿಗೂ ಉದರಕ್ಕೂ ಸಿಹಿಯನ್ನು ಇದು ಕೊಡುತ್ತದೆ. ಇನ್ನು ಇದರ ವೈರಸ್ ನಿರೋಧಕ ಗುಣ ಆಧುನಿಕ ಸಂಶೋಧನೆಗಳಿಂದ ಋಜುವಾತಾಗಿದೆ. ಅದರಲ್ಲಿಯೂ ವಿಶೇಷವಾಗಿ ಶ್ವಾಸಕೋಶಗಳಿಗೆ ತೊಂದರೆ ಕೊಡುವ ವೈರಸ್ ಮತ್ತು ಏಡ್ಸ್ ವೈರಸ್ ಗಳನ್ನು ನಿರೋಧಿಸುವ ಗುಣ ಇದಕ್ಕಿದೆ. ಹಾಗಾಗಿ ಇದರ ಪುಡಿಯನ್ನು ಆರೋಗ್ಯವಂತರು ಕೊತ್ತಂಬರಿ, ಜೀರಿಗೆ, ಶುಂಠಿ, ಅರಿಶಿನ, ಕಾಳುಮೆಣಸುಗಳ ಜೊತೆ ಸೇರಿಸಿಟ್ಟುಕೊಂಡು ಕಷಾಯ ಅಥವಾ ಹರ್ಬಲ್ ಟೀ ಮಾಡಿಕೊಂಡು ಕುಡಿಯಬಹುದು.

jesthamadhu-powderಇದು ಸುಲಭವಾಗಿ ಪಚನವಾಗದ ಕಾರಣ ಮೇಲಿನ ಸಾಂಬಾರ ಪದಾರ್ಥಗಳ ಜೊತೆ ಬಳಸಿದಾಗ ಸುಲಭವಾಗಿ ಪಚನವಾಗುತ್ತದೆ. ಜ್ಯೇಷ್ಠಮಧುವನ್ನು ದಿನಕ್ಕೆ ಮೂರರಿಂದ ನಾಲ್ಕು ಗ್ರಾಂನಷ್ಟು ಬಳಸಬಹುದು. ಈ ದಿವ್ಯೌಷಧಿಯು ಸಾಮಾನ್ಯವಾಗಿ ಎಲ್ಲಾ ಗ್ರಂಥಿಗೆ ಮತ್ತು ಆಯುರ್ವೇದ ಅಂಗಡಿಗಳಲ್ಲಿ ಲಭ್ಯವಿರುವ ಕಾರಣ ಎಲ್ಲರೂ ಸುಲಭವಾಗಿ ಇದನ್ನು ಉಪಯೋಗಿಸಬಹುದು.

ದೀರ್ಘಕಾಲ ಬಳಸುವುದಿದ್ದರೆ ವೈದ್ಯರ ಸಲಹೆ ತೆಗೆದುಕೊಳ್ಳುವುದು ಉತ್ತಮ. ಏಕೆಂದರೆ ಇದರ ಅತಿಯಾದ ಬಳಕೆಯಿಂದ ದೇಹದಲ್ಲಿ ಪೊಟ್ಯಾಶಿಯಂ ಪ್ರಮಾಣ ಕಡಿಮೆಯಾಗುವುದು ಮತ್ತು ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!