ಇಡಿಯೋಪಥೀಕ್ ಪಲ್ಮೊನರಿ ಪೈಬ್ರೊಸಿಸ್(IPF) ಖಾಯಿಲೆ : ಕೋವಿಡ್ ಸಮಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಇಡಿಯೋಪಥೀಕ್ ಪಲ್ಮೊನರಿ ಪೈಬ್ರೊಸಿಸ್ ಶ್ವಾಸಕೋಶಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಉಸಿರಾಟದ ತೊಂದರೆ ಜಾಸ್ತಿಯಾಗಿ ಶ್ವಾಸಕೋಶದ ಹೆಚ್ಚಿನ ರಕ್ತದೊತ್ತಡ ಉಂಟಾಗಿ, ಶ್ವಾಸಕೋಶ ವೈಫಲ್ಯ ಮತ್ತು ಹೃದಯ ವೈಫಲ್ಯ ಉಂಟಾಗಿ ಜೀವಕ್ಕೆ ಕುತ್ತು ಬರುತ್ತದೆ. ಈ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಐಪಿಎಫ್ ನಿಂದ ಬಳಲುತ್ತಿರುವ ಜನರು ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

IdiopathicPulmonaryFibrosis ಇಡಿಯೋಪಥೀಕ್ ಪಲ್ಮೊನರಿ ಪೈಬ್ರೊಸಿಸ್(IPF) ಖಾಯಿಲೆ : ಕೋವಿಡ್ ಸಮಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
Normal Lungs. Usual Interstitial Pneumonia.

IPF ಎನ್ನುವುದು ಶ್ವಾಸಕೋಶಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದ್ದು, ಶ್ವಾಸಕೋಶದೊಳಗಿನ ಜೀವಕೋಶಗಳು ಮತ್ತು ಅಂಗಾಂಶಗಳ ಬದಲಾಗಿ ಫೆಬ್ರಸ್ ಅಂಗಾಂಶಗಳು ತುಂಬಿಕೊಳ್ಳುತ್ತದೆ. ಇದು ಕ್ಯಾನ್ಸರ್‍ಗಿಂತ ಭಿನ್ನವಾದ ರೋಗವಾಗಿದ್ದು, ಶ್ವಾಸಕೋಶಗಳು ದಪ್ಪಗಾಗಿ, ಗಡುಸಾಗುತ್ತದೆ. ಹೀಗೆ ಗಾಳಿಚೀಲಗಳ ಬದಲಾಗಿ ತುಂಬಿಗೊಂಡ ಅಂಗಾಂಶಗಳಿಂದಾಗಿ, ಶ್ವಾಸಕೋಶದ ಪ್ರಾಥಮಿಕ ಕಾರ್ಯವಾದ ಆಮ್ಲಜನಕದ ಪೂರೈಕೆ ವ್ಯತ್ಯಯವಾಗಿ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ವಿಶ್ವದಾದ್ಯಂತ ಸುಮಾರು 50 ಲಕ್ಷ ಮಂದಿ ವರ್ಷವೊಂದರಲ್ಲಿ ಈ ರೋಗದಿಂದ ಬಳಲುತ್ತಿದ್ದು, ಹೆಚ್ಚಾಗಿ 50ರಿಂದ 60 ವಯಸ್ಸಿನವರಲ್ಲಿ ಹೆಚ್ಚು ಕಂಡು ಬರುತ್ತದೆ. ಪುರುಷರಲ್ಲಿ ಮಹಿಳೆರಿಗಿಂತ ಜಾಸ್ತಿ ಈ ರೋಗ ಕಂಡುಬರುತ್ತದೆ.

ನಮ್ಮ ದೇಹದಲ್ಲಿ ಎರಡು ಶ್ವಾಸಕೋಶಗಳಿದ್ದು, ಅವು ನಮ್ಮ ದೇಹದ ಜೀವನಾಡಿ ಇದ್ದಂತೆ. ನಾವು ಸೇವಿಸಿದ ಗಾಳಿ ಮೂಗಿನ ಮುಖಾಂತರ, ಗಾಳಿ ಕೊಳವೆ (ಟ್ರೆಕಿಯಾ)ಯಲ್ಲಿ ಹಾದು ಹೋಗಿ ಶ್ವಾಸಕೋಶಕ್ಕೆ ತಲುಪುತ್ತದೆ. ದೇಹದ ಬಲ ಮತ್ತು ಎಡಭಾಗದಲ್ಲಿ ಎರಡು ಶ್ವಾಸಕೋಶಗಳಿದ್ದು, ಈ ಶ್ವಾಸಕೋಶಗಳಲ್ಲಿ ಸರಿ ಸುಮಾರು 30 ಮಿಲಿಯನ್ ಗಾಳಿ ಚೀಲಗಳು (ಆಲ್ವಿಯೋಲೈ) ಇವೆ. ನಾವು ಹೀರಿಕೊಂಡ ಗಾಳಿ ಈ ಗಾಳಿಚೀಲ ತಲುಪಿದ ಬಳಿಕ ಗಾಳಿಯಲ್ಲಿನ ಆಮ್ಲಜನಕ ಗಾಳಿ ಚೀಲದ ತೆಲುವಾದ ಪೋರೆಯನ್ನು ದಾಟಿ, ಗಾಳಿ ಚೀಲದ ಸುತ್ತಲಿರುವ ಸಣ್ಣ ಸಣ್ಣ ರಕ್ತನಾಳದೊಳಗೆ ಸೇರಿಕೊಳ್ಳುತ್ತದೆ. ಇದೆ ಸಮಯದಲ್ಲಿ ರಕ್ತನಾಳದಲ್ಲಿನ ಇಂಗಾಲದ ಡೈಯೋಕ್ಸೈಡ್ ಗಾಳಿ ಚೀಲಗಳಿಗೆ ಸೇರುತ್ತದೆ. ಈ ಮೂಲಕ ಶುದ್ಧವಾದ ಆಮ್ಲಜನಕ ಯುಕ್ತ ಗಾಳಿ ರಕ್ತನಾಳದ ಮುಖಾಂತರ ಹೃದಯಕ್ಕೆ ತಲುಪುತ್ತದೆ. ಹೃದಯದಿಂದ ಈ ಆಮ್ಲಜನಕಯುಕ್ತ ರಕ್ತ ದೇಹದ ಎಲ್ಲಾ ಜೀವಕೋಶಗಳಿಗೆ ಸರಬರಾಜಾಗುತ್ತದೆ. ಆದರೆ ಈ IPF ಈ ರೋಗದಲ್ಲಿ ಗಾಳಿ ಚೀಲಗಳ ಪೊರೆಗಳಲ್ಲಿ ದಪ್ಪಗಾಗುತ್ತದೆ ಮತ್ತು ಗಾಳಿ ಚೀಲಗಳ ಸುತ್ತ ಪೈಬ್ರೋಸಿಸ್ ಉಂಟಾಗುತ್ತದೆ. ಈ ಕಾರಣದಿಂದಲೇ ನಾವು ಉಸಿರಾಡುವ ಗಾಳಿಯಲ್ಲಿನ ಆಮ್ಲಜನಕ ರಕ್ತನಾಳಕ್ಕೆ ಸೇರದೆ ಹತ್ತು ಹಲವು ಸಮಸ್ಯೆಗಳಿಗೆ ನಾಂದಿ ಹಾಡುತ್ತದೆ.

IPF ರೋಗಕ್ಕೆ ಕಾರಣಗಳು ಏನು?

heart-care-1. ವಾತಾರಣದಲ್ಲಿನ ಕಲ್ಮಶಗಳು.
2. ಅತಿಯಾದ ಸಿಗರೇಟು ಸೇವನೆ.
3. ವೈರಾಣು ಸೋಂಕು : ಎಬ್‍ಸ್ಟ್ರೆನ್ ಬಾರ್ ವೈರಸ್, ಇನ್‍ಪ್ಯೂಯೆಂಜಾ ವೈರಸ್, ಹೆಪೆಟೈಟನ್ ಸಿ ವೈರಸ್, HIV ವೈರಸ್ ಮತ್ತು ಹರ್ಪಿಸ್ ವೈರಸ್, ಹೆಪೆಟೈಟಿಸ್ ಸಿ ವೈರಸ್ ಸೋಂಕಿನಿಂದ IPF ಉಂಟಾಗಬಹುದು.
4. ವಂಶಪಾರಂಪರ್ಯವಾಗಿ ತಂದೆ ತಾಯಂದಿರಿಂದ ಮಕ್ಕಳಿಗೆ ಬರುವ ಸಾಧ್ಯತೆ ಹೆಚ್ಚು ಇರುತ್ತದೆ.
5. ಗ್ಯಾಸ್ಟ್ರಿಕ್ ತೊಂದರೆ ಇರುವವರಲ್ಲಿ, ತುಂಬಾ ಆಮ್ಲಿಯವಾದ ಗ್ಯಾಸ್ಟ್ರಿಕ್ ದ್ರಾವಣ, ಶ್ವಾಸಕೋಶಕ್ಕೆ ಹೋಗಿ ಈ ಪೈಬ್ರೋಸಿಸ್ ಉಂಟು ಮಾಡುತ್ತದೆ ಎಂದೂ ಸಂಶೋಧನೆಗಳಿಂದ ತಿಳಿದುಬಂದಿದೆ. ಈಗಿನ ಕಲುಷಿತ ವಾತಾವರಣದಲ್ಲಿನ ಧೂಳು, ಸಿಲಿಕಾ, ರಾಸಾಯನಿಕಗಳು, ಸಿಮೆಂಟ್ ಪ್ಯಾಕ್ಟರಿಯಲ್ಲಿ ಕಂಡು ಬರುವ ರಾಸಾಯನಿಕಗಳು ಹೆಚ್ಚು IPF ಗೆ ಕಾರಣವಾಗುತ್ತದೆ ಎಂದೂ ತಿಳಿದು ಬಂದಿದೆ.
6. ಯಾವುದೇ ನಿರ್ದಿಷ್ಟ ಕಾರಣವಿಲ್ಲದೆಯೂ ನೂರರಲ್ಲಿ ಒಬ್ಬರಿಗೆ ಈ ಖಾಯಿಲೆ ಬರಬಹುದು.

ಕಂಡು ಹಿಡಿಯುವುದು ಹೇಗೆ?:

ದಿನ ಬೆಳಗಾಗುವುದರಲ್ಲಿ ಈ ರೋಗ ಕಾಣಿಸದು. ಶ್ವಾಸಕೋಶದೊಳಗಿನ ಗಾಳಿ ಚೀಲಗಳಿಗೆ ಹೆಚ್ಚಿನ ಹಾನಿಯಾದ ಬಳಿಕ ರೋಗದ ಲಕ್ಷಣಗಳು ಒಂದೊಂದಾಗಿ ಕಾಣಿಸಿಕೊಳ್ಳುತ್ತದೆ. ಒಮ್ಮೆ ಲಕ್ಷಣಗಳು ಆರಂಭಿಕವಾದ ಬಳಿಕ ಕ್ರಮೇಣವಾಗಿ ಹೆಚ್ಚುತ್ತಲೇ ಹೋಗುತ್ತದೆ.

1. ಉಸಿರಾಟದ ತೊಂದರೆ : ಆರಂಭದಲ್ಲಿ ವ್ಯಾಯಾಮ ಮಾಡುವಾಗ ಉಸಿರಾಟದ ತೊಂದರೆ ಕಂಡುಬರುತ್ತದೆ. ಕ್ರಮೇಣ ರೋಗದ ತೀವ್ರತೆ ಹೆಚ್ಚಾದಂತೆ ವಿಶ್ರಾಂತಿಯ ಸಮಯದಲ್ಲಿಯೂ ಉಸಿರಾಡಲು ಕಷ್ಟವಾಗಬಹುದು.

2. ನಿರಂತರವಾದ ಒಣ ಕೆಮ್ಮು ಬರುತ್ತದೆ. ದಿನಕಳೆದಂತೆ ಕೆಮ್ಮಿನ ತೀವ್ರತೆ ಹೆಚ್ಚಾಗುತ್ತಲೇ ಹೋಗುತ್ತದೆ.

3. ದೇಹದ ತೂಕ ಕಡಮೆಯಾಗುವುದು, ಹಸಿವಿಲ್ಲದಿರುವುದು, ಉಸಿರಾಟದ ವೇಗ ಹೆಚ್ಚಾಗುವುದು, ವಿಪರೀತ ಸುಸ್ತು ಮತ್ತು ಆಯಾಸ ಉಂಟಾಗುವುದು.

IPF ಇಡಿಯೋಪಥೀಕ್ ಪಲ್ಮೊನರಿ ಪೈಬ್ರೊಸಿಸ್(IPF) ಖಾಯಿಲೆ : ಕೋವಿಡ್ ಸಮಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.4. ಸ್ನಾಯಗಳಲ್ಲಿ ವಿಪರೀತ ಸೆಳೆತ, ಗಂಟುಗಳಲ್ಲಿ ನೋವು, ಮತ್ತು ಕೈಬೆರಳುಗಳಲ್ಲಿನ ಉಗುರುಗಳು ದಪ್ಪಗಾಗುವುದು ಮತ್ತು ಬಾಗಿಕೊಳ್ಳುವುದು ಕಂಡು ಬರುತ್ತದೆ.

ಸಕಾಲದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ ಉಸಿರಾಟದ ತೊಂದರೆ ಜಾಸ್ತಿಯಾಗಿ ಶ್ವಾಸಕೋಶದ ಹೆಚ್ಚಿನ ರಕ್ತದೊತ್ತಡ ಉಂಟಾಗಿ, ಶ್ವಾಸಕೋಶ ವೈಫಲ್ಯ ಮತ್ತು ಹೃದಯ ವೈಫಲ್ಯ ಉಂಟಾಗಿ ಜೀವಕ್ಕೆ ಕುತ್ತು ಬರುತ್ತದೆ.

ಪತ್ತೆ ಹಚ್ಚುವುದು ಹೇಗೆ?

ಹೆಚ್ಚಿನ ಎಲ್ಲಾ ಶ್ವಾಸಕೋಶ ಸಂಬಂಧಿ ರೋಗಗಳು, ಒಂದೇ ರೀತಿಯ ಲಕ್ಷಣಗಳು ಹೊಂದಿರುವುದರಿಂದ ರೋಗ ಪತ್ತೆ ಹಚ್ಚುವುದು ಸುಲಭವಲ್ಲ. ನುರಿತ ಶ್ವಾಸಕೋಶ ತಜ್ಞರ ಸಲಹೆ ಪಡೆಯತಕ್ಕದ್ದು. ರೋಗದ ಲಕ್ಷಣಗಳು, ರೋಗದ ತೀವ್ರತೆ ಮತ್ತು ದೈಹಿಕ ಚಿಹ್ನೆಗಳು, ರೋಗದ ಚರಿತ್ರೆಯನ್ನು ಅಭ್ಯಸಿಸಿ ರಕ್ತ ಪರೀಕ್ಷೆ ಹಾಗೂ ಶ್ವಾಸಕೋಶದ ಅಖಿ ಸ್ಕ್ಯಾನ್ ಮಾಡಿಸಿ ರೋಗವನ್ನು ಪತ್ತೆ ಹಚ್ಚುತ್ತದೆ. ಅಗತ್ಯವಿದ್ದಲ್ಲಿ ಶ್ವಾಸಕೋಶದ ಚಿಕ್ಕ ಮಾಂಸವನ್ನು ಬಯೊಸ್ಸಿ ಪರೀಕ್ಷೆ ಮುಖಾಂತರ ಸೂಕ್ಷದರ್ಶಕದಡಿಯಲ್ಲಿ ಅಭ್ಯಸಿಸಿ ಕ್ಯಾನ್ಸರ್ ಅಲ್ಲವೆಂದು ದೃಡೀಕರಿಸಲಾಗುತ್ತದೆ. ರೋಗಿಯ ವಯಸ್ಸು, ರೋಗಿಯ ಹವ್ಯಾಸಗಳು, ರೋಗಿಯ ಉದ್ಯೋಗ, ರೋಗಿಯ ಜೀವನಶೈಲಿ, ರೋಗಿಯ ಹೆತ್ತವರ ಬಗೆಗಿನ ವಿವರಗಳು, ಕುಟುಂಬದ ಚರಿತ್ರೆ ಎಲ್ಲವನ್ನೂ ತಾಳೆ ಹಾಕಲಾಗುತ್ತದೆ. ಎದೆಗೂಡಿನ ಕ್ಷಕಿರಣ ತೆಗೆಯಲಾಗುತ್ತದೆ. ಶ್ವಾಸಕೋಶದ ಕಾರ್ಯಕ್ಷಮತೆ ಪರೀಕ್ಷೆ (LFT) ಎಂಬ ವಿಶಿಷ್ಟ ಪರೀಕ್ಷೆ ಮುಖಾಂತರ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಪತ್ತೆ ಹಚ್ಚುತ್ತಾರೆ.

ಚಿಕಿತ್ಸೆ ಹೇಗೆ? :

IPF ಈ ರೋಗ ಜೀವನದ ಶೈಲಿಯನ್ನು ಹೆಚ್ಚು ಕಾಡುವ ರೋಗವಾಗಿದ್ದು, ದಿನಗಳೆದಂತೆ ರೋಗದ ತೀವ್ರತೆ ಹೆಚ್ಚಾಗುತ್ತಲೇ ಹೋಗುತ್ತದೆ. ಯಾವುದೇ ಚಿಕಿತ್ಸೆ ತೆಗೆದುಕೊಳ್ಳದಿದ್ದಲ್ಲಿ 4-6 ವರ್ಷಗಳಲ್ಲಿ ಶ್ವಾಸಕೋಶದ ವೈಫಲ್ಯದಿಂದ ರೋಗಿ ಸಾವನ್ನಪ್ಪುತ್ತಾನೆ. ರೋಗ ಲಕ್ಷಣವನ್ನು ಕಡಮೆ ಮಾಡುವುದು, ರೋಗದ ತೀವ್ರತೆ ಅಥವಾ ಮುಂದುವರಿಕೆಯನ್ನು ತಡೆಗಟ್ಟುವುದು ಮತ್ತು ಸಂಭವನೀಯ ತೊಂದರೆಗಳನ್ನು ತಪ್ಪಿಸುವ ಉದ್ದೇಶದಿಂದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರ ಜೊತೆಗೆ ರೋಗಿಯ ಜೀವನಮಟ್ಟವನ್ನು ಸುಧಾರಿಸುವತ್ತಲೂ ಗಮನಹರಿಸಲಾಗುತ್ತದೆ. ಚಿಕಿತ್ಸೆಯನ್ನು ಔಷಧಿ ಚಿಕಿತ್ಸೆ ಮತ್ತು ಸರ್ಜರಿ ಎಂಬುದಾಗಿ ವಿಂಗಡಿಸಲಾಗಿದೆ.

ಔಷಧಿ ಚಿಕಿತ್ಸೆ :

ಈ IPF ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲದಿದ್ದರೂ ರೋಗದ ಮುಂದುವರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಟಿರಾಯ್ಡು ಔಷಧಿ ನೀಡಲಾಗುತ್ತದೆ. ಇದರ ಜೊತೆ ದೇಹದ ರಕ್ಷಣಾ ವ್ಯವಸ್ಥೆಯನ್ನು ಮಾರ್ಪಡಿಸುವ ಔಷಧಿಗಳಾದ ಅಜಥಯೋಫ್ರೆನ್‍ಯನ್ನು ಬಳಸುತ್ತಾರೆ. ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯಲು ಆಂಟಿ ಆಕ್ಸಿಡೆಂಟ್ ಔಷಧಿ ಬಳಸುತ್ತಾರೆ. ದೇಹಕ್ಕೆ ಪೂರಕವಾದ ಆಮ್ಲಜನಕ ಪೂರೈಕೆ ಮಾಡಲು ಆಕ್ಸಿಜೆನ್ ಚಿಕಿತ್ಸೆ ನೀಡಲಾಗುತ್ತದೆ. ಇದರ ಜೊತೆಗೆ ಶ್ವಾಸಕೋಶಗಳ End-Stage-Idiopathic-Pulmonary-Fibrosis ಇಡಿಯೋಪಥೀಕ್ ಪಲ್ಮೊನರಿ ಪೈಬ್ರೊಸಿಸ್(IPF) ಖಾಯಿಲೆ : ಕೋವಿಡ್ ಸಮಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.ಕಾರ್ಯದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಲಘ ದೈಹಿಕ ವ್ಯಾಯಾಮ, ಪೋಷಕಕಾಂಶ ಯುಕ್ತ ಆಹಾರ, ಉಸಿರಾಟದ ಬದಲಾವಣೆ, ಜೀವನ ಶೈಲಿ ಬದಲಾವಣೆ ಮತ್ತು ಮಾನಸಿಕವಾದ ಸಿದ್ಧತೆಗೆ ನೇರವು ನೀಡಿ ರೋಗಿಯನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಲಾಗುತ್ತದೆ. ಯಾವುದೇ ರೀತಿಯ ಔಷಧಿ ಚಿಕಿತ್ಸೆಗೆ ಸ್ಪಂದಿಸದೇ ಹೋದಲ್ಲಿ ಶ್ವಾಸಕೋಶದ ಬದಲು ಜೋಡಣೆ ಮಾಡಿ ರೋಗವನ್ನು ಹತೋಟಿಗೆ ತರಲಾಗುತ್ತದೆ.

ಕೊನೆ ಮಾತು:

IPF ಎನ್ನುವುದು ಶ್ವಾಸಕೋಶಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದ್ದು, ಸಂಪೂರ್ಣವಾಗಿ ಗುಣಪಡಿಸಲಾಗದ ಖಾಯಿಲೆಯಾಗಿದೆ. ಆದರೆ ತಜ್ಞ ವೈದ್ಯರ ಮಾರ್ಗದರ್ಶನ, ಸೂಕ್ತ ಔಷಧಿಗಳ ಸಕಾಲದಲ್ಲಿ ಸೇವನೆ ಮತ್ತು ಜೀವನಶೈಲಿಯನ್ನೇ ಮಾರ್ಪಾಡು ಮಾಡಿ ರೋಗದ ತೀವ್ರತೆಯನ್ನು ಕಡಿಮೆ ಮಾಡಿ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದರಲ್ಲಿಯೇ ಜಾಣತನ ಅಡಗಿದೆ.

Murali-Mohan-Chuntar

ಡಾ| ಮುರಲೀ ಮೋಹನ್ ಚೂಂತಾರು
ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು
ಸುರಕ್ಷಾ ದಂತಚಿಕಿತ್ಸಾಲಯ,  ಹೊಸಂಗಡಿ, ಮಂಜೇಶ್ವರ- 671 323
ದೂ.: 04998-273544, 235111  ಮೊ.: 9845135787
www.surakshadental.com
email: drmuraleemohan@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!