ಹನಿ ಹನಿ ಮಳೆ: ಬಿಸಿ ಬಿಸಿ ಚಹಾ

ಹನಿ ಹನಿ ಮಳೆ  ಬರುತ್ತಿದೆಯೇ ಹಾಗಾದ್ರೆ ಈ ಚಹಾಗಳನ್ನು ಟ್ರೈ ಮಾಡಿ ನೋಡಿ. ರುಚಿ ಜೊತೆ ಆರೋಗ್ಯವನ್ನು ನೀಡುವ ಕೆಲವು ಸರಳ ಚಹಾ ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ. ಈ ಚಹಾವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹನಿ ಹನಿ ಮಳೆ: ಬಿಸಿ ಬಿಸಿ ಚಹಾಮಳೆಗಾಲದಲ್ಲಿ ಬಹುತೇಕ ಮಂದಿ ಇಷ್ಟಪಡುವ ಪೇಯ ಎಂದರೆ ಟೀ ಅಥವಾ ಚಹಾ. ಹೊರಗೆ ಮಳೆ ಬರುತ್ತಿದ್ದರೆ ಬಿಸಿ ಬಿಸಿ ಚಹಾ ಕುಡಿಯಬೇಕೆನಿಸುತ್ತದೆ. ಮಳೆ ಹನಿಗಳು ತುಂತುರು ತುಂತುರಾಗಿ ಬೀಳುತ್ತಿದ್ದಾಗ ಅದನ್ನು ನೋಡುತ್ತಾ ಚಹಾ ಚಪ್ಪರಿಸುವುದು ಒಂದು ಆಹ್ಲಾದಕರ ಅನುಭವ. ಚಳಿ ಅನಿಸಿದರೆ ಚಹಾ, ಮನೆಯಗೆ ಒದ್ದೆ ಮುದ್ದೆಯಾಗಿ ತೋಯಿಸಿಕೊಂಡು ಬಂದಾಗ ಬಿಸಿಬಿಸಿ ಕಡಕ್ ಚಹಾ ಬೇಕೆನಿಸುತ್ತದೆ.

ನಿಂಬೆ ಚಹಾ (ಲೆಮೆನ್ ಟೀ):

ನಿಂಬೆ ಚಹಾವನ್ನು ಮಳೆಗಾಲದಲ್ಲಿ ದಿನವೂ ಸೇವಿಸಬಹುದು. ದಿನದ ಆರಂಭವನ್ನು ಲೆಮೆನ್ ಟೀಯೊಂದಿಗೆ ಶುರು ಮಾಡಿ ದಿನವಿಡೀ ತಾಜಾತನದಿಂದ ಇರಿ.
ಬೇಕಾಗುವ ಪದಾರ್ಥ: ನೀರು-ಒಂದು ಕಪ್, ಸಕ್ಕರೆ-ರುಚಿಗೆ ತಕ್ಕಷ್ಟು, ಟೀಪುಡಿ-ಅರ್ಧಚಮಚ, ಕರಿಮೆಣಸು-ಚಿಟಕಿಯಷ್ಟು, ನಿಂಬೆರಸ-ಒಂದು ದೊಡ್ಡ ಚಮಚ.
ತಯಾಸುವ ವಿಧಾನ: ನೀರು ಬಿಸಿ ಮಾಡಲು ಇಡಿ. ಕುದಿ ಬಂದಾಗ ನಿಂಬೆ ರಸ ಬಿಟ್ಟು ಉಳಿದ ಪದಾರ್ಥಗಳನ್ನು ಹಾಕಿ. ಚೆನ್ನಾಗಿ ಕುದಿಸಿ, ನಂತರ ನಿಂಬೆರಸ ಹಾಕಿ. ಬಳಿಕ ಬಿಸಿಬಿಸಿಯಾದ ಲೆಮನ್ ಟೀ ಕುಡಿಯಿರಿ.

ತುಳಸಿ-ಶುಂಠಿ ಚಹಾ (ಬಾಸಿಲ್-ಜಿಂಜರ್ ಟೀ):

ಮಳೆಗಾಲದಲ್ಲಿ ಮೂಗು ಕಟ್ಟಿದೆಯೇ? ಗಂಟಲಲ್ಲಿ ಖಿಚ್ ಖಿಚ್ ಆಗುತ್ತಿದೆಯೇ? ತಲೆನೋವಿನಿಂದ ಮಂಡೆ ಸಿಡಿಯುವಂತಾಗಿದೆಯೇ? ಹಾಗಾದರೆ ಇದು ನಿಮಗೆ ಉಪಯೋಗವಾಗಬಹುದು.
dr hegde addಬೇಕಾಗುವ ಪದಾರ್ಥಗಳು: ನೀರು-ಒಂದು ಕಪ್, ಬೆಲ್ಲ-ರುಚಿಗೆ ತಕ್ಕಷ್ಟು, ತುರಿದ ಹಸಿ ಶುಂಠಿ-ಒಂದು ಚಮಚ, ತುಳಸಿ-5ರಿಂದ 6 ಎಲೆಗಳು.
ತಯಾರಿಸುವ ವಿಧಾನ: ನೀರು ಬಿಸಿ ಮಾಡಲು ಇಡಿ. ಬಿಸಿ ಆದಾಗ ಬೆಲ್ಲ ಹಾಕಿ. ಸ್ವಲ್ಪ ಹೊತ್ತಿಗೆ ನಂತರ ತುರಿದ ಹಸಿಶುಂಠಿ, ತುಳಸಿ ಎಲೆಗಳನ್ನು ಹಾಕಿ ಒಂದು ಕಪ್‍ಗೆ ಬರುವ ತನಕ ಕುದಿಸಿ. ಒಲೆಯ ಮೇಲಿಂದ ಇಳಿಸಿ ಸ್ವಲ್ಪ ಹಾಲು ಹಾಕಿ. ತುಳಸಿ – ಶುಂಠಿ ಚಹಾ ಸಿದ್ಧವಾಗುತ್ತದೆ.

ಶುಂಠಿ ಚಹಾ (ಜಿಂಜರ್ ಟೀ):

ಶುಂಠಿ ಚಹಾ ಅಥವಾ ಜಿಂಜರ್ ಟೀ ಆರೋಗ್ಯ ವರ್ಧಕ ಪೇಯ. ಈ ಚಹಾ ಮಳೆಗಾಲದಲ್ಲಿ ಶರೀರದಲ್ಲಿ ಶಾಖ ಉತ್ಪತ್ತಿ ಮಾಡುತ್ತದೆ.
ಬೇಕಾಗುವ ಪದಾರ್ಥಗಳು: ನೀರು-ಒಂದೂವರೆ ಕಪ್, ಒಣಶುಂಠಿ-ಅಗತ್ಯವಿದ್ದಷ್ಟು, ಕಪ್ಪು ಮೆಣಸು-ಅರ್ಧಚಮಚ, ತುಳಸಿ ಎಲೆಗಳು – 5ರಿಂದ 6, ಬೆಲ್ಲ-ರುಚಿಗೆ ತಕ್ಕಷ್ಟು.
ತಯಾರಿಸುವ ವಿಧಾನ: ಶುಂಠಿಯನ್ನು ನೀರಿನಲ್ಲಿ ನೆನೆಪಿಡಿ. ನೀರು ಕುದಿಸಿದ ಬಳಿಕ ನೆನೆ ಇಟ್ಟ ಶುಂಠಿಯನ್ನು ಹಾಕಿ. ಕರಿಮೆಣಸು, ತುಳಸಿ ಎಲೆಗಳನ್ನು ಹಾಕಿ ಕುದಿಸಿ. ಇದನ್ನು ಬಿಸಿ ಬಿಸಿಯಾಗಿ ಕುಡಿಯಿರಿ ಮತ್ತು ಸ್ವಲ್ಪ ಹೊತ್ತಿನ ತನಕ ಹೊರಗೆ ಹೋಗಬೇಡಿ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!