ಗ್ಲುಕೋಮಾ ಬಗ್ಗೆ ತಿಳಿಯಿರಿ ಮತ್ತು ನಿಮ್ಮ ದೃಷ್ಟಿ ರಕ್ಷಿಸಿ

ಗ್ಲುಕೋಮಾ ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಗ್ಲುಕೋಮಾದಿಂದ ಕಾರಣವಾಗುವ ದೃಷ್ಟಿ ನಾಶವು ಗಂಭೀರ ಪರಿಣಾಮದ್ದಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಅಂಧತ್ವವನ್ನು ತಡೆಗಟ್ಟಬಹುದಾಗಿದೆ.

glaucoma-ಗ್ಲುಕೋಮಾ ಬಗ್ಗೆ ತಿಳಿಯಿರಿ ಮತ್ತು ನಿಮ್ಮ ದೃಷ್ಟಿ ರಕ್ಷಿಸಿ

ಗ್ಲುಕೋಮಾ-ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಕಣ್ಣಿನ ಮೇಲೆ ಹೆಚ್ಚಿದ ಒತ್ತಡದಿಂದ ಉಂಟಾಗುವ ದೃಷ್ಟಿ ನರದ(ಆಪ್ಟಿಕ್ ನರ್ವ್) ಒಂದು ನೇತ್ರ ರೋಗವಾಗಿದೆ. ಭಾರತ ಒಂದರಲ್ಲೇ ಇದು ಸುಮಾರು 12 ದಶಲಕ್ಷ ಜನರ ಮೇಲೆ ದುಷ್ಪರಿಣಾಮ ಬೀರಿದೆ. ಗ್ಲುಕೋಮಾದಿಂದ ಕಾರಣವಾಗುವ ದೃಷ್ಟಿ ನಾಶವು ಗಂಭೀರ ಪರಿಣಾಮದ್ದಾಗಿದ್ದು, ಕಣ್ಣಿನಪೊರೆಯಲ್ಲಿ ಮಾರ್ಪಾಡಿಸಬಹುದಾದಂತೆ ದೃಷ್ಟಿ ದೋಷವನ್ನು ನಿವಾರಿಸಲು ಸಾಧ್ಯವಾಗುವುದಿಲ್ಲ. ಅದೃಷ್ಟವಶಾತ್, ಆರಂಭದಲ್ಲೇ ಸಮಸ್ಯೆಯನ್ನು ನಿರ್ಧರಿಸುವುದರಿಂದ ಮತ್ತು ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಅಂಧತ್ವವನ್ನು ತಡೆಗಟ್ಟಬಹುದಾಗಿದೆ.

ಹೇಗೆ ಉಂಟಾಗುತ್ತದೆ ?

ಕಣ್ಣಿನ ಒಳಗೆ ಒಂದು ದ್ರವವಿದ್ದು, ಅದು ನಿರಂತರವಾಗಿ ಉತ್ಪಾದನೆಯಾಗುತ್ತದೆ ಮತ್ತು ಕಣ್ಣಿನಿಂದ ಹೊರಗೆ ಹರಿದು ಹೋಗುತ್ತಿರುತ್ತದೆ. ಕಾರ್ನಿಯಾ (ಕಣ್ಣಾಲಿಗಳ ಮುಂದಿರುವ ಪಾರದರ್ಶಕ ಪಟಲ) ಮತ್ತು ಕಂದು ಬಣ್ಣದ ಪಾಪೆ ಪೊರೆ ನಡುವೆ ಒಂದು ಕೋನದಲ್ಲಿ ಇರುವ ಜರಡಿಯಂಥ ರಚನೆ ಮೂಲಕ ಈ ದ್ರವ ಹರಿದು ಹೋಗುತ್ತವೆ. ದ್ರವ ಹರಿದು ಹೋಗುವ ವ್ಯವಸ್ಥೆಯು ಅಸಮರ್ಪಕವಾದಾಗ, ಕಣ್ಣಿನಲ್ಲಿ ಒತ್ತಡ (ಇಂಟ್ರಾ-ಆಕ್ಯುಲರ್ ಪ್ರೆಷರ್) ಹೆಚ್ಚಾಗಿ ದೃಷ್ಟಿ ಹಾನಿಗೆ ಕಾರಣವಾಗುತ್ತದೆ.

ಯಾರಿಗೆ ಹೆಚ್ಚಾಗಿ ಕಂಡುಬರುತ್ತದೆ ?

40 ವರ್ಷಗಳ ವಯೋಮಾನ ಮೇಲ್ಪಟ್ಟವರು, ಗ್ಲುಕೋಮಾ ಹಿನ್ನೆಲೆಯ ಕುಟುಂಬದವರು, ದೀರ್ಘ ಕಾಲ ಉದ್ದೀಪನಾ ಮದ್ದು ಬಳಸುವವರು, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇರುವವರು, ಸಮೀಪ ದೃಷ್ಟಿ ಉಳ್ಳವರು(ಮಯೋಪಿಯಾ), ಕಣ್ಣಿಗೆ ಅಪಘಾತವಾದ ಹಿನ್ನಲೆ ಹೊಂದಿರುವವರು.

ನನ್ನ ದೃಷ್ಟಿ ತುಂಬಾ ಉತ್ತಮವಾಗಿದೆ ಹಾಗೂ ನೋವು ಅಥವಾ ಕಣ್ಣು ಕೆಂಪಾಗಾಗುವಿಕೆಯಂಥ ನೇತ್ರ ಸಮಸ್ಯೆ ನನಗಿಲ್ಲ. ಆದಾಗ್ಯೂ ನನಗೆ ಸಮಸ್ಯೆ ಕಂಡುಬರಬಹುದೇ ?

ಹೌದು, ನಿಮಗೆ  ಸಮಸ್ಯೆ ಕಂಡುಬರಬಹುದು. ಏಕೆಂದರೆ ಗ್ಲುಕೋಮಾ ಒಂದು ಮೌನ ಮತ್ತು ನೋವು ರಹಿತ ರೋಗವಾಗಿದ್ದು, ಆರಂಭಿಕ ಹಂತಗಳಲ್ಲಿ ಅದು ಗೋಚರಿಸುವುದಿಲ್ಲ ಅಥವಾ ಅನುಭವವಾಗುವುದಿಲ್ಲ. ಮುಂದುವರಿದ ಹಂತಗಳಲ್ಲಿ ಮಾತ್ರ, ದೃಷ್ಟಿಯ ಪಾಶ್ರ್ವ ಕ್ಷೇತ್ರ (ಬಾಹ್ಯ) ತೀವ್ರ ಹಾನಿಗೀಡಾಗುತ್ತದೆ, ಅಂದರೆ ಪಾಶ್ರ್ವಗಳಿಂದ, ಮೇಲೆ ಮತ್ತು ಕೆಳಗೆ ದೃಷ್ಟಿಯ ಸಮಸ್ಯೆ ಕಂಡುಬಂದು ದೋಷದ ಬಗ್ಗೆ ರೋಗಿಗೆ ಅರಿವು ಉಂಟಾಗುತ್ತದೆ. ಬಳಿಕ ದೃಷ್ಟಿ ಕ್ಷೇತ್ರವು ಶಾಶ್ವತವಾಗಿ ನಶಿಸಿ ಹೋಗುತ್ತದೆ. ಆಕಸ್ಮಿಕವಾಗಿ, ಬಹು ಪ್ರಯೋಜನಕಾರಿ ಕೇಂದ್ರ ದೃಷ್ಟಿಯು ಅಂತ್ಯದಲ್ಲಿ ಮಾತ್ರ ನಶಿಸುತ್ತದೆ ಹಾಗೂ ಕ್ಷೇತ್ರದಲ್ಲಿ ಬದಲಾವಣೆಗಳು ತುಂಬಾ ನಿಧಾನವಾಗಿ ಸಂಭವಿಸುತ್ತದೆ. ಇದೇ ಕಾರಣಕ್ಕಾಗಿ, ಹಾನಿಯು ಗಮನಾರ್ಹವಾಗಿ ಮುಂದುವರಿಯುವ ತನಕ ಬಹುತೇಕ ರೋಗಿಗಳಿಗೆ ಇದು ಕಂಡುಬರುವುದಿಲ್ಲ.

ವಿಭಿನ್ನ ವಿಧಗಳು ಯಾವುವು ?

  • ತೆರೆದ ಕೋನ ಗ್ಲುಕೋಮಾ (ಓಪನ್ ಆಂಗಲ್ ಗ್ಲುಕೋಮಾ), ಇದರಲ್ಲಿ ಕೋನವು ತೆರದುಕೊಂಡಿರುವುದರಿಂದ ದ್ರವ ಹರಿಯುವಿಕೆಯು ಅಸಮರ್ಪಕವಾಗಿರುತ್ತದೆ. ಆದರೆ, ಕಣ್ಣಿನ ದ್ರವವು ಹರಿಯಬೇಕಾದ ಜಾಲರಿ ಕೆಲಸದಂಥ ಜರಡಿಯು ಮುಚ್ಚಿ ಹೋಗಿರುತ್ತದೆ.
  • ಮುಚ್ಚಿದ ಕೋನ ಗ್ಲುಕೋಮಾ (ಕ್ಲೋಸ್ಡ್ ಆಂಗಲ್ ಗ್ಲುಕೋಮಾ), ಇದರಲ್ಲಿ ಕೋನವು ಮುಚ್ಚಿಕೊಂಡಿರುವುದರಿಂದ, ಹರಿಯುವ ಮಾರ್ಗಕ್ಕೆ ದ್ರವವು ತಲುಪುವುದಕ್ಕೆ ಅಡ್ಡಿ ಉಂಟು ಮಾಡುತ್ತದೆ.
  • ದ್ವಿತೀಯ ಹಂತದ ಗ್ಲುಕೋಮಾ (ಸೆಕೆಂಡರಿ ಗ್ಲುಕೋಮಾ), ಕೆಲವು ಇತರ ರೋಗ ಅಥವಾ ಕಣ್ಣಿಗೆ ಚಿಕಿತ್ಸೆಯಿಂದಾಗಿ ಇದು ಕಂಡುಬರುತ್ತದೆ.

ನನ್ನ ಕಣ್ಣಿನ ಒತ್ತಡ ಸಾಮಾನ್ಯವಾಗಿದೆ. ಆದಾಗ್ಯೂ ನನಗೆ  ಸಮಸ್ಯೆ ಕಂಡುಬರಬಹುದೇ ?

ಹೌದು, ಸಾಮಾನ್ಯ ನೇತ್ರ ಒತ್ತಡ ಇದ್ದರೂ ಕೂಡ ಕೆಲವರಲ್ಲಿ ನರ ಹಾನಿ ಕಂಡುಬರುತ್ತದೆ. ಇದನ್ನು ಸಾಮಾನ್ಯ ಒತ್ತಡ ಗ್ಲುಕೋಮಾ ಎನ್ನುತ್ತಾರೆ. ಮುಂದೆ ಕೋನ ಮುಚ್ಚಿದ ಗ್ಲುಕೋಮಾ ವಿಧದಲ್ಲಿ ಕಣ್ಣಿನ ಒತ್ತಡವು ಸಾಮಾನ್ಯವಾಗಿರುವಂತೆ ಅಥವಾ ಹೆಚ್ಚಾಗಿರುವಂತೆ ಕಂಡುಬರುತ್ತದೆ. ಹೀಗಾಗಿ ಸಾಮಾನ್ಯ ನೇತ್ರ ಒತ್ತಡದ ಒಂದು ಮಾಪನದಿಂದ ಗ್ಲುಕೋಮಾ ಇಲ್ಲ ಎಂದರ್ಥವಲ್ಲ.

ನನಗೆ ‘ಸಂಕುಚಿತ ಕೋನಗಳು’ ಇವೆ, ಆದರೆ ಗ್ಲುಕೋಮಾ ಇಲ್ಲ ಎಂದು ವೈದ್ಯರು ನನಗೆ ತಿಳಿಸಿದ್ದಾರೆ. ಇದರ ಅರ್ಥ ಏನು ?

ಕಣ್ಣಿನ ಒಳಗೆ ಉತ್ಪತ್ತಿಯಾಗುವ ದ್ರವಕ್ಕಾಗಿ ಪ್ರವಹಿಸುವ ಪ್ರದೇಶವು ಮತ್ತು ಹೊರ ಹರಿದು ಹೋಗುವಿಕೆಯು ಕಿರಿದಾಗಿರುತ್ತದೆ. ಇಂಥ ನೇತ್ರ ದೋಷ ಇರುವವರಿಗೆ ಮುಂದಿನ ದಿನದಲ್ಲಿ ಮುಚ್ಚಿದ ಕೋನ ಗ್ಲುಕೋಮಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಸರಳ ಲೇಸರ್ ಚಿಕಿತ್ಸಾ ವಿಧಾನವು ಸಂಕುಚಿತ ಕೋನಗಳನ್ನು ಅಗಲಿಸಲು ನೆರವಾಗುತ್ತದೆ, ಅಲ್ಲದೇ ಗ್ಲುಕೋಮಾ ಅಭಿವೃದ್ಧಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಇಂಥ ಕಿರಿದಾದ ಕೋನಗಳು ಸಂಪೂರ್ಣವಾಗಿ ಮುಚ್ಚಿಕೊಳ್ಳಬಹುದಾಗಿದ್ದು, ಕಣ್ಣಿನ ಒತ್ತಡದಲ್ಲಿ ಹಠಾತ್ ಹೆಚ್ಚಾಗುವಿಕೆ ಮತ್ತು ತೀವ್ರ ಕಣ್ಣು ನೋವಿಗೆ ಕಾರಣವಾಗುತ್ತದೆ. ಇದನ್ನು ಆಕ್ಯುಟ್ ಆಂಗಲ್ ಕ್ಲೋಷರ್ ಆಟ್ಯಾಕ್ (ತೀವ್ರ ಕೋನ ಬಂದ್ ಆಗುವಿಕೆ ಆಕ್ರಮಣ) ಎನ್ನುತ್ತಾರೆ. ಈ ಸಮಸ್ಯೆಗೆ ತುರ್ತು ಚಿಕಿತ್ಸೆ ಅಗತ್ಯವಿರುತ್ತದೆ.

ವೈದ್ಯರಿಂದ ಶಿಫಾರಸು ಮೇರೆಗೆ ನಾನು ಈಗಾಗಲೇ ಲೇಸರ್ ಚಿಕಿತ್ಸಾ ವಿಧಾನಕ್ಕೆ ಒಳಪಟ್ಟಿದ್ದೇನೆ. ಆದರೂ ನನಗೆ ಏಕೆ ಗುಣಮುಖ ಕಂಡುಬಂದಿಲ್ಲ ?

ಲೇಸರ್ ಚಿಕಿತ್ಸಾ ವಿಧಾನವು ಕಣ್ಣಿನಲ್ಲಿ ಕಿರಿದಾದ ಕೋನಗಳನ್ನು ತೆರೆಯಲು ಸಹಾಯ ಮಾಡುತ್ತದೆ, ಇದು ಭವಿಷ್ಯದಲ್ಲಿ ಮತ್ತಷ್ಟು ಕೋನ ಮುಚ್ಚುವಿಕೆ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ತುಂಬಾ ಆರಂಭಿಕ ಹಂತಗಳಲ್ಲಿ ಅಗತ್ಯವಾಗಿರುವ ಏಕೈಕ ಚಿಕಿತ್ಸೆ ಇದಾಗಿದ್ದರೆ, ಒತ್ತಡ ಹೆಚ್ಚಳ ಮುಂದುವರಿಯುವಿಕೆ ಮತ್ತು ನರ ಹಾನಿಗೆ ಹೆಚ್ಚುವರಿ, ಜೀವನದುದ್ದಕ್ಕೂ ಐ ಡ್ರಾಪ್ಸ್‍ಗಳ ಬಳಕೆ ಅಥವಾ ಶಸ್ತ್ರಚಿಕಿತ್ಸೆ ಅಗತ್ಯವಾಗಿರುತ್ತದೆ. ಕಣ್ಣಿನಲ್ಲಿನ ಒತ್ತಡವನ್ನು ನಿಯಂತ್ರಿಸಲು ಮತ್ತು ನರ ಇನ್ನಷ್ಟು ಹಾನಿಗೀಡಾಗುವುದನ್ನು ತಡೆಗಟ್ಟಲು ಈ ವಿಧಾನಗಳು ಅನಿವಾರ್ಯವಾಗುತ್ತವೆ.

ಲೇಸರ್ ಚಿಕಿತ್ಸೆ ವಿಧಾನದ ನಂತರ ನಾನು ಚಿಕಿತ್ಸೆ ಪಡೆಯುವ ಅಗತ್ಯವಿದೆಯೇ ?

ಲೇಸರ್ ಚಿಕಿತ್ಸೆ ಒಂದು ಸರಳ ವಿಧಾನವಾಗಿದ್ದು, 10-15 ನಿಮಿಷಗಳು ಬೇಕಾಗುತ್ತವೆ. ಆದಾಗ್ಯೂ, ಕಣ್ಣಿನ ಗೊಂಬೆಯನ್ನು ಚಿಕ್ಕದಾಗಿ ಮಾಡಲು ಚಿಕಿತ್ಸಾ ವಿಧಾನಕ್ಕೂ ಮುನ್ನ ಐ ಡ್ರಾಪ್ಸ್‍ಗಳನ್ನು ಹಾಕಬೇಕಾಗುತ್ತದೆ. ಇದಕ್ಕೆ 2 ಗಂಟೆಗಳು ಬೇಕಾಗಬಹುದು. ಬಹುತೇಕ ಸಂದರ್ಭಗಳಲ್ಲಿ ಇದು ಒಂದೇ ಒಂದು ಬಾರಿಗೆ ಮುಕ್ತಾಯಗೊಳ್ಳುತ್ತದೆ. ಸಾಂದರ್ಭಿಕವಾಗಿ ಬಹು ಸಂದರ್ಭಗಳು ಬೇಕಾಗಬಹುದು. ಚಿಕಿತ್ಸಾ ವಿಧಾನದ ದಿನದಂದು ದೃಷ್ಟಿ ಸ್ವಲ್ಪ ಮಬ್ಬಾಗುವಿಕೆಯು ಅಸಾಮಾನ್ಯವೇನಲ್ಲ. ಚಿಕಿತ್ಸೆಗೆ ಒಳಗಾದ ನಂತರ ರೋಗಿಯು ಅದೇ ದಿನ ಅಥವಾ ಮರುದಿನ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದು. ಚಿಕಿತ್ಸಾ ವಿಧಾನದ ನಂತರ ಒಂದು ವಾರ ಕಾಲ ಐ ಡ್ರಾಪ್ಸ್‍ಗಳನ್ನು ಬಳಸುವ ಅಗತ್ಯವಿರುತ್ತದೆ. ಲೇಸರ್ ಚಿಕಿತ್ಸೆ ವಿಧಾನದ ಬಳಿಕ ಎಲ್ಲ ಸಾಮಾನ್ಯ ಚಟುವಟಿಕೆಗಳನ್ನು ಮುಂದುವರಿಸಬಹುದಾಗಿರುತ್ತದೆ.

Also Read: ಗ್ಲಾಕೋಮಾ ಮಾರಣಾಂತಿಕ ರೋಗವಲ್ಲ- ಚಿಕಿತ್ಸೆ  ನೀಡದಿದ್ದಲ್ಲಿ ಅಂಧತ್ವಕ್ಕೆ ನಾಂದಿ 

ಡಾ.ಕೆ.ಭುಜಂಗ ಶೆಟ್ಟಿ
 ನಾರಾಯಣ ನೇತ್ರಾಲಯ
121/ಸಿ, ಕಾರ್ಡ್ ರೋಡ್, 1ನೇ ‘ಎನ್’ ಬ್ಲಾಕ್,

ರಾಜಾಜಿನಗರ, ಬೆಂಗಳೂರು-560010,
ಫೋನ್ : +91-80-66121300-305
Email : info@narayananethralaya.com ;  info@nnmail.org 

Website : www.narayananethralaya.org

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!