ಗಾಯ ಅಥವಾ ಪೆಟ್ಟಿನಿಂದಾಗಿ ರಕ್ತ ಸ್ರಾವ – ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು.

ಗಾಯ ಅಥವಾ ಪೆಟ್ಟಿನಿಂದಾಗಿ ರಕ್ತನಾಳಗಳಿಂದ ರಕ್ತ ಹೊರಗೆ ಹೋಗುವುದಕ್ಕೆ ರಕ್ತಸ್ರಾವ ಅಥವಾ ರಕ್ತ ಸೋರಿಕೆ (ಬ್ಲೀಡಿಂಗ್) ಎನ್ನುತ್ತಾರೆ. ಒಬ್ಬ ವ್ಯಕ್ತಿಯು ರಕ್ತಸ್ರಾವದಿಂದ ಬಳಲುತ್ತಿರುವಾಗ, ಅವನಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು.

Gaya-athava-pettinindagi-raktasrava.ರಕ್ತ ಸ್ರಾವದಲ್ಲಿ ಎರಡು ವಿಧಗಳಿವೆ. ಬಾಹ್ಯ ರಕ್ತಸ್ರಾವ ಮತ್ತು ಆಂತರಿಕ(ಒಳ) ರಕ್ತಸ್ರಾವ. ದೇಹದ ಚರ್ಮದಿಂದ ರಕ್ತಸೋರಿಕೆಯಾದರೆ ಅದು ಬಾಹ್ಯ ರಕ್ತಸ್ರಾವ. ಶರೀರದ ಒಳಗೆ ರಕ್ತ ಪರಿಚಲನೆಯಿಂದ ರಕ್ತ ಹೊರ ಬಂದರೆ ಅದು ಒಳ (ಆಂತರಿಕ) ರಕ್ತಸೋರಿಕೆ. ಗಾಯಗೊಂಡ ಅಥವಾ ಪೆಟ್ಟಾದ ಸೂಕ್ಷ್ಮ ರಕ್ತವಾಹಿನಿಯಿಂದ ಅಲ್ಪಪ್ರಮಾಣದ ರಕ್ತಸ್ರಾವವಾಗುತ್ತದೆ. ಶುದ್ಧರಕ್ತವಾಹಿನಿ(ಧಮನಿ) ಅಥವಾ ರಕ್ತನಾಳಗಳು ಅಥವಾ ಇವೆರಡರಿಂದಲೂ ತೀವ್ರ ರಕ್ತಸ್ರಾವವಾಗುತ್ತದೆ.

ಬಾಹ್ಯ ರಕ್ತಸ್ರಾವದೊಂದಿಗೆ ಗಾಯಗಳಾದಾಗ ಚಿಕಿತ್ಸೆಗೆ ಸಾಮಾನ್ಯ ನಿಯಮಗಳು:

1. ರಕ್ತಸ್ರಾವವಾಗುತ್ತಿರುವ ಜಾಗವನ್ನು ಮೇಲೆತ್ತಬೇಕು.

2.ಬಟ್ಟೆಯನ್ನು ಎಷ್ಟು ಸಾಧ್ಯವೋ ಅಷ್ಟು ತೆಗೆದು ಗಾಯವನ್ನು ಗಾಳಿಗೆವೊಡ್ಡಬೇಕು.

3. ಈಗಾಗಲೇ ಹೆಪ್ಪುಗಟ್ಟಿರುವ ರಕ್ತವನ್ನು ಮುಟ್ಟಬಾರದು

4. ಕಣ್ಣಿಗೆ ಕಾಣುವ ಬಾಹ್ಯ ವಸ್ತುಗಳನ್ನು ತೆಗೆಯಬೇಕು.

ತೀವ್ರ ರಕ್ತಸ್ರಾವ ತಡೆಗಟ್ಟುವುದು ಹೇಗೆ?

1. ರಕ್ತನಾಳಗಳಲ್ಲಿ ಹೆಚ್ಚು ರಕ್ತ ಪೂರೈಕೆಯಾಗುತ್ತಿದ್ದರೆ ರಕ್ತಸ್ರಾವ ತೀವ್ರವಾಗಿರುತ್ತದೆ.

2. ಗಾಯಗೊಂಡ ವ್ಯಕ್ತಿಯನ್ನು ಮಲಗಿಸಬೇಕು. ಗಾಯವಾದ ಜಾಗದಿಂದ ಬಟ್ಟೆಯನ್ನು ತೆಗೆಯಬೇಕು.

3. ಯಾವುದೇ ಹೀರಿಕೊಳ್ಳುವ ವಸ್ತು ಅಥವಾ ನಿಮ್ಮ ಬರಿಗೈನಿಂದ ಗಾಯಗೊಂಡ ಕೈಯನ್ನು ಒತ್ತಬೇಕು.

4. ಗಾಯಾಳುವನ್ನು ಹೃದಯದ ಮಟ್ಟಕ್ಕೆ ಎತ್ತರಿಸಬೇಕು. ಇದರಿಂದ ರಕ್ತಹರಿವು ಕಡಿಮೆಯಾಗುತ್ತದೆ. ನಂತರ ಕೈಯನ್ನು ಸ್ವಚ್ಚಗೊಳಿಸಿದ ನಂತರ ಡ್ರೆಸಿಂಗ್ ಮಾಡಬೇಕು.

ಆಂತರಿಕ ರಕ್ತಸ್ರಾವ – ಚಿಹ್ನೆ ಮತ್ತು ಲಕ್ಷಣಗಳು:

ಶ್ವಾಸಕೋಶ, ಹೊಟ್ಟೆ ಮೂತ್ರಪಿಂಡ, ಗುಲ್ಮ, ಪಿತ್ತಕೋಶ, ಲಿವರ್ ಇತ್ಯಾದಿಯಂಥ ಅಂಗಗಳಲ್ಲಿ ರಕ್ತಸ್ರಾವವಾಗುತ್ತಿರುವುದಕ್ಕೆ ಆಂತರಿಕ ರಕ್ತಸ್ರಾವ ಎನ್ನುತ್ತಾರೆ. ಇದು ಗೋಚರಿಸುವುದಿಲ್ಲ. ಇಂಥ ಸಮಸ್ಯೆಗಳಿಗೆ ತುರ್ತು ವೈದ್ಯಕೀಯ ನೆರವು ಪಡೆಯಬೇಕು. ಚರ್ಮ ಮತ್ತು ತುಟಿಯ ಬಣ್ಣ ಕಳೆಗುಂದುತ್ತದೆ. ಬಾಯಾರಿಕೆ ಮತ್ತು ಹಸಿವು ಹೆಚ್ಚಾಗುತ್ತದೆ. ನಾಡಿ ಬಡಿತ ಜಾಸ್ತಿಯಾಗುತ್ತದೆ. ಚರ್ಮದಲ್ಲಿ ತಣ್ಣನೆಯ ಹಾಗೂ ತೇವಾಂಶ ಕಂಡು ಬರುತ್ತದೆ.  ಗಾಯಾಳುವನ್ನು ವಿಶ್ರಾಂತಿಗೆ ಒಳಪಡಿಸಿ, ಸ್ಥಿರವಾಗಿರುವಂತೆ ತಿಳಿಸಿ ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ಕೊಂಡ್ಯೊಯಬೇಕು.

ಕಿವಿಯಿಂದ ರಕ್ತಸ್ರಾವ:

ತಲೆಬುರುಡೆಯ ತಳದಲ್ಲಿ ಸಾಮಾನ್ಯವಾಗಿ ಮೂಳೆ ಮುರಿದಿದ್ದರೆ ಕಿವಿಯಲ್ಲಿ ರಕ್ತಸೋರುತ್ತದೆ. ಕಿವಿಯಲ್ಲಿ ರಕ್ತ ಸೋರುತಿತದ್ದರೆ ತಲೆಯನ್ನು ಸ್ವಲ್ಪ ಎತ್ತರ ಮಾಡಿ ವ್ಯಕ್ತಿಯನ್ನು ಮಲಗಿಸಬೇಕು. ಕಿವಿಯೊಳಗೆ ಏನ್ನನೂ ಸೇರಿಸಲು ಯತ್ನಿಸಬೇಡಿ. ಹಾನಿಗೀಡಾದ ಸ್ಥಳದತ್ತ ತಲೆಯನ್ನು ಎತ್ತರಿಸಿ, ಕಿವಿಗೆ ಡ್ರೈ ಡ್ರೆಸಿಂಗ್ ಮಾಡಿ, ಹಗುರವಾಗಿ ಬ್ಯಾಂಡೇಜ್ ಸುತ್ತಿ.

ಕೈ ಹಸ್ತದಿಂದ ರಕ್ತಸ್ರಾವ:

injury-ಗಾಯ-ರಕ್ತಸ್ರಾವ-ಹಸ್ತದಿಂದ ಆಗುವ ರಕ್ತಸ್ರಾವ ತೀವ್ರವಾಗಿರುತ್ತದೆ. ಏಕೆಂದರೆ, ಹಸ್ತದಲ್ಲಿ ಹಲವಾರು ರಕ್ತವಾಹಿನಿಗಳು ಇದಕ್ಕೆಂದು ಮುಕ್ತವಾಗಿ ಸಂಪರ್ಕಗೊಂಡಿರುತ್ತವೆ. ಗಾಯಗೊಂಡ ಹಸ್ತದ ಮೇಲೆ ಪ್ಯಾಡ್ ಇಟ್ಟು ಅದರ ಮೇಲೆ ಬೆರಳುಗಳನ್ನು ಮಡಚಬೇಕು.

ವೆರಿಕೋಸ್ ವೇನ್‍ನಿಂದ ರಕ್ತಸ್ರಾವ:

ಕಾಲಿನ ವೆರಿಕೋಸ್ ವೇನ್ ಎಂಬ ರಕ್ತನಾಳ ಒಡೆದು ತೀವ್ರ ರಕ್ತಸೋರಿಕೆಯಾಗುತ್ತದೆ. ಗಾಯಾಳುವನ್ನು ಸಮತಟ್ಟಾಗಿ ಮಲಗಿ, ಕಾಲನ್ನು ಎಷ್ಟು ಸಾಧ್ಯವೋ ಅಷ್ಟು ಎತ್ತರಿಸಬೇಕು. ಪ್ಯಾಡ್ ಇಟ್ಟು ಬ್ಯಾಂಡೇಜ್ ಮಾಡಬೇಕು. ಕಾಲನ್ನು ಎತ್ತರದಲ್ಲೇ ಇರಿಸಬೇಕು. ಸೊಂಟದ ಸುತ್ತವಿರುವ ಬಟ್ಟೆಯನ್ನು ಸಡಿಲಗೊಳಿಸಬೇಕು.

Also Read: ವೆರಿಕೋಸ್ ವೇನ್ಸ್ – ನಿರ್ಲಕ್ಷ್ಯ ಬೇಡ

ಮೂಗಿನಿಂದ ರಕ್ತಸ್ರಾವ:

ರಕ್ತಸ್ರಾವವಾಗುತ್ತಿದ್ದರೆ, ತಲೆ ಮೇಲಕ್ಕೆ ಎತ್ತಿರುವಂತೆ ವ್ಯಕ್ತಿಯನ್ನು ಕೂರಿಸಬೇಕು. ಕತ್ತು ಮತ್ತು ಎದೆಯ ಬಳಿಯಿರುವ ಎಲ್ಲ ಬಿಗಿ ಉಡುಪುಗಳನ್ನು ಸಡಿಲಗೊಳಿಸಬೇಕು. ಬಾಯಿ ತೆಗೆದಂತೆ ಇರಲಿ ಮತ್ತು ಮೂಗಿನಿಂದ ಉಸಿರಾಡುವುದನ್ನು ತಪ್ಪಿಸಬೇಕು. ಮೂಗಿನೊಳಗೆ ಏನನ್ನು ತೂರಿಸಲು ಯತ್ನಿಸಬೇಡಿ.
ತಣ್ಣನೆಯ ಬಟ್ಟೆಯನ್ನು ಮೂಗಿನ ಬಳಿ ಇಡಬೇಕು.

Also Read: https://healthvision.in/category/articles/first-aid/

Dr-Siddu-Kumar-Ghanti.ಡಾ. ಸಿದ್ದುಕುಮಾರ್ ಘಂಟಿ ಬಸವಶ್ರೀ ಆಯುರ್ವೇದ ಸೇವಾ ಕೇಂದ್ರ ಇಎಸ್‍ಐ ಆಸ್ಪತ್ರೆ ಮುಖ್ಯರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10 ದೂ.: 9845042755

ಡಾ. ಸಿದ್ದುಕುಮಾರ್ ಘಂಟಿ
ಬಸವಶ್ರೀ ಆಯುರ್ವೇದ ಸೇವಾ ಕೇಂದ್ರ
ಇಎಸ್‍ಐ ಆಸ್ಪತ್ರೆ ಮುಖ್ಯರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ದೂ.: 9845042755

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!