ವೆರಿಕೋಸ್ ವೇನ್ಸ್ – ನಿರ್ಲಕ್ಷ್ಯ ಬೇಡ

ವೆರಿಕೋಸ್ ವೇನ್ಸ್ ಕಾಲುಗಳ ನರಗಳು ಉಬ್ಬಿರುವ ಸಮಸ್ಯೆ. ಕಾಲಿನ ಯಾವುದೇ ನರ ಅಥವಾ ರಕ್ತವಾಹಿನಿ ಕಾಲುಗಳ ನರಗಳು ಉಬ್ಬಿರುವ ಸಮಸ್ಯೆ ಆಗಿ ಪರಿವರ್ತನೆಯಾಗಬಹುದು. ಆದರೆ, ತೀರಾ ಸಾಮಾನ್ಯವಾಗಿ ಪರಿಣಾಮಕ್ಕೆ ಒಳಗಾಗುವ ನರಗಳು ಎಂದರೆ ನಿಮ್ಮ ಕಾಲುಗಳು ಮತ್ತು ಪಾದಗಳ ನರಗಳು. ನಿಲ್ಲುವಿಕೆ ಮತ್ತು ನಡೆದಾಡುವಿಕೆ ನಿಮ್ಮ ಶರೀರದ ಕೆಳಭಾಗದ ಮೇಲೆ ಒತ್ತಡವನ್ನು ಹೆಚ್ಚಿಸುವುದು ಇದಕ್ಕೆ ಕಾರಣವಾಗುತ್ತದೆ.

ವೆರಿಕೋಸ್ ವೇನ್ಸ್ - ನಿರ್ಲಕ್ಷ್ಯ ಬೇಡವೆರಿಕೋಸ್ ವೇನ್ಸ್ ನನ್ನು (ಕಾಲುಗಳ ನರಗಳು ಉಬ್ಬಿರುವ ಸಮಸ್ಯೆ) ಕಾಲುಗಳು ಮತ್ತು ಪಾದಗಳಲ್ಲಿ ವಿಶೇಷವಾಗಿ ಗಂಟು ಗಂಟಾದ, ಸುತ್ತಿಕೊಂಡ ಹಾಗೂ ದೊಡ್ಡದಾದ ಉಬ್ಬಿರುವ ನರಗಳು ಎಂದು ಬಣ್ಣಿಸಬಹುದು. ಅನೇಕರಿಗೆ ವೆರಿಕೋಸ್ ವೇನ್ಸ್ ಮತ್ತು ಸ್ಪೈಡರ್ ವೇನ್ಸ್‍ಗಳು ಸಾಮಾನ್ಯವಾದ, ಸಾಧಾರಣವಾದ ಹಾಗೂ ವೈದ್ಯಕೀಯವಾಗಿ ಮಹತ್ವವಲ್ಲದ ವೆರಿಕೋಸ್ ವೇನ್ಸ್‍ನ ವ್ಯತ್ಯಾಸವಾಗಿದ್ದು, ಕಾಸ್ಮೆಟಿಕ್ ಕಳವಳಕ್ಕೆ ಕಾರಣವಾಗಿದ್ದರೆ, ಇತರರಿಗೆ  ನೋವು, ಕೆರೆತ ಹಾಗೂ ಕಿರಿಕಿರಿಯ ಸಂಗತಿಯಾಗಿರುತ್ತದೆ. ಕೆಲವೊಮ್ಮೆ ಈ ಪರಿಸ್ಥಿತಿ ಗಂಭೀರ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ.

ಕಾಲುಗಳ ನರಗಳು ಉಬ್ಬಿರುವ ಇಲ್ಲವೇ ಊದಿಕೊಂಡಿರುವ ಸಮಸ್ಯೆಯು ರಕ್ತ ಪರಿಚಲನೆ ವ್ಯವಸ್ಥೆಯಲ್ಲಿನ ಇತರ ದೋಷಗಳ ಅಧಿಕ ಅಪಾಯದ ಸಂಕೇತವೂ ಆಗಿರಬಹುದು. ವೆರಿಕೋಸ್ ವೇನ್ಸ್ ಭಾರತದಲ್ಲಿ ಕಂಡು ಬರುವ ಸಾಮಾನ್ಯ ಸಂಗತಿಯಾಗಿದ್ದು, ಶೇ.15ರಷ್ಟು ಪುರುಷರು ಹಾಗೂ ಶೇ.25ರಷ್ಟು ಮಹಿಳೆಯರಲ್ಲಿ ಗೋಚರಿಸುತ್ತದೆ. ಇಂಥ ನರಗಳನ್ನು ಬಂದ್ ಮಾಡುವ ಇಲ್ಲವೇ ತೆಗೆದು ಹಾಕುವ ನಿಮ್ಮ ವೈದ್ಯರ ವಿಧಾನಗಳು ಅಥವಾ ಸ್ವಯಂ ಸಹಾಯ ಕ್ರಮಗಳ ಮೂಲಕ ಈ ದೋಷಕ್ಕೆ ಚಿಕಿತ್ಸೆ ನೀಡಬಹುದಾಗಿದೆ.

 ಚಿಹ್ನೆಗಳು ಮತ್ತು ಲಕ್ಷಣಗಳು :

1. ವೆರಿಕೋಸ್ ವೇನ್ಸ್ ಇರುವ ಕೆಲವು ಜನರಲ್ಲಿ ಈ ಸ್ಥಿತಿಯಿಂದ ಯಾವುದೇ ಅನಾನುಕೂಲ, ತೊಂದರೆ ಅಥವಾ ಕಿರಿಕಿರಿ ಉಂಟಾಗದೇ ಇರಬಹುದು. ನೋವಿನ ಚಿಹ್ನೆ ಮತ್ತು ಲಕ್ಷಣಗಳು ಕಂಡುಬಂದರೆ, ಅದು ಈ ಕೆಳಕಂಡವುಗಳನ್ನು ಒಳಗೊಂಡಿರಬಹುದು.

2. ನಿಮ್ಮ ಕಾಲಿನಲ್ಲಿ ಕೆರೆತ ಅಥವಾ ನೋವಿನ ಭಾರೀ ಅನುಭವ ಉಂಟಾಗಬಹುದು. ನಿಮ್ಮ ಕೆಳ ಕಾಲುಗಳಲ್ಲಿ ಉರಿ, ನೋವು, ಮಾಂಸಖಂಡಗಳ ಸೆಳೆತ ಹಾಗೂ ಊತ ಕಂಡುಬರಬಹುದು. ದೀರ್ಘಕಾಲ ಕುಳಿತಿರುವಿಕೆ ಅಥವಾ ನಿಂತಿರುವಿಕೆಯಿಂದ ನಿಮ್ಮ ಕಾಲುಗಳ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಂತೆ ಅನಿಸಬಹುದು.

3. ನಿಮ್ಮ ನರಗಳು ಒಂದು ಅಥವಾ ಅದಕ್ಕಿಂತ ಹೆಚ್ಚು ನರಗಳ ಸುತ್ತಮುತ್ತ ನವೆ, ಕೆರೆತ ಉಂಟಾಗುತ್ತದೆ.

4. ನಿಮ್ಮ ಮೊಣಕಾಲಿನ ಬಳಿ ಚರ್ಮ ಹುಣ್ಣುಗಳು ಉಂಟಾಗಬಹುದು. ಇದು ವ್ಯಾಸ್ಕುಲರ್ ರೋಗದ ತೀವ್ರ ಸ್ವರೂಪವನ್ನು ಪ್ರತಿನಿಧಿಸುತ್ತದೆ ಹಾಗೂ ಇದಕ್ಕೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಅಗತ್ಯ.

5. ವೆರಿಕೋಸ್ ವೇನ್ಸ್ ಕಡು ನೆರಳೆ ಅಥವಾ ನೀಲಿ ಬಣ್ಣ ಹೊಂದಿದ್ದು, ಉದಿಕೊಂಡು ಸುರುಳಿಯಾಗಿ ಕಾರ್ಡ್ ಮಾದರಿಯಲ್ಲಿ ಇರುತ್ತದೆ. ಸಾಮಾನ್ಯವಾಗಿ ಮೀನಖಂಡದಲ್ಲಿ ಅಥವಾ ಕಾಲಿನ ಒಳಗೆ ಕಂಡು ಬರುತ್ತದೆ. ಅದಾಗ್ಯೂ ಅದು ನಿಮ್ಮ ತೊಡೆ ಸಂಧಿಯಿಂದ ನಿಮ್ಮ ಮೊಣಕಾಲಿನ ತನಕ ನಿಮ್ಮ ಕಾಲಿನ ಯಾವುದೇ ಭಾಗದಲ್ಲಿ ಬೇಕಾದರೂ ರೂಪುಗೊಳ್ಳಬಹುದು.

ವೆರಿಕೋಸ್ ವೇನ್ಸ್   ಕಾರಣಗಳು:

1. ಶುದ್ದ ರಕ್ತನಾಳಗಳು ನಿಮ್ಮ ಹೃದಯದಿಂದ ನಿಮ್ಮ ಅಂಗಾಂಶಗಳ ಉಳಿದೆಡೆಗೆ ರಕ್ತವನ್ನು ಕೊಂಡ್ಯೊಯುತ್ತದೆ. ನರಗಳು ದೇಹದ ಉಳಿದ ಭಾಗಗಳಿಂದ ನಿಮ್ಮ ಹೃದಯಕ್ಕೆ ರಕ್ತವನ್ನು ಹಿಂದಿರುಗಿಸುತ್ತದೆ. ಹೀಗಾಗಿ ರಕ್ತವು ಪುನರ್ ಪರಿಚಲನೆಯಾಗುತ್ತದೆ. ನಿಮ್ಮ ಹೃದಯಕ್ಕೆ ರಕ್ತವನ್ನು ಹಿಂದಿರುಗಿಸಲು ನಿಮ್ಮ ಕಾಲುಗಳ ನರಗಳು ಗುರುತ್ವಾಕರ್ಷಣೆಗೆ ವಿರುದ್ದವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ನಿಮ್ಮ ಕೆಳ ಕಾಲುಗಳ ಮಾಂಸಖಂಡಗಳ ಸಂಕುಚನಗಳು ಪಂಪ್ ರೀತಿ ಕೆಲಸ ಮಾಡಿದರೆ, ನಿಮ್ಮ ತೆಳಗಿನ, ಎಲಾಸ್ಟಿಕ್ ಗೋಡೆಗಳು ನಿಮ್ಮ ಹೃದಯಕ್ಕೆ ರಕ್ತವನ್ನು ಹಿಂದಿರುಗಿಸಲು ಸಹಾಯ ಮಾಡುತ್ತವೆ. ನಿಮ್ಮ ನರಗಳಲ್ಲಿ ಇರುವ ಪುಟ್ಟ ವಾಲ್ವ್‍ಗಳು (ಕವಾಟಗಳು) ನಿಮ್ಮ ಹೃದಯಗಳಿಗೆ ರಕ್ತ ಹರಿಯುವಾಗ ತೆರೆದುಕೊಳ್ಳುತ್ತದೆ. ನಂತರ ರಕ್ತ ಹಿಮ್ಮುಖವಾಗಿ ಹರಿಯುವುದನ್ನು ತಡೆಗಟ್ಟಲು ಕವಾಟಗಳು ಮುಚ್ಚಲ್ಪಡುತ್ತವೆ.

2. ನಿಮಗೆ ವಯಸ್ಸಾದಂತೆ ನಿಮ್ಮ ನರಗಳ ಎಲಾಸ್ಟಿಸಿಟಿ ಸಾಮಥ್ರ್ಯ ಕುಗ್ಗಿ ಎಳೆಯಲ್ಪಡುತ್ತದೆ. ನಿಮ್ಮ ನರಗಳಲ್ಲಿನ ಕವಾಟಗಳು ದುರ್ಬಲವಾಗುತ್ತದೆ. ಇದರಿಂದ ನಿಮ್ಮ ಹೃದಯದತ್ತ ಹರಿಯುವ ರಕ್ತವು ಹಿಂದಕ್ಕೆ ಹರಿಯಲು ಅವಕಾಶ ನೀಡಿದಂತಾಗುತ್ತದೆ. ಹೀಗಾಗಿ ನಿಮ್ಮ ನರಗಳಲ್ಲಿ ರಕ್ತ ಸಂಗ್ರಹಗೊಂಡು ನರಗಳು ದೊಡ್ಡದಾಗಿ ವೆರಿಕೋಸ್ ಸಮಸ್ಯೆಗೆ ಕಾರಣವಾಗುತ್ತದೆ. ಇದು ಆಮ್ಲಜನಕವಿಲ್ಲದ (ಡಿಆಕ್ಸಿಜೆನೆಟೆಡ್) ರಕ್ತವಾದ ಕಾರಣ ನರಗಳು ನೀಲಿ ಬಣ್ಣದಲ್ಲಿ ಗೋಚರಿಸುತ್ತವೆ.

3. ಕೆಲವು ಗರ್ಭಿಣಿಯರಲ್ಲೂ ವೆರಿಕೋಸ್ ವೇನ್ಸ್ ಕಂಡು ಬರುತ್ತದೆ. ಗರ್ಭಧಾರಣೆಯಿಂದ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಆದರೆ, ಕಾಲುಗಳಿಂದ ಪಿತ್ತಾಶಯಕ್ಕೆ ರಕ್ತದ ಹರಿಯುವಿಕೆಯನ್ನು ತಗ್ಗಿಸುತ್ತದೆ. ಈ ಪರಿಚಲನೆ ಬದಲಾವಣೆಯು ಬೆಳೆಯುತ್ತಿರುವ ಭ್ರೂಣದ ಬೆಂಬಲವಾಗಿ ವಿನ್ಯಾಸಗೊಳ್ಳುತ್ತದೆ. ಆದರೆ, ಇದು ಕಾಲುಗಳಲ್ಲಿ ದೊಡ್ಡದಾದ ನರಗಳ ಅಡ್ಡ ಪರಿಣಾಮಕ್ಕೆ ಎಡೆ ಮಾಡಿಕೊಡಬಹುದು. ವೆರಿಕೋಸ್ ವೇನ್ಸ್ ಮೊದಲ ಬಾರಿಗೆ ಮೇಲ್ಮೆ ರೀತಿ ಕಾಣಿಸಿಕೊಳ್ಳಬಹುದು ಅಥವಾ ನಿಧಾನ ಗರ್ಭಧಾರಣೆ ವೇಳೆ ಕಾಲುಗಳ ನರಗಳ ಮೇಲೆ ಭ್ರೂಣವು ಹೆಚ್ಚಿನ ಒತ್ತಡ ಹಾಕಿದಾಗ ಈ ಸ್ಥಿತಿ ಇನ್ನಷ್ಟು ಹದಗೆಡಬಹುದು. ಹೆಮೊರ್ರಾಯ್ಡ್ಸ್ (ಮೂಲವ್ಯಾಧಿ) ಕೂಡ ಗುದದ್ವಾರದಲ್ಲಿ ಮತ್ತು ಅದರ ಸುತ್ತ ಇರುವ ವೆರಿಕೋಸ್ ವೇನ್ಸ್ ಆಗಿದೆ.

ವೆರಿಕೋಸ್ ವೇನ್ಸ್ - ನಿರ್ಲಕ್ಷ್ಯ ಬೇಡ ಬರುವ ಸಾಧ್ಯತೆ ಅಂಶಗಳು:

ಈ ಕೆಳಕಂಡ ಅಂಶಗಳು ವೆರಿಕೋಸ್ ವೇನ್ಸ್ ಅಭಿವೃದ್ದಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

1. ವಯಸ್ಸು : ರಕ್ತ ಹರಿಯುವುದಕ್ಕೆ ಸಹಾಯ ಮಾಡುವ ನರಗಳ ಕವಾಟಗಳು ವಯಸ್ಸಾದಂತೆ ಸವೆದು ಹೋಗುತ್ತವೆ. ಸವೆದು ಹೋಗುವಿಕೆಯಿಂದ ಕವಾಟಗಳು ಅಸಮರ್ಪಕವಾಗಿ ಕೆಲಸ ಮಾಡುತ್ತವೆ

2. ಲಿಂಗ : ಪುರುಷರಿಗಿಂತ ಮಹಿಳೆಯರಲ್ಲಿ ವೆರಿಕೋಸ್ ವೇನ್ಸ್ ದೋಷ ಹೆಚ್ಚಾಗಿ ಕಂಡು ಬರುತ್ತದೆ. ಗರ್ಭಧಾರಣೆ ವೇಳೆ, ಮುಟ್ಟಿಗೆ ಪೂರ್ವದಲ್ಲಿ ಹಾಗೂ ಮುಟ್ಟು ಕೊನೆಗೊಳ್ಳುವ ಸಂದರ್ಭದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆ ಇದಕ್ಕೆ ಕಾರಣ. ಮಹಿಳಾ ಹಾರ್ಮೋನುಗಳು ವೇನ್ಸ್‍ನ ಗೋಡೆಗಳಲ್ಲಿ ವಿಶ್ರಾಂತಿ ಪಡೆಯಲು ಇಚ್ಚಿಸುತ್ತವೆ. ಹಾರ್ಮೋನು ಬದಲಾವಣೆ ಚಿಕಿತ್ಸೆ ಅಥವಾ ಗರ್ಭ ನಿರೋಧಕ ಮಾತ್ರೆಗಳು ಮಹಿಳೆಯರಲ್ಲಿ ವೆರಿಕೋಸ್ ವೇನ್ಸ್‍ನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

3. ಅನುವಂಶೀಯತೆ : ವಂಶವಾಹಿನಿ ಅಥವಾ ಅನುವಂಶೀಯತೆಯೂ ವೆರಿಕೋಸ್ ವೇನ್ಸ್‍ಗೆ ಕಾರಣವಾಗಬಹುದು. ನಿಮ್ಮ ಕುಟುಂಬದ ಇತರ ಸದಸ್ಯರಲ್ಲಿ ಯಾರಿಗಾದರೂ ವೆರಿಕೋಸ್ ವೇನ್ಸ್ ಇದ್ದರೆ ಅದು ನಿಮಗೆ ಬರುವು ಸಾಧ್ಯತೆ ಅಧಿಕವಾಗಿರುತ್ತದೆ.

4. ಸ್ಥೂಲಕಾಯ/ಬೊಜ್ಜು : ಅತಿಯಾದ ತೂಕ, ಸ್ಥೂಲಕಾಯ ಸಮಸ್ಯೆ ಅಥವಾ ಬೊಜ್ಜಿನಿಂದ ನಿಮ್ಮ ನರಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗುತ್ತದೆ.

5. ದೀರ್ಘ ಸಮಯದ ಕಾಲ ನಿಲ್ಲುವಿಕೆ : ದೀರ್ಘಾವಧಿ ಒಂದೇ ಸ್ಥಾನದಲ್ಲಿ ನೀವು ಇದ್ದರೆ ರಕ್ತವು ಸಮರ್ಪಕವಾಗಿ ಹರಿಯುವುದಿಲ್ಲ.

ತಪಾಸಣೆ ಮತ್ತು ರೋಗ ನಿರ್ಧಾರ:

ನೀವು ನಿಂತಿದ್ದಾಗ ನಿಮ್ಮ ಕಾಲುಗಳನ್ನು ಪರೀಕ್ಷಿಸುವುದು ಹಾಗೂ ಊತಕ್ಕಾಗಿ ಪರಿಶೀಲನೆ ನಡೆಸುವುದು ತಪಾಸಣೆ ಮತ್ತು ರೋಗ ನಿರ್ಧಾರದಲ್ಲಿ ಒಳಗೊಂಡಿರುತ್ತದೆ. ನಿಮ್ಮ ಕಾಲುಗಳಲ್ಲಿ ಉಂಟಾಗುವ ನೋವು, ಉರಿ ಮತ್ತು ಕಡಿತವನ್ನು ವಿವರಿಸುವಂತೆ ನಿಮ್ಮನ್ನು ಕೇಳಲಾಗುತ್ತದೆ. ಅಂತಿಮವಾಗಿ ನಿಮ್ಮ ನರಗಳಲ್ಲಿನ ಕವಾಟಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಎಲ್ಲಾದರೂ ರಕ್ತ ಹೆಪ್ಪುಗಟ್ಟಿದೆಯೇ ಎಂಬುದನ್ನು ನೋಡಲು ಆಲ್ಟ್ರಾಸೌಂಡ್ ಪರೀಕ್ಷೆಯನ್ನು ಮಾಡಲಾಗುತ್ತದೆ.

 ವೇನ್ಸ್ ದೋಷಗಳಿಗೆ ಚಿಕಿತ್ಸೆ:

ವೇನ್ಸ್ ದೋಷಗಳಿಗೆ ಹೊರರೋಗಿ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ. ವ್ಯಾಯಾಮ, ತೂಕ ಇಳಿಸಿಕೊಳ್ಳುವಿಕೆ, ಬಿಗಿಯಾದ ಉಡುಪನ್ನು ಧರಿಸದಿರುವಿಕೆ, ನಿಮ್ಮ ಕಾಲುಗಳನ್ನು ಎತ್ತರವಾಗಿ ಇರಿಸುವಿಕೆ ಹಾಗೂ ದೀರ್ಘಕಾಲ ನಿಲ್ಲುವ ಅಥವಾ ಕುಳಿತುಕೊಳ್ಳುವುದನ್ನು ತಪ್ಪಿಸುವಿಕೆಯಂಥ ಸ್ವಯಂ ಸಹಾಯ ಕ್ರಮಗಳು ನೋವನ್ನು ನಿವಾರಿಸುವ ಜೊತೆಗೆ ವೆರಿಕೋಸ್ ವೇನ್ಸ್ ಇನ್ನಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆ ವೇಳೆ ಕಾಣಿಸಿಕೊಳ್ಳುವ ವೆರಿಕೋಸ್ ವೇನ್ಸ್ ಯಾವುದೇ ವೈದ್ಯಕೀಯ ಚಿಕಿತ್ಸೆಗಳು ಇಲ್ಲದೇ ಹೆರಿಗೆ ನಂತರ ಮೂರು ತಿಂಗಳ ಒಳಗೆ ತಾನಾಗಿಯೇ ಸುಧಾರಿಸುತ್ತದೆ.ಸ್ವಯಂ ಸಹಾಯ ಕ್ರಮಗಳಿಗೆ ಇದು ಪ್ರತಿಕ್ರಿಯಿಸದಿದ್ದರೆ ಅಥವಾ ನಿಮ್ಮ ಸ್ಥಿತಿ ಇನ್ನಷ್ಟು ವಿಷಮವಾಗಿದ್ದರೆ, ನಿಮ್ಮ ವೈದ್ಯರು ಈ ಕೆಳಕಂಡ ಯಾವುದಾದರೂ ವೆರಿಕೋಸ್ ವೇನ್ಸ್ ಚಿಕಿತ್ಸೆಗೆ ಸಲಹೆ ಮಾಡಬಹುದು.

ವೆರಿಕೋಸ್ ವೇನ್ಸ್ - ನಿರ್ಲಕ್ಷ್ಯ ಬೇಡ1. ಸ್ಕೆಲೇರೋಥೆರಪಿ

2. ಲೇಸರ್ ಸರ್ಜರಿ

3. ಕ್ಯಾಥೆಟರ್ ನೆರವಿನ ವಿಧಾನದ ಚಿಕಿತ್ಸೆ

4. ನರ ಎಳೆಯುವಿಕೆ

5. ಆಂಬ್ಯುಲೇಟರಿ ಫ್ಲೆಬೆಕ್ಟೊಮಿ

6. ಎಂಡೋಸ್ಕೋಪಿಕ್ ವೇನ್ ಸರ್ಜರಿ

7. ನೀವು ಎಚ್ಚರಿಕೆಯ ಗ್ರಾಹಕರಾಗಿ : ಶಾಶ್ವತವಾಗಿ ಅಥವಾ ಸಂಭವನೀಯವಾಗಿ ವೆರಿಕೋಸ್ ವೇನ್ಸ್ ಮರುಕಳಿಸುವ ಸಾಧ್ಯತೆಗಳು ಇರುತ್ತವೆ.

ವೆರಿಕೋಸ್ ವೇನ್ಸ್   ತಡೆಗಟ್ಟುವಿಕೆ:

ನಿಮ್ಮ ರಕ್ತ ಪರಿಚಲನೆಯನ್ನು ಸುಧಾರಿಸುವುದರಿಂದ ಹಾಗೂ ಮಾಂಸಖಂಡಗಳನ್ನು ಸರಿಪಡಿಸುವುದರಿಂದ ವೆರಿಕೋಸ್ ವೇನ್ಸ್ ಅಭಿವೃದ್ದಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಆದರೆ ವೆರಿಕೋಸ್ ವೇನ್ಸ್‍ನನ್ನು ಸಂಪೂರ್ಣವಾಗಿ ತಡೆಗಟ್ಟಲು ಯಾವುದೇ ಮಾರ್ಗಗಳಿಲ್ಲ  ಹಾಗೂ ಹೆಚ್ಚುವರಿ ನರಗಳು ಸೇರುವುದನ್ನು ತಪ್ಪಿಸಬಹುದು.

1. ವ್ಯಾಯಾಮ ಮಾಡಿ. ನಿಮ್ಮ ಕಾಲುಗಳನ್ನು ಚಲಿಸುತ್ತೀರಿ. ನಿಮ್ಮ ಕಾಲುಗಳಲ್ಲಿ ರಕ್ತ ಸಂಚಾರವನ್ನು ಸುಧಾರಿಸಲು ಹಾಗೂ ಪ್ರೋತ್ಸಾಹಿಸಲು ವಾಕಿಂಗ್ ಉತ್ತಮ ಮಾರ್ಗ. ನಿಮ್ಮ ವೈದ್ಯರು ನಿಮಗೆ ಸೂಕ್ತವಾದ ಚಟುವಟಿಕೆಯ ಮಟ್ಟವನ್ನು ಶಿಫಾರಸು ಮಾಡಬಹುದು.

2. ನಿಮ್ಮ ತೂಕ ಮತ್ತು ಆಹಾರವನ್ನು ಗಮನಿಸಿ. ನಿಮ್ಮ ನರಗಳ ಮೇಲೆ ಅನಗತ್ಯ ಒತ್ತಡ ಹಾಕುವ ಹೆಚ್ಚುವರಿ ಪೌಂಡ್‍ಗಳನ್ನು ಕಡಿಮೆ ಮಾಡಿ. ನೀವು ಏನನ್ನು ಸೇವಿಸುತ್ತೀರೋ ಅದು ವಿಭಿನ್ನತೆಯನ್ನು ಉಂಟು ಮಾಡುತ್ತದೆ. ನೀರು ಸೇರಿಕೊಳ್ಳುವುದರಿಂದ ಹಾಗೂ ಮಲಬದ್ದತೆಯಿಂದ ಉಂಟಾಗುವ ಊತವನ್ನು ಕಡಿಮೆ ಮಾಡಲು ಕಡಿಮೆ ಉಪ್ಪು ಹಾಗೂ ಅಧಿಕ ಫೈಬರ್‍ಯುಕ್ತ ಆಹಾರವನ್ನು ಸೇವಿಸಿ.

3. ನೀವು ಏನು ಧರಿಸುತ್ತೀರಿ ಎಂಬ ಬಗ್ಗೆ ಗಮನವಿರಲಿ. ಎತ್ತರದ ಹಿಮ್ಮಡಿ ಇರುವ ಪಾದರಕ್ಷೆಗಳನ್ನು ಸಾಧ್ಯವಾದಷ್ಟೂ ತಪ್ಪಿಸಿ. ಕಡಿಮೆ ಹಿಮ್ಮಡಿ ಇರುವ ಪಾದರಕ್ಷೆಗಳು ಮೀನಖಂಡಗಳಿಗೆ ಉತ್ತಮ. ಅವು ಕಾಲಿನ ನರಗಳಿಗೂ ಒಳ್ಳೆಯದು. ನಿಮ್ಮ ಸೊಂಟ, ಕಾಲುಗಳು ಹಾಗೂ ತೊಡೆ ಸಂಧಿ ಸುತ್ತ ಬಿಗಿಯಾದ ಉಡುಪು ಧರಿಸಬೇಡಿ. ಬಿಗಿಯಾದ ಪ್ಯಾಂಟಿ ಲೆಗ್ ಕಾಲಿನ ಭಾಗದಲ್ಲಿ ರಕ್ತ ಸಂಚಾರಕ್ಕೆ ಅಡಚಣೆ ಉಂಟು ಮಾಡುತ್ತದೆ.

4. ನಿಮ್ಮ ಕಾಲುಗಳನ್ನು ಎತ್ತರದಲ್ಲಿ ಇರಿಸಿ. ನರಗಳ ಪರಿಚಲನೆಯನ್ನು ಸುಧಾರಿಸಲು ನಿಮ್ಮ ಎದೆ ಮಟ್ಟಕ್ಕಿಂತ ಎತ್ತರದಲ್ಲಿ ನಿಮ್ಮ ಕಾಲುಗಳನ್ನು ಎತ್ತರಿಸಲು ಪ್ರತಿ ದಿನ ಹಲವಾರು ಸಲ ಲಘು ವಿರಾಮಗಳನ್ನು ಪಡೆಯಿರಿ. ಉದಾಹರಣೆಗೆ, ಕೆಳಗೆ ಮಲಗಿ ಮೂರು ಅಥವಾ ನಾಲ್ಕು ದಿಂಬುಗಳ ಮೇಲೆ ಕಾಲುಗಳನ್ನು ಇರಿಸಿ.

5. ದೀರ್ಘ ಕಾಲ ಒಂದೇ ಸ್ಥಳದಲ್ಲಿ ನಿಲ್ಲುವಿಕೆ ಅಥವಾ ಕುಳಿತಿರುವಿಕೆಯನ್ನು ತಪ್ಪಿಸಿ. ರಕ್ತ ಸಂಚಾರವನ್ನು ಹೆಚ್ಚಿಸಲು ನಿಮ್ಮ ಸ್ಥಾನವನ್ನು ಆಗಾಗ ಬದಲಿಸುತ್ತೀರಿ. ಕನಿಷ್ಟ ಪ್ರತಿ 30 ನಿಮಿಷಗಳಿಗೊಮ್ಮೆ ನಿಮ್ಮ ಸುತ್ತ ಚಲಿಸಲು ಪ್ರಯತ್ನಿಸಿ.

6.ನಿಮ್ಮ ಕಾಲುಗಳನ್ನು ಅಡ್ಡಲಾಗಿ ಇಟ್ಟುಕೊಂಡು ಕುಳಿತುಕೊಳ್ಳಬೇಡಿ. ಈ ಭಂಗಿಯು ರಕ್ತ ಸಂಚಾರ ಸಮಸ್ಯೆಯನ್ನು ಉಲ್ಬಣಗೊಳಿಸುವ ಸಾಧ್ಯತೆ ಇರುತ್ತದೆ.

ಸ್ವಯಂ ಆರೈಕೆ:

1. ಇತರ ಚಿಕಿತ್ಸೆಗಳಿಗೆ ಹೋಗುವುದಕ್ಕೆ ಮುನ್ನ ಮೊದಲನೇ ವಿಧಾನವಾಗಿ ಕಂಪ್ರೆಷನ್ ಸ್ಟಾಕಿಂಗ್ ಧರಿಸಲು ಪ್ರಯತ್ನಿಸಿ. ಕಂಪ್ರೆಷನ್ ಸ್ಟಾಕಿಂಗ್‍ನನ್ನು ಇಡೀ ದಿನ ಧರಿಸಬೇಕು. ಇವು ನಿಮ್ಮ ಕಾಲುಗಳನ್ನು ಹಿಂಡುತ್ತವೆ. ಇದರಿಂದ ನರಗಳು ಮತ್ತು ಕಾಲಿನ ಮಾಂಸಖಂಡಗಳು ರಕ್ತವನ್ನು ಹೆಚ್ಚು ಪರಿಣಾಮಕಾರಿಯಾಗಿ ಚಲಿಸಲು ಸಹಾಯವಾಗುತ್ತದೆ. ಒತ್ತಡ ಹಾಕುವ ಪ್ರಮಾಣವು ವಿಧ ಹಾಗೂ ಬ್ರಾಂಡ್ ಮೇಲೆ ಅವಲಂಬಿತವಾಗಿರುತ್ತದೆ.

2. ಮಂಡಿಯ ಹಿಂಭಾಗದ ಸೂಪರ್‍ಫಿಷಿಯಲ್ ಹಾಗೂ ಡೀಪ್ ವೇನ್ಸ್‍ಗಳ ಮಧ್ಯೆ (ಸ್ಯಾಪೆನೊಪೊಪ್‍ಲಿಟಿಯಲ್ ಜಂಕ್ಷನ್) ಕವಾಟ ಸೋರುವಿಕೆಯಿಂದ ಬಲಗಾಲಿನ ಹಿಂಬದಿ ಮೇಲಿನ ಪ್ರಮುಖ ವೆರಿಕೋಸ್ ವೇನ್ಸ್‍ಗೆ ಕಾರಣವಾಗುತ್ತದೆ.

3. ತೊಡೆ ಸಂಧಿಯಲ್ಲಿನ (ಸಫೆನೋ ಫಿಮೋರಲ್ ಇನ್‍ಕಂಪಿಟೆನ್ಸ್) ಕವಾಟ ಸೋರುವಿಕೆಯಿಂದ ಬಲ ತೊಡೆ ಹಾಗೂ ಮೀನಖಂಡದ ಒಳಭಾಗದಲ್ಲಿ ವೆರಿಕೋಸ್ ವೇನ್ಸ್ ದೋಷ ಉಂಟಾಗುತ್ತದೆ.

4. ಸೂಪರ್‍ಫಿಷಿಯಲ್ ವೇನ್ಸ್‍ಗಳಲ್ಲಿ ಅಧಿಕ ಒತ್ತಡ ಉಂಟಾಗುವುದರಿಂದ ಕಜ್ಜಿ, ಗುಳ್ಳೆಗಳು ಹಾಗೂ ಸೂಪರ್‍ಫಿಷಿಯಲ್ ಚರ್ಮ ಹುಣ್ಣುಗಳೊಂದಿಗೆ ಮೊಣಕಾಲಿನ ಮೇಲಿನ ಗೈಟರ್ ಸ್ಥಳದಲ್ಲಿನ ಚರ್ಮ ಬದಲಾವಣೆಯಾಗಲು ಕಾರಣವಾಗುತ್ತದೆ.

ಡಾ. ಚಲಪತಿ ಪ್ರೊಫೆಸರ್ ಅಫ್ ಜನರಲ್ ಸರ್ಜರಿ ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್ #82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066 ಫೋನ್: 080- 49069000 Extn: 1147/1366   http://www.vims.ac.in/

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ

ವೈದೇಹಿ ಇನ್ಸ್‍ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
#82, ಇಪಿಐಪಿ ವೈಟ್‍ಫೀಲ್ಡ್, ಬೆಂಗಳೂರು -560066
ಫೋನ್: 080- 49069000 Extn: 1147/1366  

http://www.vims.ac.in/

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!