FICCI ಮತ್ತು ವಿಶನ್ 2020 ಸಭೆ: ಚಿಕಿತ್ಸೆವಿಳಂಬ ಮಾಡಿದಲ್ಲಿ, ದೃಷ್ಟಿದೋಷದ ಅಪಾಯವು ಹೆಚ್ಚುತ್ತದೆ.

FICCI ಮತ್ತು ವಿಶನ್ 2020 ಸಭೆ, ಕೋವಿಡ್ 19 ಪಿಡುಗಿನ ವೇಳೆಯಲ್ಲಿ ದೃಷ್ಟಿಮಾಂದ್ಯರ ಪಾಡನ್ನು ಎತ್ತಿತೋರಿಸಿದೆ.  ಚಿಕಿತ್ಸೆಯನ್ನು ಸೋಂಕಿನ ಭಯದಿಂದಾಗಿ ಮೂರು ತಿಂಗಳಿಗಿಂತ ಹೆಚ್ಚಾಗಿ ವಿಳಂಬ ಮಾಡಿದಲ್ಲಿ, ದೃಷ್ಟಿದೋಷದ ತೀವ್ರತೆಯ ಅಪಾಯವು 90%ರಷ್ಟು ಹೆಚ್ಚುತ್ತದೆ.ಸಭೆಯಲ್ಲಿ ತಜ್ಞರು ಕೋವಿಡ್ 19 ಕಾರಣ ಮತ್ತು ಅದಕ್ಕೆ ಸಂಬಂಧಿಸಿದ ಲಾಕ್‍ಡೌನ್‍ನ ಕಾರಣದಿಂದ ದೃಷ್ಟಿದೋಷದಿಂದ ಬಳಲುವವರು ಎದುರಿಸುವ ಸವಾಲುಗಳನ್ನು ಎತ್ತಿತೋರಿಸಿದರು.

ficci-national-conclave-on-eye FICCI ಮತ್ತು ವಿಶನ್ 2020 ಸಭೆ: ಚಿಕಿತ್ಸೆವಿಳಂಬ ಮಾಡಿದಲ್ಲಿ, ದೃಷ್ಟಿದೋಷದ ಅಪಾಯವು ಹೆಚ್ಚುತ್ತದೆ.ಬೆಂಗಳೂರು, ಆಗಸ್ಟ್ 22, 2020: ಭಾರತದ ಅಗ್ರ ಕೈಗಾರಿಕ ಸಂಘವಾದ –FICCI ಮತ್ತು ವಿಶನ್ 2020, ಕೋವಿಡ್ 19 ಪಿಡುಗಿನ ವೇಳೆಯಲ್ಲಿ ವಿವಿಧ ರೀತಿಯ ದೃಷ್ಟಿ ದೋಷಗಳಿಂದಾಗಿ ಪೀಡಿತರಾದ ಜನರ ಮೇಲೆ ಪಿಡುಗಿನ ಪ್ರಭಾವವನ್ನು ತೋರಿಸಲು  ಸಭೆಯನ್ನು ಆಯೋಜಿಸಿತು.

ಅತಿಹೆಚ್ಚು ದೃಷ್ಟಿಹೀನರಿರುವ ವಿಶ್ವದ ದೊಡ್ಡ ದೇಶಗಳಲ್ಲಿ ಭಾರತವೂ ಒಂದಾಗಿದ್ದು, ಇವರ ಸಂಖ್ಯೆಯು ಸುಮಾರು 4.8 ದಶಲಕ್ಷಗಳಿವೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2019ರಲ್ಲಿ ದೃಷ್ಟಿಹೀನತೆಯ ಪರಿಷ್ಕೃತ ವ್ಯಾಖ್ಯಾನವನ್ನು ಸ್ಥಾಪಿಸಿದ ನಂತರ ಭಾರತದ ದೃಷ್ಟಿ ಹೀನರ ಸಂಖ್ಯೆಯು 47%ರಷ್ಟು ಕಡಿಮೆಯಾಗಿದೆ. ಭಾರತದಲ್ಲಿ ದೃಷ್ಟಿಹೀನತೆ(92.9%) ಮತ್ತು ದೃಷ್ಟಿದೋಷದ (96.2%) ಬಹಳಷ್ಟು ಪ್ರಕರಣಗಳಿಗೆ ತಡೆಗಟ್ಟಬಲ್ಲ ಅಥವಾ ನಿರೋಧಿಸಬಲ್ಲ ಕಾರಣಗಳಿಂದಾಗಿ ಉಂಟಾಗಿದೆ.

ತಡೆಗಟ್ಟಬಲ್ಲ ದೃಷ್ಟಿಹೀನತೆಯನ್ನುಂಟು ಮಾಡುವ ನಾಲ್ಕು ಸಾಮಾನ್ಯ ಸಮಸ್ಯೆಗಳೆಂದರೆ – ಕ್ಯಾಟರಾಕ್ಟ್, ಗ್ಲಾಕೋಮಾ ಮತ್ತು ರೆಟಿನಾದ ರೋಗಗಳಾದ ವಯೋ ಆಧಾರಿತ ಮ್ಯಾಕ್ಯುಲಾರ್ ಡಿಜನರೇಶನ್ (AMD) ಮತ್ತು ಡಯಾಬಿಟೀಸ್ ಮ್ಯಾಕ್ಯುಲಾರ್ ಎಡೀಮಾ (DME). ಸಮಯೋಚಿತವಾಗಿ ಇದನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಿದರೆ, ರೋಗಿಯ ದೃಷ್ಟಿಯನ್ನು ಕಾಪಾಡಬಹುದು. ಸಭೆಯಲ್ಲಿ ತಜ್ಞರು ಕೋವಿಡ್ 19 ಕಾರಣ ಮತ್ತು ಅದಕ್ಕೆ ಸಂಬಂಧಿಸಿದ ಲಾಕ್‍ಡೌನ್‍ನ ಕಾರಣದಿಂದ ದೃಷ್ಟಿದೋಷದಿಂದ ಬಳಲುವವರು ಎದುರಿಸುವ ಸವಾಲುಗಳನ್ನು ಎತ್ತಿತೋರಿಸಿದರು.

Dr-Phanindra-Babu-Nukella-CEO-Vision-2020-Country-Chair-IAPB
ಡಾ. ಫಣೀಂದ್ರ ಬಾಬು ನುಕೆಲ್ಲಾ, ಸಿಇಒ, ವಿಷನ್ 2020 ಇಂಡಿಯಾ & ಕಂಟ್ರಿ ಚೇರ್, ಐಎಪಿಬಿ

“ನಾವೆಲ್ಲರೂ ಹೊಸ ರೂಢಿಯನ್ನು ನಿಭಾಯಿಸುತ್ತಿರುವಾಗ, ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ರೆಟಿನಾದ ಕಾಯಿಲೆಗಳಂತಹ ವಿವಿಧ ಕಣ್ಣಿನ ಕಾಯಿಲೆಗಳಿಂದ ಬಳಲುತ್ತಿರುವ ಜನರ ಜೀವನದ ಮೇಲೆ ರಾಷ್ಟ್ರೀಯ ಲಾಕ್‍ಡೌನ್ ವೈದ್ಯರ ಭೇಟಿಯನ್ನು ಮಾಡಲಾಗದಂತಹ ಪ್ರತಿಕೂಲ ಪರಿಣಾಮವನ್ನು ಬೀರಿತು. ನಿರ್ಬಂಧಿತ ಚಲನೆಗಳು, ಸಾರ್ವಜನಿಕ ಸಾರಿಗೆಯ ಕೊರತೆ ಮತ್ತು ಇದನ್ನು ಮತ್ತಷ್ಟು ಹೆಚ್ಚಿಸುವಂತೆ ಸಹಾಯಕ ಶಿಬಿರಗಳನ್ನು ನಡೆಸಲು ಅನುಮತಿಯಿಲ್ಲದೆ, ಹೆಚ್ಚಿನ ಜನರು ದೃಷ್ಟಿದೋಷ ಮತ್ತು ತೀವ್ರ ದೃಷ್ಟಿಹೀನತೆಯಿಂದ ಬಳಲುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಕ್ರಿಯಾತ್ಮಕ ದೃಷ್ಟಿ ಸಮಸ್ಯೆಗಳನ್ನು ವರದಿ ಮಾಡುವ ವಯಸ್ಸಾದ ರೋಗಿಗಳಲ್ಲಿ (ಉದಾ. ಮೆಟ್ಟಿಲುಗಳನ್ನು ಉಪಯೋಗಿಸಲು ಅಥವಾ ಬಾಹ್ಯ ದೃಷ್ಟಿಯಲ್ಲಿನ ವಸ್ತುಗಳನ್ನು ನೋಡುವುದರಲ್ಲಿ ತೊಂದರೆ) ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು, ಅಂತಹ ಸಮಸ್ಯೆಗಳನ್ನು ವರದಿ ಮಾಡದ ರೋಗಿಗಳಿಗಿಂತ 90% ಹೆಚ್ಚಿರುತ್ತದೆ  ಎಂದು ಡಾ. ಫಣೀಂದ್ರ ಬಾಬು ನುಕೆಲ್ಲಾ, ಸಿಇಒ, ವಿಷನ್ 2020 ಇಂಡಿಯಾ & ಕಂಟ್ರಿ ಚೇರ್, ಐಎಪಿಬಿ, ಹೇಳಿದರು.

ಗೌಪ್ಯಸಭೆಯಲ್ಲಿ ನಡೆದ ಚರ್ಚೆಗಳು ದೃಷ್ಟಿದೋಷಪೀಡಿತರು ಎದುರಿಸುವ ಈ ಕೆಳಕಂಡ ಸವಾಲುಗಳನ್ನು ಎತ್ತಿತೋರಿಸಿತು

1. ದೇಶದಲ್ಲಿ ಗಣನೀಯ ಸಂಖ್ಯೆಯಲ್ಲಿ ದೃಷ್ಟಿಹೀನರು ಇದ್ದರೂ, ಲಕ್ಷಣಗಳು ಮತ್ತು ತಪಾಸಣೆಯ ಬಗ್ಗೆ ಜಾಗೃತಿ ಮೂಡಿಸಲು ಕಣ್ಣಿನ ರೋಗಗಳ ಬಗ್ಗೆ ಆಗ್ಯತೆ ನೀಡಲಾಗಿಲ್ಲ.

2. ರೆಟಿನಾದ ರೋಗಗಳಿಂದ ಬಳಲುವ ಇತರ ವಯಸ್ಕರರು ಆಕಸ್ಮಿಕವಾಗಿ ಬೀಳುವ ಮತ್ತು ಇತರ ಗಾಯಗಳಿಗೆ ತುತ್ತಾಗುವ ಹೆಚ್ಚು ಅಪಾಯವನ್ನು ಹೊಂದಿರುತ್ತಾರೆ. ಜೊತೆಗೆ, ವಾಸ್ತವಿಕ ದೃಷ್ಟಿಯ ಸಮಸ್ಯೆಗಳನ್ನು ವರದಿ ಮಾಡುವ ವಯಸ್ಕರರಲ್ಲಿ, 90%ರಷ್ಟು ಜನರು, ಅಂತಹ ಸಮಸ್ಯೆಗಳನ್ನು ವರದಿ ಮಾಡದಿರುವ ವಯಸ್ಕರರಿಗೆ ಹೋಲಿಸಿದಂತೆ, ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ.

3. ರೆಟಿನಾದ ರೋಗಗಳಂತಹ ಕೆಲವು ಸಮಸ್ಯೆಗಳ ಚಿಕಿತ್ಸೆಗೆ ರೋಗಿಯ ಕಣ್ಣಿನೊಳಗೆ ಔಷಧಗಳನ್ನು ನೀಡುವ ಅವಶ್ಯಕತೆ ಇದ್ದು, ಇದನ್ನು ತಜ್ಞ ವೈದ್ಯರು ಮಾತ್ರ ಮಾಡಬಹುದು. ನಿಯತವಾದ ಚಿಕಿತ್ಸೆಯ ಡೋಸ್ ಗಳನ್ನು ತಪ್ಪಿಸಿಕೊಳ್ಳುವುದರಿಂದ, ದೃಷ್ಟಿದೋಷವು ಹೆಚ್ಚಾಗುವ ಅಪಾಯವಿರುತ್ತದೆ.

4. ದೃಷ್ಟಿದೋಷದಿಂದ ಬಳಲುವ ಜನರು ಅದಕ್ಕೆ ಪರ್ಯಾಯವಾಗಿ ಸ್ಪರ್ಶವನ್ನು ಬಳಸುತ್ತಾರೆ – ದೈಹಿಕವಾಗಿ ವಾಲುವುದು ಅಥವಾ ಬೀಳದಿರಲು ಏನಾದರೂ ಆಸರೆಯನ್ನು ಪಡೆಯುವುದು, ವಸ್ತುಗಳನ್ನು ತಿಳಿಯಲು ಅದನ್ನು ಮುಟ್ಟಿನೋಡುವುದು, ಇತ್ಯಾದಿ. ಇದರಿಂದ ಅವರು ಹೆಚ್ಚು ವರಸ್ ಗಳಿಗೆ ಒಡ್ಡಿಕೊಳ್ಳುತ್ತಾರೆ.

5. ಸೋಂಕಿನ ಭಯದಿಂದಾಗಿ ಅವರು ವೈದ್ಯರ ಭೇಟಿಯನ್ನು ಮುಂದೂಡುತ್ತಾರೆ ಅಥವಾ ತಪ್ಪಿಸುತ್ತಾರೆ. ಇದರಿಂದ ಅವರ ದೃಷ್ಟಿದೋಷ ಹೆಚ್ಚಾಗುವ ಅಪಾಯವಿರುತ್ತದೆ. ಚಿಕಿತ್ಸೆಯನ್ನು ಮೂರು ತಿಂಗಳಿಗಿಂತ ಹೆಚ್ಚಾಗಿ ವಿಳಂಬ ಮಾಡಿದಲ್ಲಿ, ದೃಷ್ಟದೋಷದ ತೀವ್ರತೆಯ ಅಪಾಯವು 90%ರಷ್ಟು ಹೆಚ್ಚುತ್ತದೆ.

Delaying-eye-problems-may-lead-to-major-problemsಈ ಗೌಪ್ಯಸಭೆಯಲ್ಲಿ ಇವರುಗಳು ಉಪಸ್ಥಿತರಿದ್ದರು:

1. ಶ್ರೀ ನೀಲಾಂಬುಜ ಶರಣ್, ಆರ್ಥಿಕ ಸಲಹೆಗಾರರು, MoH&FW  ಮತ್ತು ಜಂಟಿ ಕಾರ್ಯದರ್ಶಿ, ದೃಷ್ಟಿಹೀನತೆಯ ಮತ್ತು ದೃಷ್ಟಿದೋಷಗಳ ನಿಯಂತ್ರಣಕ್ಕೆ ರಾಷ್ಟ್ರೀಯ ಕಾರ್ಯಕ್ರಮ(NPCB&VI),  ಭಾರತ ಸರ್ಕಾರ.
2. ಡಾ|| ಸಂಗೀತಾ ರೆಡ್ಡಿ, ಅಧ್ಯಕ್ಷರು FICCI  ಮತ್ತು ವ್ಯವಸ್ಥಾಪಕ ನಿರ್ದೇಶಕರು,  ಅಪೊಲೊಆಸ್ಪತ್ರೆಗಳು
3. ಡಾ|| ತಾರಾಪ್ರಸಾದ್ ದಾಸ್, ಪ್ರಾದೇಶಿಕ ಸಭಾಪತಿ ಆಗ್ನೇಯ ಏಷಿಯಾ, ದೃಷ್ಟಿಹೀನತೆಯ ನಿವಾರಣೆಗೆ ಅಂತರಾಷ್ಟ್ರೀಯ ಏಜೆನ್ಸಿ (IAPB).
4. ಡಾ|| ಫಣೀಂದ್ರ ಬಾಬು ನುಕೆಲ್ಲಾ, ಸಿ ಇ ಒ ವಿಶನ್ 2020 ಮತ್ತು ದೇಶೀಯ ಸಭಾಪತಿ,IAPB.
5. ಡಾ|| ರಾಜಾ ನಾರಾಯಣನ್, ಸನ್ಮಾನ್ಯ ಪ್ರಧಾನ ಕಾರ್ಯದರ್ಶಿ, ಭಾರತೀಯ ವಿಟ್ರಿಯೊ ರೆಟಿನಾ ಸಂಘ,(VRSI).
6. ಸಂಜಯ್ ಮುರ್ಡೇಶ್ವರ, ವ್ಯವಸ್ಥಾಪಕ ನಿರ್ದೇಶಕರು, ನೊವಾರ್ಟಿಸ್ ಇಂಡಿಯಾ

Also Read: ನೇತ್ರ ರಕ್ಷಣೆಗೆ ನಾವೇಕೆ ಕಾಳಜಿ ವಹಿಸುತ್ತಿಲ್ಲ ?

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!