ನಾರಾಯಣ ನೇತ್ರಾಲಯ – ಜೀನ್ ಥೆರಪಿ  ಪ್ರಯೋಗಕ್ಕೆ ಬೆಂಬಲ

ನಾರಾಯಣ ನೇತ್ರಾಲಯವು ಭಾರತದಲ್ಲಿ  ಜೀನ್ ಥೆರಪಿ  ಪ್ರಯೋಗಗಳನ್ನು ಬೆಂಬಲಿಸುತ್ತದೆ. ಜೀನ್ ಚಿಕಿತ್ಸೆಯು ಜೀವಕೋಶಗಳ ಅನುವಂಶಿಕ ರಚನೆಯನ್ನು ನೇರವಾಗಿ ಮಾರ್ಪಡಿಸುವ ಸಾಮರ್ಥ್ಯವನ್ನು ನೀಡುತ್ತದೆ, ರೋಗಿಗಳಿಗೆ ದೀರ್ಘಕಾಲೀನ ಸುಧಾರಣೆಯನ್ನು ಒದಗಿಸುತ್ತದೆ.

ಬೆಂಗಳೂರು: ಆರೋಗ್ಯ ಪರಿಹಾರಗಳನ್ನು ಸುಧಾರಿಸಲು ಮೀಸಲಾಗಿರುವ ಭಾರತದ ಪ್ರಮುಖ ಕಣ್ಣಿನ ಆಸ್ಪತ್ರೆಯಾದ ನಾರಾಯಣ ನೇತ್ರಾಲಯವು ತನ್ನ ಸ್ಥಳೀಯ ಜೀನ್ ಥೆರಪಿ ಪ್ರಯೋಗಗಳ ಕಾರ್ಯಕ್ರಮದ ಶುಭಾರಂಭದೊಂದಿಗೆ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.

ನಾರಾಯಣ ನೇತ್ರಾಲಯ - ಜೀನ್ ಥೆರಪಿ  ಪ್ರಯೋಗಕ್ಕೆ ಬೆಂಬಲ

ಜೀನ್‌ಗಳಲ್ಲಿನ ರೂಪಾಂತರಗಳು ಅಥವಾ ಬದಲಾದ ಜೀನ್ ಸ್ವರೂಪವು, ಮಕ್ಕಳು ಮತ್ತು ವಯಸ್ಸಾದ ರೋಗಿಗಳಲ್ಲಿ ಅನುವಂಶಿಕ ಕಾಯಿಲೆಗಳನ್ನು ಉಂಟುಮಾಡುತ್ತವೆ ಎಂದು ತಿಳಿದುಬಂದಿದೆ, ಇದಕ್ಕೆ ಯಾವುದೇ ಚಿಕಿತ್ಸೆಗಳಿಲ್ಲ. ರೆಟಿನೈಟಿಸ್ ಪಿಗ್ಮೆಂಟೋಸಾ, ಸ್ಟಾರ್ಗಾರ್ಟ್ ಕಾಯಿಲೆ ಮತ್ತು ಎಲ್‌ಸಿಎಯಂತಹ ಈ ಕೆಲವು ರೋಗಗಳು ಮಕ್ಕಳಲ್ಲಿ ಬದಲಾಯಿಸಲಾಗದ ಕುರುಡುತನವನ್ನು ಉಂಟುಮಾಡುತ್ತವೆ. ಕರಾಟೋಕೂಸ್ ನಂತಹ ಇತರ ರೋಗವು ಹದಿರಯದವರು ಮತ್ತು ಯುವ ವಯಸ್ಕರಲ್ಲಿ ಕಡಿಮೆ ದೃಷ್ಟಿ ಅಥವಾ ಕುರುಡುತನಕ್ಕೆ ಕಾರಣವಾಗುತ್ತದೆ, ಆದರೆ ಎಎಂಡಿ (ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಷನ್) ವಯಸ್ಸಾದವರಲ್ಲಿ ಕುರುಡುತನವನ್ನು ಉಂಟುಮಾಡುತ್ತದೆ. ಇದು ಅವರ ಜೀವಿಸುವ ಉತ್ತಮ ಮತ್ತು ಉತ್ಸಾಹಭರಿತ ವರ್ಷಗಳ ಮೇಲೆ ಪರಿಣಾಮ ಬೀರುತ್ತದೆ. ಜೀನ್ ಚಿಕಿತ್ಸೆಯು ಜೀವಕೋಶಗಳ ಅನುವಂಶಿಕ ರಚನೆಯನ್ನು ನೇರವಾಗಿ ಮಾರ್ಪಡಿಸುವ ಸಾಮರ್ಥ್ಯವನ್ನು ನೀಡುತ್ತದೆ, ರೋಗಿಗಳಿಗೆ ದೀರ್ಘಕಾಲೀನ ಸುಧಾರಣೆಯನ್ನು ಒದಗಿಸುತ್ತದೆ.

ನಮ್ಮ ಸಂಸ್ಥಾಪಕ ಪಿತಾಮಹ, ಡಾ. ಕೆ. ಭುಜಂಗ ಶೆಟ್ಟಿಯವರ ನಂಬಿಕೆಯ ಪ್ರಕಾರ ಆರೋಗ್ಯ ಪರಿಹಾರಗಳು ಪರಿಣಾಮಕಾರಿಯಾಗಲು ರೋಗಿಗಳ ಕೈಗೆಟುವಂತಿರಬೇಕು. ಮತ್ತು ಈ ಮಾತುಗಳು ಜೀನ್ ಥೆರಪಿ ಕಾರ್ಯಕ್ರಮದ ಧ್ಯೇಯದೊಂದಿಗೆ ಆಳವಾಗಿ ಪ್ರತಿನಿಧಿಸುತ್ತದೆ. ಇಂದು, ನಾವು ಈ ದೂರದೃಷ್ಟಿಯನ್ನು ನಿಜರೂಪವಾಗಿ ಪರಿವರ್ತಿಸುವ ಹಂತದಲ್ಲಿದ್ದೇವೆ ಮತ್ತು ಕಣ್ಣಿನ ಹಾಗೂ ಇತರ ಅನೇಕ ಅನುವಂಶಿಕ ಕಾಯಿಲೆಗಳಿಂದ ಬಳಲುತ್ತಿರುವ ಅಸಂಖ್ಯಾತ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದೆಂದು ನಾವು ಭರವಸೆಯಿಂದಿದ್ದೇವೆ.

ಬೆಂಗಳೂರಿನ ರಾಜಾಜಿನಗರದ ನಾರಾಯಣ ನೇತ್ರಾಲಯದಲ್ಲಿ ಕಣ್ಣಿನ ಅನುವಂಶಿಕ ಕಾಯಿಲೆಗಳಿಗೆ ಭಾರತದ ಮೊಟ್ಟ ಮೊದಲ ಮತ್ತು ಸಂಪೂರ್ಣ ನಿಯಂತ್ರಿತ ಜೀನ್ ಥೆರಪಿ ಪ್ರಯೋಗವನ್ನು ಘೋಷಿಸಲು ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ನಾರಾಯಣ ನೇತ್ರಾಲಯದ ಫೌಂಡೇಶನ್- ಗ್ರೋ (ಜೀನ್ಸ್, ರಿಪೇರ್, ಮತ್ತು ರಿಜನರೇಶನ್ ಇನ್ ಆಪ್ತಾಲ್ಮಿಕ್ ವರ್ಕ್ಸ್ಟೇಷನ್) ಲ್ಯಾಬ್‌ನ ಖ್ಯಾತ ವಿಜ್ಞಾನಿಗಳು ಮತ್ತು ವೈದ್ಯರು ಪ್ರಯೋಗವನ್ನು ನಡೆಸುತ್ತಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾರಾಯಣ ನೇತ್ರಾಲಯದ ಗೌರವಾನ್ವಿತ ತಜ್ಞರು:
`1. ಪ್ರೋ. ಡಾ. ರೋಹಿತ್ ಶೆಟ್ಟಿ, ಕ್ಲಿನಿಕಲ್ ಹಾಗೂ ಟ್ರಾನ್ಸ್ಲೇಶನ್ ವಿಜ್ಞಾನಿ
2. ಡಾ. ನರೇನ್ ಶೆಟ್ಟಿ ಉಪಾಧ್ಯಕ್ಷರು
3. ಗ್ರೂಪ್ ಕ್ಯಾಪ್ಟನ್ ಎಸ್.ಕೆ. ಮಿತ್ತಲ್ ವಿಎಸ್ಎಂ, ಸಿ.ಇ.ಓ.
4. ಡಾ. ಅರ್ಕಶುಭ್ರ ಘೋಶ್, ನಿರ್ದೇಶಕ ಮತ್ತು ಹಿರಿಯ ಪ್ರಧಾನ ತನಿಖಾಧಿಕಾರಿ, ಗ್ರೋ ಲ್ಯಾಬೋರೇಟರಿಸ್
5. ಡಾ. (ಮೇಜರ್) ನರೇಂದ್ರ ಪಿ., ಸಿಇಓ ಹಾಗೂ ಆಡಳಿತಾಧಿಕಾರಿ (ಎನ್ಎನ್ 2)

ಡಾ. ರೋಹಿತ್ ಶೆಟ್ಟಿ ಅವರು, “ನಾವು ಜೀನ್ ಥೆರಪಿಯ ಮೊಟ್ಟಮೊದಲ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ನಾವೀನ್ಯತೆಗೆ ಮತ್ತು ಉತ್ಕೃಷ್ಟತೆಗೆ ನಾರಾಯಣ ನೇತ್ರಾಲಯ ದೃಢವಾದ ಬದ್ಧತೆಯು ನಮ್ಮನ್ನು ಪ್ರತ್ಯೇಕಿಸುತ್ತದೆ. ನಮ್ಮ ಅಸಾಧಾರಣ ಸಂಶೋಧಂಧನೆಯು ವೈಯಕ್ತೀಕರಿಸಿದ, ಕೈಗೆಟಕುವ ಮತ್ತು ಅತ್ಯಾಧುನಿಕ ಆರೋಗ್ಯ ಪರಿಹಾರಗಳನ್ನು ಒದಗಿಸಲು ನಮ್ಮನು ಪ್ರೇರೇಪಿಸುತ್ತದೆ. ಅಸಂಖ್ಯಾತ ರೋಗಿಗಳ ಜೀವನವನ್ನು ಪರಿವರ್ತಿಸುತ್ತಿದೆ. ಭಾರತದ ಮೊದಲ ಸಂಪೂರ್ಣ ಸ್ಥಳೀಯ ಜೀನ್ ಥೆರಪಿ ಪ್ರಯೋಗ ಕಾರ್ಯಕ್ರಮವನ್ನು ಪರಿಚಯಿಸಲು ಹೆಮ್ಮೆಪಡುತ್ತೇವೆ ಮತ್ತು ಈ ಸಂಕಲ್ಪವು ವೈಜ್ಞಾನಿಕ ಗಡಿಗಳನ್ನು ದಾಟಿ, ಅಗತ್ಯವಿರುವವರಿಗೆ ಉಜ್ವಲ ಭವಿಷ್ಯವನ್ನು ಸೃಷ್ಟಿಸುವ ನಮ್ಮ ಸಮರ್ಪಣೆಗೆ ಸಾಕ್ಷಿಯಾಗಿದೆ.ʼʼ

ಪಾಶ್ಚಿಮಾತ್ಯ ದೇಶಗಳಲ್ಲಿ ಜೀನ್ ಥೆರಪಿ ಔಷಧಿಗಳ ಬೆಲೆಯು 7 ಕೋಟಿಯಿಂದ 30 ಕೋಟಿ ರೂಪಾಯಿಗಳವರೆಗೆ ಖರ್ಚಾಗುವುದರಿಂದ ಭಾರತೀಯ ರೋಗಿಗಳಿಗೆ ಇದು ಕೈಗೆಟಕುವುದರಿಂದ ವಂಚಿತರಾಗಿದ್ದಾರೆ. ನಮ್ಮ ಈ ಪ್ರಯೋಗಾಲಯವು ಚಿಕಿತ್ಸೆಗಳ ಹಿಂದಿರುವ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲು ಮತ್ತು ವಿವಿಧ ನೇತ್ರ ಮತ್ತು ಇತರ ಅನುವಂಶಿಕ ಕಾಯಿಲೆಗಳಿಗೆ ಭಾರತದಲ್ಲಿ ಔಷಧಿಗಳನ್ನು ಉತ್ಪಾದಿಸಲು ಸಮರ್ಪಿಸಲಾಗಿದೆ.

ಡಾ. ನರೇನ್ ಶೆಟ್ಟಿ ಅವರು  ʻʻನಾವು ಮಾಡುವ ಪ್ರತಿಯೊಂದಕ್ಕೂ ನಮ್ಮ ರೋಗಿಗಳು ಕೇಂದ್ರವಾಗಿದ್ದಾರೆ ಎಂಬ ನಮ್ಮ ಸಂಸ್ಥಾಪಕರ ನಂಬಿಕೆಯನ್ನು ನಾವು ಮುಂದುವರಿಸುತ್ತಿದ್ದೇವೆ ಮತ್ತು ಪ್ರತಿಯೊಬ್ಬ ರೋಗಿಗೆ ಅವರ ಹಿನ್ನೆಲೆಯ್ನನು ಲೆಕ್ಕಿಸದೆ ಕೈಗೆಟಕುವ ಚಿಕಿತ್ಸೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಜೀನ್ ಚಿಕಿತ್ಸೆಯಲ್ಲಿನ ನಮ್ಮ ಸಾಧನಗಳು ಈ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ. ಚಿಕಿತ್ಸೆಗಳನ್ನು ಸುಧಾರಿಸುವ ಮತ್ತು ಕುರುಡುತನಕ್ಕೆ ಕಾರಣವಾಗುವ ಅನುವಂಶಿಕ ಕಾಯಿಲೆಗಳ ಪ್ರಭಾವವನ್ನು ಕಡಿಮೆ ಮಾಡುವ ನವೀನ ಪರಿಹಾರಗಳನ್ನು ಕಂಡುಹಿಡಿಯುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.

Narayana Netralaya Supports Indigenous Gene Therapy Trials (3)

ಪತ್ರಿಕಾಗೋಷ್ಠಿಯಲ್ಲಿ, ಈ ಕೆಳಗಿನ ಪ್ರಮುಖ ಅಂಶಗಳನ್ನು ಚರ್ಚೆ ಮಾಡಲಾಯಿತು:
1. ಕಣ್ಣಿನ ಕಾಯಿಲೆಗಳಿಗೆ ಸ್ಥಳೀಯ ಎಎವಿ ವೆಕ್ಟರ್ಗಳನ್ನು ಬಳಸಿಕೊಂಡು ಗ್ರೋ ಲ್ಯಾಬ್ ಭಾರತದ ಮೊದಲ ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸುತ್ತಿದೆ.
2. ಅತ್ಯಾಧುನಿಕ ಜೀನ್ ಚಿಕಿತ್ಸೆಯು “ಮೇಡ್ ಇನ್ ಇಂಡಿಯಾ” ಮಾತ್ರವಲ್ಲದೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ ಚಿಕಿತ್ಸೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ.
3. ಗ್ರೋ ಲ್ಯಾಬ್ ವೆಕ್ಟರ್‌ಗಳ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ, ಅವುಗಳಲ್ಲಿ ಹಲವು ಪೂರ್ವ-ವೈದ್ಯಕೀಯ ಮಾದರಿಗಳಲ್ಲಿ ಮತ್ತು ಕೆಲವು ಪ್ರಾಣಿಗಳ ಮೇಲೆ ನೆಡೆಸಿದ ಪರೀಕ್ಷೆಗಳಲ್ಲಿ ಈಗಾಗಲೇ ಮೌಲೀಕೃತವಾಗಿವೆ.
4. ಲ್ಯಾಬ್ ನಿರಂತರವಾಗಿ “ಪ್ಲಗ್ ಮತ್ತು ಪ್ಲೇ” ವೆಕ್ಟರ್ ವಿತರಣಾ ವ್ಯವಸ್ಥೆಗಳನ್ನು ವಿಸ್ತರಿಸುತ್ತದೆ, ಏಕಕಾಲದಲ್ಲಿ ಅನೇಕ ಜೀನ್ ಥೆರಪಿ ವಿಧಾನಗಳನ್ನು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ.
5. ಪ್ರೀ-ಕ್ಲಿನಿಕಲ್ ಪ್ರಾಣಿಗಳ ಪರೀಕ್ಷೆಯು ಸ್ಟಾರ್ಗಾರ್ಟ್ ಕಾಯಿಲೆ, ಕರಾಟೋಕೊನಸ್, ಎಎಮ್‌ಡಿ ಮತ್ತು ಸ್ನಾಯು ಕಾಯಿಲೆಗಳಾದ ಡುಚೆನ್ ಮಸ್ಕೂಲರ್ ಡಿಸ್ಟ್ರೋಫಿ ಮತ್ತು ಜಿಎನ್‌ಇ ಮಯೋಪತಿಯಂತಹ ಕಣ್ಣಿನ ಕಾಯಿಲೆಗಳಿಗೆ ಯಶಸ್ಸನ್ನು ತೋರಿಸಿದೆ.
6. ಗ್ರೋ ಲ್ಯಾಬ್‌ನ ಕ್ಲಾಸ್ 100 ಕ್ಲೀನ್ ರೂಮ್ ಕಾರ್ಯನಿರ್ವಹಿಸುತ್ತಿದೆ ಮತ್ತು ಕಾರ್ನಿಯಾ ಕುರುಡುತನ (ಕರಾಟುಕೊನಸ್), ಅಕ್ಷಿಪಟಲ, ಕುರುಡುತನ (ಸ್ಟಾಗಾರ್ಟ್ ಕಾಯಿಲೆ) ಮತ್ತು ಕೆಲವು ಇತರೆ ಪರಿಸ್ಥಿತಿಗಳಿಗೆ ಮಾನವ ಪ್ರಯೋಗಳಿಗೆ ನಿಯಂತ್ರಿಸುವ ಅಪ್ಲಿಕೇಷನ್ಗಳು ಪ್ರಗತಿಯಲ್ಲಿವೆ.

“ಜೀನ್ ಥೆರಪಿ ಮೂಲಕ, ಒಮ್ಮೆ ಗುಣಪಡಿಸಲಾಗದ ರೋಗಗಳು ಚಿಕಿತ್ಸೆ ನೀಡಬಹುದಾದ ಮತ್ತು ಕುರುಡುತನವನ್ನು ತಡೆಗಟ್ಟುವ ಭವಿಷ್ಯವನ್ನು ನಾವು ರೂಪಿಸುತ್ತೇವೆ. ನಮ್ಮ ಗ್ರೋ ಲ್ಯಾಬ್‌ನಲ್ಲಿ ಎಲ್ಲರಿಗೂ ದಕ್ಕಬಹುದಾದ ಪರಿವರ್ತಕ ʻಮೇಡ್ ಇನ್ ಇಂಡಿಯಾʼ ಚಿಕಿತ್ಸೆಗಳನ್ನು ನಾವು ನಡೆಸಲು ಮುಂಚೂಣಿಯಲ್ಲಿ ತಯಾರಿದ್ದೇವೆ. ನೇತ್ರ, ರಕ್ತ ಮತ್ತು ಸ್ನಾಯುವಿನ ಕಾಯಿಲೆಗಳ ಮೇಲೆ ಕೇಂದ್ರೀಕರಿಸುವುದು, ನಮ್ಮ ಅತ್ಯುನ್ನತ ಸಂಶೋಧನೆಯ ಅನುವಂಶಿಕ ಅಸ್ವಸ್ಥತೆಗಳೊಂದಿಗೆ ಅನೇಕರಿಗೆ ಭರವಸೆಗಳನ್ನು ತರುತ್ತದೆ,ʼʼಎಂದು ಈ ಸಂದರ್ಭದಲ್ಲಿ ಡಾ. ಅರ್ಕಸುಭ್ರ ಘೋಷ್, ನಿರ್ದೇಶಕರು ಮತ್ತು ಹಿರಿಯ ಪ್ರಧಾನ ತನಿಖಾಧಿಕಾರಿಗಳು, ಗ್ರೋ ಪ್ರಯೋಗಾಲಯಗಳು ತಿಳಿಸಿದರು.

“ವಂಶವಾಹಿ ಚಿಕಿತ್ಸೆಯನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯು ಸಂಕೀರ್ಣವಾಗಿದೆ ಮತ್ತು ಗಮನಾರ್ಹ ಸಂಪನ್ಮೂಲಗಳು, ತಂತ್ರಜ್ಞಾನ ಮತ್ತು ಪರಿಣತಿಯ ಅಗತ್ಯವಿರುತ್ತದೆ. ನಾರಾಯಣ ನೇತ್ರಾಲಯದ ಆಂತರಿಕ ಧನಸಹಾಯವು ವಿವಿದs ಕಾಯಿಲೆಗಳಿಗೆ ಜೀನ್ ಥೆರಪಿ ಅಭಿವೃದ್ಧಿಯನ್ನು ವಿಶಾಲ ಹೃದಯದಿಂದ ಬೆಂಬಲಿಸಿದೆ. ನಾರಾಯಣ ನೇತ್ರಾಲಯದಲ್ಲಿ, ನಾವು ಅನುವಂಶಿಕ ಅಸ್ವಸ್ಥತೆಗಳ ವಿರುದ್ಧ ದೃಢವಾದ ಹೋರಾಟವನ್ನು ಪ್ರಾರಂಬಿಸಿದ್ದೇವೆ ಮತ್ತು ಈ ಯುದ್ಧದಲ್ಲಿ ಜಯಶಾಲಿಯಾಗಲು ನಾವು ಬದ್ಧರಾಗಿದ್ದೇವೆ ಎಂದು ಈ ಸಂದರ್ಭದಲ್ಲಿ ಗ್ರೂಪ್ ಕ್ಯಾಪ್ಟನ್ ಎಸ್. ಕೆ. ಮಿತ್ತಲ್ ವಿ ಎಸ್ ಎಂ, ಸಿಇಒ, ನಾರಾಯಣನೇತ್ರಾಲಯ ತಿಳಿಸಿದರು.

ನಮ್ಮ ಗ್ರೋ ಲ್ಯಾಬ್ನಲ್ಲಿ ಜೀನ್ ಚಿಕಿತ್ಸೆಯಲ್ಲಿನ ನಮ್ಮ ಪ್ರವರ್ತಕ ಕೆಲಸವು ಪೂರ್ವ-ವೈದ್ಯಕೀಯ ಪ್ರಯೋಗಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿದೆ. ನಮ್ಮ ಪಟ್ಟುಬಿಡದ ಸಮರ್ಪಣೆ ಮತ್ತು ತಾಂತ್ರಿಕ ಪ್ರಗತಿಗಳ ಮೂಲಕ, ನಾವು ಈ ಕನಸನ್ನು ಭಾರತದಲ್ಲಿ ಅನುವಂಶಿಕ ಕಾಯಿಲೆಗಳಿಗೆ ಪ್ರಾಯೋಗಿಕ ಚಿಕಿತ್ಸಾ ಆಯ್ಕೆಯಾಗಿ ಪರಿವರ್ತಿಸಿದ್ದೇವೆʼʼ- ಎಂದು ಡಾ. (ಮೇಜರ್) ನರೇಂದ್ರ ಪಿ, ಸಿಇಒ ಮತ್ತು ನಿರ್ವಾಹಕರು (ಎನ್ಎನ್2) ಹೇಳಿದರು.

ವೈಯಕ್ತಿಕವಾಗಿ ಈ ಜೀನ್ ಥೆರಪಿ ಚಿಕಿತ್ಸೆಯಲ್ಲಿ ಭಾಗವಹಿಸಲು ಇಚ್ಛಿಸುವವರು, ಈ ಸಂಖ್ಯೆಯನ್ನು ಸಂಪರ್ಕಿಸಿ: 080- 6666-0715 ಅಥವಾ ಇಮೇಲ್ ಮಾಡಿ: genetictest@narayananethralaya.com.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!