ಯುರೋಪ್ ಹಾಗೂ ಚೈನಾದಷ್ಟು ಸಾವುಗಳಾಗುವದಿಲ್ಲ. ಭಾರತೀಯರು ಭಯಪಡಬೇಕಾಗಿಲ್ಲ. ಭಯವೆ ಬಹುದೊಡ್ಡ ರೋಗ.ತುಂಬ ದುರ್ಬಲರು, ಪ್ರತಿರೋಧ ಶಕ್ತಿ ಕಡಿಮೆ ಇರುವವರು ಈ ರೋಗಕ್ಕೆ ತುತ್ತಾಗಬಹದು.
ಕೋರೋನಾ ವೈರಸ್‌ಗೆ ಹಲವಾರು ಪ್ರಭೇದಗಳು. ಕೋರೋನಾವಿರಿಡೆ ಎಂಬ ಕುಟುಂಬಕ್ಕೆ ಹಲವಾರು ಸದಸ್ಯರು. ಅದರಲ್ಲಿ ಅತ್ಯಂತ ಪ್ರಸಿದ್ದವಾದುದು MERS CoV2 ಎಂಬುದು. ಅದೆ ಈಗ COVID19 ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮರುನಾಮಕರಣಗೊಂಡಿದೆ. ಮೊದ ಮೊದಲು ಕೆಲವರು ಇದನ್ನು ಉಹಾನ್ ವೈರಸ್ ಎಂದೆ ಸಂಬೋಧಿಸಲಾರಂಭಿಸಿದ್ದರು. ಜೈವಿಕ ಅಸ್ತ್ರವೆಂಬ ಮಾತುಗಳು ಕೇಳಿಬರಲಾರಂಭಿಸಿ ಅಮರಿಕ ಚೀನಾಗಳ ಮಧ್ಯೆ ಪರಸ್ಪರ ಕೆಸರೆರಚಾಟ ಆರಂಭವಾಗಿದೆ.
ವೈರಸ್ ಸಾಮನ್ಯ ಗುಣಲಕ್ಷಣಗಳು :
ಬ್ಯಾಕ್ಟೀರಿಯಾದಂತೆ ಏಕಕೋಶ ಜೀವಿಯಾಗಿರಬಹುದು, ಅಥವಾ ಏಕಕೋಶ ಜೀವಿಯ ಗುಣಲಕ್ಷಣಗಳನ್ನು ಹೊಂದದೆ ಅಪೂರ್ಣ ಜೀವಿ ಎನಿಸಬಹುದು. ಕೆಲಸಾರಿ ಜೀವ ನಿರ್ಜೀವದ ಮಧ್ಯದ ಕೊಂಡಿ ಎನಿಸಬಹುದು. ನಿರ್ಜೀವ ವಸ್ತುಗಳಂತೆ ವರ್ಷಾನುಗಟ್ಟಲೆ ಸುಪ್ತವಾಗಿದ್ದು ಸೂಕ್ತ ಪರಿಸರ ಸಿಕ್ಕಾಗ ಕ್ರೀಯಾಶೀಲವಾಗಿ ಕಾಯಿಲೆಗೆ ಕಾರಣವಾಗಬಹದು ಉದಾ : ಟೆಟನಸ್ ವೈರಸ್ (ಧನುರ್ವಾತ ಉಂಟುಮಾಡುವ ವೈರಸ್). ಒಂದು ಸೂಕ್ಷ್ಮ ಜೀವಿ ಪರಕಾಯ ಪ್ರವೇಶಿಸಿದಾಗ ಪರಾಕಾಯದ ರೋಗನಿರೋಧಕ ವ್ಯವಸ್ಥೆ ಪ್ರತಿರೋಧ ಒಡ್ಡುತ್ತದೆ, ಪ್ರತಿರೋಧದ ಫಲವಾಗಿ ರೋಗಾಣು ಪ್ರತಿಕಣಗಳು ಅಥವಾ ಪ್ರತಿ ದೇಹಗಳನ್ನು ತಯಾರಿಸುತ್ತದೆ. ರೋಗಾಣುವಿನ ಮೇಲ್ಮೈ ಸ್ವರೂಪ ಅಥವಾ ಬಾಹ್ಯ ಕವಚಕ್ಕನುಗುಣವಾಗಿ ಪ್ರತಿ ದೇಹಗಳು (Antibody) ತಯಾರಾಗಿ ಎಲ್ಲ ರೋಗಾಣುಗಳನ್ನು ನುಂಗಿಹಾಕುತ್ತವೆ. ಅಂದರೆ ಒಂದು ದೇಶದ ಸೈನಿಕರು ವೈರಿ ರಾಷ್ಟ್ರದ ನುಸುಳಕೋರರ ಸಮವಸ್ತ್ರ ಗುರುತಿಸಿ ಸೆದೆಬಡಿದಂತೆ.
ಹೀಗೆ ಒಳಗಡೆ ರೋಗಾಣು ಪ್ರತಿಕಣಯುಧ್ದ ನಡೆದಾಗ ಕೆಲ ರೋಗಾಣುಗಳು ತಮ್ಮ ಬಾಹ್ಯ ಕವಚದ (Antigenic structure) ರಚನೆಯನ್ನು ತಕ್ಷಣ ಬದಲಿಸಿದಾಗ ಆಂತರಿಕ ರೋಗನಿರೋಧಕ (immune system) ವ್ಯವಸ್ಥೆ ಗೊಂದಲಕ್ಕೀಡಾಗಿ ರೋಗಾಣು ಮೇಲ್ಗೈ ಹೊಂದುತ್ತದೆ. ಆಗ ಜ್ವರ ಅಥವಾ ಇತರ ರೋಗ ಲಕ್ಷಣಗಳು ಕಾಣುತ್ತವೆ, ಕೆಲದಿನಗಳಲ್ಲಿ ಆಂತರಿಕ ವ್ಯವಸ್ಥೆ ಹೊಸ ಬಾಹ್ಯ ಕವಚಕ್ಕೆ ಪ್ರತಿಕಣ ಸೃಷ್ಟಿಸಿ ಸೊಂಕು ಮಟ್ಟಹಾಕುವ ಪ್ರಯತ್ನಕ್ಕಿಳಿಯುತ್ತದೆ. ಹೀಗೆ ವೈರಸ್ ದೇಹದ ನಿರೋಧಕ ಶಕ್ತಿಯೊಂದಿಗೆ ಕಣ್ಣುಮುಚ್ಚಾಲೆಗೆ ಇಳಿಯುತ್ತದೆ. ಇಂತಹ ಸಂದರ್ಭದಲ್ಲಿ ಕೆಲ ಛದ್ಮವೇಶ ಧರಿಸಿ ಸುಸ್ತಾಗಿ ವೈರಸ್ ಸೋಲನ್ನೊಪ್ಪಿಕೊಂಡರೆ ಮನುಷ್ಯ ಬದುಕುತ್ತಾನೆ. ವೈರಸ್ ನಿರಂತರ ತನ್ನ ಬಾಹ್ಯ ಕವಚದ ರಚನೆ ಬದಲಿಸುತ್ತಾ ಹೋದರೆ ವ್ಯಕ್ತಿ ರೋಗಕ್ಕೆ ತುತ್ತಾದಂತೆ. ಉದಾ : ಏಡ್ಸ್‌ಕಾರಕ ಎಚ್ ಐವಿ ವೈರಾಣು.
ಸೋಂಕು-ಸೋಂಕುಕಾರಕ ವ್ಯಕ್ತಿ (Infective person) :
ಒಂದು ಜೀವಿ ಮಾನವ ದೇಹವನ್ನು ಪ್ರವೇಶಿಸಿ ರೋಗಲಕ್ಷಣಗಳನ್ನು ಉಂಟುಮಾಡುವುದನ್ನು ಸೋಂಕು (infection) ಎಂದು ಹೇಳಲಾಗುತ್ತಿದೆ. ಉದಾ: ಬ್ಯಾಕ್ಟೀರಿಯಾ, ವೈರಸ್, ಪರಾವಲಂಬಿ ಜೀವಿಗಳು ಇತ್ಯಾದಿ. ಸೋಂಕುಕಾರಕ ಜೀವಿ ದೇಹ ಪ್ರವೇಶಿಸಿದ ದಿನದಿಂದ ಹಿಡಿದು ರೋಗ ಲಕ್ಷಣಗಳು ಕಂಡುಬರುವ ಸಮಯ (ಸೊಂಕಿನ ಅವಧಿ -incubation period) ಕೆಲಗಂಟೆಗಳಿಂದು ಹಿಡಿದು ದಿನವಾರು ತಿಂಗಳುಗಳು, ವರ್ಷಗಳೇ ಇರಬಹುದು. ಉದಾ: ಭೇದಿಕಾರಕ ಜೀವಗಳು ಕೆಲವೆಗಂಟೆಗಳಲ್ಲಿ ಭೇದಿ ಉಂಟುಮಾಡುತ್ತವೆ. ಕೋರೋನಾದಂತಹ ಜೀವಿಗಳು ಒಂದು ವಾರದ ಅಜಮಾಸು ಸಮಯದಲ್ಲಿ ರೋಗಲಕ್ಷಣ ಉಂಟುಮಾಡುತ್ತವೆ. ಎಚ್ಐವಿ ಸೋಂಕಿನ ರೋಗ ಲಕ್ಷಣಗಳು ಆರು ತಿಂಗಳಿಂದ ಹಿಡಿದು ಒಂದು ವರ್ಷದವರೆಗೆ ರೋಗ ಲಕ್ಷಣ ತೋರಿಸಬಹದು.
ಒಬ್ಬ ವ್ಯಕ್ತಿಯ ದೇಹದಲ್ಲಿ ಕೆಲ ಸೋಂಕುಗಳು ಪ್ರವೇಶಿಸಿ, ಪ್ರಜನನ ಹೊಂದಿ ಸಂಖ್ಯೆ ವೃಧ್ದಿಸಿ ನಂತರ ಆತನ ದೇಹದಿಂದ ಕೆಮ್ಮು, ಸೀನು, ಮೂತ್ರ, ಮಲ, ರಕ್ತ ಇತ್ಯಾದಿ ಮೂಲಗಳಿಂದ ಹೊರಬಂದು ಬೇರೆಯವರಿಗೆ ಸೋಂಕು ಹರಡುತ್ತವೆ. ಪ್ರತಿ ರೋಗ ಅಥವಾ ಸೂಕ್ಷ್ಮಾಣುಜೀವಿಯ ಪ್ರಸರಣ ವಿಧಾನ ಬೇರೆ ಬೇರೆಯಾಗಿರುತ್ತದೆ.
ಪ್ರತಿ ಸೋಂಕು ದೇಹದ ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸಿ, ಪ್ರತಿಕಣಗಳ ಸೃಷ್ಟಿಗೆ ಅನುವುಮಾಡಿಕೊಡುತ್ತದೆ. ಇದು ತುಂಬ ಕ್ಲಿಷ್ಟ ಹಾಗೂ ಸಂಕೀರ್ಣ ಕ್ರಿಯೆ. ಪ್ರತಿ ಕಣಗಳು ಅಸ್ಥಿಮಜ್ಜೆ (Bone marrow), ಯಕೃತ್ತು (Liver ) ಹಾಗೂ ಗುಲ್ಮಗಳಲ್ಲಿ (Spleen) ಉತ್ಪತ್ತಿಯಾಗುತ್ತವೆ ಹಾಗೂ ಪ್ರತಿ ಬ್ಯಾಕ್ಟಿರಿಯಾ, ವೈರಸ್‌ಗಳಿಗೆ ತಕ್ಕ ಪ್ರತಿಕಣಗಳು ವಿಶೇಷವಾಗಿ ತಯಾರಾಗುತ್ತವೆ. ಸುಮಾರು ಬ್ಯಾಕ್ಟೀರಿಯಾ ವೈರಸ್ಗಳನ್ನು ದೇಹದ ಆಂತರಿಕ ವ್ಯವಸ್ಥೆಯೆ ( ಪ್ರತಿಕಣಗಳು) ಸಾಯಿಸುತ್ತದೆ. ಇದು ನಿರಂತರ ನಡೆಯವ ಪ್ರಕ್ರಿಯೆ. ಇದರಿಂದ ಮನುಷ್ಯ ನಿಧಾನವಾಗಿ ಒಂಧೊಂದು ಸೂಕ್ಷಾಣು ಜೀವಿಗೆ ಪ್ರತಿರೋಧ ಶಕ್ತಿ ಬೆಳೆಸಿಕೊಳ್ಳುತ್ತಾನೆ. ಹಾಗಾಗಿ ಪರಿಸರದಲ್ಲಿ ಸೋಂಕುಕಾರಕ ರೋಗಾಣುಗಳು ನಿಧಾನವಾಗಿ ದೇಹದ ಮೇಲೆ ದಾಳಿ ನಡೆಸಿ ಕೆಲವು ಸೋಲುತ್ತವೆ, ಕೆಲವು ಸಫಲವಾಗುತ್ತವೆ.
ಸಫಲವಾದಲ್ಲಿ ಸೋಂಕನ್ನು (ರೋಗವನ್ನು) ಆರೈಕೆ, ಅಂಟಿಬಯಾಟಿಕ್ಸ, ಅಂಟಿವೈರಲ್ ಮದ್ದುಗಳಿಂದ ಮಟ್ಟಹಾಕಲಾಗುತ್ತದೆ. ಕೆಲಸಾರಿನ ಸೋಂಕಿತನ ಅವಸಾನವಾಗಬಹುದು. ಹೀಗೆಯೆ ನಿಧಾನವಾಗಿ ಒಂದು ಸಮುದಾಯ, ಒಂದು ಊರು, ಹಾಗೆಯೆ ಒಂದು ದೇಶದ ಜನರಲ್ಲಿ ಆಂತರಿಕ ಪ್ರತಿರೋಧ ವ್ಯವಸ್ಥೆ ಬೇಳೆಯುತ್ತ ಹೋಗಿ ಇಡಿ ಸಮುದಾಯ ಹಲವಾರು ರೋಗಗಳಿಗೆ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತದೆ. ಇದರ ಮೇಲೆ ಪರಿಣಾಮ ಬೀರುವ ಮುಖ್ಯ ಅಂಶಗಳೆಂದರೆ ಸುತ್ತಲಿನ ಪರಿಸರ-ಅನೈರ್ಮಲ್ಯ, ಪದೆ ಪದೆ ಬರುವ ಸೊಂಕುಗಳು, ಸ್ಥಳಿಯ ಕಾಯಿಲೆಗೆಳು, ಹಾಗೂ ಅತೀ ಮುಖ್ಯವಾಗಿ ಲಸಿಕೆಗಳು. ಸಾರ್ವಜನಿಕರಲ್ಲಿ ಕೆಲವು ಲಸಿಕೆಗಳು ಇಡಿ ಸಮುದಾಯವನ್ನು ಒಂದು ಮಾರಕಕಾಯಿಲೆಗೆ ಪ್ರತಿರೋಧಿಸುವಂತೆ ಮಾಡಬಹದು. ಇದನ್ನು ನಾವು ಸಮುದಾಯದ ಪ್ರತಿರೋಧತೆ (Community immunity) ಅಥವಾ ಹರ್ಡ ಇಮ್ಮೂನಿಟಿ (Herd immunity) ಎಂದು ಕರೆಯಬಹುದು.
1930ರಲ್ಲಿ ವಿಜ್ಞಾನಿಗಳಿಗೆ ಇದರ ಅರಿವು ಆಯಿತು. ಸಿಡುಬಿನ ಪ್ರಸಿದ್ದ ಕತೆ ಇಲ್ಲಿ ನೆನಪಿಸಿಕೊಳ್ಳಬಹುದು. ಒಂದು ಸೋಂಕುಕಾರಕ ಬ್ಯಾಕ್ಟೀರಿಯಾ ಅಥವಾ ವೈರಸ್ ದೇಹ ಪ್ರವೇಶಿಸಿದರೆ ಪ್ರತಿರೋಧ ಬೆಳೆಸಿಕೊಂಡು ಅಣಿಯಾಗಿರುವ ದೇಹ ಅದನ್ನುಸಾಯಿಸಿ ರೋಗಪ್ರಸರಣ ನಿಲ್ಲಿಸಿಬಿಡುತ್ತದೆ. ಇನ್ನು ಅತಿ ಸಾಮಾನ್ಯವಾಗಿ ಮುಷ್ಯರನ್ನು ಬಾಧಿಸುವ ಸೋಂಕುಗಳೆಂದದರೆ ಬೇಧಿಗಳು, ಹಾಗೂ ನೆಗಡಿಕಾರಕ ವೈರಸ್ಗಳು. ಹಾಗೆಯೆ ನೆಗಡಿಕಾರಕ ವೈರಸ್ಗಳಲ್ಲಿ ಕೋರೋನಾದ ಪ್ರಜಾತಿಯ ವೈರಸ್ಗಳು ತುಂಬ ಸಮಾನ್ಯ. ಹಾಗಾಗಿ ಕರೋನಾದ ಬೇರೆಲ್ಲ ಪ್ರಜಾತಿಗಳು ನಮ್ಮ ಅಂದರೆ ಭಾರತೀಯರ ದೇಹಗಳನ್ನು ಇದಕ್ಕಿಂತ ಮುಂಚೇಯೆ ಹಲವಾರು ಸಲ ಪ್ರವೇಶಿಸಿ ನಮ್ಮ ದೇಹದಲ್ಲಿ ಸಾಕಷ್ಟು ಪ್ರತಿರೋಧ ಶಕ್ತಿ ಉತ್ಪತ್ತಿ ಮಾಡಿಬಿಟ್ಟಿವೆ. ಹಾಗಾಗಿ ನಮ್ಮ ದೇಶದಲ್ಲಿ ಈ ಸೋಂಕು ಕಂಡುಬಂದರೂ, ತೀವ್ರತೆ ಚೀನಾ ಹಾಗೂ ಐರೋಪ್ಯ ರಾಷ್ಟ್ರಗಳಷ್ಟಿಲ್ಲ.
ಯಾಕೆಂದರೆ ಈ ರಾಷ್ಟ್ರಗಳ ಜನರ ಜೀವನಸ್ತರ ಹಾಗೂ ಸ್ವಚ್ಚತಾ ಸ್ತರಗಳು ಭಾರತಕ್ಕಿಂತ ಉನ್ನತ ಮಟ್ಟದಲ್ಲಿದ್ದು ,ಇಲ್ಲಿಯವರು ಈ ರೋಗಕಾರಕ ವೈರಸ್ಗಳಿಗೆ ಎಂದೂ ತಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಒಡ್ಡಿಲ್ಲ. ಹಾಗಾಗಿ ಇಲ್ಲಿಯವರ ಸಮುದಾಯ ಪ್ರತಿರೋಧತೆ ನಮ್ಮಷ್ಟು ಶಕ್ತಿಶಾಲಿಯಾಗಿರದೆ ಇವರು ಕೋರೋನಾಗೆ ತುತ್ತಾಗುತಿದ್ದಾರೆ. ನಮ್ಮ ಅವ್ಯವಸ್ಥೆ, ಕೂಳಚೆ, ಕಂಡಲ್ಲಿ, ಉಗುಳುವುದು , ಬಯಲಲ್ಲಿ ಮಲಮೂತ್ರ ಮಾಡುವುದು, ಹಿಂದೆ ಮುಂದೆ ನೋಡದೆ ಒಬ್ಬ ಮುಖದ ಮೇಲೋಬ್ಬರು ಕೆಮ್ಮುವುದು ಕೆಟ್ಟ ಅಭ್ಯಸವಾದರೂ ಅದು ಇಂದು ನಮಗೆ ವರದಾನವಾಗಿದೆ. ಕಲುಷಿತ ನೀರು ಆಹಾರಗಳೂ ನಮ್ಮಗೆ ಈಗ ಉಪಕಾರಿಯಾಗಿ ಪರಿಣಮಿಸಿವೆ. ಇಂತಹ ಅಪಾಯಕಾರಿ ಸೊಂಕುಗಳು ಭಾರತದಂತಹ ದೇಶ ಪ್ರವೇಶಿಸಿದಾಗ ಏನಾಗುತ್ತದೆ ನೋಡೋಣ.
ಭಾರತೀಯರು ಭಯಪಡಬೇಕಾಗಿಲ್ಲ:
ವೈರಸ್‌ಗಳು ಒಬ್ಬ ಆರೋಗ್ಯವಂತ ಭಾರತೀಯನ ದೇಹ ಸೇರಿದಾಗ ಮುಂಚೆಯೆ ತಯಾರಿಯಲ್ಲಿರುವ ದೇಹದ ಪ್ರತಿರೋಧ ವ್ಯವಸ್ಥೆ ಈ ವೈರಸ್‌ಗಳ ಮೇಲೆ ತೀವ್ರ ದಾಳಿ ನಡೆಸಿ ವೈರಸ್ನನ್ನು ಕೊಂದು ಹಾಕುತ್ತದೆ. ಹಾಗಾಗಿ ಈ ವ್ಯಕ್ತಿಯಿಂದ ರೋಗ ಇನ್ನೊಬ್ಬರಿಗೆ ಹರಡುವದಿಲ್ಲ ಈ ವ್ಯಕ್ತಿ ಸೋಂಕುಕಾರಕನಾಗದೆ ಸೋಂಕಿಗೆ ಕಂಟಕನಾಗಿ ಪರಿಣಮಿಸುತ್ತಾನೆ. ಇಲ್ಲಿ ಪ್ರಸರಣ ಸಂಖ್ಯೆ ಸೊನ್ನೆ. ಹೊಸ ರೋಗಿಗಳ ಸಂಖ್ಯೆ ಸೊನ್ನೆ. ರೋಗ ಪ್ರಸರಣ ನಿಧಾನವಾಗಬಹುದು ಅಥವಾ ನಿಂತುಹೋಗಬಹುದು. ಹಾಗಾಗಿ ಇಲ್ಲಿ ರೋಗ ಮಟ್ಟಹಾಕಲು ಮನುಷ್ಯರೇ ಮದ್ದು, ಗುರಾಣಿಯೆ ಖಡ್ಗವಿದ್ದಂತೆ. ಔಷಧಿಗಳು ಮಾಡದ ಕೆಲಸವನ್ನು ನಮ್ಮ ದೇಹ ಕೆಲವೆ ಗಂಟೆಗಳಲ್ಲಿ ಮಾಡಿ ಮುಗಿಸುತ್ತದೆ. ಕೆಲವರು ರೋಗದ ಮಂದ ಲಕ್ಷಣಗಳನ್ನು ತೋರಿಸಿದರೆ ಇನ್ನು ಕೆಲವರು ಆರೋಗ್ಯಂತವರಂತೆ ಇದ್ದು ತಮ್ಮೋಳಗಿನ ವೈರಸನ್ನು ಸಾಯಿಸಿ ಬಿಡಬಹುದು. ಹೀಗೆಯೆ ಲಕ್ಷ, ಕೋಟಿ ಪ್ರತಿರೂಧ ಒಡ್ಡುವ ಜನಸಂಖ್ಯೆಯ ನಡುವೆ ಸಾವಿರಾರು ಸೋಂಕಿತರು ಬಂದರೂ ರೋಗ ಹರಡದೆ ರೋಗಾಣು ಕೊನೆಗಾಣುತ್ತದೆ. ಒಂದು ಹಂತಕ್ಕೆ ಪ್ರತಿರೋಧಿತ ಸಮುದಾಯದಲ್ಲಿ ರೋಗ ಪೂರ್ಣ ನಶಿಸಿಹೋಗುತ್ತದೆ. ಕೆಲ ರೋಗಗಳನ್ನು ಇದೇ ರೀತಿಯಲ್ಲಿ ಜಾಗತಿಕ ನಿಗ್ರಹಕ್ಕೆ ಪ್ರಯತ್ನಿಸಲಾಗುತ್ತದೆ ಉದಾ ಪೋಲಿಯೋ.
ತುಂಬ ದುರ್ಬಲರು, ಪ್ರತಿರೋಧ ಶಕ್ತಿ ಕಡಿಮೆ ಇರುವವರು ಈ ರೋಗಕ್ಕೆ ತುತ್ತಾಗಬಹದು. ಆದರೆ ಸೋಂಕು ಸಾರ್ವಜನಿಕರಲ್ಲಿ ಅಷ್ಟೊಂದು ತೀವ್ರತೆಯಿಂದ ಹರಡದೆ ದುರ್ಬಲ ವ್ಯಕ್ತಿಗಳೂ ಸಮುದಾಯ ಪ್ರತಿರೋಧತೆಯಿಂದ ಸೊಂಕಿಗೆ ತುತ್ತಾಗುವದಿಲ್ಲ ಸೋಂಕಿತರು ಅರೋಗ್ಯವಂತ ಜನರಲ್ಲಿ ಸೇರಿಕೊಂಡರೂ ಆತಂಕ ಪಡಬೇಕಿಲ್ಲ. ಕೆಲ ಸಾರಿ ಬಲಾಢ್ಯ ಸೈನ್ಯ ಯುಧ್ದದಲ್ಲಿ ಗೆದ್ದರೂ ಕೊಂಚ ಮಟ್ಟಿಗೆ ನಷ್ಟ ಅನುಭವಿಸುತ್ತದೆ. ಹಾಗಾಗಿ ಜಾಗತಿಕ ಸಾಂಕ್ರಾಮಿಕಕ್ಕೆ ಕೆಲ ದುರ್ಬಲರು ಬಲಿಯಾಗಬಹುದು. ಆದರೆ ಯುರೋಪ್ ಹಾಗೂ ಚೈನಾದಷ್ಟು ಸಾವುಗಳಾಗುವದಿಲ್ಲ .ಭಾರತೀಯರು ಭಯಪಡಬೇಕಾಗಿಲ್ಲ.ಭಯವೆ ಬಹುದೊಡ್ಡ ರೋಗ.
ಡಾ. ಸಲೀಮ್ ನದಾಫ್
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು
ಮೊ.: 8073048415