ಎಳೆ ಮಕ್ಕಳಲ್ಲಿ ಶ್ರವಣದೋಷ ಕಂಡುಹಿಡಿಯುವುದು ಹೇಗೆ?

ಎಳೆ ಮಕ್ಕಳಲ್ಲಿ ಶ್ರವಣದೋಷ ಪತ್ತೆ ಮಾಡಲು ಇಲ್ಲಿ ಕೆಲವು ಮಾರ್ಗಗಳನ್ನು ತಿಳಿಸಲಾಗಿದೆ. ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ. 3 ತಿಂಗಳಿನಿಂದ ಎರಡೂವರೆ ವರ್ಷಗಳ ಮಕ್ಕಳಲ್ಲಿನ ಶ್ರವಣದೋಷಗಳನ್ನು ಮಕ್ಕಳಲ್ಲಿ ಶ್ರವ್ಯ ನಡವಳಿಕೆ ಹಾಗೂ ವಾಕ್ ಮತ್ತು ಭಾಷಾ ಕೌಶಲ್ಯಗಳಿಂದ ಪತ್ತೆ ಮಾಡಬಹುದು.

ಶ್ರವಣ ದೋಷದ ಮಕ್ಕಳ ಲಕ್ಷಣಗಳು

1. ದುರ್ಬಲ ಶೈಕ್ಷಣಿಕ ಸಾಧನೆ

2. ವಾಹನಗಳ ಹಾರ್ನ್ ಶಬ್ದಕ್ಕೆ ಯಾವುದೇ ಪ್ರತಿಕ್ರಿಯೆ ಇರುವುದಿಲ್ಲ

3. ಶಿಕ್ಷಕರು ಹೇಳುವುದನ್ನು ಆಲಿಸುವುದು ಕಷ್ಟವಾಗುತ್ತದೆ. ಹೀಗಾಗಿ ಮುಂದಿನ ಸಾಲಿಗೆ ಸ್ಥಳಾಂತರಗೊಂಡಿರುತ್ತಾರೆ.

4. ದುರ್ಬಲ ಆಲಿಕೆ ಅಥವಾ ಶಬ್ಧಗಳತ್ತ ಜಾಗೃತಿ ಕೊರತೆ

5. ಅರ್ಥ ಮಾಡಿಕೊಳ್ಳಲು ಎರಡು ಅಥವಾ ಮೂರು ಬಾರಿ ಪುನರಾವರ್ತನೆ ಮಾಡಬೇಕಾಗುತ್ತದೆ

6. ಮಾತನಾಡಿದ ವಾಕ್ಯವನ್ನು ಆಲಿಸೇ ಉತ್ತರಿಸುವಿಕೆ/ಸರಿಯಿಲ್ಲದ ಉತ್ತರ ನೀಡುವಿಕೆ

7. ಪದಗಳು/ಶಬ್ಧಗಳನ್ನು ಉಚ್ಚರಿಸುವಾಗ ತಪ್ಪುಗಳನ್ನು ಮಾಡುವಿಕೆ. ಉದಾ : ಟಾಟ್‍ಗೆ ಕಾಟ್, ಟನ್‍ಗೆ ಸನ್ ಇತ್ಯಾದಿ

ಎಳೆ ಮಕ್ಕಳಲ್ಲಿನ ಶ್ರವಣದೋಷವನ್ನು ಕಂಡುಹಿಡಿಯುವುದು ಹೇಗೆ?

ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ. ಶ್ರವಣದೋಷವಿದ್ದಲ್ಲಿ ತಕ್ಷಣ ಸ್ಪೀಚ್ ಪ್ಯಾಥೋಲಾಜಿಸ್ಟ್/ಆಡಿಯೋಲಾಜಿಸ್ಟ್‍ರನ್ನು ಸಂಪರ್ಕಿಸಿ.

ವರ್ಷ : 3 ತಿಂಗಳು:

ಶ್ರವ್ಯ ನಡವಳಿಕೆಗಳು: ದೊಡ್ಡ ಶಬ್ದದ ಚಪ್ಪಾಳೆ/ಶಬ್ಧಗಳು, ಅಳಲು ಆರಂಭಿಸುವಿಕೆ, ನಿದ್ರೆಯಿಂದ ಎಚ್ಚರಗೊಳ್ಳುವಿಕೆ, ಚಲಿಸುವಿಕೆ, ಬೆಚ್ಚಿ ಬೀಳುವ ಪ್ರತಿಕ್ರಿಯೆ.

ವಾಕ್ ಮತ್ತು ಭಾಷಾ ಕೌಶಲ್ಯಗಳು: “ಕೂ’ ಮತ್ತು ಗುಳುಗುಳು ಶಬ್ಧ ಮಾಡುವಿಕೆ.

ವರ್ಷ : 3 ರಿಂದ 6 ತಿಂಗಳು

ಶ್ರವ್ಯ ನಡವಳಿಕೆಗಳು: ತಾಯಿಯ ಧ್ವನಿ ಕೇಳಿ ಅಳುವುದನ್ನು ನಿಲ್ಲಿಸುವಿಕೆ, ಮಾತನಾಡಿಸಿದಾಗ ನಗುವಿಕೆ, ಶಬ್ಧಗಳ ಆಲಿಕೆ ಮತ್ತು ಹೊಸ ಶಬ್ಧಗಳನ್ನು ಅಲಿಸುವತ್ತ ಆಸಕ್ತಿ ಪ್ರದರ್ಶನ. ಉದಾ : ಹೊಸ ಆಟಿಕೆ ಶಬ್ಧ ಆಲಿಕೆ.

ವಾಕ್ ಮತ್ತು ಭಾಷಾ ಕೌಶಲ್ಯಗಳು: ಬಾ ಬಾ ಬಾ… ಡಾ ಡಾ ಡಾ… ಈ ರೀತಿಯ ಶಬ್ಧಗಳನ್ನು ಹೊರಹೊಮ್ಮಿಸುವಿಕೆ, ತಾಯಿಯ ಧ್ವನಿ ಕೇಳಿ ಸಂತೋಷದ ಧ್ವನಿ ಹೊರಹೊಮ್ಮಿಸುವಿಕೆ.

ವರ್ಷ : 6 ರಿಂದ 9 ತಿಂಗಳು

ಶ್ರವ್ಯ ನಡವಳಿಕೆಗಳು: ಶಬ್ಧ ಅಥವಾ ಧ್ವನಿಯ ಮೂಲದತ್ತ ಮಗು ತನ್ನ ತಲೆಯನ್ನು ತಿರುಗಿಸುತ್ತದೆ, ಹೊಸ ಶಬ್ಧಗಳತ್ತ ಆಸಕ್ತಿ ತೋರುವುದನ್ನು ಮುಂದುವರಿಸುತ್ತದೆ.

ವಾಕ್ ಮತ್ತು ಭಾಷಾ ಕೌಶಲ್ಯಗಳು: ಬಾ.ಡಾ.ಕಾ.ಮಾ.ಈ.. ರೀತಿಯ ವಿಭಿನ್ನ ಶಬ್ಧಗಳನ್ನು ಹೊರಹೊಮ್ಮಿಸಲು ಯತ್ನಿಸುತ್ತದೆ, ಮಗು ಹೊರಹೊಮ್ಮಿಸಿದ ಶಬ್ಧವನ್ನು ಹೋಲುವ ರೀತಿ ನೀವು ಶಬ್ಧ ಮಾಡಿದರೆ ಶಿಶು ಅದನ್ನು ಅನುಕರಿಸಲು ಯತ್ನಿಸುತ್ತದೆ, ಭಾವನಾತ್ಮಕ ತೃಪ್ತಿ ಮತ್ತು ಅತೃಪ್ತಿಯನ್ನು ಶಬ್ಧದ ಮೂಲಕ ಹೊರಹೊಮ್ಮಿಸುತ್ತದೆ. (ಉದಾ : ಮಗು ಸಂತೋಷದಲ್ಲಿದ್ದಾಗ ಧ್ವನಿಯೊಂದಿಗೆ ಮುಗಳ್ನಗೆ ಚೆಲ್ಲುತ್ತದೆ ಹಾಗೂ ಅಸಮಾಧಾನಗೊಂಡಾಗ ಇಲ್ಲವೇ ಕೋಪ ಬಂದಾಗ ವಿಭಿನ್ನ ಧ್ವನಿಯೊಂದಿಗೆ ಅಥವಾ ಅಸಹನೀಯ ಶಬ್ಧಗಳೊಂದಿಗೆ ಜೋರಾಗಿ ಅಳುತ್ತದೆ).

ವರ್ಷ : 9 ರಿಂದ 18 ತಿಂಗಳು

ಎಳೆ ಮಕ್ಕಳಲ್ಲಿ ಶ್ರವಣದೋಷ ಕಂಡುಹಿಡಿಯುವುದು ಹೇಗೆ?

ಶ್ರವ್ಯ ನಡವಳಿಕೆಗಳು: ನೀವು ಕರೆದಾಗ ನಿಮ್ಮ ಮಗು ಮೇಲೆ ನೋಡುತ್ತದೆ., ಇಲ್ಲ ಎಂಬಂತಹ ಶಬ್ಧಗಳನ್ನು ಅರ್ಥ ಮಾಡಿಕೊಳ್ಳುತ್ತದೆ, ಸರಳ ಆದೇಶಗಳಿಗೆ ಪ್ರತಿಕ್ರಿಯಿಸುತ್ತದೆ. ಉದಾ : ನಿನ್ನ ಬಾಯಿ ತೆಗಿ.. ನಿನ್ನ ಕಣ್ಣು ಮುಚ್ಚು ಇತ್ಯಾದಿ.

ವಾಕ್ ಮತ್ತು ಭಾಷಾ ಕೌಶಲ್ಯಗಳು: ಗಮನ ಸೆಳೆಯಲು ಧ್ವನಿ ಬಳಸುವುದನ್ನು ಆರಂಭಿಸುತ್ತದೆ., ಮೊದಲ ಅರ್ಥಪೂರ್ಣ ಪದಗಳನ್ನು ಹೇಳುತ್ತದೆ. ಉದಾ : ಅಮ್ಮ, ಅಪ್ಪ ಇತ್ಯಾದಿ, 18 ತಿಂಗಳು ತುಂಬುವ ವೇಳೆಗೆ ಅರ್ಥಪೂರ್ಣ ಪದಗಳ ಬಳಕೆ ಸಂಖ್ಯೆ ನಿಧಾನವಾಗಿ ಹೆಚ್ಚುತ್ತದೆ.

ವರ್ಷ : 18 ತಿಂಗಳಿನಿಂದ ಎರಡೂವರೆ ವರ್ಷಗಳು

ಶ್ರವ್ಯ ನಡವಳಿಕೆಗಳು: ಕರೆಗೆ ಪ್ರತಿಕ್ರಿಯಿಸುತ್ತದೆ, ವಸ್ತುವಿನ ಹೆಸರನ್ನು ಗುರುತಿಸುತ್ತದೆ, ಸರಳ ಆದೇಶಗಳಿಗೆ ಪ್ರತಿಕ್ರಿಯಿಸುತ್ತದೆ.

ವಾಕ್ ಮತ್ತು ಭಾಷಾ ಕೌಶಲ್ಯಗಳು: ಪದಗಳನ್ನು ವಾಕ್ಯಗಳಾಗಿ ಸಂಯೋಜನಿಸುತ್ತದೆ. ಉದಾ: ಅಮ್ಮ ಬಾ.. ಅಪ್ಪ ಬಾ.. ಇತ್ಯಾದಿ, ಪ್ರಾಣಿ, ಪಕ್ಷಿ ಮತ್ತು ಹಣ್ಣುಗಳ ಹೆಸರು ಇತ್ಯಾದಿಯ ಹೆಸರನ್ನು ಹೇಳುತ್ತದೆ, ದೊಡ್ಡ ಹಣ್ಣು, ಉದ್ದ/ಗಿಡ್ಡ, ಹೆಚ್ಚು ಕಡಿಮೆ, ಚೆನ್ನಾಗಿದೆ ಇತ್ಯಾದಿಯಂತಹ ಕ್ರಿಯಾ ವಿಶೇಷನಗಳನ್ನು ಬಳಸುತ್ತದೆ.

Dr. Dinakar ಡಾ. ದಿನಕರ್ ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್, 82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು

ಡಾ. ದಿನಕರ್
ವೈದೇಹಿ ಹಾಸ್ಪಿಟಲ್, ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
82, ಇಪಿಐಪಿ ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ :  +91-80-4906 9000 Extn: 1147/1366   ಮೊ.: 97422 74849
 www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!