ದೆಹಲಿಯಲ್ಲಿ ಸಂತಸ ಪಾಠ- ಡೊನಾಡ್ಡ್ ಟ್ರಂಪ್ ಪತ್ನಿ ಮೆಲೇನಿಯಾ ಆಶ್ಚರ್ಯ, ಸಂತಸ …!

ಫೆಬ್ರವರಿ 25ರಂದು ಅಮೇರಿಕಾ ಅಧ್ಯಕ್ಷರಾದ ಡೊನಾಡ್ಡ್ ಟ್ರಂಪ್ ಅವರ ಪತ್ನಿ ಮೆಲೇನಿಯಾ, ತಮ್ಮ ಭಾರತ ಪ್ರವಾಸದ ಸಂದರ್ಭದಲ್ಲಿ ದಿಲ್ಲಿಯ ಸರಕಾರಿ ಶಾಲೆಗೆ ಭೇಟಿಕೊಟ್ಟು ಮಕ್ಕಳೊಂದಿಗೆ 45 ನಿಮಿಷ ಅವಧಿಯ ಸಂತಸದ ಪಾಠ ಕೇಳಿ ಆಶ್ಚರ್ಯ, ಸಂತಸಪಟ್ಟರು. ತಾವು ಅಮೇರಿಕಾದಲ್ಲಿ ನಡೆಸಿರುವ Be Best ಕಾರ್ಯಕ್ರಮದಲ್ಲಿ ಮುಂದೆ ಇದನ್ನು ಅಳವಡಿಸುವುದಾಗಿ ಅವರು ಹೇಳಿದರು. 2019ರಲ್ಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶವಾದ ದೆಹಲಿ ರಾಜ್ಯ ಸರಕಾರ ತನ್ನ ಸರಕಾರಿ ಶಾಲೆಗಳಲ್ಲಿ 45 ನಿಮಿಷಗಳ ಒಂದು ವಿಶೇಷ ಪಾಠದ ತರಗತಿ ಆರಂಭಿಸಿದೆ.
ದೆಹಲಿ ಸರಕಾರದ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿ ಮನಿಶ್ ಸಿಸೋಡಿಯಾ ಈ ಯೋಜನೆಯ ರೂವಾರಿ. ಹಿಂದೆ ಪ್ರಪಂಚದಲ್ಲೇ ಮೊಟ್ಟ ಮೊದಲ ಬಾರಿ ಭೂತಾನ್ ದೇಶದಲ್ಲಿ 1970ರಲ್ಲಿ ಈ ತರಹದ ಒಂದು ಪ್ರಯೋಗ ಅರಂಭವಾಗಿತ್ತು. ಇಂದು ಪ್ರಪಂಚದ ಕೆಲವು ದೇಶಗಳಲ್ಲಿ ಈ ತರಹದ ಪ್ರಯೋಗಗಳು ಶಿಕ್ಷಣ ಕ್ಷೇತ್ರದಲ್ಲಿ ನಡೆದಿವೆ.

ಸಂತಸದ ಪಠ್ಯ- ಇದರ ರೂಪುರೇಖೆಗಳು ಏನು?

ಎಲ್ಲ ಮಕ್ಕಳು ವಿವಿಧ ಸನ್ನಿವೇಶಗಳಲ್ಲಿ ಹುಟ್ಟಿ ಬೆಳೆಯುತ್ತವೆ. ಇಂದು ಮಕ್ಕಳು ಬೆಳೆಯುತ್ತಿರುವ ವಾತಾವರಣ ಅಸಂಗತ. ಹಾಗೂ ಅಸ್ಥಿರವಾಗಿದೆ. ಸತತ ಬದಲಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಕ್ರಿಯಾಶಾಸ್ತ್ರಗಳು ನಮ್ಮನ್ನು ಹೆದರಿಸುತ್ತಿವೆ. ನಾಳೆ ಬಾಳಬೇಕಾದ ಇಂದಿನ ಮಕ್ಕಳ ಭವಿಷ್ಯ ಏನು ಅಂತ ! ಬಹು ಮಹಡಿ ಕಟ್ಟಡಗಳಿಗೆ ಸೀಮಿತವಾಗಿ, ಮಾರ್ಗದರ್ಶನವಿರದೇ, ವಿದ್ಯುನ್ಮಾನ ಮಾಧ್ಯಮಗಳಿಗೆ ಅತಿ ಹೆಚ್ಚು ತೆರೆದುಕೊಂಡಿರುವ ಬಹಳಷ್ಟು ಮಕ್ಕಳು ಆ ಮಿತಿಯಲ್ಲೇ ಬೆಳೆಯುತ್ತಿವೆ.
ಮಕ್ಕಳು ತಮ್ಮ ಕೈಗಳನ್ನು ಉಜ್ಜಿಕೊಳ್ಳುವುದರಿಂದ ಆರಂಭವಾಗಿ, ಅವುಗಳನ್ನು ಕಣ್ಣುಗಳ ಮೇಲೆ ಇಟ್ಟುಕೊಂಡು ವಿರಮಿಸಲು ಶಿಕ್ಷಕರು ಹೇಳುತ್ತಾರೆ. ನಂತರ ಪ್ರತಿದಿನ 5 ನಿಮಿಷ ಧ್ಯಾನ. ಪ್ರತಿದಿನ ಗಣಿತಕ್ಕೆ ತಲೆ ಕೆರೆದುಕೊಳ್ಳುವುದರಿಂದ, ಇಲ್ಲಿ ಮಕ್ಕಳ ಪಾಠ ದಿನಚರಿ ಆರಂಭವಾಗುವುದಿಲ್ಲ. ಹೀಗಾಗಿ 10 ವರ್ಷದ ರೋಷನ್ ರೈಗೆ ಈಗ ಒತ್ತಡವಿಲ್ಲ. ಪ್ರತಿನಿತ್ಯ ಬೆಳಗ್ಗೆ ಶಿಕ್ಷಕರು  ಮೈದಾನದಲ್ಲಿ ಸೇರುವಿಕೆ ಸಮಯದಲ್ಲಿ ಗಮನಿಸಿ ಟೀಕಿಸಿ ಬೈಯುವ ಒತ್ತಡವಿಲ್ಲ. ಹೀಗಾಗಿ ಮಕ್ಕಳು ತಮ್ಮ ತರಗತಿಗಳಲ್ಲಿ ಅತ್ಯಂತ ರೋಮಾಂಚನ ಹೊಂದಿ ಉತ್ಸುಕರಾಗಿದ್ದಾರೆ. ಇಲ್ಲಿ ಬೆಳಗಿನ ಪ್ರಾರಂಭದಲ್ಲೇ, ಗಣಿತದ ಸಮಸ್ಯೆ ಬಿಡಿಸಲು, ವ್ಯಾಕರಣ ಅಭ್ಯಸಿಸಲು ತಲೆ ಕೆರೆದುಕೊಳ್ಳಬೇಕಿಲ್ಲ. ಈ ಒತ್ತಡಗಳ ಬದಲು ವಿಶ್ರಮಿಸುತ್ತ ಆರಾಮವಾಗಿ ಬಯಲಲ್ಲಿ ಸಂತಸ ಅನುಭವಿಸುತ್ತಾರೆ. ಸೂರ್ಯನ ಕೆಳಗಿನ ಯಾವುದೇ ವಿಷಯದ ಬಗ್ಗೆ, ಶಾಂತಿ ಸಮಾಧಾನಗಳಿಂದ ಚರ್ಚೆ, ಪರಸ್ಪರ ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತಾರೆ. ಸಂತಸದ ಮುಖಗಳು 45 ನಿಮಿಷ ಆನಂದ ಅನುಭವಿಸಿ ಮುಂದಿನ ತರಗತಿಗಳಲ್ಲಿ ಪುಸ್ತಕ ತೆರೆಯುತ್ತಾರೆ.
6ನೇ ಕ್ಲಾಸಿನ ಒಬ್ಬ ಹುಡುಗ ಹೇಳಿದ “ಆರಂಭದಲ್ಲಿ ನಾನು ಇದೊಂದು ಹೊಸ ವಿಷಯ ಅಷ್ಟೇ ಅಂದುಕೊಂಡೆ. ಆದರೆ ಈ ತರಗತಿಗಳು ಎಷ್ಟೊಂದು ಆಸಕ್ತಿದಾಯಕವಾದವು ಗೊತ್ತಾ? ಧ್ಯಾನ ಮಾಡಿ, ಕಥೆಗಳನ್ನು ಕೇಳುತ್ತ, ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೇವೆ. ಈ ಆನಂದದ ಪಠ್ಯ, ವಿದ್ಯಾರ್ಥಿಗಳು ತಮ್ಮ ಓದು-ಅಭ್ಯಾಸದ ಬಗ್ಗೆ ತಮ್ಮ ಮನೋಭಾವ ಬದಲಾಯಿಸಿಕೊಳ್ಳುವಂತೆ ಮಾಡಿದೆ.
ಒಬ್ಬ ವಿದ್ಯಾರ್ಥಿ ಹೇಳಿದಂತೆ ಅಭ್ಯಾಸದ ಬಗ್ಗೆ ಮನೋಭಾವ ಬದಲಾಯಿಸುತ್ತಿದೆ. ನಾನು ಇದುವರೆಗೆ ತಪ್ಪಿಸಿಕೊಂಡಿದ್ದು, ಈ ಚಟುವಟಿಕೆಗಳು ಈಗ ನಮಗೆ ಮತ್ತೆ ಸಿಕ್ಕಿವೆ. ಧ್ಯಾನ ಮಾಡುತ್ತ, ಶಬ್ದಗಳು -ಸದ್ದುಗಳನ್ನು ಗಮನಿಸುತ್ತಿದ್ದೇವೆ. ಉದಾ: ನಮ್ಮ ಹೃದಯದ ಬಡಿತ, ಪ್ರಕೃತಿಯಲ್ಲಿಯ ನಮ್ಮ ಸುತ್ತಮುತ್ತಲಿನ ಸದ್ದುಗಳು. ಕೆಲವು ಮನ ತುಂಬುವ ಅಭ್ಯಾಸಗಳಿಂದ, ತರಗತಿ ಆರಂಭ. ನಂತರ ಕಥೆ ಅಥವಾ ಚಟುವಟಿಕೆ ಅಥವಾ ಪರಿಣಾಮಕಾರಿ ಚರ್ಚೆ ನಡಯುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ಈ ಕಥೆ ಅಥವಾ ಚಟುವಟಿಕೆಗಳ ಬಗ್ಗೆ, ನಮ್ಮ ವಿಚಾರಗಳನ್ನು ಅಭಿವ್ಯಕ್ತಪಡಿಸುವ, ಪ್ರತಿಕ್ರಿಯಿಸುವ ಅವಕಾಶ ನಮಗೆ ಸಿಕ್ಕಿದೆ. ನಮಗೆ ತೋಚಿದ್ದು, ನಾವು ಭಾವಿಸಿದ್ದು ಬರೆಯಲು-ಚಿತ್ರಿಸಲು ಹೇಳುತ್ತಾರೆ. ನಮ್ಮ ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯಲು ನಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಲು ಹೇಳುತ್ತಾರೆ”. ಸಂತಸದಾಯಕ ಚಟುವಟಿಕೆಗಳು, ಒಳಾಂಗಣ ಆಟಗಳು, ಕ್ರಿಯಾತ್ಮಕ ವಿಚಾರಣೆ, ಪ್ರತಿಕ್ರಿಯೆಗಳ ಚರ್ಚೆ, ಕಥೆ ಹೇಳುವುದು, ಮನಸ್ಸು ತುಂಬಲು ನಿರ್ದೇಶಿತ ಅಭ್ಯಾಸಗಳು, ಗುಂಪು ಚರ್ಚೆಗಳು, ಹಾಗೂ ಸನ್ನಿವೇಶ ಆಧರಿಸಿದ ರೋಲ್‍ಪ್ಲೇ ಹಾಗೂ ಪ್ರಹಸನಗಳಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಮಕ್ಕಳಲ್ಲಿ ಸ್ವಂತ ಅರಿವು, ಸಾವಧಾನತೆ, ಗಮನವಿಟ್ಟಿರುವಿಕೆ, ಅಭಿವೃದ್ಧಿಪಡಿಸುವುದು, ದಿಲ್ಲಿ ಶಿಕ್ಷಣ ಸಚಿವರು ಆರಂಭಸಿದ ಈ ಪದ್ಧತಿಯ ಗುರಿಯಾಗಿತ್ತು. ಮಕ್ಕಳಲ್ಲಿ ವಿಮರ್ಶಾತ್ಮಕ ವೈಚಾರಿಕತೆ, ಶೋಧನೆ ಮಾಡುವುದು, ಪ್ರಶ್ನಿಸುವುದು ಈ ಗುಣಗಳು ಬರುವಂತೆ, ಮಕ್ಕಳ ಮನಸ್ಸಿಗೆ ನಾಟುವಂತೆ ಪದೇ ಪದೇ ಬೋಧಿಸುವುದು ಈ ಪಠ್ಯಕ್ರಮದ ಒಳಗುಟ್ಟು.

ಈ ತರಹದ ಪಠ್ಯ ಬರಲು ಕಾರಣಗಳು:

ಶಾಲಾ ವ್ಯವಸ್ಥೆಯಲ್ಲಿ ಆಹ್ವಾನಗಳು, ಬೇಡಿಕೆಗಳು, ಕಲಿಯುವ ಮಟ್ಟಗಳು ಹಾಗೂ ಶೈಕ್ಷಣಿಕ ಪರಿಣಾಮಗಳಿಂದ ಬಹು ದೂರ ಹೋಗಿದ್ದವು. ನಮ್ಮ ಭಾರತ ದೇಶದಲ್ಲಿ ಆತ್ಮಹತ್ಯೆ ಬಗೆಗಿನ ಒಂದು ಸಂಶೋಧನೆ ಪ್ರಕಾರ, ಕಲಿಯುವ ಹಾಗೂ ಸಾಧಿಸುವ ಆಹ್ವಾನಗಳೊಂದಿಗೆ ಶಾಲೆಗೆ ಬರುವ ವಿದ್ಯಾರ್ಥಿಗಳು, ನಾನಾ ಮೂಲಗಳಿಂದ ಒತ್ತಡ ಹೊತ್ತು ತರುತ್ತಿದ್ದಾರೆ. ಅವು ಕೌಟುಂಬಿಕ ಗೊಂದಲಗಳು, ಪರಿಣಾಮ ಬೀರಬಲ್ಲ ವ್ಯಕ್ತಿಗಳ ಸಂಘರ್ಷಗಳು, ಸಾಮಾಜಿಕ ಹಾಗೂ ಸಾಂಸ್ಕøತಿಕ ಅಂಶಗಳು, ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅಪಾಯ ತರುವ ದುರ್ಬಲತೆಗಳೇ ಈ ಒತ್ತಡಗಳು. ಈ ಸಂಶೋಧನೆ ಹೇಳುವ0ತೆ ಪ್ರತಿ 24 ಗಂಟೆಗಳಿಗೆ 26 ಆತ್ಮಹತ್ಯೆಗಳು ವರದಿಯಾಗುತ್ತಿವೆ. ಅವುಗಳಿಗೆ ಮಾದಕ ದ್ರ್ಯವ್ಯಗಳು, ಮುರಿದುಬಿದ್ದ ಕುಟುಂಬ, ಗೆಳೆಯರೊಂದಿಗೆ ಹೋರಾಟ ಹಾಗೂ ಮುರಿದು ಬಿದ್ದ ಸ್ನೇಹ ಇವೇ ಕಾರಣಗಳು.
ಈ ಒತ್ತಡಗಳಿಗೆ ದೀರ್ಘಕಾಲದ ತೆರೆದುಕೊಳ್ಳುವಿಕೆಯಿಂದ, ದೀರ್ಘಕಾಲದ ಶಾರೀರಿಕ ಹಾಗೂ ಭಾವನಾತ್ಮಕ ಅಡೆತಡೆಗಳು, ಮಗುವಿನ ಕಲಿಯುವಿಕೆ ಹಾಗೂ ಅಭಿವೃದ್ಧಿಯನ್ನು ಭೀಕರವಾಗಿ ತಡೆಯುತ್ತವೆ. NCERT    ಯ 2005ರ ಮಾರ್ಗದರ್ಶಕ ಸೂತ್ರಗಳ ಮೇಲೆ ಈ ಪಠ್ಯಕ್ರಮ ಅಳವಡಿಸಲಾಗಿದೆ. “ಅನುಭವಿಸಿ, ಮಾಡಿ, ತಯಾರಿಸಿ, ಪ್ರಯೋಗಶೀಲತೆಯಿಂದ, ಓದಿ, ಚರ್ಚಿಸಿ, ಪ್ರಶ್ನಿಸಿ. ಕೇಳಿ, ವಿಚಾರ ಮಾಡಿ ಪ್ರತಿಕ್ರಿಯಿಸಿ, ಮಾತಿನ ಮೂಲಕ ವ್ಯಕ್ರಪಡಿಸಿ, ನಡೆದು, ಬರೆದು, ವೈಯಕ್ತಿಕವಾಗಿ ಹಾಗೂ ಇತರರೊಂದಿಗೆ ಸೇರಿ, ಈ ಅನೇಕ ರೀತಿ ಮಕ್ಕಳು ಕಲಿಯುತ್ತವೆ. ದೆಹಲಿಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೆ 10 ಲಕ್ಷ ವಿದ್ಯಾರ್ಥಿಗಳು. 50 ಸಾವಿರ ಶಿಕ್ಷಕರು ಈ ಸಂತಸ ಪಾಠ ಹಂಚಿಕೊಳ್ಳುತ್ತಿದ್ದಾರೆ.ನಮ್ಮ ಕರ್ನಾಟಕ ರಾಜ್ಯವೂ ಇತ್ತ ಗಮನಿಸಲಿ ಎಂಬುದು ನನ್ನ ಬಯಕೆ.

ಎನ್.ವ್ಹಿ ರಮೇಶ್,ಮೈಸೂರು
ಮೊ:98455-65238

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!