ಕೋವಿಡ್ ಲಾಕ್‍ಡೌನ್ : ಕಣ್ಣಿನ ಆರೋಗ್ಯ ಮತ್ತು ದೃಷ್ಟಿ ಹದಗೆಡುವ ಅಪಾಯ

ಕೋವಿಡ್  ಲಾಕ್‍ಡೌನ್‍ ನಿಂದಾಗಿ ಕಣ್ಣಿನ ಆರೋಗ್ಯ ಮತ್ತು ದೃಷ್ಟಿ ಹದಗೆಡುವ ಅಪಾಯ 90%ರಷ್ಟುಹೆಚ್ಚಾಗಿದೆ. ರೋಗಿಗಳು ತಮ್ಮ ದೃಷ್ಟಿಯು ಇನ್ನಷ್ಟು ಹದಗೆಡುವುದನ್ನು ತಡೆಯಲು ತಮ್ಮ ವೈದ್ಯರನ್ನು ಭೇಟಿ ಮಾಡಲು ಪ್ರೋತ್ಸಾಹಿಸಲು ಪ್ರಯತ್ನಿಸಬೇಕು.

ಕೋವಿಡ್ ಲಾಕ್‍ಡೌನ್ : ಕಣ್ಣಿನ ಆರೋಗ್ಯ ಮತ್ತು ದೃಷ್ಟಿ ಹದಗೆಡುವ ಅಪಾಯಕೋವಿಡ್ -19ರ ಲಾಕ್‍ಡೌನ್ ರೋಗಿಗಳು 3 ತಿಂಗಳಿಗಿಂತ ಹೆಚ್ಚು ಕಾಲ ವೈದ್ಯರ ಭೇಟಿಗಳನ್ನು ಕಳೆದುಕೊಳ್ಳುವಂತೆ ಮಾಡಿತು. ಕೆಲವು ರೆಟಿನಾದ ಕಾಯಿಲೆಗಳಿಗೆ ವಿಶೇಷ ಚುಚ್ಚುಮದ್ದುಗಳ ಅಗತ್ಯವಿದ್ದು ಇದನ್ನು ವೈದ್ಯರು ಮಾತ್ರ ನಿರ್ವಹಿಸಬಹುದು. ಈ ಚುಚ್ಚುಮದ್ದನ್ನು ತಪ್ಪಿಸಿಕೊಂಡಿರುವುದು ಈಗಾಗಲೇ ಇರುವ ಮಂದದೃಷ್ಟಿಯು ಹದಗೆಡಬಹುದು ಮತ್ತು ಕುರುಡುತನಕ್ಕೆ ಕಾರಣವಾಗಬಹುದು. ಚಿಕಿತ್ಸೆಯು  ವಿಳಂಬವಾದರೆ ಕಣ್ಣಿನ ಆರೋಗ್ಯ ಮತ್ತು ದೃಷ್ಟಿ ಹದಗೆಡುವ ಅಪಾಯ 90%ರಷ್ಟು ಹೆಚ್ಚಾಗಿದೆ.

ಭಾರತದ 35% ವಯೋವೃದ್ಧರು ಹಲವು ರೀತಿಯ ದೃಷ್ಟಿಹೀನತೆಯೊಂದಿಗೆ ಬದುಕುತ್ತಿದ್ದಾರೆ . ಕಣ್ಣಿನ ತೊಂದರೆಗಳಾದ ಕಣ್ಣಿನ ಪೊರೆ, ಗ್ಲುಕೋಮಾ ಅಥವಾ ರೆಟಿನಾದ ಕಾಯಿಲೆಗಳಿಂದ ಬಹುಪಾಲು ಜನರು ಬಳಲುತ್ತಿದ್ದು ಸರಿಯಾದ ಸಮಯಕ್ಕೆ ರೋಗನಿರ್ಣಯ ಮಾಡದಿದ್ದರೆ ಅಥವಾ ಚಿಕಿತ್ಸೆ ನೀಡದಿದ್ದರೆ ಅದು ಕುರುಡುತನಕ್ಕೆ ಈಡು ಮಾಡಬಹುದು. ಕುರುಡುತನದ ಪ್ರಮುಖ ಕಾರಣವೆಂದರೆ ವಯಸ್ಸಾದವರಲ್ಲಿ ಏಜ್-ರಿಲೇಟೇಡ್ ಮ್ಯಾಕ್ಯುಲರ್ ಡಿಜೆನರೇಶನ್ (ಎಎಮ್‍ಡಿ) ಮತ್ತು ಮಧುಮೇಹದಿಂದ ಬಳಲುತ್ತಿರುವ ರೋಗಿಗಳಲ್ಲಿ ಡಯಾಬಿಟಿಸ್ ಮ್ಯಾಕ್ಯುಲರ್ ಎಡಿಮಾ (ಡಿಎಂಇ).

ಆರೋಗ್ಯವಂತ ವ್ಯಕ್ತಿಗೆ ಹೋಲಿಸಿದರೆ ಮಧುಮೇಹ ರೋಗಿಯು ಕುರುಡನಾಗುವ ಸಾಧ್ಯತೆಯು 25 ಪಟ್ಟು ಹೆಚ್ಚಿರುತ್ತದೆ. ಕೋವಿಡ್-19ರ ಲಾಕ್‍ಡೌನ್, ರೋಗಿಗಳು ತಮ್ಮ ವೈದ್ಯರ ಭೇಟಿಗಳನ್ನು ಸುಮಾರು 4 ತಿಂಗಳುಗಳಿಂದ ತಪ್ಪಿಸಿಕೊಳ್ಳುವಂತೆ ಮಾಡಿದೆ. ಇದು ಭಾರತದ 4.8 ಮಿಲಿಯನ್ ಅಂಧ ಜನಸಂಖ್ಯೆಯ ಹೊರೆಯನ್ನು ಹೆಚ್ಚಿಸಬಹುದು . ರಾಷ್ಟ್ರೀಯ ಕುರುಡುತನ ಮತ್ತು ದೃಷ್ಟಿಹೀನ ಸಮೀಕ್ಷೆ 2019 ರ ಪ್ರಕಾರ, ಭಾರತದಲ್ಲಿ ಹೆಚ್ಚಿನ ಅಂಧತ್ವ ( 92.9%) ಮತ್ತು ದೃಷ್ಟಿಹೀನತೆ ( 96.2%) ಪ್ರಕರಣಗಳು ತಪ್ಪಿಸಬಹುದಾದ ಅಥವಾ ತಡೆಗಟ್ಟಬಹುದಾದ ಕಾರಣಗಳಿಂದಾಗಿವೆ.

ರೆಟಿನಾದ ಕಾಯಿಲೆಗಳಂತಹ ಕೆಲವು ಕಣ್ಣಿನ ತೊಂದರೆಗಳಿಗೆ ರೋಗಿಯ ಕಣ್ಣಿಗೆ ವೈದ್ಯಕೀಯ ತಜ್ಞರು ಮಾತ್ರ ನೀಡಬಹುದಾದ ಚುಚ್ಚುಮದ್ದಿನ ಚಿಕಿತ್ಸೆಯ ಅಗತ್ಯವಿರುತ್ತದೆ. ನಿಯಮಿತ ಚಿಕಿತ್ಸೆಯ ಡೋಸೇಜ್ ತಪ್ಪಿಸುವಿಕೆಯು ದೃಷ್ಟಿ ಮತ್ತಷ್ಟು ಕ್ಷೀಣಿಸುವ ಅಪಾಯವನ್ನು ಹೆಚ್ಚಿಸುತ್ತದೆ- VEGF injections ನಿರೋಧಕ ಚುಚ್ಚುಮದ್ದುಗಳು ದುಬಾರಿಯಾಗಿರುವ ಕಾರಣ ಮತ್ತು ಮಧ್ಯಮ ಹಾಗೂ ಕೆಳವರ್ಗದ ಆದಾಯವಿರುವ ಜನಸಮೂಹಕ್ಕೆ ಸೇರಿದ ರೋಗಿಗಳ ಮೇಲೆ ಹೆಚ್ಚುವರಿ ಹೊರೆಯಾಗಲು ಮುಖ್ಯ ಕಾರಣವಾಗಿರುವುದರಿಂದ ರೋಗಿಗಳು ತಮ್ಮ ಚಿಕಿತ್ಸೆಯನ್ನು ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ, ಅಕ್ಟೋಬರ್ 2020 ರಿಂದ ಆರಂಭವಾಗುವಂತೆ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‍ಡಿಎ) VEGF ನಿರೋಧಕ ಚಿಕಿತ್ಸೆಯನ್ನು ವಿಮೆ ರಕ್ಷಣೆಯೊಳಗೆ ಸೇರಿಸುತ್ತಿದೆ.

Delaying-eye-problems-may-lead-to-major-problemsದಕ್ಷಾಮ ಆರೋಗ್ಯ ಮತ್ತು ಶಿಕ್ಷಣದ ಸಿಇಒ  ಮತ್ತು ಸಿಆರ್‍ಐಸ್‍ಪಿ (CRISP) ಸಂಸ್ಥಾಪಕಿ ಡಾ.ರತ್ನ ದೇವಿ, ಪ್ರಕಾರ “`ರೋಗಿಗಳ ಗುಂಪು, CRISP (ಕಮ್ಯುನಿಟಿ ಆಫ್ ರೆಟಿನಾ ಇಂಡಿಯಾ, ರೋಗಿಗಳಿಗೆ ಬೆಂಬಲ) ನಡೆಸಿದ ರೋಗಿಗಳ ಸಮೀಕ್ಷೆಯು 10 ರಲ್ಲಿ 9 ರೋಗಿಗಳು, ಔಷಧೋಪಚಾರದಲ್ಲಿದ್ದವರು ಸಹ, ಕೋವಿಡ್‍ನ ಲಾಕ್‍ಡೌನ್‍ನಿಂದಾಗಿ ವೈದ್ಯರ ಭೇಟಿಯನ್ನು ತಪ್ಪಿಸಿಕೊಂಡಿದ್ದಾರೆ. ಇದಲ್ಲದೆ, 82% ರೋಗಿಗಳು ಲಾಕ್ಡೌನ್ ಸರಾಗವಾದ ನಂತರವೂ, ಕೋವಿಡ್ ನ ಹರಡುವಿಕೆಯ ಭಯದಿಂದ ವೈದ್ಯರನ್ನು ಭೇಟಿ ಮಾಡಲು ಚಿಂತಿತರಾಗಿದ್ದಾರೆ. ಇದು ಆತಂಕಕಾರಿ ಪ್ರವೃತ್ತಿಯಾಗಿದ್ದು ರೋಗಿಗಳು ತಮ್ಮ ದೃಷ್ಟಿಯು ಇನ್ನಷ್ಟು ಹದಗೆಡುವುದನ್ನು ತಡೆಯಲು ತಮ್ಮ ವೈದ್ಯರನ್ನು ಭೇಟಿ ಮಾಡಲು ಪ್ರೋತ್ಸಾಹಿಸಲು ಪ್ರಯತ್ನಿಸಬೇಕು.”

ವಿಟ್ರಿಯೊ ರೆಟಿನಾ ಸೊಸೈಟಿ ಆಫ್ ಇಂಡಿಯಾ (ವಿಆರ್‍ಎಸ್‍ಐ) ದ  ಪ್ರಧಾನ ಕಾರ್ಯದರ್ಶಿ,ಡಾ. ರಾಜ ನಾರಾಯಣನ್ರ ಪ್ರಕಾರ  “ಮೂರು ತಿಂಗಳಿಗಿಂತ ಹೆಚ್ಚು ವಿಳಂಬವಾದ ಚಿಕಿತ್ಸೆಯು ಕಣ್ಣಿನ ಕಾಯಿಲೆ ಮತ್ತು ದೃಷ್ಟಿ ಹದಗೆಡುವ ಅಪಾಯವನ್ನು 90% ಹೆಚ್ಚಿಸುತ್ತದೆ. ಕಾಯಿಲೆಯ ಮುಂದುವರಿದ ಹಂತವು 25% ರಷ್ಟು ರೋಗಿಗಳಲ್ಲಿ ಕಂಡುಬರುತ್ತಿದ್ದ ಪೂರ್ವ-ಲಾಕ್‍ಡೌನ್ ಸನ್ನಿವೇಶಕ್ಕೆ ಹೋಲಿಸಿದರೆ ಸುಮಾರು 75% ರೋಗಿಗಳು ರೋಗದ ಮುಂದುವರಿದ ಹಂತದಲ್ಲಿ ನಮ್ಮ ಬಳಿಗೆ ಬರುತ್ತಿದ್ದಾರೆ. ಎಎಮ್‍ಡಿ ಮತ್ತು ಡಿಎಂಇಯಂತಹ ರೆಟಿನಾದ ಕಾಯಿಲೆಗಳ ರೋಗಿಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.”

ಕುರುಡುತನ ತಡೆಗಟ್ಟುವಿಕೆಯ ಅಂತರರಾಷ್ಟ್ರೀಯ ಸಂಸ್ಥೆ (ಐಎಪಿಬಿ) ಯ ಆಗ್ನೇಯ ಏಷ್ಯಾದ ಪ್ರಾದೇಶಿಕ ಅಧ್ಯಕ್ಷ ಡಾ. ತಾರಪ್ರಸಾದ್ ದಾಸ್ ಅವರು ಅಭಿಪ್ರಾಯಪಡುತ್ತಾರೆ “ದೃಷ್ಟಿಹೀನತೆಯಿಂದ ಬದುಕುವ ವೃದ್ಧರು ಸ್ಪರ್ಶದ ಸಹಾಯದಿಂದ – ದೈಹಿಕವಾಗಿ ಒರಗಿಕೊಂಡು ಅಥವಾ ಬೀಳುವುದನ್ನು ತಪ್ಪಿಸಲು ಬೆಂಬಲವನ್ನು ಹುಡುಕುವ ಮೂಲಕ, ವಸ್ತುಗಳನ್ನು ಸೂಕ್ತವಾಗಿ ಗುರುತಿಸಲು ವಿವರಗಳನ್ನು ಸ್ಪರ್ಶಿಸುವುದು, ಇತ್ಯಾದಿಗಳ ಮೂಲಕ ಅದನ್ನು ಸಂಭಾಳಿಸುತ್ತಾರೆ ಮತ್ತು ಇದು ಅವರನ್ನು ವೈರಸ್‍ಗೆ ಹೆಚ್ಚು ಒಡ್ಡುತ್ತದೆ. ಹೈದರಾಬಾದ್‍ನ ಎಲ್.ವಿ.ಪ್ರಸಾದ್ ಕಣ್ಣಿನ ಸಂಸ್ಥೆಯಿಂದ ಇತ್ತೀಚೆಗೆ ಪ್ರಕಟವಾದ ಅಧ್ಯಯನವು (ವೈಜ್ಞಾನಿಕ ವರದಿಗಳು,  2020)  ವಯಸ್ಸಾದವರಲ್ಲಿ (69 ವರ್ಷಕ್ಕಿಂತ ಮೇಲ್ಪಟ್ಟು) ಎಲ್ಲರ ವಾರ್ಷಿಕ ಹರಡುವಿಕೆಯು  29.1%  ಮತ್ತು ಸಾಮಾನ್ಯ ದೃಷ್ಟಿ ಹೊಂದಿರುವ ಜನರಿಗೆ ಹೋಲಿಸಿದರೆ ದೃಷ್ಟಿಹೀನತೆ ಹೊಂದಿರುವ ಜನರು 1.5  ಪಟ್ಟು ಹೆಚ್ಚು ಬೀಳುವ ಅಪಾಯವನ್ನು ಹೊಂದಿರುತ್ತದೆ ಎಂದು ತೋರಿಸಿದೆ. ಸೋಂಕಿನ ಭಯವು ಅವರ ನಿಗದಿತ ವೈದ್ಯರ ಭೇಟಿಗಳನ್ನು ಮುಂದೂಡುವಂತೆ ಮತ್ತು ರದ್ದುಗೊಳಿಸುವಂತೆ ಮಾಡಿದೆ. ಲಾಕ್‍ಡೌನ್‍ನ ನಿರ್ಬಂಧಗಳು ಸರಾಗವಾಗುತ್ತಿದ್ದಂತೆ ರೋಗಿಗಳು ಸರಿಯಾದ ಸುರಕ್ಷತಾ ಕ್ರಮಗಳು ಮತ್ತು ಸಾಮಾಜಿಕ ಅಂತರದ ಮಾನದಂಡಗಳನ್ನು ಅನುಸರಿಸಿಕೊಂಡು ವೈದ್ಯರ ಬಳಿಗೆ ಹೋಗಲು ಪ್ರಾರಂಭಿಸಬೇಕು.”

Dr.-Taraprasad-Das-and-Dr.Raja-Narayanan
ಐಎಪಿಬಿ ಅಧ್ಯಕ್ಷ ಡಾ. ತಾರಪ್ರಸಾದ್ ದಾಸ್ & ವಿಆರ್‍ಎಸ್‍ಐ ಪ್ರಧಾನ ಕಾರ್ಯದರ್ಶಿ,ಡಾ. ರಾಜ ನಾರಾಯಣನ್

ಕ್ರಿಯಾತ್ಮಕ ದೃಷ್ಟಿ ಸಮಸ್ಯೆಗಳನ್ನು ವರದಿ ಮಾಡುವ ವಯಸ್ಸಾದ ರೋಗಿಗಳಲ್ಲಿ (ಉದಾ. ಮೆಟ್ಟಿಲುಗಳನ್ನು ಉಪಯೋಗಿಸಲು ಅಥವಾ ಬಾಹ್ಯ ದೃಷ್ಟಿಯಲ್ಲಿನ ವಸ್ತುಗಳನ್ನು ನೋಡುವುದರಲ್ಲಿ ತೊಂದರೆ) ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು, ಅಂತಹ ಸಮಸ್ಯೆಗಳನ್ನು ವರದಿ ಮಾಡದ ರೋಗಿಗಳಿಗಿಂತ 90% ಹೆಚ್ಚಿರುತ್ತದೆ. ರೆಟಿನಾದ ಕಾಯಿಲೆಗಳೊಂದಿಗೆ ವಾಸಿಸುವ ಇಳಿವಯಸ್ಕರು ಸಹ ಆಕಸ್ಮಿಕವಾಗಿ ಬೀಳುವ ಮತ್ತು ಇತರ ತೊಂದರೆಗಳಿಗೆ ಈಡಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

Also Read: ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಮುಟ್ಟಬೇಡಿ.

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!