ಚೀನಾದಿಂದ ಮತ್ತೊಂದು ಶಾಕ್- 3000 ಜನರಿಗೆ ಬ್ರುಸಿಲ್ಲೋಸಿಸ್

ಚೀನಾದಿಂದ ಮತ್ತೊಂದು ಶಾಕ್- 3000 ಜನರಿಗೆ ಬ್ರುಸಿಲ್ಲೋಸಿಸ್. ಚೀನಾದಲ್ಲಿ ಮತ್ತೊಂದು ಬ್ಯಾಕ್ಟೀರಿಯಾದ ಸೋಂಕಿಗೆ ಸಾವಿರಾರು ಜನರು ಧನಾತ್ಮಕ ಪರೀಕ್ಷೆ  ಸುದ್ದಿ ಆತಂಕಕ್ಕೆ ಕಾರಣವಾಗಿದೆ.

Bacteria-Leak-ಕೊರೋನಾ ಹುಟ್ಟಿಗೆ ಚೀನಾವೇ ಕಾರಣ ಎಂದು ಜಗತ್ತಿನ ಪ್ರತಿಯೊಬ್ಬರೂ ಮಾಡುವ ಆರೋಪಕ್ಕೆ ಸಾಕ್ಷಿ ಎಂಬಂತೆ ಕಳೆದ ವರ್ಷವೂ ಚೀನಾದಲ್ಲಿ ಇಂತಹುದೇ ಘಟನೆ ನಡೆದಿತ್ತು ಎಂದು ಸಿ.ಎನ್.ಎನ್ ಸುದ್ಧಿ ಸಂಸ್ಥೆಯು ವರದಿ ಮಾಡಿದೆ. ಈಶಾನ್ಯ ಚೈನಾದ ಗಾನ್ಸು ಪ್ರಾಂತ್ಯದ ಲಾನ್‍ಝೌ ನಗರದಲ್ಲಿರುವ ವೆಟರ್ನರಿ ರೀಸರ್ಚ್ ಇನ್ಸ್ಟಿಟ್ಯೂಟ್‍ನ ಔಷಧ ಕಾರ್ಖಾನೆಯಲ್ಲಿ ಬ್ರುಸಿಲ್ಲೋಸಿಸ್ ರೋಗವು ಮೊದಲು ಕಾಣಿಸಿಕೊಂಡಿತ್ತು.

ವೆಟರ್ನರಿ ರೀಸರ್ಚ್ ಇನ್ಸ್ಟಿಟ್ಯೂಟ್ ಔಷಧ ಕಾರ್ಖಾನೆಯಲ್ಲಿದ್ದ ನಿರುಪಯುಕ್ತ ಗ್ಯಾಸ್ ಅನ್ನು ಅಲ್ಲಿನ ಕಾರ್ಮಿಕರು ಶುದ್ಧೀಕರಣ ಮಾಡಿರಲಿಲ್ಲ. ಹೀಗಾಗಿ 2019ರ ನವಂಬರ್‍ನಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ 181 ಜನರಿಗೆ ಬ್ಯಾಕ್ಟೀರಿಯಾ ಸೋಂಕು ಗಾಳಿಯ ಮೂಲಕ ಹರಡಿತ್ತು. ನಂತರ ಸುತ್ತಮುತ್ತಲಿನ 3000ಕ್ಕೂ ಹೆಚ್ಚು ಜನರಿಗೆ ಬ್ರುಸಿಲ್ಲೋಸಿಸ್ ರೋಗವು ಬಾಧಿಸಿತು.

ಏನಿದು ಬ್ರುಸಿಲ್ಲೋಸಿಸ್?

ಬ್ರುಸಿಲ್ಲಾ ಹೆಸರಿನ ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಯೇ ಬ್ರುಸಿಲ್ಲೋಸಿಸ್ ರೋಗ. ಸಾಕು ಪ್ರಾಣಿಗಳಿಗೆ ಮೊದಲು ಈ ರೋಗವು ತಗುಲಿತ್ತು. ಅದರ ಮುಂಖಾತರ ಮನುಷ್ಯರಿಗೂ ಸಹಾ ಈ ರೋಗ ಕಾಡಿತ್ತು. ಬ್ರುಸಿಲ್ಲೋಸಿಸ್ ರೋಗವನ್ನು ಮೆಡಿಟರೇನಿಯನ್ ಜ್ವರ ಎಂದೂ ಸಹಾ ಕರೆಯಲಾಗುತ್ತದೆ. ಕಲುಷಿತ ಆಹಾರ ಸೇವಿಸುವುದರಿಂದ ಅಥವಾ ಉಸಿರಾಡುವಾಗ ಗಾಳಿಯ ಮೂಲಕ ಈ ಬ್ರುಸಿಲ್ಲಾ ಬ್ಯಾಕ್ಟೀರಿಯಾವು ಮನುಷ್ಯರ ದೇಹವನ್ನು ಸೇರುತ್ತದೆ. ಆ ಮೂಲಕ ರೋಗ ಲಕ್ಷಣಗಳು ಮನುಷ್ಯರಲ್ಲಿ ಕಾಣಿಸಿಕೊಳ್ಳುತ್ತವೆ.

ಈ ರೋಗದ ಲಕ್ಷಣಗಳು ಯಾವುವೆಂದರೆ ತಲೆನೋವು, ಜ್ಚರ, ಮಾಂಸಖಂಡಗಳಲ್ಲಿ ನೋವು ಮತ್ತು ವಿಪರೀತ ಆಯಾಸವಾಗುವುದು. ಕೆಲವರಿಗೆ ಈ ರೋಗದ ಲಕ್ಷಣಗಳು ಕೂಡಲೇ ವಾಸಿಯಾಗಬಹುದು. ಇನ್ನು ಕೆಲವರಿಗೆ ಮತ್ತೆ ಮತ್ತೆ ಕಾಣಿಸಿಕೊಳ್ಳಬಹುದು ಹಾಗೂ ಇನ್ನು ಕೆಲವರಿಗೆ ದೀರ್ಘಕಾಲದವರೆಗೆ ರೋಗ ಲಕ್ಷಣಗಳು ಹಾಗೆಯೇ ಉಳಿದಿರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಬ್ರುಸಿಲ್ಲಾ ಬ್ಯಾಕ್ಟೀರಿಯಾ ಕೊರೋನಾದಂತೆ ಮಾರಕವೇ?

ಚೀನಾದಿಂದ ಮತ್ತೊಂದು ಶಾಕ್- 3000 ಜನರಿಗೆ ಬ್ರುಸಿಲ್ಲೋಸಿಸ್ಬ್ರುಸಿಲ್ಲಾ ಬ್ಯಾಕ್ಟೀರಿಯಾದ ಸೋಂಕು ಕೋವಿಡ್-19 ಕೊರೋನಾ ಸೋಂಕಿಗಿಂತ ಸಂಪೂರ್ಣ ಭಿನ್ನವಾಗಿದೆ. ಕೊರೋನಾ ಒಂದು ವೈರಸ್ ಆಗಿದ್ದು ವೇಗವಾಗಿ ಹಾಗೂ ಭಯಾನಕವಾಗಿ ಅದು ತನ್ನ ಕಾರ್ಯವನ್ನು ಮಾಡಿ ಮುಗಿಸುತ್ತದೆ. ಆದರೆ ಬ್ಯಾಕ್ಟೀರಿಯಾದಿಂದ ಕಾಯಿಲೆಗಳು ಮನುಷ್ಯರಿಗೆ ಹರಡುವ ಪ್ರಮಾಣ ತುಂಬಾ ಕಡಿಮೆ. ಬ್ರುಸಿಲ್ಲಾ ಬ್ಯಾಕ್ಟೀರಿಯಾ ಕೊರೋನಾದಂತೆ ಮಾರಕ ಅಲ್ಲ. ಈ ರೋಗದಿಂದ ಚೀನಾದಲ್ಲಿ ಇಲ್ಲಿಯವರೆಗೆ ಯಾರೋಬ್ಬರೂ ಸಹಾ ಮೃತಪಟ್ಟಿಲ್ಲ.

2019ರ ನವೆಂಬರ್‍ನಲ್ಲಿ ಬ್ರುಸಿಲ್ಲಾ ಬ್ಯಾಕ್ಟೀರಿಯಾ ಸ್ಪೋಟಗೊಂಡ ನಂತರ ಚೀನಾ ಸರಕಾರವು ಲಾನ್‍ಝೌನ ವೆಟರ್ನರಿ ರೀಸರ್ಚ್ ಇನ್ಸ್ಟಿಟ್ಯೂಟ್ ಔಷಧ ಕಾರ್ಖಾನೆಯ ಲೈಸೆನ್ಸ್ ಅನ್ನು ರದ್ದುಗೊಳಿಸಿತ್ತು. ಅಲ್ಲದೆ ಕಾಯಿಲೆ ಸ್ಪೋಟಕ್ಕೆ ಕಾರಣರಾದ 8 ಜನರ ಮೇಲೆ ಕಠಿಣ ಕ್ರಮವನ್ನೂ ಸಹಾ ಕೈಗೊಂಡಿತ್ತು. ಈ ಘಟನೆಯಾಗಿ ಒಂದು ತಿಂಗಳ ನಂತರ ಅಂದರೆ ಡಿಸೆಂಬರ್ 2019ಕ್ಕೆ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲ ಬಾರಿ ಕೊರೋನಾ ಸೋಂಕು ಕಾಣಿಸಿಕೊಂಡು ವಿಶ್ವವ್ಯಾಪಿ ತನ್ನ ಕರಾಳ ಬಾಹುಬಂಧನವನ್ನು ಚಾಚಿ ಎಲ್ಲರ ಜೀವನ ಲೆಕ್ಕಾಚಾರವನ್ನೇ ಬದಲಿಸಿ ಬಿಟ್ಟಿದ್ದು ಅದಕ್ಕೆ ಇನ್ನೂ ಸಹಾ ಸೂಕ್ತ ಲಸಿಕೆ ವ್ಯವಸ್ಥೆ ಆಗಿಲ್ಲ.

ಕೊರೋನಾಗೆ ಇಂದು ರಾಜ್ಯದಲ್ಲಿ ದಾಖಲೆಯ ಬಲಿ!

ರಾಜ್ಯದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 8626 ಮಂದಿಗೆ ಸೋಂಕು ತಗುಲಿದ್ದು 179 ಜನ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಬೆಂಗಳೂರು ನಗರದಲ್ಲಿ 37, ಬಳ್ಳಾರಿ 25, ಶಿವಮೊಗ್ಗ 18, ಮೈಸೂರು 17, ದಕ್ಷಿಣ ಕನ್ನಡದ 11 ಜನರೂ ಸೇರಿದ್ದಾರೆ. ಕೊರೋನಾದಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟೂ ಮೃತಪಟ್ಟವರ ಸಂಖ್ಯೆ 7808 ಆಗಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!