ಬೋನ್ಸಾಯ್ ಮನೆ : ಮನುಷ್ಯನ ಛಾಯೆ ಮರದ ನೆರಳನ್ನು ಸಂಧಿಸುವ ತಾಣ

ಬೋನ್ಸಾಯ್ ಮನೆ  ಮನುಷ್ಯನ ಛಾಯೆ ಮರದ ನೆರಳನ್ನು ಸಂಧಿಸುವ ತಾಣ.ಬೋನ್ಸಾಯ್ ಕಲೆಯು ಅಮೂಲ್ಯವಾದ ಮರವನ್ನು ಬಹಳ ಪುಟ್ಟ ರೂಪದಲ್ಲಿ ಸಂರಕ್ಷಿಸುವ ಅತ್ಯುತ್ತಮ ವಿಧಾನ. 

ಅನಾದಿ ಕಾಲದಿಂದಲೂ ಕಲೆಯು ಮಾನವೀಯತೆ ಮತ್ತು ದೈವತ್ವವನ್ನು ಸಂಪರ್ಕಿಸಲು ಮಾಧ್ಯಮವಾಗಿದೆ. ಬೋನ್ಸಾಯ್ ಪ್ರಕೃತಿಯೊಂದಿಗೆ ಸಂಬಂಧಿಸಿರುವ ಕಲೆಯಾಗಿದ್ದು, ಇದು ನಮ್ಮ ಮನಸ್ಸನ್ನು ಶುದ್ಧೀಕರಿಸುತ್ತದೆ. 2016ರಲ್ಲಿ ಸ್ಥಾಪಿಸಲಾದ ``ಬೋನ್ಸಾಯ್ ಮನೆ”ಯು ಈ ಪುಟಾಣಿ ಬೋನ್ಸಾಯ್‍ಗಳನ್ನು ಬೆಂಗಳೂರಿನ ಪ್ರತಿಯೊಂದು ಮನೆಗೂ ಹಾಗೂ ಅಂತಿಮವಾಗಿ ಎಲ್ಲಾ ಸ್ಥಳಗಳಿಗೂ ತಲುಪಿಸುವ ಗುರಿಯನ್ನು ಹೊಂದಿದೆ. ಸರಳವಾಗಿ ಹೇಳಬೇಕೆಂದರೆ, ಬೋನ್ಸಾಯ್ ಎಂದರೆ ಮರ ಅಥವಾ ಪಾತ್ರೆಯಲ್ಲಿರುವ ಗಿಡ. ಇದನ್ನು ಬೀಜ, ನರ್ಸರಿ ಗಿಡ, ಶಾಖೆಗಳನ್ನು ಕತ್ತರಿಸುವುದು ಅಥವಾ ಕಾಡು ಸಂಗ್ರಹದಿಂದಲೂ ಬೆಳೆಸಬಹುದು. ಈ ಕಲೆಗೆ ಇತರ ತಾಂತ್ರಿಕ ಕೌಶಲ್ಯಗಳಂತೆ ತಾಳ್ಮೆ ಮತ್ತು ವಿವೇಚನೆಯ ಅಗತ್ಯವಿದೆ.

bonsai-mane

ಆರಂಭದಲ್ಲಿ ಈ ಕಲೆಯನ್ನು ವಾಣಿಜ್ಯಿಕವಾಗಿ ಮಾಡುವುದು ಕಷ್ಟಕರವಾಗಿತ್ತು. ಬೋನ್ಸೈ ವಸ್ತು, ಗಿಡ ನೆಡುವ ಚಟ್ಟಿಗಳು ಮತ್ತು ಗ್ರಾಹಕರು ಗಿಡಗಳನ್ನು ಖರೀದಿಸುವುದು ಕಷ್ಟಕರವಾಗಿತ್ತು. ಸ್ಥಳೀಯವಾಗಿ ಅನುಸರಿಸಲು ನಾವು ಯಾವುದೇ ಬೋನ್ಸೈ ವ್ಯಾಪಾರ ಮಾದರಿಯನ್ನು ಹೊಂದಿರಲಿಲ್ಲ. ಬೆಲೆಯನ್ನು ನಿಗದಿಪಡಿಸುವುದು ಸೇರಿದಂತೆ ಎಲ್ಲವನ್ನೂ `ಪ್ರಯೋಗ ಮಾಡಿ ನೋಡಿ ವಿಧಾನ’ದಿಂದ ಆರಂಭಿಸಿದೆವು. ನಾವು ಕಲೆಯ ಅವಶ್ಯಕತೆಗಳೊಂದಿಗೆ ಮಾರುಕಟ್ಟೆ ಅಗತ್ಯಗಳನ್ನು ವಿಶ್ಲೇಷಿಸಿ, ಕಲೆಯನ್ನು ಉತ್ತೇಜಿಸಲು ಹೊಸ ಮಾರ್ಕೆಟಿಂಗ್ ತಂತ್ರಗಳನ್ನು ರೂಪಿಸಲಾಯಿತು. ಕ್ರಮೇಣ ನಾವು ಬೋನ್ಸಾಯ್ ಖರೀದಿಸಲು ಆಸಕ್ತಿ ಹೊಂದಿರುವ ಅನೇಕ ಜನರನ್ನು ತಲುಪಲಾರಂಭಿಸಿದೆವು.

ನಮ್ಮ ಜಗತ್ತು ಇಂದು ನಕಾರಾತ್ಮಕತೆ, ಒತ್ತಡ ಮತ್ತು ಅಶುದ್ಧತೆಯಿಂದ ತುಂಬಿರುವ ಯಂತ್ರವಾಗಿದೆ. ಹೆಚ್ಚಿರುವ ಜನಸಂಖ್ಯೆ ಮತ್ತು ನಗರೀಕರಣದಿಂದಾಗಿ ಅನೇಕ ಮರಗಳನ್ನು ಕಡಿದು ನಾವು ಹಸಿರನ್ನು ನಾಶಗೊಳಿಸುತ್ತಿದ್ದೇವೆ. ಬೋನ್ಸಾಯ್ ಕಲೆಯು ಅಮೂಲ್ಯವಾದ ಮರವನ್ನು ಬಹಳ ಪುಟ್ಟ ರೂಪದಲ್ಲಿ ಸಂರಕ್ಷಿಸುವ ಅತ್ಯುತ್ತಮ ವಿಧಾನ. ಬೋನ್ಸಾಯ್ ಅನ್ನು ಟೆರೇಸ್, ಬಾಲ್ಕನಿ ಅಥವಾ ಉದ್ಯಾನದಲ್ಲಿ ಇಡಬಹುದು. ಬೋನ್ಸಾಯ್ನ್ನು ಇಂದು ಉಡುಗೊರೆಯಾಗಿ ನೀಡುವುದು ಸಹ ಹೊಸ ಟ್ರೆಂಡ್ ಆಗಿದೆ.

ಮನುಷ್ಯನಿಗೆ ಉಸಿರಾಡಲು ಗಾಳಿಯನ್ನು ಒದಗಿಸುವುದು ಮರಗಳು ಮತ್ತು ಸಸ್ಯಗಳು. ಆದ್ದರಿಂದ “ಬೋನ್ಸಾಯ್ ಮನೆ”ಯು ಸಸ್ಯವು ಸ್ವತಃ ಒಂದು ಜೀವ ರೂಪ ಮತ್ತು ಜೀವಂತವಾಗಿದೆ ಎಂಬ ಬಲವಾದ ತತ್ವವನ್ನು ಅನುಸರಿಸುತ್ತದೆ. ಇಲ್ಲಿ ಒದಗಿಸಲಾದ ಸಸ್ಯದ ಗುಣಮಟ್ಟವು ಅತ್ಯುತ್ತಮವಾಗಿರುತ್ತದೆ. ಮಾರುಕಟ್ಟೆಗೆ ಪರಿಚಯಿಸುವ ಮೊದಲು ನಾವು ಇವುಗಳ ವೈವಿಧ್ಯತೆಯನ್ನು ಅಧ್ಯಯನ ಮಾಡುತ್ತೇವೆ. ಬೋನ್ಸಾಯ್ ಮನೆ ಅನೇಕ ಬೋನ್ಸಾಯ್ ಉತ್ಸಾಹಿಗಳನ್ನು ಸೃಷ್ಟಿಸಿದೆ ಮತ್ತು ಇದಕ್ಕೆ ಪ್ರತಿಯಾಗಿ ಅವರು, ಕಲೆಯನ್ನು ಹರಡಲು ಸಹಾಯ ಮಾಡುತ್ತಾರೆ. ಬೋನ್ಸಾಯ್ ಮನೆ ಒಂದು ವ್ಯಾಪಾರದ ಮನೆಯಲ್ಲ ಅಥವಾ ತೋಟಗಾರಿಕೆ ಕೇಂದ್ರವಲ್ಲ, ಮನುಷ್ಯನ ಛಾಯೆ ಮರದ ನೆರಳನ್ನು ಸಂಧಿಸುವ ತಾಣ.

ಬೋನ್ಸಾಯಿ ಗಿಡಗಳ ಆಯ್ಕೆ ಹೀಗಿರಲಿ

1. ಮನೆಯ ಅಂದ ಹೆಚ್ಚಿಸುವ ಬೋನ್ಸಾಯಿ ಮರಗಳ ಆಯ್ಕೆ, ನಿರ್ವಹಣೆಗೆ ಅಷ್ಟೇ ಎಚ್ಚರಿಕೆ ವಹಿಸಬೇಕು. ಪಟ್ಟಣದ ಮನೆಗಳಲ್ಲಿ ಬೋನ್ಸಾಯಿ ಮರಗಳನ್ನು ಸುಲಭವಾಗಿ ಬೆಳೆಸಬಹುದು. ಸಾಮಾನ್ಯವಾಗಿ ಸಣ್ಣ ಎಲೆಗಳಿರುವ ಮರಗಳನ್ನು ಆಯ್ಕೆ ಮಾಡಿಕೊಂಡರೆ ನಿರ್ವಹಣೆ ಮಾಡುವುದು ಸುಲಭ.

2. ಬೋನ್ಸಾಯಿ ಸಸಿಗಳು ಎಷ್ಟು ಆರೋಗ್ಯವಾಗಿರುತ್ತದೊ ಅಷ್ಟು ಚೆನ್ನಾಗಿ ಬೆಳೆಯುತ್ತದೆ. ಮನೆಯ ಅಂದವನ್ನು ಕೂಡ ಹೆಚ್ಚಿಸಿ ಶುದ್ಧ ಗಾಳಿಯನ್ನು ನೀಡುತ್ತದೆ.

3. ಬೋನ್ಸಾಯಿ ಮನೆಯ ಅಂದ ಹೆಚ್ಚಿಸುತ್ತದೆ ಎಂದ ಮಾತ್ರಕ್ಕೆ ಅದನ್ನು ಎಲ್ಲೆಂದರಲ್ಲಿ ಇಡಲು ಸಾಧ್ಯವಿಲ್ಲ. ಕೆಲ ಒಳಾಂಗಣ ಸಸಿಗಳು ನೆರಳಿನಲ್ಲಿ ಬೆಳೆಯುತ್ತವೆ. ಆದರೆ ಬೋನ್ಸಾಯ್ ಸಸಿಗಳಿಗೆ ಸೂರ್ಯನ ಬಿಸಿಲು ಬೇಕು. ಆದ್ದರಿಂದ ಕತ್ತಲೆಯಲ್ಲಿ ಇಡಬಾರದು. ಸಾಕಷ್ಟು ಗಾಳಿ, ಬೆಳಕು ಇರುವ ಸ್ಥಳದಲ್ಲಿಯೇ ಇಡಬೇಕು. ಕುಂಡ ಇಟ್ಟ ಜಾಗದಲ್ಲಿ ತೇವಾಂಶ ಮತ್ತು ಉಷ್ಣಾಂಶ ಗಮನಿಸುತ್ತಿರಬೇಕು.

https://vydyaloka.in/wp-admin/post.php?post=9360&action=edit&classic-editor#:~:text=ATTACHMENT%20DETAILS-,Ajay-founder-Bonsai-Mane,-.jpg

ಅಜಯ್ ಹೆಚ್.
ಬೋನ್ಸಾಯ್ ಮನೆ, 1ನೇ ಮುಖ್ಯರಸ್ತೆ,
3ನೇ ಇ ಅಡ್ಡರಸ್ತೆ, ಮಲ್ಲೇಶ್‍ಪಾಳ್ಯ, ಬೆಂಗಳೂರು-75
www.bonsaimane.com ಮೊ.: 77601 82271

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!