ಬಿ-ಕ್ಲೀನ್ ಬೇವಿನ ನೈರ್ಮಲ್ಯ ಉತ್ಪನ್ನಗಳು ಮಾರುಕಟ್ಟೆಗೆ

ಬಿ-ಕ್ಲೀನ್ ಬೇವಿನ ನೈರ್ಮಲ್ಯ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಬೇವು-ಬೆಲ್ಲ-ನಿತ್ಯ ಈ ಸೂತ್ರದಡಿಯಲ್ಲಿ ಕೇಶವ ಕೆಮಿಕಲ್ ಇಂಡಸ್ಟ್ರಿಯವರು, ಬೇವಿನ ಸದುಪಯೋಗವಾಗಲೆಂದು ಫಿನಾಯಿಲ್‍ನಲ್ಲಿ ಸಮೀಕರಿಸಿ ಮಾರುಕಟ್ಟೆಗೆ `ಬಿ-ಕ್ಲೀನ್’ ಎಂಬ ಬ್ರಾಂಡ್ ಹೆಸರಿನಲ್ಲಿ ಪರಿಚಯಿಸಿದ್ದಾರೆ. ಇಂತಹ ನೈಸರ್ಗಿಕ ಉತ್ಪನ್ನಗಳನ್ನು ಉಪಯೋಗಿಸಿದರೆ ಆರೋಗ್ಯ ಕ್ರಾಂತಿಯನ್ನೇ ಮನುಷ್ಯ ಸೃಷ್ಟಿಸಿಕೊಳ್ಳಬಹುದು ಹಾಗೂ ಆರ್ಥಿಕವಾಗಿಯೂ ಸದೃಢರಾಗಬಹುದು.
bevu-B-clean

ಪೃಥ್ವಿಯಲ್ಲಿ ಪ್ರಕೃತಿಯು ಎಲ್ಲ ಮಾನವರು ಪ್ರಾಣಿ, ಪಕ್ಷಿ, ಜೀವ, ಜಲ, ಜಂತುಗಳು ಆರೋಗ್ಯಪೂರ್ಣವಾಗಿ ಬದುಕಲು ಹೇರಳವಾಗಿ ಸಸ್ಯ ಸಂಪತ್ತನ್ನು ನೀಡಿದೆ. ಅದನ್ನು ಮಾನವರು ವಿವೇಕ ಪ್ರಜ್ಞೆಯಿಂದ ಉಪಯೋಗಿಸಿಕೊಂಡರೆ ಮಾತ್ರ ಅದರ ಸದುಪಯೋಗವನ್ನು ಪಡೆಯಬಲ್ಲರು. ಅಂತಹ ಸಸ್ಯ ಸಂಕುಲಗಳನ್ನು ಬೆಳೆಸಿ ಉಳಿಸಿದರೆ ಮಾತ್ರ ಕೃತಜ್ಞತೆ ಸಲ್ಲಿಸಿದಂತೆ. ಬೇವು-ಬೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಹಬ್ಬದ ದಿನ ಬೇವು ಬೆಲ್ಲ ತಿಂದರೂ ಮರುದಿನದಿಂದ ಬೇವನ್ನು ಮರೆತು ಬೆಲ್ಲವನ್ನು ಮಾತ್ರ ಜ್ಞಾಪಿಸಿಕೊಳ್ಳುತ್ತೇವೆ. ಬೆಲ್ಲ ಕೇವಲ ದೇಹಕ್ಕೆ ಪುಷ್ಟಿಯನ್ನು ಕೊಟ್ಟರೆ, ಬೇವು ಒಳ-ಹೊರ ಎರಡರಲ್ಲೂ ಅದ್ಭುತವಾದ ಕೆಲಸವನ್ನು ಮಾಡುತ್ತದೆ.

ಬೇವು ಬ್ಯಾಕ್ಟೀರಿಯಾ ವಿರೋಧಿ ಗುಣ

ಬೇವು ಬದುಕಲು ಎಷ್ಟು ಮಹತ್ವ ಎಂದರೆ ಇರು – ಬಿಡು ಅಷ್ಟರ ಮಟ್ಟಿಗೆ. ಅದರಲ್ಲೂ ಇಂತಹ ವಿಷಮ ಸ್ಥಿತಿಯಲ್ಲೂ ಬೇವು ಅದ್ಭುತವಾದ ಕೆಲಸವನ್ನು ಮಾಡುತ್ತದೆ. ಬೇವು ಬ್ಯಾಕ್ಟೀರಿಯಾ ವಿರೋಧಿ ಗುಣ ಇರುವುದರಿಂದ ಪ್ರತಿಯೊಬ್ಬರು ತಮ್ಮ ಮನೆ, ಹಾಸ್ಪಿಟಲ್, ಸ್ಕೂಲ್, ಕಾಲೇಜು, ಆಫೀಸ್ ಇತ್ಯಾದಿ ಇತ್ಯಾದಿ ಮನೆಯೊಳಗೇ ಹೊರಗೆ ಉಪಯೋಗಿಸುವುದರಿಂದ ನೆಲದ ಮೇಲಿನ ಹಾಗು ವಾತಾವರಣದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಸಂರಕ್ಷಿಸಿಕೊಳ್ಳಬಹುದು. ಬೇವು ಅತ್ಯಂತ ಕಹಿಗುಣವುಳ್ಳದ್ದಾಗಿದ್ದರೂ ಅದು ವಾತಾವರಣಕ್ಕೆ ಸಿಹಿಯನ್ನು ಕೊಡುವಂತಹದ್ದು. ಅದರ ಕಾಂಡದಿಂದ ಹಿಡಿದು ಎಲೆಯವರೆಗೂ ಬಹಳ ಉಪಯುಕ್ತ. ಬೇವಿನ ಎಣ್ಣೆ ವಿವಿಧ ಉಪಯೋಗಕ್ಕೆ ಬಂದರೂ ಅದರ ಲಾಭವನ್ನು ಮನುಷ್ಯ ಉಪಯೋಗಿಸಿಕೊಳ್ಳದಿರುವುದಕ್ಕೆ ವಿಷಾದವಾಗುತ್ತದೆ. ಅದೇಕೋ ಮನುಷ್ಯನ ಗುಣ ಸುಲಭವಾಗಿ ಅತ್ಯವಶ್ಯಕವಾಗಿದ್ದರೂ ಯಾಕೋ ತಾತ್ಸಾರ ಮನೋಭಾವ ಮಾಡುವುದು ಆಶ್ಚರ್ಯ.

ಕೃಷಿಯಲ್ಲಿ ಬೇವಿನಹಿಂಡಿ ಮಹತ್ವಪೂರ್ಣವಾಗಿದ್ದರೂ, ರಾಸಾಯನಿಕವನ್ನು ಹೆಚ್ಚು ಪ್ರೀತಿಸುತ್ತಿರುವುದಕ್ಕೆ ನಮ್ಮ ಅಜ್ಞಾನದ ಪರಮಾವಧಿಯೇ ಎನ್ನಬಹುದು. ಪ್ರಕೃತಿಯ ಅಂತರಾಳವನ್ನು ತಿಳಿಯದೆ ಮನಬಂದಂತೆ ವರ್ತಿಸುವವರ ವಿರುದ್ಧ ಕ್ರಾಂತಿಯೇ ಆಗಬೇಕು. ಪ್ರಕೃತಿಯಲ್ಲಿ ಸಿಗುವ ಇಂತಹ ಅದ್ಭುತವಾದ ಮರ, ಗಿಡ ಮತ್ತು ಸಸ್ಯಗಳಿಂದ ತಯಾರಿಸಲ್ಪಡುವ ಸ್ವಚ್ಛತಾ ಉತ್ಪನ್ನಗಳನ್ನು ಉಪಯೋಗಿಸಿದರೆ ಆರೋಗ್ಯ ಕ್ರಾಂತಿಯನ್ನೇ ಮನುಷ್ಯ ಸೃಷ್ಟಿಸಿಕೊಳ್ಳಬಹುದು ಹಾಗೂ ಆರ್ಥಿಕವಾಗಿಯೂ ಸದೃಢರಾಗಬಹುದು.

B-clean-products

ಬಿ-ಕ್ಲೀನ್ ಬೇವಿನ ನೈರ್ಮಲ್ಯ ಉತ್ಪನ್ನಗಳು ಮಾರುಕಟ್ಟೆಗೆ

ಬೇವು -ಬೆಲ್ಲ-ನಿತ್ಯ ಈ ಸೂತ್ರದಡಿಯಲ್ಲಿ ಕೇಶವ ಕೆಮಿಕಲ್ ಇಂಡಸ್ಟ್ರಿಯವರು, ಬೇವಿನ ಸದುಪಯೋಗವಾಗಲೆಂದು ಫಿನಾಯಿಲ್‍ನಲ್ಲಿ ಸಮೀಕರಿಸಿ ಮಾರುಕಟ್ಟೆಗೆ `ಬಿ-ಕ್ಲೀನ್’ ಎಂಬ ಬ್ರಾಂಡ್ ಹೆಸರಿನಲ್ಲಿ ಪರಿಚಯಿಸಿದ್ದಾರೆ. ಇಂತಹ ನೈಸರ್ಗಿಕ ಉತ್ಪನ್ನಗಳನ್ನು ಬಳಸುತ್ತ ನಾವು ನೀವು ಬೇವು-ಬೇಕು-ನಿತ್ಯ ಎನ್ನುವಂತಾದರೆ ಅದೆಷ್ಟು ಆರೋಗ್ಯ ಸುಂದರವಾಗುವುದಲ್ಲವೇ?

Raghavendra-s-hegde

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ರಾಘವೇಂದ್ರ ಎಸ್. ಹೆಗ್ಡೆ
ಕೇಶವ್ ಕೆಮಿಕಲ್ ಇಂಡಸ್ಟ್ರೀಸ್, ಹೋಮ್‍ಕೇರ್ ಪ್ರೊಡಕ್ಟ್, #29/3, ಪೈಪ್‍ಲೈನ್ ರಸ್ತೆ, ಮಹದೇಶ್ವರ ನಗರ, ವಿಶ್ವನೀಡಂ ಪೋಸ್ಟ್, ಬೆಂಗಳೂರು-91
ದೂ.: 9845781035, 9535028209
Email : keshavachemical15@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!