ಬೊಜ್ಜು ಕರಗಿಸುವ ಏಲಕ್ಕಿ

ಬೊಜ್ಜು ಕರಗಿಸುವ ಏಲಕ್ಕಿ – ಪಾಯಸದ ಘಮವನ್ನು ಹೆಚ್ಚಿಸಲು ಬಳಸುವ ಏಲಕ್ಕಿ ಅದ್ಭುತ ಔಷಧವೂ ಹೌದು. ಸರಿಯಾಗಿ ಬಳಸಿದರೆ ನಮಗೆ ಕಾಡುವ ದಿನ ನಿತ್ಯದ ಹಲವು ಖಾಯಿಲೆಗಳನ್ನು ತಡೆಯುವ ಮತ್ತು ಗುಣಪಡಿಸುವ ಶಕ್ತಿ ಏಲಕ್ಕಿಗೆ ಇದೆ. ಆಯುರ್ವೇದದ ಪ್ರಕಾರ ಲಘು ಗುಣ ಮತ್ತು ರೂಕ್ಷ ಗುಣಗಳನ್ನು ಅಂದರೆ ಲಘುವಾಗಿಸುವ ಮತ್ತು ಒಣಗಿಸುವ ಗುಣವನ್ನು ಹೊಂದಿರುವ ಏಲಕ್ಕಿಯು ಅತಿಯಾದ ಬೊಜ್ಜನ್ನು ಕರಗಿಸಿ ಬೇಡದ ಕೊಬ್ಬನ್ನು ಒಣಗಿಸುತ್ತದೆ. ಹಾಗಾಗಿ ಬೊಜ್ಜಿನಿಂದಾಗಿ ಹಲವು ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಏಲಕ್ಕಿ ಅತ್ಯುತ್ತಮವಾದ, ನಿತ್ಯ ಸೇವಿಸಬಹುದಾದ ಆಹಾರೌಷಧ. ಇದನ್ನು ಆಧುನಿಕ ಸಂಶೋಧನೆಗಳು ಮತ್ತೆ ಮತ್ತೆ ಹೇಳುತ್ತಿವೆ.

ಹಲವು ಸಂಶೋಧನೆಗಳ ಪ್ರಕಾರ ಹೊಟ್ಟೆಯ ಬೊಜ್ಜನ್ನು ಕರಗಿಸುವಲ್ಲಿ ಏಲಕ್ಕಿ ತುಂಬಾ ಒಳ್ಳೆಯ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ಬೊಜ್ಜಿನಿಂದ ಬಳಲುತ್ತಿರುವವರು ಪ್ರತಿದಿನ 500 ಮಿಲಿಯಿಂದ 1 ಗ್ರಾಂನಷ್ಟು ಏಲಕ್ಕಿಯನ್ನು ಬಳಸಬೇಕು. ವಾತ ಮತ್ತು ಕಫದೋಷಗಳನ್ನು ನಿಯಂತ್ರಿಸುವ ಇದು ಶ್ವಾಸಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಅತ್ಯಂತ ಲಾಭದಾಯಕ. ಹಾಗಾಗಿ ಶ್ವಾಸಾಂಗವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಬಳಸುವ ಔಷಧಗಳಲ್ಲಿ ಬಹುತೇಕವಾಗಿ ಏಲಕ್ಕಿಯನ್ನು ಉಪಯೋಗಿಸಿರುತ್ತಾರೆ. 30 ಗ್ರಾಂ ಏಲಕ್ಕಿ ಪುಡಿ ಮತ್ತು 10 ಗ್ರಾಂ ಕಲ್ಲು ಸಕ್ಕರೆ ಹಾಕಿ ಚೆನ್ನಾಗಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಪ್ರತಿದಿನ ನಾಲ್ಕೈದು ಚಿಟಿಕೆಯಷ್ಟು ಈ ಮಿಶ್ರಣವನ್ನು ಮೂರ್ನಾಲ್ಕು ಬಾರಿ ಸೇವಿಸಿದರೆ ಸಾಮಾನ್ಯವಾಗಿ ಕಾಡುವ ನೆಗಡಿ, ಕೆಮ್ಮು, ಗಂಟಲು ಒಣಗುವುದು, ಗಂಟಲು ಕಿರಿಕಿರಿಯಾಗುವುದು ಮತ್ತು ಮೂಗು ಕಟ್ಟುವ ಸಮಸ್ಯೆಗಳು ಬಹಳ ಬೇಗ ನಿವಾರಣೆಯಾಗುತ್ತವೆ.

bojju karagisuva ellaki

ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುವಲ್ಲಿಯೂ ಏಲಕ್ಕಿ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ. ಏಕೆಂದರೆ ಏಲಕ್ಕಿಗೆ ಜೀರ್ಣಶಕ್ತಿಯನ್ನು ಹೆಚ್ಚಿಸುವ, ಜಾಠರಾಗ್ನಿಯನ್ನು ವೃದ್ಧಿಸುವ ಶಕ್ತಿ ಇದೆ ಎಂದು ಆಯುರ್ವೇದ ಗ್ರಂಥಗಳು ಹೇಳುತ್ತವೆ. ಹಾಗಾಗಿ ಏಲಕ್ಕಿ, ಉಪ್ಪು (ಸಾಧ್ಯವಾದರೆ ಸೈಂಧವ ಲವಣ) ಮತ್ತು ಒಣಶುಂಠಿಯ ಪುಡಿಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ ಇಟ್ಟುಕೊಂಡು ಹೊಟ್ಟೆಯುಬ್ಬರದ ಸಮಸ್ಯೆಯಾದಾಗ ಈ ಮಿಶ್ರಣವನ್ನು ಪ್ರತಿದಿನ ಒಂದೆರಡು ಗ್ರಾಮಿನಷ್ಟು ದಿನಕ್ಕೆರಡು ಬಾರಿ ಆಹಾರದ ನಂತರ ಮಜ್ಜಿಗೆಯಲ್ಲಿ ಹಾಕಿ ಸೇವಿಸಬೇಕು.

ಪ್ರಯಾಣ ಮಾಡುವಾಗ ವಾಂತಿ, ತಲೆಸುತ್ತುವಿಕೆಯಂತಹ ಸಮಸ್ಯೆಗಳನ್ನು ತುಂಬಾ ಜನ ಅನುಭವಿಸುತ್ತಾರೆ. ಅದಕ್ಕೆ ಕೂಡಾ ಏಲಕ್ಕಿ ತುಂಬಾ ಒಳ್ಳೆಯ ಮದ್ದು. ಜೊನಿ ಬೆಲ್ಲಕ್ಕೆ ಏಲಕ್ಕಿ ಪುಡಿಯನ್ನು ಹಾಕಿ ಉಂಡೆಯ ರೀತಿ ಮಾಡಿ ಇಟ್ಟುಕೊಳ್ಳಬೇಕು. ಪ್ರಯಾಣ ಮಾಡುವಾಗ ಇದನ್ನು ಬಾಯಲ್ಲಿಟ್ಟು ಸ್ವಲ್ಪ ಸ್ವಲ್ಪವಾಗಿ ಸವಿಯುತ್ತಿದ್ದರೆ ಪ್ರಯಾಣ ಕಷ್ಟಕರವಾಗಿರುವುದಿಲ್ಲ. ಎರಡರಿಂದ ಮೂರು ಗ್ರಾಂನಷ್ಟು ಏಲಕ್ಕಿಯನ್ನು ಪುಡಿ ಮಾಡಿ ಎರಡು ಲೋಟ ಬಿಸಿ ನೀರಿಗೆ ಹಾಕಿ ಮುಚ್ಚಿಡಬೇಕು. ಇದು ತಣ್ಣಗಾದ ನಂತರ ಈ ನೀರನ್ನು ಬಳಸಿ ಬಾಯಿ ಮುಕ್ಕಳಿಸಿದರೆ ವಾಂತಿ ಬಂದಂತೆನಿಸುವುದು, ಗಂಟಲು ನೋವು, ಬಾಯಿಯ ದುರ್ವಾಸನೆಯ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಮೂತ್ರದ ಅಡೆತಡೆಗಳನ್ನು ನಿವಾರಿಸುವ ಗುಣವಿರುವ ಕಾರಣ ಇದನ್ನು ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಆಹಾರದಲ್ಲಿ ವಿಶೇಷವಾಗಿ ಬಳಸಬಹುದು. ಇದು ಮೂಲವ್ಯಾಧಿ, ಅಸ್ತಮಾ, ವಿಭಿಧ ರೀತಿಯ ಕೆಮ್ಮುಗಳು, ವಾತ ಮತ್ತು ಕಫಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ತುಂಬಾ ಲಾಭದಾಯಕವಾಗಿದೆ. ಹೃದಯದ ಶಕ್ತಿಯನ್ನು ಹೆಚ್ಚಿಸುವ, ಬಾಯಿ ರುಚಿಯನ್ನು ವರ್ಧಿಸುವ ಮತ್ತು ಪದೇಪದೇ ಆಗುವ ಸುಸ್ತನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇಷ್ಟೆಲ್ಲ ಒಳ್ಳೆಯ ಗುಣಗಳಿದ್ದರೂ ಅತಿಯಾಗಿ ಬಳಸಿದರೆ ವಿವಿಧ ರೀತಿಯ ಸಮಸ್ಯೆಗಳು ಉಂಟಾಗಬಹುದು. ಮಿತಿಮೀರಿ ಬಳಸಿದಾಗ ಸಂತಾನಹೀನತೆಯಂತಹ ಸಮಸ್ಯೆಗಳು ಕೂಡಾ ಉಂಟಾಗಬಹುದು ಎಂದು ಆಯುರ್ವೇದ ಹೇಳುತ್ತದೆ. ಹಾಗಾಗಿ ನಿತ್ಯವೂ ಬಳಸುವುದಿದ್ದರೆ ಹೆಚ್ಚೆಂದರೆ ದಿನದಲ್ಲಿ ಒಂದು ಗ್ರಾಂನಷ್ಟು ಏಲಕ್ಕಿಯನ್ನು ಮಾತ್ರ ಸೇವಿಸಬಹುದು.

Dr.venkatramana Hegde Nisargamane Sirsi
ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!