ಅಸ್ತಮಾ ರೋಗ ಪರಿಹಾರ ಹೇಗೆ?

ಅಸ್ತಮಾ ರೋಗ  ಹತೋಟಿಯಲ್ಲಿಟ್ಟುಕೊಂಡು ಯಾವುದೇ  ಔಷಧವನ್ನೂ ಬಳಸದೇ ಕೊನೆಯವರೆಗೂ ಬದುಕಬೇಕೆಂದರೆ ನಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು.ಮಳೆಗಾಲದಲ್ಲಿ ಮೋಡ ಕವಿಯುತ್ತಿದ್ದಂತೆ ಎಷ್ಟೋ ಪ್ರಾಣಿ ಪಕ್ಷಿಗಳು ಸಂಭ್ರಮ ಪಡುತ್ತವೆ. ಆದರೆ ಅಲರ್ಜಿ, ಅಸ್ತಮಾ ಇರುವ ರೋಗಿಗಳಿಗೆ ಈ ಕಾಲ ತುಂಬಾ ಕಷ್ಟದಾಯಕ. ಹಾಗಾಗಿ ಆ ಕಾಲವನ್ನು ಎದುರಿಸಲು ಯಾವ್ಯಾವ ರೀತಿಯಲ್ಲಿ ತಯಾರಿ ಮಾಡಿಕೊಳ್ಳಬಹುದು ಎಂಬುದನ್ನು ನೋಡೋಣ.

ಅಸ್ತಮಾ-ರೋಗ-ಪರಿಹಾರ-ಹೇಗೆ?

ಅಲರ್ಜಿ, ಅಸ್ತಮಾ, ಕೆಮ್ಮು, ಸೈನಸ್ ಸಮಸ್ಯೆಗಳು ಆನುವಂಶೀಯವಾಗಿ ಬರುತ್ತವಾದರೂ ಬಹುತೇಕ ಮೂಲ ಕಾರಣ ನಮ್ಮ ಜೀವನಶೈಲಿ. ಹಾಗಾಗಿ ಅಸ್ತಮಾವನ್ನು ಹತೋಟಿಯಲ್ಲಿಟ್ಟುಕೊಂಡು ಯಾವುದೇ ಔಷಧವನ್ನೂ ಬಳಸದೇ ಕೊನೆಯವರೆಗೂ ಬದುಕಬೇಕೆಂದರೆ ನಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು.

1. ಪ್ರತಿದಿನ ಸೂರ್ಯನಮಸ್ಕಾರದಂತಹ ಯೋಗಾಸನಗಳನ್ನು ಮಾಡಬೇಕು. ಬಹುಶಃ ಪ್ರಾಣಾಯಾಮದಷ್ಟು ಅಸ್ತಮಾವನ್ನು ಹತೋಟಿಯಲ್ಲಿಡುವ ವಿಧಾನ ಇನ್ನೊಂದಿರಲಿಕ್ಕಿಲ್ಲ. ಹಾಗಾಗಿ ನಿತ್ಯ ಪ್ರಾಣಾಯಾಮ ಬೇಕೇ ಬೇಕು. ಬೆಳಿಗ್ಗೆ ಸಮಯವಾಗದೇ ಹೋದರೆ ಸಂಜೆಯಾದರೂ ಮಾಡಲೇಬೇಕು.

2. ಸಾಮಾಜಿಕ ಜಾಲತಾಣದಲ್ಲಿ ಹತ್ತು ನಿಮಿಷದ ವೀಡಿಯೋ ನೋಡಲು ನಮಗೆ ಸಮಯವಿದ್ದರೂ ಐದು ನಿಮಿಷ ಕಪಾಲಭಾತಿ ಮಾಡಲು ಸಮಯವಿಲ್ಲವೆಂದು ನಾಳೆಗೆ ಮುಂದೂಡುತ್ತೇವೆ. ನಮ್ಮ ಕೈಯ್ಯಾರೆ ನಮ್ಮಲ್ಲಿ ರೋಗ ಬೆಳೆಯಲು ಬಿಡುತ್ತೇವೆ. ಜಲನೇತಿ, ಸೂತ್ರನೇತಿಗಳಂತಹ ಕ್ರಿಯೆಗಳನ್ನು ನಿಯಮಿತವಾಗಿ ಮನೆಯಲ್ಲೇ ಮಾಡಿಕೊಳ್ಳುವುದರಿಂದ ಎಷ್ಟೋ ಅನುಕೂಲವಾಗುವುದಲ್ಲದೇ ಪ್ರಾರಂಭಿಕ ಹಂತದಲ್ಲಿರುವ ಸೈನಸ್, ಅಲರ್ಜಿ, ಅಸ್ತಮಾದ ಸಮಸ್ಯೆಗಳು ಇವುಗಳಿಂದಲೇ ಪೂರ್ತಿಯಾಗಿ ವಾಸಿಯಾಗಿಬಿಡುತ್ತವೆ. ಕಾಲಕಾಲಕ್ಕೆ ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು.

3. ದಿನದ ಕೆಲ ಸಮಯವಾದರೂ ದೈಹಿಕ ಶ್ರಮವಿರುವ ಕೆಲಸ ಮಾಡಬೇಕು. ಹಿಂದಿನವರೆಲ್ಲಾ ಹಬ್ಬದ ದಿನಗಳ ಹೊರತಾಗಿ ಮತ್ತೆಲ್ಲಾ ದಿನಗಳಲ್ಲೂ ಲಘುಭೋಜನವನ್ನೇ ಮಾಡುತ್ತಿದ್ದರು. ಹಾಗೆ ಜೀರ್ಣಕ್ಕೆ ಸುಲಭವಾದ ಆಹಾರವನ್ನೇ ನಿತ್ಯ ಸೇವಿಸುವುದರಿಂದ ಅಸ್ತಮಾದಂತಹ ಸಮಸ್ಯೆಗಳು ಇಲ್ಲದಿದ್ದರೆ ಬರುವುದಿಲ್ಲ; ಇದ್ದರೆ ಉಲ್ಬಣಗೊಳ್ಳುವುದಿಲ್ಲ. ಜೀರ್ಣಕ್ಕೆ ತುಂಬಾ ಕಷ್ಟವಾದ, ಕರಿದ, ಕೃತಕವಾಗಿ ತಂಪಾಗಿಸಿದ ಆಹಾರಗಳನ್ನೇ ಹೆಚ್ಚಾಗಿ ಸೇವಿಸುವುದು, ಮೊದಲಿನ ಆಹಾರ ಜೀರ್ಣವಾಗುವ ಮೊದಲೇ ಮತ್ತೆ ಆಹಾರ ಸೇವಿಸುವುದು, ಸಂಸ್ಕರಿಸಿದ ಆಹಾರಗಳನ್ನು ಸೇವಿಸುವುದು ಇಂತಹ ರೂಢಿಗಳನ್ನು ಬಿಡಬೇಕು.

4. ಹಗಲುನಿದ್ದೆ ಮಾಡುವ ರೂಢಿಯಿದ್ದರೆ ಹಗಲುನಿದ್ದೆಯ ಅವಧಿಯನ್ನು ಕಡಿಮೆ ಮಾಡುತ್ತಾ ಬಂದು ಪೂರ್ತಿಯಾಗಿ ಬಿಟ್ಟುಬಿಡಬೇಕು. ರಾತ್ರಿ ಅತ್ಯಂತ ಲಘು ಭೋಜನ ಮಾಡಬೇಕು. ರಾತ್ರಿ ಊಟದ ನಂತರ ಕನಿಷ್ಟ ಒಂದು ಘಂಟೆ ಬಿಟ್ಟು ಮಲಗಬೇಕು.

Also read: ಹಗಲು ನಿದ್ರೆ – ಆರೋಗ್ಯಕ್ಕೆ ಉತ್ತಮವಲ್ಲ

ಅಸ್ತಮಾ - ಮನೆಮದ್ದುಗಳು:

dr hegde add

ದಮ್ಮಿನ ತೀವ್ರತೆಯಿಲ್ಲದ ಸಂದರ್ಭದಲ್ಲಿ ಮೇಲೆ ಹೇಳಿದ ಎಲ್ಲಾ ಮುನ್ನೆಚ್ಚರಿಕೆಗಳ ಜೊತೆಗೆ ಕೆಲವು ಮನೆಮದ್ದುಗಳನ್ನು ಮಾಡಿದರೆ ತುಂಬಾ ಸಹಾಯವಾಗುತ್ತದೆ.

1. ಇನ್ನು ಅಸ್ತಮಾ ತೀವ್ರಾವಸ್ಥೆಯಲ್ಲಿದ್ದು ವೈದ್ಯರನ್ನು ಭೇಟಿಯಾಗಲು ಸಾಧ್ಯವಾಗದೇ ಇದ್ದಾಗ ಸಾಸಿವೆ ಎಣ್ಣೆಗೆ ಉಪ್ಪು ಸೇರಿಸಿ ಬಿಸಿಮಾಡಿ, ಎದೆಗೆ, ಬೆನ್ನಿಗೆ ಮಸ್ಸಾಜ್ ಮಾಡಿ, ಆ ಜಾಗಗಳಿಗೆ ನೀರಿನ ಉಗಿ ಕೊಡಬೇಕು. ನೀರಿಗೆ ನೀಲಗಿರಿ ಎಣ್ಣೆಯನ್ನು ಬಿಟ್ಟು ಉಗಿ ಕೊಟ್ಟರೆ ಹೆಚ್ಚು ಸಹಾಯವಾಗುತ್ತದೆ.

2. ಟೀ, ಕಾಫಿಗಳ ಬದಲಿಗೆ ಶುಂಠಿ, ಹಿಪ್ಪಲಿ, ಜೇಷ್ಠಮಧುಗಳ ಕಷಾಯ ಕುಡಿಯಬಹುದು.

3. ಕಫ ಸರಿಯಾಗಿ ಹೊರಗೆ ಬರದೆ ತೊಂದರೆಯಾಗುತ್ತಿದ್ದರೆ ಆಡುಮುಟ್ಟದ ಸೊಪ್ಪಿನ ರಸಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಒಂದು ವಾರ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

4. ಮೂರ್ನಾಲ್ಕು ಅಂಜೂರಗಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ಸೇವಿಸಬೇಕು.

5. ಒಂದು ವೀಳ್ಯದೆಲೆಯಲ್ಲಿ ಐದು ಎಲೆ ತುಳಸಿ, ಒಂದು ಲವಂಗ, ಒಂದು ಚೂರು ಜೇಷ್ಠಮಧು ಹಾಕಿ ಪ್ರತಿ ಬಾರಿ ಊಟವಾದ ನಂತರ ಒಂದು ವಾರದ ಕಾಲ ಸೇವಿಸಬಹುದು.

6. ಕಾಳುಮೆಣಸು, ಶುಂಠಿ, ಹಿಪ್ಪಲಿಗಳ ಸಮಪ್ರಮಾಣದ ಮಿಶ್ರಣವನ್ನು ಅರ್ಧ ಚಮಚ ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿ ನಿತ್ಯ ಸೇವಿಸುವುದರಿಂದ ಜೀರ್ಣಶಕ್ತಿಯೂ ಹೆಚ್ಚುತ್ತದೆ; ಅಸ್ತಮಾ ಕೂಡಾ ಹತೋಟಿಯಲ್ಲಿರುತ್ತದೆ.

ಆದರೆ, ಕೋವಿಡ್-19 ಅಥವಾ ಕೊರೋನಾ ರೋಗವು ತೀವ್ರವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಸಣ್ಣ ಪುಣ್ಣ ಉಸಿರಾಟದ ಸಮಸ್ಯೆಯನ್ನೂ ನಿರ್ಲಕ್ಷಿಸದೇ, ಮನೆಮದ್ದಿನಲ್ಲಿ ಕಾಲಹರಣ ಮಾಡದೇ ವೈದ್ಯರೊಂದಿಗೆ ಸಮಲೋಚಿಸಿದ ನಂತರ ಅವರ ಸಲಹೆಯಂತೇ ನಡೆದುಕೊಳ್ಳಬೇಕಾದ್ದು ನಮ್ಮ ಜವಾಬ್ದಾರಿ್ ಎಂಬುದನ್ನು ಮರೆಯುವಂತಿಲ್ಲ.

Also Read: ಮಳೆಗಾಲ-ಆರೋಗ್ಯಕರ ಜೀವನವನ್ನು ಹೇಗೆ ನಡೆಸುವುದು?

Dr-Venkatramana-Hegde-nisargamane

ಡಾ||ವೆಂಕಟ್ರಮಣ ಹೆಗಡೆ
ನಿಸರ್ಗಮನೆ,  ಶಿರಸಿ, ಉ.ಕ.
ದೂ:94487 29434/97314 60353
Email: drvhegde@yahoo.com
http://nisargamane.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!