ಹಗಲು ನಿದ್ರೆ – ಆರೋಗ್ಯಕ್ಕೆ ಉತ್ತಮವಲ್ಲ

ಹಗಲು ನಿದ್ರೆ – ಆರೋಗ್ಯಕ್ಕೆ ಉತ್ತಮವಲ್ಲ.ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಲವರು ಕೆಲಸವಿಲ್ಲದೆ ಹಗಲು ನಿದ್ರಿಸುವುದನ್ನು ಅಭ್ಯಾಸಮಾಡಿಕೊಂಡಿದ್ದಾರೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಗಲು ನಿದ್ರಿಸುವ ಬದಲು ಆ ಸಮಯವನ್ನು ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ನಿದ್ರೆಯೆಂಬುದು ಮನುಷ್ಯನ ಆರೋಗ್ಯವನ್ನು ಕಾಯ್ದಿರಿಸುವುದರಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಇಡೀ ದಿನ ನಾವು ಮಾಡುವ ಚಟುವಟಿಕೆಯಿಂದ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ಸಿಗುವುದು ನಾವು ಸರಿಯಾಗಿ ಎಂಟು ಗಂಟೆಗಳ ಕಾಲ ರಾತ್ರಿಯಲ್ಲಿ ನಿದ್ದೆ ಮಾಡಿದಾಗ ಮಾತ್ರ. ಆದರೆ ಇವತ್ತಿನ ಪರಿಸ್ಠಿತಿಯಲ್ಲಿ ಜನರು ರಾತ್ರಿ ಹಗಲು ಎನ್ನದೆ ಯಾವಾಗ ಬೇಕಾದಲ್ಲಿ ನಿದ್ರೆಯನ್ನು ಮಾಡುತ್ತಿದ್ದಾರೆ ಮತ್ತು ಇದರಿಂದ ಹಲವಾರು ರೋಗಗಳಿಗೆ ತುತ್ತಾಗುತಿದ್ದಾರೆ. ಪ್ರಕೃತಿಯ ಅನುಗುಣವಾಗಿ ನಾವು ರಾತ್ರಿಯಲ್ಲಿ ನಿದ್ದೆ ಮಾಡಬೇಕು ಮತ್ತು ಹಗಲಿನಲ್ಲಿ ಕಾರ್ಯಚಟುವಟಿಕೆಯಲ್ಲಿ ನಿರತರಾಗಿರಬೇಕು. ಆಯುರ್ವೇದ ಪ್ರಕಾರ ಹಗಲಿನಲ್ಲಿ ನಿದ್ರೆ ಮಾಡಿದರೆ ಕಫ ಮತ್ತು ಪಿತ್ತದ ಅಂಶ ಹೆಚ್ಚಾಗುತ್ತದೆ ಮತ್ತು ಕಫದ ಹಲವು ವ್ಯಾಧಿಗಳು ಸಂಭವಿಸುತ್ತದೆ.

ಹಗಲಿನಲ್ಲಿ ನಿದ್ರೆ ಮಾಡುವುದರಿಂದಾಗುವ ಆಗುವ ಪ್ರಭಾವ:

1. ದೇಹದಲ್ಲಿನ ಕಫದಂಶ ಹೆಚ್ಚುತ್ತದೆ

2. ದೇಹದಲ್ಲಿನ ಸಾರಾಂಶವನ್ನು ಸಂಚರಿಸುವ ಎಲ್ಲಾ ರಂದ್ರಗಳು ಮುಚ್ಚಿಕೊಳ್ಳುತ್ತದೆ

3. ದೇಹದಲ್ಲಾಗುವ ಹಲವು ರಾಸಾಯನಿಕ ಹಾಗೂ ನರಮಂಡಲದ ಕ್ರಿಯೆಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ

4. ಆಹಾರ ರುಚಿಸುವುದಿಲ್ಲ, ಹಸಿವು ಕಡಿಮೆಯಾಗುತ್ತದೆ, ತಿಂದ ಆಹಾರ ಪಚನವಾಗುವುದಿಲ್ಲ

5. ತಲೆ ಭಾರ, ತಲೆ ನೋವು, ಆಲಸ್ಯ, ಮೈ ಭಾರ ಉಂಟಗುತ್ತದೆ.

ಯಾವ ರೋಗಗಳಲ್ಲಿ ನಿಶಿದ್ಧ:

1.ಬೊಜ್ಜಿನ ರೋಗಿಗಳು, ಅಧಿಕ ಕೊಬ್ಬಿನಾಂಷ ಉಳ್ಳವರು ಹಗಲಲ್ಲಿ ನಿದ್ರೆ ಮಾಡಬಾರದು, ಕೆಲವೊಂದು ಅಧ್ಯಯನದ ಪ್ರಕಾರ 10 ಪ್ರತಿಶತ ವೇಗವಾಗಿ ದೇಹದ ತೂಕ ಹಗಲಲ್ಲಿ ನಿದ್ರೆ ಮಾಡುವುದರಿಂದ ಹೆಚ್ಚುತ್ತದೆ.

2. ಅತೀ ಹೆಚ್ಚು ಕ್ಯಾಲರಿಯಿಂದ ಉಂಟಾಗುವ ರೋಗಗಳಾದ ಸಕ್ಕರೆ ರೋಗ, ಥೈರಾಯಿಡ್ ರೋಗ, ರಕ್ತದೊತ್ತಡ.

3. ಹಾರ್ಮೋನ್ಗಳ ವ್ಯತ್ಯಾಸದಿಂದಾಗುವ ಪಿ.ಸಿ.ಓ.ಡಿ, ಥೈರಾಯಿಡ್ ರೋಗ.

4. ವಸಂತ ಋತುವಿನಲ್ಲಿ ದೇಹದಲ್ಲಿನ ಕಫದ ಅಂಶ ಕರಗಿ ಹಲವು ರೋಗಗಳು ಬರುವುದರಿಂದ ಚೈತ್ರ, ವೈಶಖ ಮಾಸದಲ್ಲಿ ನಿಶಿದ್ದ.

ಯಾವಾಗ ನಿದ್ರೆ ಮಾಡಬಹುದು?

1. ಜ್ವರ, ತಲೆಸುತ್ತು, ವಾಂತಿ ಬರುವ ಮನೋಭಾವ ಇದ್ದಾಗ, ಗಂಟಲಿನ ರೋಗ ಇದ್ದಾಗ ಹಗಲಲ್ಲಿ ನಿದ್ರೆ ಮಾಡಬಹುದು.

2. ಗ್ರೀಶ್ಮ ಋತುವಿನಲ್ಲಿ – ಅತೀ ಹೆಚ್ಚು ಬಿಸಿಲು ಇದ್ದಾಗ, ರಾತ್ರಿಯ ದಿನಗಳು ಕಮ್ಮಿ ಇರುವುದರಿಂದ , ವಾತಾವರಣದಲ್ಲಿ ವಾತದ ಅಂಶ ಹೆಚ್ಚಾಗುವುದರಿಂದ ಈ ಮಾಸದಲ್ಲಿ ಮಾತ್ರ ಹಗಲು ನಿದ್ರೆ ಮಾಡಬಹುದು.

3. ರೋಗದಿಂದ ಬಳಲಿ, ಕೃಶವಾಗಿದ್ದರೆ, ದೇಹದಲ್ಲಿನ ಶಕ್ತಿ, ಸಾರಾಂಶ ಕಮ್ಮಿ ಆಗಿದ್ದಾಗ, ಪ್ರಯಾಣ, ತುಂಬಾ ಸುಸ್ತಾಗುವಹಾಗೆ ದೈಹಿಕ ಕೆಲಸ ಮಾಡಿದ ನಂತರ ಹಗಲು ನಿದ್ರೆ ಮಾಡಬಹುದು

4. ಇಡೀ ರಾತ್ರಿ ನಿದ್ದೆ ಮಾಡದಿದ್ದರೆ, ಹಗಲಿನಲ್ಲಿ ಕೇವಲ ರಾತ್ರಿನಿದ್ರೆಯ ಅರ್ಧ ಸಮಯದಷ್ಟು ಮಾತ್ರ ಖಾಲಿ ಹೊಟ್ಟೆಯಲ್ಲಿ ಹಗಲು ನಿದ್ರೆ ಮಾಡಬಹುದು.

ಡಾ. ಮಹೇಶ್ ಶರ್ಮಾ ಎಂ
ಆಯುರ್ವೇದ ತಜ್ನರು
ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ
ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು
Mob: 9964022654

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!