ಅಂಡವಾಯು ಅಥವಾ ಹೈಡ್ರೋಸೀಲ್ ಒಂದು ಸಾಮಾನ್ಯ ಅನಾರೋಗ್ಯ ಸಮಸ್ಯೆ. ಸಾಧಾರಣವಾಗಿ ಇವು ನೋವು ಉಂಟು ಮಾಡುವುದಿಲ್ಲ. ಹೈಡ್ರೋಸೀಲ್ ಸಮಸ್ಯೆ ಅಪಾಯಕಾರಿಯಲ್ಲ, ಚಿಕಿತ್ಸೆ ಬೇಕಾಗಿಲ್ಲ. ಅದಾಗ್ಯೂ ಅಂಡಕೋಶದಲ್ಲಿ ಊತವಿದ್ದರೆ, ನಿಮ್ಮ ವೈದ್ಯರನ್ನು ಕಂಡು ಇದು ವೃಷಣ ಕ್ಯಾನ್ಸರ್ ಅಥವ ಇತರ ಪರಿಸ್ಥಿತಿಯಂಥ ಸಮಸ್ಯೆ ಇಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳಿ.
ಹೈಡ್ರೋಸೀಲ್ ಪುರುಷರನ್ನು ಕಾಡುವ ಆರೋಗ್ಯ ಸಮಸ್ಯೆಗಳಲ್ಲಿ ಒಂದು. ಇದನ್ನು ಅಂಡವಾಯು ಎಂದೂ ಕರೆಯುತ್ತಾರೆ. ವೃಷಣದ ಸುತ್ತ ಅಂಡವೃದ್ಧಿಯ ಚೀಲದಲ್ಲಿ ದ್ರವ ತುಂಬಿಕೊಂಡು ಅಂಡಕೋಶ (ಶಿಶ್ನದ ಅಡಿಯಲ್ಲಿರುವ ಸಡಿಲ ಚೀಲ) ಊದಿಕೊಳ್ಳುವ ಸಮಸ್ಯೆಯನ್ನು ಅಂಡವಾಯು ಎಂದು ಕರೆಯುತ್ತಾರೆ. ಹುಟ್ಟಿದಾಗ ಶೇಕಡ 10ರಷ್ಟು ಗಂಡು ಶಿಶುಗಳಲ್ಲಿ ಈ ಸಮಸ್ಯೆ ಕಂಡುಬರುತ್ತದೆ. ಆದರೆ ಒಂದು ವರ್ಷದ ಒಳಗೆ ಯಾವುದೇ ಚಿಕಿತ್ಸೆ ಇಲ್ಲದೆ ಬಹುತೇಕ ಅಂಡವಾಯು ತೊಂದರೆ ನಾಪತ್ತೆಯಾಗುತ್ತದೆ. ಜತೆಗೆ ಉರಿ ಅಥವ ಅಂಡಕೋಶದೊಳಗೆ ಗಾಯದಿಂದ ಪುರುಷರಲ್ಲಿ ಹೈಡ್ರೋಸೀಲ್ ಗೋಚರಿಸಬಹುದು.
ಲಕ್ಷಣಗಳು
ಹೈಡ್ರೋಸೀಲ್‍ನ ಏಕೈಕ ಲಕ್ಷಣ ಅಥವ ಚಿನ್ಹೆ ಎಂದರೆ ಒಂದು ಅಥವ ಎರಡೂ ವೃಷಣಗಳಲ್ಲಿ ನೋವಿಲ್ಲದ ಊತ. ವಯಸ್ಕ ಪುರುಷರು ಅಂಡಕೋಶ ಊತದ ಭಾರದಿಂದ ಕಿರಿಕಿರಿ ಅನುಭವಿಸುತ್ತಾರೆ.
ವೈದ್ಯರನ್ನು ಯಾವಾಗ ಕಾಣಬೇಕು?
ನೀವು ಯಾವಾಗ ಭೇಟಿಯಾಗಬಹುದು: ಅಂಡಕೋಶ ಊತವಿದ್ದಾಗ ನೀವು ವೈದ್ಯರನ್ನು ಭೇಟಿಯಾಗಬೇಕು. ಊತಕ್ಕೆ ಗೆಡ್ಡೆ ಕಾರಣವಲ್ಲ ಎಂಬುದನ್ನು ದೃಢಪಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಕೆಲವೊಮ್ಮೆ ಹೆಡ್ರೋಸೀಲ್‍ನೊಂದಿಗೆ ಇಂಗ್ಯೂನಲ್ ಹರ್ನಿಯಾ (ಒಂದು ರೀತಿಯ ಅಂಡವಾಯು) ಥಳಕು ಹಾಕಿಕೊಂಡಿರುತ್ತದೆ. ಹರ್ನಿಯಾ ಸಮಸ್ಯೆಯೂ ಇದರ ಜೊತೆಗಿದ್ದಾಗ ಉದರ ಗೋಡೆಯ ದುರ್ಬಲ ಬಿಂದು ಅಂಡಕೋಶದವರೆಗೂ ಕರುಳಿನ ಕುಣಿಕೆಗೆ ಅವಕಾಶ ನೀಡುತ್ತದೆ. ಇಂಥ ಪರಿಸ್ಥಿತಿಯಲ್ಲಿ ಚಿಕಿತ್ಸೆ ಬೇಕಾಗುತ್ತದೆ.
ನಿಮ್ಮ ಮಗುವಿಗೆ: ನಿಮ್ಮ ಮಗುವಿನ ಅಂಡಕೋಶದಲ್ಲಿ ಊತ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ. ಇದು ಹೈಡ್ರೋಸೀಲ್‍ನಿಂದ ಉಂಟಾದ ಊತವೆಂಬುದನ್ನು ವೈದ್ಯರು ಖಚಿತಪಡಿಸಿದರೆ ಅದು ತಾನಾಗೆ ಕಣ್ಮರೆಯಾಗುತ್ತದೆ. ಒಂದು ವರ್ಷ ನಂತರ ಹೈಡ್ರೋಸೀಲ್ ಕಣ್ಮರೆಯಾಗದಿದ್ದರೆ ಅಥವ ಅದು ದೊಡ್ಡದಾದರೆ ಮತ್ತೆ ತಪಾಸಣೆ ನಡೆಸಿ ಚಿಕಿತ್ಸೆ ನೀಡಬೇಕಾಗುತ್ತದೆ.
ಕಾರಣಗಳು: ಗಂಡು ಶಿಶುಗಳಲ್ಲಿ ಹೈಡ್ರೋಸೀಲ್ ಗರ್ಭದಲ್ಲೇ ಬೆಳೆದಿರಬಹುದು. ಸಾಮಾನ್ಯವಾಗಿ ವೃಷಣಗಳು ಬೆಳೆಯುತ್ತಿರುವ ಮಗುವಿನ ಹೊಟ್ಟೆಯ ಟೊಳ್ಳು ಭಾಗದಿಂದ ಅಂಡಕೋಶಕ್ಕೆ ಇಳಿದಿರುತ್ತದೆ. ಸಣ್ಣ ಕೋಶವು ಪ್ರತಿ ವೃಷಣದೊಂದಿಗೆ ಸೇರಿಕೊಂಡು ವೃಷಣಗಳ ಸುತ್ತ ದ್ರವಕ್ಕೆ ಅವಕಾಶ ನೀಡುತ್ತದೆ.
ಬಹುತೇಕ ಪ್ರಕರಣಳಲ್ಲಿ, ಪ್ರತಿ ಸಣ್ಣಕೋಶ ಮುಚ್ಚಿಕೊಂಡು ದ್ರವ ಹೀರಲ್ಪಡುತ್ತದೆ. ಅದಾಗ್ಯೂ, ಸಣ್ಣಕೋಶ ಮುಚ್ಚಿಕೊಂಡ ನಂತರವೂ ದ್ರವ ಉಳೀದುಕೊಂಡಿದ್ದರೆ ಆ ಸ್ಥಿತಿಯನ್ನು ಸಂಪರ್ಕ ರಹಿತ ಅಂಡವಾಯು ಎಂದು ಕರೆಯಲಾಗುತ್ತದೆ. ಸಣ್ಣಕೋಶ ಮುಚ್ಚಲ್ಪಡುವುದರಿಂದ ಹೊಟ್ಟೆಗೆ ದ್ರವ ಹಿಂದಿರುಗಲು ಸಾಧ್ಯವಾಗುವುದಿಲ್ಲ. ಸಾಮಾನ್ಯವಾಗಿ ದ್ರವ ಒಂದು ವರ್ಷದೊಳಗೆ ಹೀರಲ್ಪಡುತ್ತದೆ.
ಕೆಲವು ಪ್ರಕರಣಗಳಲಿ ಅದಾಗ್ಯೂ ಸಣ್ಣ ಕೋಶ ತೆರೆದುಕೊಂಡೇ ಇರುತ್ತದೆ. ಈ ಸ್ಥಿತಿಯನ್ನು ಸಂಪರ್ಕ ಅಂಡವಾಯು ಎನ್ನಲಾಗುತ್ತದೆ. ಸಣ್ಣಕೋಶ ಗಾತ್ರದಲ್ಲಿ ಒದಲಾಗಬಹುದು ಅಥವಾ ಅಂಡಕೋಶದ ಸಣ್ಣಕೋಶ ಕುಗ್ಗಿದಾಗ ದ್ರವವು ಹೊಟ್ಟೆಯೊಳಗೆ ಹಿಂದಿರುಗಿ ಹರಿಯಬಹುದು. ವಯಸ್ಸಾದ ಪುರುಷರಲ್ಲಿ ಅಂಡಕೋಶದಲ್ಲಿ ಉರಿ ಅಥವಾ ಗ್ರಂಥಿಕೋಶದೊಳಗೆ ಗಾಯದ ಪರಿಣಾಮವಾಗಿ ಹೈಡ್ರೋಸೀಲ್ ಅಭಿವೃದ್ಧಿಯಾಗಬಹುದು. ಉರಿಯಿಂದಾಗಿ ಪ್ರತಿ ವೃಷಣದ ಅಥವಾ ಒಂದು ವೃಷಣದ ಹಿಂಭಾಗದ ಪುಟ್ಟ ಸುರುಳಿ ಟ್ಯೂಚ್‍ನ ಸೋಂಕಿಗೆ ಕಾರಣವಾಗಬಹುದು.
ತೊಂದರೆ ಅಂಶಗಳು: ಬಹುತೇಕ ಅಂಡವಾಯು ಪ್ರಕರಣಗಳು ಹುಟ್ಟಿನಿಂದಲೇ ಬಂದಿರುತ್ತದೆ. ಇಲ್ಲದಿದ್ದರೆ 40 ಅಥವಾ ಅದಕ್ಕೂ ಮೇಲ್ಪಟ್ಟು ವಯೋಮಾನದವರಲ್ಲಿ ಸಾಮಾನ್ಯವಾಗಿ ಗೋಚರಿಸುತ್ತದೆ.
ಇತರ ಅಂಶಗಳು: ಅಂಡಕೋಶಕ್ಕೆ ಪೆಟ್ಟು, ಸೋಂಕು, ಲೈಂಗಿಕ ರೋಗಗಳು ಮತ್ತು ರೇಡಿಯೇಷನ್ ಥೆರಪಿ(ವಿಕಿರಣ ಚಿಕಿತ್ಸೆ)
ತೊಡಕುಗಳು: ಅಂಡವಾಯು ಮಾರಕ ಅಥವಾ ತುಂಬಾ ಅಪಾಯಕಾರಿಯಾದ ರೋಗವಲ್ಲ ಮತ್ತು ಇದು ಪುರುಷರ ಫಲವತ್ತತೆ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುವುದಿಲ್ಲ. ಅದಾಗ್ಯೂ, ವೃಷಣಗಳು ತೀವ್ರ ತೊಂದರೆಗೆ ಒಳಗಾಗಿ ಗಂಭೀರ ತೊಡಕುಗಳಿಗೆ ಕಾರಣವಾಗುತ್ತದೆ.
ಸೋಂಕು ಅಥವ ಗೆಡ್ಡೆ:
ಸೋಂಕು ಅಥವಾ ಗೆಡ್ಡೆ ವೀರ್ಯ ಉತ್ಪಾದನೆ ಅಥವಾ ಕಾರ್ಯವನ್ನು ಕುಂಠಿತಗೊಳಿಸಬಹುದು. ಇಂಗ್ಯೂನಲ್ ಹರ್ನಿಯಾ ಒಂದು ಅಪಾಯಕಾರಿ ಅನಾರೋಗ್ಯ ಸಮಸ್ಯೆ. ಕರುಳಿನ ಒಂದು ಕುಣಿಕೆ ಹೊಟ್ಟೆಯ ಗೋಡೆಯ ದುರ್ಬಲ ಬಿಂದುವಿನಲ್ಲಿ ಸಿಕ್ಕಿ ಹಾಕಿಕೊಂಡು ಉಂಟು ಮಾಡುವ ಸಮಸ್ಯೆಯೇ ಇಂಗ್ಯೂನಲ್ ಹರ್ನಿಯಾ ಇದನ್ನು ನಿರ್ಲಕ್ಷಿಸಿದರೆ ಅಥವಾ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಾರಣಾಂತಿಕವಾಗಬಹುದು.
ಇದು ಮಕ್ಕಳಿಗೆ ತುಂಬಾ ಕಾಟ ಕೊಡುತ್ತದೆ. ಅಂಡಕೋಶದಲ್ಲಿ ದಿಢೀರ್ ತೀವ್ರ ನೋವು, ಅಥವಾ ಊತ ಕಾಣಿಸಿಕೊಳ್ಳತ್ತದೆ. ಇದು ಹೆಚ್ಚಾಗಿ ಅಂಡಕೋಶಕ್ಕೆ ಪೆಟ್ಟಾದ ಕೆಲ ಗಂಟೆಗಳ ನಂತರ ಉಲ್ಬಣಗೊಳ್ಳುತ್ತದೆ. ಪರಿಸ್ಥಿತಿ ಹೀಗಿದ್ದಾಗ ನಿಮಗೆ ಅಥವಾ ನಿಮ್ಮ ಮಗುವಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುತ್ತದೆ. ಇದು ವೃಷಣದ ತಿರುಚುವಿಕೆಗೆ ಎಡೆಮಾಡಿಕೊಡಬಹುದು. ಹೀಗಾಗಿ ತುರ್ತು ವೈದ್ಯಕೀಯ ನಿಗಾ ಅಗತ್ಯ. ಅಂಡಕೋಶ ನೋವಿಲ್ಲದೆ ಊದಿಕೊಂಡಿದ್ದರೂ ವೈದ್ಯರನ್ನು ಭೇಟಿ ಮಾಡಿ.
ನೀವು ಲೈಂಗಿಕ ಸಕ್ರಿಯ ಪುರುಷರಾಗಿದ್ದರೆ, ಈ ಸಮಸ್ಯೆ ಇದ್ದಲ್ಲಿ ಸಂಗಾತಿಯೊಂದಿಗೆ ಲೈಂಗಿಕ ಸಂಪರ್ಕ ಬೇಡ. ಏಕೆಂದರೆ ಇದು ನಿಮ್ಮ ಸಂಗಾತಿ ಮೇಲೂ ದುಷ್ಪರಿಣಾಮ ಉಂಟುಮಾಡಬಹುದು. ಅಂದರೆ ಲೈಂಗಿಕ ಕ್ರಿಯೆ, ಸಂಭೋಗ, ಮೌಖಿಕ ಲೈಂಗಿಕ ಕ್ರಿಯೆ, ಚರ್ಮ-ಚರ್ಮ ಸಂಪರ್ಕ ಬೇಡವೆಂಬುದು ಇದರರ್ಥ.
ತಪಾಸಣೆ ಮತ್ತು ರೋಗನಿರ್ಧಾರ ಪರೀಕ್ಷೆಗಳು
ಈ ರೀತಿಯ ಸಮಸ್ಯೆಗಳಿದ್ದಲ್ಲಿ ನಿಮ್ಮ ವೈದ್ಯರು ದೈಹಿಕ ತಪಾಸಣೆ ನಡೆಸುತ್ತಾರೆ. ಈ ತಪಾಸಣೆಯಿಂದ ಅಂಡಕೋಶ ದೊಡ್ಡದಾಗಿರುವುದು ಮತ್ತು ಊದಿಕೊಂಡಿರುವುದು ಪತ್ತೆಯಾಗುತ್ತದೆ. ಹೊಟ್ಟೆ ಅಥವಾ ಅಂಡಕೋಶದ ಮೇಲೆ ಒತ್ತಡ ಹಾಕುವುದರಿಂದ ಅದು ದ್ರವ ತುಂಬಿದ ಸಣ್ಣ ಅಂಡಕೋಶವನ್ನು ಹಿಗ್ಗಿಸಬಹುದು ಅಥವ ಕುಗ್ಗಿಸಬಹುದು. ಅಂದರೆ ಇದು ಇಂಗ್ಯೂನಲ್ ಹರ್ನಿಯಾ ಇರುವ ಲಕ್ಷಣವೂ ಇರಬಹುದು.
ಹೈಡ್ರೋಸೀಲ್‍ನಲ್ಲಿರುವ ದ್ರವವು ಸಾಮಾನ್ಯವಾಗಿ ತಿಳಿಯಾಗಿರುವುದರಿಂದ ನಿಮ್ಮ ವೈದ್ಯರು ಅಂಡಕೋಶದ ಮೇಲೆ ಬೆಳಕು ಹಾಯಿಸಿ ತಪಾಸಣೆ ನಡೆಸುತ್ತಾರೆ. ಬೆಳಕಿನೊಂದಿಗೆ ವೃಷಣದ ಸುತ್ತ ರೂಪುಗೊಂಡಿರುವ ದ್ರವವನ್ನು ಸ್ಪಷ್ಟವಾಗಿ ಕಾಣಬಹುದಾಗಿದ್ದು, ಇದು ಅಂಡವಾಯುವಿನ ಸ್ವರೂಪವನ್ನು ತಿಳಿಸುತ್ತದೆ. ನಿಮ್ಮ ಹೈಡ್ರೋಸೀಲ್ ಅಥವಾ ಅಂಡವಾಯು ಸಮಸ್ಯೆಗೆ ಸೋಂಕು ಕಾರಣವಿರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದರೆ ನಿಮಗೆ ಎಪಿಡಿಡೀವಿಟಿಸ್‍ನಂಥ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಲು ರಕ್ತ ಅಥವಾ ಮೂತ್ರ ತಪಾಸಣೆ ಮಾಡಬಹುದು.
ವೃಷಣದ ಸುತ್ತವಿರುವ ದ್ರವವು ಅದನ್ನು ಮುಚ್ಚದಂತೆ ಅಥವಾ ಭಾರವಿರುವಂತೆ ಮಾಡಬಹುದು. ಇಂಥ ಪ್ರಕರಣಗಳಲ್ಲಿ ನಿಮಗೆ ಅಲ್ಟ್ರಾಸೌಂಡ್ ಇಮೇಜಿಂಗ್ ಪರೀಕ್ಷೆಯ ಅಗತ್ಯವಿರುತ್ತದೆ. ಈ ಪರೀಕ್ಷೆಯಲ್ಲಿ ನಿಮ್ಮ ದೇಹದಲ್ಲಿನ ರಚನೆಗಳ ಪ್ರತಿಬಿಂಬಗಳನ್ನು ಪಡೆಯಲು ಹೈಫ್ರೀಕ್ವೆನ್ಸಿ ಧ್ವನಿ ತರಂಗಗಳನ್ನು ಹಾಯಿಸಲಾಗುತ್ತದೆ. ಹರ್ನಿಯಾ, ವೃಷಣ ಗೆಡ್ಡೆ ಅಥವಾ ಅಂಡಕೋಶ ಊತಕ್ಕೆ ಕಾರಣವಾಗುವ ಇತರ ಸಮಸ್ಯೆಗಳನ್ನು ಪತ್ತೆ ಹಚ್ಚಲು ಇದು ಸಹಕಾರಿ.
ಚಿಕಿತ್ಸೆ ಮತ್ತು ಔಷಧಿಗಳು
ನಿಮ್ಮಮಗುವಿಗೆ: ಒಂದು ವರ್ಷದೊಳಗೆ ಅಂಡವಾಯು ತಾನಾಗೇ ಕಣ್ಮರೆಯಾಗುತ್ತದೆ. ಒಂದು ವರ್ಷದ ನಂತರವೂ ಅದು ಕಣ್ಮರೆಯಾಗದಿದ್ದರೆ ಅಥವಾ ದೊಡ್ಡದಾಗುತ್ತಿದ್ದರೆ ಶಸ್ತ್ರಚಿಕಿತ್ಸೆ ಮೂಲಕ ಅದನ್ನು ತೆಗೆದು ಹಾಕಬೇಕಾಗುತ್ತದೆ.
ವಯಸ್ಕ ಪುರುಷರಿಗೆ: ವಯಸ್ಕ ಪುರುಷರಲ್ಲೂ ಅಂಡವಾಯು ಅಥವಾ ಹೈಡ್ರೋಸೀಲ್ ತಾನಾಗೇ ಕಣ್ಮರೆಯಾಗುತ್ತದೆ. ಆದರೆ, ಹೈಡ್ರೋಸೀಲ್ ದೊಡ್ಡದಾಗುತ್ತಾ ಅನಾನುಕೂಲ ಅಥವ ವಿಕಾರತೆಗೆ ಕಾರಣವಾದರೆ ಮಾತ್ರ ಚಿಕಿತ್ಸೆ ಅಗತ್ಯ. ಆಗ ಅದನ್ನು ತೆಗೆದು ಹಾಕಬೆಕಾಗುತ್ತದೆ.
ಶಸ್ತ್ರಕ್ರಿಯೆ ಛೇದನ (ಹೈಡ್ರೋಸೀಲೆಕ್ಟೊಮಿ)
ಹೈಡ್ರೋಸೀಲ್‍ನನ್ನು ತೆಗೆದುಹಾಕಲು ಸಾಮಾನ್ಯ ಅಥವಾ ಸ್ಪೈನಲ್ ಅನೆಶಿಯಾ ಹೊರರೋಗಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಹೈಡ್ರೋಸೀಲ್‍ನನ್ನು ತೆಗೆದು ಹಾಕಲು ಸರ್ಜನ್ ಅಂಡಕೋಶ ಅಥವಾ ಕೆಳಹೊಟ್ಟೆಯಲ್ಲಿ ಸಣ್ಣ ರಂಧ್ರ ಕೊರೆಯುತ್ತಾರೆ. ಇಂಗ್ಯೂನಲ್ ಹರ್ನಿಯಾ ದೋಷವನ್ನು ಸರಿಪಡಿಸಲು ಶಸ್ತ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಹೈಡ್ರೋಸೀಲ್ ಸಮಸ್ಯೆ ಇರುವುದು ಪತ್ತೆಯಾದರೆ, ಅದು ನಿಮಗೆ ತೊಂದರೆ ನೀಡದಿದ್ದರೂ ವೈದ್ಯರು ಅದನ್ನು ತೆಗೆದು ಹಾಕುತ್ತಾರೆ.
ಹೈಡ್ರೋಸೀಲೆಕ್ಟೋಮಿ ಶಸ್ತ್ರಚಿಕಿತ್ಸಾ ವಿಧಾನದಲ್ಲಿ ಸರ್ಜರಿ ನಂತರ ಕೆಲ ದಿನಗಳ ಕಾಲ ನೀವು ರಂಧ್ರ ಕೊರೆದ ಭಾಗದಲ್ಲಿ ಟ್ಯೂಬ್ ಮತ್ತು ದೊಡ್ಡ ಡ್ರೆಸಿಂಗ್ ವ್ಯವಸ್ಥೆಯಲ್ಲಿರಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಬಳಿಕ ಕೆಲ ಕಾಲ ನಿಮಗೆ ಅಂಡಕೋಶ ಆಧಾರ ಧರಿಸುವಂತೆ ಸಲಹೆ ಮಾಡಬಹುದು. ಊತವನ್ನು ಕಡಿಮೆ ಮಾಡಲು ಸರ್ಜರಿಯಾದ ನಂತರ ಮೊದಲ 24 ಗಂಟೆಗಳಲ್ಲಿ ಅಂಡಕೋಶದ ಸುತ್ತ ಐಸ್‍ಪ್ಯಾಕ್‍ಗಳನ್ನು ಇಡಲಾಗುತ್ತದೆ. ಅಂಡಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಸೋಂಕು ಅಥವಾ ತೀವ್ರ ಸ್ವರೂಪದ ಗಾಯವಾಗಿದ್ದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ.
ಸೂಜಿಯಿಂದ ದ್ರವ ತೆಗೆಯುವಿಕೆ(ನೀಡಲ್ ಆಸ್ಪಿರೇಷನ್)
ಅಂಡಕೋಶದಲ್ಲಿನ ದ್ರವವನ್ನು ಸೂಜಿ ಮೂಲಕ ಹೊರತೆಗೆಯುವ ಮತ್ತೊಂದು ವಿಧಾನವಿದು. ಈ ಚಿಕಿತ್ಸೆಯನ್ನು ವ್ಯಾಪಕವಾಗಿ ಬಳಸುವುದಿಲ್ಲ. ಏಕೆಂದರೆ ದ್ರವದ ಹಿಂದಿರುಗುವಿಕೆ ಸಾಮಾನ್ಯ ಸಂಗತಿಯಾಗಿರುತ್ತದೆ. ಸೂಜಿಯಿಂದ ದ್ರವ ತೆಗೆದ ನಂತರ ಅದು ಮತ್ತೆ ಸಂಗ್ರಹವಾಗದಂತೆ ತಡೆಯಲು ಇಂಜೆಕ್ಷನ್ ಮೂಲಕ ದಪ್ಪ ಅಥವ ಗಟ್ಟಿ ಔಷಧಿಯನ್ನು ನೀಡಲಾಗುತ್ತದೆ. ಸೂಜಿ ಮೂಲಕ ದ್ರವ ತೆಗೆಯುವ ಅಥವಾ ಚುಚ್ಚುಮದ್ದು ನೀಡುವ ಚಿಕಿತ್ಸಾ ವಿಧಾನಗಳು ಆಯಾ ವ್ಯಕ್ತಿಯ ಆಯ್ಕೆಗೆ ಬಿಡಲಾಗಿದ್ದು, ಇದು ಸರ್ಜರಿಯನ್ನು ಇನ್ನಷ್ಟು ಅಪಾಯಕಾರಿಯಾಗಿಸುವ ಗಂಡಾಂತರ ಸೃಷ್ಟಿಸಬಹುದು. ಸೋಂಕು ಮತ್ತು ಆಂಡಕೋಶ ನೋವು ಇದ್ದರೆ ಈ ಚಿಕಿತ್ಸೆ ಮಾಡಿಸಿಕೊಳ್ಳಬಹುದು. ಕೆಲವೊಮ್ಮೆ ಚಿಕಿತ್ಸೆ ನಂತರವೂ ಹೈಡ್ರೋಸೀಲ್ ಕಾಣಿಸಿಕೊಳ್ಳಬಹುದು.
ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
Ph: +91-80-49069000 Extn:1147/1366
www.vims.ac.in