ಅಮೇರಿಕಾದಲ್ಲಿ ಹೆಚ್ಚುತ್ತಿದೆ ಖಿನ್ನತೆ – ಇದು ಕೇವಲ ಅಮೇರಿಕಾ ದೇಶವೊಂದರ ಕಥೆಯಲ್ಲ

ಅಮೇರಿಕಾದಲ್ಲಿ ಹೆಚ್ಚುತ್ತಿದೆ ಖಿನ್ನತೆ ಹೊಂದುತ್ತಿರುವವರ ಸಂಖ್ಯೆ. ಪ್ರಪಂಚದ ಬಹುತೇಕ ದೇಶಗಳದ್ದೂ ಇದೇ ಪರಿಸ್ಥಿತಿ. ಕರೋನಾ ವೈರಸ್ ಸೋಂಕಿನ ಭಯವು ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿವೆ.ಈ ಸಮಸ್ಯೆಯಿಂದ ಭಾರತವೂ ಹೊರತಾಗಿಲ್ಲ.

Depression ಅಮೇರಿಕಾದಲ್ಲಿ ಹೆಚ್ಚುತ್ತಿದೆ ಖಿನ್ನತೆ - ಇದು ಕೇವಲ ಅಮೇರಿಕಾ ದೇಶವೊಂದರ ಕಥೆಯಲ್ಲಶತಮಾನದ ಮಹಾಕಾಯಿಲೆಯೆಂದೇ ಬಿಂಬಿತವಾಗಿರುವ ನೋವಲ್ ಕೊರೋನಾ ವೈರಸ್ ಆರ್ಭಟ ಇನ್ನೂ ನಿಂತಿಲ್ಲ. ಹೀಗಿರುವಾಗ ಇದರ ಕಾರಣದಿಂದ ಪ್ರಪಂಚದ ದೊಡ್ಡಣ್ಣನೆಂದೇ ಕರೆದುಕೊಳ್ಳುವ ಶಕ್ತಿಶಾಲಿ ದೇಶ ಅಮೇರಿಕಾದ ಹಲವಾರು ಜನರು ಚಿಂತೆ ಹಾಗೂ ಒತ್ತಡಕ್ಕೆ ಸಂಬಂಧಿಸಿರುವ ಮಾನಸಿಕ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುತ್ತಿದ್ದಾರೆ.

ಮಾರ್ಚನಲ್ಲಿ ಶೇಕಡಾ 32 ರಷ್ಟಿದ್ದ ಇಂಥವರ ಸಂಖ್ಯೆ ಈ ಜುಲೈನಲ್ಲಿ ಏಕಾಏಕಿ ಶೇಕಡಾ 53ಕ್ಕೆ ತಲುಪಿದೆ ಎಂದು ಕೈಸರ್ ಫ್ಯಾಮಿಲಿ ಫೌಂಡೇಶನ್ ಸಮೀಕ್ಷೆಯಿಂದ ತಿಳಿದುಬಂದಿದೆ. ಮಾನಸಿಕ ಒತ್ತಡ ಹಾಗೂ ಸಾಂಕ್ರಾಮಿಕ ಸಂಬಂಧಿತ ತೊಂದರೆಗಳನ್ನು ನಿಭಾಯಿಸಲು ಅನೇಕರು ಮದ್ಯಪಾನ ಹಾಗೂ ಮಾದಕ ವಸ್ತುಗಳ ಮೊರೆ ಹೋಗುತ್ತಿದ್ದಾರೆ ಎನ್ನುವ ಆಘಾತಕಾರಿ ಸುದ್ಧಿಯೂ ವರದಿಯಾಗಿದೆ.

ಇದು ಕೇವಲ ಅಮೇರಿಕಾದ ಕಥೆಯೇ?

ಖಂಡಿತಾ ಅಲ್ಲ. ಇದು ಕೇವಲ ಅಮೇರಿಕಾ ದೇಶವೊಂದರ ಕಥೆಯಲ್ಲ. ಇದು ಪ್ರಪಂಚದ ಬಹುತೇಕ ದೇಶಗಳದ್ದೂ ಇದೇ ಪರಿಸ್ಥಿತಿ. ದೇಶದ ಆರ್ಥಿಕತೆಯ ಮೇಲೆಯೇ ಹೊಡೆತ ಕೊಟ್ಟಿರುವ ಈ ಸಾಂಕ್ರಾಮಿಕ ರೋಗ ಬಹಳಷ್ಟು ಜನರ ಬದುಕನ್ನೇ ಹೈರಾಣಾಗಿಸಿದೆ. ಇಷ್ಟು ದಿನದ ಶೋಕಿ ಜೀವನ ಶೈಲಿಗೆ ಹೊಂದಿಕೊಂಡಿದ್ದವರು ಉದ್ಯೋಗ ನಷ್ಟದಿಂದ ಜೀವನಶೈಲಿ ಬದಲಾಯಿಸಿಕೊಳ್ಳಲು ಅರಿಯದೇ, ಮುಂದೇನು ಎಂದು ತಿಳಿಯದೇ ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಋಣಾತ್ಮಕ ಆಲೋಚನೆಗೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆಯಿಂದ ಭಾರತವೂ ಹೊರತಾಗಿಲ್ಲ.

ಅಲ್ಲದೆ ಅನೇಕರು ಆತ್ಮಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸಾಮಾಜಿಕ ಪ್ರತ್ಯೇಕತೆ, ಒಂಟಿತನ, ಉದ್ಯೋಗ ನಷ್ಟ, ಆರ್ಥಿಕ ಆತಂಕ ಮತ್ತು ವೈರಸ್ ಸೋಂಕಿನ ಭಯವು ಜನರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿವೆ. ಈ ಸಾಂಕ್ರಾಮಿಕ ಕಾರಣದಿಂದ ಆದಾಯ ಕಳೆದುಕೊಂಡವರಲ್ಲಿ 59 ಪ್ರತಿಶತದಷ್ಟು ಜನರು ತಮ್ಮ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಒಂದಲ್ಲಾ ಒಂದು ರೀತಿಯಲ್ಲಿ ವ್ಯತಿರಿಕ್ತ ಪರಿಣಾಮವನ್ನು ಅನುಭವಿಸಿದ್ದಾರೆ.

62 ಪ್ರತಿಶತದಷ್ಟು ಜನರು ಶ್ವಾಸಕೋಶದ ಕಾಯಿಲೆ, ಆಸ್ತಮಾ, ಮಧುಮೇಹ ಅಥವಾ ಗಂಭೀರ ಹೃದಯ ಕಾಯಿಲೆಗಳಂತಹ ದೀರ್ಘಕಾಲದ ಪರಿಸ್ಥಿತಿಗೆ ತುತ್ತಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವವರಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಾಗಿದ್ದರೂ ಸಹಾ ಇಲ್ಲಿ ಅಚ್ಚರಿಯ ಮಾಹಿತಿ ಏನೆಂದರೆ ಈ ಋಣಾತ್ಮಕ ಮಾನಸಿಕ ಆರೋಗ್ಯದ ಪರಿಣಾಮಗಳು ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಾಗಿದೆ ಎನ್ನುವುದು. ಒಟ್ಟಾರೆ ಕೋವಿಡ್ ರುದ್ರತಾಂಡವ ಈಗ ಇನ್ನೊಂದು ಹಂತದಲ್ಲಿ ತನ್ನ ಪರಿಣಾಮವನ್ನು ತೋರಿಸುತ್ತಿದೆ.

ಭಾರತದ ಕಥೆ ಏನು?

depression-during-covid.ಕೋವಿಡ್ ಸಾಂಕ್ರಾಮಿಕಕ್ಕೆ ಒಳಗಾದ ದೇಶಗಳಲ್ಲಿ ಅಮೇರಿಕಾ, ಬ್ರೆಝಿಲ್ ಬಿಟ್ಟರೆ ಅತಿ ಹೆಚ್ಚು ಸೋಂಕಿಗೆ ಒಳಗಾದವರು ಭಾರತದಲ್ಲಿದ್ದಾರೆ. ಕೊರೋನಾ ಶುರುವಿನ ನಂತರ ಕೊರೋನಾ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡವರೂ ಬಹಳಷ್ಟು ಜನರು ಇದ್ದಾರೆ.

ಮಾನಸಿಕ ಒತ್ತಡದಿಂದ ಬಳಲುತ್ತಿರುವ ಸಂಖ್ಯೆ 35-40 ಪ್ರತಿಷತದಷ್ಟಿದೆ ಎಂದು ಸೈಕಿಯಾಟ್ರಿಕ್ ಸೊಸೈಟಿ ಸಮೀಕ್ಷೆ ಹೇಳುತ್ತಿದೆ. 2016ರ ಸಮೀಕ್ಷೆ ಪ್ರಕಾರ ಮಾನಸಿಕ ಖಿನ್ನತೆಗೆ ಒಳಗಾದ ಶೇಕಡಾ 85ರಷ್ಟು ಜನರಿಗೆ ಸರಿಯಾದ ಚಿಕಿತ್ಸೆಯೇ ನಮ್ಮಲ್ಲಿ ಇಲ್ಲ ಎನ್ನಲಾಗುತ್ತಿದೆ.

ಹಾಗೆ ನೋಡಿದರೆ ಭಾರತದಲ್ಲಿ (ಪ್ರತಿ ಲಕ್ಷ ಜನರಲ್ಲಿ) ಅಮೇರಿಕಾಕ್ಕಿಂತಲೂ ಕಡಿಮೆ ಮನೋವೈದ್ಯರು, ಮನೋವಿಜ್ಞಾನಿಗಳು ಇದ್ದಾರೆ. ಒಂದು ಲಕ್ಷ ಜನಕ್ಕೆ 11 ಮನೋವೈದ್ಯರು ಅಮೇರಿಕಾದಲ್ಲಿದ್ದರೆ ಭಾರತದಲ್ಲಿ ಅವರ ಸಂಖ್ಯೆ ಕೇವಲ 0.3. ಅದೇ ರೀತಿ ಮನೋವಿಜ್ಞಾನಿ (ಸೈಕೋಲಜಿಸ್ಟ್)ಗಳ ಸಂಖ್ಯೆ ಅಮೇರಿಕಾದಲ್ಲಿ ಪ್ರತಿ ಲಕ್ಷ ಜನರಿಗೆ 30 ಇದ್ದರೆ ಭಾರತದಲ್ಲಿ ಅವರ ಸಂಖ್ಯೆ ಕೇವಲ 0.07 ಮಾತ್ರ.  ಹೀಗೆ ಸರಿಯಾದ ಚಿಕಿತ್ಸೆ ಇಲ್ಲ, ಆಸ್ಪತ್ರೆಗಳಿಲ್ಲ.

ಹೀಗಿದ್ದರೂ ಭಾರತವನ್ನು ಕಾಪಾಡುತ್ತಿರುವುದು ಒಟ್ಟಾಗಿ ಬಾಳುವ ಇಲ್ಲಿನ ಜನರ ಜೀವನ ಶೈಲಿ. ಪರಸ್ಪರ ಸಹಾಯ ಮಾಡುವ ಮನಸ್ಥಿತಿ. ಕಷ್ಟಕ್ಕೆ ಒಂದಿಷ್ಟಾದರೂ ಸ್ಪಂದಿಸುವ ಸಮಾಜ ನಮ್ಮಲ್ಲಿದೆ. ಆದರೆ ಮಹಾನಗರಗಳಲ್ಲಿ, ಆಧುನಿಕವಾಗಿ ಮುಂದಿರುವ ದೇಶಗಳಲ್ಲಿ ನೀನ್ಯಾರೋ, ನಾನ್ಯಾರೋ ಪರಿಸ್ಥಿತಿ ಇರುವುದರಿಂದ ಮಾನಸಿಕತೆ ಪಾತಾಳಕ್ಕಿಳಿದಿದೆ ಹಾಗೂ ತೊಂದರೆಯೂ ಹೆಚ್ಚಾಗಿದೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!