ಆಹಾರವೇ ಔಷಧಿ – ಅಡುಗೆ ಮನೆಯಲ್ಲಿ ಅಡಗಿದೆ ಆರೋಗ್ಯ

ಆಹಾರವೇ ಔಷಧಿ – ಇಂದು ಎಲ್ಲರ ಮನೆಯ ಅಡುಗೆ ಮನೆಯಲ್ಲೇ ಆರೋಗ್ಯವಿದೆ. ನಾವು ಅದನ್ನು ನಿರ್ಲಕ್ಷಿಸಿ ನಮ್ಮ ಆರೋಗ್ಯವನ್ನು ವೈದ್ಯರಿಗೆ, ಆಸ್ಪತ್ರೆಗಳಿಗೆ ಅರ್ಪಿಸುತ್ತಿದ್ದೇವೆ.

ಆಹಾರವೇ ಔಷಧಿ #vydyaloka #healthvision #nisarghamane #drvenkataramanahegde

ವ್ಯಕ್ತಿ ಚೆನ್ನಾಗಿ, ಸರ್ವಾಂಗ ಸುಂದರನಾಗಿದ್ದ ಮಾತ್ರಕ್ಕೆ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾನೆಂದು ನಂಬಲು ಆಗುವದಿಲ್ಲ. ಒಂದಲ್ಲಾ ಒಂದು ದೈಹಿಕ ತೊಂದರೆಯಿಂದ ಆತ ಬಳಲುತ್ತಿರುತ್ತಾನೆ. ಯಾವತ್ತೂ ರೋಗಿಗೆ ತಾನು ರೋಗಿ ಎಂಬ ನಕಾರಾತ್ಮಕ ಭಾವನೆ ಇರಬಾರದು. ಆತ ಸದಾ ಧನಾತ್ಮಕ ಚಿಂತನೆ ಮಾಡುತ್ತಿರಬೇಕು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಪರಿಪೂರ್ಣವಾಗಿದ್ದರೆ ವ್ಯಕ್ತಿಯನ್ನು ಆರೋಗ್ಯವಂತ ಎಂದು ಹೇಳುತ್ತಾರೆ. ಸರಾಗವಾಗಿ ಮಲ, ಮೂತ್ರ ವಿಸರ್ಜನೆ ಆಗದಿದ್ದರೆ, ಮೂತ್ರ ಹಳದಿಯಾಗಿದ್ದರೆ, ಉಸುರಿನ ದುರ್ವಾಸನೆ ಇದ್ದರೆ ಅದು ಅನಾರೋಗ್ಯದ ಲಕ್ಷಣ. ಇಂದು ಎಲ್ಲರ ಮನೆಯ ಅಡುಗೆ ಮನೆಯಲ್ಲೇ ಆರೋಗ್ಯವಿದೆ. ಆಹಾರವೇ ಔಷಧವಾಗಿದೆ. ನಾವು ಅದನ್ನು ನಿರ್ಲಕ್ಷಿಸಿ ನಮ್ಮ ಆರೋಗ್ಯವನ್ನು ವೈದ್ಯರಿಗೆ, ಆಸ್ಪತ್ರೆಗಳಿಗೆ ಅರ್ಪಿಸುತ್ತಿದ್ದೇವೆ.

ಆರೋಗ್ಯಕರ ಬದುಕಿಗೆ ಸರಳ ಸೂತ್ರ

ಒಬ್ಬ ವ್ಯಕ್ತಿ ಆರೋಗ್ಯಕರವಾಗಿ ಬದುಕಬೇಕಾದರೆ 6, 4, 2, 2, 11 ಎಂಬ ಸರಳ ಸೂತ್ರವನ್ನು ಪಾಲಿಸಿ.

ಮೊದಲನೆಯ ಸೂತ್ರ 6 – ಎಂದರೆ ಕನಿಷ್ಠ ಆರು ತಾಸುಗಳ ಕಾಲ ಯಾವುದೇ ಅಡಚಣೆ, ಆತಂಕವಿಲ್ಲದೇ ಒಳ್ಳೆಯ ನಿದ್ರೆ ಮಾಡಬೇಕು. ಇದಕ್ಕಾಗಿ ರಾತ್ರಿ ಒಂದು ಬಕೆಟ್ ಬಿಸಿನೀರಿಗೆ ಕಲ್ಲುಪ್ಪು ಹಾಕಿ ಸ್ವಲ್ಪ ಕಾಲ ಕೈ ಕಾಲು ಇಳಿಸಿಬಿಟ್ಟು ಕೂರಬೇಕು. ಜಾಯಿಕಾಯಿಯ ಪುಡಿಯನ್ನು ಉಗುರು ಬೆಚ್ಚಗಿನ ಹಾಲಿಗೆ ಹಾಕಿಕೊಂಡು ಸಂಜೆ 7 ಗಂಟೆಗೆ ತೆಗೆದುಕೊಳ್ಳಬೇಕು.

ಎರಡನೆಯ ಸೂತ್ರ 4 – ಎಂದರೆ ಪ್ರತಿನಿತ್ಯ 4 ಲೀಟರ್ ನೀರು ಕುಡಿಯಬೇಕು. ನೀರನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಿದರೆ ವಿವಿಧ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಸರಾಗವಾಗಿ ಮಲವಿಸರ್ಜನೆ ಆಗುತ್ತದೆ. ಆ್ಯಸಿಡಿಟಿ, ಕಿಡ್ನಿಸ್ಟೋನ್ ಬಾಧೆ ನಿವಾರಣೆಯಾಗುತ್ತದೆ. ಊಟ ಮಾಡುವ ಸಂದರ್ಭದಲ್ಲಿ ನೀರು ಕುಡಿಯುವುದು ಸರಿಯಲ್ಲ. ಇದರಿಂದ ಜೀರ್ಣರಸಗಳ ಶಕ್ತಿ ಕಡಿಮೆಯಾಗಿ ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯುವುದಿಲ್ಲ. ಊಟ ಮಾಡುವ ಒಂದು ತಾಸು ಮುಂಚೆ ಹಾಗೂ ಒಂದು ತಾಸಿನ ನಂತರ ನೀರು ಕುಡಿಯುವುದು ಅಗತ್ಯ.

ಮೂರನೇಯ ಸೂತ್ರ 2, 2 – ಅಂದರೆ ಅತಿಯಾಗಿ ತಿನ್ನುವ ಹವ್ಯಾಸ ಕೈಬಿಡಬೇಕು. ಇದಕ್ಕೆ ಒಳ್ಳೆಯ ಮರು ಉಪವಾಸ), ಇದರಡಿಯಲ್ಲಿ ದಿನಕ್ಕೆ ಎರಡು ಹೊತ್ತ ಆಹಾರ ಸೇವನೆ ಮಾಡಬೇಕು. ಅಂದರೆ 16/8 ಫಾಸ್ಟಿಂಗ್ ಮಾಡಬೇಕು. 16 ತಾಸುಗಳ ಕಾಲ ಆಹಾರ ಸೇವಿಸದೇ ಖಾಲಿ ಇರುವುದು. ಉಳಿದ ಎಂಟು ತಾಸಿನಲ್ಲಿ ಮಾತ್ರ ಆಹಾರ ಸೇವಿಸುವುದು. 16 ಗಂಟೆ ಖಾಲಿ ಇರುವ ಅವಧಿಯಲ್ಲಿ ಬೇಕಾದರೆ ನೀರು ಕುಡಿಯಬಹುದು. ಬ್ಲಾಕ್ ಟೀ ಅಥವಾ ಗ್ರೀನ್ ಟೀ ಸೇವಿಸಬಹುದು.

ಮಧ್ಯಂತರ ಉಪವಾಸದಿಂದ ದೇಹದಲ್ಲಿನ ವಿಷವಸ್ತುಗಳನ್ನು ಜೀವಕೋಶಗಳು ಜೀರ್ಣಿಸಿಕೊಂಡು ದೇಹವನ್ನು ವಿಷವಸ್ತುಗಳಿಂದ ಮುಕ್ತಗೊಳಿಸುತ್ತದೆ. ಇದೇ ಸೂತ್ರವನ್ನು 5000 ವರ್ಷಗಳ ಹಿಂದೆ ನಮ್ಮ ಋಷಿಮುನಿಗಳು ಪ್ರತಿಪಾದಿಸಿದ್ದರು. ಇದೇ ವಿಷಯದ ಮೇಲೆ ಜಪಾನ್ ದೇಶದ ವಿಜ್ಞಾನಿಯೊಬ್ಬರು 2016ರಲ್ಲಿ ನೋಬೆಲ್ ಪ್ರಶಸ್ತಿ ಪಡೆದಿದ್ದಾರೆ.

ಇನ್ನೊಂದು 2 ರ ಪ್ರಕಾರ ದಿನಕ್ಕೆರಡು ಬಾರಿ ಶ್ರದ್ದೆಯಿಂದ ಪಾರ್ಥನೆ ಮಾಡಬೇಕು. ಇದರಿಂದ ದಿನವಿಡಿ ಆತ್ಮವಿಶ್ವಾಸದಿಂದ, ಲವಲವಿಕೆಯಿಂದ ಇರಬಹುದು.

ಕೊನೆಯ ಸೂತ್ರ 1,1 ರ – ಪ್ರಕಾರ ವಾರಕ್ಕೊಂದು ದಿನ ಉಪವಾಸ, ಪ್ರತಿದಿನ ಒಂದು ಗಂಟೆ ಯೋಗಾಭ್ಯಾಸ ಮಾಡಬೇಕು. ಉಪವಾಸ ಮಾಡುವ ದಿನದಂದು ಹಣ್ಣು, ತರಕಾರಿ, ಪಲ್ಯ ಸೇವಿಸಬೇಕು. ಈ ರೀತಿಯ ಉಪವಾಸದಿಂದ ಬೊಜ್ಜು ಕಡಿಮೆಯಾಗುತ್ತದೆ. ಮಿದುಳು ಚಟುವಟಿಕೆಯಿಂದ ಚುರುಕಾಗಿರುತ್ತದೆ. ಶುಗರ್ ಇದ್ದವರು ಫಾಸ್ಟಿಂಗ್ (ಮಧ್ಯಂತರ ತೆಗೆದುಕೊಂಡು ನಿಮಿಷ ವ್ಯಾಯಾಮ ಮಾಡಬೇಕು. ಇದರಿಂದ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಸಂಜೆ ಪ್ರಾಣಾಯಾಮ, ಧ್ಯಾನ ಮಾಡಬೇಕು.

ಉತ್ತೇಜನಕಾರಿ ಆಹಾರ
• ಗೋಡಂಬಿ, ಪಿಸ್ತಾ, ಬಾದಾಮಿ ಆರೋಗ್ಯಕ್ಕೆ ಉತ್ತಮ.
• ಸೂರ್ಯಕಾಂತಿ, ಕರಬೂಜ, ಕುಂಬಳಕಾಯಿ ಬೀಜಗಳೂ ಹಾಗೂ ತೆಂಗಿನ ಹಾಲು, ತೆಂಗಿನಕಾಯಿ ತುರಿ ತುಂಬಾ ಒಳ್ಳೆಯದು.
• ಬೆಳಗ್ಗೆ ಬೇಗ ಎದ್ದು ಬೂದುಗುಂಬಳ ಜ್ಯೂಸ್ ಸೇವಿಸಬೇಕು.
• ತರಕಾರಿ ಸಲಾಡ್, ಮೊಳಕೆ ಬರಿಸಿದ ಕಾಳು, ಹಸಿ ತರಕಾರಿ, ಬೇಯಿಸಿದ ತರಕಾರಿ ಸೇವಿಸಬೇಕು.
• ಮಾಂಸಾಹಾರಿಗಳಾದವರು ಕೇವಲ ಬೇಯಿಸಿದ ಮಾಂಸ ಮಾತ್ರ ಸೇವಿಸಬೇಕು. ಕರಿದ ಮಾಂಸ ಬೇಡ.

Also read article from Dr Venkataramana Hegde

Dr Venkatramana-Hegde

ಡಾ ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕ.
Ph:9448729434, 9731460353
www.vedawellnesscenter.com www.nisargamane.com
email: drvhegde@yahoo.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!