ಅಗ್ನಿಹೋತ್ರ- ಆರೋಗ್ಯದ ರಹದಾರಿ

ಅಗ್ನಿಹೋತ್ರ ಆರೋಗ್ಯದ ರಹದಾರಿ. ಏನಿದು ಅಗ್ನಿಹೋತ್ರ? ಈ ಕ್ರಿಯೆ ಮಾಡುವುದರಿಂದ ಮನುಷ್ಯನ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಇತ್ಯಾದಿ ಮಾಹಿತಿ ಈ ಲೇಖನದಲ್ಲಿವೆ. ಹಳೇ ಕಾಲದ ತಪಸ್ವಿಗಳ ಋಷಿಮುನಿಗಳ ಹೋಮ ಹವನಾದಿ ಟೀಕಿಸುವವರು, ಮಳೆ ಬರಲೆಂದು ಮಾಡುವ ಹೋಮವನ್ನು ಆಡಿಕೊಳ್ಳುವ ಬುದ್ಧಿಜೀವಿಗಳು ಸ್ವತಃ ಅಗ್ನಿಹೋತ್ರ ಮಾಡಿ ತಮ್ಮ ನಕಾರಾತ್ಮಕ ಯೋಚನೆಗಳನ್ನು ಬಗೆಹರಿಸಿಕೊಂಡು ಉತ್ತಮ ಸಮಾಜಕ್ಕೆ ನೆರವಾಗಬೇಕಿದೆ.

Agnihotra ಅಗ್ನಿಹೋತ್ರ- ಆರೋಗ್ಯದ ರಹದಾರಿ

ದೇಶ ಕಂಡ ಅತೀ ದೊಡ್ಡ ದುರಂತವಾದ “ಭೋಪಾಲ್ ಅನಿಲ ದುರಂತ”ದ ಬಗ್ಗೆ ನೀವು ಕೇಳಿರಬಹುದು. ಆ ದುರಂತ ಆದಾಗ ಸುಮಾರು 10 ಕಿ.ಮೀ ವರೆಗೆ ವಾಸವಿದ್ದ ಎಲ್ಲ ಜನರು ಸಾವಿಗೀಡಾದರು. ಆದರೆ ಕೇವಲ 1 ಕಿ.ಮೀ ದೂರವಿದ್ದ 4 ಬ್ರಾಹ್ಮಣ ಕುಟುಂಬಕ್ಕೆ ಏನೂ ಆಗಿರಲಿಲ್ಲ. ಇದರಿಂದ ಆಶ್ಚರ್ಯ ಚಕಿತರಾದರ ಸಂಶೋಧಕರು ಅವರ ಮನೆಯನ್ನು ಅಧ್ಯಯನ ನಡೆಸಿದಾಗ, ಅವರು ಮನೆಯಲ್ಲಿ ದಿನ ನಿತ್ಯ 2 ಹೊತ್ತು “ಅಗ್ನಿ ಹೋತ್ರ” ಹೋಮ ಮಾಡುತ್ತಿದ್ದಾರೆಂದು ತಿಳಿಯಿತು. ಇದನ್ನು ತಿಳಿದ ಸಂಶೋಧಕರು ಬೇರೆ ಕಡೆ ರೋಗಿಗಳ ಮೇಲೆ ಪ್ರಯೋಗ ಮಾಡಿದಾಗ ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂತು.

“ಹೋಮ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತಾ?” ಅಂತ ನೀವು ಪ್ರಶ್ನಿಸಬಹುದು. ಆದರೆ ಇದಕ್ಕೆ ಉತ್ತರ ‘ಹೌದು’ ಎನ್ನುತ್ತವೆ ಸಂಶೋಧನೆಗಳು..! ನಮ್ಮ ಪೂರ್ವಜರುಗಳು ನಡೆಸುತ್ತಿದ್ದ ಹೋಮ ಹವನಗಳ ಹಿಂದೆಯೂ ಮಾನವನ ಹಾಗೂ ಸಮಾಜದ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮಗೊಳಿಸುವ ಉದ್ದೇಶಗಳೇ ಇದ್ದರೂ ಬಾರತೀಯರ ನಿರ್ಲಕ್ಷಕ್ಕೋ ಅಥವಾ ಅತಿಯಾಸೆಗೆ ಬಿದ್ದು ವ್ಯಾಪಾರಿ ಮನಸ್ಥಿತಿಗೆ ಜೋತುಬಿದ್ದ ಕಾರಣದಿಂದಲೋ ಆಗಿನ ಅನೇಕ ವೈಜ್ಞಾನಿಕ ಪದ್ದತಿಗಳು ಇಂದಿನ ಪೀಳಿಗೆಯವರಿಗೆ ಮಾರ್ಗದರ್ಶನ ನೀಡುವಲ್ಲಿ ವಿಫಲವಾಗಿವೆ. ಅಂತಹ ಪದ್ಧತಿಗಳಲ್ಲಿ ‘ಅಗ್ನಿಹೋತ್ರ’ ಕೂಡಾ ಒಂದು.

ಹಾಗಿದ್ರೆ ಏನಿದು ಅಗ್ನಿಹೋತ್ರ?

ಇದೊಂದು ಎಲ್ಲರೂ ಆಚರಿಸಬಹುದಾದಂತ ಸರಳ ಹೋಮ ಪದ್ಧತಿ. ಸೂರ್ಯೋದಯ, ಸೂರ್ಯಾಸ್ತದ ಸಮಯಕ್ಕೆ ಸರಿಯಾಗಿ ಹದಿನೈದು ನಿಮಿಷಗಳಲ್ಲಿ ಇದನ್ನು ಮಾಡಬಹುದು. ಮನೆಯಲ್ಲಿ ಯಾರೇ ಆಗಲಿ ಇದನ್ನು ಮಾಡಬಹುದು. ಮಕ್ಕಳು ಮಾಡಬಾರದು, ಮಹಿಳೆಯರಿಗೆ ಇದು ನಿಷಿದ್ಧ ಎಂಬ ಯಾವುದೇ ರಿಸ್ಟ್ರಿಕ್ಷನ್ ಇಲ್ಲಿಲ್ಲ.

1.ಅಗ್ನಿಹೋತ್ರ ಮಾಡುವುದರಿಂದ ಮನಸ್ಸು ಶಾಂತವಾಗುತ್ತದೆ.

2. ನರಮಂಡಲವು ಸಚೇತನಗೊಂಡು ದೇಹ ಮತ್ತು ಮನಸ್ಸು ಲವಲವಿಕೆಯನ್ನು ಪಡೆಯುತ್ತದೆ.

3.ಪರಿಸರದಲ್ಲೂ ಸುಧಾರಣೆಯಾಗಲು ಸಹಕಾರಿ. ಬಹಳಷ್ಟು ಜನರು ಇದನ್ನು ಮಾಡಲು ಆರಂಭಿಸಿದರೆ ಪರಿಸರದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಕಾಣಲು ಸಾಧ್ಯ. ಈಗಾಗಲೇ ಅಮೇರಿಕಾ, ಮಲೇಷಿಯಾ, ಪೆರು, ಜರ್ಮನಿ ಮೊದಲಾದ ರಾಷ್ಟ್ರಗಳಲ್ಲಿ ಬಹಳಷ್ಟು ಜನರು ಇದನ್ನು ಆಚರಿಸುತ್ತಿದ್ದಾರೆ.

4. ಹೊಲದಲ್ಲಿ ಆಗ್ನಿಹೋತ್ರವನ್ನು ಆಚರಿಸಿ ಅದರ ಬೂದಿಯನ್ನು ಬೀಜಗಳೊಂದಿಗೆ ಸಾವಯವ ಗೊಬ್ಬರದೊಂದಿದೆ ಬೆರೆಸುವುದರಿಂದ ಇಳುವರಿ ಹೆಚ್ಚಾಗುವುದು. ಅಷ್ಟೇ ಅಲ್ಲದೆ ಕೀಟನಾಶಕ ಹಾಗೂ ರಸಗೊಬ್ಬರದ ಬಳಕೆಯನ್ನು ಸಂಪೂರ್ಣವಾಗಿ ತೊಡೆದು ಹಾಕಬಹುದು.

5. ಅಗ್ನಿಹೋತ್ರದ ಬೂದಿಯಿಂದ ಅನೇಕ ಅಸಾಧ್ಯ ಕಾಯಿಲೆಗಳು ಗುಣವಾಗಿವೆ. ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ದುವ್ರ್ಯಸನಗಳು ದೂರವಾಗುತ್ತವೆ.

6.ಸಕಾರಾತ್ಮಕ ಭಾವನೆಗಳು ಜಾಗೃತಗೊಳ್ಳುತ್ತವೆ. ಆನಂದಮಯ ಹಾಗೂ ಆರೋಗ್ಯಕರ ಜೀವನಕ್ಕೆ ಅಗ್ನಿಹೋತ್ರ ಅತ್ಯುತ್ತಮ ಆಚರಣೆ.

ಅಗ್ನಿಹೋತ್ರ ಆಚರಿಸಲು ಬೇಕಾಗುವ ಸಾಮಾಗ್ರಿಗಳು:

1. ನಿಶ್ಚಿತವಾದ ಆವೃತ್ತಿಯ ತಾಮ್ರದ ಹೋಮಕುಂಡ.

2. ಬೆರಣಿ (ಹಸು ಅಥವಾ ಎತ್ತಿನದು).

3. ಅಕ್ಕಿ (ತುಂಡಾಗಿರಬಾರದು).

4. ತುಪ್ಪ (ಆಕಳಿನದು)
(ಅಗ್ನಿಹೋತ್ರ ಸಾಮಾಗ್ರಿಗಳು ಬಹುತೇಕ ಗ್ರಂಥಿಗೆ ಅಂಗಡಿಗಳಲ್ಲಿ ಲಭ್ಯವಿರುತ್ತದೆ)

Agnihotra-Materials ಅಗ್ನಿಹೋತ್ರ- ಆರೋಗ್ಯದ ರಹದಾರಿ

ಅಗ್ನಿಹೋತ್ರ ಆಚರಣೆಯ ವಿಧಾನ:

ತಾಮ್ರದ ಹೋಮ ಕುಂಡದ ತಳದಲ್ಲಿ ಒಂದು ಬೆರಣಿಯ ತುಂಡನ್ನು ಚಪ್ಪಟೆಯಾಗಿ ಇಡಿರಿ. ಅದರ ಮೇಲೆ ಮಧ್ಯೆ ಮಧ್ಯೆ ಪೊಳ್ಳು ಇರುವಂತೆ ಒಂದರ ಮೇಲೊಂದು ಬೆರಣಿ ತುಂಡನ್ನು ಇಡಿ. ಬೆರಣಿಯ ಒಂದು ತುಂಡಿಗೆ ತುಪ್ಪವನ್ನು ಹಾಕಿ ಬೆಂಕಿಯನ್ನು ತಾಗಿಸಿ ಹೋಮಕುಂಡದಲ್ಲಿ ಇಡಿ. (ಕುಂಡಕ್ಕೆ ಸಮಿತ್ತನ್ನು ಕೂಡಾ ಸೇರಿಸಬಹುದು) ಸೂರ್ಯೋದಯ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಹೋಮಕುಂಡದಲ್ಲಿ ಎಲ್ಲಾ ಬೆರಣಿಗಳು ಪ್ರಜ್ವಲಿಸುತ್ತಿರಬೇಕು. ಆಗ ಕೆಳಗೆ ಕೊಟ್ಟಿರುವ ಮಂತ್ರವನ್ನು ಜಪಿಸುತ್ತಾ ಬೆರಳ ತುದಿಯಲ್ಲಿ ಬರುವಷ್ಟು ತುಪ್ಪ ಸವರಿದ ತುಂಡಾಗದ ಅಕ್ಕಿಯನ್ನು ಅಗ್ನಿಗೆ ಸಮರ್ಪಿಸಿ. ಎರಡನೇ ಮಂತ್ರವನ್ನು ಹೇಳಿ ಮತ್ತೆ ಅಕ್ಕಿಯನ್ನು ಕುಂಡಕ್ಕೆ ಹಾಕಿ. ಆಗ ನಿರ್ಮಾಣವಾಗುವ ದಿವ್ಯ ವಾತಾವರಣದಲ್ಲಿ ಸಾಧ್ಯವಾದಷ್ಟು ಹೊತ್ತು ಕುಳಿತುಕೊಳ್ಳಿ.

ಸೂರ್ಯೋದಯದ ಮಂತ್ರಗಳು:
1. ಸೂರ್ಯಾಯ ಸ್ವಾಹಾ ಸೂರ್ಯಾಯ ಇದಂ ನ ಮಮ
2. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನ ಮಮ

ಸೂರ್ಯಾಸ್ತದ ಮಂತ್ರಗಳು:

1. ಅಗ್ನಿಯೇ ಸ್ವಾಹಾ ಅಗ್ನಿಯೇ ಇದಂ ನ ಮಮ
2. ಪ್ರಜಾಪತಯೇ ಸ್ವಾಹಾ ಪ್ರಜಾಪತಯೇ ಇದಂ ನ ಮಮ

ಉರಿ ಮಾಡಲು ಸೀಮೆಎಣ್ಣೆ ಉಪಯೋಗಿಸಬಾರದು. ಹಳೇ ಕಾಲದ ತಪಸ್ವಿಗಳ ಋಷಿಮುನಿಗಳ ಹೋಮ ಹವನಾದಿ ಟೀಕಿಸುವವರು, ಮಳೆ ಬರಲೆಂದು ಮಾಡುವ ಹೋಮವನ್ನು ಆಡಿಕೊಳ್ಳುವ ಬುದ್ಧಿಜೀವಿಗಳು ಸ್ವತಃ ಅಗ್ನಿಹೋತ್ರ ಮಾಡಿ ತಮ್ಮ ನಕಾರಾತ್ಮಕ ಯೋಚನೆಗಳನ್ನು ಬಗೆಹರಿಸಿಕೊಂಡು ಉತ್ತಮ ಸಮಾಜಕ್ಕೆ ನೆರವಾಗಬೇಕಿದೆ. ಸುಲಭ ಹಾಗೂ ಕಡಿಮೆ ಅವಧಿಯ ಈ ಆಚರಣೆ ಮಾಡಿದ ಅನೇಕರು ಈಗ ಇದರ ಪ್ರಯೋಜನವನ್ನು ಸ್ವತಃ ಅನುಭವಿಸಿದ್ದಾರೆ. ಇದರಲ್ಲಿ ಭಾರತ ಮಾತ್ರವಲ್ಲದೇ ವಿದೇಶಗಳ ಸಂಶೋಧಕರು, ವೈದ್ಯರು, ಪ್ರೊಫೆಸರ್‍ಗಳೂ ಸೇರಿದ್ದಾರೆ. ಹಾಗಾಗಿ ಅಗ್ನಿಹೋತ್ರ ಆಚರಣೆ ಮಾಡಿ ನಿಮ್ಮ ಮನ ಹಾಗೂ ಮನೆಯನ್ನು ಸಕಾರಾತ್ಮಕತೆಯಿಂದ ತುಂಬಿರುವಂತೆ ನೋಡಿಕೊಳ್ಳಿ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!