ಅಳಲೇಕಾಯಿ ಅಥವಾ ಹರೀತಕಿ : ತ್ರಿದೋಷ ( ವಾತ,ಪಿತ್ತ , ಕಪ) ಗಳನ್ನು ಸಮಸ್ಥಿತಿಯಲ್ಲಿ ಇಡುವ ಔಷಧಿ

ಅಳಲೇಕಾಯಿ ಅಥವಾ ಹರೀತಕಿ ಒಂದು ಉಪಯುಕ್ತ ಔಷಧಿ, ಅದ್ಭುತ ಗಿಡಮೂಲಿಕೆ. ಹರೀತಕಿಯನ್ನು ಉಪ್ಪು ಸೇರಿಸಿ ತೆಗೆದುಕೊಂಡರೆ ವಿಕೃತ ಕಪದೋಷ ಕಡಿಮೆ ಮಾಡುತ್ತದೆ. ಸಕ್ಕರೆ ಸೇರಿಸಿ ತೆಗೆದುಕೊಂಡರೆ ವಿಕೃತ ಪಿತ್ತ ಕಡಿಮೆ ಮಾಡುತ್ತದೆ, ತುಪ್ಪದ ಜೊತೆಗೆ ತೆಗೆದು ಕೊಂಡರೆ ವಿಕೃತ ಕಪ ಕಡಿಮೆಮಾಡುತ್ತದೆ.

ಆಯುರ್ವೇದದಲ್ಲಿ ಅಳಲೇಕಾಯಿ ಒಂದು ಉಪಯುಕ್ತ ಔಷಧಿ, ಇದೊಂದು ಪ್ರಕೃತಿಯ ಅದ್ಭುತ ಗಿಡಮೂಲಿಕೆ ಎಂದರೆ ತಪ್ಪಾಗಲಾರದು. ಕೆಂದರೆ ಇದು ಅನೇಕ ಔಷದಿ ಗುಣಗಳ ಸಮೃದ್ಧವಾಗಿದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ Terminalia Chebula, ಆಯುರ್ವೇದದಲ್ಲಿ ಹರೀತಕಿ ಎಂದು ಕರೆಯುತ್ತಾರೆ. ಅಮೃತ, ಅಭಯ, ವಯಸ್ತಾ, ಪಥ್ಯ, ವಿಜಯಾ, ಹೈಮಾವತಿ ಎಂದು ಅನೇಕ ಹೆಸರಗಳಿಂದ ಕರೆಯಲ್ಪಡುತ್ತದೆ. ಹರೀತಕಿ ಯಲ್ಲಿ 7 ವಿಧಗಳಿವೆ ಎಂದು ಭಾವಪ್ರಕಾಶ ನಿಘಂಟುವಿನಲ್ಲಿ  ಹೇಳಿದ್ದಾರೆ.

ಅಳಲೇಕಾಯಿ ಅಥವಾ ಹರೀತಕಿ : ತ್ರಿದೋಷ ( ವಾತ,ಪಿತ್ತ , ಕಪ) ಗಳನ್ನು ಸಮಸ್ಥಿತಿಯಲ್ಲಿ ಇಡುವ ಔಷಧಿ

1- ವಿಜಯಾ: ಇದು ಎಲ್ಲ ರೋಗಗಳ ಮೇಲೆ ಜಯ ಸಾಧಿಸುವದರಿಂದ ಇದನ್ನು ವಿಜಯಾ ಎಂದು ಕರೆಯುತ್ತಾರೆ
2- ರೋಹಿಣಿ: ಇದರಲ್ಲಿ ಗಾಯ ಕಡಿಮೆ ಮಾಡುವ ಗುಣವಿರುವದರಿಂದ ಇದನ್ನು ರೋಹಿಣಿ ಎಂದು ಕರೆಯುತ್ತಾರೆ.
3- ಪೂತನ: ಇದನ್ನು ಲೇಪನ (external application)ಮಾಡುವದರಿಂದ ಪೂತನ ಎಂದು ಕರೆಯುತ್ತಾರೆ.
4- ಅಮೃತ: ಇದನ್ನು ಶೋಧನ ಕರ್ಮ (detoxification therapy) ದಲ್ಲಿ ಬಳಸುತ್ತಾರೆ
5- ಅಭಯಾ: ಇದನ್ನು ನೇತ್ರ ರೋಗದಲ್ಲಿ ಬಳಸುತ್ತಾರೆ.
6- ಜೀವಂತಿ: ಇದನ್ನು ಎಲ್ಲ ರೋಗಗಳಲ್ಲಿ ಬಳಸುತ್ತಾರೆ
7- ಚೇತಕಿ.

ಇದು ದೊಡ್ಡ ಗಿಡವಾಗಿದ್ದು, ಭಾರತದ ಉತ್ತರ ಪ್ರದೇಶದಲ್ಲಿ, ದಕ್ಷಿಣ ಭಾರತದಲ್ಲಿ, ಪಶ್ಚಿಮ ಬೆಂಗಾಲದಲ್ಲಿ ಬೆಳೆಯಲಾಗುತ್ತಿದೆ. ಇದರ ಎಲೆಗಳು ಅಂಡಾಕಾರ ವಾಗಿದ್ದು, 8-20 cm , ಉದ್ದವಾಗಿದ್ದು, ಬಿಳಿ/ಹಳದಿ ಬಣ್ಣದ ಹೂವು, ಅಂಡಾಕಾರ ಹಣ್ಣು ಹೊಂದಿವೆ.

ಅಳಲೇಕಾಯಿ ಔಷಧಿ ಗುಣಗಳು:

ಚರ್ವಿತಾ ವರ್ಧಯೇತ ಅಗ್ನಿಂ, ಪೇಷಿತಾ ಮಲಶೋಧಿನಿ, ಸ್ವಿನ್ನಾಸಂಗ್ರಹಿಣಿ ಪಥ್ಯಾಬೃಷ್ಪ ಪ್ರೋಕ್ತಾ ತ್ರಿದೋಷನುತ್!
ತಾತ್ಪರ್ಯ: ಅಳಲೇಕಾಯಿ ಯನ್ನು ಹಾಗೆಯೇ ಅಗಿದು ತಿಂದರೆ ಹಸಿವೆಯನ್ನು ಹೆಚ್ಚು ಮಾಡುವುದು, ಇದನ್ನು ಕುಟ್ಟಿ ಪುಡಿ ಮಾಡಿ ತಿಂದರೆ ಮಲಬದ್ಧತೆ, ಅಜೀರ್ಣ ತೊಂದರೆ ನಿವಾರಣೆ ಮಾಡುವದು, ಇದನ್ನು ಬೇಯಿಸಿ ತಿಂದರೆ ಕರುಳಿನ ತೊಂದರೆ (colitis) ಕಡಿಮೆ ಮಾಡಲು ಸಹಾಯ ಮಾಡುವದು. ಆದ್ದರಿಂದ ಈ ಮೇಲಿನ ಎಲ್ಲ ಗುಣವುಳ್ಳ ಅಳಲೇಕಾಯಿಯನ್ನು ಪಥ್ಯ ಎಂದು ಕರೆಯುತ್ತಾರೆ ಮತ್ತು ತ್ರಿದೋಷ ( ವಾತ, ಪಿತ್ತ , ಕಪ) ಗಳನ್ನು ಸಮಸ್ಥಿತಿಯಲ್ಲಿ ಇಡುವುದು.

ಹರೀತಕಿಯನ್ನು ಉಪ್ಪು ಸೇರಿಸಿ ತೆಗೆದುಕೊಂಡರೆ ವಿಕೃತ ಕಪದೋಷ ಕಡಿಮೆ ಮಾಡುತ್ತದೆ. ಸಕ್ಕರೆ ಸೇರಿಸಿ ತೆಗೆದುಕೊಂಡರೆ ವಿಕೃತ ಪಿತ್ತ ಕಡಿಮೆ ಮಾಡುತ್ತದೆ, ತುಪ್ಪದ ಜೊತೆಗೆ ತೆಗೆದು ಕೊಂಡರೆ ವಿಕೃತ ಕಪ ಕಡಿಮೆಮಾಡುತ್ತದೆ. ಇದರ ಪ್ರಮುಖ ಕರ್ಮ ಅನುಲೋಮನ (ಅಪಕ್ವ ಮಲವನ್ನು ಪಕ್ವಮಾಡಿ  ಗುದದ್ವಾರದ ಮೂಲಕ ಹೊರಗಡೆ ಹಾಕುವುದು) ಎಂದು ಹೇಳಿದ್ದಾರೆ. ಇದನ್ನು ಶೋತ ( swelling), ಕುಷ್ಠ, ಗಾಯ, ಕ್ರಿಮಿರೋಗದಲ್ಲಿ, ಔಷಧಿಯಾಗಿ ಬಳಸ್ಪಟ್ಟಿದೆ.

ಔಷಧಿ ಉಪಯೋಗಗಳು:
1. ಮಧುಮೇಹ: ಅಳಲೇಕಾಯಿಯ ಚೂರ್ಣ ವನ್ನು ಬಿಸಿ ನೀರಿನಲ್ಲಿ ‌ಹಾಕಿ  ಎರಡು ಬಾರಿ ತೆಗೆದು ಕೊಳ್ಳ ಬೇಕು.

2. ಪ್ರತಿ ನಿತ್ಯ ಹರೀತಕಿ ಚೂರ್ಣ(ಸರಾಸರಿ 3 gm) ಬಿಸಿ ನೀರಿನಲ್ಲಿ ಹಾಕಿ 2 ಬಾರಿ ತೆಗದುಕೊಳ್ಳವದರಿಂದ ಮಲಬದ್ದತೆ, ಮೂಲವ್ಯಾದಿ, ನಿವಾರಣವಾಗುತ್ತದೆ.
ಸೂಚನೆ: ಹರೀತಕಿ ಯನ್ನು ಗರ್ಭಿಣಿಯರಲ್ಲಿ ಬಳಸಬಾರದು.

3. ಆಯುರ್ವೇದ ಔಷಧಿಗಳಲ್ಲಿ ಅಳಲೇಕಾಯಿ ಬಳಸಲಾಗಿದೆ ಉದಾಹರಣೆಗೆ: ತ್ರಿಫಲ (ಅಳಲೇಕಾಯಿ, ತಾಡೆಕಾಯಿ, ನೆಲ್ಲಿ ಕಾಯಿ, ಸಂಯೋಜನೆ), ತ್ರಿಫಲಾ ಘ್ರತ, ಅಗಸ್ತೈ ಹರೀತಕಿ, ಚಿತ್ರಕ ಹರೀತಕಿ.

ರಾಸಾಯನಿಕ ಸಂಘಟನೆ ಗಳು:

ಹಣ್ಣು: chebulic acid, tannicacid, vit-c
ಹೂವು: chebulin

ಆಧುನಿಕ ಸಂಶೋಧನೆ: 
1. ಅಳಲೇಕಾಯಿ ಯಲ್ಲಿ ಮಲಬದ್ದತೆ ನಿವಾರಣೆಮಾಡುವ (laxative property) ವಿಶಿಷ್ಟ ಗುಣವಿದೆ.
2. ಇದು E-coli ಜಂತುಗಳವ ಬೆಳವಣಿಗೆ ತಡೆಗಟ್ಟುವ ಗುಣವಿದೆ. It is a good source of antioxidants.

dr-shweta-kulkarni

ಡಾ.ಶ್ವೇತಾ ಕುಲಕರ್ಣಿ
ವಿದ್ಯಾರಣ್ಯ ಆಯುರ್ವೇದಾಲಯ.
ವಿದ್ಯಾರಣ್ಯಪುರ ಮುಖ್ಯ ರಸ್ತೆ
ದುರ್ಗಪರ್ಮೇಶ್ವರಿ ದೇವಸ್ಥಾನದ ಹತ್ತಿರ.
ಬೆಂಗಳೂರು 560097 ಮೊ:97398 12150

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!