‘ಕರೊನಾ’ಗೆ ಯಶಸ್ವಿಯಾಯ್ತು ಆಯುರ್ವೇದ ಚಿಕಿತ್ಸೆ..!

‘ಕರೊನಾ’ಗೆ ಯಶಸ್ವಿಯಾಯ್ತು ಆಯುರ್ವೇದ ಚಿಕಿತ್ಸೆ.ವಿಶ್ವವನ್ನೇ ಕಂಗೆಡಿಸಿರುವ ಕೊರೋನಾ ವೈರಸ್​ಗೆ ಡಾ.ಗಿರಿಧರ್ ಕಜೆ ಕಂಡುಹಿಡಿದಿರುವ ಔಷಧ ಪ್ರಯೋಗ  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ನಡೆದಿದ್ದು, ಕೊರೋನಾ ರೋಗಿಗಳಿಗೆ ನೀಡಿದ ಚಿಕಿತ್ಸೆ ಯಶಸ್ವಿಯಾಗಿದೆ. ಜೂನ್ 7ರಿಂದ ಜೂನ್ 25ರ ನಡುವೆ ಈ ವೈದ್ಯಕೀಯ ಪ್ರಯೋಗವನ್ನು ನಡೆಸಲಾಗಿತ್ತು.

 ‘ಕರೊನಾ’ಗೆ ಯಶಸ್ವಿಯಾಯ್ತು ಆಯುರ್ವೇದ ಚಿಕಿತ್ಸೆ..!ಜಗತ್ತಿನ ಆಗುಹೋಗುಗಳನ್ನೇ ಬುಡಮೇಲು ಮಾಡಿದ ಕರೊನಾ ವೈರಸ್ ಸಾಂಕ್ರಾಮಿಕಕ್ಕೆ ಇದೀಗ ನಮ್ಮ ಪ್ರಾಚೀನ ವೈದ್ಯ ಪದ್ಧತಿ ಆಯುರ್ವೇದದಿಂದ ಪರಿಣಾಮಕಾರಿಯಾಗಿ ಚಿಕಿತ್ಸೆ ಸಾಧ್ಯಎನ್ನುವ ಸಂತಸದ ವಿಷಯವೊಂದು ವರದಿಯಾಗಿದೆ. ಬೆಂಗಳೂರಿನಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿದ್ದು 10 ಜನ ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್‍ ಆಗಿದ್ದಾರೆ. ಈ ಕ್ಲಿನಿಕಲ್ ಟ್ರಯಲ್ ನಗರದ ವಿಕ್ಟೋರಿಯಾ ಆಸ್ಪತ್ರೆಯ ಸೋಂಕಿತರ ಮೇಲೆ ನಡೆಸಲಾಗಿದ್ದು ಕೇವಲ 9 ದಿನಗಳಲ್ಲಿ ನೆಗೆಟಿವ್ ವರದಿಯೊಂದಿಗೆ ಮನೆಗೆ ತೆರಳಿದ್ದಾರೆ. ಈ ಪ್ರಯೋಗವನ್ನು ಕೇಂದ್ರ ಸರಕಾರದ ಮಾರ್ಗಸೂಚಿಗೆ ಅನುಗುಣವಾಗಿ ಆಯುರ್ವೇದ ವೈದ್ಯ  ಡಾ.ಗಿರಿಧರ್ ಕಜೆ ನೇತೃತ್ವದಲ್ಲಿ ನಡೆಸಲಾಗಿತ್ತು.

ಈ ಕ್ಲಿನಿಕಲ್ ಟ್ರಯಲ್‍ಗೆ ಸಿಟಿಆರ್‍ಐನಲ್ಲಿ ನೋಂದಣಿಯಾಗಿರುವ ಭೌಮ್ಯ, ಸಾತ್ಮ್ಯ ಎಂಬ ಎರಡು ಮಾತ್ರೆಗಳನ್ನು ಮಾತ್ರ ನೀಡಲಾಗಿದ್ದು, 23ವರ್ಷದಿಂದ 65ವರ್ಷದವರೆಗಿನ ಪ್ರಾಯದವರಿಗೆ ಜೂನ್ 7 ರಿಂದ 25ರವರೆಗೆ ಪ್ರಯೋಗ ನಡೆಸಲಾಗಿತ್ತು. ಅದಾಗಲೇ ನೀಡುತ್ತಿದ್ದ ಅಲೋಪತಿ ಚಿಕಿತ್ಸೆಯ ಜೊತೆಗೇ ಆಯುರ್ವೇದ ಟ್ರಯಲ್ ನಡೆಸಲಾಗಿದ್ದು ಕೇವಲ 2 ರಿಂದ 4 ದಿನಗಳಲ್ಲಿ ಸೋಂಕಿನ ಗುಣಲಕ್ಷಣಗಳು ಮಾಯವಾಗಿದ್ದವು. ಯಾವ ಸೋಂಕಿತರೂ ಮುಂದಿನ ಹಂತಕ್ಕೆ ಹೋಗದೇ ಗುಣಮುಖರಾಗಿದ್ದು ಯಾರಿಗೂ ಅಡ್ಡಪಡಿಣಾಮಗಳು ಕಂಡುಬಂದಿಲ್ಲ. ಕರೊನ ಸೋಂಕು ತಗುಲಿದ ಶೇಕಡಾ 90 ಜನರಲ್ಲಿ ಯಾವುದೇ ಗುಣಲಕ್ಷಣಗಳು ಕಂಡುಬರುವುದಿಲ್ಲ. ಆ ಪೈಕಿ ಅನೇಕರು ಯಾವುದೇ ಔಷಧ ಅವಶ್ಯಕತೆ ಇಲ್ಲದೆ ಅಥವಾ ಸಾಮಾನ್ಯ ಕೆಮ್ಮು, ಜ್ವರದ ಔಷಧಗಳಿಂದಲೇ ಗುಣಮುಖರಾಗುತ್ತಾರೆ.

ಆಯುರ್ವೇದ ಔಷಧಿ ಪರಿಣಾಮಕಾರಿ:

ಈ ಕ್ಲಿನಿಕಲ್ ಟ್ರಯಲ್‍ನಲ್ಲಿ ಭಾಗಿಯಾಗಿದ್ದ ಎಲ್ಲಾ ಸೋಂಕಿತರೂ ಕಿಡ್ನಿ, ಹೃದಯ, ಶ್ವಾಸಕೋಶ, ಮಧುಮೇಹದಂತಹ ಸಮಸ್ಯೆಯನ್ನು ಹೊಂದಿದವರು ಹಾಗೂ ಕರೊನಾ ಗುಣಲಕ್ಷಣ ಇದ್ದವರೇ ಆಗಿದ್ದರು. ಈ ಯಶಸ್ವೀ ಪ್ರಯೋಗದಿಂದ ಆಯುರ್ವೇದ ಔಷಧಿ ಪರಿಣಾಮಕಾರಿ ಎಂಬುದು ಸಾಬೀತಾದಂತಾಗಿದೆ. ಇನ್ನೊಂದು ಸಂತಸದ ವಿಷಯವೇನೆಂದರೆ ಈ ಕರೊನಾಗುಣಪಡಿಸಲು ಸಾವಿರಾರು ರೂಪಾಯಿ ವ್ಯಯಿಸಬೇಕಾಗಿಲ್ಲ. ಕೇವಲ ರೂ.60 ರಿಂದ ರೂ.180ರ ಒಳಗೇ ಚಿಕಿತ್ಸೆ ಸಾಧ್ಯ ಮತ್ತು ಇದರಿಂದ ಯಾವುದೇ ಅಡ್ಡಪರಿಣಾಮಗಳೂ ಇಲ್ಲ. ಆಯುರ್ವೇದ ಪದ್ಧತಿಯಲ್ಲಿ ಈ ರೀತಿಯ ಕಾಯಿಲೆಗಳಿಗೆ ಮೊದಲೇ ಚರಕ, ಶುಶ್ರುತರಂತಹ ವೈದ್ಯಮುನಿಗಳು ತಮ್ಮ ಸಂಹಿತೆಯಲ್ಲಿ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ಅನೇಕ ಆಯುರ್ವೇದ ವೈದ್ಯರು ಕರೊನಾಗೆ ತಮ್ಮ ಬಳಿ ಔಷಧವಿರುವುದಾಗಿ ತಿಳಿಸಿದ್ದರು. ಆದರೆ ಕೇಂದ್ರ ಸರ್ಕಾರದ ವೈದ್ಯಕೀಯ ಸಂಶೋಧನಾ ಪರಿಷತ್ ನಿಯಮಾವಳಿಗಳ ಪ್ರಕಾರ ಅಂತಾರಾಷ್ಟ್ರೀಯ ಮನ್ನಣೆ ಪಡೆದಿರುವ ವಿಧಾನದಂತೆ ವೈಜ್ಞಾನಿಕವಾಗಿ ಯಾವುದೇ ಸಂಶೋಧನೆ ದೃಢಪಟ್ಟಿರಲಿಲ್ಲ. ಬೆಂಗಳೂರಿನ ಆಯುರ್ವೇದ ವೈದ್ಯರಾಗಿರುವ ಡಾ.ಗಿರಿಧರಕಜೆ ಪ್ರಯೋಗ ನಡೆಸಲು ಅನುಮತಿಕೋರಿ ಸಲ್ಲಿಸಿದ್ದ ಅರ್ಜಿಗೆ ಬೆಂಗಳೂರು ಮೆಡಿಕಲ್ ಕಾಲೇಜು ಎಥಿಕ್ಸ್ ಸಮಿತಿ ಮೇ 16ರಂದು ಅನುಮತಿ ನೀಡಿತ್ತು. ಮುಖ್ಯ ಸಂಶೋಧಕರಾದ ಡಾ. ಗಿರಿಧರಕಜೆಯವರೊಂದಿಗೆ ವಿಕ್ಟೋರಿಯಾ ಆಸ್ಪತ್ರೆಯ ಡಾ. ಸಿ. ಆರ್. ಜಯಂತಿ ಸಹ ಸಂಶೋಧಕಿಯಾಗಿ ಪ್ರಯೋಗ ನಡೆಸಿದ್ದರು.

dr giridhar kajeಈ ಯಶಸ್ವೀ ಅಭಿಯಾನವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಈ ವಿಷಯವನ್ನು ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ಸಂಶೋಧನೆಯನ್ನು ಚಿಕಿತ್ಸೆಯಲ್ಲಿ ಬಳಕೆ ಮಾಡುವ ಕುರಿತು ವರದಿಯನ್ನು ನೀಡುವಂತೆ ರಾಜೀವ್‍ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ ಕುಲಪತಿಯವರಾದ ಡಾ. ಎಸ್. ಸಚ್ಚಿದಾನಂದ ಅವರಿಗೆ ತಿಳಿಸಲಾಗಿದೆ. ಅದರ ಆಧಾರದಲ್ಲಿ ಮುಂದುವರೆಯುತ್ತೇವೆ ಎಂದು ಕರ್ನಾಟಕದ ಆರೋಗ್ಯ ಸಚಿವರಾಗಿರುವ ಬಿ. ಶ್ರೀರಾಮುಲು ಹೇಳಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ 23 ವರ್ಷದಿಂದ 65 ವರ್ಷದವರೆಗಿನ ಕೊರೋನಾ ರೋಗಿಗಳಿಗೆ ಈ ಚಿಕಿತ್ಸೆ ನೀಡಲಾಗಿತ್ತು. ಕೇವಲ ಎರಡರಿಂದ ನಾಲ್ಕು ದಿನಗಳಲ್ಲಿ ಸೋಂಕಿತರ ಶೀತ, ಕೆಮ್ಮು, ಜ್ವರ, ಸುಸ್ತು, ತಲೆನೋವು, ಉಸಿರಾಟದ ತೊಂದರೆ ಸಂಪೂರ್ಣ ಗುಣಮುಖವಾಗಿದೆ. 3ರಿಂದ 9 ದಿನಗಳಲ್ಲಿ ರೋಗಿಗಳ RT PCR ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿದೆ. ಹೃದ್ರೋಗ, ಕ್ಷಯ ರೋಗ, ಹೈಪರ್ ಟೆನ್ಷನ್, ಮಧುಮೇಹ ಇದ್ದ ರೋಗಿಗಳು ಗುಣಮುಖರಾಗಿದ್ದಾರೆ. ಕೊರೋನಾ ರೋಗ ಮುಂದಿನ ಹಂತಕ್ಕೆ ಹೋಗದೆ ಎಲ್ಲರಲ್ಲೂ ಗುಣವಾಗಿದೆ. ಅಡ್ಡ ಪರಿಣಾಮಗಳಲ್ಲದ ಚಿಕಿತ್ಸೆಯನ್ನು ನೀಡಿ ಕೊರೋನಾ ಸ್ಟಾಂಡರ್ಡ್​ ಕೇರ್​ನ ಜೊತೆಗೆ ಆರ್ಯುವೇದ ಔಷಧಿಗಳಿಂದ ಚಿಕಿತ್ಸೆ ನೀಡಲಾಗಿದೆ. ಅತಿ ಕಡಿಮೆ ವೆಚ್ಚದ ಚಿಕಿತ್ಸೆ ಇದಾಗಿದ್ದು, ಈ ಪ್ರಯೋಗ ಯಶಸ್ವಿಯಾಗಿದೆ. 23 ವರ್ಷಗಳಿಂದ ಆಯುರ್ವೇದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಆಯುರ್ವೇದ ವೈದ್ಯ ಗಿರಿಧರ ಕಜೆ ತಾವು ಕಂಡುಹಿಡಿದ ಔಷಧನ್ನು ಪ್ರಯೋಗ ಮಾಡಲು ರಾಜ್ಯ ವೈದ್ಯಕೀಯ ಇಲಾಖೆ ಬಳಿ ಅನುಮತಿ ಪಡೆದಿದ್ದರು.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!