ಆಕ್ಯುಲರ್ ಪ್ರಾಸ್ಥೆಸಿಸ್ ನೇತ್ರ ದೃಷ್ಟಿ ನ್ಯೂನತೆ ಸರಿಪಡಿಸುವ ಚಿಕಿತ್ಸೆ


ಆಕ್ಯುಲರ್ ಪ್ರಾಸ್ಥೆಸಿಸ್ ನೇತ್ರ ದೃಷ್ಟಿ ನ್ಯೂನತೆ ಸರಿಪಡಿಸುವ ಚಿಕಿತ್ಸೆಆಕ್ಯುಲರ್ ಪ್ರೊಸ್ಥಿಸಿಸ್  ನೇತ್ರ ದೃಷ್ಟಿ ನ್ಯೂನತೆ ಸರಿಪಡಿಸುವ ಚಿಕಿತ್ಸೆ.  ಈ ಚಿಕಿತ್ಸಾ ಪದ್ದತಿಯು ಸಾಧ್ಯವಾದಷ್ಟೂ ಸಹಜ ನೇತ್ರಕ್ಕೆ ಹತ್ತಿರವಾಗುವ ರೀತಿಯಲ್ಲಿ ರೋಗಿಗೆ ಕಡಿಮೆ ವೆಚ್ಚದಲ್ಲಿ ಅನುಕೂಲ ಕಲ್ಪಿಸುತ್ತಿರುವುದು ವಿಶೇಷ.

ರೋಗದಿಂದಲೋ ಅಥವಾ ಅಪಘಾತದಿಂದಲೋ ದುರದೃಷ್ಟವಶಾತ್ ಕಣ್ಣನ್ನು ಕಳೆದುಕೊಂಡ ರೋಗಿಯ ದೃಷ್ಟಿದೋಷ, ಮೆಳ್ಳಗಣ್ಣು, ಕಣ್ಣು ಗುಡ್ಡೆಯ ವಿಕಾರತೆ, ಒರೆಗಣ್ಣು, ನೇತ್ರ ನ್ಯೂನತೆಯ ಜೊತೆಗೆ ಮಾನಸಿಕ ಯಾತನೆಯನ್ನೂ ಅನುಭವಿಸುತ್ತಾರೆ. ನೋವಿನ ಈ ಯಾತನೆ ಮತ್ತು ನೇತ್ರ ದೋಷ ಮುಂದುವರೆದಂತೆಲ್ಲಾ ಸಾಮಾಜಿಕ ಕಳಂಕ, ಕೀಳರಿಮೆಯಿಂದ ರೋಗಿಯೂ ಮಾನಸಿಕವಾಗಿಯೂ ಜರ್ಜರಿತನಾಗಿ ಹಿನ್ನಡೆಗೆ ಒಳಗಾಗುತ್ತಾರೆ. ಆಕ್ಯುಲರ್ ಪ್ರೊಸ್ಥಿಸಿಸ್ ಎಂಬ ನೇತ್ರ ದೃಷ್ಟಿ ನ್ಯೂನತೆಯನ್ನು ಸರಿಪಡಿಸುವ ವಿಧಾನದ ಚಿಕಿತ್ಸೆಯು ಇಂಥ ರೋಗಿಗಳಲ್ಲಿ ಭರವಸೆಯ ಬೆಳಕು ಮೂಡಿಸಿದೆ. ಈ ಚಿಕಿತ್ಸಾ ಪದ್ದತಿಯು ಸಾಧ್ಯವಾದಷ್ಟೂ ಸಹಜ ನೇತ್ರಕ್ಕೆ ಹತ್ತಿರವಾಗುವ ರೀತಿಯಲ್ಲಿ ರೋಗಿಗೆ ಕಡಿಮೆ ವೆಚ್ಚದಲ್ಲಿ ಅನುಕೂಲ ಕಲ್ಪಿಸುತ್ತಿರುವುದು ವಿಶೇಷ.

ಆಕ್ಯುಲರ್ ಪ್ರೊಸ್ಥಿಸಿಸ್:

1. ಆಕ್ಯುಲರ್ ಪ್ರೊಸ್ಥಿಸಿಸ್, ನೇತ್ರ ದೃಷ್ಟಿ ನ್ಯೂನತೆಯನ್ನು ಸರಿಪಡಿಸುವ ಒಂದು ಚಿಕಿತ್ಸಾ ವಿಧಾನ. ಅಲ್ಲದೇ, ಈ ಚಿಕಿತ್ಸಾ ಪದ್ದತಿಯು ಸಾಧ್ಯವಾದಷ್ಟು ಸಹಜ ನೇತ್ರಕ್ಕೆ ಹತ್ತಿರವಾಗುವ ರೀತಿಯಲ್ಲಿ ರೋಗಿಗೆ ಕಡಿಮೆ ವೆಚ್ಚದಲ್ಲಿ ಅನುಕೂಲ ಕಲ್ಪಿಸಲಿದೆ.

2. ಕಸ್ಟಮ್ ಅಕ್ಯುಲರ್ ಪ್ರೊಸ್ಥಿಸಿಸ್, ವಿವಿಧ ಸಮಸ್ಯೆಗಳಿಗೆ ನಡೆಸಲಾಗುವ ಶಸ್ತ್ರಚಿಕಿತ್ಸೆ ಬಳಿಕ ಕೈಗೊಳ್ಳುವ ಚಿಕಿತ್ಸಾ ವಿಧಾನವಾಗಿದೆ. ನೇತ್ರ ದೋಷ, ದೃಷ್ಟಿ ನ್ಯೂನತೆ, ಮೆಳ್ಳಗಣ್ಣು, ಒರೆಗಣ್ಣು, ಕಣ್ಣು ಗುಡ್ಡೆ ವಿಕಾರತೆ ಇತ್ಯಾದಿ ಸಮಸ್ಯೆ ಇರುವ ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು.

3. ಕಣ್ಣಿನ ಒಳಗೆ ಗಡ್ಡೆ, ಸೋಂಕು ಅಥವಾ ಅಪಘಾತದ ಪೆಟ್ಟು ಸ್ಥಿತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಬಹುದಾಗಿದ್ದು, ಇಂಥ ಸಂದರ್ಭಗಳಲ್ಲಿ ಮಾತ್ರ ಈ ಚಿಕಿತ್ಸಾ ವಿಧಾನವು ಸೂಕ್ತವಾಗಿರುತ್ತದೆ.

4. ವಿರೂಪಗೊಂಡ ದೃಷ್ಟಿದೋಷ ಇರುವ ಕಣ್ಣಿಗೆ ಅಕ್ಯುಲರ್ ಪ್ರೊಸ್ಥಿಸಿಸ್ ಚಿಕಿತ್ಸೆ ನೀಡಬಹುದು.

5. ನೋವಿರುವ ದೃಷ್ಟಿದೋಷವುಳ್ಳ ಕಣ್ಣಿಗೆ ಪೂರ್ವ ಚಿಕಿತ್ಸೆ ನಂತರ ಅಕ್ಯುಲರ್ ಪೊಸ್ಥಿಸಿಸ್ ವಿಧಾನದ ಮೂಲಕ ಸರಿಪಡಿಸಬಹುದು.

6. ಈ ಹಿಂದೆ ಸ್ಟಾಕ್ ಐಗಳನ್ನು ರೋಗಿ ಉಪಯೋಗಿಸಿ, ಅದರಿಂದ ಅನಾನುಕೂಲ, ಕಿರಿಕಿರಿ, ನೋವು, ಉರಿ ಅಥವಾ ನೀರು ಸೋರಿಕೆಯಾಗಿದ್ದರೆ, ಕಸ್ಟಮ್ ಪ್ರೊಸ್ಥಿಸಿಸ್ ಅಳವಡಿಕೆಯಿಂದ ಪ್ರಯೋಜನ ಪಡೆಯಬಹುದಾಗಿದೆ.

7. ಎನೋಫ್ತಾಮಾಲ್ ಎಂಬ ನೇತ್ರ ದೋಷ, ಮೆಳ್ಳಗಣ್ಣು, ಓರೆಗಣ್ಣು, ಸೊಟ್ಟ ಕಣ್ಣು ಅಥವಾ ಕಣ್ಣು ಗುಡ್ಡೆಯ ದೋಷಗಳನ್ನು ಆಧುನಿಕ ವಿಧಾನದಿಂದ ಸೃಷ್ಟಿಸಿದ ಕಣ್ಣಿನೊಂದಿಗೆ ಸರಿಪಡಿಸಿ ಸಹಜ ನೇತ್ರದಂತೆ ಮಾಡಬಹುದು.

8. ಕಸ್ಟಮ್ ಪ್ರೊಸ್ಥಿಸಿಸ್ ಅಳವಡಿಸುವುದಕ್ಕೂ ಮೊದಲು, ಅದರ ಆರೋಗ್ಯವನ್ನು ದೃಢಪಡಿಸಿಕೊಳ್ಳಲು ಸಾಕೆಟ್ (ಆಧಾರ) ಬಳಸಲಾಗುತ್ತದೆ. ಅದನ್ನು ಅಳತೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಯಾವುದೇ ಸಕ್ರಿಯ ಸೋಂಕು ಅಥವಾ ಉರಿ, ತೀವ್ರ ಮೃದುತ್ವ ಅಥವಾ ಸಂವೇದನೆ ಇರಬಾರದು. ಸ್ಥಳಾವಕಾಶ ಸಾಕಷ್ಟಿದ್ದು, ಪ್ರೊಸ್ಥಿಸಿಸ್‍ಗೆ ಆಧಾರವಾಗಿರುವಂತೆ ರೂಪಿಸಬೇಕು.

9. ಪ್ರೊಸ್ಥಿಸಿಸ್ ಜೋಡಣೆಗೆ ಮುನ್ನ ರೋಗಿಯ ಸಾಕೆಟ್ ಅಥವಾ ಕಣ್ಣಿನ ಅಳತೆಗೆ ಒಳಪಡಬೇಕು. ಚಿಕಿತ್ಸೆಗೆ ಅಗತ್ಯವಾದ ಯಾವುದೇ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವ ವಿಷಯದಲ್ಲಿ ಹೊಂದಿಕೊಳ್ಳಬೇಕಾಗುತ್ತದೆ. ಬಹುತೇಕ ಸನ್ನಿವೇಶದಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೇ ಕಸ್ಟಮ್ ಪ್ರೊಸ್ಥಿಸಿಸ್ನನ್ನು ಜೋಡಿಸಲಾಗುವುದು. ಅದಾಗ್ಯೂ, ಕೆಲವು ಆಯ್ಕೆ ಮಾಡಿದ ಪ್ರಕರಣಗಳಲ್ಲಿ ಪೂರ್ವ ಶಸ್ತ್ರಚಿಕಿತ್ಸೆ ವಿಧಾನಗಳು ಅಗತ್ಯವಾಗಬಹುದು.

ಕಸ್ಟಮ್ ಆಕ್ಯುಲರ್ ಪ್ರೊಸ್ಥಿಸಿಸ್ ವಿಧಾನ:

1. ಕಸ್ಟಮ್ ಪ್ರೊಸ್ಥಿಸಿಸ್ ವಿಧಾನವು ತುಂಬಾ ಬಾಳಿಕೆಯ ಚಿಕಿತ್ಸೆ. ಅದನ್ನು ಉತ್ತಮ ದರ್ಜೆಯ ಅಕ್ರಿಲಿಕ್‍ನಿಂದ ತಯಾರಿಸುವ ಕಾರಣ ಇದು ದೀರ್ಘ ಕಾಲ ಇರುತ್ತದೆ. ಇದಕ್ಕೆ ತುಂಬಾ ವಿಶೇಷ ಆರೈಕೆ ಬೇಕಾಗುತ್ತದೆ.

2. ಒಮ್ಮೆ ರೋಗಿಯು ತನ್ನ ಕಣ್ಣಿಗೆ ಇದನ್ನು ಅಳವಡಿಸಿಕೊಂಡರೆ, ನಿರಂತರವಾಗಿ ಧರಿಸಬೇಕಾಗುತ್ತದೆ. ವಾರಕ್ಕೊಮ್ಮೆ ಇದನ್ನು ತೆಗೆದು ಸ್ವಚ್ಚಗೊಳಿಸಬೇಕಾಗುತ್ತದೆ.

3. ಚಿಕ್ಕ ವಯಸ್ಸಿನ ಮಕ್ಕಳಿಗೆ ಅತ್ಯಧಿಕ ದೈಹಿಕ ಶ್ರಮದಲ್ಲಿ ತೊಡಗುವ ವ್ಯಕ್ತಿಗಳಿಗೆ ಅಥವಾ ದೀರ್ಘಕಾಲ ಹೊರಗೆ ಇರುವ ಮಂದಿಗೆ ಕಸ್ಟಮ್ ಆಕ್ಯುಲರ್ ಪ್ರೊಸ್ಥಿಸಿಸ್ ಶಿಫಾರಸಿಗೆ ಸೂಕ್ತವಲ್ಲ.

4. ಕಸ್ಟಮ್ ಪ್ರೊಸ್ಥಿಸಿಸ್ ಬಳಕೆಯಿಂದ ಇನ್ನೊಂದು ಕಣ್ಣಿಗೆ ಯಾವುದೇ ರೀತಿ ಹಾನಿಯಾಗುವುದಿಲ್ಲ.

5. ಕಸ್ಟಮ್ ಪ್ರೊಸ್ಥಿಸಿಸ್ ಅನೇಕ ವರ್ಷಗಳ ಕಾಲ ಉಪಯೋಗಿಸಬಹುದು. ಆಗಾಗ ವೈದ್ಯರನ್ನು ಭೇಟಿ ಮಾಡಿ ಪ್ರೊಸ್ಥಿಸಿಸ್‍ನ ಬಳಕೆಯ ಅವಧಿಯನ್ನು ದೀರ್ಘಗೊಳಿಸಬಹುದು.

6. ಲಭ್ಯವಿರುವ ನೇತ್ರದೋಷ ಸರಿಪಡಿಸುವ ಸ್ಟಾಕ್ ಐಗಳಿಗಿಂತ ಕಸ್ಟಮ್ ಪ್ರೊಸ್ಥಿಸಿಸ್‍ನಿಂದ ಪ್ರಯೋಜನಗಳುಂಟು.

7. ಸಾಕೆಟ್‍ಗಳು ಕಷ್ಟವಾದಾಗ, ಅಂದರೆ ಮಾರುಕಟ್ಟೆಯಲ್ಲಿ ಲಭಿಸುವ ಸ್ಟಾಕ್ ಐ ಅಳವಡಿಕೆಗೆ ಸಮಸ್ಯೆಯಾದಾಗ ಅಥವಾ ಅದು ಸರಿಯಾಗಿ ಜೋಡಣೆಯಾಗದಿದ್ದಾಗ, ಕಸ್ಟಮ್ ಪ್ರಾಸ್ಥಿಸಿಸ್ ವಿಧಾನ ಉತ್ತಮ ಆಯ್ಕೆ.

8. ಸ್ಟಾಕ್ ಐ ವಿಧಾನದಲ್ಲಿ ಮೆಳಗಣ್ಣು, ವಕ್ರಗಣ್ಣು, ಒರೆಗಣ್ಣು, ಸೊಟ್ಟಕಣ್ಣ ಮತ್ತು ಕಣ್ಣಿನ ಗುಡ್ಡೆಯ ವಿಕಾರತೆ ಹಾಗೂ ದೋಷದ ಗಾತ್ರ ಎದ್ದು ಕಾಣುತ್ತದೆ. ಆದರೆ ಕಸ್ಟಮ್ ಪ್ರೊಸ್ಥಿಸಿಸ್‍ನಲ್ಲಿ ಈ ಸಮಸ್ಯೆ ಕಂಡುಬರುವುದಿಲ್ಲ.

9. ಈ ವಿಧಾನದಲ್ಲಿ ಕಣ್ಣಿನ ಗುಡ್ಡೆಯ ವೃತ್ತಾಕಾರದ ಬಣ್ಣ, ಗಾತ್ರವು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ.

10. ಈ ವಿಧಾನದಲ್ಲಿ ಕಣ್ಣಿನ ಕಾರ್ಯನಿರ್ವಹಣೆ ಮತ್ತು ಚಲನಾ ಸಾಮಥ್ರ್ಯ ಉತ್ತಮವಾಗಿರುತ್ತದೆ.

11. ಸ್ಟಾಕ್ ಐನಲ್ಲಿ ಕಣ್ಣಿನ ಉರಿ, ಸೋಂಕು ಮತ್ತು ನೀರು ಸೋರುವಿಕೆ ಸಾಮಾನ್ಯ. ಆದರೆ ಚೆನ್ನಾಗಿ ಮೇಲ್ಮೈನನ್ನು ಪಾಲಿಷ್ ಮಾಡುವುದರ ಜೊತೆಗೆ ಉತ್ತಮ ವಸ್ತುಗಳನ್ನು ಇದರಲ್ಲಿ ಅಳವಡಿಸಿರುವುದರಿಂದ ಈ ಸಮಸ್ಯೆಗಳು ಇರುವುದಿಲ್ಲ.

12. ಇದು ಅನೇಕ ವರ್ಷಗಳ ಕಾಲ ದೀರ್ಘ ಬಾಳಿಕೆ ಬರುತ್ತದೆ ಮತ್ತು ಒಡೆದು ಹೋಗುವ ಸಾಧ್ಯತೆಯನ್ನು ತಡೆಗಟ್ಟುತ್ತದೆ.

ಡಾ.ಕೆ.ಭುಜಂಗ ಶೆಟ್ಟಿ ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ 121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು

ಡಾ.ಕೆ.ಭುಜಂಗ ಶೆಟ್ಟಿ
ವ್ಯವಸ್ಥಾಪಕ ನಿರ್ದೇಶಕರು, ನಾರಾಯಣ ನೇತ್ರಾಲಯ
121/ಸಿ, ಪಶ್ಚಿಮ ಕಾರ್ಡ್‍ರಸ್ತೆ, ರಾಜಾಜೀನಗರ ಆರ್ ಬ್ಲಾಕ್, ಬೆಂಗಳೂರು-10, ದೂ: 080-23373311/66121300
Email : info@narayananethralaya.com ; info@nnmail.org Website : www.narayananethralaya.org

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!