ಮೂಗಿನಲ್ಲಿ ರಕ್ತ ಸೋರುವುದಕ್ಕೆ ಮನೆಮದ್ದು….. ಗರಿಕೆ

ಮೂಗಿನಲ್ಲಿ ರಕ್ತ ಸೋರುವುದಕ್ಕೆ ಮನೆಮದ್ದು….. ಗರಿಕೆ. ಈ ಔಷದೋಪಚಾರವನ್ನು ಸುಮಾರು 7 ದಿನಗಳ ಕಾಲ ಬೆಳಿಗ್ಗೆ ಮಾಡಬೇಕು.

ಆ ದಿನ ಶಾಲೆಯಲ್ಲಿ ಹತ್ತನೇ ತರಗತಿಯ ಬೀಳ್ಕೊಡುಗೆ ಸಮಾರಂಭದ ಸಂಭ್ರವೋ ಸಂಭ್ರಮ. ಸರಸ್ವತಿ ಪೂಜೆ, ನಂತರ ಮಕ್ಕಳ ನಾಯಕರಿಂದ ಅನಿಸಿಕೆಗಳ ಬಿತ್ತರ, ಶಿಕ್ಷಕರಿಂದ ಹಿತನುಡಿಗಳ ಬುದ್ಧಿಮಾತು ಮತ್ತು ಊಟದ ವ್ಯವಸ್ಥೆ ಮಾಡಲಾಗಿತ್ತು. ಪೂಜೆಯ ನಂತರ ಪ್ರಸಾದ ವಿತರಣೆಯಾಯಿತು. ಸಭಾಕಾರ್ಯಕ್ರಮಕ್ಕಾಗಿ ಸಭಾಂಗಣದಲ್ಲಿ ಮಕ್ಕಳು, ಶಿಕ್ಷಕರು ಸಿಬ್ಬಂದಿ ವರ್ಗದವರೆಲ್ಲರೂ ನೆರೆದಿದ್ದರು. ಪ್ರಾಂಶುಪಾಲರು ತಮ್ಮ ಬುದ್ಧಿ ಮಾತುಗಳನ್ನು ಹೇಳಿ ಮುಗಿಸಿದರು. ಸಭಾಂಗಣದಲ್ಲಿ ಕುಳಿತಿದ್ದ ಶಿಕ್ಷಕಿ ರಂಜನಿಗೆ ಸಣ್ಣದಾಗಿ ತಲೆನೋವು ಕಾಣಿಸಿಕೊಂಡಿತು.

ಮೂಗಿನಲ್ಲಿ ರಕ್ತ: 

ಬೇರೆಯವರಿಗೆ ತೊಂದರೆ ಕೊಡುವುದು ಬೇಡವೆಂದು ಯಾರಿಗೂ ತಿಳಿಸದೆ, ನೇರವಾಗಿ ತನ್ನ ತರಗತಿಗೆ ಹೋದಳು. ಅಲ್ಲಿ ಕುರ್ಚಿ ಮೇಲೆ ಕುಳಿತಳು. ಮೂಗಿನಲ್ಲಿ ಏನೋ ಒಂದು ತರಹದ ದ್ರವ ಸುರಿಯುವಂತಾಯಿತು. ಕೈಯಲ್ಲಿದ್ದ ಕರವಸ್ತ್ರ ಮೂಗಿಗೆ ಹಿಡಿದು ‘ಹುಂ’ ಎಂದು ಉಸಿರನ್ನು ಹೊರಹಾಕಿದಳು. ನಂತರ ಕರವಸ್ತ್ರ ನೋಡಿದರೆ ಅದರಲ್ಲಿ ರಕ್ತ ಬಂದಿತ್ತು. ಮತ್ತೊಮ್ಮೆ ಕರವಸ್ತ್ರದಿಂದ ಮೂಗಿನ್ನು ಸ್ವಚ್ಚಗೊಳಿಸಿಕೊಂಡಳು ಅವಳಿಗೆ ಸಮಾಧಾನವಾಗಲಿಲ್ಲ. ಶಿಕ್ಷಕರ ಕೊಠಡಿಗೆ ಹೋಗಿ ಮೂಗು ಸ್ವಚ್ಛ ಮಾಡಿಕೊಂಡಳು. ಒಮ್ಮೆ ಸ್ವಚ್ಛವಾದರೂ ರಕ್ತ ಸ್ವಲ್ಪ ಸ್ವಲ್ಪ ಜಿನುಗುತ್ತಲೇ ಇತ್ತು.

ಸಹದ್ಯೋಗಿ ಸ್ನೇಹಿತೆಯೊಬ್ಬಳಿಗೆ ಹೇಳಿ ಕಳುಹಿಸಿ ತನಗಾದ ತೊಂದರೆಯನ್ನು ಬಿಚ್ಚಿಟ್ಟಳು. ಸ್ನೇಹಿತೆ ಕುಸುಮ ಮುಖ್ಯೋಪಾಧ್ಯಾಯಿನಿಯವರಿಗೆ ಸುದ್ಧಿ ತಿಳಿಸಿ; ರಂಜನಿಯನ್ನು ಮನೆಗೆ ಕರೆದುಕೊಂಡು ಹೋದಳು. ಮನೆಗೆ ಹೋದ ತಕ್ಷಣ, ವಿಷಯ ತಿಳಿದ ರಂಜನಿಯ ತಾಯಿ ಅವಳನ್ನು ಮಲಗುವಂತೆ ಹೇಳಿ, ದಿಂಬನ್ನು ಬೆನ್ನಿನ ಭಾಗಕ್ಕೆ ಇಟ್ಟರು. ಯಾಕೆಂದರೆ ಮೂಗಿನಲ್ಲಿ ರಕ್ತ ಬರುತ್ತಿದ್ದರೆ ನೇರವಾಗಿ ಮಲಗಿಸಿ ತಲೆ ಸ್ವಲ್ಪ ಕೆಳಭಾಗಕ್ಕೆ ಬರುವಂತಿದ್ದರೆ ರಕ್ತ ಬರುವುದು ಕಡಿಮೆಯಾಗುತ್ತದೆ. ಜೊತೆಗೆ ರಂಜನಿಯ ತಾಯಿ ಚಿಕ್ಕದಾದ ಕರವಸ್ತ್ರವನ್ನು ಐಸ್ ನೀರಿನಲ್ಲಿ ಒದ್ದೆ ಮಾಡಿ ಮೂಗಿನ ಮೇಲೆ ಇಟ್ಟರು. ಹಾಗೆಯೇ ಮಲಗಲು ಹೇಳಿದರು.

ಈರುಳ್ಳಿ-ಗರಿಕೆ ಮನೆಮದ್ದು:

ನಂತರ ಒಳಗಡೆ ಹೋಗಿ ಒಂದು ಸಣ್ಣ ಈರುಳ್ಳಿಯನ್ನು ಜಜ್ಜಿ 4 ಬಿಂದು ಈರುಳ್ಳಿ ರಸವನ್ನು ಹಿಂಡಿ ಸೋಸಿಕೊಂಡರು ಒದ್ದೆ ಬಟ್ಟೆಯನ್ನು ಸರಿಸಿ ಎರಡೂ ಮೂಗಿನ ಹೊಳ್ಳೆಗಳಿಗೆ ಒಂದೊಂದು ತೊಟ್ಟು ಈರುಳ್ಳಿ ರಸವನ್ನು ಬಿಟ್ಟರು. ಹಾಗೆಯೇ ತೆಂಗಿನಮರದ ಬುಡದಲ್ಲಿ ಸೊಂಪಾಗಿ ಬೆಳೆದಿದ್ದ ಎಳೆಯ ಗರಿಕೆ ಹುಲ್ಲನ್ನು ತಂದು, ತೊಳೆದು ಶುಚಿಗೊಳಿಸಿ ಮಿಕ್ಸಿಗೆ ಹಾಕಿ ರುಬ್ಬಿ ಒಂದು ಶುಭ್ರವಾದ ತೆಳು ಹತ್ತಿ ಬಟ್ಟೆಗೆ ಹಾಕಿ ರಸ ತೆಗೆದು ಅದಕ್ಕೆ ಸಕ್ಕರೆ ಬೆರೆಸಿ 3 ಚಮಚದಷ್ಟು ಕುಡಿಯಲು ಕೊಟ್ಟರು. ಔಷಧಿ ಕುಡಿದು ರಂಜನಿ ಹಾಗೆ ನಿದ್ರೆಗೆ ಜಾರಿದ್ದಳು. ಅವಳ ಅಮ್ಮ ಎಬ್ಬಿಸಲಿಲ್ಲ. ಒಂದು ಘಂಟೆಯ ಬಳಿಕ ರಂಜನಿಯು ಎದ್ದು ಮುಖ ತೊಳೆದು; ತನ್ನ ಮೂಗನ್ನು ಕನ್ನಡಿಯಲ್ಲಿ ಗಮನಿಸಿದಳು.

ರಕ್ತ ಸೋರುವುದು ನಿಂತಿತ್ತು. ಸಮಾಧಾನದ ನಿಟ್ಟುಸಿರು ಬಿಟ್ಟು ಅಮ್ಮನಲ್ಲಿ ವರದಿ ಮಾಡಿದಳು. ಈಗ ಕುಡಿದ ಔಷಧಿ ಇನ್ನು 7 ದಿನಗಳ ಕಾಲ ನೀನು ಕುಡಿ ಎಂದು ಅವಳ ತಾಯಿ ಹೇಳಿದರು. ಈ ಔಷದೋಪಚಾರವನ್ನು ಸುಮಾರು 7 ದಿನಗಳ ಕಾಲ ಬೆಳಿಗ್ಗೆ, ಸಾಯಂಕಾಲ ಮೇಲೆ ಹೇಳಿದಂತೆ ರಂಜನಿ ಕುಡಿದಳು. ಅವಳ ಮೂಗಿನಲ್ಲಿ ರಕ್ತ ಸೋರುವುದು ನಿಂತು ಹೋಗಿ ಗುಣಮುಖಳಾಗಿದ್ದಳು. ಇದರಿಂದ ಸಂತೋಷಗೊಂಡ ರಂಜನಿಯು ಅಮ್ಮನ ಸಮಯೋಚಿತ ಮನೆಮದ್ದಿಗಾಗಿ ಗುಣಗಾನ ಮಾಡಿ; ಅಮ್ಮನ ಭುಜಕ್ಕೆ ಜೋತು ಬಿದ್ದಳು.

ನಾರಾಯಣಿ ಭಟ್

ನಾರಾಯಣಿ ಭಟ್

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!