ತಲೆನೋವಿಗೆ ನೂರೆಂಟು ಕಾರಣಗಳು

‘ತಲೆನೋವು’ ಮಾರಣಾಂತಿಕ ಕಾಯಿಲೆಯಲ್ಲದಿದ್ದರೂ ವಯಸ್ಕರು ಅಥವಾ ಮಕ್ಕಳೆಂಬ ಭೇದಭಾವವಿಲ್ಲದೆ ಕಾಡುತ್ತಿರುತ್ತದೆ. ಕೆಲವರಿಗೆ ವಂಶಪಾರಂಪರ್ಯವಾಗಿ, ಇನ್ನು ಕೆಲವರಿಗೆ ಒತ್ತಡದಿಂದ, ಹೀಗೆ ತರಹೇವಾರಿ ಕಾರಣಗಳಿಂದ ವಕ್ಕರಿಸಿ ದೈನಂದಿನ ಚಟುವಟಿಕೆಗಳಿಗೆ ಸಮಸ್ಯೆಯನ್ನುಂಟು ಮಾಡುತ್ತದೆ. ಅತಿ ಸಾಮಾನ್ಯ ಸಮಸ್ಯೆಯಾದರೂ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರನ್ನೂ ಇದು ಕಾಡುತ್ತಿರುವುದಂತೂ ಹೌದು.
ಬಹುತೇಕ ಮಂದಿಯನ್ನು ತಲೆನೋವು ಸುತ್ತುವರಿದಿರುವುದರಿಂದ ಮೇಲ್ನೋಟಕ್ಕೆ ಇದು ಮಹಾ ಸಮಸ್ಯೆ. ಆದರೂ ಇದಕ್ಕೊಂದು ನಿಖರ ಕಾರಣ ಕಂಡು ಹಿಡಿಯಲು ಇದುವರೆಗೆ ಸಾಧ್ಯವಾಗಿಲ್ಲ. ಹಾಗಾಗಿ ಒಂದು ರೀತಿಯಲ್ಲಿ ಇದು ವೈದ್ಯರಿಗೂ ನಿಜವಾದ ತಲೆನೋವು.ತಲೆನೋವು ಸಾಮಾನ್ಯವಾಗಿ ಮಾನಸಿಕ ಒತ್ತಡದಿಂದ ಬರುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಹೆಚ್ಚು ಕೋಪಗೊಂಡರೂ ತಲೆನೋವು ತನ್ನಿಂದ ತಾನೇ ಕಾಣಿಸಿಕೊಳ್ಳುತ್ತದೆ. ಅದೇ ರೀತಿ, ಸರಿಯಾದ ಸಮಯಕ್ಕೆ ನಿದ್ರೆ ಮಾಡದಿರುವುದು, ಮಲಬದ್ಧತೆ, ಕೆಲ ನರ ಸಂಬಂಧಿ ದೋಷಗಳಿಂದಲೂ ತಲೆನೋವು ಕಾಡಬಹುದು. ಮಹಿಳೆಯರಿಗೆ ಕೆಲವು ಹಾರ್ಮೋನುಗಳ ಏರುಪೇರುನಿಂದಾಗಿ ತಲೆನೋವು ಉಂಟಾಗುವ ಸಾಧ್ಯತೆಯೂ ಇದೆ.
ಅಧ್ಯಯನ ವರದಿಯ ಪ್ರಕಾರ, 100ಕ್ಕೂ ಹೆಚ್ಚು ಬಗೆಯ ತಲೆ ನೋವುಗಳಿವೆಯಂತೆ. ಅತಿ ಮಾನಸಿಕ ಒತ್ತಡ, ಬೆಳಕಿಲ್ಲದ ಪರಿಸರ, ಉಪವಾಸ ಮತ್ತು ಕಣ್ಣಿನ ದೋಷವೂ ತಲೆನೋವಿಗೆ ಕಾರಣವಾಗಬಹುದು. ಹತ್ತಿರದಿಂದ ಟಿವಿ. ವೀಕ್ಷಣೆಯೂ ದೀರ್ಘ ಪರಿಣಾಮ ಬೀರಬಹುದು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ತಲೆನೋವಿನಲ್ಲಿ ವಾಂತಿಭೇದಿ ಕಾಣಿಸಿಕೊಳ್ಳುವುದು ಸಾಮಾನ್ಯ.ತಲೆನೋವಿನ ಪ್ರಮುಖ ಪ್ರಕಾರಗಳಲ್ಲಿ ಟೆನ್ಷನ್ ಹೆಡೇಕ್, ಮೈಗ್ರೇನ್, ಮಿಕ್ಸ್‍ಡ್ ಹೆಡೇಕ್ ಸಿಂಡ್ರೋಮ್, ಸೈನಸ್ ಹೆಡೇಕ್‍ಗಳು ಪ್ರಮುಖವಾದುವು.
ಟೆನ್ಷನ್ ಹೆಡೇಕ್ ಅತಿಯಾದ ಮಾನಸಿಕ ಒತ್ತಡದಿಂದ ಬರುತ್ತದೆ. ಇದಕ್ಕೆ ವಯಸ್ಕರು ಅಥವಾ ಮಕ್ಕಳೆಂಬ ಭೇದ-ಭಾವವಿಲ್ಲ. ಇದು ಸ್ನಾಯುವಿನ ಹಿಗ್ಗುವಿಕೆ ಅಥವಾ ಕುಗ್ಗುವಿಕೆಯಿಂದಾಗಿ ಉಂಟಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅದೇ ರೀತಿ ಮೈಗ್ರೇನ್‍ನಿಂದ ಸಾಧಾರಣ ಅಥವಾ ಅತೀ ತೀವ್ರವಾದ ತಲೆನೋವು ಕಾಣಿಸಿಕೊಳ್ಳಬಹುದು. ಇದರ ನಿಖರ ಕಾರಣ ಇದುವರೆಗೆ ಪತ್ತೆಯಾಗಲಿಲ್ಲ. ಇದು ಗಂಟೆಗಳಿಂದ ಹಿಡಿದು ಸತತ ಮೂರು ದಿನಗಳವರೆಗೂ ಕಾಡಬಹುದು. ಇನ್ನು ಕೆಲವರಿಗೆ ವಂಶಪಾರಂಪರಿಕವಾಗಿ ತಲನೋವು ಬರುತ್ತಿರುತ್ತದೆ. ಇದು ವಿಶೇಷವಾಗಿ ಮೈಗ್ರೇನ್ ಕುಟುಂಬಕ್ಕೆ ಸೇರುವ ಸಾಧ್ಯತೆಯಿದೆ.
ತಲೆನೋವು ಇಡೀ ತಲೆಯನ್ನು ಆವರಿಸಬಹುದು. ಇಲ್ಲವೇ ತಲೆಯ ಒಂದು ಪಾಶ್ರ್ವವನ್ನಷ್ಟೇ ಪೀಡಿಸಬಹುದು. ಹೀಗೆಂದು ಇದನ್ನು ಸಾಮಾನ್ಯ ನೋವೆಂದು ಅಲಕ್ಷ್ಯ ಮಾಡಬಾರದು. ಇದರ ಸಂಪೂರ್ಣ ತಪಾಸಣೆ ಅಗತ್ಯ. ಯಾಕೆಂದರೆ ಇದನ್ನು ಅಲಕ್ಷ್ಯ ಮಾಡುವುದರಿಂದ ಒತ್ತಡ, ವಾಂತಿ, ನಿಶ್ಯಕ್ತಿಯುಂಟಾಗುವ ಸಾಧ್ಯತೆಯಿದೆ. ಹಾಗಾಗಿ ತೀಕ್ಷ್ಣ ಬೆಳಕಿನಿಂದ ಹಾಗೂ ಹೆಚ್ಚು ಶಬ್ದವಿರುವ ಜಾಗದಿಂದ ದೂರವಿರುವ ಮೂಲಕವೂ ತಲೆನೋವನ್ನು ತಪ್ಪಿಸಬಹುದು. ತಲೆನೋವಿನ ಬಾಧೇ ವಯಸ್ಕರಿಗೆ ಬರುವ ರೀತಿಯಲ್ಲೇ ಮಕ್ಕಳಲ್ಲಿಯೂ ಕಂಡುಬರುತ್ತದೆ. ಹೆಚ್ಚು ಸಂವದನೀಯ, ಸೂಕ್ಷ್ಮವಾಗಿರುವ ಮಕ್ಕಳಿಗೆ ಬರುವ ಸಾಧ್ಯತೆಗಳು ಹೆಚ್ಚು. ಆದರೆ, ವೈದ್ಯರ ಸಲಹೆಯಿಲ್ಲದೆ ವಯಸ್ಕರಿಗೆ ಸೂಚಿಸಿದ ಔಷಧವನ್ನೇ ಮಕ್ಕಳಿಗೆ ಕೊಡಬಾರದು.

ತಲೆನೋವು ಅನುಭವಿಸಲಾಗದ ಯಾತನೆ…!

ತಲೆನೋವಾ? ಇದರ ಯಾತನೆ ಹೇಳಲಾಗದು, ಅನುಭವಿಸಲಾಗದು. ಅರ್ಧ ತಲೆನೋವು- ಇದರ ಕಷ್ಟ, ಯಾತನೆ ಹೇಳತೀರದು ಎಂದು ಉದ್ಗರಿಸುವವರ ಸಂಖ್ಯೆಯೇ ಜಾಸ್ತಿ. ಅರೆ ತಲೆನೋವು ಅಥವಾ ಅರ್ಧ ತಲೆನೋವವನ್ನು ಅನುಭವಿಸಿದವರ ಸಂಖ್ಯೆಯಂತೂ ತುಂಬಾ ವಿರಳ. ಅರೆ ತಲೆನೋವು ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಮೊದಲು ಋತುಸ್ರಾವದ ಅವಧಿಯಲ್ಲಿ ಬರುವುದು ಹೆಚ್ಚಾಗಿ ಕಂಡುಬರುತ್ತದೆ. ಶೇ.60ರಷ್ಟು ರೋಗಿಗಳಿಗೆ 20 ವಯಸ್ಸಿನೊಳಗೆ ಅರೆ ತಲೆನೋವು ಬರುತ್ತದೆ ಎಂದು ಹೇಳಲಾಗುತ್ತದೆ. ಶೇ.90ರಷ್ಟು ಮಂದಿಗೆ ಅವರ 30ನೇ ವಯಸ್ಸಿನೊಳಗೆ ಬಂದಿರುವ ಉದಾಹರಣೆಗಳೇ ಹೆಚ್ಚು. ಅಲ್ಲದೆ, ಬೇರೆ ವಯೋಮಾನಗಳಲ್ಲೂ ಅರೆ ತಲೆನೋವು ಕಾಣಬರುವ ದಾಖಲೆಗಳಿವೆ.ತಂದೆ-ತಾಯಿ (ಹೆಚ್ಚಾಗಿ ತಾಯಿ) ಅವರಿಂದ ಮಕ್ಕಳಿಗೆ ಅರೆ ತಲೆನೋವು ಬರುವ ಸಾಧ್ಯತೆಗಳು ಇವೆ. ಶೇ.70ರಷ್ಟು ರೋಗಿಗಳಲ್ಲಿ ಅನುವಂಶಿಕವಾಗಿ ಬರುತ್ತದೆ ಎಂದು ಹೇಳಬಹುದು. ಆದರೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಕಾಯಿಲೆಯಲ್ಲ.
ಬರುವ ಹಂತಗಳು ಅರೆ ತಲೆನೋವು ಪ್ರಮುಖವಾಗಿ ಮೂರು ಹಂತಗಳಲ್ಲಿ ಕಾಣಬರುತ್ತದೆ. ಮೊದಲ ಹಂತದಲ್ಲಿ ಸೆಳೆತ ಇರುವುದರಿಂದ ರೋಗಿಯ ಮುಖ ಬಿಳುಚಿಕೊಂಡಿರುತ್ತದೆ. ಈ ಸೆಳೆತದೊಂದಿಗೆ ತಲೆನೋವು ಆರಂಭವಾಗುತ್ತದೆ. ಈ ಹಂತವು ಅಲ್ಪಾವಧಿಯದ್ದಾಗಿರುತ್ತದೆ. ಮುಖವು ಕೆಂಪೇರುವುದು ಮತ್ತು ತಲೆನೋವು ಕಾಣಿಸಿಕೊಳ್ಳುವುದು-ಇದು ಎರಡನೇ ಹಂತ. ಇದು ಹಲವು ಗಂಟೆಗಳವರೆಗೆ ಇರುತ್ತದೆ. ಮೂರನೇ ಹಂತವು ಅರೆ ತಲೆನೋವಿನ ನಂತರದ ಅವಧಿಯಾಗಿದೆ. ತಲೆನೋವಿನಿಂದ ಕ್ರಮೇಣ ಬಿಡುಗಡೆ, ತಲೆಯ ಭಾರದ ಸಂವೇದನೆಯ ತಗ್ಗುವುದು-ಇಲ್ಲಿ ಕಂಡುಬರುತ್ತದೆ.

ಮೈಗ್ರೇನ್ ತೆಲೆನೋವಿಗೆ ಕಾರಣಗಳೇನು ?

ಇದಕ್ಕೆ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ, ಸಂಭವನೀಯ ಕಾರಣಗಳು ಕೆಳಗಿನಂತಿವೆ

  • ವಾತಾವರಣ
  • ಕ್ರಮವಿಲ್ಲದ ಜೀವನಶೈಲಿ
  • ಅನುವಂಶೀಯತೆ:
  • ಸಾಕಾಗದ ನಿದ್ರೆ
  • ನರ ರೋಗ:
  • ಮೆದುಳಿನ ನ್ಯೂನ್ಯತೆಗಳು
  • ಔಷಧಿಗಳು
  • ಇಂದ್ರಿಯ ಉತ್ತೇಜಕಗಳು
ಮೈಗ್ರೇನ್ ಮುನ್ಸೂಚನಾ ಲಕ್ಷಣಗಳು
  • ಗೊಂದಲ ಅಥವಾ ಗಲಿಬಿಲಿಗೊಳ್ಳುವುದು
  • ವಿಚಿತ್ರವಾದ, ಹೊಳೆಯುವ ಲೈಟುಗಳು ಕಣ್ಣಮುಂದೆ ಕಂಡಂತೆ ಭಾಸವಾಗುವುದು
  • ಅಡ್ಡಾದಿಡ್ಡಿ ರೇಖೆಗಳನ್ನು ನೋಡಿದಂತೆ ಅನಿಸುವುದು
  • ಕಪ್ಪು ಬಣ್ಣದ ಕಲೆಗಳು ಕಣ್ಣಮುಂದೆ ಕಂಡಂತೆ ಅನಿಸುವುದು
  • ಪಿನ್ನು ಮತ್ತು ಸೂಜಿಗಳು ಕೈ ಕಾಲುಗಳನ್ನು ಚುಚ್ಚಿದಂತನಿಸುವುದು
  • ಮಾತನಾಡಲು ಕಷ್ಟವೆನಿಸುವುದು
  • ಭುಜ, ಕುತ್ತಿಗೆ ಮತ್ತು ಕೈಕಾಲುಗಳು ಸೆಟೆದಂತೆನಿಸುವುದು (Stiffness)
  • ಅಹಿತಕರ ವಾಸನೆಗಳು ಇತ್ಯಾದಿ..
ಮೈಗ್ರೇನ್ ಗುಣಲಕ್ಷಣಗಳು
  • ಮೈಗ್ರೇನ್ ತಲೆನೋವು ಹೆಚ್ಚಾಗಿ 25-55 ವರ್ಷದವರಲ್ಲಿ ಕಾಣಿಸುತ್ತದೆ ಮತ್ತು ಮಹಿಳೆಯರಲ್ಲಿ ಇದು ಗಂಡಸರಿಗಿಂತ ಮೂರು ಪಟ್ಟು ಜಾಸ್ತಿ ಕಂಡುಬರುತ್ತದೆ.
  • ಸಾಧಾರಣದಿಂದ ತೀವ್ರ ತಲೆನೋವು ಇದಾಗಿದ್ದು , ಸಾಮಾನ್ಯವಾಗಿ ಅರ್ಧತಲೆನೋವು ಆದರೆ ಕೆಲವೊಮ್ಮೆ ಎರಡೂ ಕಡೆ ಉಂಟಾಗಬಹುದು
  • ತೀವ್ರವಾದ ಸಿಡಿಯುವಂತಹಾ ನೋವು
  • ಆಯಾಸ, ಸುಸ್ತು
  • ತಲೆಸುತ್ತುವಿಕೆ
  • ಧೈಹಿಕ ಚಟುವಟಿಕೆಗಳಿಂದ ನೋವು ಹೆಚ್ಚಾಗುವ ಸಂಭವ
  • ತೀವ್ರ ನೋವಿದ್ದಾಗ ದೈನಂದಿನ ಕೆಲಸಗಳನ್ನು ಮಾಡಲು ಆಗದಿರುವುದು
  • ಅಸ್ವಸ್ಥತೆ ಮತ್ತು ವಾಂತಿಯಾಗುವುದು
  • ಸುತ್ತಮುತ್ತಲಿನ ಬೆಳಕು, ಶಬ್ದ ಅಸಹನೀಯವೆನಿಸುವುದು, ನಿಶಬ್ದ ಕತ್ತಲ ಕೋಣೆಯಲ್ಲಿ ಮಲಗಿದರೆ ನೋವು ಶಮನವಾಗುವಿಕೆ
  • ಕೆಲವೊಬ್ಬರಲ್ಲಿ ಹೆಚ್ಚು ಬೆವರು, ದೇಹದ ಉಷ್ಣತೆಯಲ್ಲಿ ಏರಿಳಿತ, ಹೊಟ್ಟೆ ನೋವು, ಬೇಧಿ ಉಂಟಾಗುತ್ತವೆ
ಮೈಗ್ರೇನ್ – ಪರಿಣಾಮಗಳು
  • ದೀರ್ಘಕಾಲೀನ ಮೈಗ್ರೇನ್ ತೊಂದರೆಯಿಂದ ಬಳಲುವವರಲ್ಲಿ ಜೀವನದ ಗುಣಮಟ್ಟ ಕುಸಿಯುವುದು, ಆಗಾಗ್ಗೆ ನಿದ್ರೆಯ ತೊಂದರೆಗಳು, ಕೆಲಸಕ್ಕೆ ಗೈರುಹಾಜರು, ಕೆಲಸದಲ್ಲಿ ಆಸಕ್ತಿ, ಸಾಮಥ್ರ್ಯ ಕಡಿಮೆ ಯಾಗುವುದು ಇತರೇ ತೊಂದರೆಗಳಿಗೆ ಈಡಾಗುವರು.
  • ಅನೇಕರಲ್ಲಿ ಮತ್ತೆ ಯಾವಾಗ ಮೈಗ್ರೇನ್ ಅಟ್ಯಾಕ್ ಆಗುತ್ತದೋ ಎಂಬ ಭಯ ಅಥವಾ ಚಿಂತೆ ಕಾಡುತ್ತಿರುತ್ತದೆ, ಅವರ ಜೀವನ ದುಸ್ತರವೆನಿಸುತ್ತದೆ, ನೋವುನಿವಾರಕ ಮಾತ್ರೆಗಳು ತಾತ್ಕಾಲಿಕ ಪರಿಹಾರ ನೀಡುತ್ತವೆ, ಆದರೆ ಅವುಗಳಿಂದಾಗುವ ಅಡ್ಡ ಪರಿಣಾಮಗಳು ಅಸಂಖ್ಯ.
  • ಒಮ್ಮೊಮ್ಮೆ ದೀರ್ಘಕಾಲದ ಮೈಗ್ರೇನ್ ತೊಂದರೆಯಿಂದ ಬಳಲುತ್ತಿರುವವರು ಮಾನಸಿಕ ಖಿನ್ನತೆಗೊಳಗಾಗುವ ಸಾಧ್ಯತೆ ಉಂಟು.
ಮೈಗ್ರೇನ್ ತಲೆನೋವನ್ನು ತಡೆಗಟ್ಟುವುದು ಹೇಗೆ ?
  • ಮೈಗ್ರೇನ್ ಪ್ರಚೋದಕಗಳನ್ನು (triggering factors) ಗುರುತಿಸಿ ಆದಷ್ಟು ಅವುಗಳಿಂದ ದೂರ ಇರುವುದು, ಉದಾಹರಣೆಗೆ – ಒಬ್ಬ ವ್ಯಕ್ತಿಯಲ್ಲಿ ಸಿಗರೇಟು ಹೊಗೆ ಮೈಗ್ರೇನ್ ತಲೆನೋವು ಬರಲು ಈ ಹಿಂದೆ ಕಾರಣ ವೆನಿಸಿದ್ದರೇ, ಅಂತಹ ವ್ಯಕ್ತಿಯು ಆದಷ್ಟು ಸಿಗರೇಟು ಹೊಗೆಯ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿಕೊಳ್ಳಬೇಕು.
  • ಡಯಾಬಿಟೀಸ್ ತೊಂದರೆಯಿರುವವರು ತಮ್ಮ ಬ್ಲಡ್ ಶುಗರ್ ಪ್ರಮಾಣವನ್ನು ಹತೋಟಿಯಲ್ಲಿಟ್ಟುಕೊಳ್ಳುವುದು. ಅಲ್ಪ ಪ್ರಮಾಣದ ಆಹಾರವನ್ನು ಆಗಾಗ ಸೇವಿಸುವುದು ಮಾತು ಆಹಾರ ವಿಲ್ಲದೆ ದೀರ್ಘಕಾಲ ಇರುವುದು ಒಳ್ಳೆಯದಲ್ಲ.
  • ಡಿಹೈಡ್ರೇಶನ್, ಮೈಗ್ರೇನ್ ತಲೆನೋವುಂಟುಮಾಡುವ ಒಂದು ಪ್ರಚೋದಕ ಆದ್ದರಿಂದ ಆಗಾಗ ನೀರು ಕುಡಿಯುತ್ತಿರಬೇಕು.
  • ಸರಿಯಾದ ನಿದ್ದೆಯೂ ಅತ್ಯವಶ್ಯಕ, ಆದಷ್ಟು ನಿದ್ರೆಯ ದಿನಚರಿ ತಪ್ಪಿಸಬೇಡಿ, ಅಂದರೆ ನಿತ್ಯವೂ ಅದೇ ಸಮಯದಲ್ಲಿ ಮಲಗಿ ಏಳುವ ಪರಿಪಾಠ ರೂಡಿಸಿಕೊಳ್ಳಿ.
  • ಕ್ರಮಬದ್ಧ ಜೀವನ ಶೈಲಿ ರೂಡಿಸಿಕೊಳ್ಳಿ, ಅರೋಗ್ಯಕರ ಆಹಾರ ಸೇವನೆ, ಬೆಳಗಿನ ಉಪಹಾರ (Breakfast) ತಪ್ಪದೇ ಸೇವಿಸುವುದು, ಜಂಕ್ ಫುಡ್ ತ್ಯಜಿಸುವುದು ಇವೆಲ್ಲಾ ಕ್ರಮಗಳು ಸಹಕಾರಿ.
ಮೈಗ್ರೇನ್ ತಲೆನೋವಿಗೆ ಶಾಶ್ವತ ಪರಿಹಾರ
  • ನೋವುನಿವಾರಕಗಳಿಂದ ಮೈಗ್ರೇನ್ ನಿವಾರಣೆ ಸಾಧ್ಯವಿಲ್ಲ, ಪದೇ ಪದೇ ನೋವುನಿವಾರಕ ಮಾತ್ರೆಗಳನ್ನು ಸೇವಿಸುವದರಿಂದ ಅಡ್ಡ ಪರಿಣಾಮಗಳೂ (side-effects) ಸಾಕಷ್ಟಿವೆ. ಈ ನಿಟ್ಟಿನಲ್ಲಿ Ayurveda ಚಿಕಿತ್ಸೆ ಹೆಚ್ಚು ಫಲಕಾರಿ, ಯಾವುದೇ ತೊಂದರೆಯನ್ನು ತಾತ್ಕಾಲಿಕ ಶಮನ ಮಾಡದೆ, ಬುಡ ಸಮೇತ ಹೋಗಲಾಡಿಸಿ, ಶಾಶ್ವತ ಪರಿಹಾರ ನೀಡುವ ಶಕ್ತಿ Ayurveda ಔಷಧಿಗಳಲ್ಲಿದೆ. ಮೈಗ್ರೇನ್ ತಲೆನೋವಿನಿಂದ ಬಳಲುತ್ತಿರುವ ಅನೇಕ ಜನರು Ayurveda ಚಿಕಿತ್ಸೆಯಿಂದ ಮೈಗ್ರೇನ್ ಮುಕ್ತ ಸುಖ ಜೀವನ ನೆಡೆಸುತ್ತಿದ್ದಾರೆ.

ಡಾ. ಸಿದ್ದುಕುಮಾರ್ ಘಂಟಿ
ಬಸವಶ್ರೀ ಆಯುರ್ವೇದ ಸೇವಾ ಕೇಂದ್ರ
ಇಎಸ್‍ಐ ಆಸ್ಪತ್ರೆ ಮುಖ್ಯರಸ್ತೆ, 2ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-10
ದೂ.: 9845042755

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!