ಕರೋನಾ ವೈರಾಣುವಿನ ಆರ್ಭಟ : ಮುಖಕವಚ ಧರಿಸುವುದು ಸೂಕ್ತ

ಕರೋನಾ ವೈರಾಣುವಿನ ಆರ್ಭಟ  ಮುಂದುವರಿದಿದೆ.  ದೇಹದ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಆಹಾರ ಪದ್ಧತಿ, ದೈಹಿಕ ವ್ಯಾಯಾಮ ಮತ್ತು ಜೀವನಶೈಲಿಯನ್ನು ಅನುಸರಿಸಿ ಮುಂಜಾಗರೂಕತೆ ವಹಿಸಿ ರೋಗ ಬರದಂತೆ ತಡೆಯುವ ಅನಿವಾರ್ಯತೆ ಇದೆ. ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎಲ್ಲರೂ ಮುಖಕವಚ ಧರಿಸುವುದು ಸೂಕ್ತ ಎನ್ನಲಾಗಿದೆ.

ಜನರು ಮನೆ ಬಿಟ್ಟು ಹೊರಹೋಗಲು ಭಯಪಡುವ ವಾತಾವರಣ ನಿರ್ಮಾಣವಾದ, ಕಣ್ಣಿಗೆ ಕಾಣದಷ್ಟು ಚಿಕ್ಕದಾದ ಕರೋನಾ ಎಂಬ ವೈರಾಣುವಿನ ಆರ್ಭಟಕ್ಕೆ ಮನುಕುಲ ಹೈರಾಣಾಗಿರುವುದಂತೂ ನಿಜವಾದ ಮಾತು. ಅಂಟಾರ್ಟಿಕಾ ಖಂಡವೊಂದನ್ನು ಹೊರತಾಗಿ ಸದ್ಯಕ್ಕೆ “ಕೊರೋನಾ ಹರಡದ ಜಾಗವಿಲ್ಲ” ಎಂಬಲ್ಲಿವರೆಗೆ ಈ ವೈರಾಣುವಿನ ರುದ್ರನರ್ತನ ಮುಂದುವರಿದಿದೆ. ಕೋವಿಡ್-19 ವೈರಾಣು ಜ್ವರ ಜಗತ್ತಿನ ಸುಮಾರು 210 ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಹರಡಿ, ವಿಶ್ವದೆಲ್ಲೆಡೆ ಪಸರಿಸಿ ತನ್ನ ಆರ್ಭಟವನ್ನು ಎಗ್ಗಿಲ್ಲದೆ ಮುಂದುವರಿಸುತ್ತಲೇ ಇದೆ. ಇದೊಂದು RNA ಜಾತಿಯ ವೈರಾಣುವಾಗಿದ್ದು, ಸೂಕ್ತ ದರ್ಶಕದ ಅಡಿಯಲ್ಲಿ ಕಿರೀಟದ ರೀತಿಯಲ್ಲಿ ಈ ವೈರಾಣುವಿನ ಆಕಾರ ಇರುತ್ತದೆ.

covid-life-and-mask

ಲ್ಯಾಟಿನ್ ಭಾಷೆಯಲ್ಲಿ ಕೊರೊನಾ ಎಂದರೆ ಕಿರೀಟ ಎಂಬರ್ಥವಿದೆ. ಈ ಕಾರಣದಿಂದಲೇ ಕೊರೋನಾ ವೈರಸ್ ಎಂಬ ಹೆಸರನ್ನು ಪಡೆದಿದೆ. ಸಾಮಾನ್ಯವಾಗಿ ಈ ವೈರಾಣು ಜೀರ್ಣಾಂಗ ವ್ಯೂಹ ಮತ್ತು ಶಾಸಕೋಶ ವ್ಯೂಹವನ್ನು ಸೋಂಕಿಗೆ ತಗುಲಿಸಿ ರೋಗ ಬರುವಂತೆ ಮಾಡುತ್ತದೆ. ಮನುಷ್ಯರಲ್ಲಿ ಸುಮಾರು ಈ ಕೊರೋನಾ ಗುಂಪಿನ 7 ಬಗೆಯ ವೈರಾಣುಗಳು ಸೋಂಕು ಉಂಟುಮಾಡುವ ಸಾಮಥ್ರ್ಯ ಹೊಂದಿರುತ್ತದೆ. ಕೊರೋನಾ ವೈರಾಣು ಎನ್ನುವುದು ಬಹುದೊಡ್ಡ ವೈರಾಣುಗಳ ಕುಟುಂಬವಾಗಿದ್ದು, SARS (severe acute respiratory syndrome) ಮತ್ತು MERS (Middle East respiratory syndrome) ಎಂಬ ರೋಗಕ್ಕೂ ಕಾರಣವಾಗುತ್ತದೆ.

ರೋಗದ ಲಕ್ಷಣಗಳು:

ಕೋವಿಡ್-19 ಸೋಂಕು ಶಿಶುಗಳು, ಮಕ್ಕಳು, ವಯಸ್ಕರು, ಯುವಕರು ಹೀಗೆ ಎಲ್ಲಾ ವಯಸ್ಸಿನ ಜನರನ್ನು ಸಮಾನವಾಗಿ ಕಾಡುತ್ತದೆ. ತಕ್ಷಣ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಮಾತ್ರ ಚಿಕಿತ್ಸೆ ಸ್ಪಂದಿಸುತ್ತದೆ. ಚಿಕಿತ್ಸೆ ತಡವಾದಲ್ಲಿ ಮರಣ ಕಟ್ಟಿಟ್ಟ ಬುತ್ತಿ. ಲಸಿಕೆ ಇಲ್ಲದ , ವೈರಾಣುವಿನ ವಿರುದ್ಧ ಹೋರಾಡುವ ಔಷಧಿಯೂ ಲಭ್ಯವಿಲ್ಲದ ರೋಗ ಇದಾಗಿರುವುದರಿಂದ ಮುಂಜಾಗರೂಕತೆ ವಹಿಸಿ ರೋಗ ಬರದಂತೆ ತಡೆಯುವ ಅನಿವಾರ್ಯತೆ ಇದೆ. ಎಲ್ಲಾ ವೈರಲ್ ಜ್ವರದಂತೆ ಈ ರೋಗದಲ್ಲಿಯೂ ತೀವ್ರ ಜ್ವರ, ಶೀತ, ಕೆಮ್ಮು, ಗಂಟಲು ಕೆರೆತ, ನಡುಕ, ಉಸಿರಾಟದ ತೊಂದರೆ, ತಲೆನೋವು ಇರುತ್ತದೆ. ಮೈಕೈ ನೋವು, ಸುಸ್ತು ಹೆಚ್ಚು ಇರುತ್ತದೆ.

ಹೆಚ್ಚಾಗಿ ಈ ವೈರಾಣು ಶ್ವಾಸಕೋಶವನ್ನು ಕಾಡುವುದರಿಂದ ನಿಮೋನಿಯಾ ರೀತಿಯ ಲಕ್ಷಣಗಳು ಹೆಚ್ಚು ಕಂಡುಬರುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಕೆಲವೊಮ್ಮೆ ಈ ರೋಗ ತನ್ನಿಂತಾನೆ ಕಡಿಮೆಯಾಗಬಹುದು. ಆದರೆ ಮಧುಮೇಹ, ಕಿಡ್ನಿ ವೈಫಲ್ಯ, ಧೂಮಪಾನಿಗಳು, ಹೃದಯ ವೈಫಲ್ಯ ಇರುವವರಲ್ಲಿ ಈ ವೈರಾಣು ಮಾರಣಾಂತಿಕವಾಗಿ ಕಾಡುವ ಸಾಧ್ಯತೆ ಇದೆ. ರೋಗದ ಇಂಕುಬೇಷನ್ ಅವಧಿ ಅಂದರೆ ವೈರಾಣು ದೇಹಕ್ಕೆ ಸೇರಿ ರೋಗದ ಲಕ್ಷಣ ಕಾಣಿಸಿಕೊಳ್ಳುವ ವರೆಗಿನ ಅವಧಿ ಸುಮಾರು 6 ರಿಂದ 12 ದಿನ ಇರುತ್ತದೆ.

ಹೇಗೆ ಹರಡುತ್ತದೆ?

1.ದೈಹಿಕ ಸಂಪರ್ಕ, ಸ್ಪರ್ಶದ ಮುಖಾಂತರ ಹರಡುತ್ತದೆ.
2. ಕೆಮ್ಮು ಮತ್ತು ಸೀನಿನ ಮುಖಾಂತರ ಹರಡುತ್ತದೆ.
3. ಕರವಸ್ತ್ರ, ಊಟದ ತಟ್ಟೆ ಮುಂತಾದವುಗಳನ್ನು ಜೊತೆಗೆ ಬಳಸುವುದರಿಂದ ಹರಡುತ್ತದೆ.

ಹೇಗೆ ತಡೆಗಟ್ಟಬಹುದು?

1) ನಿಮ್ಮ ಕೈಗಳನ್ನು ಚೆನ್ನಾಗಿ ಸೋಪು ದ್ರಾವಣ ಬಳಸಿ 30 ಸೆಕೆಂಡ್ ಶುಭ್ರವಾಗಿ ಸ್ವಚ್ಛಗೊಳಿಸಿ
2) ಸೋಪ್ ದ್ರಾವಣವಿಲ್ಲದಿದ್ದಲ್ಲಿ ಆಲ್ಕೋಹಾಲ್ ದ್ರಾವಣ ಬಳಸಬಹುದು.
3) ಶಂಕಿತ ಅಥವಾ ಸೋಂಕಿತ ವ್ಯಕ್ತಿಯ ಬಟ್ಟೆ, ಕರವಸ್ತ್ರ, ತಟ್ಟೆ ಅಥವಾ ಇನ್ನಾವುದೇ ವಸ್ತುಗಳನ್ನು ಬಳಸಬೇಡಿ.
4) ಶಂಕಿತ ರೋಗಿಗಳಿಂದ ದೂರವಿರಿ. ಕೈತೊಳೆಯದೆ ಕಣ್ಣ್ಣು, ಮುಖ, ಬಾಯಿಯನ್ನು ಸ್ಪರ್ಶಿಸಬೇಡಿ.
5) ಶಂಕಿತ ರೋಗಿಯೊಂದಿಗೆ ಯಾವುದೇ ದೈಹಿಕ ಸಂಪರ್ಕ, ಚುಂಬನ ಮಾಡಬೇಡಿ.
6) ಮುಖಕವಚ ಧರಿಸಿ. ಶಂಕಿತ ವ್ಯಕ್ತಿಯಿಂದ ದೂರವಿರಿ.
7) ಶಂಕಿತ ರೋಗ ಪ್ರದೇಶಗಳಲ್ಲಿ ಪ್ರಯಾಣ ಮಾಡಬೇಡಿ.
8) ಆದಷ್ಟು ಶಂಕಿತ ಪ್ರದೇಶದಲ್ಲಿ ಮಾಂಸಾಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು.

ಚಿಕಿತ್ಸೆ ಹೇಗೆ?

ರೋಗಿಯ ದೇಹದ ರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಆಹಾರ ಪದ್ಧತಿ, ದೈಹಿಕ ವ್ಯಾಯಾಮ ಮತ್ತು ಜೀವನಶೈಲಿಯನ್ನು ಅನುಸರಿಸಿಕೊಳ್ಳುವಂತೆ ಎಲ್ಲಾ ರೋಗಿಗಳಿಗೆ ಆದೇಶ ನೀಡಲಾಗುತ್ತಿದೆ. ಜ್ವರ, ನೋವಿಗೆ ಔಷಧಿ ನೀಡಿ ಸಂಪೂರ್ಣ ವಿಶ್ರಾಂತಿ ನೀಡಲಾಗುತ್ತದೆ. ಸಾಕಷ್ಟು ದ್ರವಾಹಾರ ನೀಡಲಾಗುತ್ತದೆ. ಅದೇ ರೀತಿ ದೇಹದ ರಕ್ಷಣಾ ವ್ಯವಸ್ಥೆಯನ್ನು ಬದಲಾಯಿಸುವ ಹಾಗೂ ತೀವ್ರತೆಯನ್ನು ಕುಗ್ಗಿಸುವ ಔಷಧಿಗಳನ್ನು ಇತ್ತೀಚಿನ ದಿನಗಳಲ್ಲಿ ಈ ಕೋವಿಡ್-19 ವೈರಾಣು ಸೋಂಕಿತ ವ್ಯಕ್ತಿಗಳಿಗೆ ನೀಡಿ, ರೋಗದ ತೀವ್ರತೆಯನ್ನು ತಗ್ಗಿಸುವ ಪ್ರಯತ್ನ ಮಾಡಲಾಗುತ್ತದೆ. ಶಂಕಿತ ರೋಗಿಯನ್ನು ಒಳರೋಗಿಯಾಗಿ ಇರಿಸಿ ಇತರ ರೋಗಿಗಳ ಸಂಪರ್ಕ ಬಾರದಂತೆ ಅಂತರ ಕಾಯ್ದುಕೊಳ್ಳಲಾಗುತ್ತದೆ. ದೇಹದ ರಕ್ಷಣಾ ವ್ಯವಸ್ಥೆ ಹದಗೆಟ್ಟ ಮಧುಮೇಹಿಗಳು, ಗರ್ಭಿಣಿಯರು, ಸಣ್ಣ ಶಿಶುಗಳಲ್ಲಿ ವಿಶೇಷ ಮುತುವರ್ಜಿ ವಹಿಸಿ ತೀವ್ರ ನಿಗಾ ಘಟಕದಲ್ಲಿರಿಸಿ ಎಚ್ಚರಿಕೆ ವಹಿಸಲಾಗುತ್ತದೆ.

ಮಕ್ಕಳಲ್ಲಿ ಕೋವಿಡ್-19 ರೋಗದ ಲಕ್ಷಣಗಳು ಹೇಗಿರುತ್ತದೆ?

ಎಲ್ಲಾ ವಯಸ್ಸಿನ ಮಕ್ಕಳು ಕೋವಿಡ್-19 ರೋಗದಿಂದ ಬಳಲುವ ಸಾಧ್ಯತೆ ಇರುತ್ತದೆ. ಮಕ್ಕಳಲ್ಲಿ ಕೋವಿಡ್19 ರೋಗದ ಲಕ್ಷಣಗಳು ಇತರ ವಯಸ್ಕ ವ್ಯಕ್ತಿಗಳಂತೆ ಕೋವಿಡ್ ರೋಗದ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಮಕ್ಕಳಲ್ಲಿ ಆಗ ತಾನೇ ಬೆಳವಣಿಗೆ ಹೊಂದುತ್ತಿರುವ ಹೆಚ್ಚು ಶಕ್ತಿಶಾಲಿಯಾದ ರಕ್ಷಣಾ ವ್ಯವಸ್ಥೆ ಇರುವ ಕಾರಣ ರೋಗದ ಲಕ್ಷಣಗಳು ಬಹಳ ಕನಿಷ್ಟ ಪ್ರಮಾಣದಲ್ಲಿ ಇರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಮಕ್ಕಳು ಇತರ ವಯಸ್ಕ ವ್ಯಕ್ತಿಗಳಂತೆ ಕೋವಿಡ್ ರೋಗದ ಲಕ್ಷಣಗಳನ್ನು ತೋರ್ಪಡಿಸುವುದಿಲ್ಲ. ಮಕ್ಕಳಲ್ಲಿ ಸೋಂಕಿತರ ಮತ್ತು ಮರಣ ಹೊಂದಿದವರ ಪ್ರಮಾಣ ಬಹಳ ಕಡಿಮೆ ಇರುತ್ತದೆ.

ಮಕ್ಕಳಲ್ಲಿ ಆಸ್ಪತ್ರೆಗೆ ಒಳರೋಗಿಯಾಗಿ ಚಿಕಿತ್ಸೆ ನೀಡುವಷ್ಟು ತೀವ್ರ ತರವಾಗಿ ಕಾಡುವುದಿಲ್ಲ ಎಂದೂ ತಿಳಿದು ಬಂದಿದೆ. ಮಕ್ಕಳಲ್ಲಿ ಪದೇ ಪದೇ ಶೀತ, ನೆಗಡಿ ಆಗುತ್ತಿರುತ್ತದೆ ಮತ್ತು ಅಂತಹಾ ವೈರಾಣುಗಳ ವಿರುದ್ಧ ಆಂಟಿಬಾಡಿಗಳು ಉತ್ಪತ್ತಿಯಾಗಿರುತ್ತದೆ., ಮಕ್ಕಳಲ್ಲಿ ದೀರ್ಘಕಾಲಿಕ ಕಾಯಿಲೆಗಳಾದ ಹೃದಯದ ಕಾಯಿಲೆ, ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆ ಇರುವುದಿಲ್ಲ. ಮಕ್ಕಳಲ್ಲಿ ಆಗ ತಾನೇ ಬೆಳವಣಿಗೆ ಹೊಂದುತ್ತಿರುವ ಹೆಚ್ಚು ಶಕ್ತಿಶಾಲಿಯಾದ ರಕ್ಷಣಾ ವ್ಯವಸ್ಥೆ ಇರುವ ಕಾರಣ ರೋಗದ ಲಕ್ಷಣಗಳು ಬಹಳ ಕನಿಷ್ಟ ಪ್ರಮಾಣದಲ್ಲಿ ಇರುತ್ತದೆ ಎಂದು ಅಂದಾಜಿಸಲಾಗಿದೆ.

ಶಿಶುಗಳಿಗೆ ಸಾಮಾನ್ಯವಾಗಿ ಹೆರಿಗೆ ಸಂದರ್ಭದಲ್ಲಿ ತಾಯಿಯಿಂದ ಅಥವಾ ಸೋಂಕಿತ ದಾದಿ, ಶುಶ್ರೂಷಕಿಯರು ಅಥವಾ ವೈದ್ಯರಿಂದ ಸೋಂಕು ಬರುವ ಸಾಧ್ಯತೆ ಇರುತ್ತದೆ. ಒಟ್ಟಿನಲ್ಲಿ 1 ವರ್ಷದ ಒಳಗಿನ ಮಕ್ಕಳು ಅಂದರೆ ಶಿಶುಗಳಲ್ಲಿ ಕೋವಿಡ್-19 ರೋಗ ಇತರ ಮಕ್ಕಳಿಗಿಂತ ಹೆಚ್ಚು ಉಗ್ರವಾಗಿ ಕಾಣಿಸುವುದರಿಂದ ಹೆಚ್ಚಾಗಿ ಅವರಿಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾತಿ ಮಾಡಿ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆ ಇರುತ್ತದೆ. ತಂದೆ-ತಾಯಂದಿರು ಕೋವಿಡ್-19 ಸೋಂಕಿತರಾಗಿದ್ದಲ್ಲಿ ಎಲ್ಲ ರೀತಿಯ ರೋಗ ಹರಡದಂತೆ ತಡೆಗಟ್ಟುವ ಮುಖಕವಚ, ಕೈಸ್ವಚ್ಛತೆ, ಸಾಮಾಜಿಕ ಅಂತರ, ಮನೆಯಲ್ಲಿನ ಸ್ವಚ್ಛತೆ ಮುಂತಾದ ಎಲ್ಲಾ ವಿಚಾರಗಳನ್ನು ಕೂಲಂಕುಶವಾಗಿ ಅನುಸರಿಸಬೇಕಾಗುತ್ತದೆ. ವೈದ್ಯರ ಸಲಹೆಯಂತೆ ಬೇಕಾದ ಎಲ್ಲಾ ಔಷಧೋಪಚಾರಗಳನ್ನು ನೀಡಿದಲ್ಲಿ ಮಕ್ಕಳು ಬೇಗನೆ ಚೇತರಿಸಿಕೊಳ್ಳುವ ಎಲ್ಲ ಸಾಧ್ಯತೆ ಇರುತ್ತದೆ.

ಮುಖಕವಚ ಯಾಕಾಗಿ ಧರಿಸಬೇಕು?

ಪ್ರತಿಯೊಬ್ಬರೂ ಮುಖಕವಚ ಧರಿಸುವುದು ಸೂಕ್ತ ಎಂದು ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಆರೋಗ್ಯವಂತ ವ್ಯಕ್ತಿಗಳು ಮುಖಕವಚ ಧರಿಸುವುದರಿಂದ ಸೋಂಕಿತ ವ್ಯಕ್ತಿಗಳಿಂದ ಕಿರುಹನಿಗಳು ನೇರವಾಗಿ ಅವರ ದೇಹದ ಒಳಗೆ ಸೇರುವುದನ್ನು ತಪ್ಪಿಸಬಹುದು. ಅತ್ಯಂತ ಸುರಕ್ಷಿತವಾದ ಓ-95 ಮುಖಕವಚ ಅಥವಾ ರೆಸ್ಪಿರೇಟರ್ ಎನ್ನುವುದು ಮಾತ್ರ ಬಳಸಲು ಯೋಗ್ಯ ಎಂದು ಸಾಂಕ್ರಾಮಿಕ ರೋಗ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿ ಸಾಮಾನ್ಯ ಮುಖಕವಚ ಧರಿಸಿದ್ದರೆ ನೇರವಾಗಿ ಆತ ವೈರಾಣುಗಳನ್ನು ತನ್ನ ದೇಹದೊಳಗೆ ಉಸಿರಿನ ಮುಖಾಂತರ ಎಳೆದುಕೊಳ್ಳುವ ಸಾಧ್ಯತೆ ಕಡಿಮೆಯಾಗುತ್ತದೆ. ಈ ಕಾರಣದಿಂದಲೇ ಕೊರೋನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎಲ್ಲರೂ ಮುಖಕವಚ ಧರಿಸುವುದು ಸೂಕ್ತ ಎನ್ನಲಾಗಿದೆ.

ಇನ್ನು ನಾವು ಮುಖಕವಚ ಧರಿಸಿರುವಾಗ ನೇರವಾಗಿ ನಮ್ಮ ಬಾಯಿ ಮತ್ತು ಮೂಗನ್ನು ಸ್ಪರ್ಶಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಎಲ್ಲಾ ಸೋಂಕಿತ ವ್ಯಕ್ತಿಗಳು ಕಡ್ಡಾಯವಾಗಿ ಮುಖಕವಚ ಧರಿಸಲೇ ಬೇಕು. ಇಲ್ಲವಾದಲ್ಲಿ ಸೋಂಕಿತ ವ್ಯಕ್ತಿಗಳು ಮುಖ, ಮೂಗು, ಬಾಯಿ ಸ್ಪರ್ಶಿಸಿ ಎಲ್ಲೆಂದರಲ್ಲಿ ಮುಟ್ಟಿದಾಗ ಅವರು ಎಲ್ಲಾ ಕಡೆಗೆ ವೈರಾಣುವನ್ನು ತಮಗರಿವಿಲ್ಲದಂತೆ ಪಸರಿಸುತ್ತಾರೆ. ಮುಖಕವಚ ಧರಿಸಿದ ಎಲ್ಲರಿಗೆ ರೋಗ ಬರಬಾರದೆಂದಿಲ್ಲ. ಅದೇ ರೀತಿ ಮುಖಕವಚ ಧರಿಸದ ಎಲ್ಲರಿಗೂ ರೋಗ ಬರುತ್ತದೆ ಎಂಬುದು ಕೂಡಾ ಸತ್ಯಕ್ಕೆ ದೂರವಾದ ಮಾತು.

Dr-Chalapathi

ಡಾ.ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್
#82, ಇಪಿಐಪಿ, ವೈಟ್‌ಫೀಲ್ಡ್, ಬೆಂಗಳೂರು -560066
ಫೋನ್ : 080-4906 9000 Extn: 1147/1366 
www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!