ದೀಪಾವಳಿ ಹಬ್ಬದ ಸಮಯದಲ್ಲಿ ಕಣ್ಣಿನ ಆರೈಕೆ – ಪಟಾಕಿಗಳನ್ನು ಹಚ್ಚುವಾಗ ಸುರಕ್ಷತಾ ಕ್ರಮ ಅಳವಡಿಸಿ

ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಉಂಟಾಗುವ ಅವಘಡಗಳು ಕೆಲವು ಕುಟುಂಬಗಳಿಗೆ ದು:ಸ್ಪಪ್ನವಾಗಬಹುದು. ಪಟಾಕಿ ಹಚ್ಚುವುದನ್ನು ಹೊರತುಪಡಿಸಿ, ಈ ಹಬ್ಬವನ್ನು ಸಂತೋಷದಿಂದ ಆಚರಿಸಲು ಹಲವು ಮಾರ್ಗಗಳಿವೆ. ಕಣ್ಣಿನ ಗಾಯಗಳನ್ನು ತಪ್ಪಿಸಲು ಕೆಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. 

ದೀಪಾವಳಿ ಹಬ್ಬದ ಸಮಯದಲ್ಲಿ ಕಣ್ಣಿನ ಆರೈಕೆ - ಪಟಾಕಿಗಳನ್ನು ಹಚ್ಚುವಾಗ ಸುರಕ್ಷತಾ ಕ್ರಮ ಅಳವಡಿಸಿ

ದೀಪಾವಳಿ ದೀಪಗಳ ಹಬ್ಬ. ಈ ಹಬ್ಬವನ್ನು ಭಾರತದಾದ್ಯಂತ ಜನರು ಸಿಹಿ ತಿಂಡಿಗಳನ್ನು ವಿತರಿಸುವ ಮೂಲಕ, ದೀಪಗಳನ್ನು ಬೆಳಗುವ ಮೂಲಕ ಹಾಗೂ ಪಟಾಕಿಗಳನ್ನು ಹಚ್ಚುವ ಮೂಲಕ ಸಂತೋಷದಿಂದ ಆಚರಿಸಲಾಗುತ್ತದೆ. ಆದರೆ  ಈ ಆಹ್ಲಾದಕರ ಹಬ್ಬವು ಕೆಲವು ಕುಟುಂಬಗಳಿಗೆ ದು:ಸ್ಪಪ್ನವಾಗಬಹುದು. ಹಲವಾರು ಬೆಂಕಿ ಅಪಘಾತಗಳು ಮತ್ತು ಪಟಾಕಿಯ ಬೆಂಕಿಗಳು ಗಾಯಾಳುವಿನ ಕುಟುಂಬದಲ್ಲಿ ಆಚರಣೆಯನ್ನು ಹಾಳುಮಾಡುತ್ತವೆ. ಪಟಾಕಿಯ ಬೆಂಕಿಯಿಂದ ಕಣ್ಣಿನ ಮೇಲೆ ಆಗುವ ಗಾಯಗಳು ಅಸಾಮಾನ್ಯವಲ್ಲ. ಆದರೂ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಉಂಟಾಗುವ ಅವಘಡಗಳು ಜಾಗೃತಿಯಿಂದಾಗಿ ಮತ್ತು ಸೂಕ್ತ ಚಿಕಿತ್ಸೆಯ ಫಲವಾಗಿ ಕೆಲವು ವರ್ಷಗಳಿಂದ ಕಡಿಮೆಯಾಗಿವೆ. 

ಕಣ್ಣು ಬಹಳ ಸೂಕ್ಷ್ಮವಾದ ರಚನೆಯಾಗಿದೆ ಮತ್ತು ಅದರಲ್ಲಿ ಹಲವಾರು ಸಣ್ಣ ಸಣ್ಣ ರಚನೆಗಳು ಇರುತ್ತವೆ. ಇದರಿಂದಾಗಿ ದೃಷ್ಟಿಗೋಚರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸಣ್ಣ ಗಾಯಗಳು ಕೂಡಾ ಈ ರಚನೆಗಳಿಗೆ ಶಾಶ್ವತ ಹಾನಿಯನ್ನು ಉಂಟುಮಾಡಬಹುದು ಮತ್ತು ದೃಷ್ಟಿ ಶಾಶ್ವತ ದುರ್ಬಲತೆಗೆ ಕಾರಣವಾಗಬಹುದು. ಆದ್ದರಿಂದ, ಅಂತಹ ಕಣ್ಣಿನ ಗಾಯಗಳನ್ನು ತಪ್ಪಿಸಲು ಕೆಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಪಟಾಕಿ ಹಚ್ಚುವವರು ಅಪಾಯದಲ್ಲಿರುತ್ತಾರೆ. ಹಾಗೆ ಓಡಾಡುತ್ತಿರುವ ಹಾಗೂ ನೋಡುತ್ತಿರುವ ಅಮಾಯಕ ಜನರಿಗೂ ಅಪಾಯವಾಗುವ ಸಾಧ್ಯತೆ ಇರುತ್ತದೆ. ಸಣ್ಣಗಾಯಗಳಿಗೆ ತಕ್ಷಣವೇ ಚಿಕಿತ್ಸೆಯನ್ನು ಕೊಡಿಸಿದರೆ ಬೇಗ ಮತ್ತು ಸಂಪೂರ್ಣವಾಗಿ ಗುಣಮುಖವಾಗುತ್ತದೆ.

ಅಪಘಾತಗಳನ್ನು ತಪ್ಪಿಸಲು ಮುನ್ನೆಚ್ಚರಿಕೆ:

ಇವುಗಳನ್ನು ಮಾಡಿ.

• ಪಟಾಕಿಗಳನ್ನು ಹಚ್ಚುವಾಗ ಕಣ್ಣಿಗೆ ರಕ್ಷಣಾ ಕನ್ನಡಕಗಳನ್ನು ಧರಿಸಿ.
• ಪಟಾಕಿಗಳನ್ನು ಮತ್ತು ಪಟಾಕಿಬಾಂಬುಗಳಿಗೆ ಬೆಂಕಿ ಹಚ್ಚುವಾಗ ನಿಮ್ಮ ಮುಖವನ್ನು ದೂರದಲ್ಲಿರಿಸಿ.
• ಪೋಷಕರು ಅಥವಾ ಹಿರಿಯರ ಮೇಲ್ವಿಚಾರಣೆಯಲ್ಲಿ ಮಾತ್ರ ಮಕ್ಕಳು ಪಟಾಕಿಗಳನ್ನು ಹಚ್ಚಬೇಕು.
• ಹಗುರವಾದ ಹತ್ತಿ ಬಟ್ಟೆಗಳನ್ನು ಧರಿಸಿ ಸಿಂತಟಿಕ್ ಬಟ್ಟೆಗಳನ್ನು ಧರಿಸಬೇಡಿ, ಮೇಲ್ ಹೊದಿಕೆ ಮತ್ತು ದುಪಟ್ಟಾಗಳನ್ನು ಧರಿಸಬೇಡಿ ಇವು ಬೇಗ ಬೆಂಕಿಗಾವುತಿಯಾಗುತ್ತದೆ.
• ಒಂದು ಬಕೆಟ್‍ನಲ್ಲಿ ನೀರು ಮತ್ತು ಮರಳನ್ನು ತುಂಬಿಸಿ ಇಟ್ಟುಕೊಂಡಿರಿ. ಬೆಂಕಿಯ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಬೆಂಕಿಯನ್ನು ನಂದಿಸಲು ಸುಲಭವಾಗುತ್ತದೆ.
• ಕಣ್ಣಿಗೆ ಗಾಯವಾದ ಸಂದರ್ಭದಲ್ಲಿ, ಗಾಯವಾದ ಕಣ್ಣಿಗೆ ಹತ್ತಿಯಿಂದ ಕಣ್ಣಿಗೆ ತ್ಯಾಪೆ ಹಾಕಿ, ತಕ್ಷಣವೇ ಹತ್ತಿರದ ಕಣ್ಣಿನ ಕ್ಲಿನಿಕ್ ಅಥವಾ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.

ಇವುಗಳನ್ನು ಮಾಡಬೇಡಿ

• ಐ.ಎಸ್.ಒ. ಅನುಮೋದಿಸದ ಪಟಾಕಿಗಳನ್ನು ಖರೀದಿಸಬೇಡಿ.
• ಪಟಾಕಿಗಳನ್ನು ಹಚ್ಚುವ ಸ್ಥಳಗಳ ಹತ್ತಿರ ಚಿಕ್ಕ ಮಕ್ಕಳನ್ನು ಬಿಡಬೇಡಿ.
• ದೀಪ ಮತ್ತು ಮೇಣದ ಬತ್ತಿಗಳಿಂದ ಪಟಾಕಿಗಳನ್ನು ದೂರದಲ್ಲಿರಿಸಿ.
• ಶಬ್ಧ ಮಾಡುವ ಪಟಾಕಿಗಳನ್ನು ಬಳಸುವುದನ್ನು ತಪ್ಪಿಸಿ.
ಚಿಕ್ಕ ಶಿಶುಗಳು, ವಯಸ್ಸಾದ ಜನರು ಮತ್ತು ಸಾಕು ಪ್ರಾಣಿಗಳ ಕಡೆ ಪರಿಗಣಿಸಿರಿ.
• ಪಟಾಕಿಗಳ ಅಥವಾ ರಾಕೆಟ್ ಅನ್ನು ಹಚ್ಚಲು ಕಲ್ಲುಗಳು, ಬಾಟಲಿಗಳು ಅಥವಾ ಟಿನ್‍ಗಳನ್ನು ಬಳಸಬೇಡಿ. ನೀವು ಹಾಗೆ ಬಳಸುವುದರಿಂದ ಈ ವಸ್ತುಗಳ ಸಣ್ಣ ತುಂಡುಗಳು ಹೆಚ್ಚಿನ ವೇಗದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೆ ಹಾರುವುದರಿಂದ ಆ ಸುತ್ತಲಿನವರಿಗೆ ಗಾಯವಾಗಬಹುದು.

Also Read: ದೀಪಗಳ ಹಬ್ಬ ದೀಪಾವಳಿ

ಟಿಪ್ಪಣಿ : ಪಟಾಕಿ ಹಚ್ಚುವುದನ್ನು ಹೊರತುಪಡಿಸಿ, ಈ ಹಬ್ಬವನ್ನು ಸಂತೋಷದಿಂದ ಆಚರಿಸಲು ಹಲವು ಮಾರ್ಗಗಳಿವೆ. ಉದಾಹರಣೆಗೆ, ಪಟಾಕಿ ಖರೀದಿಗೆ ಖರ್ಚು ಮಾಡುವ ಹಣದಿಂದ ಬಡ ಮಗುವಿನ ಶಿಕ್ಷಣಕ್ಕೆ ಸಹಾಯ ಮಾಡಿ. ಆಯ್ಕೆ ನಿಮ್ಮದು. ಸಂತೋಷ ಮತ್ತು ಸುರಕ್ಷಿತವಾಗಿ ದೀಪಾವಳಿಯನ್ನು ಆಚರಿಸಿ.

ಡಾ.ಕೆ.ಭುಜಂಗ ಶೆಟ್ಟಿ
 ನಾರಾಯಣ ನೇತ್ರಾಲಯ
121/ಸಿ, ಕಾರ್ಡ್ ರೋಡ್, 1ನೇ ‘ಎನ್’ ಬ್ಲಾಕ್,

ರಾಜಾಜಿನಗರ, ಬೆಂಗಳೂರು-560010,
ಫೋನ್ : +91-80-66121300-305
Email : info@narayananethralaya.com ;  info@nnmail.org 

Website : www.narayananethralaya.org

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!