ವೃದ್ಧಾಪ್ಯದಲ್ಲಿ ಮೂಳೆ ಸಮಸ್ಯೆ ಬಗ್ಗೆ ಎಚ್ಚರವಹಿಸಿ

ವೃದ್ಧಾಪ್ಯದಲ್ಲಿ ಮೂಳೆ ಅಥವಾ ಎಲುಬಿನ ಸಮಸ್ಯೆ ಬಹುತೇಕರಲ್ಲಿ ಸಾಮಾನ್ಯ. ಆದ್ದರಿಂದ ಎಲುಬಿನ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು. ಹಾಗೆಯೇ ವೃದ್ಧಾಪ್ಯದ ಬಗ್ಗೆ ಹೆಚ್ಚಿನ ಆತಂಕ ಬೇಡ. ಅದು ಜೀವನದ ಸಹಜ ಕ್ರಿಯೆ.

ವೃದ್ಧಾಪ್ಯದಲ್ಲಿ ಮೂಳೆ ಸಮಸ್ಯೆ ಬಗ್ಗೆ ಎಚ್ಚರವಹಿಸಿಮೂಳೆ ಕೇವಲ ಕ್ಯಾಲ್ಷಿಯಂನ ಘನದಾದ ದೊಡ್ಡ ತುಂಡಲ್ಲ. ಮೃದು ಶಂಖ ಹಾಗೂ ಕ್ಯಾಲ್ಷಿಯಂ ಫಾಸ್ಫೇಟ್‍ನ ಗಟ್ಟಿಯಾದ ರಚನೆ. ಒಳಭಾಗ ಅಥವಾ ಆಸ್ಥಿಮಜ್ಜೆಯು ನಮ್ಮ ರಕ್ತಕೋಶಗಳನ್ನು ಉತ್ಪಾದಿಸುತ್ತದೆ. ಎಲುಬುಗಳು ಅಥವಾ ಮೂಳೆಗಳು (ಹಲ್ಲುಗಳೊಂದಿಗೆ) ದೇಹದ ಕ್ಯಾಲ್ಷಿಯಂನಲ್ಲಿ ಶೇ.99ಕ್ಕಿಂತ ಹೆಚ್ಚು ಸಂಗ್ರಹ ತೊಟ್ಟಿಯಾಗಿ ಕೆಲಸ ಮಾಡುತ್ತದೆ.

ಎಲುಬು ಒಂದು ಅಂಗವಾಗಿದ್ದು, ಮೂಳೆ ನಿರಂತರವಾಗಿ ತನ್ನ ಹಳೇ ಆಧಾರಕಟ್ಟನ್ನು ಮುರಿದು ಅದನ್ನು ಬದಲಿಸುತ್ತದೆ. 30 ವರ್ಷಗಳ ತನಕ ಮೂಳೆ ನಾಶ ತಡೆಗಟ್ಟುವ ಕ್ರಿಯೆ ನಡೆಯುತ್ತದೆ. ಆದಾದ ನಂತರ, ಮೂಳೆ ನಾಶ ನಿಧಾನವಾಗಿ ಹಿಡಿತ ಸಾಧಿಸಿ ನಿವ್ವಳ ಮೂಳೆ ನಷ್ಟಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ವಯಸ್ಸಾದವರ ಗೂನು ಬೆನ್ನು. ಬೆನ್ನು ಮೂಳೆ ಮುಂಭಾಗದಲ್ಲಿ ಸಾಮಾನ್ಯವಾಗಿ ಮೇಲಿನ ಸಾಲಿನಲ್ಲಿ ಪುಟ್ಟ ಮೂಳೆ ಮುರಿತ ಇದಕ್ಕೆ ಕಾರಣವಾಗುತ್ತದೆ. ಬೆನ್ನು ಮೂಳೆಯ ಮುರಿತದ ತುದಿ ಒತ್ತಡಕ್ಕೆ ಒಳಗಾಗುವುದರಿಂದ ಮೇಲಿನ ಬೆನ್ನು ಮೂಳೆ ಮುಂದಕ್ಕೆ ಸ್ಥಳಾಂತರಗೊಂಡು, ಬೆನ್ನುಹುರಿ ಬಾಗುತ್ತದೆ.

ಬೆನ್ನೆಲುಬಿನಲ್ಲಿ ಹೆಚ್ಚು ಬಿರುಕು ಅಥವಾ ಕುಸಿತ ಇದ್ದಷ್ಟು ಗೂನು ಬೆನ್ನು ಹೆಚ್ಚಾಗಿ ನೋವು ಇರುತ್ತದೆ. ಇದರಿಂದ ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸುವುದು ಕಷ್ಟವಾಗತ್ತದೆ. ಗೂನು ಬೆನ್ನು ಇರುವ ವ್ಯಕ್ತಿ ಯಾರನ್ನಾದರೂ ನೋಡಲು ಕ್ರೇನ್‍ನಂತೆ ಕತ್ತನ್ನು ಮೇಲಕ್ಕೆ ಎತ್ತಬೇಕಾಗುತ್ತದೆ. ಇದರಿಂದ ಉಸಿರಾಟಕ್ಕೆ ಕಷ್ಟವಾಗುತ್ತದೆ. ಏಕೆಂದರೆ ಹೊಸ ಬೆನ್ನುಹುರಿಯ ಆಕಾರವು ಶ್ವಾಸಕೋಶ ವಿಸ್ತರಣೆಯನ್ನು ಕಠಿಣವಾಗಿಸುತ್ತದೆ.

ಟೊಳ್ಳು ಮೂಳೆಯ ಇತರ ಸಾಮಾನ್ಯ ಕಾರಣಗಳೆಂದರೆ ಕೆಳಗೆ ಬೀಳುವುದರಿಂದ ಪೃಷ್ಟ (ಹಿಪ್) ಮತ್ತು ಸೊಂಟ (ವೇಸ್ಟ್) ಭಾಗಗಳ ಮುರಿತ. ಪ್ರತಿ ವರ್ಷ 3,00,000 ಪೃಷ್ಟದ ಮೂಳೆ ಮುರಿತ ಪ್ರಕರಣಗಳು ವರದಿಯಾಗುತ್ತಿದ್ದು, ಅದು ತುಂಬಾ ಗಂಭೀರ ಸ್ವರೂಪದ್ದಾಗಿರುತ್ತದೆ. ಪೃಷ್ಟದ ಮೂಳೆ ಮುರಿತಕ್ಕೆ ಒಳಗಾದ ರೋಗಿಗಳಲ್ಲಿ ಶೇ.24ರಷ್ಟು ಹಾಗೂ ಹಿಪ್ ಫ್ರಾಕ್ಚರ್‍ಗೆ ಒಳಗಾಗ ವೃದ್ದ ಪುರುಷರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ಓಡಾಡಲು ಮತ್ತೆ ಸಾಧ್ಯವಾಗದೇ ಇರುವ ಕಾರಣ ಅವರು ಒಂದು ವರ್ಷದೊಳಗೆ ಸಾವನ್ನಪ್ಪುತ್ತಾರೆ.

ಮಹಿಳೆಯರು ಕೂಡ ವಿಶೇಷವಾಗಿ ಈ ಸಮಸ್ಯೆಗೆ ಒಳಗಾಗುತ್ತಾರೆ. ಮಹಿಳೆಯರ ಮುಟ್ಟಿನ ಅವಧಿ ಕೊನೆಗೊಂಡ ಮೊದಲ ಕೆಲವು ವರ್ಷಗಳಲ್ಲಿ ಮೂಳೆ ಶಕ್ತಿ ಕಳೆದುಕೊಳ್ಳುತ್ತದೆ. ಮೂಳೆ ಬೆಳವಣಿಗೆಗೆ ಉತ್ತೇಜನ ನೀಡುವ ಈಸ್ಟ್ರೋಜೆನ್ ಹಾರ್ಮೋನುಗಳು ಇಳಿಮುಖವಾಗುವುದರಿಂದ ಈ ಸಮಸ್ಯೆ ಕಂಡು ಬರುತ್ತದೆ. ಸಣ್ಣ, ತೆಳು ಮೂಳೆಯ ಮಹಿಳೆಯರಲ್ಲಿ ಈ ಗಂಡಾಂತರ ಹೆಚ್ಚಾಗಿರುತ್ತದೆ.
ಮೂಳೆ ಸಮಸ್ಯೆಗೆ ಉಪಶಮನ

ಕ್ಯಾಲ್ಷಿಯಂ ಮತ್ತು ವಿಟಮಿನ್ ಡಿ ಅಧಿಕವಾಗಿರುವ ಆಹಾರವನ್ನು ಸೇವಿಸಿ. ಕ್ಯಾಲ್ಷಿಯಂ ಮೂಳೆ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಆ ಕಾರ್ಯ ನಿರ್ವಹಿಸಲು ಅದಕ್ಕೆ ವಿಟಮಿನ್ ಡಿ ಬೇಕು. ಡೇರಿ ಉತ್ಪನ್ನಗಳು, ಟೊಪು, ಸಾರ್ಡಿನ್, ಸಾಲೋಮನ್ ಜಾತಿಯ ಮೀನುಗಳು, ಸಿಹಿ ಮೂಲಂಗಿ ಹಾಗೂ ಸೊಪ್ಪುಗಳಲ್ಲಿ ಕ್ಯಾಲ್ಷಿಯಂ ಸಮೃದ್ದವಾಗಿರುತ್ತದೆ. ಸಾಲೋಮನ್, ಟುನ ಮತ್ತು ಇತರ ಉಪ್ಪು ನೀರಿನ ಮೀನುಗಳು, ಕೆನೆಭರಿತ ಹಾಲು, ಮೊಟ್ಟೆ, ಲಿವರ್ ಹಾಗೂ ಮೀನಿನ ಎಣ್ಣೆಗಳಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ.

ಸೂರ್ಯ ರಶ್ಮಿ ನಮ್ಮ ಚರ್ಮದಲ್ಲಿ ವಿಟಮಿನ್ ಡಿ ಉತ್ಪಾದನೆಗೆ ಉತ್ತೇಜನ ನೀಡುತ್ತದೆ. ಆದ್ದರಿಂದ ವಾರದಲ್ಲಿ ಕನಿಷ್ಟ ಎರಡು ಬಾರಿ ಸನ್‍ಸ್ಕ್ರೀನ್ ಇಲ್ಲದೇ 5-30 ನಿಮಿಷಗಳ ಕಾಲ ಸೂರ್ಯ ರಶ್ಮಿಯನ್ನು ಶರೀರಕ್ಕೆ ಪಡೆಯುವುದು ಒಳ್ಳೆಯದು. (ಇದನ್ನು ತುಂಬಾ ಮಾಡಿದರೆ, ಅತಿಯಾದ ಸೂರ್ಯ ರಶ್ಮಿ ಜೊತೆ ದೇಹ ಸಂಪರ್ಕಕ್ಕೆ ಬರುವುದರಿಂದ ಚರ್ಮ ಕ್ಯಾನ್ಸರ್‍ನ ಸಾಧ್ಯತೆ ಇರುತ್ತದೆ.)

ಮಾಂಸಖಂಡಗಳು, ಸ್ನಾಯಗಳಂತೆ ಮೂಳೆಗಳಿಗೂ ಆರೋಗ್ಯಕರವಾಗಿರಲು ವ್ಯಾಯಾಮ ಅಗತ್ಯ. ಸದೃಢತೆ ನೀಡುವ ಮತ್ತು ತೂಕ ತಡೆಯುವ ವ್ಯಾಯಮ (ವಾಕಿಂಗ್, ಜಾಗಿಂಗ್ ಮತ್ತು ಡ್ಯಾನ್ಸಿಂಗ್) ಟೊಳ್ಳು ಮೂಳೆ ವೃದ್ದಿಯಾಗುವುದನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ನೆರವಾಗುತ್ತದೆ.

ನಿಮಗೆ ಆಹಾರ ಅಥವಾ ಸೂರ್ಯ ರಶ್ಮಿಯಿಂದ ಸಾಕಷ್ಟು ಕ್ಯಾಲ್ಷಿಯಂ ದೊರೆಯದಿದ್ದರೆ, ಪ್ರತಿ ದಿನ 1,000 ಮಿಲಿಗ್ರಾಂಗಳಷ್ಟು ಕ್ಯಾಲ್ಷಿಯಂ ಹಾಗೂ 400 ಎಲ್‍ಯು (ಇಂಟರ್‍ನ್ಯಾಷನಲ್ ಯೂನಿಟ್‍ಗಳು) ವಿಟಮಿನ್ ಡಿ ಸೇವಿಸಿ. ಆದರೆ, ಎಲ್ಲವನ್ನೂ ಒಂದೇ ಬಾರಿ ತೆಗೆದುಕೊಳ್ಳಬೇಡಿ. ದೇಹವು ಪ್ರತಿ ದಿನ 500 ಎಂಜಿಗಳಷ್ಟು ಕ್ಯಾಲ್ಷಿಯಂನನ್ನು ಮಾತ್ರ ಹೀರಿಕೊಳ್ಳಲು ಶಕ್ತವಾಗಿದೆ.

65 ವರ್ಷಗಳಿಗಿಂತ ಮೇಲ್ಪಟ್ಟ ವೃದ್ದೆಯರು ಹಾಗೂ ಗಂಭೀರ ಸಮಸ್ಯೆ ಹೊಂದಿರುವ ಸಾಧ್ಯತೆ ಇರುವವರು (ಕೃಶ ಶರೀರ, ಕೌಟುಂಬಿಕ ಹಿನ್ನೆಲೆ, ಮೂಳೆ ಮುರಿತಗಳ ಹಿನ್ನೆಲೆ) ಈ ತೊಂದರೆಯನ್ನು ಮುಂಚಿತವಾಗಿ ತಿಳಿಯಲು ಎಕ್ಸ್-ರೇ ಅಥವಾ ಮೂಳೆಗಳ ಸ್ಕ್ಯಾನ್ ಮಾಡಿಸಿಕೊಳ್ಳಬೇಕು. ಏಕೆಂದರೆ ಮುಟ್ಟು ಕೊನೆಗೊಂಡ ನಂತರ ಮೂಳೆಗಳು ಪ್ರಚೋದನಾ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತದೆ. ನಿಮಗೆ ಒಸ್ಟಿಯೊಪೆನಿಯಾ ಅಥವಾ ಒಸ್ಟಿಯೊಪೊರೊಸಿಸ್ ಮೂಳೆ ಸಮಸ್ಯೆಗಳು ಇದ್ದರೆ ಔಷಧಿ ಚಿಕಿತ್ಸೆಗಳ ಬಗ್ಗೆ ನಿಮ್ಮ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ.

ಒಸ್ಟಿಯೋಪೊರೊಸಿಸ್ ಅಥವಾ ಟೊಳ್ಳು ಮೂಳೆ ರೋಗಕ್ಕೆ ಬೈಫಾಸ್ಫೊನೆಟ್ ಔಷಧಿಗಳನ್ನು ತುಂಬಾ ವ್ಯಾಪಕವಾಗಿ ಬಳಸಲಾಗುತ್ತದೆ. ಇವು ಮೂಳೆ ಸಾಂದ್ರತೆಯನ್ನು ಹೆಚ್ಚಿಸಿ ಬೆನ್ನೆಲುಬು, ಪೃಷ್ಟ ಮತ್ತು ಇತರ ಮೂಳೆ ಮುರಿತಗಳ ಘಟನೆಗಳನ್ನು ಕಡಿಮೆ ಮಾಡುತ್ತದೆ. ಇವುಗಳು ಕೆಲವು ಸಮಸ್ಯೆಗಳನ್ನು ಹೊಂದಿರುತ್ತವೆ. ಇವು ನುಂಗಲು ಕಠಿಣವಾಗಿದ್ದು, ಜಿಐ ನಾಳಕ್ಕೆ ಗಡುಸಾಗಿ ಪರಿಣಮಿಸುತ್ತದೆ. ಇದು ಎದೆ ಉರಿ, ಹೃದಯ ಉರಿ ಮತ್ತು ಗ್ಯಾಸ್ಟ್ರಿಕ್ ಅಲ್ಸರ್‍ಗೆ ಎಡೆ ಮಾಡಿಕೊಡುತ್ತದೆ. ಕೆಲವು ಔಷಧಿ ವಿಷಮ ಶೀತ ಜ್ವರದಂಥ ರೋಗ ಲಕ್ಷಣಗಳು, ಮಾಂಸಖಂಡಗಳು ಮತ್ತು ಕೀಲು ನೋವು ಹಾಗೂ ತಲೆನೋವುಗಳಂಥ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತವೆ.

Dr-Chalapathi

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
Ph: +91-80-49069000 Extn:1147/1366   www.vims.ac.in

 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!