ವಿಶ್ವ ಮಲೇರಿಯಾ ದಿನ – ಏಪ್ರಿಲ್ 25 : 2030 ರ ವೇಳೆಗೆ ಭಾರತವನ್ನು ‘ಮಲೇರಿಯಾ ಮುಕ್ತ’ ಮಾಡುವ ಗುರಿ

ವಿಶ್ವ ಮಲೇರಿಯಾ ದಿನ ಪ್ರತಿವರ್ಷದ ಏಪ್ರಿಲ್ 25 ರಂದು ಆಚರಿಸಲಾಗುತ್ತದೆ. ನಮ್ಮ ಆಡುವ ಭಾಷೆಯಲ್ಲಿ “ಚಳಿ ಜ್ವರ” ಎಂದೇ ಹೇಳುವ ಮಲೇರಿಯಾ ರೋಗವು ಒಂದು ಸಾಂಕ್ರಾಮಿಕ ಹಾಗೂ ಮಾರಣಾಂತಿಕವು ಆಗಬಹುದಾದ ಕಾಯಿಲೆ. ಸಂತೋಷದ ವಿಷಯವೆಂದರೆ ಭಾರತದಲ್ಲಿ ಪ್ರತಿವರ್ಷ ಮಲೇರಿಯಾ ಸೊಂಕಿನ ಸಂಖ್ಯೆಯಲ್ಲಿ ಗಣನಿಯ ಇಳಿಕೆ ಕಾಣುತ್ತಿದೆ.

ಪ್ರಾಚೀನ ವೈದ್ಯಕೀಯ ಕಾಲದಿಂದಲೂ ಮನುಕುಲಕ್ಕೆ ಕಾಡುವ ಸರ್ವ ರೋಗಗಳಲ್ಲಿ ಜ್ವರಕ್ಕೆ ಅತಿಹೆಚ್ಚು ಪ್ರಾಮುಖ್ಯತೆ, ಯಾಕೆಂದರೆ ಪ್ರಾಚೀನ ಕಾಲದ ಶ್ರೇಷ್ಠ ವೈದ್ಯರಾದ ಆಚಾರ್ಯ ಚರಕ ಹೇಳಿರುವ ಹಾಗೆ, ಜ್ವರವು ಹುಟ್ಟುವ ಮತ್ತು ಸಾಯುವ ಸಮಯದಲ್ಲಿ ಕಾಣಿಸಿಕೊಳುತ್ತದೆ ಹಾಗಾಗಿ ಪ್ರತಿಸಲ ಜ್ವರ ಕಾಣಿಸಿಕೊಂಡಾಗ ಸಾವಿನ ಭಯ ಕಾಡುತ್ತದೆ ಎನ್ನುವುದೇ ವಿಶೇಷ. ನಮ್ಮ ಆಡುವ ಭಾಷೆಯಲ್ಲಿ “ಚಳಿ ಜ್ವರ” ಎಂದೇ ಹೇಳುವ ಮಲೇರಿಯಾ ರೋಗವು ಪ್ಲಾಸ್ಮೂಡಿಯಂ’ ಎಂಬ ಜಾತಿಯ ಪರಾವಲಂಬಿ (parasite) ಜೀವಾಣುಗಳಿಂದ ಬರುವ ಒಂದು ಸಾಂಕ್ರಾಮಿಕ ಹಾಗೂ ಮಾರಣಾಂತಿಕವು ಆಗಬಹುದಾದ ಕಾಯಿಲೆ. ಈ ರೋಗವು ವಿಶೇಷವಾಗಿ ಹೆಣ್ಣುಜಾತಿಯ ‘ಅನಾಫಿಲಿಸ್ ಸೊಳ್ಳೆಯ’ ಮುಖಾಂತರ ಹರಡುತ್ತದೆ. ಸಾಮಾನ್ಯವಾಗಿ ಸೊಂಕಿತ ಸೊಳ್ಳೆ ಕಚ್ಚಿದ 10-14ದಿನಗಳ  (incubation period) ನಂತರ ರೋಗಲಕ್ಷಣಗಳು ಕಾಣಿಸಿಕೊಳುತ್ತವೆ.

ವಿಶ್ವ ಮಲೇರಿಯಾ ದಿನ - ಏಪ್ರಿಲ್ 25 : 2030 ರ ವೇಳೆಗೆ ಭಾರತವನ್ನು 'ಮಲೇರಿಯಾ ಮುಕ್ತ' ಮಾಡುವ ಗುರಿ

ಈ ದಿನದ ವಿಶೇಷತೆ:

ಭಾರತ ಸರ್ಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು “ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮಗಳ (NMCP) ಮುಖಾಂತರ 2030 ರ ವೇಳೆಗೆ ಭಾರತವನ್ನು ‘ಮಲೇರಿಯಾ ಮುಕ್ತ’ ಮಾಡುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮಗಳ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಪ್ರತಿವರ್ಷದ ಏಪ್ರಿಲ್ 25 ರಂದು ‘ವಿಶ್ವ ಮಲೇರಿಯಾ’ ದಿನವೆಂದು ಆಚರಿಸಲಾಗುತ್ತದೆ. ಸಂತೋಷದ ವಿಷಯವೆಂದರೆ ಭಾರತದಲ್ಲಿ ಪ್ರತಿವರ್ಷ ಮಲೇರಿಯಾ ಸೊಂಕಿನ ಸಂಖ್ಯೆಯಲ್ಲಿ ಗಣನಿಯ ಇಳಿಕೆ ಕಾಣುತ್ತಿದೆ.

ALSO READ; World Malaria report 2021 says India registered progress against malaria. 

ಮಲೇರಿಯಾ ರೋಗ ಉತ್ಪತ್ತಿ :

ಮೊದಲಿಗೆ ಸೊಂಕಿತ ಅನಾಫಿಲಿಸ್ ಸೊಳ್ಳೆಯು ಅರೋಗ್ಯವಂತ ಮನುಷ್ಯರಿಗೆ ಕಚ್ಚಿದ ಬಳಿಕ ಅದರ ಲಾಲಾರಸದಲ್ಲಿ ಇರುವ ಮಲೇರಿಯಾ ಕಾರಕ ಸೂಕ್ಷ್ಮ ಜೀವಾಣುಗಳು (sporozoites)  ಮನುಷ್ಯನ ಯಕೃತ್ ನಲ್ಲಿ ಸೇರಿ ತನ್ನ ಸಂತಾನಾಭಿವೃದ್ಧಿ ಮಾಡಿಕೊಳುತ್ತವೆ. ತದನಂತರ ಅಭಿವೃದ್ಧಿ ಹೊಂದಿರುವ ಜೀವಾಣುಗಳು (merozoites) ಮನುಷ್ಯನ ರಕ್ತದಲ್ಲಿ ಸೇರಿ ಕೆಂಪುರಕ್ತ ಕಣಗಳನ್ನು ನಾಶಪಡಿಸಿ ಮಲೇರಿಯಾ ರೋಗವನ್ನು ಉತ್ಪತ್ತಿ ಮಾಡುತ್ತವೆ.

ಮಲೇರಿಯಾ ರೋಗ ಹೇಗೆ ಹರಡುತ್ತದೆ:

ಸಾಮಾನ್ಯವಾಗಿ ಸೊಂಕಿತ ಅನಾಫಿಲಿಸ್ ಸೊಳ್ಳೆಗಳಿಂದ ಮಲೇರಿಯಾ ರೋಗವು ಹರಡುತ್ತದೆ. ಆದರೆ ಕೆಲವಮ್ಮೆ ಸೊಂಕಿತ ಗರ್ಭಿಣಿಯರಿಂದ ಮಗುವಿಗೆ, ಸೊಂಕಿತ ವ್ಯಕ್ತಿಯ ರಕ್ತ ಬೇರೆ ವ್ಯಕ್ತಿಗೆ ಕೊಟ್ಟಾಗ ಹರಡುವ ಸಂಭವವಿರುತ್ತದೆ.

ಮಲೇರಿಯಾ ರೋಗ ಯಾರಲ್ಲಿ ಹೆಚ್ಚು:

ಮಲೇರಿಯಾ ರೋಗವು ಗಂಡು ಹೆಣ್ಣು ಎನ್ನುವ ಭೇದವಿಲ್ಲದೆ ಎಲ್ಲಾ ವಯಸ್ಸಿನ ಜನರಲ್ಲಿ ಕಾಣಿಸಿಕೊಂಡರು, ಅತಿಹೆಚ್ಚಾಗಿ ಚಿಕ್ಕಮಕ್ಕಳಲ್ಲಿ, ಗರ್ಭಿಣಿಯರಲ್ಲಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ, ಅತಿಹೆಚ್ಚು ಮಳೆಬಿಳುವ ಪ್ರದೇಶದ ಜನರಲ್ಲಿ ಮತ್ತು ಆಗಾಗ್ಗೆ ಒಂದು ಪ್ರದೇಶದಿಂದ ಇನ್ನೊಂದ ಪ್ರದೇಶಕ್ಕೆ ಪ್ರಯಾಣ ಮಾಡುವ ವರ್ಗದ ಜನರಲ್ಲಿ ಅತಿಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.

ಮಲೇರಿಯಾ ರೋಗ ಲಕ್ಷಣಗಳು:

ಸಾಮಾನ್ಯವಾಗಿ ಮಲೇರಿಯಾವು ಎರಡು ಅವಸ್ಥೆಯಲ್ಲಿ ಕಂಡುಬರುತ್ತದೆ ಒಂದು ಅಸಂಕಿರ್ಣ (uncomplicated) ಮತ್ತು ಸಂಕಿರ್ಣ (complicated). ಅಸಂಕಿರ್ಣ ಅವಸ್ಥೆಯಲ್ಲಿ , ವಿಪರೀತ ಜ್ವರದ ಜೊತೆ ಚಳಿ ಮತ್ತು ನಡಕು, ಬೆವರು ಬರುವುದು, ವಾಕರಿಕೆ, ವಾಂತಿ, ಭೇದಿ, ಒಣಕೆಮ್ಮು, ತಲೆನೋವು, ಮೈಕೈನೋವು,ಗಂಟು ನೋವು, ಆಯಾಸ, ಹೊಟ್ಟೆಯಲ್ಲಿ ಸಂಕಟವಾಗುವುದು ಹೀಗೆ ಕೆಲವು ಪ್ರಮುಖ ಲಕ್ಷಣಗಳು ಕಂಡುಬಂದರೆ, ಸಂಕಿರ್ಣ ಅವಸ್ಥೆಯಲ್ಲಿ ಉಸಿರಾಟ ತೊಂದರೆ, ಯಕೃತ್ ಬಾವು, ರಕ್ತದಲ್ಲಿ ಕಡಿಮೆಯಾಗುವಿಕೆ, ತಲೆಸುತುವುದು, ಪ್ರಜ್ಞೆಹೀನತೆ ಮತ್ತು ತೂಕದಲ್ಲಿ ಬದಲಾವಣೆಯಂತ ಲಕ್ಷಣಗಳು ಕಾಣಿಸಿಕೊಳುತ್ತವೆ

ಮಲೇರಿಯಾ ರೋಗ ಪತ್ತೆಹಚ್ಚುವ ವಿಧಾನ:

ಮಲೇರಿಯಾ ರೋಗವು ಮುಖ್ಯವಾಗಿ ರೋಗ ಲಕ್ಷಣಗಳ ಜೊತೆಗೆ ಸಂಪೂರ್ಣ ರಕ್ತ ಪರೀಕ್ಷೆ, ರಕ್ತದ ಸೂಕ್ಷ್ಮ ಪರೀಕ್ಷೆ (microscopic examination of blood film) ಮತ್ತು ಪ್ರತಿಜನಕ ಆಧಾರಿತ ಕ್ಷಿಪ್ರ ರೋಗ ನಿರ್ಣಾಯಕ ಪರೀಕ್ಷೆ (Antigen based rapid diagnostic test) ಗಳಿಂದ ಸುಲಭವಾಗಿ ಹಾಗೂ ತ್ವರಿತವಾಗಿ ಪತ್ತೆ ಹಚ್ಚಬಹುದು.

ಮಲೇರಿಯಾ ರೋಗ ಚಿಕಿತ್ಸೆ:

ಮಲೇರಿಯಾ ರೋಗವು ದೃಧಪಟ್ಟಮೇಲೆ ರೋಗದ ಅವಸ್ಥೆ (ಸಂಕಿರ್ಣ ಅಥವಾ  ಅಸಂಕಿರ್ಣ) ಅನುಸಾರವಾಗಿ ಆಂಟಿ ಮಲೇರಿಯಲ್ (ಆರ್ಟಿಮಿಸಿನಿನ್ ಅಥವಾ ಆರ್ಟಿಮಿಸಿನಿನ್ ಕಾಂಬಿನೇಶನ್ ಚಿಕಿತ್ಸೆ) ಔಷದಿಗಳ ಜೊತೆಗೆ ಆಯುರ್ವೇದದಲ್ಲಿ ಹೇಳಿರುವ ಉಪಚಾರದಿಂದ ಮಲೇರಿಯಾ ರೋಗವನ್ನು ಸುಲಭವಾಗಿ ಗೆಲ್ಲಬಹುದು.

ರೋಗ ಬರದಂತೆ ಏನು ಮಾಡಬೇಕು:

• ಸೊಳ್ಳೆಗಳ ಸಂತಾನಾ ಉತ್ಪತಿ ಹೆಚ್ಚಾಗಿ ನಿಂತ ನೀರಲ್ಲಿ ಕಂಡುಬರುತ್ತದೆ ಹಾಗಾಗಿ ಮನೆಯ ಅಕ್ಕಪಕ್ಕ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು.
• ರಾತ್ರಿ ಮಲಗುವಾಗ ಸೊಳ್ಳೆ ಪರದೆ ಬಳಸುವುದು.
• ನಿಯಮಿತವಾಗಿ ಗುಣಮಟ್ಟವಿರುವ ಮಸ್ಕಿಟೋ ಸ್ಪ್ರೇ ವನ್ನು ಉಪಯೋಗಿಸುವುದು.
• ರೋಗನಿರೋದಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಸೇವಿಸುವುದು.

ALSO READ: ಮಲೇರಿಯ ಮನುಕುಲದ ಬಹುದೊಡ್ಡ ಶತ್ರು 

ಕೊರೋನ ಮಧ್ಯ ಮರೆಯಾಗದಿರಲಿ ಮಲೇರಿಯಾ:

ಸಧ್ಯ ದೇಶದಲ್ಲಿ ‘ಜ್ವರ ಎಂದರೆ ಕೊರೋನ, ಕೊರೋನ ಎಂದರೆ ಜ್ವರ’ ಎಂಬ ಪರಿಸ್ಥಿತಿಯನ್ನು ಈ ಮಹಾಮಾರಿ ಕೊರೋನವು ಉಂಟುಮಾಡಿದೆ. ಮಲೇರಿಯಾ ರೋಗದ ಸಂಖ್ಯೆ ಗಣನಿಯವಾಗಿ ಕಡಿಮೆ ಆಗಿದೆ. ಅಂದರು ಸಹ ಕೊರೋನಾದ ಮಧ್ಯೆ ಮಲೇರಿಯಾವನ್ನು ಮರೆಯಲೆಬಾರದು ಯಾಕೆಂದರೆ ಕಳೆದ ವರ್ಷದ ಅಂಕಿಅಂಶಗಳ ಪ್ರಕಾರ ಸುಮಾರು 2 ಲಕ್ಷ ಜನಗಳಿಗೆ ಮಲೇರಿಯಾ ಸೋಂಕು ತೊಗಲಿದೆ. ಭಾರತ ಸರ್ಕಾರ ಸೂಚಿಸಿರುವ ಕೊರೋನ ಮುಂಜಾಗೃತ ಕ್ರಮಗಳ ಜೊತೆಗೆ ಮಲೇರಿಯಾ ರೋಗದ ಮುಂಜಾಗೃತ ಕ್ರಮಗಳನ್ನು ಪಾಲಿಸುವುದರೊಂದಿಗೆ ದೇಶವನ್ನು ಮಲೇರಿಯಾ  ಮುಕ್ತ ಮಾಡೋಣ.

dr-mohammed-yunus.

ಡಾ. ಮಹ್ಮದ ಯುನುಸ. ಶ. ನಬೂಜಿ
ಸಹ ಪ್ರಾಧ್ಯಾಪಕರು
ಶ್ರೀ. ಜೆ. ಜಿ. ಸಿ. ಹೆಚ್. ಎಸ್. ಆಯುರ್ವೇದಿಕ್ ಮೆಡಿಕಲ್ ಕಾಲೇಜು ಘಟಪ್ರಭಾ
 ಮೊ : 9448456450

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!