ವಿಶ್ವ ಫಾಲೂನ್ ದಾಫಾ ದಿನ-ಮೆ 13 

ವಿಶ್ವ ಫಾಲೂನ್ ದಾಫಾ ದಿನ-ಮೆ 13 .ಫಾಲೂನ್ ದಾಫಾ ಎಂದರೆ ಸಾಧನೆಯ ಮಹಾನ್ ಮಾರ್ಗ ಅಥವ ಸಾಧನೆಯ ಹಾದಿ ಎಂದರ್ಥ. ಈ ವ್ಯಾಯಾಮವನ್ನು ಮಾಡುವುದರಿಂದ ಮನಸ್ಸಿನ ಏಕಾಗ್ರತೆ ಮೂಡುವುದು.

ವಿಶ್ವ ಫಾಲೂನ್ ದಾಫಾ ದಿನ-ಮೆ 13 ಮೆ 13  ಫಾಲೂನ್ ದಾಫಾ ಮೂಲಕ ತಮ್ಮ ಜೀವನವನ್ನು ಧನಾತ್ಮಕವಾಗಿ ರೂಪಿಸಿಕೊಂಡಿರುವ ಅನೇಕ ಅಭ್ಯಾಸಿಗರಿಗೆ ಅತ್ಯಂತ ಪುಣ್ಯದಿನ. ಫಾಲೂನ್ ದಾಫಾವು ಒಂದು ಅತ್ಯಂತ ಪ್ರಾಚೀನ ಸಾಧನಾ ಪದ್ಧತಿಯಾಗಿದ್ದು ಇದು ಒಬ್ಬ ವ್ಯಕ್ತಿಯ ಮನಸ್ಸು ಮತ್ತು ದೇಹವನ್ನು ಉನ್ನತ ಮಟ್ಟದಲ್ಲಿ ಕೃಷಿ ಮಾಡುವ ಒಂದು ಆಧ್ಯಾತಿಕ ಧ್ಯಾನಸಹಿತ ಸಾಧನಾಭ್ಯಾಸ. ಪ್ರ್ರಾಚೀನ ಕಾಲದಿಂದಲೂ ಉನ್ನತ ವಿದ್ಯೆಯನ್ನು ಗುರುವಿನಿಂದ ಕೇವಲ ಒಬ್ಬ ಶಿಷ್ಯನಿಗೆ ಮಾತ್ರ ವರ್ಗಾಯಿಸಲ್ಪಡುತ್ತಿದ್ದ ಸಾಧನಾ ಪದ್ಧತಿಯನ್ನು ಮಾಸ್ಟರ್ ಲೀ ಹಾಂಗ್ ಜೀರವರು ಜನ ಸಾಮಾನ್ಯರು ತಮ್ಮ ದೈನಂದಿನ ಜೀವನದಲ್ಲಿ ಕೂಡ ಸಾಧನೆ ಮಾಡಲು ಅನುಕೂಲವಾಗುವಂತೆ ಇದನ್ನು ಸರಳೀಕರಣಗೊಳಿಸಿ 1992ನೇ ಮೇ 13 ರಂದು ಈ ಅಭ್ಯಾಸವನ್ನು ಸಾರ್ವಜನಿಕವಾಗಿ ಪರಿಚಯಿಸಿದರು. ಪ್ರಸ್ತುತ ಫಾಲೂನ್ ದಾಫಾವನ್ನು ಸುಮಾರು 120 ಕ್ಕಿಂತಲೂ ಅಧಿಕ ರಾಷ್ಟ್ರಗಳಲ್ಲಿ ಸುಮಾರು 10 ಕೋಟಿಗಿಂತಲೂ ಅಧಿಕ ಜನರಿಂದ ಅಭ್ಯಾಸ ಮಾಡಲಾಗುತ್ತಿದೆ.

ಫಾಲೂನ್ ದಾಫಾ- ಸಾಧನೆಯ  ಮಾರ್ಗ:

ಫಾಲೂನ್ ದಾಫಾವನ್ನು ಫಾಲೂನ್ ಗಾಂಗ್ ಎಂದೂ ಕೂಡ ಕರೆಯಲಾಗುವುದು. ಫಾಲೂನ್ ದಾಪಾದ ಮುಖ್ಯ ಉದ್ದೇಶವೇನೆಂದರೆ ವಿಶ್ವದ ಲಕ್ಷಣಗಳಾದ ಸತ್ಯ, ಕರುಣೆ ಮತ್ತು ತಾಳ್ಮೆಗಳನ್ನು ಮಾನವ ಜೀವಿಗಳು ಉನ್ನತ ಹಂತದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಮನಸ್ಸು ಮತ್ತು ದೇಹದ ಕೃಷಿ ಮಾಡುವುದು, ಆಸೆ, ವ್ಯಾಮೋಹಗಳನ್ನು ತ್ಯಜಿಸುವುದು, ಕೆಟ್ಟ ಆಲೋಚನೆಗಳಿಂದ ದೂರ ಉಳಿಯುವುದು, ತ್ಯಾಗ ಮಾಡುವ ಮನೋಬಾವ, ಉನ್ನತ ನೈತಿಕತೆಯನ್ನು ಬೆಳೆಸಿಕೊಳ್ಳುವುದು ಇತ್ಯಾದಿ. ನಿರಂತರ ಸಾಧನೆ ಮತ್ತು ಅಭ್ಯಾಸದ ಮೂಲಕ ಗಾಂಗ್ ಅಥವ ಸಾಧನಾ ಶಕ್ತಿಯನ್ನು ಬೆಳೆಸಿಕೊಳ್ಳುವುದೇ ಈ ಅಭ್ಯಾಸದ ಗುರಿ.
ಫಾಲೂನ್ ದಾಫಾ ಎಂದರೆ ಸಾಧನೆಯ ಮಹಾನ್ ಮಾರ್ಗ ಅಥವ ಸಾಧನೆಯ ಹಾದಿ ಎಂದರ್ಥ. ಫಾ ಎಂಬ ಪದವು ಬುದ್ಧ ಪದದ ತರ್ಜುಮೆಯಾಗಿದ್ದು  ಜ್ಞಾನವಂತ, ಮಹಾಜ್ಞಾನಿ ಅಥವ ಜ್ಞಾನೋದಯ ಹೊಂದಿದವರು ಎಂಬುದು ಇದರರ್ಥ.

falundafaಮನಸ್ಸು ಮತ್ತು ಶರೀರ ಸಾಧನೆಯ ಫಾಲೂನ್ ದಾಫಾದ ವಿಚಾರಗಳನ್ನು ಮೂಲಗ್ರಂಥವಾದ ಜುವಾನ್ ಫಾಲೂನ್ ಪುಸ್ತಕದಲ್ಲಿ ಒಂಭತ್ತು ಅಧ್ಯಾಯಗಳ ಒಂದು ಸರಣಿ ರೂಪದಲ್ಲಿ ಮಾಸ್ಟರ್ ಲೀರವರು ನೀಡಿದ್ದಾರೆ. ಇತಿಹಾಸಪೂರ್ವ ಸಂಸ್ಕೃತಿಯಾದ ಸಾಧನಾಬ್ಯಾಸವು ಬೆಳೆದು ಬಂದ ರೀತಿ, ಸಾಮಾನ್ಯ ಜನಜೀವನದಲ್ಲಿ  ಜನಸಾಮಾನ್ಯರ ನಂಬಿಕೆ, ಅಪನಂಬಿಕೆ, ಇತಿಮಿತಿಗಳು, ಆಸೆ, ವ್ಯಾಮೋಹ ಇತ್ಯಾದಿ ಗುಣಗಳಿಂದ ಉಂಟಾಗುವ ಕರ್ಮ ಸಂಬಂಧ ವಿಚಾರಗಳು, ಇವುಗಳ ಪರಿಣಾಮಗಳು, ಸತ್ಯ ಮಾರ್ಗದಲ್ಲಿ ಸಾಧನೆಯನ್ನು ಮಾಡಬೇಕಾದ ಅವಶ್ಯಕತೆ, ಅನಿವಾರ್ಯತೆ, ಇತ್ಯಾದಿ ವಿಚಾರಗಳನ್ನು ಅತ್ಯಂತ ವೈಜ್ಞಾನಿಕವಾಗಿ ಮಾಸ್ಟರ್ ಲೀ ರವರು ತುಂಬಾ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ. ಈ ಪುಸ್ತಕವನ್ನು ಒಂದೊಂದು ಬಾರಿ ಓದಿದಾಗಲೂ ಹಿಂದೆ ಅರ್ಥವಾಗದೆ ಉಳಿದಿದ್ದ ಅನೇಕ ವಿಚಾರಗಳು ನಮ್ಮ ಅರಿವಿಗೆ ಬರುತ್ತಾ ಹೋಗುವುದು.

ಈ ವಿಚಾರಗಳು ಅತ್ಯಂತ ಪರಿಣಾಮಕಾರಿಯಾಗಿರುವುದರಿಂದ ಕೌಟುಂಬಿಕ ಜೀವನ, ವೃತ್ತಿ ಜೀವನ ಹಾಗೂ ನಮ್ಮ ಸಾಮಾಜಿಕ ನೆಲೆಗಳಲ್ಲಿ ಎದುರಾಗುವ ಅನೇಕ ಸಮಸ್ಯೆಗಳಿಗೆ ಕಾರಣಗಳು ಹಾಗೂ ಪರಿಹಾರಗಳು ನಮಗೆ ತಿಳಿಯುತ್ತಾ ಹೋಗುವುದು. ಮನಸ್ಸು ನಿರಾಳವಾಗುವುದು, ಕೋಪ, ಅಸಹನೆ, ವ್ಯಾಮೋಹ ಇತ್ಯಾದಿ ಗುಣಗಳು ನಮ್ಮ ನಿಯಂತ್ರಣಕೆ ಬರುವುದು, ಹೃದಯವಂತಿಕೆ ಬೆಳೆಯುವುದು, ತಾಳ್ಮೆ ಮತ್ತು ಸಹಿಷ್ಣುತೆಗಳು ನಮ್ಮಲ್ಲಿ ಮನೆ ಮಾಡುವುದು. ನೈತಿಕತೆಯು ಉನ್ನತ ಹಂತದಲ್ಲಿ ಬೆಳೆಯುವುದು. ಒಟ್ಟಿನಲ್ಲಿ ಈ ಪುಸ್ತಕವನ್ನು ಸತತ ಅಧ್ಯಯನ ಮಾಡುವುದರಿಂದ ನಮ್ಮ ಸಾಮಾನ್ಯ ಜೀವನ, ಆಧ್ಯಾತ್ಮಿಕ ಜೀವನಗಳಿಗೆ ಉತ್ತಮ ನೆಲೆ ಕಾಣಲು ಸಾಧ್ಯ.

ವ್ಯಾಯಾಮವನ್ನು ಮಾಡುವುದರಿಂದ ಮನಸ್ಸಿನ ಏಕಾಗ್ರತೆ:

ಶರೀರದ ಸಾಧನೆಗೆ ೫ ಬಗೆಯ ವ್ಯಾಯಾಮಗಳನ್ನು ಫಾಲೂನ್ ದಾಫ ಸಾಧನೆಯಲ್ಲಿ ಅಭ್ಯಾಸ ಮಾಡಲಾಗುತ್ತದೆ. ಇವುಗಳಲ್ಲಿ ನಾಲ್ಕು ನಿಂತು ಮಾಡುವ ವ್ಯಾಯಾಮ ಹಾಗೂ ಒಂದು ಪದ್ಮಾಸನದಲ್ಲಿ ಕುಳಿತು ಮಾಡುವ ಧ್ಯಾನಾಭ್ಯಾಸವಾಗಿದೆ. ಈ ವ್ಯಾಯಾಮಗಳಿಗೆ ಹಿನ್ನೆಲೆ ಸಂಗೀತವಿದೆ. ಸಂಗೀತದ ಹಿನ್ನೆಲೆಯಲ್ಲಿ ಈ ವ್ಯಾಯಾಮವನ್ನು ಮಾಡುವುದರಿಂದ ಮನಸ್ಸಿನ ಏಕಾಗ್ರತೆ ಮೂಡುವುದು. ವ್ಯಾಯಾಮದ ಚಲನೆಗಳು ಅತ್ಯಂತ ಲಯಬದ್ಧ, ಹಾಗೂ ನಿಧಾನಗತಿಯಲ್ಲಿರುವುದು. ನಿರಂತರವಾಗಿ ಈ ವ್ಯಾಯಾಮಗಳನ್ನು ಮಾಡುವುದರಿಂದ ಶರೀರದಲ್ಲಿ ಸರಾಗವಾಗಿ ರಕ್ತ ಸಂಚಾರವಾಗುವುದು, ಶರೀರದ ಎಲ್ಲಾ ನಾಡಿಗಳ ಮೂಲಕ ಶಕ್ತಿಯ ಸಂಚಲನೆಯಾಗುವುದು, ಶಕ್ತಿಯು ತಲೆಯಿಂದ ಪಾದದವರೆಗೂ ಹರಿಯುವುದರಿಂದ ನಿರಂತರವಾಗಿ ಶರೀರದ ಶುದ್ಧೀಕರಣವಾಗುವುದು, ತ್ವಚೆಯ ತಳಭಾಗದಲ್ಲಿ ಶಕ್ತಿಯು ಸಂಚಲನೆಯಾಗುವುದು. ಫಾಲೂನ್ ದಾಫಾ ವ್ಯಾಯಾಮಗಳನ್ನು ಅಭ್ಯಾಸಿಗರಿಂದ ಉಚಿತವಾಗಿ ಹೇಳಿಕೊಡಲಾಗುತ್ತಿದೆ. ಫಾಲೂನ್ ದಾಫಾದ ಅಭ್ಯಾಸವು ಪುಸ್ತಕವನ್ನು ಓದುವುದು ಹಾಗೂ ವ್ಯಾಯಾಮವನ್ನು ಪ್ರತಿದಿನ ನಿರಂತರವಾಗಿ ಮಾಡುವುದನ್ನು ಒಳಗೊಂಡಿದೆ.

ಫಾಲೂನ್ ಗಾಂಗ್ ಮತ್ತು ಇದರ ಸಂಸ್ಥಾಪಕರಾದ ಮಾಸ್ಟರ್ ಲೀ ಹಾಂಗ್ ಜೀರವರಿಗೆ ಈಗಾಗಲೇ ೧೫೦೦ ಕ್ಕಿಂತಲೂ ಅಧಿಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಲೀ ಹಾಂಗ್ ಜೀರವರು ನೋಬಲ್ ಶಾಂತಿ ಪುರಸ್ಕಾರಕ್ಕೆ ನಾಮನಿರ್ದೇಶಿತರಾಗಿದ್ದರು. ಭಾರತದಲ್ಲಿ ಈ ಅಭ್ಯಾಸವನ್ನು ಅನೇಕ ಶಾಲಾ ಕಾಲೇಜುಗಳಲ್ಲಿ ಪರಿಚಯಿಸಲಾಗಿದೆ. ದೆಹಲಿ ಮತ್ತು ಹೈದರಾಬಾದ ನ ಪೋಲೀಸ್ ಶಾಲೆಗಳಿಂದ ಈ ಅಭ್ಯಾಸವನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಲಾಗಿದೆ.  ಅನೇಕ ಜೈಲುಗಳಲ್ಲಿ ಸಿಬ್ಬಂದಿಗಳಿಗೆ ಹಾಗೂ ಅಲ್ಲಿನ ಕೈದಿಗಳಿಗೆ ಫಾಲೂನ್ ದಾಫಾವನ್ನು ಹೇಳಿಕೊಡಲಾಗುತ್ತಿದೆ. ಫಾಲೂನ್ ದಾಫಾ ಮಾಡುವುದರಿಂದ ವ್ಯಕ್ತಿಯ ನಡವಳಿಕೆಗಳಲ್ಲಿ ಶೀಘ್ರಗತಿಯ ಬದಲಾವಣೆಯಾಗುವುದು ಮತ್ತು ಧನಾತ್ಮಕವಾಗಿ ಅವರಲ್ಲಿ ಪರಿವರ್ತನೆಯಾಗುವುದು.

ಫಾಲೂನ್ ದಾಫಾ ನಿಷೇಧ:

world-falun-dafa-dayಫಾಲೂನ್ ದಾಫಾದ ಆಧ್ಯಾತ್ಮಿಕ ಉಪನ್ಯಾಸಗಳಿಂದ ಆಕರ್ಷಿತರಾದ ಜನರು ಇದರಿಂದ ಅತ್ಯಂತ ವೇಗವಾಗಿ ಆರೋಗ್ಯ ಸುದಾರಣೆಯಾಗುವುದು ಎಂಬುದನ್ನು ಅರಿತು ಹೆಚ್ಚಿನ ಜನರು ಇದರ ಅಬ್ಯಾಸವನ್ನು ಅಳವಡಿಸಿಕೊಳ್ಳಲು ಆರಂಭಿಸುತ್ತಾರೆ. ಚೈನಾದಲ್ಲಿ ಇದು ಅತ್ಯಂತ ಜನಪ್ರಿಯವಾಗಿ ಕೆಲವೇ ವರ್ಷಗಳಲ್ಲಿ ಸುಮಾರು 7-10 ಕೋಟಿ ಜನರು ಇದರ ಅಭ್ಯಾಸಿಗರಾಗುತ್ತಾರೆ. ಫಾಲೂನ್ ದಾಫಾದ ಜನಪ್ರಿಯತೆಯನ್ನು ನೋಡಿ ಆತಂಕಕ್ಕೆ ಒಳಗಾದ ಆಗಿನ ಚೀನಾ (ಅಧ್ಯಕ್ಷರಾಗಿದ್ದ ಜಿಯಾಂಗ್ ಜೆಮಿನ್‌ರವರು) ಫಾಲೂನ್ ದಾಫಾ ಅನುಯಾಯಿಗಳ ಸಂಖ್ಯೆಯು ತಮ್ಮ ಕಮ್ಯುನಿಸ್ಟ ಸದಸ್ಯತ್ವದ ಸಂಖ್ಯೆಯನ್ನು ಮೀರುತ್ತಿರುವುದನ್ನು ಪರಿಗಣಿಸಿ ತಮ್ಮ ಚೀನೀ ಕಮ್ಯುನಿಸ್ಟ್ ಪಕ್ಷಕ್ಕೆ (ಸಿಸಿಪಿ) ಇದರಿಂದ ಅಪಾಯವುಂಟಾಗುವುದೆಂದು ಮನಗಂಡು ಈ ಅಬ್ಯಾಸಕ್ಕೆ 1999ನೆ ಜುಲೈ 20 ರಂದು ಸಾರ್ವಜನಿಕ ನಿಷೇಧ ಹೇರಿತು. ಸಿಸಿಪಿಯು ಇದರ ಅಭ್ಯಾಸಿಗರನ್ನು ಸೆರೆಹಿಡಿದು ಕೈದು ಮಾಡಿ ನಿರ್ದಯವಾಗಿ ಹಿಂಸಿಸುತ್ತಿದೆ. ಚೈನಾದಲ್ಲಿ ಈ ಕ್ರೌರ್ಯ ಈಗಲೂ ಮುಂದುವರೆದಿದೆ. ಇತ್ತೀಚಿನ ವರ್ಷಗಳಲ್ಲಿ ಕಂಡುಬಂದ ಮತ್ತೊಂದು ಅತ್ಯಂತ ಆಘಾತಕಾರಿ ವಿಷಯವೇನೆಂದರೆ ಫಾಲೂನ್ ದಾಫಾ ಅಭ್ಯಾಸಿಗರು ಜೀವಂತವಿರುವಾಗಲೇ ಅವರ ಅಂಗಾಂಗಗಳನ್ನು ತೆಗೆದು ಅಂಗಾಂಗ ಕಸಿ ಮಾಡಲಾಗುತ್ತಿರುವುದು. ಸಿಸಿಪಿಯ ಈ ಧಂದೆಯು ಅತ್ಯಂತ ಹೇಯ ಕೃತ್ಯ.

ಮೇ 13-ವಿಶ್ವ ಪಾಲೂನ್ ದಾಫಾ ದಿನ:

ಸಭೆ, ಸಮಾರಂಭಗಳು, ಮೆರವಣಿಗೆಗಳು, ಸೆಮಿನಾರ್‌ಗಳು, ಅನುಭವ ಹಂಚಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಫಾಲೂನ್ ದಾಫಾ ಅಭ್ಯಾಸಿಗರು ವಿಶ್ವಾದ್ಯಂತ ಈ ದಿನವನ್ನು ಅತ್ಯಂತ ಸ್ಮರಣೀಯವಾಗಿ ಪ್ರತಿವರ್ಷ ಆಚರಿಸುತ್ತಿದ್ದರು. ಆದರೆ ಈಗ ಲಾಕ್‌ಡೌನ್ ಪರಿಸ್ಥಿತಿ ಇರುವುದರಿಂದ ಆನ್‌ಲೈನ್ ಮೂಲಕವೇ ಈ ಆಚರಣೆಯನ್ನು ಅಭ್ಯಾಸಿಗರು ಕೈಗೊಳ್ಳುತ್ತಿದ್ದಾರೆ. ಭಾರತದಲ್ಲಿ ಕಂಪ್ಯೂಟರ್ ಆಪ್‌ಗಳನ್ನು ಬಳಸಿ ಹೆಚ್ಚಿನ ಅಭ್ಯಾಸಿಗರು ಏಕಕಾಲದಲ್ಲಿ ತಮ್ಮ ಅಪೂರ್ವ ಅನುಭವಗಳ ಹಂಚಿಕೆ ಮಾಡಿಕೊಳ್ಳುತ್ತಿದ್ದಾರೆ. ಫಾಲೂನ್ ದಾಫಾವು ಇಂದು ಇಡೀ ವಿಶ್ವದಲ್ಲಿಯೇ ಅತ್ಯಂತ ಪರಿಣಾಮಕಾರಿ ಹಾಗೂ ಪ್ರಭಾವೀ ಸಾಧನಾಭ್ಯಾಸವಾಗಿ ಹೊರಹೊಮ್ಮಿದೆ. ಈ ಲಾಕ್‌ಡೌನ್ ಅವಧಿಯಲ್ಲಿಯೂ ಫಾಲೂನ್ ದಾಫಾದ ಎಲ್ಲಾ ವ್ಯಾಯಾಮಗಳನ್ನು ಮನೆಯಲ್ಲಿಯೇ ಕುಳಿತು ಕಲಿಯಬಹುದು. ವ್ಯಾಯಾಮಗಳ ಎಲ್ಲಾ ವೀಡಿಯೋಗಳು, ಮಾಸ್ಟರ್‌ರವರ ಉಪನ್ಯಾಸಗಳು, ಪುಸ್ತಕಗಳು ಮತ್ತು ಹಿನ್ನೆಲೆ ಸಂಗೀತಗಳು ಎಲ್ಲವೂ ಆನ್‌ಲೈನ್ ನಲ್ಲಿ ಉಚಿತವಾಗಿ ಲಭ್ಯವಿದೆ. ವಿವರಗಳಿಗಾಗಿ:

www.falundafa.org 

www.falundafaindia.org.

ಸಿ.ಎನ್.ಪ್ರದೀಪ್ ಕುಮಾರ್, ಕೋಲಾರ
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!