ವಿಜಯದ ಮುಂದೆ ಅಭಯ

ಚಿತೆ ದೇಹವನ್ನು ಸುಟ್ಟಂತೆ ಭಯ ನಮ್ಮನ್ನು ಜೀವಂತ ಸುಡುತ್ತದೆ. ನಾವೇನೋ ಸಾಧನೆಗೆಂದು ಧುಮುಕಿದರೆ, ಭಯ ಎಂಬ ಕಣ್ಣಿಗೆ ಕಾಣದ ವೈರಸ್ ಬಹುತೇಕ ಸಮಯ, ಕೆಲಸ ಕಾರ್ಯಗಳಲ್ಲಿ ಹರಡುತ್ತದೆ ಮತ್ತು ತಡೆಯುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಭಾಗದಿಂದ ಇದರ ಅನುಭವಿಗಳಾಗಿದ್ದೇವೆ.

vijayada munde abhaya

ಭಯದ ಪಾತ್ರಗಳಿಗೇಕೆ ಮನ್ನಣೆ?

ಕನಸುಗಳಿಗೆ ರೂಪವಿರುತ್ತವೆ ಅದು ಕೂಡ ಕೆಲ ಮಹತ್ವ ಬದಲಾವಣೆಯ ಸಂಕೇತವೆಂದು ನಮ್ಮ ನಂಬಿಕೆಯ ದಿನಚರಿಯಲ್ಲಿದೆ ಮತ್ತು ನಾವುಗಳು ಬಹುತೇಕ ನಂಬಿಕೊಂಡಿರುತ್ತೇವೆ. ಜೀವನದಲ್ಲಿ ಸೋಲುಗಳನ್ನೇ ನೋಡುತ್ತಿರುವ ವ್ಯಕ್ತಿ ಅದನ್ನುಸುಲಭವಾಗಿ ಜೀರ್ಣಿಸಿಕೊಳ್ಳಲಾರನು. ಒಂದು ವೇಳೆ ದಿನ ಕನಸು ಕಂಡು ಅದನ್ನೇ ಒಂದು ನಂಬಿಕೆಯ ದೋಣೆಯಾಗಿಸಿದರೆ ಮನಸ್ಸು ಭಿನ್ನವಾಗಿ ಸಿಹಿಗಿಂತ ಕಹಿ ಮತ್ತು ಗೊಂದಲದ ತೂಕ ಹೆಚ್ಚಿಸಬಹುದು.

ಒಂದು ಸಾಲಿನ ಚಿಕ್ಕ ಕಥೆ

ಒಂದು ಚಿಕ್ಕ ಕತೆಯ ಮೂಲಕ ನೋಡುವುದಾದರೆ, ಒಬ್ಬ ವ್ಯಕ್ತಿಗೆ ಯಾರೋ ಭೇಟಿಯಾಗಲು ಆಹ್ವಾನ ಕಳಿಸಿದಂತೆ ಕನಸು ಬಿತ್ತಂತೆ ಅದರ ಅರ್ಥ ತಿಳಿದ ಆ ವ್ಯಕ್ತಿ ಮರುದಿನ ಈ ಕನಸಿನಿಂದ ಸಾಕಷ್ಟು ಚಡಪಡಿಸುತ್ತಿದ್ದನಂತೆ. ಈ ಚಡಪಡಿಸುವಿಕೆಗೆ ಕಾರಣ ಆ ಕನಸಿನ ನಂತರ ಭಾರಿ ದುಃಖದ ಸಮಾಚಾರವೊಂದು ಅಪ್ಪಳಿಸುತ್ತದೆ ಎಂಬ ನಂಬಿಕೆ. ನಂಬಿಕೆಯ ಊಹೆಯಂತೆ ದುಃಖದ ಸಮಾಚಾರ ಬಂದಿಲ್ಲ ಬದಲಾಗಿ ಆ ದಿಗ್ಭ್ರಮೆಯಿಂದ ಕಳೆದ ದಿನವಂತೂ ವ್ಯರ್ಥವಾಗಿ ದುಃಖ ತರಿಸಿತ್ತು.

ಯೋಗ್ಯ ಕೆಲಸ ಮತ್ತು ಅನಿವಾರ್ಯತೆ

ಭಯ ಎಂಬುದು ಯೋಗ್ಯ ವಿಷಯಗಳಿಗೆ ಸೀಮಿತವಾದಾಗ ನದಿಯಂತೆ ಹರಿಯುವ ನಮ್ಮ ಮನಸ್ಸಿಗೆ ಘಾಸಿಗೊಳಿಸದು. ದಿನನಿತ್ಯದ ಜೀವನದಲ್ಲಿ ನಾವು ಸೀಮಿತ ಆಯ್ಕೆಗಳನ್ನು ಆಯ್ದುಕೊಂಡಿದ್ದು, ಅದಕ್ಕೆ ಹೊಂದಿಕೊಂಡರೆ ಭಯ ನಮ್ಮ ಪರಮ ನೆಂಟನಾಗುವುದನ್ನುತಪ್ಪಿಸಲಾಗದು. ಯಾವುದೇ ಕ್ಷೇತ್ರಕ್ಕೆ ಯಾರೂ ಅನಿವಾರ್ಯವಲ್ಲ ಎಂಬ ಗಟ್ಟಿ ಶಬ್ದ ಮೊಳಗಿಸುತ್ತಿರುವ ಮತ್ತು ವಿಚಿತ್ರ ಮನೋಭಾವ, ಅಜೀರ್ಣತೆಯ ಭಿನ್ನ ಭಿನ್ನ ಮನಸ್ಥಿತಿಯಿಂದ ವಿಕಾರವಾಗುತ್ತಿರುವ ಪ್ರಸ್ತುತ ಜಗತ್ತಿನಲ್ಲಿ ಅನಿವಾರ್ಯವಾಗಿ ಜೀವನ ಮಾಡುವ ನಾವುಗಳು ವಿಜಯದ ಮುಂದೆ ಅಭಯವಿರಿಸಬೇಕು ಅಲ್ಲೊಂದಿಷ್ಟು ಯೋಗ್ಯ ಕೆಲಸಗಳಿಗೆ ಬೆಲೆ ಬರುವಂತೆ ಮಾಡಬೇಕು.

.ದೇವರಾಯ ಪ್ರಭು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!