ವಸಡುಗಳ ರಕ್ತಸ್ರಾವ – ಎಚ್ಚರವಾಗಿರಿ

ವಸಡುಗಳ ರಕ್ತಸ್ರಾವ ಬಗ್ಗೆ ಎಚ್ಚರವಾಗಿರಿ. ಒಂದು ಹಲ್ಲು ಉದುರಬಹುದು ಎಂದುಕೊಂಡರೆ ಅದು ನಿಮ್ಮ ತಪ್ಪು ಗ್ರಹಿಕೆ. ಯಾಕೆಂದರೆ ಅದು ರಕ್ತ ಕ್ಯಾನ್ಸರ್‍ನ ಲಕ್ಷಣವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ನಿರ್ಲಕ್ಷ ಮಾಡದೆ ಆದಷ್ಟು ಬೇಗ ವೈದ್ಯರ ಸಲಹೆ ಪಡೆಯುವುದು ಎಚ್ಚರವಾಗಿರುವುದು ಉತ್ತಮ.

vasadugala-raktasrava ವಸಡುಗಳ ರಕ್ತಸ್ರಾವ - ಎಚ್ಚರವಾಗಿರಿ

ನಿಮ್ಮ ಹಲ್ಲುಗಳ ಬಗ್ಗೆ ಎಚ್ಚರವಾಗಿರಿ. ಕಾರಣ, ಒಮ್ಮಿಂದ ಒಮ್ಮೆಲೆ ನಿಮ್ಮ ಹಲ್ಲುಗಳಲ್ಲಿ ರಕ್ತ ಸ್ರಾವವಾಗುತ್ತದೆ. ಅದು ಕ್ಷಣಕ್ಕೆ ಆಗುವಂತೆ ನಿಮಗೆ ಕಾಣಿಸಿಕೊಂಡರು ಕ್ಷಣಕ್ಕೆ ಆಗುವಂತದ್ದಲ್ಲ. ವಯಸ್ಕರಲ್ಲಿ, ಯುವಕರಲ್ಲಿ ಇದು ಹೆಚ್ಚು ಕಂಡುಬರುತ್ತದೆ ಕಾರಣ ಹಲ್ಲು ಸರಿಯಾಗಿ ಉಜ್ಜದಿರುವುದು ಮತ್ತು ಒಳ್ಳೆಯ ಬ್ರೆಶ್ ಉಪಯೋಗಿಸದಿರುವುದು. ಇದು ಒಂದು ದಿನದ ಫಲಶುತ್ರಿಯಲ,್ಲ ತಿಂಗಳುಗಟ್ಟಲೆ ಬ್ರೆಶ್ ಮಾಡದಿರುವುದು. ಆದ್ದರಿಂದ ತಿಂದ ಆಹಾರವೆಲ್ಲ ಹಲ್ಲುಗಳಲ್ಲೆ ಉಳಿದು ಹುಳಗಳು ಬೀಳಲು ಮತು ದವಡೆ ಊತ ಬರಲು ಪ್ರಾರಂಭಿಸುತ್ತವೆ. ನಂತರ ಅನವಶ್ಯಕ ಮಾಂಸಕಂಡ ಬೆಳೆದು ಹಲ್ಲಿನ ಸುತ್ತ ಹಂತ ಹಂತವಾಗಿ ರಕ್ತ ಬರಲು ಪ್ರಾರಂಭಗೊಂಡು, ನಿಮ್ಮ ನಿರ್ಲಕ್ಷದಿಂದ ಬಾಯಿ ಹುಳಗಳಿಂದ ದುರ್ವಾವಾಸನೆ ಬರಲು ನಂತರ ದಿನಗಳಲ್ಲಿ ಯಮಯಾತನೆ ಮೀರಿಸುವಂತ ಹಲ್ಲುನೋವು ಕಾಣಿಸಿಕೊಳ್ಳುತ್ತದೆ.

ಇನ್ನು ಮುಂದುವರೆದು, ನೀವು ಯಾವ ವೈದ್ಯರ ಹತ್ತಿರ ಸಲಹೆ ಪಡೆಯಾದೆ ಇದ್ದರೆ, ಕಾಲ ಕ್ರಮೇಣ ನೋವು ತೀವ್ರವಾಗುತ್ತದೆ. ವಸಡು ನರಗಳು ಶಕ್ತಿ ಕಳೆದುಕೊಂಡು ಹಲ್ಲು ಉದುರುವುದಲ್ಲದೆ ಆ ಹಲ್ಲಿನ ಹುಳಗಳು ಮತ್ತು ಪೊಳ್ಳುಬಾಗದಿಂದ ಇಡೀ ಬಾಯಿ ಹಲ್ಲುಗಳು ನಾರಲು ಆರಂಭಿಸುತ್ತವೆ, ಹುಳುಕು ಹಲ್ಲುಗಳು ಹೆಚ್ಚಾಗಬಹುದು. ನೀವು ತಿನ್ನುವ ಆಹಾರ ಕೂಡ ಇದಕ್ಕೆ ಪ್ರಮುಖ ಕಾರಣವಾಗುತ್ತದೆ. ಇದು ಕೇವಲ ದವಡೆ ರಕ್ತ ಸ್ರಾವ ಅಬ್ಬಬ್ಬಾ ಎಂದರೆ ಏನಾದೀತು? ಒಂದು ಹಲ್ಲು ಉದುರಬಹುದು ಎಂದುಕೊಂಡರೆ ಅದು ನಿಮ್ಮ ತಪ್ಪು ಗ್ರಹಿಕೆ. ಯಾಕೆಂದರೆ ಅದು ರಕ್ತ ಕ್ಯಾನ್ಸರ್ ನ ಲಕ್ಷಣವಾಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ನಿರ್ಲಕ್ಷ ಮಾಡದೆ ಆದಷ್ಟು ಬೇಗ ವೈದ್ಯರ ಸಲಹೆ ಪಡೆಯುವುದು ಎಚ್ಚರವಾಗಿರುವುದು ಉತ್ತಮ.

Read: ರಕ್ತದ ಕ್ಯಾನ್ಸರ್ ಎಂಬ ಕ್ಯಾನ್ಸರ್ ಗಳ ರಾಜ

ರಕ್ತ ಕ್ಯಾನ್ಸರ್ ವಸುಡುಗಳ ರಕ್ತಸ್ರಾವಕ್ಕೆ ಕಾರಣವೆ?

ಕ್ಯಾನ್ಸರ್ ಎಂದರೆ ಎಲ್ಲರೂ ಒಮ್ಮೆ ಭಯಬೀತರಾಗುತ್ತಾರೆ. ಕೊರೋನ ಹಿಮ್ಮೆಟ್ಟಿಸಿದ ಜನ ಕ್ಯಾನ್ಸರ್‍ಗೆ ಹೆದರುವುದು ಕಾಕತಾಳೀಯವಾದರು ನೈಜ ಸತ್ಯ. ರಕ್ತ ಕ್ಯಾನ್ಸರ್ ತಿಳಿಯುವ ಮುನ್ನ ರಕ್ತದಲ್ಲಿ ಮೂರು ರೀತಿಯ ರಕ್ತಕಣಗಳಿರುತ್ತವೆ. ಮೊದಲನೆಯಾದಾಗಿ, ಬಿಳಿ ರಕ್ತಕಣ – ರೋಗದ ವಿರುದ್ಧ ಹೋರಾಡಲು, ಎರಡನೆಯಾದಾಗಿ, ಕೆಂಪು ರಕ್ತ ಕಣ – ದೇಹಕ್ಕೆ ಆಮ್ಲಜನಕ ಒದಗಿಸಲು, ಮೂರನೆಯಾದಾಗಿ, ಪ್ಲೇಟ್‍ಲೆಟ್ ರಕ್ತ ಕಣ – ರಕ್ತಹೆಪ್ಪುಗಟ್ಟಲು ಪೂರಕವಾಗಿರುತ್ತದೆ. ರಕ್ತ ಕ್ಯಾನ್ಸರ್ ದೇಹದಲ್ಲಿ ಕೆಂಪುರಕ್ತ ಮತು ಪ್ಲೇಟ್‍ಲೆಟ್ ಕಣಗಳ ಉತ್ಪಾದನೆ ನಿಂತು ಬಿಳಿ ರಕ್ತಕಣ ಹೆಚ್ಚಾಗಿ ರೋಗದ ವಿರುದ್ಧ ದಾಳಿ ಮಾಡುವ ಬದಲು ದೇಹದ ಅಂಗಂಗಳ ಬಲಿ ತೆಗೆದು ಕೊಳ್ಳುತ್ತವೆ. ಇಂತಹ ದೈತ್ಯ ರೋಗ ಲಕ್ಷಣಗಳಲ್ಲಿ ದವಡೆ ರಕ್ತ ಸ್ರಾವ ಕೂಡ ಒಂದೆನ್ನಬಹುದು. ಹಲ್ಲುಗಳಲ್ಲಿ ರಕ್ತ ಬರುವುದು, ದವಡೆ ಹಲ್ಲಿನ ಸುತ್ತ ಅನವಶ್ಯಕ ಮಾಂಸ ಕಂಡ ಬೆಳೆಯುವುದು, ನೀವು ಆಹಾರ ತಿನ್ನುವಾಗ ಹಲ್ಲು ಸಡಿಲವೆನಿಸುವುದು ಮತ್ತು ಊತ ಬಂದು ಯಮಯಾತನೆ ನೋವು ಉಂಟಾಗುವುದು. ಇದರಿಂದ ನಿಮ್ಮ ವಸಡುಗಳ ಆಕಾರವೆ ಬದಲಾಗುತ್ತದೆ. ಈ ಎಲ್ಲಾ ಲಕ್ಷಣಗಳು ಕಂಡಲ್ಲಿ ವೈದ್ಯರನ್ನು ಕಂಡು ಮುಂದಿನ ಚಿಕಿತ್ಸೆ ಪಡೆದು ಮುಂದುವರೆಯುವುದು ಒಳ್ಳೆಯದು.

ಮಕ್ಕಳಲ್ಲಿ ವಸಡುಗಳ ರಕ್ತಸ್ರಾವ ಕಂಡು ಹಿಡಿಯುವುದು ಹೇಗೆ?

ಮಕ್ಕಳಿಗೆ ಪ್ರಪಂಚಜ್ಞಾನ ಕಡಿಮೆ. ತಮ್ಮ ದೇಹದಲ್ಲಿ ಏನೇ ಬದಲಾವಣೆ ಆದರೂ ಅದನ್ನು ವರದಿ ಮಾಡಬಲ್ಲರೆ ಹೊರತು ಇನ್ನೆನ್ನು ತಿಳಿದಿರುವುದಿಲ್ಲ. ಅತಿಯಾದ ಸಿಹಿ ತಿನ್ನುವಿಕೆ ಮತ್ತು ಹಲ್ಲು ಉಜ್ಜುವಲ್ಲಿ ನಿರ್ಲಕ್ಷ ನಿಮ್ಮ ಮಗುವಿನ ವಸಡುಗಳ ರಕ್ತಸ್ರಾವಕ್ಕೆ ಕಾರಣವಾಗಿರಬಹುದು. ಅಲ್ಲದೆ ರೋಗಗಳಿಗೆ ಯಾವ ಭಾವನೆಯು ಇರುವುದಿಲ್ಲ.  ನಿಮ್ಮ ಎಚ್ಚರಿಕೆ ಅನುಸಾರ ರಕ್ಕಸ್ರಾವದ ಎಚ್ಚರ ವಹಿಸಿ.

ರಕ್ತ ಸ್ರಾವ ತಡೆಗಟ್ಟುವ ಕ್ರಮ

ದೇಹ, ಮೈಕಟ್ಟು ಎಷ್ಟೇ ಸುಂದರವಾಗಿದ್ದರು ನಕ್ಕಾಗ ಹಲ್ಲು ಕಾಣದಿದ್ದರೆ ಸೌಂದರ್ಯಕ್ಕೆ ಅರ್ಥವಿರುವುದಿಲ್ಲ. ಮುಖಕ್ಕೆ ಅಂದವೆ ವಸಡುಗಳು, ನಿಮ್ಮ ಆರೋಗ್ಯ ಸುಭದ್ರತೆಗು ವಸಡುಗಳೆ ಮುಖ.್ಯ. ಅವುಗಳು ಗಟ್ಟಿಯಾಗಿದ್ದರೆ ಒಳ್ಳೆಯ ಆಹಾರ ಸೇವಿಸಿ ಆರೋಗ್ಯದಿಂದ ಇರಲು ಸಾಧ್ಯ. ಕಿಮೊಥೆರಪಿ ಮತ್ತು ವಿಕಿರಣದ ಮೂಲಕ ಕ್ಯಾನ್ಸರ್ ಕಣಗಳ ಕೊಲ್ಲಬಹುದು. ಆದರೆ ಚಿಕಿತ್ಸೆ ನಂತರ ಚೇತರಿಕೆ ಕಷ್ಟವಾಗಬಹುದು. ಆದ ಕಾರಣ ನಿರ್ಲಕ್ಷ ಮಾಡದೆ ಪರಿಸಿತ್ಥಿ ಕೈ ಮೀರುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಡಾ. ಸಚಿನ್ ಜಾಧವ್

ಮುಖ್ಯಸ್ಥರು- ರಕ್ತಶಾಸ್ತ್ರಜ್ಞಾನ ಮತ್ತು ಬಿಎಂಟಿ ವಿಭಾಗ

ಎಚ್‍ಸಿಜಿ ಕ್ಯಾನ್ಸರ್ ಆಸ್ಪತ್ರೆ –  ಬೆಂಗಳೂರು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!