ವಸಡಿನ ಆರೋಗ್ಯ – ಮಹಿಳೆಯರು ನಿರ್ಲಕ್ಷಿಸಬಾರದು

ವಸಡಿನ ಆರೋಗ್ಯ ನಿರ್ಲಕ್ಷಿಸಬಾರದು. ಅದರಲ್ಲೂ ಮಹಿಳೆಯರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಇದು ಕೇವಲ ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ. ಆರೋಗ್ಯಕಾರಿ ಜೀವನಕ್ಕೆ ಅತ್ಯಗತ್ಯ.

dental-healthವಿಶ್ವದ ಜನಸಂಖ್ಯೆಯಲ್ಲಿ ಶೇಕಡ 80-90ರಷ್ಟು ಜನರು ವಸಡಿನ ರೋಗದಿಂದ ಬಳಲುತ್ತಾರೆ. ವಸಡಿನ ರೋಗಗಳು ವನಿತೆಯರು ಮತ್ತು ಪುರುಷರಲ್ಲಿ ಸಮಾನವಾಗಿ ಕಾಣಿಸಿದರೂ, ಮಹಿಳೆಯರು ಕೆಲವು ವಿಶಿಷ್ಟ ರೋಗಗಳಿಂದ ನರಳುತ್ತಾರೆ. ಇದಕ್ಕೆ ಮಹಿಳೆಯರಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳಲ್ಲಿ ಆಗುವ ವ್ಯತ್ಯಾಸ ಕಾರಣವಾಗುತ್ತದೆ.

ಹಲ್ಲನ್ನು ಸ್ವಚ್ಚಗೊಳಿಸದಿದ್ದರೆ, ಅವುಗಳ ಮೇಲೆ ಶೇಖರವಾಗುವ ಸೂಕ್ಷ್ಮ ಜೀವಿ ಪೊರೆ (ಬ್ಯಾಕ್ಟೀರಿಯಲ್ ಪ್ಲಾಕ್) ಹಲ್ಲುಗಳಲ್ಲಿ ರೋಗವನ್ನು ಉತ್ಪತ್ತಿ ಮಾಡುತ್ತದೆ. ಸ್ತ್ರೀಯರಲ್ಲಿ ಜೀವನದ ಬೇರೆ ಬೇರೆ ಹಂತಗಳಲ್ಲಿ ಆಗುವ ರಸದೂತಗಳ ಅಸಮತೋಲನ (ಹಾರ್ಮೋನ್ ಇಂಬ್ಯಾಲೆನ್ಸ್) ದೋಷದಿಂದ ರೋಗವು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ, ಹಲ್ಲುಗಳನ್ನು ಸ್ವಚ್ಚಗೊಳಿಸುವುದು, ವಸಡು ಮತ್ತು ದಂತದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಾವಶಕ್ಯಕ.

ಗರ್ಭಿಣಿಯರಲ್ಲಿ ಕಂಡು ಬರುವ ವಸಡಿನ ಕಾಯಿಲೆಯಿಂದ ಹೃದಯ ಸಂಬಂಧಿ ರೋಗಗಳು ಹೆಚ್ಚಾಗಬಹುದು ಎಂಬ ಅಭಿಪ್ರಾಯವಿದೆ. ಸ್ತ್ರೀಯರ ಮುಟ್ಟು ನಿಂತಾಗ ಕಾಣಿಸುವ ಮೂಳೆ ಸವೆತ ಸಹ ವಸಡಿನ ಕಾಯಿಲೆ ಇರುವವರಲ್ಲಿ ಹೆಚ್ಚಾಗಿ ಕಂಡು ಬರುವ ಸಂಭವವಿದೆ. ಆದ್ದರಿಂದ ಸ್ತ್ರೀಯರ ಆರೋಗ್ಯದಲ್ಲಿ ವಸಡಿನ ಸ್ವಾಸ್ಥ್ಯ ಪ್ರಮುಖ ಪಾತ್ರ ವಹಿಸಿದ್ದು, ಪ್ರತಿಯೊಬ್ಬ ಸ್ತ್ರೀಯರಲ್ಲಿ ತಾವು ಸುಂದರವಾಗಿ ಕಾಣಬೇಕೆಂಬ ಬಯಕೆ ಇರುವುದ ಸಾಮಾನ್ಯ. ಈ ದೃಷ್ಟಿಯಲ್ಲಿ ಮುಖದ ಸೌಂದರ್ಯ ಹೆಚ್ಚಿರುವುದರ ಜೊತೆಗೆ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ.

ಸಾಮಾನ್ಯವಾಗಿ ಕಂಡುಬರುವ ವಸಡಿನ ರೋಗಗಳು

1. ಹದಿ ಹರೆಯದ ವಸಡಿನ ರೋಗ (ಪ್ಯುಬರ್ಟಿ ಜಿಂಜಿವಿಟಿಸ್) : ಹೆಣ್ಣು ಮಕ್ಕಳಲ್ಲಿ ಪೌಢಾವಸ್ಥೆಯ ಪ್ರಾರಂಭದಲಲಿ ವಸಡು ಊದಿಕೊಳ್ಳುತ್ತದೆ. ಹಲ್ಲಿನಲ್ಲಿ ರಕ್ತಸ್ರಾವ, ಹಲ್ಲುಗಳು ಸಡಿಲಗೊಂಡಂತೆ ಭಾಸವಾಗುತ್ತದೆ ಈ ಮೇಲ್ಕಂಡ ಲಕ್ಷಣಗಳು ಸಾಮಾನ್ಯ ಸ್ವರೂಪವಾಗಿದ್ದು, ತೀವ್ರವಾಗಿರುವುದಿಲ್ಲ. ಆದರೆ ಹಲ್ಲುಗಳನ್ನು ಸರಿಯಾಗಿ ಸ್ವಚ್ಚಗೊಳಿಸದಿದ್ದರೆ, ಆಥವಾ ಪ್ರೌಢಾವಸ್ಥೆ ಮೊದಲೇ ವಸಡಿನಲ್ಲಿ ರೋಗ ಇದ್ದರೆ ತೀವ್ರತೆ ಹೆಚ್ಚಾಗುತ್ತದೆ.

2. ಗರ್ಭಾವಸ್ಥೆಯ ವಸಡಿನ ರೋಗ (ಪ್ರೆಗ್ನೆನ್ಸಿ ಜಿಂಜಿವಿಟಿಸ್): ಶೇಕಡ 50ಕ್ಕೂ ಹೆಚ್ಚು ಗರ್ಭಿಣಿಯರಲ್ಲಿ ವಸಡಿನ ರೋಗ ಕಂಡುಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕೆ ಮೂಲ ಕಾರಣವೇನೆಂದರೆ, ಮೊದಲಿನಿಂದಲೇ ಹಲ್ಲಿನ ಆರೋಗ್ಯದ ಬಗ್ಗೆ ಗಮನ ನೀಡದಿರುವುದು, ಜೊತೆಗೆ ಗರ್ಭಿಣಿಯರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು ವಸಡಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರ ಲಕ್ಷಣವೆಂದರೆ, ರಕ್ತಸ್ರಾವವಾಗುವುದು, ವಸಡು ಊದಿಕೊಳ್ಳುವುದು, ಕೆಲವರಲ್ಲಿ ವಸಡಿನ ಮೇಲೆ ದುರ್ಮಾಂಸ ಕೂಡ ಬೆಳೆಯುತ್ತದೆ. ಹಲ್ಲುಗಳು ಅಲುಗಾಡುವುದು ಹೆಚ್ಚಾಗುತ್ತದೆ.

3. ಗರ್ಭನಿರೋಧಕ ಮಾತ್ರೆಗಳಿಂದ ವಸಡಿನ ರೋಗ (ಹಾರ್ಮೋನಲ್ ಕಾಂಟ್ರಾಸೆಪ್ಟಿವ್ ಜಿಂಜಿವಿಟಿಸ್): ಗರ್ಭ ನಿರೋಧಕ ಗುಳಿಗೆಯನ್ನು ಸೇವಿಸುವ ಸ್ತ್ರೀಯರು ವಸಡಿನ ಆರೋಗ್ಯದ ಬಗ್ಗೆ ಗಮನ ನೀಡದಿದ್ದರೆ ವಸಡಿನ ಕಾಯಿಲೆ ಹೆಚ್ಚಾಗುವ ಸಾಧ್ಯತೆ ಇದೆ. ಮೇಲ್ಕಂಡ ಕಾರಣಗಳ ಜೊತೆಗೆ ಸ್ತ್ರೀಯರಿಗೆ ಸಾಮಾನ್ಯವಾಗಿ ಮಾನಸಿಕ ಒತ್ತಡ ಹೆಚ್ಚಾಗಿರುವ ಕಾರಣದಿಂದಾಗಿ ಕೆಲವು ವಸಡಿನ ಹಾಗೂ ಹಲ್ಲಿನ ಕಾಯಿಲೆಗೆ ಕಾರಣವಾಗುತ್ತದೆ.

4. ಋತುಬಂಧ ವಸಡಿನ ರೋಗ (ಮೆನೋಪಾಸಲ್ ಜಿಂಜಿವಿಟಿಸ್) : ಋತುಬಂಧ ಆದಾಗ ಸ್ತ್ರೀ ಸಂಬಂಧ ಹಾರ್ಮೋನುಗಳ ಕೊರತೆ ಉಂಟಾಗುತ್ತದೆ. ವಸಡಿನ ಕಾಯಿಲೆಯು ಸಹ ಹೆಚ್ಚಾಗುವ ಸಾಧ್ಯತೆ ಇದೆ. ಈ ವಯಸ್ಸಿನಲ್ಲಿ ದೇಹದಲ್ಲಿರುವ ಎಲ್ಲ ಗ್ರಂಥಿಗಳ ಸ್ರವಿಸುವಿಕೆ ಕಾರ್ಯ ಕಡಿಮೆಯಾಗುತ್ತದೆ. ಇದರಿಂದಾಗಿ ಬಾಯಲ್ಲಿ, ಜೊಲ್ಲಿನ ಉತ್ಪನ್ನ ಕಡಿಮೆಯಾಗಿ ಜೊಲ್ಲಿನಲ್ಲಿರುವ ಸ್ವಾಭಾವಿಕ ಕ್ರಿಮಿ ನಿರೋಧಕ ಶಕ್ತಿ ಅಥವಾ ಕಾಯಿಲೆ ನಿಯಂತ್ರಿಸುವ ಶಕ್ತಿ ಕಡಿಮೆಯಾಗುತ್ತದೆ. ವಸಡು ಒಣಗಿ ಸುಲಭವಾಗಿ ಗಾಯ ಮತ್ತು ಹುಣ್ಣು ಹೆಚ್ಚಾಗುತ್ತದೆ. ವಸಡಿನಿಂದ ರಕ್ತಸ್ರಾವ ಮತ್ತು ವಸಡು ಊದಿಕೊಳ್ಳುವುದು ಸಾಮಾನ್ಯ.

ವಸಡಿನ ಸಮಸ್ಯೆಗೆ ಮುನ್ನೆಚ್ಚರಿಕೆ ಕ್ರಮಗಳು :

ಮೇಲೆ ಸೂಚಿಸಿರುವ ಹಲ್ಲಿನ ಸಮಸ್ಯೆ ಲಕ್ಷಣಗಳು ಎಲ್ಲರಲ್ಲೂ ಕಂಡುಬರುವುದಿಲ್ಲ. ಆದರೆ ಮೂಲತ: ಹಲ್ಲು ಸರಿಯಾಗಿ ಸ್ವಚ್ಚವಾಗಿಟ್ಟುಕೊಳ್ಳದಿರುವ ಸ್ತ್ರೀಯರಲ್ಲಿ ಕಂಡು ಬರುತ್ತದೆ.

1. ಹದಿ ಹರೆಯ : ವಿಶೇಷವಾಗಿ ಹಲ್ಲು ಸರಿಯಾಗಿ ಸ್ವಚ್ಚವಾಗಿಟ್ಟುಕೊಂಡಿದ್ದರೆ ಸಾಕು. ಹಾರ್ಮೋನು ಸ್ವಾಭಾವಿಕವಾಗಿ ಅದರ ಮಟ್ಟದಲ್ಲಿ ಸರಿಯಾದಾಗ, ವಸಡಿನ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ದಂತ ವೈದ್ಯರಲ್ಲಿ ಹಲ್ಲನ್ನು ಪರೀಕ್ಷಿಸಿ ಹಲ್ಲನ್ನು ಸ್ವಚ್ಚಗೊಳಿಸುವುದು ಒಳ್ಳೆಯದು.

2. ಗರ್ಭಿಣಿಯರು: ಗರ್ಭಿಣಿಯರು ಹಲ್ಲನ್ನು ಸರಿಯಾಗಿ ಸ್ವಚ್ಚಗೊಳಿಸಬೇಕು. ಉತ್ತಮವಾದ ಆಹಾರ ಸೇವಿಸುವುದು ಮತ್ತು ಬಾಯಿ ತೊಳೆದುಕೊಳ್ಳುವುದು ಅಗತ್ಯ. ಎಲ್ಲಕ್ಕಿಂತ ಹೆಚ್ಚಾಗಿ ಸ್ತ್ರೀ ಗರ್ಭಿಣಿಯಾದಾಗ ದಂತ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

3. ದೇಹದ ಆರೋಗ್ಯ ಹಾಗೂ ವಸಡಿನ ಕಾಯಿಲೆ : ವಸಡಿನ ಕಾಯಿಲೆಯಿಂದ ಸಾಮಾನ್ಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

4. ರೋಗ ಪೀಡಿತರು : ವಸಡಿನಲ್ಲಿ ಉತ್ಪನ್ನವಾಗುವ ಕೀಟಾಣುಗಳು ಹಾಗೂ ಕಿಣ್ವಗಳು ವಸಡಿನ ರಕ್ತನಾಳಗಳ ಮೂಲಕ ದೇಹದ ಬೇರೆ ಭಾಗಗಳಿಗೆ ತಲುಪಿ ಇತರ ರೋಗಗಳಿಗೆ ಎಡೆ ಮಾಡಿಕೊಡಬಹುದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ದಿಸೆಯಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಿವೆ.

ವಸಡಿನ ರೋಗದ ಬಗ್ಗೆ ಮಾಹಿತಿ :

gingivitis ವಸಡಿನ ಆರೋಗ್ಯ - ಮಹಿಳೆಯರು ನಿರ್ಲಕ್ಷಿಸಬಾರದು1. ವಸಡಿನ ರೋಗ, ವಸಡು ಮತ್ತು ಹಲ್ಲನ್ನು ಆಧರಿಸುವ ಇತರ ಅಂಗಗಳಿಗೆ ಹಾನಿ ಉಂಟು ಮಾಡುತ್ತದೆ.

2. ವಸಡಿನ ರೋಗಗಳು ವಿಶ್ವದಲ್ಲಿ ಬಹು ವಿಸ್ತಾರವಾಗಿ ಕಂಡುಬರುವ ಸಮಸ್ಯೆ.

3. ವಿಶ್ವದ ಜನಸಂಖ್ಯೆಯಲ್ಲಿ ಶೇಕಡ 80 ರಿಂದ 90ರಷ್ಟು ವಯಸ್ಕರರು ಹಾಗೂ ಶೇಕಡ 40 ರಿಂದ 50ರಷ್ಟು ಮಕ್ಕಳು ವಸಡಿನ ರೋಗದಿಂದ ಬಳಲುತ್ತಾರೆ.

4. ಚಿಕ್ಕ ವಯಸ್ಸಿನಲ್ಲೆ ಹಲ್ಲು ಬಿದ್ದು ಹೋಗಲು ವಸಡಿನ ರೋಗ ಮುಖ್ಯ ಕಾರಣ.

5. ಹಲ್ಲಿನ ಮೇಲೆ ಶೇಖರವಾಗುವ ಅಣು ಜೀವಿ ಪೊರೆ ವಸಡಿನ ರೋಗಗಳಿಗೆ ಕಾರಣ.

6. ಗರ್ಭಾವಸ್ಥೆ, ಋತುಬಂಧ, ಹದಿ ಹರೆಯದ ದಿನಗಳು ಹಾಗೂ ಗರ್ಭನಿರೋಧಕ ಗುಳಿಗೆಗಳು ವಸಡಿನ ರೋಗ ಉಲ್ಬಣಗೊಳ್ಳಲು ಕಾರಣವಾಗಬಹುದು.

7. ವಸಡಿನ ರೋಗಗಳು ಮಧುಮೇಹ ರೋಗವನ್ನು ಉಲ್ಬಣಗೊಳಿಸಬಹುದು ಹಾಗೂ ಹೃದ್ರೋಗ, ಪಾಶ್ರ್ವವಾಯು ಮತ್ತು ನಿಗದಿತ ಕಾಲಕ್ಕೆ ಮೊದಲೇ ಹೆರಿಗೆಯಾಗುವುದು-ಇವುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

8. ಹಲ್ಲು ಸ್ವಚ್ಚಗೊಳಿಸುವಾಗ ಅಥವಾ ಗಟ್ಟಿ ಪದಾರ್ಥವನ್ನು ಅಗೆದಾಗ ರಕ್ತಸ್ರಾವ ಆಗುವುದು ವಸಡಿನ ರೋಗದ ಮುನ್ಸೂಚನೆ.

9. ವಸಡಿನ ರೋಗವನ್ನು ಪ್ರತಿನಿತ್ಯ ಹಲ್ಲು ಸ್ವಚ್ಚಗೊಳಿಸುವುದರ ಮೂಲಕ, ಪೌಷ್ಠಿಕ ಆಹಾರ ಸೇವನೆಯಿಂದ ಮತ್ತು ಅಗಾಗ ದಂತ ವೈದ್ಯರ ಸಲಹೆ ಪಡೆಯುವುದರಿಂದ ಸುಲಭವಾಗಿ ತಡೆಗಟ್ಟಬಹುದು.

10. ಆರೋಗ್ಯಕರ ಜೀವನಶೈಲಿ ವಸಡಿನ ಆರೋಗ್ಯಕ್ಕೆ ಅತ್ಯವಶ್ಯಕ. ದಿನಕ್ಕೆ ಎರಡು ಬಾರಿ ಹಲ್ಲುಗಳನ್ನು ಸ್ವಚ್ಚಗೊಳಿಸಿ. ವರ್ಷಕ್ಕೆ ಎರಡು ಬಾರಿ ದಂತ ವೈದ್ಯರನ್ನು ಸಂಪರ್ಕಿಸಿ. ಆರೋಗ್ಯಕರ ಜೀವನದ ಆನಂದವನ್ನು ಸವಿಯಿರಿ.

Dr-Chalapathi ಡಾ. ಚಲಪತಿ ಪ್ರೊಫೆಸರ್ ಅಫ್ ಜನರಲ್ ಸರ್ಜರಿ ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066 080-28413384/82/83.   www.vims.ac.in

ಡಾ. ಚಲಪತಿ
ಪ್ರೊಫೆಸರ್ ಅಫ್ ಜನರಲ್ ಸರ್ಜರಿ
ವೈದೇಹಿ ಇನ್ಸ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್, ವೈಟ್‍ಫೀಲ್ಡ್, ಬೆಂಗಳೂರು – 560066
080-28413384/82/83.   www.vims.ac.in

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!