ವೆರಿಕೋಸ್ ವೇನ್ಸ್ ಮುಕ್ತ ಸಮಾಜದ ಕನಸುಗಾರ ಡಾ. M. V. ಉರಾಳ್

ವೆರಿಕೋಸ್  ವೇನ್ಸ್ ತಡೆಗಟ್ಟುವಲ್ಲಿ ಹಾಗೂ ಮರುಕಳಿಸದಂತೆ ತಡೆಯಲು ಯೋಗ, ಪ್ರಾಣಾಯಾಮ  ಮತ್ತು ಆಯುರ್ವೇದ ಮಹತ್ವದ ಪಾತ್ರವಹಿಸುತ್ತದೆ.  ಡಾ. ಉರಾಳ್ಸ್ ವೆರಿಕೋಸ್ ವೇನ್ಸ್ ಆಯುರ್ವೇದ ಕೇರ್’ ಸಂಸ್ಥೆ ಈ ರೋಗದ ಬಗ್ಗೆ ಸಾಕಷ್ಟು ಪ್ರಯೋಗ ನಡೆಸಿ ಅಮೃತ ವೆರಿಕೋಸ್ ವೇನ್ಸ್ ಸಿರಪ್ ನ್ನು ಅವಿಶ್ಕಾರಮಾಡಿ ಸಾವಿರಾರು ರೋಗಿಗಳ ನೋವನ್ನು ಕಡಿಮೆ ಮಾಡಿದೆ. 

ಶೃಂಗೇರಿಯ ಡಾ. ಉರಾಳ್ಸ್ ವೆರಿಕೋಸ್ ವೇನ್ಸ್ ಆಯುರ್ವೇದ ಕೇರ್’ ಸಂಸ್ಥೆ ಈ ರೋಗದ ಬಗ್ಗೆ ಸಾಕಷ್ಟು ಪ್ರಯೋಗ ನಡೆಸಿ ಅಮೃತ ವೆರಿಕೋಸ್ ವೇನ್ಸ್ ಸಿರಪ್ ನ್ನು ಅವಿಶ್ಕಾರಮಾಡಿ ರಾಜ್ಯಾದಂತ ಸಾವಿರಾರು ರೋಗಿಗಳ ನೋವನ್ನು ಕಡಿಮೆ ಮಾಡಿ ಅವರ ಜೀವನಮಟ್ಟವನ್ನು ಹೆಚ್ಚಿಸಿ ಜೀವನವನ್ನು ಪುನಃ ಆನಂದಿಸುವಂತೆ ಮಾಡಿರುವರು. ಇಲ್ಲಿಯವರೆಗೆ ಸಿವಿಐಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಔಷದಿ ದೊರೆಯುತ್ತಿದ್ದು, ಇವರ ವೆರಿಕೋಸ್ ವೇನ್ಸ್ ಚಿಕಿತ್ಸೆಯಿಂದಾಗಿ ಎಲ್ಲಾ ಲಕ್ಷಣಗಳು ಶೀಘ್ರ ವಾಗಿ ಕಡಿಮೆ/ಗುಣವಾಗುತ್ತಿರುವುದು ಚಿಕಿತ್ಸೆಯ ವಿಶೇಷತೆ ಆಗಿರುವುದು.

Dr Ural’s Varicose Veins Ayurveda Care

‘ಆರೋಗ್ಯವೇ ಭಾಗ್ಯ’ ಎಂಬುದು ತಿಳಿದಿದ್ದರೂ, ಇಂದಿನ ವೇಗದ ಬದುಕಿನ ಶೈಲಿ ಮತ್ತು ದಿನಚರಿಯ ಕ್ರಮಗಳು ನಮ್ಮ ಆರೋಗ್ಯವನ್ನು ಸೂಕ್ಷ್ಮವಾಗಿಸಿವೆ. ಇಂದಿನ ದಿನ ಮನೆಯ ಕೆಲಸದಿಂದ ಹಿಡಿದು ಉದ್ಯೋಗದವರೆಗೂ ನಿಂತು ಮಾಡುವ ಕೆಲಸಗಳು ಅಥವಾ ಸುಧೀರ್ಘ ಕುಳಿತುಕೊಂಡು ಮಾಡುವ ಕೆಲಸಳೇ ಹೆಚ್ಚು. ಹೀಗೆ ಸತತ ನಿಲ್ಲುವಿಕೆಯು ಕೆಲವೊಮ್ಮೆ ಕಾಲಿನ ರಕ್ತನಾಳಗಳ ಉಬ್ಬುವಿಕೆಗೆ ಕಾರಣವಾಗುತ್ತದೆ. ಇದಕ್ಕೆ ವೈದ್ಯಕೀಯ ಪರಿಭಾಷೆಯಲ್ಲಿ ವೆರಿಕೋಸ್ ವೇನ್ಸ್” ಎನ್ನುತ್ತಾರೆ. ಇದರಿಂದುಂಟಾಗುವ ನೋವು ಕ್ರಮೇಣ ಹೆಚ್ಚಾಗಿ, ಚರ್ಮ ಕಪ್ಪಾಗುವಿಕೆ ಮತ್ತು ತುರಿಕೆ ಗಾಯವಾಗಿ, ಶಸ್ತ್ರಚಿಕಿತ್ಸೆಯ ಇಂದ ಬೆರಳು ಅಥವಾ ಕಾಲು ಕತ್ತರಿಸುವ ಹಂತವನ್ನು ಮುಟ್ಟಬಹುದು.

ವೆರಿಕೋಸ್ ವೇನ್ಸ್ ಗೆ ಕಾರಣ ಯಾವವು?

 ವೆರಿಕೋಸ್ ವೇಯ್ನ್ ಎನ್ನುವುದು chronic venous insufficiency ಯ ಒಂದು ಲಕ್ಷಣ. ಕಾಲಿನ ರಕ್ತನಾಳಗಳಲ್ಲಿನ ಕವಾಟಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಉಂಟಾಗುವ ಒಂದು ಸ್ಥಿತಿಯಾಗಿದ್ದು, ಕಾಲಿನಿಂದ ರಕ್ತವು ಹೃದಯಕ್ಕೆ ವಾಪಾಸ್ಸು ಮರಳಲು ಕಷ್ಟವಾಗುತ್ತದೆ. CVI ರಕ್ತವನ್ನು “ಪೂಲ್” ಮಾಡಲು ಅಥವಾ ಈ ರಕ್ತನಾಳಗಳಲ್ಲೇ ಉಳಿಯಲು ಕಾರಣವಾಗುತ್ತದೆ. ರಕ್ತನಾಳಗಳು ದೇಹದ ಎಲ್ಲಾ ಅಂಗಗಳಿಂದ ಹೃದಯಕ್ಕೆ ಅಶುದ್ಧ ರಕ್ತವನ್ನು ಹಿಂತಿರುಗಿಸುತ್ತವೆ. ಹೃದಯವನ್ನು ತಲುಪಲು, ರಕ್ತವು ಕಾಲುಗಳಲ್ಲಿನ ರಕ್ತನಾಳಗಳಿಂದ ಮೇಲಕ್ಕೆ ಹರಿಯಬೇಕಾಗುತ್ತದೆ. ಕಾಲಿನ ಸ್ನಾಯುಗಳು ಮತ್ತು ಪಾದಗಳಲ್ಲಿನ ಸ್ನಾಯುಗಳು ರಕ್ತನಾಳಗಳನ್ನು ಹಿಂಡಲು ಮತ್ತು ರಕ್ತವನ್ನು ಮೇಲಕ್ಕೆ ತಳ್ಳಲು ಪ್ರತಿ ಹಂತದಲ್ಲೂ ಸಂಕುಚಿತಗೊಳ್ಳಬೇಕು. ರಕ್ತವು ಮೇಲಕ್ಕೆ ಹರಿಯದಂತೆ ನೋಡಿಕೊಳ್ಳಲು ಮತ್ತು ಹಿಂದಕ್ಕೆ ಇಳಿಯದಂತೆ, ರಕ್ತನಾಳಗಳು ಏಕಮುಖ ಕವಾಟಗಳನ್ನು ಹೊಂದಿರುತ್ತವೆ. ಈ ಕವಾಟಗಳು ಹಾನಿಗೊಳಗಾದಾಗ ರಕ್ತವು ಹಿಂದಕ್ಕೆ ಸೋರಿಕೆಯಾಗುತ್ತದೆ. ಇದೇ ಮುಂದೆ ವೆರಿಕೋಸ್ ವೇನ್ಸ್ ಆಗಿ ಮಾರ್ಪಡಾಗುತ್ತದೆ.

ತುಂಬಾ ಸಮಯ ಕುಳಿತುಕೊಳ್ಳುವ ಅಥವಾ ನಿಂತಿರುವ ಕಡಿಮೆ ಚಲನಶೀಲತೆಯ ಪರಿಣಾಮವಾಗಿ ಕವಾಟದ ಹಾನಿ ಸಂಭವಿಸಬಹುದು. ಸಿವಿಐ ಸಾಮಾನ್ಯವಾಗಿ ಕಾಲುಗಳ ಆಳವಾದ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಪರಿಣಾಮವಾಗಿ ಕಂಡುಬರುತ್ತದೆ, ಇದನ್ನು ಡೀಪ್ ಸಿರೆ ಥ್ರಂಬೋಸಿಸ್ (ಡಿವಿಟಿ) ಎಂದು ಕರೆಯಲಾಗುತ್ತದೆ. ಗುರುತ್ವಾಕರ್ಷಣೆಯ ವಿರುದ್ಧ ರಕ್ತವನ್ನು ಮುಂದೂಡಲು ರಕ್ತನಾಳಗಳಲ್ಲಿನ ಕವಾಟಗಳ ವಿಫಲತೆಯು ರಕ್ತನಾಳಗಳಿಂದ ರಕ್ತದ ನಿಧಾನಗತಿಯ ಚಲನೆಗೆ ಕಾರಣವಾಗುತ್ತದೆ, ಇದರ ಪರಿಣಾಮವಾಗಿ ಕಾಲುಗಳು ಊದಿ ಕೊಳ್ಳುತ್ತವೆ.

ಡಿವಿಟಿಯ ಪರಿಣಾಮವಾಗಿ ಬೆಳವಣಿಗೆಯಾಗುವ ದೀರ್ಘಕಾಲದ ಸಿರೆಯ ಕೊರತೆಯನ್ನು ಪೋಸ್ಟ್-ಥ್ರಂಬೋಟಿಕ್ ಸಿಂಡ್ರೋಮ್ ಎಂದೂ ಕರೆಯಲಾಗುತ್ತದೆ. ಅಂದಾಜು 40 ಪ್ರತಿಶತ ಜನರು ಸಿವಿಐ ಹೊಂದಿದ್ದಾರೆ. ಇದು 50 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ. ಸಿವಿಐನ ಗಂಭೀರತೆ, ಚಿಕಿತ್ಸೆಯ ಸಂಕೀರ್ಣತೆಗಳ ಜೊತೆಗೆ, ರೋಗವು ದಿನಕಳದಂತೆ ಹೆಚ್ಚಾಗುತ್ತದೆ. ಅದಕ್ಕಾಗಿಯೇ ನೀವು ಸಿವಿಐನ ಯಾವುದೇ ಲಕ್ಷಣಗಳನ್ನು ಹೊಂದಿದ್ದರೆ ನಿಮ್ಮ ವೈದ್ಯರನ್ನು ಭೇಟಿ ಮಾಡುವುದು ಮತ್ತು ಮೊದಲೇ ಅದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ, ಗಂಭೀರ ತೊಡಕುಗಳನ್ನು ತಡೆಗಟ್ಟುವ ಸಾಧ್ಯತೆ ಇರುವುದು.

ಇದರ ಲಕ್ಷಣಗಳು:

ಕಾಲಿನಲ್ಲಿ ಊತ, ನೋವು, ದಣಿವು ಹೊಸ ಉಬ್ಬಿರುವ ರಕ್ತನಾಳಗಳು, ಕಾಲುಗಳ ಮೇಲೆ ಕಪ್ಪಾಗಿ ಕಾಣುವ ಚರ್ಮ ಹಾಗೂ ಅದರಲ್ಲಿ ತುರಿಕೆಯಾಗುವುದು. ಕಾಲಿನಲ್ಲಿ ಹುಣ್ಣು ಅಥವಾ ಗಾಯ ವಾಗುವಿಕೆಗೆ (ಈ ಹುಣ್ಣುಗಳು ಗುಣವಾಗುವುದು ಕಷ್ಟ ಮತ್ತು ಸೋಂಕಿಗೆ ಒಳಗಾಗಬಹುದು.)

ಸೋಂಕನ್ನು ನಿಯಂತ್ರಿಸದಿದ್ದಾಗ, ಇದು ಸುತ್ತಮುತ್ತಲಿನ ಅಂಗಾಂಶಗಳಿಗೆ ಹರಡುತ್ತದೆ, ಇದನ್ನು ಸೆಲ್ಯುಲೈಟಿಸ್ ಎಂದು ಕರೆಯಲಾಗುತ್ತದೆ. ಸರಿಯಾಗಿ ಚಿಕಿತ್ಸೆ ದೊರಕದಿದ್ದರೆ ಕಾಲಿನ ಅಂಗ ಛೇಧಕ್ಕೂ ಕಾರಣವಾಗಬಹುದು. ದುರದೃಷ್ಟಕರವಾಗಿ ನಮ್ಮ ವಿಜ್ಞಾನವು ಇಷ್ಟು ಮುಂದುವರಿದಿದ್ದರೂ ಇದಕ್ಕೆ ಸೂಕ್ತ ಔಷದಿ ದೊರೆಯುತ್ತಿಲ್ಲ. ಕಾಲನ್ನು 2 ನೇಯ ಹೃದಯವೆಂದು ಹೇಳುತ್ತಾರೆ. ಕಾಲಿನಿಂದ ಅಶುದ್ಧ ರಕ್ತವು ಹೃದಯಕ್ಕೆ ವಾಪಸ್ಸು ಹೋಗಲು ಕಾಲು ಸರಿಯಾಗಿ ಕೆಲಸ ಮಾಡಬೇಕು ಹಾಗೂ ಹೃದಯಕ್ಕೆ ಕೊಟ್ಟ ಮಹತ್ವವನ್ನು ಕಾಲಿಗೂ ಕೊಡಬೇಕಾಗುತ್ತೆ. 50% ಹೃದಯದ ತೊಂದರೆಗಳಿಗೆ ಕಾಲಿನ ಅನಾರೋಗ್ಯವೇ ಕಾರಣವಾಗಿದೆ. ಆದುದರಿಂದ ತಜ್ಞ ವೈದ್ಯರು ಪ್ರತಿನಿತ್ಯ 2 ಗಂಟೆಯ ವಾಕಿಂಗನ್ನು ಹೇಳಿರುತ್ತಾರೆ.

 ವೆರಿಕೋಸ್ ವೇನ್ಸ್ ಕಾರಣಗಳು :

1. ನೈಸರ್ಗಿಕ ಕಾರಣಗಳು :
• ಸ್ವಾಭಾವಿಕವಾಗಿ ವೇನ್ಸ್ ಗಳಲ್ಲಿ ಕಡಿಮೆ ಇರುವ ರಕ್ತದೊತ್ತಡ
• ರಕ್ತ ಪರಿಚಲನೆಯಲ್ಲಾಗುವ ಏರಿಳಿತ
ಹೆಚ್ಚು ರಕ್ತವನ್ನು ಹಿಡಿದಿಟ್ಟುಕೊಳ್ಳಲು ಹಿಗ್ಗುವ ರಕ್ತನಾಳಗಳು ಸ್ವಭಾವಿಕ ಸ್ವಭಾವ
ಮುಪ್ಪಿನ ಕಾರಣ ವೇನ್ಸ್ ಹಿಗ್ಗುವಿಕೆ ಕುಗ್ಗುವುದು
ವೈನ್ಸ್ ವಾಲ್ವ್ ಗಳಿ ಗೆ ಗುರುತ್ವಾಕರ್ಷಣೆಯ ಒತ್ತಡ

2. ಜೀವನಶೈಲಿ ಮತ್ತು ಆನಾರೋಗ್ಯದ ಕಾರಣಗಳು :
• ಹೆಚ್ಚಾದ ದೇಹತೂಕ
• ಒಂದು ಅಥವಾ ಹೆಚ್ಚು ಪ್ರಸವ ಆದವರು
• ಮಲಬದ್ಧತೆ
• ಅನಿಯಮಿತ ವ್ಯಾಯಾಮ
• ಹೆಚ್ಚು ಸಮಯ ನಿಂತೇ ಕೆಲಸ ಮಾಡುವುದು
• ಹೆಚ್ಚು ಸಮಯ ಕುಳಿತೇ ಕೆಲಸ ಮಾಡುವುದು.
• ಧೂಮಪಾನ ಮತ್ತು ಮಧ್ಯಪಾನ
• ಕೌಟುಂಬಿಕ ಹಿನ್ನೆಲೆ.

ಲಕ್ಷಣಗಳು:

• ಕಾಲುಗಳಲ್ಲಿ ಅಥವ ಮೀನಖಂಡ ಗಳಲ್ಲಿ ಸೆಳೆತ ಬರುವುದು
• ಕಾಲುಗಳ ಜೋಮು ಹಿಡಿಯುವಿಕೆ
• ಕಾಲುಗಳು ಅಥವ ಪಾದ ಊದಿ ಕೊಳ್ಳುವುದು
• ಕಾಲಿನ ವೇನ್ಸ್ ಉಬ್ಬಿರಿವುದು, ಕೆಂಪು ನೀಲಿ ಬಣ್ಣ ಅಥವಾ ಸ್ವಲ್ಪ ಹಸಿರು ಬಣ್ಣಕ್ಕೆ ತಿರುಗುವು
• ಕಾಲಿನ ಚರ್ಮ ಕಪ್ಪಾಗುವಿಕೆ ಮತ್ತು ತುರಿಕೆ
• ಕಾಲುಗಳಲ್ಲಿ ಗುಣವಾಗದ ಗಾಯ ಮತ್ತು ನೋವು

ವೆರಿಕೋಸ್ ವೇನ್ಸ್ ತಡೆಗಟ್ಟುವಲ್ಲಿ ಪರಿಹಾರೋಪಾಯಗಳು :

• ಕುಳಿತಾಗ, ಮಲಗಿದಾಗ ಕಾಲನ್ನು ಸ್ವಲ್ಪ ಎತ್ತರದಲ್ಲಿಡುವುದು.
• ದಿನಕೊಮ್ಮ 30 ನಿಮಿಷ ಎಣ್ಣೆ ಹಚ್ಚಿ ಮೇಲ್ಮುಖವಾಗಿ ಮಸಾಜ್ ಮಾಡುವುದು.
• ಆಗಾಗ ಕಾಲುಗಳಿಗೆ ವಿಶ್ರಾಂತಿ ನೀಡುವುದು, ಕುಳಿತುಕೊಳ್ಳುವುದು, ನಿಂತಿಕೊಳ್ಳುವುದು ಮತ್ತು ನೆಡೆಯುವುದು
• ಪ್ರಯಾಣದ ಸಂದರ್ಭದಲ್ಲಿ ಬಿಗಿಯಾದ ಕಾಲುಚೀಲ ಧರಿಸುವುದು.
• ನಿತ್ಯದ ದಿನಚರಿಯಲ್ಲಿ ವ್ಯಾಯಾಮ ಮತ್ತು ಪ್ರಾಣಾಯಾಮಕ್ಕೆ ಆದ್ಯತೆ ನೀಡುವುದು
• ದೇಹತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು.

 ಚಿಕಿತ್ಸೆ:

ಈಗೀಗ ವಯೋಮಾನದ ಭೇದವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ‘ವೆರಿಕೋಸ್ ವೇನ್ಸ್’ ನಮ್ಮ ವೃತ್ತಿ ಜೀವನದಿಂದ, ಅಹಾರ ಮತ್ತು ಆಹಾರ ಕ್ರಮಗಳಲ್ಲಿನ ವ್ಯತ್ಯಾಸಗಳಿಂದ ಉಂಟಾಗಿರುವ ಪಿಡುಗಾಗಿಕಾಡಲಾರಂಭಿಸಿದೆ. ಈ ಸಮಸ್ಯೆ ಯನ್ನು ತಡೆಗಟ್ಟುವಲ್ಲಿ, ಸರ್ಜರಿರಹಿತ ಚಿಕಿತ್ಸೆ ಹಾಗೂ ಮರುಕಳಿಸದಂತೆ ತಡೆಯಲು ಉರಾಳ್ ವೆರಿಕೋಸ್ ವೇನ್ಸ್ ಆಯುರ್ವೇದಿಕ್ ಕೇರ್’ ನ 15 ವರ್ಷಗಳ ಸತತ ಆವಿಷ್ಕಾರ ಫಲದಾಯಕ ವಾಗಿದೆ. ಈ ನಿಟ್ಟಿನಲ್ಲಿ ಯೋಗ, ಪ್ರಾಣಾಯಾಮ ಮತ್ತು ಆಯುರ್ವೇದ ಮಹತ್ವದ ಪಾತ್ರ ವನ್ನುವಹಿಸಿದೆ. ಈ ವಿಧಾನದ ಸದುಪಯೂಗವನ್ನು ಸಾವಿರಾರು ಜನರು ಪಡೆದು ಭಾರತ ಮತ್ತು ವಿದೆಶಗಳಲ್ಲಿ ಜನಪ್ರಿಯಗೊಂಡಿದೆ.

 ಯೊಗಾಸನಗಳಾದ ತಾಡಾಸನ, ಪ್ರಸಾರಿತ ಪಾದೋತ್ತಾನಾಸನ, ತ್ರಿಕೋನಾಸನ, ಸರ್ವಾಂಗಾಸನ, ಪಶ್ಚಿಮೋತ್ತಾಸನ, ಹಲಾಸನ, ಮತ್ಸ್ಯಾಸನ, ಭುಜಂಗಾಸನ, ಶಲಭಾಸನ, ಧನುರಾಸನ  ಮತ್ತು ಅನುಲೂಮ ವಿಲೂಮ ಪ್ರಣಾಯಾಮ, ಕಪಾಲಭಾತಿಗಳು ಮೀನಖಂಡಗಳ ಮತ್ತು ಉಸಿರಾಟ  ಪ್ರಕ್ರಿಯೆಗಳ ಕಾರ್ಯದಲ್ಲಿ ಉಂಟಾಗಿದ್ದ ಪೂರ್ಣತೆ ಅಥವಾ ಅಶಕ್ತತೆಯನ್ನು 40% ಸರಿಪಡಿಸುವಲ್ಲಿ  ಸಹಕಾರಿಯಾಗಿದೆ ಹಾಗು ಈ ಕಾರ್ಯವು ಯಾವುದೇ ಔಷಧಿ ಯಿಂದ ಸಾಧ್ಯವಿಲ್ಲ. ಮಿಕ್ಕ 60%   ಆನಾರೋಗ್ಯ ದಕಾರ್ಯ ಸರಿಪಡಿಸುವಲ್ಲಿ ಸಾಕಷ್ಟು ಸಂಶೋಧನೆ ಮಾಡಿ ಆವಿಷ್ಕರಿಸಿದ ಡಾ.ಉರಾಳರ ಔಷಧಿ ಯಶಸ್ವಿಯಾಗಿದೆ.

ವೆರಿಕೋಸ್ ವೇನ್ಸ್ ಮುಕ್ತ ಸಮಾಜದ ಕನಸುಗಾರಡಾ M. V. ಉರಾಳ್;

ಡಾ. ಎಂ. ವಿ.  ಉರಾಳ್ ರವರು ತಿಂಗಳುಗಟ್ಟಲೆ ವೆರಿಕೋಸ್ ವೇನ್ಸ್ ನಿಂದಾಗಿ ನರಳುತ್ತಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಸಂಬಂಧಿಯ ನೋವನ್ನು ಕಣ್ಣಾರೆ ಕಂಡು, ಹಾಗೂ ಅದೇ ಆಸ್ಪತ್ರೆ ಯಲ್ಲಿ ನೋವಿನಿಂದ ತಿಂಗಳು ಗಟ್ಟಲೆ ನರಳುತ್ತಿದ್ದವರನ್ನು ನೋಡಿ ಸತತ ಪರಿಶ್ರಮದಿಂದ ಇದಕ್ಕೊಂದು ಉತ್ತಮ ಪರಿಣಾಮಕಾರಿಯಾದಂತಹ ಆಯುರ್ವೇದ ಔಷದಿ ಯನ್ನು ಆವಿಷ್ಕಾರ ಮಾಡಿರುವರು.

 ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯ ಮಣೂರು, ರಾಧಾಕೃಷ್ಣ ಉರಾಳ್ ಹಾಗೂ ಮಹಾಲಕ್ಷ್ಮಿ ಪುತ್ರ ರಾದ ಡಾ.ಎಂ.ವಿ.  ಉರಾಳ್ ಅವರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಎ.ಎಲ್.ಎನ್ ರಾವ್ ಸ್ಮಾರಕ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ಬಿ.ಎ.ಎಂ.ಎಸ್ ಪದವಿ ಪಡೆದರು.  ಕಲಿಕೆಯಲ್ಲಿ ಯಾವಾಗಲೂ ಉತ್ಸುಕರಾಗಿರುವ ಇವರು ಅವಿಸ್ಕಾರಿ ಮನೋಭಾವದವರು. ಇಂದಿಗೂ ಅವರ ಉತ್ಸಾಹವು ದೀರ್ಘಕಾಲದ ಕಾಯಿಲೆಗಳನ್ನು ನಿರ್ವಹಿಸುವಲ್ಲಿ ಕೈಗೆಟುಕುವ ವೆಚ್ಚದಲ್ಲಿ ಸರಳ ಸೂತ್ರೀಕರಣಗಳನ್ನು ಬಳಸಿಕೊಂಡು ಅತ್ಯುತ್ತಮವಾದ ಪರಿಹಾರಗಳನ್ನು ನೀಡುತ್ತಿದ್ದಾರೆ.

ವೆರಿಕೋಸ್ ವೇನ್ಸ್ ಮುಕ್ತ ಸಮಾಜಕ್ಕಾಗಿ ಅವರ ಸಂಸ್ಥೆಯ ಮೂಲಕ PowerPoint ಪ್ರಸ್ತುತಿಗಳು, ಕಿರು ವೀಡಿಯೊಗಳು ಮತ್ತು ಇತರ ಶೈಕ್ಷಣಿಕ ಸಾಮಗ್ರಿಗಳ ಮೂಲಕ, ಅವರು ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಶಿಕ್ಷಣ ಸಂಸ್ಥೆಗಳು, MNC, ಪೊಲೀಸ್ ಇಲಾಖೆ ಗಳ ಮುಂಖಂತರ ಮಾಡುತ್ತಿದ್ದಾರೆ. ಬೇಡಿಕೆ ಹೆಚ್ಚಾದಂತೆ, ಹೆಚ್ಚು ಜೋಡಿ ಸಮರ್ಥ ಕೈಗಳ ಅಗತ್ಯವಿದೆ.  ಈ ಅಗತ್ಯವನ್ನು ಪೂರೈಸಲು ಡಾ. ಎಂ. ವಿ.  ಉರಾಳ್ ವೈದ್ಯರಿಗೆ ತರಬೇತಿ ಕೌಶಲ್ಯಗಳನ್ನುನೀಡುತ್ತಿದ್ದಾರೆ   ಇದು ವೆರಿಕೋಸ್ ವೇನ್ಸ್ ಮುಕ್ತ ಸಮಾಜದ  ಅಭಿಯಾನದ ವ್ಯಾಪ್ತಿಯನ್ನು ರಾಜ್ಯದ ಗಡಿಯಾದ್ಯಂತ ಮತ್ತು ಆಚೆಗೂ ವಿಸ್ತರಿಸಿದೆ.  ಡಾ.ಎಂ.ವಿ.  ಉರಾಳ್ ರವರು ಪುಣ್ಯ ಭೂಮಿ ಜ್ಞಾನ, ಕಲಿಕೆ ಯ ಶಾರದೆಯ ವಾಸಸ್ಥಾನ ಶೃಂಗೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕರ್ನಾಟಕದಲ್ಲಿ 13 ಶಾಖೆಗಳನ್ನು (ಮೈಸೂರು, ಬೆಂಗಳೂರು, ಮಂಗಳೂರು, ಬಳ್ಳಾರಿ, ಶಿವಮೊಗ್ಗ, ಸಾಗರ, ನಗರ, ರಾಯಚೂರು, ಹಾಸನ, ಕುಶಾಲನಗರ, ಕೋಲಾರ, ಗೊಕಕ್ ಮತ್ತು ಬೀದರ್), ತೆಲಂಗಾಣದಲ್ಲಿ 2 (ಹೈದರಾಬಾದ್ ಮತ್ತು ನಾರಾಯಣಪೇಟೆ) ಮತ್ತು ಮಹಾರಾಷ್ಟ್ರದಲ್ಲಿ 1 (ಪುಣೆ)ಹಾಗೂ ಕೇರಳದ ಏರ್ನಕುಲಂ ನಲ್ಲೂ ಸ್ಥಾಪಿಸಲು ಸಮರ್ಥವಾಗಿದೆ.

ಹೆಚ್ಚಿನ ವಿವರಗಳಿಗಾಗಿ ಹಾಗೂ ವೈದ್ಯರ ಸಂದರ್ಶನಕ್ಕಾಗಿ

ಡಾ ಎಂ. ವಿ. ಉರಾಳ್, ಶೃಂಗೇರಿ.
8105371042 ಗೆ ಕರೆ ಮಾಡಿ.
www.uralsayurveda.in
Facebook Page : https://www.facebook.com/DrUrals/

Dr.-URALs-Healing-Touch-for-Varicose-Veins-

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!