ಟೊಮೆಟೊ ತ್ವಚೆಯ ಆರೈಕೆಗೆ ಪರಿಣಾಮಕಾರಿ

ಟೊಮೆಟೊ ತ್ವಚೆಯ ಆರೈಕೆಗೆ ಪರಿಣಾಮಕಾರಿ ಮನೆಮದ್ದು.ಟೊಮೆಟೊದಲ್ಲಿರುವ ಆಂಟಿಆಕ್ಸಿಡೆಂಟ್‍ಗಳು ತ್ವಚೆಯನ್ನು ರಕ್ಷಿಸಿ ತಾರುಣ್ಯಭರಿತವಾಗಿಸುತ್ತದೆ. ಜೊತೆಗೆ ದೀರ್ಘ ಅವಧಿಯವರೆಗೆ ಕಾಂತಿಯುವ ಚರ್ಮಹೊಂದುವುದು ಇದರಿಂದ ಸಾಧ್ಯವಾಗುತ್ತದೆ.

skin protection from tomato ಟೊಮೆಟೊ ತ್ವಚೆಯ ಆರೈಕೆಗೆ ಪರಿಣಾಮಕಾರಿ

ಬೇಸಿಗೆಯಲ್ಲಿ ಚರ್ಮ ಒಣಗುವುದು ಸಾಮಾನ್ಯ, ಇದಕ್ಕಾಗಿ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ತ್ವಚೆಗೆ ಹಚ್ಚಿದರೆ ಚರ್ಮವು ಎಣ್ಣೆಮಯವಾಗುತ್ತದೆ. ಜೊತೆಗೆ ತೇವಾಂಶವನ್ನೂ ಕಾಪಾಡಿಕೊಳ್ಳಬಹುದು. ಆದರೆ ಕೆಲವರು ಮೂಲವಾಗಿ ಎಣ್ಣೆಚರ್ಮವನ್ನು ಹೊಂದಿರುತ್ತಾರೆ. ಅಂತಹವರು ಎಣ್ಣೆ ಅಥವಾ ಮಾಯಿಶ್ಚರೈಸರ್ ಕ್ರೀಮ್ ಬಳಸುವುದು ತರವಲ್ಲ. ಇಂತಹವರು ಮನೆಯಲ್ಲಿಯೇ ಮುಖದ ಸೌಂದರ್ಯಕ್ಕೆ ಮದ್ದು ತಯಾರಿಸಿಕೊಳ್ಳಬಹುದು.

ನೈಸರ್ಗಿಕ ಮಾರ್ಗ:

ಎಣ್ಣೆಯುಕ್ತ ತ್ವಚೆಯ ಆರೈಕೆಗೆಂದೇ ಹಲವಾರು ನೈಸರ್ಗಿಕ ಮಾರ್ಗಗಳಿವೆ. ಎಣ್ಣೆ ತ್ವಚೆಯ ಆರೈಕೆಗೆ ಪರಿಣಾಮಕಾರಿ ಮತ್ತು ಪ್ರಭಾವಿ ಸಾಮಗ್ರಿ ಎಂದರೆ ಅದು ನಿತ್ಯ ಬಳಕೆಯ ಟೊಮೆಟೊ. ಪ್ರತಿಯೊಬ್ಬರ ಮನೆಯಲ್ಲಿಯೂ ಟೊಮೆಟೊ ಬಳಕೆ ಸಹಜ. ಅಡುಗೆಗೆ ಬಳಸುವ ಈ ಟೊಮೆಟೋ ಔಷಧಿಯ ಬಳಕೆಯ ವಸ್ತು ಎಂದರೆ ನಂಬಲೇಬೇಕು. ಇದರಿಂದ ಚರ್ಮದ ರಕ್ಷಣೆ ಸಾದ್ಯವಾಗುವುದಾದರೆ ನೀವೇಕೆ ಪ್ರಯತ್ನಿಸಬಾರದು. ಒಮ್ಮೆ ಟ್ರೈಮಾಡಿ. ತ್ವಚೆಯಲ್ಲಿರುವ ಸೂಕ್ಷ್ಮ ರಂದ್ರಗಳನ್ನು ನಿವಾರಿಸುವಲ್ಲಿ ಟೊಮೆಟೊ ಸಹಕಾರಿ. ಟೊಮೆಟೊದಲ್ಲಿರುವ ಆಂಟಿಆಕ್ಸಿಡೆಂಟ್‍ಗಳು ತ್ವಚೆಯನ್ನು ರಕ್ಷಿಸಿ ತಾರುಣ್ಯಭರಿತವಾಗಿಸುತ್ತದೆ. ಜೊತೆಗೆ ದೀರ್ಘ ಅವಧಿಯವರೆಗೆ ಕಾಂತಿಯವ ಚರ್ಮಹೊಂದುವುದು ಇದರಿಂದ ಸಾಧ್ಯವಾಗುತ್ತದೆ.

ಟೊಮೆಟೊ ಬಳಕೆ ಹೇಗೆ?

ಟೊಮೆಟೊವನ್ನು ಹಾಗೆಯೇ ಇಡಿಯಾಗಿ ಕೂಡ ಹಚ್ಚಿಕೊಳ್ಳಬಹುದು ಅಥವಾ ರಸವನ್ನು ತೆಗೆದು ಮುಖಕ್ಕೆ ಲೇಪಿಸಿಕೊಳ್ಳಬಹುದು. ಟೊಮೆಟೊ ರಸ ಯಾವುದೇ ಕ್ರೀಮ್‍ಗಳಿಗಿಂತ ಪ್ರಭಾವಿ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು. ಮುಖದಲ್ಲಿನ ರಂದ್ರಗಳನ್ನು ಹೋಗಲಾಡಿಸುವುದರ ಜೊತೆಗೆ ಮೊಡವೆ ಮತ್ತು ಕಪ್ಪುಕಲೆಗಳಿಗೂ ಗುಡ್‍ಬೈ ಹೇಳಿಸುತ್ತದೆ. ಮುಖ್ಯವಾಗಿ ಎಣ್ಣೆಯುಕ್ತ ತ್ವಚೆಯನ್ನು ಹೊಂದಿರುವವರಿಗೆ ಟೊಮೆಟೋ ರಾಮಬಾಣ ಎನಿಸುತ್ತದೆ.

1. ಮುಖದಲ್ಲಿನ ರಂದ್ರಗಳು ಮಲಿನತೆಗೆ ತೆರೆದುಕೊಳ್ಳುತ್ತವೆ ಮತ್ತು ಅತ್ಯಧಿಕವಾಗಿ ಕೆಟ್ಟ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಯೂ ಹೆಚ್ಚು. ಟೊಮೆಟೊ ರಸವನ್ನು ಈ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ರಂದ್ರಗಳು ತನ್ನಿಂತಾನೆ ಮಾಯವಾಗುತ್ತದೆ. ನಿಂಬೆಹಣ್ಣಿನ ರಸದೊಂದಿಗೆ ಟೊಮೆಟೊ ಮಿಶ್ರಣ ಮಾಡಿ ರಸ ತಯಾರಿಸಿ ವಾರ ಕಾಲ ಬಳಸಬಹುದು. ಹತ್ತಿಯ ಮುಖೇನ ಮುಖಕ್ಕೆ ಲೇಪಿಸಬಹುದು.

2. ಟೊಮೆಟೊ ರಸವನ್ನು ಬಳಸಿಕೊಂಡು ಉಪಶಮನ ಮಾಡುವ ಸಾಮಾನ್ಯ ತ್ವಚೆಯ ಸಮಸ್ಯೆ ಮೊಡವೆಯಾಗಿದೆ. ಟೊಮೆಟೋದಲ್ಲಿನ ನೈಸರ್ಗಿಕ ಆಸಿಡ್‍ಗಳು ಮತ್ತು ವಿಟಮಿನ್ ಮೊಡವೆಗಳನ್ನು ಬುಡದಿಂದಲೇ ಹೊಡೆದೋಡಿಸುತ್ತದೆ. ಟೊಮೆಟೊದಿಂದ ತೆಗೆದ ರಸವನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ಶುದ್ದ ನೀರಿನಿಂದ ಮುಖ ತೊಳೆದಲ್ಲಿ ಆರೋಗ್ಯಕರ ತ್ವಚೆ ಪಡೆಯುವುದು ಸಾಧ್ಯ.

Also Read: ಮೊಡವೆ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದೆಯೇ?

3. ಜಿಡ್ಡುಯುಕ್ತ ತ್ವಚೆ ಹೊಂದಿದವರು ಕ್ರೀಂ ಬಳಸುವುದು ಕಷ್ಟ. ಹಾಗಾಗಿ ಟೊಮೆಟೊ ಅಂತಹವರಿಗೆ ಹೇಳಿ ಮಾಡಿಸಿದ ಔಷದ. ಟೊಮೆಟೊ ರಸವನ್ನು ನಿಂಬೆರಸದೊಂದಿಗೆ ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಕೆಲವೇ ದಿನಗಳಲ್ಲಿ ಕಾಂತಿಯುಕ್ತ ಚರ್ಮಹೊಂದಬಹುದು.

4. ಸೂರ್ಯನ ಪ್ರಖರತೆಯಿಂದ ಮುಖದ ಚರ್ಮವನ್ನು ರಕ್ಷಿಸಿಕೊಳ್ಳಲು ಟೊಮೆಟೊ ರಸ ಸಹಕಾರಿ. ಬಾಡಿದ ಮುಖಕ್ಕೆ ಟೊಮೆಟೊ ಫ್ರೆಷ್‍ನೆಸ್ ತಂದುಕೊಡುತ್ತದೆ

5. ಟೊಮೆಟೊದಲ್ಲಿ ಸಿ ವಿಟಮಿನ್‍ನ ಪೋಷಕಾಂಶ ಹೆಚ್ಚಾಗಿರುವ ಕಾರಣ ಅದು ತ್ವಚೆಯ ಮೇಲಿನ ಕಪ್ಪು ಕಲೆಗಳನ್ನು ತಳಮಟ್ಟದಿಂದಲೇ ತೆಗೆಯಲು ಅನುಕೂಲವಾಗುತ್ತದೆ. ಟೊಮೆಟೊ ಸಿಪ್ಪೆಯನ್ನು ಜೇನಿನೊಂದಿಗೆ ತೇದು ಕಪ್ಪು ಕಲೆಗಳಿರುವಲ್ಲಿ ಹಚ್ಚಿದಲ್ಲಿ ಗುಣಮುಖವಾಗಬಹುದು.

6.ಟೊಮೆಟೊ ರಸವನ್ನು ಶ್ರೀಗಂಧದ ಪುಡಿ ಅಥವಾ ರೋಸ್ವಾಟರ್‍ನಲ್ಲಿ ಬೆರಸಿ ಮುಖಕ್ಕೆ ಲೇಪಿಸುವುದರಿಂದ ನೆರಿಗೆಯುಕ್ತ ತ್ವಚೆಯಿಂದ ಮುಕ್ತಿ ಪಡೆಯಬಹುದು. ಅಷ್ಟೇ ಅಲ್ಲ ಹೊಳಪನ್ನೂ ಹೊಂದಬಹುದು. ಯಾವುದೇ ಮೇಕಪ್‍ಗಿಂತಲೂ ಹೆಚ್ಚಿನ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಟೊಮೆಟೊ ಸಹಕಾರಿಯಾಗಲಿದೆ

7. ಟೊಮೆಟೊ ಹಣ್ಣಿನ ಸಿಪ್ಪೆಯನ್ನು ಬಹುವಾಗಿ ನಾವು ಅಲಕ್ಷಿಸುತ್ತೇವೆ. ಆದರೆ ಅದರಲ್ಲಿರುವ ಔಷಧೀಯ ಗುಣ ಯಾವುದೇ ರಾಸಾಯನಿಕ ಬಳಕೆಗಿಂದ ಮೇಲ್ಮಟ್ಟದ್ದು. ಇದರಲ್ಲಿರುವ ನಾರಿನ ಅಂಶ ನಮ್ಮ ತ್ವಚೆಯ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಿಪ್ಪೆಯನ್ನು ಹಸಿಯಾಗಿ ಅಥವಾ ಬೇಯಿಸಿದ ಬಳಿಕ ಸಂಗ್ರಹಿಸಿ ಜೇನು ಅಥವಾ ಹಾಲಿನ ಕೆನೆಯೊಂದಿಗೆ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಂಡು ಫ್ರಿಡ್ಜ್‍ನಲ್ಲಿರಿಸಿಕೊಂಡರೆ ತಿಂಗಳುಗಟ್ಟಲೆ ಇದನ್ನೇ ಮಸಾಜ್ ಅಥವಾ ಫೇಶಿಯಲ್‍ಗೂ ಬಳಸಬಹುದು

8.ಇನ್ನೂ ಟೊಮೆಟೊ ಕಾಯಿಯನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿದ ಬಳಿಕ ಅದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಸಕ್ಕರೆ ಬೆರೆಸಿ ಮುಖಕೆ ಹಚ್ಚಬಹುದು. ಕೆಲವು ವಾರಗಳ ಕಾಲ ಹೀಗೆ ಮಾಡುವುದರಿಂದ ಮುಖದ ಕಲೆಗಳು ಶಾಶ್ವತವಾಗಿ ಕಾಣೆಯಾಗುತ್ತವೆ.

9.ಟೊಮೆಟೋ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಮಾಡುವಲ್ಲಿಯೂ ಪಾತ್ರ ನಿರ್ವಹಿಸುತ್ತದೆ. ಟೊಮೆಟೊವನ್ನು ಜೂಸ್, ಸಾಂಬಾರು ಅಥವಾ ಹಸಿಯಾಗಿ ತಿನ್ನುವುದು ಕೂಡಾ ಒಳ್ಳೇಯದು. ಟೊಮೆಟೊ ಬೀಜವನ್ನು ಒಣಗಿಸಿ ಆಯುರ್ವೇದದ ಔಷಧವಾಗಿ ಬಳಸುವ ಪದ್ದತಿಯಿದೆ

10.ಟೊಮೆಟೊವನ್ನು ಸ್ಲೈಸ್ ರೀತಿಯಲ್ಲಿ ತುಂಡರಿಸಿ ಮುಖದ ಮೇಲೇ ನಿರ್ಧಿಷ್ಟ ಜಾಗದಲ್ಲಿ ಇರಿಸಿಕೊಂಡಲ್ಲಿ ಮುಖದಲ್ಲಿನ ಕಪ್ಪುಕಲೆ ಮಾಯವಾಗಿ ಸುಂದರ ತ್ವಚೆ ಕಾಣಬಹುದು. ಪಾರ್ಲರ್‍ಗಳಲ್ಲಿ ಟೊಮೆಟೋ ಬಳಕೆ ಯಥೇಚ್ಚವಾಗಿರುತ್ತದೆ. ಅದನ್ನು ನಾವು ಮನೆಯಲ್ಲಿಯೇ ಮಾಡಿಕೊಳ್ಳಬಹುದು.

ಲತಾಪರಮೇಶ್
ಸ್ನೇಹ ಬ್ಯೂಟಿಪಾರ್ಲರ್, ನಂ. 656, 8ನೇ ಅಡ್ಡರಸ್ತೆ,
1ನೇ ಮುಖ್ಯರಸ್ತೆ, ಭುವನೇಶ್ವರಿ ನಗರ,
ಆರ್.ಟಿ. ನಗರ, ಬೆಂಗಳೂರು-32
ಮೊಬೈಲ್ : 9164089890

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!