ಟೈಮ್ ಮ್ಯಾನೇಜ್‍ಮೆಂಟ್-ಕಾಲವನ್ನು ತಡೆಯೋರು ಯಾರು ಇಲ್ಲ!

ಟೈಮ್ ಮ್ಯಾನೇಜ್‍ಮೆಂಟ್-ಕಾಲವನ್ನು ತಡೆಯೋರು ಯಾರು ಇಲ್ಲ! ಪ್ರಪಂಚದಲ್ಲಿನ ಪ್ರತಿಯೊಬ್ಬರಿಗೂ ಸದುಪಯೋಗ ಮಾಡಿಕೊಳ್ಳಲು ಅಷ್ಟೇ ಗಂಟೆಗಳ ಕಾಲಾವಕಾಶವಿರುತ್ತದೆ. ಆದರೆ, ಇತರರಿಗಿಂತ ಕೆಲವು ಮಂದಿಗೆ ಸಮಯದಲ್ಲಿ ಸದ್ಬಳಿಕೆ ಮಾಡಿಕೊಂಡು ಸಾಧನೆ ಸಾಧಿಸಲು ಮತ್ತು ಗುರಿ ಮುಟ್ಟಲು ಹೇಗೆ ಸಾಧ್ಯವಾಗುತ್ತದೆ? ಇದಕ್ಕೆ ಬೇಕಾಗಿರುವುದು ಸಂಘಟಿತ ಯೋಜನೆ. ಇದನ್ನು ಕಾಲ ನಿರ್ವಹಣೆ ಅಥವಾ ಟೈಮ್ ಮ್ಯಾನೇಜ್‍ಮೆಂಟ್ ಎನ್ನುತ್ತಾರೆ.

ಕಾಲವನ್ನು ತಡೆಯೋರು ಯಾರು ಇಲ್ಲ…! ಎಂಥ ಮುತ್ತಿನಂಥ ವಾಕ್ಯ ಅಲ್ಲವೇ? ಮಾನವ ವೈಜ್ಞಾನಿಕವಾಗಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ, ಕಾಲವನ್ನು ಅಥವಾ ಸಮಯವನ್ನು ನಿಯಂತ್ರಿಸುವ ಶಕ್ತಿ ಆತನ ಸಾಮಥ್ರ್ಯಕ್ಕೆ ನಿಲುಕದ್ದು. ಕಾಲವನ್ನು ನಿಯಂತ್ರಿಸುವುದು ಅಸಾಧ್ಯ; ಆದರೆ ಕಾಲವನ್ನು ನಿರ್ವಹಿಸಬಹುದು. ಇದನ್ನೇ ಆಧುನಿಕ ಕಾಲದಲ್ಲಿ ಟೈಮ್ ಮ್ಯಾನೇಜ್‍ಮೆಂಟ್ ಎನ್ನುತ್ತಾರೆ. ನಮಗೆ ದೊರೆತಿರುವ ಸಮಯದಲ್ಲಿ ಗರಿಷ್ಟ ಪ್ರಮಾಣದ ಕಾಲವನ್ನು ವ್ಯವಸ್ಥಿತವಾಗಿ, ಯೋಜಿತವಾಗಿ ಸದ್ಬಳಕೆ ಮಾಡಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ. ಎಲ್ಲ ಚಟುವಟಿಕೆಗಳಿಗೂ ಹೊಂದಿಕೊಳ್ಳುವ ರೀತಿ ಸಮಯವನ್ನು ಸದ್ವಿನಿಯೋಗಿಸಿಕೊಳ್ಳಬೇಕು. ಇದನ್ನು ಅನುಷ್ಠಾನಗೊಳಿಸಲು ಆರಂಭದಲ್ಲಿ ಸ್ವಯಂ ಶಿಸ್ತು ಮತ್ತು ನಿಯಂತ್ರಣ ಅಳವಡಿಸಿಕೊಳ್ಳಬೇಕಾಗುತ್ತದೆ. ಇದು ಹವ್ಯಾಸವಾಗಿ ಕಾರ್ಯನಿರ್ವಹಣೆ ವ್ಯವಸ್ಥೆಯ ಒಂದು ಭಾಗವಾಗುವ ತನಕ ಸ್ವಲ್ಪ ಕಷ್ಟವಾಗುತ್ತದೆ. ನಂತರ ಟೈಮ್ ಮ್ಯಾನೇಜ್‍ಮೆಂಟ್ ನಿಮ್ಮ ಹತೋಟಿಗೆ ಬರುತ್ತದೆ. ಕಾಲ ನಿರ್ವಹಣೆಯು ನೀವು ಹೇಗೆ ಸಮಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂಬುದನ್ನು ತೋರಿಸುತ್ತದೆ.ಟೈಮ್ ಮ್ಯಾನೇಜ್‍ಮೆಂಟ್-ಕಾಲವನ್ನು ತಡೆಯೋರು ಯಾರು ಇಲ್ಲ!

ಟೈಮ್ ಮ್ಯಾನೇಜ್‍ಮೆಂಟ್ ಎಂದರೆ, ತುಂಬಾ ವೇಗವಾಗಿ ಕಾಲದೊಂದಿಗೆ ಓಡುವುದು ಎಂದರ್ಥವಲ್ಲ. ನಿಮಗೆ ದೊರೆತಿರುವ ಸಮಯವನ್ನು ಉಪಯೋಗಿಸಿಕೊಂಡು ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೀರಿ ಎಂಬುದು ಇದರ ಅರ್ಥ. ಮಹಾ ತತ್ವಜ್ಞಾನಿ ಸೆನೆಕಾ ಒಂದು ಕಡೆ ಹೇಳುತ್ತಾನೆ `ಬದುಕಲು ನಮಗೆ ತುಂಬಾ ಕಡಿಮೆ ಕಾಲವಿದೆ ಎಂಬುದು ಸರಿಯಲ್ಲ, ನಾವು ಅದನ್ನು ತುಂಬಾ ವ್ಯರ್ಥ ಮಾಡುತ್ತಿದ್ದೇವೆ. ಬದುಕು ತುಂಬಾ ದೀರ್ಘವಾದುದು. ವ್ಯವಸ್ಥಿತವಾಗಿ ಅದನ್ನು ಬಳಸಿಕೊಂಡಿದ್ದೇ ಆದರೆ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಲು ನಮಗೆ ಸಾಕಷ್ಟು ಪ್ರಮಾಣದ ಸಮಯವು ಇರುತ್ತದೆ.

ಸಮಯ ಅಮೂಲ್ಯ:

ಕಾಲ ತುಂಬಾ ಅಮೂಲ್ಯ ವಸ್ತು. ಕಳೆದು ಹೋದ ಕಾಲ ಮತ್ತೆ ಬರುವುದಿಲ್ಲ. ನಿರರ್ಥಕವಾಗಿ ಸಮಯ ಜಾರಿದಷ್ಟು ನಿರೀಕ್ಷಿತ ಸಾಧನೆ-ಗುರಿ ಮುಟ್ಟಲು ಇರುವ ಕಾಲಾವಕಾಶವೂ ಕಡಿಮೆಯಾಗುತ್ತಾ ಹೋಗುತ್ತದೆ. ಜಾರಿ ಹೋದ ಹೊತ್ತನ್ನು ಮತ್ತೆ ಪಡೆಯಲಾಗದು ಅಥವಾ ಪರ್ಯಾಯ ವ್ಯವಸ್ಥೆ ಮಾಡಲಾಗದು.
ಪಾಶ್ವಿಮಾತ್ಯ ರಾಷ್ಟ್ರಗಳಲ್ಲಿ ಟೈಮ್ ಮ್ಯಾನೇಜ್‍ಮೆಂಟ್ ತುಂಬಾ ವಿಶೇಷ ಮಹತ್ವದ ವಿಷಯ. ಸಮಯವನ್ನು ಹೆಚ್ಚು ಹೆಚ್ಚು ಪರಿಣಾಮಕಾರಿಯಾಗಿ, ಫಲಪ್ರದವಾಗಿ ಮತ್ತು ರಚನಾತ್ಮಕವಾಗಿ ಸದ್ಬಳಕೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ವಿದೇಶಿಯರು ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ. ಭಾರತದಲ್ಲಿ ದುರದೃಷ್ಟವಶಾತ್ ಕಾಲಹರಣವಾಗುತ್ತಿದೆ. ತೀರಾ ಕೆಲವು ಮಂದಿ (ಇವರೆಲ್ಲ ಮಹಾಸಾಧಕರು) ಸಮಯದ ಮೌಲ್ಯಕ್ಕೆ ತುಂಬಾ ಮಹತ್ವ ನೀಡುತ್ತಾರೆ. `ಸಾಮಾನ್ಯ ಜನರು ತಮ್ಮ ಸಮಯವನ್ನು ಹೇಗೆ ಕಳೆಯುವುದೆಂಬ ಚಿಂತೆಯಲ್ಲಿ ಮಾತ್ರ ಇರುತ್ತಾರೆ. ಆದರೆ ಪ್ರತಿಭೆ ಇರುವ ವ್ಯಕ್ತಿ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಯತ್ನದಲ್ಲಿರುತ್ತಾರೆ’ ಎಂಬ ಅರ್ಥರ್ ಶ್ಕೊಪೆನ್‍ಹನೆರ್‍ರ ಅರ್ಥಗರ್ಭಿತ ಮಾತು ಈ ಸಂದರ್ಭದಲ್ಲಿ ನೆನಪಿಗೆ ಬರುತ್ತದೆ.

ಇಂದಿನ ಆಧುನಿಕ ಜಗತ್ತಿನಲ್ಲಿ ಕಾಲ ನಾಗ ಲೋಟದಿಂದ ಓಡುತ್ತಿರುತ್ತದೆ. ಇದರಿಂದಾಗಿಯೇ ಬದುಕು ತುಂಬಾ ಚಿಕ್ಕದು ಎಂಬ ಭಾವನೆ ಮೂಡುತ್ತದೆ. ಹಲವರು ನಿರರ್ಥಕವಾಗಿ ಕಾಲ ವ್ಯಯ ಮಾಡುವ ಮೂಲಕ ಸಮಯವನ್ನು ಇನ್ನಷ್ಟು ವ್ಯರ್ಥ ಮಾಡುತ್ತಾರೆ. ಸ್ವಾಮಿ ಸುಖಬೋಧಾನಂದರ ಪ್ರಕಾರ `ಪ್ರತಿಯೊಂದಕ್ಕೂ ನೀವು ಮೌಲ್ಯ ನೀಡಿದರೆ ಸಮಯದ ಸದ್ಬಳಕೆ ಸಾಧ್ಯವಾಗುತ್ತದೆ. ಕಾಲಕ್ಕೆ ಮಹತ್ವ ನೀಡಲು ಹೊಸ ಹೊಸ ದಾರಿಗಳನ್ನು ಅನ್ವೇಷಣೆ ಮಾಡಿ. ಸಮಯದ ಪ್ರಾಮುಖ್ಯತೆ ಗುರುತಿಸುವುದರಿಂದ ನೀವು ಜೀವನದಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯ.’ ಕಾಲ ಅತ್ಯುತ್ತಮ ಉಪಶಮನಕಾರಕ. ಪ್ರತಿದಿನ ಒಂದು ಗಂಟೆ ಕಾಲ ಹೆಚ್ಚುವರಿಯಾಗಿ ಕೆಲಸ ಮಾಡಿದರೆ, ನಿಮ್ಮ ಬದುಕಿನಲ್ಲಿ ಐದು ವರ್ಷಗಳ ಸಮಯ ಸೇರ್ಪಡೆಯಾಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸ್ಪ್ರಿಂಟರ್‍ಗಳು ಅಥ್ಲೆಟಿಕ್ ಕ್ರೀಡಾಪಟುಗಳು ಮತ್ತು ಕಡಿಮೆ ಅಂತರದ ಈಜುಪಟುಗಳಿಗೆ ಸಮಯದ ಮಹತ್ವಚೆನ್ನಾಗಿ ತಿಳಿದಿರುತ್ತದೆ.

ಇಲ್ಲಿ ಪ್ರತಿಸೆಕೆಂಡ್, ಮಿಲಿ ಸೆಕೆಂಡ್ ಕೂಡ ಮುಖ್ಯವಾಗಿರುತ್ತದೆ. ಕೆಲ ಸೆಕೆಂಡ್‍ನಿಂದ ತಮ್ಮ ದಾಖಲೆಗಳನ್ನು ಸುಧಾರಿಸಿಕೊಳ್ಳಲು ಕ್ರೀಡಾಳುಗಳು ಹಗಲು ರಾತ್ರಿ ಅಭ್ಯಾಸ ಮಾಡುತ್ತಾರೆ. ನೀವು ಎಚ್ಚರಿಕೆಯಿಂದ ಹಣವನ್ನು ನಿರ್ವಹಣೆ ಮಾಡುವ ರೀತಿಯಲ್ಲೇ ಅವರು ಟೈಮ್‍ನನ್ನು ಮ್ಯಾನೇಜ್ ಮಾಡುತ್ತಾರೆ. ನೀವು ಸರಿಯಾಗಿ ಬಳಸಿಕೊಳ್ಳದೇ ಹೋದರೆ ನಿಮಗೆ ಸಾಕಷ್ಟು ಸಮಯವೇ ಸಿಗುವುದಿಲ್ಲ. ನೀವು ಈಗಲೇ ಸಮಯವನ್ನು ಉಳಿಸಿ. ಇರುವಷ್ಟು ಕಾಲವನ್ನು ವ್ಯಯ ಮಾಡದೇ ಸೂಕ್ತವಾಗಿ ಉಪಯೋಗಿಸಿಕೊಂಡಿದ್ದೇ ಆದರೆ, ನಿಮ್ಮ ಭವಿಷ್ಯ ಉಜ್ವಲವಾಗಿರುತ್ತದೆ ಮತ್ತು ಇಡೀ ಬದುಕಿನಾದ್ಯಂತ ಸುಖ ಸಂತೋಷ ನೆಮ್ಮದಿ ಲಭಿಸುತ್ತದೆ. ನಿಮ್ಮ ಇಷ್ಟಾರ್ಥ, ಆಸೆ ಆಕಾಂಕ್ಷೆಗಳು ಈಡೇರಿಸುತ್ತದೆ. ನೀವು ಕಾಲ ವ್ಯರ್ಥ ಮಾಡಿದರೆ, ಮಿಂಚಿ ಹೋದ ಕಾಲಕ್ಕೆ ಫಲವಿಲ್ಲ ಎಂಬಂಥೆ ಎಲ್ಲವೂ ಈಡೇರದೇ ಉಳಿದುಬಿಡುತ್ತದೆ.

time-management-ಕಾಲವನ್ನು ವ್ಯರ್ಥ ಮಾಡಬೇಡಿ

1. `ಕ್ರಿಯಾಶೀಲತೆ, ಚಟುವಟಿಕೆ ಇಲ್ಲದೇ ನೀವು ಕಳೆಯುತ್ತಿರುವ ಜೀವನ ನೋಡಿ ನನಗೆ ತುಂಬಾ ನೋವಾಗುತ್ತಿದೆ. ಎಲ್ಲವನ್ನು ಆಮೇಲೆ ಮಾಡೋಣ ಎಂದು ಯೋಚಿಸುತ್ತಾ ಸುಮ್ಮನೆ ಕೂರಬೇಡಿ’ ಎಂದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ ಹೇಳಿದ್ದಾರೆ.

2. ಕಳೆದು ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಹಿಂದಿನ ಸೋಲು, ಹತಾಶೆ ಮತ್ತು ಕೆಟ್ಟ ಸಂಗತಿಗಳನ್ನು ಚಿಂತಿಸುತ್ತಾ ಕಾಲಹರಣ ಮಾಡುವುದು ಸರಿಯಲ್ಲ.

3. ಸಮಯದ ಮಹತ್ವವನ್ನು ಸೂಕ್ತವನ್ನು ಅರಿತು ಪ್ರತಿ ನಿಮಿಷವನ್ನು ಸರಿಯಾಗಿ ಬಳಸಿಕೊಳ್ಳಿ.

4. ಸೋಮಾರಿತನ, ಮೈಗಳ್ಳತನ ಜಡತ್ವಕ್ಕೆ ಎಂದೂ ಆಸ್ಪದ ನೀಡಬೇಡಿ. ಇಂದೇ ಮಾಡಬಹುದಾದ ಕೆಲಸನವನ್ನೂ ನಾಳೆಗೆ ಮುಂದೂಡಬೇಡಿ.

5. ಪ್ರತಿಯೊಂದು ಕೆಲಸ ಮಾಡಲು `ಈಗಲೇ’ ಉತ್ತಮ ಸಮಯ. ಕಾಲವನ್ನು ಸರಿಯಾಗಿ ಬಳಸಿಕೊಳ್ಳದ ಮಂದಿ ಸಮಯ ಸಾಲದು ಎಂಬ ಬಗ್ಗೆ ದೂರು ಹೇಳುತ್ತಾರೆ.

6. ಕಾಲದ ಕೊರತೆ ನಿಜವಾಗಿಯೂ ಇಲ್ಲ. ಅದನ್ನು ಸೃಷ್ಟಿ ಮಾಡಿಕೊಂಡವರು ನಾವು. ಸದಾ ಸಕ್ರಿಯವಾಗಿ ಚಟುವಟಿಕೆಯಿಂದ ಇದ್ದರೆ ಸಮಯದ ಅಭಾವಬಾರದು.

ಸಮಯದ ಪರಿಣಾಮಕಾರಿ ಬಳಕೆಗೆ ಕೆಲವು ಮಾರ್ಗದರ್ಶನಗಳು:

1. ನಾಳಿನ ಕೆಲಸವನ್ನು ಇಂದೇ ಮಾಡಿ. ಇಂದಿನ ಕೆಲಸವನ್ನು ಈಗಲೇ ಮಾಡಿ.

2. ಕಡಿಮೆ ಸಮಯದಲ್ಲಿ ಗರಿಷ್ಠ ಫಲಿತಾಂಶ ಹೊಂದಲು ಪ್ರತಿಯೊಂದು ಚಟುವಟಿಕೆ ನಡುವೆ ಸಮತೋಲನ ಕಾಯ್ದುಕೊಳ್ಳಲು ಪರಿಣಾಮಕಾರಿ ಕಾಲ ನಿರ್ವಹಣೆಯ ಅಗತ್ಯವಿರುತ್ತದೆ.

3. ಟೈಮ್ ಮ್ಯಾನೇಜ್‍ಮೆಂಟ್‍ನ ಒಳ್ಳೆಯ ಉಪಯೋಗವೆಂದರೆ ನಿಮ್ಮ ಬದುಕಿಗೆ ಒಂದು ಸ್ಪಷ್ಟ ರೂಪ, ರಚನಾತ್ಮಕತೆ ಒದಗಿಸುವುದು.

4. ನಿಮ್ಮ ಕೆಲಸದ ಆದ್ಯತೆ ಮೇರೆಗೆ ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿ. ನಿಗದಿತ ಕಾಲ ಮಿತಿಯೊಳಗೆ ಯಾವ ಯಾವ ಮುಖ್ಯ ಕೆಲಸಗಳನ್ನು ಮಾಡಬೇಕು ಎಂಬುದನ್ನು ಆದ್ಯತೆ ಅನುಗುಣವಾಗಿ ಶ್ರೇಣಿ ನೀಡಿ.

5. ನಿಮ್ಮ ಗುರಿಯನ್ನು ನಿಗದಿ ಮಾಡಿಕೊಂಡು, ಅದನ್ನು ಸಾಧಿಸುತ್ತ ಪರಿಶ್ರಮ ಪಡಿ.

6. ನೀವು ಮಾಡುತ್ತಿರುವ ಕೆಲಸದ ಬಗ್ಗೆ ದೃಢ ವಿಶ್ವಾಸ ಇರಲಿ. ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಿ. ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಹೆಮ್ಮೆ ನಿಮ್ಮದಾಗಲಿ.

7. ಯಾವುದೇ ಕೆಲಸವಿರಲಿ ಅದು `ಈಗಲೇ’ ಮಾಡುವುದು ಉತ್ತಮವಾದ ಸಮಯ. ಮಹಾಭಾರತ, ಕುರುಕ್ಷೇತ್ರ ಯುದ್ಧದ ನಂತರ ಶರಗಳ ಶಯ್ಯನದ ಮೇಲಿನ ಪಿತಾಮಹಾ ಭೀಷ್ಮರು ಸಮಯದ ಮಹತ್ವದ ಬಗ್ಗೆ ಹೀಗೆ ಹೇಳಿದ್ದರು. `ಯಾವುದಕ್ಕೂ ಕಾಯಬೇಡಿ. ಮುಂದೇನಾಗುತ್ತದೋ ಎಂಬುದು ನಿಮಗೆ ತಿಳಿದಿಲ್ಲ. ನೀವು ನಾಳೆ ಮಾಡಬೇಕಾದ ಕೆಲಸ ಇಂದೇ ಮಾಡಿ. ಇದೇ ಜ್ಞಾನದ ವಿವೇಕ’.

8. ಸಾಧಕರು, ಯಶಸ್ಸು ಸಾಧಿಸಿದವರು ಮತ್ತು ಕ್ರಿಯಾಶೀಲ ವ್ಯಕ್ತಿಗಳು ತುಂಬಾ ಮಹತ್ವವಾದ ಕೆಲಸವನ್ನು ಮೊದಲು ಪೂರ್ಣಗೊಳಿಸುತ್ತಾರೆ.

9. ಯೋಜನೆ ರೂಪಿಸಿ, ಸಂಘಟಿತ ಯೋಜನೆ ಕೈಗೊಳ್ಳುವ ಮಂದಿ ಸಮರ್ಥತೆಯಿಂದ ನಿಗದಿತ ಗುರಿ ತಲುಪಬಹುದು ಮತ್ತು ಕಾರ್ಯದಲ್ಲಿ ಯಶಸ್ಸು ಸಾಧಿಸಬಹುದೆಂದು ಅಧ್ಯಯನಗಳು ಸಾಬೀತು ಮಾಡಿವೆ.

10. ಎಲ್ಲವೂ ಸರಿಯಾಗಿದ್ದಲ್ಲಿ, ನೀವು ಸಮಯ ಉಳಿಸಿ, ಸಂಘಟಿತರಾಗಿ ತುಂಬಾ ಸುಲಭವಾಗಿ ನಿಮ್ಮ ಕೆಲಸದಲ್ಲಿ ಮುನ್ನಡೆಯಿರಿ. ಆಗ ಗುರಿ ತಲುಪಲು ಸಾಧ್ಯವಾಗುತ್ತದೆ.

11. ಯೋಜನೆ ರೂಪಿಸುವುದು ತುಂಬಾ ಮುಖ್ಯ. ಕೆಲ ನಿಮಿಷಗಳ ಸೂಕ್ತ ಯೋಜನೆ ಗಂಟೆಗಟ್ಟಲೆ ಕಾಲದ ಚಟುವಟಿಕೆಗಳನ್ನು ಉಳಿಸುತ್ತದೆ.

ಪಾರ್ಥ ಬಾಗ್ಚಿ ನಂ. 48, 23ನೇ ಮುಖ್ಯರಸ್ತೆ,ಆರ್.ವಿ ಡೆಂಟಲ್ ಕಾಲೇಜ್ ಸಿಗ್ನಲ್ ಹತ್ತಿರ 2ನೇ ಫೇಸ್‌, ಜೆ.ಪಿ. ನಗರ, ಬೆಂಗಳೂರು-560078 Phone : 080–2658 8204 Mobile: +91 9886060037 ;  +91 98801 26010

ಪಾರ್ಥ ಬಾಗ್ಚಿ
ನಂ. 48, 23ನೇ ಮುಖ್ಯರಸ್ತೆ,ಆರ್.ವಿ ಡೆಂಟಲ್ ಕಾಲೇಜ್ ಸಿಗ್ನಲ್ ಹತ್ತಿರ
2ನೇ ಫೇಸ್‌, ಜೆ.ಪಿ. ನಗರ, ಬೆಂಗಳೂರು-560078
Phone : 080–2658 8204
Mobile: +91 9886060037 ;  +91 98801 26010

parthabagchiscc@gmail.com

http://stammeringcurecentre.com/

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!