ಟೆಸ್ಟುಕಿಟ್ಟುಗಳ ಮಧ್ಯೆ ವೈದ್ಯಸಿಬ್ಬಂದಿ

ಟೆಸ್ಟುಕಿಟ್ಟುಗಳ ಮಧ್ಯೆ ವೈದ್ಯ ಸಿಬ್ಬಂದಿ ಕಷ್ಟದ ಲೆಕ್ಕ ಯಾರಿಗೂ ಸಿಗಲೆ ಇಲ್ಲ! ಯುರೋಪ್ ಅಥವಾ ಚೈನಾದಂತೆ ಪರಿಸ್ಥಿತಿ ಉಲ್ಬಣಗೊಂಡರೆ ನಾವು ಏನು ಮಾಡಬಲ್ಲೆವು …? ಗಂಡಾಂತರಕಾಲದಲ್ಲಿ ರಕ್ಷಿಸಲು ವೈದ್ಯ ಸಿಬ್ಬಂದಿಯ ಕೊರತೆಯಾದರೆ ಮಾರಣಹೋಮ ಖಚಿತ.

ಟೆಸ್ಟುಕಿಟ್ಟುಗಳ ಮಧ್ಯೆ ವೈದ್ಯಸಿಬ್ಬಂದಿಅಂಟಿಜೆನ್ ಟೆಸ್ಟಿಂಗ್ ಕಿಟ್‌ಗಳು ಕಳಪೆಯಾಗಿವೆ, ಫಲಿತಾಂಶಗಳ ಮೇಲೆ ಸಂಶಯ, ನಂಬಲಸಾಧ್ಯವಾದ ಸಂಖ್ಯೆಗಳು. ಹಲವು ರಾಷ್ಟ್ರೀಯ ಸಂಸ್ಥೆಗಳು ಈಗಿರುವ ಟೆಸ್ಟ್‌ಕಿಟ್‌ಗಳ ಉಪಯೋಗ ನಿಲ್ಲಿಸುವ ಸೂಚನೆ ನೀಡಿಯಾಯ್ತು, ಕಳಪೆ ಸಾಧನಗಳ ಫಲಿತಾಂಶ ನಂಬಲರ್ಹವೆ? ಹಾಗೂ ನಂಬಲರ್ಹ ಹಾಗೂ ಅನರ್ಹ ಫಲಿತಾಂಶಗಳ ಕಲಸುಮೇಲೋಗರದ ಪಾಸಿಟಿವ್ ಸಂಖ್ಯೆಗಳ ನಂಬಬೇಕೆ? ಪರೀಕ್ಷೆ, ಸ್ಕ್ರೀನಿಂಗ್, ಹೆಚ್ಚಿಸಿ, ಮನೆಮನೆಗೆ ತೆರಳಿ ಜನರ ಪರಿಕ್ಷೆ ಮಾಡಿಸುವ ಯೋಜನೆಗಳಿಂದ ಪ್ರಯೋಜನಗಳೆಷ್ಟು…? ಕಳಪೆ ಪರಿಕ್ಷಾ ಸಾಧನಗಳನ್ನಿಟ್ಟುಕೊಂಡು ಮನೆ ಮನೆಗೆ ತೆರಳಿ ನಂಬಲನರ್ಹ ಫಲಿತಾಂಶ ಪಡೆಯುವದರಿಂದ ಕೇವಲ ವೈದ್ಯಕೀಯ ಮಾನವ ಸಂಪನ್ಮೂಲದ ಕಾಲಹರಣ ಹಾಗೂ ನಿಷ್ಪ್ರಯೋಜಕ ದಣಿಯುವಿಕೆ ಎಂಬ ಪ್ರತಿ ಉತ್ಪನ್ನಗಳು.

ಫಾಲ್ಸ್ ಪಾಸಿಟಿವ್ ಹಾಗೂ ಫಾಲ್ಸ್ ನೆಗೆಟಿವ್ ಎಂಬ ಎರಡು ಸಂದೇಹಾಸ್ಪದ ಸ್ಥಿತಿ:

ಏತನ್ಮಧ್ಯೆ ಮನೆ ಮನೆಗೆ ತೆರಳಿ ಪರಿಕ್ಷೆ ಮಾಡುವ ಸಿಬ್ಬಂದಿಗಳು ಹಾಗೂ ವೈದ್ಯರಿಗೆ ಸೋಂಕಿನ ಲಕ್ಷಣಗಳು ಕಾಣಿಸಿದರೆ ಅವರು ಹದಿನಾಲ್ಕು ದಿನ ಕೆಲಸಕ್ಕೆ ಗೈರು,ಸೊಂಕಿನಿಂದ ಬದುಕುಳಿದರೆ ಮರುಹಾಜರಾತಿ, ಇಲ್ಲವಾದರೆ ಕೋವಿಡ್ ಮಹಾಯದ್ಧದಿ ಹುತಾತ್ಮರಾದಂತೆ. ” ಪಾಸಿಟಿವ್” ಹಾಗೂ ನೆಗೆಟಿವ್‌ಗಳ ಮಧ್ಯೆ ಸೇತುವೆಯಂತಹ ಫಾಲ್ಸ್ ಪಾಸಿಟಿವ್ ಹಾಗೂ ಫಾಲ್ಸ್ ನೆಗೆಟಿವ್ ಎಂಬ ಎರಡು ಸಂದೇಹಾಸ್ಪದ ಸ್ಥಿತಿಗಳಿವೆ,‌ ಇದರತ್ತ ಗಮನ ಯಾರೂ ವಹಿಸಿಲ್ಲ.
ಫಾಲ್ಸ್ ನೆಗೆಟಿವ್ : ಸೋಂಕು ದೇಹದಲ್ಲಿದ್ದರೂ ಟೆಸ್ಟ ಮಾಡುವಾಗ ನೆಗೆಟಿವ್ ಬರುವುದು.
ಫಾಲ್ಸ್ ಪಾಸಿಟಿವ್: ದೇಹದಲ್ಲಿ ಸೋಂಕಿಲ್ಲದ ಆರೋಗ್ಯಕರ ವ್ಯಕ್ತಿ ಫಲಿತಾಂಶ ಪಾಸಿಟಿವ್ ಬರುವುದು.

attack-on-doctorsಈ ತರಹದ ತ್ರಿಶಂಕು ಸ್ಥಿತಿಗೆ ಹಲವಾರು ಕಾರಣಗಳು. ಸದ್ಯದ ಪರಿಸ್ಥಿತಿಯಲ್ಲಿ ಕಳಪೆ ಗುಣಮಟ್ಟದ ಪರೀಕ್ಷಾ ಸಲಕರಣೆಗಳು. ಹಾಗಾಗಿ ಸದ್ಯದ ಪಾಸಿಟಿವ್ ಸಂಖ್ಯೆಗಳು ಸಂಶಯಾಸ್ಪದ.ಅದರಂತೆ ನೆಗೆಟಿವ್ ಕೂಡ …!! ಇನ್ನು ವ್ಯಾಪಕ ಸಾರ್ವಜನಿಕ ಪರೀಕ್ಷೆಗಳ ಬಗ್ಗೆ ಹಲವಾರು ಮುಖಂಡರು ಹಲವು ಉಪಾಯಗಳನ್ನು ಕೊಡುತ್ತಿದ್ದಾರೆ. ಕೋವಿಡ್ ಒಂದು ನವೀನ ರೋಗ ಇದರಲ್ಲಿ ಪರಿಣಿತಿ , ಮಾಹಿತಿ, ಹಾಗೂ ಅನುಭವ ಇನ್ನೂ ಸಾಲದು, ಹಳೆಯ ಟೈಫಾಯಿಡ್, ಟಿಬಿ, ಏಡ್ಸಗಳಿಗೆ ಹೋಲಿಸಿದರೆ ಈ ರೋಗದ ಬಗೆಗಿನ ಅನುಭವ ಎಲ್ಲರಲ್ಲೂ ಕಡಿಮೆಯೆ. ದಿನಕ್ಕೊಂದು ಸ್ವರೂಪ ಪಡೆಯುವ ವೈರಸ್, ದಿನಕ್ಕೊಂದು ಔಷಧಿಯ ಸಲಹೆ. ಕೋಟ್ಯಾನುಕೋಟಿ ಕ್ಲೋರೋಕ್ವಿನ್‌ ಮಾತ್ರೆಗಳನ್ನು ತಯಾರಿಸಿ ಹವು ರಾಷ್ಟ್ರಗಳಿಗೆ ರಫ್ತು ಮಾಡಿದ್ದು ಆಯಿತು, ಮುಂಜಾಗೃತಾ ಕ್ರಮವಾಗಿ ಕ್ಲೋರೋಕ್ವಿನ್ ನುಂಗಿದವರಲ್ಲಿ ಗಾಬರಿಪಡಿಸುವ ಲೆಕ್ಕದಲ್ಲಿ ಜನರು ಕ್ಲೋರೋಕ್ವಿನ್ನ ಅಡ್ಡಪರಿಣಾಮಗಳಿಂದ ಮೃತರಾದರೆ, ಈ ” ಗೇಮ್ ಚೇಂಜರ್ “ನ ಆಟ ಕೋರೋನಾದ ಮುಂದೆ ನಡೆಯಲಿಲ್ಲ. ಎಲ್ಲ ರಾಷ್ಟ್ರಗಳು ಕ್ಲೋರೋಕ್ವಿನ್ ನಾ ಬದಿಗೋತ್ತಿ ಬೇರೆ ಔಷಧಿ, ಲಸಿಕೆಯತ್ತ ಗಮನವಹಿಸಲಾರಂಭಸಿದರು.

ವೈದ್ಯ ಸಿಬ್ಬಂದಿ ಕಷ್ಟದ ಲೆಕ್ಕ ಯಾರಿಗೂ ಸಿಗಲೆ ಇಲ್ಲ!

ಐವರ್ಮೆಕ್ಟಿನ್, ಹೆಚ್ಐವಿ, ಹಂದಿಜ್ವರ, ಹಕ್ಕಿಜ್ವರದ ಔಷಧಿಗಳ ಕಲಸುಮೇಲೋಗರದ ರಾಸಾಯನಿಕ ಕೋಸಂಬರಿಯ ಬಗ್ಗೆ ಅಲ್ಲಿಂದ ಇಲ್ಲಿಂದ ಹೊಗಳಿಕೆಯ ಮಾತುಗಳು ಬಂದರೂ ಕೊನೆಗೆ ಸೋಂಕಿಗೀಡಾಗಿ ಜೀವಂತ ಉಳಿದವರ ರಕ್ತಸಾರ ಅಥವಾ ಕನ್ವಲಸಂಟ್ ಸೀರಮ್ ಕೊನೆಗೆ ಗಟ್ಟಿಯಾಗಿ ಉಳಿಯಿತು. ಚೈನಾ ಯುರೋಪ್ ನಲ್ಲಿ ಮಾರಣಹೋಮ ನಡೆಸಿದ ಕೋರೋನಾ ಮರಣ ಮೃದಂಗ ಆಗ ಆಗ ಭಾರತದಲ್ಲಿ ಬಾರಿಸಿ ಬಿಡುತ್ತದೆ ಎನ್ನುತ್ತ ಎಲ್ಲರೂ ಆತಂಕ ಗಾಬರಿಗಳಿಂದ‌ ನೋಡುತ್ತಿರಲು ಮರಣ ಮೃದಂಗ ಟುಸ್ ಪಟಾಕಿಯಂತೆ. ತೋಳ ಇನ್ನೂವರೆಗೂ ಬರಲೆ ಇಲ್ಲ. ಬರುವುದೂ ಇಲ್ಲ. ಇಷ್ಟೆಲ್ಲದರ ಮಧ್ಯೆ ರಾಷ್ಟ್ರೀಯ, ಅಂತರಾಷ್ಟ್ರೀಯ, ದಿಗ್ಬಂಧನ, ಗೃಹ ಬಂಧನ, ಲಾಕ್ಡೌನ್, ಸೀಲ್‌ಡೌನ್‌ಗಳು ಆರಂಭವಾಗಿ, ಹಲವಾರು ಬುದ್ದಿವಂತರು ಸಮರೋಪಾದಿಯಲ್ಲಿ ತಯಾರಿ ಸಾಗಬೇಕು, ಲಕ್ಷ, ಕೋಟಿ ಸಾವುನೋವುಗಳ ದೂರಾಲೋಚನೆ ಮಾಡಿದರೂ ಸಾವಿನ ಸಂಖ್ಯೆ ಸಾವಿರ ದಾಟಲಿಲ್ಲ, ‌ಆರೋಗ್ಯ ಸಿಬ್ಬಂದಿಗಳ ಕಷ್ಟ ನೀಗಲಿಲ್ಲ. ಹಲವಾರು ವೈದ್ಯರು ದಾದಿಯರು, ಮೃತಪಟ್ಟರು.

ಲಾಕ್ ಡೌನ್ ವಿಧಿಸಿದ ಒಂದುವಾರದ ಮಟ್ಟಿಗೆ ಜನರ ಪಾದಯಾತ್ರೆಗಳು ತಂಡೋಪತಂಡವಾಗಿ ಆರಂಭವಾಗಿ, ಬಸ್ ನಿಲ್ದಾಣ, ಸ್ಟೇಷನ್‌ಗಳು ಕಿಕ್ಕಿರಿದು ತುಂಬಿ ವೈರಸ್ ಹರಡಬಾರದ ವೇಗದಲ್ಲಿ ಹರಡಿಹೋಯಿತು. ಯುರೋಪ್ ಚೈನಾದ ಚಿತ್ರಗಳನ್ನು ನೋಡಿ‌ ಭಯಭೀತರಾಗಿ ಒಂದರ ಮೇಲೊಂದು ಕಾನೂನುಗಳನ್ನು ಅನುಷ್ಠಾನ‌ಗೊಳಿಸಿಯಾಯಿತು. ಇವೆಲ್ಲದರ ಮಧ್ಯೆ ಹರಿದು ಬಂದ‌ ಮಾಹಿತಿ ‌ಸಾಂಕ್ರಾಮಿಕದಿಂದ‌ ಜನರ ಪ್ರತಿಕ್ರಿಯೆಗಳನ್ನು‌ ಊಹಿಸದೆ ಹೋದುದು ಬಹುದೋಡ್ಡ ತಪ್ಪಾಯಿತು. ಜಗಳ, ಹೋಡೆದಾಟ, ವೈದ್ಯ ಸಿಬ್ಬಂದಿಯ ಮೇಲೆ ದೌರ್ಜನ್ಯಗಳು ಆರಂಭವಾಗಿ, ಹೆಣಗಳ ಅಂತ್ಯ ಸಂಸ್ಕಾರ ನಿಲ್ಲಿಸುವವರೆಗೂ ಮಾನವ ಪ್ರತಿಕ್ರಿಯೆಗಳು ಪರಮಾವಧಿ ತಲುಪಿಯಾಯ್ತು. ಹೆಣಗಳು ಸ್ಮಾಶಾನದಿಂದ‌ ಸ್ಮಾಶಾನಕ್ಕೆ ಆರಡಿ ಮೂರಡಿ‌ಜಾಗಕ್ಕೆ ಪರಿತಪಿಸುವಾಗ ಮನುಷತ್ವದ ಶವಯಾತ್ರೆ ಮುಗಿದು ಅಂತಿಮ ಸಂಸ್ಕಾರವೂ ಆಗಿಹೋಯಿತು. ಇದರ ಮಧ್ಯೆ ನಲುಗಿ ಹೋದವರು ವೈದ್ಯ ಸಿಬ್ಬಂದಿ ಮಾತ್ರ . ಅವರ ಕಷ್ಟದ ಲೆಕ್ಕ ಯಾರಿಗೂ ಸಿಗಲೆ ಇಲ್ಲ.

ಕಿಟ್‌ಗಳಿಗೆ ಹಣದ ಖರ್ಚು, ಅರೋಗ್ಯ ಸಿಬ್ಬಂದಿಯ ಮೇಲಿನ‌ ಹೆಚ್ಚಿನ ಒತ್ತಡ:

ದಿನದಿಂದ ದಿನಕ್ಕೆ ಹೆಚ್ಚಾಗುವ ಸಂಖ್ಯೆಗಳನ್ನು ನೋಡಿ ಗಾಬರಿಯಾಗಿ, ಮೈಪರಚಿಕೊಳ್ಳುವ ಪರಿಸ್ಥಿತಿ‌ .ಮೂವತ್ತು ಸಾವಿರ ನಲವತ್ತು ಸಾವಿರ , ಲಕ್ಷ , ಕೋಟಿ , ಟೆಸ್ಟ್ ಮಾಡಿದಷ್ಟ ಹೆಚ್ಚು ಪಾಸಿಟಿವ್ ಕೇಸುಗಳು,ಚಿಕಿತ್ಸೆ .” ಬೇನಿಗರ ಬೇರ್ಪಡಿಕೆ ” ಅಂದರೆ ಕ್ವಾರಂಟೈನ್ , ಐಸೋಲೇಶನ್. ವಿಪರ್ಯಾಸವೆಂದರೆ ಟೆಸ್ಟ್‌ ಇಲ್ಲದೆಯೂ ಜನರೂ ಬೇರ್ಪಡಿಕೆಯಲ್ಲೆ ಇದ್ದಾರೆ . ಇಡಿ ದೇಶವೆ ಬೇರ್ಪಡಿಕೆಯಲ್ಲಿದ್ದಾಗ ಟೆಸ್ಟ್ ಮಾಡಿ , ಪಾಸಿಟಿವ್ ಜನರನ್ನು ಮತ್ತು ನೆಗೆಟಿವ್ ಮರು ಬೇರ್ಪಡಿಕೆಯಲ್ಲಿ ಯಾವ ಬುಧ್ದಿವಂತೆಕೆಯೂ ಕಾಣಿಸುತ್ತಿಲ್ಲ‌. ಕಿಟ್‌ಗಳಿಗೆ ಹಣದ ಖರ್ಚು, ಅರೋಗ್ಯ ಸಿಬ್ಬಂದಿಯ ಮೇಲಿನ‌ ಹೆಚ್ಚಿನ ಒತ್ತಡ. ರೋಗಿಗಳು ಹೆಚ್ಚಾಗಿ, ಗಂಭೀರವಾದಾಗ ಎಷ್ಟು ಜನ ಆರೋಗ್ಯ ಸಿಬ್ಬಂದಿ‌ ಕೈಗೆ ಸಿಗುತ್ತಾರೆ..? ಎಂಬುದು ಯಕ್ಷ ಪ್ರಶ್ನೆ .

ರೋಗ ಚಿಹ್ನೆಗಳನ್ನು ತೋರಿಸಿ, ತುಂಬ ಕಾಯಿಲೆಯವರನ್ನು ಮಾತ್ರ ಆಸ್ಪತ್ರೆಗಳಿಗೆ ಸೇರಿಸಿ ಚಿಕಿತ್ಸೆ ಮಾಡಬಹುದು. ಹೆಚ್ಚಿನ ಪಾಸಿಟಿವ್ ಸಂಖ್ಯೆಗಳನ್ನು ಇಟ್ಟುಕೊಂಡು ಅದರ ಸುದ್ದಿ ದೇಶದಲ್ಲೆಲ್ಲಾ ಹರಡಿ‌ ಆತಂಕ‌ ಸೃಷ್ಟಿಸುವ ಅಗತ್ಯವಿದೆಯೆ.? ಯುರೋಪ್ ಅಥವಾ ಚೈನಾದಂತೆ ಪರಿಸ್ಥಿತಿ ಉಲ್ಬಣಗೊಂಡರೆ ನಾವು ಏನು ಮಾಡಬಲ್ಲೆವು …? ಗಂಡಾಂತರಕಾಲದಲ್ಲಿ ರಕ್ಷಿಸಲು ವೈದ್ಯ ಸಿಬ್ಬಂದಿಯ ಕೊರತೆಯಾದರೆ ಮಾರಣಹೋಮ ಖಚಿತ. ‌ಹಂದಿ‌ಜ್ವರಕ್ಕೆ ಸಾವಿರಾರು ಹಂದಿಗಳನ್ನು ಕೊಲ್ಲಲಾಯಿತು , ಅದರಂತೆ ಕೋಳಿಗಳು . ಹಾಗೆಯೆ ನಿಪಾ ಜ್ವರಕ್ಕೆ ಹಲವಾರು ಬಾವಲಿಗಳು ಸತ್ತು ಹೋದವು . ಈಗ ಮನುಷ್ಯರ ಸರದಿ . ಬಹುಶಃ ನಿಸರ್ಗ ಸಮತೋಲನಕ್ಕೆ ಮನುಷ್ಯನ ಬಲಿ ಏರಬೇಕೆನೋ . ಅತಿ ಬುಧ್ದಿವಂತ ಪ್ರಾಣಿಯಾದರೂ ನಿಸರ್ಗದ ಮುಂದೆ ಬೇರೆ ಯಾವ ಜೀವಿಗೂ ಮಿಗಿಲಲ್ಲ ಎಂಬುದು ಮನುಷ್ಯನಿಗೆ ಅರಗಿಸಿಕೊಳ್ಳಲಾರದ ಸತ್ಯವೇನೋ . ಇದೆ ಅಹಂ ಬಹುಶಃ ಮನುಷ್ಯರಿಂದ ಇಷ್ಟೆಲ್ಲ ಕೆಲಸ ಮಾಡಿಸುತ್ತಿದೆಯಾ .??

-ಅಬುಯಾಹ್ಯಾ

Dr-Salim-nadaf ಡಾ. ಸಲೀಮ್ ನದಾಫ್‌ ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು ಮೊ.: 8073048415

ಡಾ. ಸಲೀಮ್ ನದಾಫ್‌
ಆರ್ ಪಿ ಮ್ಯಾನ್ಶನ್, ಕಾಡುಗೋಡಿ, ಬೆಂಗಳೂರು

ಮೊ.: 8073048415

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!