ಮೂತ್ರಪಿಂಡ ರೋಗಗಳ ಕುರಿತು ತಪ್ಪು ಕಲ್ಪನೆಗಳು ಮತ್ತು ವಾಸ್ತವ ವಿಷಯಗಳು

ಮೂತ್ರಪಿಂಡ ರೋಗಗಳ ಕುರಿತು ತಪ್ಪು ಕಲ್ಪನೆಗಳು ಅನೇಕ. ಮೂತ್ರಪಿಂಡದ ಕಾಯಿಲೆಗಳು ಮತ್ತು ಡಯಾಲಿಸಿಸ್‌ನ ವಾಸ್ತವ ಸಂಗತಿಗಳನ್ನು ಇಲ್ಲಿ ಚರ್ಚಿಸಲಾಗಿದೆ.

 kidney-arogya.j

1. ಮೂತ್ರಪಿಂಡ ರೋಗ ಇರುವವರು ಬಹಳಷ್ಟು ನೀರು ಕುಡಿಯಬಾರದು ಎಂಬ ತಪ್ಪು ಕಲ್ಪನೆ ಇದೆ. ವಾಸ್ತವ ಎಂದರೆ -ಮೂತ್ರ ವಿಸರ್ಜನೆ ಕಡಿಮೆಯಾದಾಗ ದೇಹದಲ್ಲಿನ ದ್ರವ ಸಮತೋಲನವನ್ನು ಉಳಿಸಿಕೊಳ್ಳಲು ನೀರು ಸೇವನೆಗೆ ನಿರ್ಬಂಧ ಅಗತ್ಯವಾಗಿರುತ್ತದೆ. ಆದರೆ, ಮೂತ್ರಪಿಂಡದಲ್ಲಿ ಕಲ್ಲು ಇರುವ ಮತ್ತು ಸಾಮಾನ್ಯ ಮೂತ್ರಪಿಂಡ ಕಾರ್ಯ ಇರುವವರು ಹೆಚ್ಚಿನ ನೀರು ಕುಡಿಯಲು ಸೂಚಿಸಲಾಗುತ್ತದೆ.

2. ನನಗೆ ಮೂತ್ರಪಿಂಡ ವೈಫಲ್ಯದ ಹೆಚ್ಚಿನ ಲಕ್ಷಣಗಳಿಲ್ಲ. ಆದ್ದರಿಂದ ನನಗೆ ಯಾವುದೇ ಮೂತ್ರಪಿಂಡ ತೊಂದರೆಗಳು ಇಲ್ಲ ಎಂಬ ತಪ್ಪು ಕಲ್ಪನೆಯು ಇರುತ್ತದೆ. ಆದರೆ, ಸೀರಮ್ ಕ್ರಿಯಾಟಿನಿನ್ ಹೆಚ್ಚಳ ಒಂದೇ ಮೂತ್ರಪಿಂಡ ತೊಂದರೆಯನ್ನು ಸೂಚಿಸುತ್ತದೆ. ಸೀರಮ್ ಕ್ರಿಯಾಟಿನಿನ್ 1.6 ಎಂಜಿ/ಡಿಎಲ್ ಎಂದರೆ ಶೇ.50ರಷ್ಟು ಮೂತ್ರಪಿಂಡದ ಕಾರ್ಯ ಈಗಾಗಲೇ ನಷ್ಟವಾಗಿದೆ ಎಂದರ್ಥ. ಶೀಘ್ರವಾಗಿ ಮೂತ್ರಪಿಂಡ ತಜ್ಞರಿಂದ ಪತ್ತೆ ಮತ್ತು ಚಿಕಿತ್ಸೆಯಿಂದ ಹೆಚ್ಚಿನ ಮುನ್ನರಿವು ಲಭಿಸುತ್ತದೆ.

3. ಮೂತ್ರಪಿಂಡದ ಕಲ್ಲುಗಳು ಮಣ್ಣು ಅಥವಾ ಬೀಜಗಳನ್ನು ತಿನ್ನುವುದರಿಂದ ಉಂಟಾಗುತ್ತದೆ ಎಂಬ ತಪ್ಪು ಕಲ್ಪನೆ. ವಾಸ್ತವವೆಂದರೆ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವುದು ಸಂಕೀರ್ಣ ಪ್ರಕ್ರಿಯೆಯಾಗಿರುತ್ತದೆ. ಮೂತ್ರಪಿಂಡದಲ್ಲಿ ಕಲ್ಲು ಇರುವವರು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬಾರದು ಎಂಬ ತಪ್ಪು ಕಲ್ಪನೆ ಇರುತ್ತದೆ. ವಾಸ್ತವದಲ್ಲಿ ಆಹಾರಕ್ರಮದಲ್ಲಿ ಕ್ಯಾಲ್ಸಿಯಂ ನಿರ್ಬಂಧಿಸಿದರೆ ಕಲ್ಲು ಉಂಟಾಗುವ ಅಪಾಯ ಹೆಚ್ಚುತ್ತದೆ. ಮೂತ್ರಪಿಂಡದಲ್ಲಿ ಕಲ್ಲು ಇರುವವರು ಉಪ್ಪು, ಮಾಂಸಾಹಾರ, ಟೊಮ್ಯಾಟೊ, ಗೋಡಂಬಿ, ಡಾರ್ಕ್ ಚಾಕಲೇಟ್, ಹೈ ಕ್ಯಾಲೋರಿ ಆಹಾರಗಳ ಸೇವನೆ ಕಡಿಮೆ ಮಾಡಬೇಕು. ನಿಂಬೆ ಜಾತಿಯ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ಸಾಕಷ್ಟು ಕ್ಯಾಲ್ಸಿಯಂ ಸೇವಿಸಬೇಕು. ದಿನಕ್ಕೆ 2.5 ಲೀಟರ್‍ನಿಂದ 3 ಲೀಟರ್ ನೀರು ಕುಡಿಯಬೇಕು.

4. ಎಲ್ಲಾ ಮೂತ್ರಪಿಂಡ ರೋಗಗಳು ಗುಣವಾಗುವುದಿಲ್ಲ ಎಂಬ ತಪ್ಪು ಕಲ್ಪನೆ ಇದೆ. ಆದರೆ, ವಾಸ್ತವವಾಗಿ, ಶೀಘ್ರ ಪತ್ತೆ ಮಾಡಿ ಅನೇಕ ರೋಗಗಳಿಗೆ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು ಮತ್ತು ಕೆಲವು ರೋಗಗಳಿಗೆ ಚಿಕಿತ್ಸೆಯಿಂದ ಅವುಗಳ ಪ್ರಗತಿಯನ್ನು ನಿಧಾನವಾಗಿಸಬಹುದು.

5. ಒಮ್ಮೆ ಡಯಾಲಿಸಿಸ್ ಮಾಡಿಸಿದರೆ ಮೂತ್ರಪಿಂಡ ವೈಫಲ್ಯ ರೋಗಿಗೆ ಅದು ಖಾಯಂ ಅಗತ್ಯವಾಗುತ್ತದೆ. ವಾಸ್ತವವಾಗಿ, ಇದು ಸುಳ್ಳು. ಎಲ್ಲ ಮೂತ್ರಪಿಂಡ ರೋಗಿಗಳಿಗೆ ಖಾಯಂ ಡಯಾಲಿಸಿಸ್ ಅಗತ್ಯವಿರುವುದಿಲ್ಲ. ತೀವ್ರರೀತಿಯ ಮೂತ್ರಪಿಂಡ ವೈಫಲ್ಯ ತಾತ್ಕಾಲಿಕವಾಗಿದ್ದು, ಸರಿಪಡಿಸಬಹುದಾದ ಮೂತ್ರಪಿಂಡ ರೋಗಿಗಳಲ್ಲಿ ಅಲ್ಪಕಾಲದವರೆಗೆ ಡಯಾಲಿಸಿಸ್ ಅಗತ್ಯವಾಗಬಹುದು. ಖಾಯಂ ಡಯಾಲಿಸಿಸ್ ಭಯದಿಂದ ಡಯಾಲಿಸಿಸ್ ವಿಳಂಬ ಮಾಡುವುದರಿಂದ ಜೀವಕ್ಕೆ ಅಪಾಯ. ದೀರ್ಘಕಾಲದ ಮೂತ್ರಪಿಂಡ ವೈಫಲ್ಯ ರೋಗ ಹಂತ ಹಂತವಾಗಿ ಪ್ರಗತಿಗೊಳ್ಳುತ್ತದೆ ಮತ್ತು ಅದನ್ನು ಸರಿಪಡಿಸಲಾಗದು. ಅಂತಿಮ ಹಂತದ ಈ ರೋಗದಲ್ಲಿ ಜೀವನದುದ್ದಕ್ಕೂ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಅಗತ್ಯವಾಗಬಹುದು.

6. ನನ್ನ ಹತ್ತಿರದ ಬಂಧುವಿಗೆ ನಾನು ಮೂತ್ರಪಿಂಡ ದಾನ ಮಾಡಲಾಗದು. ಇದರಿಂದ ನನ್ನ ಜೀವನಾವಧಿ ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇರುತ್ತದೆ. ಆದರೆ, ತಾಯಿ, ತಂದೆ, ಸೋದರ, ಸೋದರಿ, ಪತಿ, ಪತ್ನಿಯಂತಹ ಹತ್ತಿರದ ಬಂಧುಗಳು ತಮ್ಮ ಮೂತ್ರಪಿಂಡಗಳನ್ನು ಅಗತ್ಯವಿರುವ ಹತ್ತಿರದ ಸಂಬಂಧಿಗೆ ದಾನ ಮಾಡಬಹುದು. ಇದರಿಂದ ಅವರ ಜೀವನಾವಧಿಗೆ ಅಡ್ಡಿಯಾಗದು ಮತ್ತು ಅವರ ಮೂತ್ರಪಿಂಡ ಸರಿಯಾಗಿ ಕೆಲಸ ಮಾಡುತ್ತಿದೆ ಎಂಬುದರ ಖಾತ್ರಿ ಮಾಡಿಕೊಂಡ ನಂತರವೇ ಕಸಿ ಮಾಡಲಾಗುತ್ತದೆ.

7. ಡಯಾಲಿಸಿಸ್ ಮೂತ್ರಪಿಂಡ ವೈಫಲ್ಯವನ್ನು ಗುಣಪಡಿಸುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಆದರೆ, ಮೂತ್ರಪಿಂಡ ವೈಫಲ್ಯ ಇರುವ ರೋಗಿಗೆ ಜೀವ ಉಳಿಸುವ ಪರಿಣಾಮಕಾರಿ ಚಿಕಿತ್ಸೆ ಮಾತ್ರ ಈ ಡಯಾಲಿಸಿಸ್ ಆಗಿರುತ್ತದೆ. ದೇಹದ ಹೆಚ್ಚಿನ ದ್ರವಗಳನ್ನು ಮತ್ತು ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ಮೂತ್ರಪಿಂಡ ವಿಫಲವಾಗಿದ್ದಾಗ ಡಯಾಲಿಸಿಸ್ ಅವುಗಳನ್ನು ಹೊರಗೆ ಹಾಕುತ್ತದೆ.

dr-Rangegowda

ಡಾ. ಬಿ. ಸಿ. ರಂಗೇಗೌಡ
ತುಮಕೂರು ಕಿಡ್ನಿ ಸ್ಟೋನ್ ಮತ್ತು ಯುರಾಲಜಿ ಸೆಂಟರ್
ಮೊಬೈಲ್ : 98869 82791

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!