ಸ್ವಾದ – ಆಹಾರ ಸಂಹಿತೆ : ಆರೋಗ್ಯವನ್ನು ನಿಸರ್ಗಮೂಲವಾಗಿಯೇ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಕೃತಿ

ಸ್ವಾದ – ಆಹಾರ ಸಂಹಿತೆ ಆರೋಗ್ಯವನ್ನು ನಿಸರ್ಗಮೂಲವಾಗಿಯೇ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಕೃತಿ. ನಿರೋಗಿಯಾಗಿರಲು ಅಗತ್ಯವಾದ ಆಹಾರ ಕ್ರಮವನ್ನು ವಿವರಿಸುತ್ತಾ, ಕಾಲಕ್ಕೆ ತಕ್ಕಂತೆ ಆಧುನಿಕ ವೈದ್ಯ ವಿಜ್ಞಾನದ ಸಂತುಲಿತ ಅಳವಡಿಕೆಯಿಂದ ಹೇಗೆ ಮನುಕುಲಕ್ಕೆ ಒಳಿತಾಗುತ್ತದೆ ಎಂಬುದನ್ನು ಎತ್ತಿ ಹಿಡಿಯುವ ಒಂದು ಕೃತಿಯಾಗಿದೆ.

swada-ahara-samhite/ ಸ್ವಾದ - ಆಹಾರ ಸಂಹಿತೆ : ಆರೋಗ್ಯವನ್ನು ನಿಸರ್ಗಮೂಲವಾಗಿಯೇ ಕಾಪಾಡಿಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸುವ ಕೃತಿ

ಕೃತಿಕಾರ : ಡಾ. ಮುರಲೀ ಮೋಹನ್ ಚೂಂತಾರು
ವಿಮರ್ಶೆ : ಡಾ. ವಸಂತ ಕುಮಾರ ಪೆರ್ಲ

ಇತ್ತೀಚೆಗೆ ಪ್ರಕಟವಾಗಿರುವ ಡಾ. ಮುರಲೀ ಮೋಹನ್ ಚೂಂತಾರು ಅವರ ‘ಸ್ವಾದ- ಆಹಾರ ಸಂಹಿತೆ’ ಎಂಬ ಕೃತಿಯು ಸಾವಿರಾರು ವರ್ಷಗಳಿಂದಲೂ ಭಾರತೀಯರ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬಂದ ನಿಸರ್ಗಮೂಲ ಪದ್ಧತಿಯಾದ ಶಾಕಾಹಾರ, ಮಿತಾಹಾರ, ಪಥ್ಯ, ಉಪವಾಸ ಮುಂತಾದ ಆಯುರ್ವೇದ ಸಿದ್ಧಾಂತಗಳನ್ನು ಮೇಲುದನಿಯಿಂದ ಮಂಡಿಸುತ್ತಾ, ಜೊತೆಗೆ ನಿರೋಗಿಯಾಗಿರಲು ಅಗತ್ಯವಾದ ಆಹಾರ ಕ್ರಮವನ್ನು ವಿವರಿಸುತ್ತಾ, ಕಾಲಕ್ಕೆ ತಕ್ಕಂತೆ ಆಧುನಿಕ ವೈದ್ಯ ವಿಜ್ಞಾನದ ಸಂತುಲಿತ ಅಳವಡಿಕೆಯಿಂದ ಹೇಗೆ ಮನುಕುಲಕ್ಕೆ ಒಳಿತಾಗುತ್ತದೆ ಎಂಬುದನ್ನು ಎತ್ತಿ ಹಿಡಿಯುವ ಒಂದು ಕೃತಿಯಾಗಿದೆ. ಪ್ರಕೃತಿಯ ಶಿಶುವಾಗಿರುವ ಮನುಷ್ಯ ಋತುಮಾನಕ್ಕೆ ತಕ್ಕಂತೆ ಹದವರಿತು ಯುಕ್ತ ಆಹಾರ ಸೇವನೆ ಮಾಡಿದರೆ ಹೇಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದನ್ನು ಅತ್ಯಂತ ಸರಳವಾಗಿ ಇಲ್ಲಿ ವಿವರಿಸಲಾಗಿದೆ.

ಆಹಾರ ಸೇವನೆಯ ಕ್ರಮ ಅರಿಯದೆ ಯದ್ವಾತದ್ವಾ ತಿನ್ನುತ್ತಿರುವುದೇ ಇಂದಿನ ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಮೂಲ ಎಂಬುದನ್ನು ಧ್ವನಿ ಪೂರ್ಣವಾಗಿ ಪ್ರತಿಪಾದಿಸಲಾಗಿದೆ. ದೈಹಿಕ ಆರೋಗ್ಯ, ನಾನಸಿಕ ಆರೋಗ್ಯ ಮತ್ತು ಸಾಮಾಜಿಕ ಆರೋಗ್ಯ ಈ ಮೂರೂ ಚೆನ್ನಾಗಿದ್ದಾಗ ಮಾತ್ರ ನಾವು ಒಂದು ಆರೋಗ್ಯವಂತ ಸುಖಿ ರಾಷ್ಟ್ರವನ್ನು ಕಟ್ಟಲು ಸಾಧ್ಯ. ಆಹಾರ, ಔಷಧ, ವ್ಯಾಯಾಮ, ಯೋಗ, ಪೂಜೆ, ಧ್ಯಾನ, ಆಧ್ಯಾತ್ಮಿಕತೆ, ದೇವಾಲಯಗಳು, ಪ್ರಾರ್ಥನಾ ಮಂದಿರಗಳು ಇವೆಲ್ಲವೂ ಸ್ವಸ್ಥ ಸಮಾಜದ ನಿರ್ಮಾಣದ ಉದ್ಧೇಶಕ್ಕಾಗಿ ಇರುವಂಥವು. ಜೊತೆಗೆ ಶಿಕ್ಷಣ, ಕಲೆ, ಸಾಹಿತ್ಯ ಕೂಡ.

ಸರ್ವರ ಒಳಿತು ಮತ್ತು ಸಾಮಾಜಿಕ ಕಳಕಳಿ ಇಲ್ಲದ ಯಾವ ಜ್ಞಾನ ಸಂಪಾದಿಸಿ ಏನು ಪ್ರಯೋಜನ? ಕೇವಲ ಔಷಧ ನೀಡುವುದಷ್ಟೇ ವೈದ್ಯರ ಕೆಲಸವಲ್ಲ. ‘ಸೇವೆ’ ಎಂಬ ವಿಶಾಲ ಅರ್ಥ ಅದಕ್ಕಿದೆ. ಸಮಾಜಕ್ಕೆ ಆರೋಗ್ಯ ಶಿಕ್ಷಣ ನೀಡುವುದೂ ವೈದ್ಯಕೀಯ ಸೇವೆಯ ಇನ್ನೊಂದು ಜವಾಬ್ದಾರಿಯಾಗಿದೆ. ತುಂಬ ವ್ಯಾಪ್ತವಾದ ಭಿತ್ತಿಯಲ್ಲಿ ಆರೋಗ್ಯದ ಮಹತ್ವವನ್ನು ವಿವರಿಸುವುದು ಮತ್ತು ಆ ಬಗೆಗಿನ ಶಿಕ್ಷಣವನ್ನು ಸಮಾಜಕ್ಕೆ ನೀಡುವುದು ಇಂದು ವೈದ್ಯರು ಮಾಡಬೇಕಾದ ಅತ್ಯಗತ್ಯ ಕೆಲಸವಾಗಿದೆ. ದಂತ ವೈದ್ಯರಾಗಿರುವ ಮುರಲೀ ಮೋಹನ್ ಚೂಂತಾರು ಅವರು ತನ್ನ ಚೌಕಟ್ಟನ್ನು ತುಸು ವಿಸ್ತರಿಸಿಕೊಂಡು ಈ ಕರ್ತವ್ಯವನ್ನು ನಿಭಾಯಿಸುತ್ತಿರುವುದು ಸಂತೋಷ ಕೊಡತಕ್ಕ ವಿಷಯವಾಗಿದೆ.

ಡಾ. ಚೂಂತಾರು ಅವರು ದಂತವೈದ್ಯರಾಗಿರುವುದರಿಂದ ಮನುಷ್ಯನ ಮೂವತ್ತೆರಡು ಹಲ್ಲುಗಳಿಗೆ ಸಂವಾದಿಯಾಗಿ ಮೂವತ್ತೆರಡು ಲೇಖನಗಳನ್ನು ಇಲ್ಲಿ ನೀಡಿದ್ದಾರೆ. ವಯಸ್ಸಿಗೆ ತಕ್ಕಂತೆ ತಿನ್ನಿ, ಸಕ್ಕರೆ ಎಂಬ ಬಿಳಿ ವಿಷ, ನೀರು ಕುಡಿದು ನಿರೋಗಿಗಳಾಗಿ, ಖನಿಜಗಳ ಕಣಜ ಕಣಿಲೆ, ಪಪ್ಪಾಯಿ ಹಣ್ಣು, ಫರಂಗಿ ಹಣ್ಣು, ಫರಂಗಿ ಹಣ್ಣು(ಅನನಾಸು), ಅಮೃತ ಸದೃಶ ಎಳನೀರು, ಕಬ್ಬಿನ ಹಾಲು ಎಂಬ ಜೀವರಸ, ಔಷಧೀಯ ಗುಣದ ನೆಲ್ಲಿಕಾಯಿ, ಅಮೃತ ಸದೃಶ ಜೀರಿಗೆ ನೀರು ಮುಂತಾದ ಲೇಖನಗಳು ಕುತೂಹಲದಾಯಕವಾಗಿದೆ. ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ಹಲವು ಹೊಸ ವಿಷಯಗಳಿವೆ.

ಋತುಮಾನಕ್ಕೆ ಅನುಸರಿಸಿ ಪ್ರಕೃತಿಯಲ್ಲಿ ದೊರಕುವ ಸೊಪ್ಪು ಚಿಗುರು, ತರಕಾರಿ, ಗೆಡ್ಡೆಗೆಣಸು, ಹಣ್ಣು ಹಂಪಲು, ದ್ರವ ಯುಕ್ತ ಆಹಾರಗಳನ್ನು ಹೇಗೆ ಎಷ್ಟು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬಹುದು ಎಂಬುದು ಈ ಕೃತಿಯ ಮೂಲ ಅಂಶವಾಗಿದೆ. ಸರಳವಾದ ಭಾಷೆ, ವಿಷಯ ಮುಖಿಯಾದ ನಿರೂಪಣೆ, ಸಂಕ್ಷಿಪ್ತತೆ ಮತ್ತು ಲೇಖನಕ್ಕ ಪೂರಕವಾದ ಚಿತ್ರಗಳನ್ನು ಅಳವಡಿಸಿಕೊಂಡಿರುವುದು ಉಲ್ಲೇಖನೀಯ ಸಂಗತಿಯಾಗಿದೆ. ಸುಂದರವಾದ ಮುದ್ರಣ ಕೃತಿಯನ್ನು ಆಕರ್ಷಕವಾಗಿಸಿದೆ.

Also Read: ಆರೋಗ್ಯ ವೃದ್ದಿಸುವ ಹಣ್ಣುಗಳು ಆರೋಗ್ಯ ವೃದ್ದಿಸುವ ಹಣ್ಣುಗಳು 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!