ಡಾ.ಚೂಂತಾರು ಅವರಿಗೆ ವೈದ್ಯ ಸಾಹಿತ್ಯ ಪ್ರಶಸ್ತಿ

ಡಾ. ಚೂಂತಾರು ಅವರಿಗೆ ಡಾ. ಪಿ.ಎಸ್ ಶಂಕರ ಪ್ರತಿಷ್ಠಾನ ಕೊಡಮಾಡುವ 2021 ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಡಾ|| ಚೂಂತಾರು ಅವರಿಗೆ ವೈದ್ಯ ಸಾಹಿತ್ಯ ಪ್ರಶಸ್ತಿ

ಕಲಬುರಗಿ: ದಂತ ವೈದ್ಯ ಹಾಗೂ ವೈದ್ಯ ಸಾಹಿತಿ ಡಾ. ಮುರಲೀ ಮೋಹನ್ ಚೂಂತಾರು ಅವರಿಗೆ ಕಲಬುರಗಿಯ ಡಾ. ಪಿ.ಎಸ್ ಶಂಕರ ಪ್ರತಿಷ್ಠಾನ ಕೊಡಮಾಡುವ ೨೦೨೧ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ದಿನಾಂಕ 01-01-2022, ಶನಿವಾರ ಕಲಬುರಗಿಯ ವಿಶ್ವೇಶ್ವರಯ್ಯ ಭವನದಲ್ಲಿ ಪ್ರಧಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಎಂ.ಕೆ ಸುದರ್ಶನ್ ಅವರಿಗೆ ವೈದ್ಯಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಜೆ.ಎಂ ವಿಜಯ ಕುಮಾರ ಅತಿಥಿಯಾಗಿದ್ದರು. ಪ್ರತಿಷ್ಠಾನದ ಅಧ್ಯಕ್ಷೆ ಅಂಬಿಕಾ ಶಂಕರ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ವಿವಿ ಕುಲಪತಿ ಪ್ರೊ.ದಯಾನಂದ ಅಗಸರ, ಹಿರಿಯ ವೈದ್ಯರಾದ ಡಾ. ಮಹಾದೇವ, ಡಾ. ಶರಣಬಸಪ್ಪ ಹರವಾಳ, ಬಸವರಾಜ ಭೀಮಳ್ಳಿ, ಡಾ. ಪಿ.ಎಸ್. ಶಂಕರ ಮತ್ತು ಪ್ರತಿಷ್ಠಾನದ ಕರ‍್ಯದರ್ಶಿ ಶ್ರೀ ನರೇಂದ್ರ ಬಡಶೇಷಿ ಮೊದಲಾದವರು ಉಪಸ್ಥಿತರಿದ್ದರು.

ಡಾ.ಮುರಲೀ ಮೋಹನ್ ಚೂಂತಾರು ಅವರ ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ನಿರಂತದ ಸೇವೆ ಮತ್ತು ಜನ ಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ವೈದ್ಯಕೀಯ ಶಿಬಿರಗಳ ಆಯೋಜನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಡಾ. ಚೂಂತಾರು ಅವರು ಈವರೆಗೆ ೧೨ ವೈದ್ಯಕೀಯ ಕೃತಿಗಳನ್ನು ರಚಿಸಿರುತ್ತಾರೆ ಮತ್ತು ಸುಮಾರು ೩೦೦ಕ್ಕೂ ಹೆಚ್ಚು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿರುತ್ತಾರೆ.

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!