ಸುಶಾಂತ್ ಸಾವಿಗೆ ಕಾರಣವಾಯ್ತಾ – ಬೈಪೋಲಾರ್ ಡಿಸಾರ್ಡರ್…?

ಸುಶಾಂತ್ ಸಾವಿಗೆ  ಬೈಪೋಲಾರ್ ಡಿಸಾರ್ಡರ್ ಕಾರಣವಾಯ್ತಾ ? ಒಂದು ವರದಿಯ ಪ್ರಕಾರ ಆತನು ‘ಬೈಪೋಲಾರ್’ ಕಾಯಿಲೆಯಿಂದ ಬಳಲುತ್ತಿದ್ದ ಎಂದೂ ಹಾಗೂ ಅವನದನ್ನು ಎಲ್ಲರಿಂದ ಮುಚ್ಚಿಟ್ಟಿದ್ದನಂತೆ! 

ಸುಶಾಂತ್ ಸಾವಿಗೆ ಕಾರಣವಾಯ್ತಾ - ಬೈಪೋಲಾರ್ ಡಿಸಾರ್ಡರ್...?ಬಾಲಿವುಡ್‍ನ ಉದಯೋನ್ಮುಖ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್‍ ಆತ್ಮಹತ್ಯೆ ಪ್ರಕರಣ ಎಲ್ಲರಿಗೂ ಗೊತ್ತಿದೆ. ಆದರೆ ಈಗ ಬಂದಿರುವ ಒಂದು ವರದಿಯ ಪ್ರಕಾರ ಆತನು ‘ಬೈಪೋಲಾರ್’ ಕಾಯಿಲೆಯಿಂದ ಬಳಲುತ್ತಿದ್ದ ಎಂದೂ ಹಾಗೂ ಅವನದನ್ನು ಎಲ್ಲರಿಂದ ಮುಚ್ಚಿಟ್ಟಿದ್ದನಂತೆ! ಆದರೆ ಸುಶಾಂತ್‍ನ ತಂದೆ ಹೇಳುವ ಪ್ರಕಾರ, ಸುಶಾಂತನ ಪ್ರೇಯಸಿ ರಿಯಾ ಚಕ್ರವರ್ತಿಗೆ ಆ ವಿಷಯ ಗೊತ್ತಿತು ಎನ್ನಲಾಗುತ್ತಿದೆ..!

“ಸುಶಾಂತ್‍ಗೆ ಬೈಪೋಲಾರ್ ಡಿಸಾರ್ಡರ್ ಇದೆಯೆಂದು ಬಹಿರಂಗಪಡಿಸುತ್ತೇನೆ ಎಂದು ರಿಯಾ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದಳು. ಇದರಿಂದಾಗಿ ಸುಶಾಂತ್‍ ಆತ್ಮಹತ್ಯೆ ಮಾಡಿಕೊಂಡ.”ಎನ್ನುತ್ತಾರವರು. ಆ ಬಗ್ಗೆ ಇನ್ನೂ ತನಿಖೆ ಪ್ರಗತಿಯಲ್ಲಿದ್ದು  ಆ ಡೆತ್ ಮಿಸ್ಟರಿ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಬೈಪೋಲಾರ್ ಡಿಸಾರ್ಡರ್ ಕಾಯಿಲೆಯ ಬಗ್ಗೆ ಇಲ್ಲಿ ಕಿರು ಮಾಹಿತಿ ನೀಡಲಾಗಿದೆ.

ಬೈಪೋಲಾರ್ ಡಿಸಾರ್ಡರ್ ಕಾಯಿಲೆ:

ಬೈಪೋಲಾರ್ ಡಿಸಾರ್ಡರ್ ಕಾಯಿಲೆಯು ಒಂದು ಬಗೆಯ ಮಾನಸಿಕ ಸಮಸ್ಯೆ. ಇದನ್ನು ಹೊಂದಿರುವವರು ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದೇ ಇಲ್ಲ. ಕೆಲವೊಮ್ಮೆ ಅವರ ಮಾನಸಿಕ ಸ್ಥಿತಿ ಕೆರಳಿದಾಗ, ತಾವು ಏನು ಮಾಡುತ್ತಿದ್ದೇವೆ ಅನ್ನುವುದೂ ಅವರಿಗೆ ಗೊತ್ತಾಗುವುದಿಲ್ಲ. ಈ ಕ್ಷಣ ಮಾಡಿದ ಕೆಲಸ ಮುಂದಿನ ಕ್ಷಣದಲ್ಲಿ ಮರೆತು ಹೋಗಲೂ ಬಹುದು. ಈ ಕಾಯಿಲೆಗೆ ತುತ್ತಾದವರು ಹೈ ಎನರ್ಜಿ, ಭಯಂಕರ ಚಟುವಟಿಕೆ ಪ್ರದರ್ಶಿಸುತ್ತಿರುತ್ತಾರೆ. ಇವರಿಗೆ ನಿದ್ದೆ ಹೆಚ್ಚು ಬೇಕಾಗುವುದಿಲ್ಲ, ಅವರು ಸರಿಯಾಗಿ ನಿದ್ರಿಸುವುದೇ ಇಲ್ಲ. ಒಂದುರೀತಿಯಲ್ಲಿ ವಾಸ್ತವದ ಸ್ಪರ್ಶವನ್ನೇ ಕಳೆದುಕೊಳ್ಳುತ್ತಾರೆ. ಸದಾ ಕನಸಿನ ಜಗತ್ತಿನಲ್ಲಿ, ಅವಾಸ್ತವಿಕ ಜಗತ್ತಿನಲ್ಲಿ ಜೀವಿಸುತ್ತಿರುತ್ತಾರೆ. ಇವರಿಗೆ ಡಿಪ್ರೆಶನ್‍ ಉಂಟಾದಾಗ ಖಿನ್ನತೆ ಬಹುವಾಗಿ ಕಾಡುತ್ತದೆ.

suicide-sushanth-singh-ಎಲ್ಲ ಚಟುವಟಿಕೆಗಳಲ್ಲಿ ನಿರಾಸಕ್ತಿ, ಸುಸ್ತು ತೋರ್ಪಡಿಸುತ್ತಾರೆ. ಅಂತಹ ಮೂಡ್ ಸ್ವಿಂಗ್ ವ್ಯತ್ಯಾಸಗಳು ಕೇವಲ ದಿನಗಳು ಮಾತ್ರವಲ್ಲ ತಿಂಗಳುಗಟ್ಟಲೆ ಇರಬಹುದು. ಈ ಕಾಯಿಲೆ ಹೊಂದಿದವರು ವೃದ್ಧಾಪ್ಯದಲ್ಲಿ ಪಾರ್ಕಿನ್‍ಸನ್, ಅಲ್ಝೀಮರ್ಸ್ ಮುಂತಾದ ಮರೆಗುಳಿ ನರವ್ಯೂಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಬೈಪೋಲಾರ್ ಡಿಸಾರ್ಡರ್ ಹೊಂದಿರುವವರ ಮೂಡ್‍ ಕ್ಷಣ ಕ್ಷಣಕ್ಕೂ ಅತ್ತ ಇತ್ತ ತೂಗುಯ್ಯಾಲೆ ಆಗುತ್ತಿರುತ್ತದೆ. ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರುವುದಿಲ್ಲ. ಸಣ್ಣ ಪುಟ್ಟ ವೈಫಲ್ಯಗಳಿಗೂ ಕೊರಗುತ್ತಾ, ಆತ್ಮಹತ್ಯೆ ಮಾಡಿಕೊಳ್ಳುವ ಲೆವೆಲ್ಲಿಗೆ ಹೋಗುತ್ತಾರೆ. ಅವರಿಗೆ ಆ ಕ್ಷಣ ಒಳ್ಳೆಯ ಮಾತು, ಪ್ರೀತಿ ಸಿಗಬೇಕು.

ಕೌನ್ಸೆಲಿಂಗ್ ಮತ್ತು ಔಷಧಗಳ ಮೂಲಕ  ನಿಯಂತ್ರಣ:

ಈ ಕಾಯಿಲೆ ನಿಜಕ್ಕೂ ಯಾಕೆ ಬರುತ್ತದೆ ಅನ್ನುವುದು ಗೊತ್ತಿಲ್ಲ. ಆದರೆ ಅನುವಂಶೀಯತೆ, ಪರಿಸರದ ನಕಾರಾತ್ಮಕ ಪ್ರಭಾವ, ಮೆದುಳಿನಲ್ಲಿ ಆಗಿರುವ ಸಣ್ಣಪುಟ್ಟ ನರ ಪರಿವರ್ತನೆ, ಹಾರ್ಮೋನ್‍ ಅಸಮತೋಲನ ಹಾಗೂರಾಸಾಯನಿಕ ಪ್ರಚೋದನೆಗಳು ಇತ್ಯಾದಿ ಹಲವು ಕಾರಣಗಳು ಒಟ್ಟಾಗಿ ಈ ಕಾಯಿಲೆ ಬರಬಹುದು. ಕಾಯಿಲೆಗೆ ಜೀವನಪೂರ್ತಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಆದರೆ ಕೌನ್ಸೆಲಿಂಗ್ ಮತ್ತು ಔಷಧಗಳ ಮೂಲಕ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಖಿನ್ನತೆಯಲ್ಲಿರುವವರ ಬಳಿ  ಒಳ್ಳೆಯ ಮಾತುಗಳನ್ನಾಡುವುದು, ಅವರ ಜೊತೆಗೆ ನಾವಿರುತ್ತೇವೆ ಎನ್ನುವ ಬೆಂಬಲವೇ ಅವರಿಗೆ ಉತ್ತಮ ಚಿಕಿತ್ಸೆ ಆಗಬಲ್ಲುದು.

Watch our video: STRESS MANAGEMENT DURING COVID-19

Also Read: ಮನೋ ಒತ್ತಡವನ್ನು ಹೇಗೆ ನಿಭಾಯಿಸಬಹುದು ?

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!