Health Vision

Health Vision

SUBSCRIBE

Magazine

Click Here

ಜನರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ?

ಸೆಪ್ಟೆಂಬರ್ 10, 2019-ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನ

ಸುಮಾರು 50 ವರ್ಷಗಳ ಹಿಂದೆ ಕಾಲೇಜಿನಲ್ಲಿ ನಾನು ಓದುತ್ತಿದ್ದಾಗ ಒಬ್ಬ ಮಿತ್ರ ವಿಷ ಕುಡಿದು ಆಸ್ಪತ್ರೆಯಲ್ಲಿ ಮಾತನಾಡಲಾಗದ ಗಂಭೀರ ಸ್ಥಿತಿಯಲ್ಲಿ ಇದ್ದಾಗ ಆತನನ್ನು ಕೇಳಿದೆ ಏಕೆ ವಿಷ ಕುಡಿದೆ? ಆತ ಬರೆದು ಉತ್ತರಿಸಿದ “ನಾನು ಪ್ರೀತಿಸಿದ ಹುಡುಗಿ ನನಗೆ ಕೈ ಕೊಟ್ಟಳು. ಅದಕ್ಕೆ ಸಾಯಬೇಕೆಂದು ವಿಷ ಕುಡಿದೆ”. ನನ್ನ ಈ ಮಿತ್ರನ ಕಥೆ ಕೇಳಿ ನನಗೆ ಆಘಾತವಾಯಿತು. ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ ಈತ ಪ್ರೇಮ ವೈಫಲ್ಯದಿಂದ ಸಾಯ ಬಯಸಿದ. ಆದರೆ ವಿಧಿ ಆತನಿಗೆ ಮರಣ ಕೊಡದೆ ಧ್ವನಿ ಕಿತ್ತುಕೊಂಡು ಅಜೀವ ಶವದಂತಾದ ಈತ. ಇನ್ನೊಬ್ಬ ಮಿತ್ರ ರೈಲ್ವೆ ಕಂಬಿಯ ಮೇಲೆ ಮಲಗಿ ರೈಲು ಹಾದು ಹೋಗುವ ತನಕ ಯೋಚನೆ ಮಾಡುತ್ತಿದ್ದ, “ದೇವರು ಇದ್ದಾನೋ ಇಲ್ಲವೋ? ಆತ ಇದ್ದರೆ ನನ್ನನ್ನು ಈ ರೈಲು ಸಾಯಿಸುವುದಿಲ್ಲ”. ಆದರೆ ಈ ಜಿಜ್ಞಾಸೆಯಲ್ಲಿ ನನ್ನ ಮಿತ್ರ ರೈಲಿನಿಂದ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ. ಹೀಗೆ ಅಮೂಲ್ಯವಾದ ಜೀವವನ್ನು ಹಾಗೂ ಜೀವನವನ್ನು ಮುಗಿಸಿಕೊಳ್ಳಲು ಹೋಗಿ, ಇತ್ತ ಜೀವವೂ ಹೋಗದೇ, ಜೀವನವೂ ಭೀಬತ್ಸವಾಗಿರುವ ಎಷ್ಟೋ ಪ್ರಕರಣಗಳನ್ನು ನಾವು ಕಂಡಿದ್ದೇವೆ, ಕೇಳಿದ್ದೇವೆ, ಓದಿದ್ದೇವೆ. ಹಾಗಾದರೆ ಆತ್ಮಹತ್ಯೆ ದಾರಿಯನ್ನು ಜನ ಯಾಕೆ ತುಳಿಯುತ್ತಾರೆ?
ದೀರ್ಘ ಆಯುಷ್ಯ ಹೊಂದಿ ಚೆನ್ನಾಗಿ ಬಾಳಿ ಎಂದು ನಮ್ಮ ಹಿರಿಯರ ಆಶೀರ್ವಾದ ಹೇಳುತ್ತೆ. ಆದರೆ ವಿಶ್ವದಲಿ,್ಲ ನಮ್ಮ ದೇಶದಲ್ಲಿ, ಇನ್ನೂ ತಾರುಣ್ಯಾವಸ್ಥೆಯಲ್ಲೇ ಅನೇಕ ಯುವಜನ, ಆತ್ಮಹತ್ಯೆಯೇ ಅಂತಿಮ ಎಂದೆಂದುಕೊಳ್ಲುತ್ತಿದ್ದಾರೆ. ಹದಿಹರೆಯ ಅಪಾಯಕಾರಿ. ಕಾಲಕಾಲಕ್ಕೆ ಸತತ ಬೆಂಬಲ, ಕೌಂಟುಂಬಿಕ ಆಸರೆ, ಸರಿಯಾದ ಮಾರ್ಗದರ್ಶನ ಇಲ್ಲದೇ, ಹೂವಾಗಿ ಅರಳಿ ಜೀವನ ಸವಿಯುವ ಮುನ್ನವೇ, ಮೊಗ್ಗಿನಾವಸ್ಥೆಯಲ್ಲೇ ಮುರುಟಿ ಹೋಗುವ ಜೀವಗಳನ್ನು ತಡೆಯುವುದು, ಅತ್ಯಂತ ತುರ್ತು ಬೇಡಿಕೆ. ಮೊಬೈಲ್ ಕೊಡಿಸಲಿಲ್ಲ, ಪಾಕೆಟ್ ಮನಿ ಕೊಡಲಿಲ್ಲ. ಪರೀಕ್ಷೆಲಿ ಫೇಲು, ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಲವ್ ಫೇಲ್ಯುಯರ್, ವಿಷಮ ದಾಂಪತ್ಯ, ಜೊತೆಗಾರ, ಜೊತೆಗಾರ್ತಿಯ ಅಕ್ರಮ ಸಂಬಂಧ, ಭಾರೀ ಸಾಲ ಮರು ಪಾವತಿ, ಕಟ್ಟಿದ ಸಾಮ್ರಾಜ್ಯ ಕುಸಿಯುತ್ತಿರುವ ಭೀತಿ, ಇವೇ ಮುಂತಾದ ಹಲವು ಕಾರಣಗಳ ಪಟ್ಟಿ ಇಲ್ಲಿದೆ.
ಇಂಡಿಯನ್ ಜರ್ನಲ್ ಆಫ್ ಸೈಕಿಯಾಟ್ರಿಯಲ್ಲಿ 2007ರ ಏಪ್ರಿಲ್ ಜೂನ್ ಸಂಚಿಕೆಯಲ್ಲಿ ಬಂದಿರುವ, ಲಕ್ಷ್ಮೀ ವಿಜಯಕುಮಾರ್ ಅವರ ಲೇಖನದ ಕೆಲವು ಸಾಲುಗಳನ್ನೂ ಈ ಲೇಖನದಲ್ಲಿ ಉಲ್ಲೇಖಿಸ ಬಯಸುವೆ. “ನಮ್ಮ ದೇಶದಲ್ಲಿ ಪ್ರತೀ ವರ್ಷ 1 ಲಕ್ಷಕ್ಕಿಂತ ಹೆಚ್ಚು ಜೀವಗಳು ಆತ್ಮಹತ್ಯೆಯಿಂದ ಮಾಯವಾಗುತ್ತವೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ, ಆತ್ಮಹತ್ಯೆ ದರ 15ಕ್ಕಿಂತ ಹೆಚ್ಚು. ಹೆಚ್ಚಿನ ಅಕ್ಷರತೆ, ಉತ್ತಮ ವರದಿ, ವ್ಯವಸ್ಥೆ, ಕಡಿಮೆ ಹೊರಗಿನ ಆಕ್ರಮಣ, ಹೆಚ್ಚಿರುವ ಸಾಮಾಜಿಕ ಆರ್ಥಿಕ ಸ್ಥಾನ ಹಾಗೂ ಅತಿಹೆಚ್ಚು ನಿರೀಕ್ಷೆಗಳೇ ಈ ಸಮಸ್ಯೆಯ ಮೂಲ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳುವಂತೆ 2015ರಲ್ಲಿ ರೈತರ ಗರಿಷ್ಠ ಆತ್ಮಹತ್ಯೆಗಳು ನಡೆದ ರಾಜ್ಯಗಳು ಮಹಾರಾಷ್ಟ್ರ (3030), ತೆಲಂಗಾಣ (1358), ಕರ್ನಾಟಕ (1197), ಮಧ್ಯಪ್ರದೇಶ(581), ಆಂಧ್ರಪ್ರದೇಶ (516) ಹಾಗೂ ಛತ್ತೀಸ್‍ಗಡ (854).
ಈ ವರ್ಷದ ಜೂನ್ 1ರಂದು ಕಂಡು ಬಂದಂತೆ ರೈತರ ಆತ್ಮಹತ್ಯೆಗಳು 45%ರಷ್ಟು ಕಡಿಮೆ ಆಗಿದೆಯಂತೆ. 2015-16 ಹಾಗೂ 2018-19 ಅವಧಿಯಲ್ಲಿ, 3737 ರೈತರು, ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರರ್ಥ ಪ್ರತಿದಿ£ ಸರಾಸರಿ ಇಬ್ಬರ ಆತ್ಮಹತ್ಯೆ. ಪತ್ರಿಕಾ ವರದಿಗಳನ್ನು ಗಮನಿಸಿದರೆ ಭಾರತದಲ್ಲಿ ಆತ್ಮಹತ್ಯೆಯ ಪ್ರಮಾಣ; 1 ಲಕ್ಷ ಜನಸಂಖ್ಯೆಗೆ ಸರಾಸರಿ 30.7 ಆತ್ಮಹತ್ಯೆಗಳು. ಕೇರಳ ಹಾಗೂ ತಮಿಳುನಾಡುಗಳಲ್ಲಿ ಪುರುಷರ ಆತ್ಮಹತ್ಯೆ ಸಂಖ್ಯೆ ಹೆಚ್ಚು. 2016ರಲ್ಲಿ ಭಾರತದಲ್ಲಿ 2,30,300ರ ಆತ್ಮಹತ್ಯೆಗಳಾಗಿವೆ. 1990ರಲ್ಲಿ ಇದು 1,64,400 ಇತ್ತು. ಆದರೆ ಕಳೆದ 25 ವರ್ಷಗಳಲ್ಲಿ ಮಹಿಳೆಯ ಆತ್ಮಹತ್ಯೆ ಕಡಿಮೆಯಾಗಿದೆ ಎಂದು ಇನ್ನೊಂದು ವರದಿ ಹೇಳುತ್ತದೆ. 2015ರ ಸಂಖ್ಯೆಯನ್ನು, 2030ರೊಳಗೆ 1/3 ಪ್ರಮಾಣಕ್ಕೆ ಇಳಿಸಬೇಕೆಂಬುದು ವಿಶ್ವ ಸಂಸ್ಥೆ ಗುರಿ.
ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ ರಾಖಿ ದಾಂಡೋನ ಹೇಳುವಂತೆ “2016ರಲ್ಲಿ 15ರಿಂದ 29 ವರ್ಷಗಳ ವಯೋಮಿತಿಯವರು. ಬಾಲಕಿಯರಿಗೆ 15ರಿಂದ 19 ವರ್ಷ ಅತ್ಯಂತ ಮುಖ್ಯ. ಹೀಗಾಗಿ ನಮ್ಮ ದೇಶದಲ್ಲಿ ರಾಷ್ಟ್ರೀಯ ಆತ್ಮಹತ್ಯೆ ತಡೆ ಯೋಜನೆ ಬೇಕು.” ಇಡೀ ದೇಶದಲ್ಲಿ ಗಮನಿಸಿದರೆ, ಪ್ರತೀ 1 ಲಕ್ಷ ಮಹಿಳಯರಲ್ಲಿ 15 ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿಶ್ವದ ಪ್ರಮಾಣ 7. ಪರುಷರ ಆತ್ಮಹತ್ಯೆ ಭಾರತದಲ್ಲಿ ಪ್ರತೀಲಕ್ಷಕ್ಕೆ 21. ವಿಶ್ವದಲ್ಲಿ ಇದು 16. ಭಾರತದಲ್ಲಿ ವಿವಾಹಿತರ ಮಹಿಳೆಯರ ಪಾಲು ಹೆಚ್ಚಿನದು. ಮಹಿಳೆಯರ ಆತ್ಮಹತ್ಯೆಗೆ ಮದುವೆ ಕಡಿಮೆ ರಕ್ಷಣೆ ಕೊಡುತ್ತಿದೆ. ಬೇಗ ಆಗುವ ಮದುವೆ, ವ್ಯವಸ್ಥೆ ಮಾಡಿದ ಮದುವೆ, ಚಿಕ್ಕ ವಯಸ್ಸಿನಲ್ಲೇ ತಾಯ್ತನ, ಕಡಿಮೆ ಸಾಮಾಜಿಕ ಸ್ಥಿತಿ, ಕೌಟುಂಬಿಕ ಹಿಂಸೆ ಹಾಗೂ ಆರ್ಥಿಕ ಅವಲಂಬನೆ- ಇದಕ್ಕೆ ಕಾರಣಗಳು.
ಹಿಂದೂ ಧರ್ಮ ಆತ್ಮಹತ್ಯೆ ಒಪ್ಪುವುದಿಲ್ಲ. ಆತ್ಮಹತ್ಯೆ ಕುಟುಂಬಕ್ಕೆ ಸಾಮಾಜಿಕ ಅಸಹ್ಯತೆ ಹಾಗೂ ಕೆಟ್ಟ ಹೆಸರು ರುತ್ತದೆ. ಬಹುಕಾಲ ಆ ಕುಟುಂಬ ಇದನ್ನೇ ಅನುಭವಿಸಬೇಕು.ಆ ಕುಟುಂಬದ ಸದಸ್ಯರ ಗೌರವಾರ್ಹತೆ ಬಗ್ಗೆ ಇದು ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ. ಅವರಿಗೆ ಅನೇಕ ತೊಡಕುಗಳನ್ನು ತರುವ ಸಾಧ್ಯತೆ ಇದೆ. ಮಹಿಳೆಯ ಆತ್ಮಹತ್ಯೆ ಕುಟುಂಬದ ಸದಸ್ಯರಿಗೆ ಹೆಚ್ಚಿನ ಅಗೌರವ ತರುತ್ತದೆ. ಇದು ಕೋರ್ಟ್ ಕೇಸ್ ಹಾಗೂ ಅಪರಾಧ ತನಿಖೆಗೆ ಕಾರಣೀಭೂತವಾಗುತ್ತದೆ. ಭಾರತದ ಅನೇಕ ಭಾಗಗಳಲ್ಲಿ ಆರ್ಥಿಕ ದುಸ್ಥಿತಿ, ರೋಗ, ಸಾಮಾಜಿಕ ಒತ್ತಡಗಳು, ಕೌಟುಂಬಿಕ ಸಮಸ್ಯೆಗಳು ಹಾಗೂ ಕುಟುಂಬದ ಇತರ ಸದಸ್ಯರಿಂದ ದೊರೆತ ಹಿಂಸೆ ಇವೆಲ್ಲ ಆತ್ಮಹತ್ಯೆಗೆ ಕಾರಣಗಳಾಗುತ್ತವೆ. ಹಿಂದೂಧರ್ಮದ ಪ್ರಕಾರ ಮಾನವ ಜನ್ಮ ಅತ್ಯಂತ ಅಮೂಲ್ಯವಾದದ್ದು. ಇದು ನೂರಾರು, ಸಾವಿರಾರು ಜನ್ಮಗಳ ನಂತರ ದೊರೆಯುವ ಅನನ್ಯ ಅವಕಾಶ. ತಮ್ಮ ಜವಾಬ್ದಾರಿಗಳಿಂದ ಪಲಾಯನ ಮಾಡಿ ಇತರರಿಗೆ ತೊಂದರೆ ಕೊಡುವ ಭಯಂಕರ ಗಂಭೀರ ತಪ್ಪು ಇದು. ವ್ಯಕ್ತಿಯ ಆಧ್ಯಾತ್ಮಕ ಪ್ರಗತಿಯನ್ನು ಇದು ತಡೆಯುತ್ತದೆ.
ವೇದಗಳ ಪ್ರಕಾರ ಆತ್ಮಹತ್ಯೆಯೆಂದರೆ ನಿಗದಿತ ಸಮಯಕ್ಕೆ ಮೊದಲೇ ದೇಹ ಕೊಂದುಕೊಳ್ಳುವುದು. ನಿಮಗೆ ಕೊಟ್ಟಿರುವ ಈ ದೇಹ, ಬಂದ ಸಂತಸ ದುಃಖಗಳನ್ನು ನಿಗದಿತ ಅವಧಿಗೆ ಅನುಭವಿಸಲು ಕೊಡಲಾಗಿದೆ. ಆತ್ಮಹತ್ಯೆ ಮಾಡಿಕೊಂಡರೆ ಏನಾಗುತ್ತದೆ ಅನ್ನಲು ಒಂದು ಉದಾಹರಣೆ- 6 ತಿಂಗಳ ಜೈಲು ಶಿಕ್ಷೆಯಾದ ಕೈದಿ ತಪ್ಪಿಸಿಕೊಂಡು- ಹೊರಹೋಗಿ -ಮತೆ ಸಿಕ್ಕರೆ ಆತನಿಗೆ ಮತ್ತೆ ಹೆಚ್ಚಿನ ಅವಧಿಗೆ ಶಿಕ್ಷೆಯಾಗುತ್ತದೆ. ಇದೇ ರೀತಿ ನಿಮಗೆ ನಿಮ್ಮ ಹಿಂದಿನ ಜನ್ಮದ ಕೆಲಸ ನೋಡಿ- ಖುಷಿ ಹಆಗೂ ಕಷ್ಟ ಅನುಭವಿಸಲು, ನಿಮಗೆ ಕೊಟ್ಟಿರುವ ದೇಹವನ್ನು ನೀವಾಗಿಯೇ ಕೊಂದುಕೊಂಡರೆ, ಮತ್ತೆ ಅದೇ ದೇಹ ಹೆಚ್ಚಿನ ಅವಧಿಗೆ ನೋವು ಅನುಭವಿಸಬೇಕು. ಇದನ್ನು ಪಾಪ ಎನ್ನುತ್ತೇವೆ.
ಈ ಹಿನ್ನೆಲೆಯಲ್ಲಿ ನಾವು ಆತ್ಮಹತ್ಯೆ ತಡೆಯಲು ಹಾಗೂ ಆತ್ಮಹತ್ಯೆ ವಿಫಲವಾಗಿ ಉಳಿದವರನ್ನು ಗಮನಿಸಲು, ಪ್ರೇಮದ ಬಗೆಗಿನ ಬುದ್ಧನ ಬೋಧನೆಗಳಲ್ಲಿ ನಾಲ್ಕು ಅಂಶಗಳನ್ನು ಗಮನಿಸಬೇಕು. ಮೊದಲನೇಯದು ಮೈತ್ರಿ. ಇದು ಸ್ನೇಹ-ಸೋದರತ್ವ ಪ್ರೀತಿಸುವುದು ಹಾಗೂ ದಯೆ. ಎರಡನೇಯದು ಕರುಣ. ಇನ್ನೊಬ್ಬರ ನೋವು, ಹಿಂಸೆ ಅರಿತು ಅವರ ತೊಂದರೆ ನಿವಾರಿಸಲು ಅವರನ್ನು ಸುಧಾರಿಸಲು ಯತ್ನಿಸುವುದು ಇದು ಸಹಾನುಭೂತಿ. ಮೂರನೇ ಅಂಶ ಮುದಿತ. ಸಂತಸ. ನಿನ್ನ ಸಂತಸ ಆತನ/ಆಕೆಯ ಸಂತಸ. ನಾಲ್ಕನೇಯ ಅಂಶ ಉಪೇಕ್ಷ ,ತಾರತಮ್ಯ ತೋರದಿರುವುದು.

ಎನ್.ವ್ಹಿ ರಮೇಶ್
ಮೊ:98455-65238

Back To Top