ಆಸಿಡಿಟಿಗೆ ಆಯುರ್ವೇದದ ಪರಿಹಾರ

ಆಸಿಡಿಟಿಗೆ ಆಯುರ್ವೇದದ ಪರಿಹಾರ ಅತ್ತ್ಯುತ್ತಮವಾದದ್ದು.ಕೆಲವೊಂದು ಔಷಧಗಳ ಸೇವನೆಯಿಂದ ನಿವಾರಿಸಿಕೊಳ್ಳಬಹುದು. ಆದರೆ ಅದರ ಮೇಲೆಯೇ ಅವಲಂಬನೆಗೊಳ್ಳುವುದು  ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಇದನ್ನು ನಿವಾರಿಸಿಕೊಳ್ಳಲು ಮನೆಯಲ್ಲಿಯೇ ದೊರೆಯುವ ಶೀಘ್ರ ಉಪಶಮನಗಳನ್ನು ಪ್ರಯತ್ನಿಸಿ ನೋಡಿ.

ಆಸಿಡಿಟಿಗೆ ಆಯುರ್ವೇದದ ಪರಿಹಾರ

ಇಂದು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಸಿಡಿಟಿ ಸಮಸ್ಯೆಯಿಂದ ನರಳುತ್ತಿರುತ್ತಾರೆ. ಈ ಸಮಸ್ಯೆಯು ಇನ್ನಿತರ ಆರೋಗ್ಯದ ಸಮಸ್ಯೆಗಳನ್ನು ಸಹ ಉಂಟು ಮಾಡುತ್ತಿರುತ್ತದೆ. ಆದರೆ ಇಷ್ಟಕ್ಕು ಅಸಿಡಿಟಿ ಏಕೆ ಕಂಡು ಬರುತ್ತದೆ? ಸಾಮಾನ್ಯವಾಗಿ ಯಾವುದಾದರು ಅಜೀರ್ಣ ಸಮಸ್ಯೆಯು ಜೀರ್ಣ ಮಾಡುವ ಆಸಿಡ್ಗಳಲ್ಲಿ ಅಸಮತೋಲನವನ್ನುಂಟು ಮಾಡಿದಾಗ ಅಸಿಡಿಟಿ ಸಮಸ್ಯೆ ಕಂಡು ಬರುತ್ತದೆ. ಆಗ ಇದರಿಂದ ಮುಕ್ತಿ ಪಡೆಯಲು  ಕೆಲವೊಂದು ಆಂಟಾಸಿಡ್ ಗಳ ನೆರವನ್ನು ಪಡೆಯಬೇಕಾಗುತ್ತದೆ. ಆದರೆ ಇದೇ ಸಮಯದಲ್ಲಿ ಮನೆಯಲ್ಲಿಯೇ ದೊರೆಯುವ ಮನೆ ಮದ್ದುಗಳ ನೆರವಿನಿಂದ ಸಹ ಅಸಿಡಿಟಿಯಿಂದ ಮುಕ್ತಿ ಪಡೆಯಬಹುದು.

ಅಸಿಡಿಟಿಯು ಯಾವೆಲ್ಲ ಸಮಸ್ಯೆಗಳನ್ನು ಉಂಟು ಮಾಡುತ್ತದೆ?

ಅಸಿಡಿಟಿ ಸಮಸ್ಯೆ ಎದೆ ಉರಿ, ತಲೆ ನೋವು, ಹೊಟ್ಟೆ ನೋವು, ಉಸಿರಿನ ದುರ್ಗಂಧ, ಹುಳಿ ತೇಗು, ವಾಕರಿಕೆ ಇತ್ಯಾದಿ ಸಮಸ್ಯೆಗಳನ್ನುಂಟು ಮಾಡುತ್ತದೆ. ಸ್ವಲ್ಪ ಪ್ರಮಾಣದ ಅಸಿಡಿಟಿ ಕಂಡು ಬಂದರೆ ಸಮಸ್ಯೆಯಿಲ್ಲ. ಆದರೆ ನಿರಂತರವಾಗಿ  ಈ ಸಮಸ್ಯೆ ಮರುಕಳಿಸುತ್ತಿದ್ದಲ್ಲಿ, ಇದರ ಕುರಿತು ನೀವು ಜಾಗರೂಕರಾಗಬೇಕು. ಈ ಸಮಸ್ಯೆ ಬಹಳ ದಿನಗಳವರೆಗೂ ಮುಂದುವರೆದರೆ ಹೊಟ್ಟೆ ಉಬ್ಬರಿಸುವುದು, ಹೊಟ್ಟೆ ಉರಿ ಬರುವುದು, ಹಸಿವಿನಲ್ಲಿ ಏರು ಪೇರು ಆಗುವುದು. ಮಲಬದ್ಧತೆ ಅಥವಾ ಬೇಧಿ, ಕರುಳು ಕಿವುಚಿದಂತೆ ಆಗುವುದು, ಅನ್ನನಾಳ/ ಹೊಟ್ಟೆ/ ಕರುಳಿನಲ್ಲಿ ಹುಣ್ಣಾಗುವುದು, ಮೂಲವ್ಯಾಧಿ, ಫಿಸ್ಟುಲ ಇತ್ಯಾದಿ ಅಧಿಕ ಸಮಸ್ಯೆಗಳು ಉಂಟಾಗುತ್ತದೆ.

ಅಸಿಡಿಟಿ ಬರಲು ಹಲವಾರು ಕಾರಣಗಳು:

1. ಸಾಮಾನ್ಯವಾಗಿ ಹೆಚ್ಚಾಗಿ ಹುಳಿ ಪದಾರ್ಥ ಸೇವಿಸಿದರೆ

2. ಹಸಿಮೆಣಸಿನಕಾಯಿಯುಕ್ತ ಆಹಾರ ಸೇವನೆ, ಅಡುಗೆಗೆ ಹೆಚ್ಚು ಎಣ್ಣೆ ಉಪಯೋಗಿಸಿದರೆ

3. ಮಸಾಲೆ ಪದಾರ್ಥಗಳನ್ನು ಸೇವಿಸಿದರೆ

4. ಸರಿಯಾದ ಸಮಯಕ್ಕೆ ಊಟ ಮಾಡದಿದ್ದರೆ

5. ವ್ಯಾಯಾಮದ ಕೊರತೆ

6. ಆಹಾರ ಸೇವಿಸಿದ ಕೂಡಲೆ ಮಲಗುವುದು

7. ಆಹಾರ ಸೇವಿಸಿದ ಕೂಡಲೆ ಬಗ್ಗಿ ಕೆಲಸ ಮಾಡುವುದು

8. ಆಲ್ಕೋಹಾಲ್ ಸೇವನೆ ಮುಂತಾದವುಗಳಿಂದ ಅಸಿಡಿಟಿ ಸಮಸ್ಯೆ ಬರುತ್ತದೆ.

ಕೆಲವೊಮ್ಮೆ ನಿರ್ದಿಷ್ಟ ಆಹಾರಗಳಿಂದಾಗಿ ಅಸಿಡಿಟಿ ಸಮಸ್ಯೆ ಕಂಡು ಬರುತ್ತದೆ. ಉದಾಹರಣೆಗೆ ಸೌತೆಕಾಯಿ, ಇದು ಜೀರ್ಣಮಾಡಿಕೊಳ್ಳಲು ಉಪಕಾರಿ, ಆದರೆ ಅಸಿಡಿಟಿ ಇದ್ದಲ್ಲಿ, ಇದನ್ನು ಸೇವಿಸಬೇಡಿ.

ಬನ್ನಿ ಆ ಪರಿಹಾರೋಪಾಯಗಳು ಯಾವುವು ಎಂದು ನೋಡೋಣ…

acidity-and-herbs

ಈ ಸಮಸ್ಯೆಗಳನ್ನು ಕೆಲವೊಂದು ಔಷಧಗಳ ಸೇವನೆಯಿಂದ ನಿವಾರಿಸಿಕೊಳ್ಳಬಹುದು. ಆದರೆ ಅದರ ಮೇಲೆಯೇ ಅವಲಂಬನೆಗೊಳ್ಳುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದ್ದರಿಂದ ಇದನ್ನು ನಿವಾರಿಸಿಕೊಳ್ಳಲು ಮನೆಯಲ್ಲಿಯೇ ದೊರೆಯುವ ಶೀಘ್ರ ಉಪಶಮನಗಳನ್ನು ಪ್ರಯತ್ನಿಸಿ ನೋಡಿ, ಆಗ ಅದರಿಂದ  ಸಮಸ್ಯೆ ದೂರಾಗುತ್ತದೆ. ಜೊತೆಗೆ ನಿಮಗೆ ಇದರಿಂದ ಯಾವುದೇ ಅಡ್ಡಪರಿಣಾಮಗಳು ಸಹ ಉಂಟಾಗುವುದಿಲ್ಲ. ಒಂದು ವೇಳೆ ಮನೆ ಮದ್ದಿನಿಂದ ಶೀಘ್ರವಾಗಿ ಗುಣವಾಗದಿದ್ದಲ್ಲಿ, ತಡ ಮಾಡದೆ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಗೆ ತಕ್ಕ ಉಪಶಮನ ಪಡೆದುಕೊಳ್ಳಿ.

1. ತುಳಸಿ ಎಲೆಗಳು – ತುಳಸಿ ಎಲೆಗಳು ಅಸಿಡಿಟಿಗೆ ಶೀಘ್ರ ಉಪಶಮನವನ್ನು ನೀಡುತ್ತವೆ. ತುಳಸಿ ಎಲೆಗಳಲ್ಲಿ ಕಾರ್ಮನಿಟೇವ್ ಎಂಬ ಅಂಶಗಳು ಇರುತ್ತವೆ. ಇವು ಅಸಿಡಿಟಿಯನ್ನು ಹೋಗಲಾಡಿಸುವಲ್ಲಿ ಪವಾಡ ಸದೃಶ್ಯವಾಗಿ ಕೆಲಸ ಮಾಡುತ್ತದೆ. ನಿಮಗೆ ಅಸಿಡಿಟಿ ಸಮಸ್ಯೆ ಇದ್ದಲ್ಲಿ ಒಂದಷ್ಟು ತುಳಸಿ ಎಲೆಗಳನ್ನು ಅಗಿಯಿರಿ.

2. ಚಕ್ಕೆ – ಸಾಂಬಾರು ಪದಾರ್ಥವಾದ ಚಕ್ಕೆಯ ಪ್ರಯೋಜನಗಳು ಹಲವಾರು. ಇದು ಅಸಿಡಿಟಿಯನ್ನು ನಿವಾರಿಸುವ ಅತ್ಯಂತ ಪರಿಣಾಮಕಾರಿ ಮನೆ ಮದ್ದಾಗಿದೆ. ಇತರೆ ಔಷಧಿಗಳನ್ನು ಸೇವಿಸುವ ಬದಲಿಗೆ ಚಕ್ಕೆಯಿಂದ ತಯಾರಿಸಿದ ಟೀಯನ್ನು ಸೇವಿಸಿ. ಅಸಿಡಿಟಿಯಿಂದ ಮುಕ್ತರಾಗಿ. ನಿಮಗೆ ಬೇಕಾದಲ್ಲಿ ಚಕ್ಕೆಯ ಪುಡಿಯನ್ನು ನೀವು ತಯಾರಿಸುವ ಖಾದ್ಯಗಳಿಗೆ ಬೆರೆಸಿಕೊಳ್ಳಬಹುದು.

3. ಜೀರಿಗೆ – ಆರ್ಯುರ್ವೇದದ ಪ್ರಕಾರ ಅಸಿಡಿಟಿಯನ್ನು ನಿವಾರಿಸಲು ಹಲವಾರು ಪದಾರ್ಥಗಳು ನೆರವಿಗೆ ಬರುತ್ತವೆ. ಜೀರಿಗೆ ಸಹ ಅವುಗಳಲ್ಲಿ ಒಂದು. ಇದು ನಮ್ಮ ಜೀರ್ಣಕ್ರಿಯೆಗೆ ಅಗತ್ಯವಾದ ಲಾಲಾ ರಸವನ್ನು ಹೆಚ್ಚು ಉತ್ಪತ್ತಿಸುವಂತೆ ಮಾಡುತ್ತದೆ. ಜೀರಿಗೆಯನ್ನು ಬೆರೆಸಿ ನೀರನ್ನು ಕುದಿಸಿ, ಅದನ್ನು ಕುಡಿಯುವುದರಿಂದ ಅಸಿಡಿಟಿಯನ್ನು ನಿವಾರಿಸಿಕೊಳ್ಳಬಹುದು.

4. ಲವಂಗ – ಜಠರದಲ್ಲಿ ಕಂಡು ಬರುವ ಅಧಿಕ ಹೈಡ್ರೋಕ್ಲೋರಿಕ್ ಆಮ್ಲದಿಂದಾಗಿ ಅಸಿಡಿಟಿ ಕಂಡು ಬರುತ್ತದೆ. ಹಾಗೆಯೇ ಜಠರದಲ್ಲಿ ಜೀರ್ಣಕ್ರಿಯೆಗೆ ಸಹಕರಿಸುವ ಆಸಿಡ್ ಕಡಿಮೆಯಾದರು ಸಹ ಅಸಿಡಿಟಿ ಬರುತ್ತದೆ. ಈ ಆಸಿಡ್‌ಗಳ ಮಟ್ಟವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳಲು, ಲವಂಗ ಸಹಾಯ ಮಾಡುತ್ತದೆ. ಅಸಿಡಿಟಿ ಸಮಸ್ಯೆ ಬಂದಾಗ ಒಂದಷ್ಟು ಲವಂಗ ಜಗಿಯಿರಿ.

5. ಶುಂಠಿ – ಅಸಿಡಿಟಿ ಬಂದಾಗ ಔಷಧದ ಬಾಕ್ಸ್ ನೋಡುವ ಮೊದಲು ತರಕಾರಿ ಬುಟ್ಟಿಯನ್ನು ನೋಡಿ. ಅಲ್ಲಿ ನಿಮಗೆ ಶುಂಠಿ ಕಾಣಿಸುತ್ತದೆ. ಶುಂಠಿಯನ್ನು ಸಣ್ಣ ಪ್ರಮಾಣದಲ್ಲಿ ಕತ್ತರಿಸಿಕೊಂಡು ಅದನ್ನು ಅಗಿಯಿರಿ. ಇದರಿಂದ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ. ಆದರೆ ಎಚ್ಚರವಿರಲಿ, ಶುಂಠಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಎದೆ ಹಾಗೂ ಹೊಟ್ಟೆ ಉರಿ ಹೆಚ್ಚಾಗಬಹುದು.

6. ಲಾವಂಚದ ಬೇರನ್ನು ನೀರಿನಲ್ಲಿ ಮುಳುಗಿಸಿಟ್ಟು ಆ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ಪದೇ ಪದೇ ಕುಡಿಯಬೇಕು.

7. ಕೊತ್ತಂಬರಿಯ ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟು ಕುದಿಸಿ, ನಂತರ ಆರಿಸಿ ಕುಡಿದರೆ ಅಸಿಡಿಟಿ ಕಡಿಮೆಯಾಗುತ್ತದೆ.

8. ಹಣ್ಣಾಗಿರುವ ಬಾಳೆಹಣ್ಣು ಆಹಾರದ ನಂತರ ಸರಿಯಾಗಿ  ತಿಂದರೆ ಅಸಿಡಿಟಿಯ ಲಕ್ಷಣಗಳು ಶಮನಗೊಳ್ಳುತ್ತದೆ.

ಒಂದು ವೇಳೆ ಮನೆ ಮದ್ದಿನಿಂದ ಶೀಘ್ರವಾಗಿ ಗುಣವಾಗದಿದ್ದಲ್ಲಿ, ತಡ ಮಾಡದೆ ವೈದ್ಯರನ್ನು ಭೇಟಿ ಮಾಡಿ ಸಮಸ್ಯೆಗೆ ತಕ್ಕ ಉಪಶಮನ ಪಡೆದುಕೊಳ್ಳಿ. ಆಯುರ್ವೇದದಲ್ಲಿ ಅಸಿಡಿಟಿಗೆ ಅತ್ಯುತ್ತಮ ಔಷಧಿ ಹಾಗೂ ಪಂಚಕರ್ಮ ಚಿಕಿತ್ಸೆ ಲಭವಿರುತ್ತದೆ. ಅಸಿಡಿಟಿಯ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿದ್ದಾಗ ಔಷಧಿಯಲ್ಲಿ ಶೀಘ್ರವಾಗಿ ಗುಣಪಡಿಸಬಹುದು. ಒಂದು ವೇಳೆ  ಅಸಿಡಿಟಿಯು ದೀರ್ಘಕಾಲೀನವಾಗಿದ್ದು, ಲಕ್ಷಣಗಳು ಉಲ್ಬಣಗೊಂಡಿದ್ದಲ್ಲಿ ಪಂಚಕರ್ಮ ಚಿಕಿತ್ಸೆಯ ಮೂಲಕ ಪ್ರಕೋಪಗೊಂಡಿರುವ ಪಿತ್ತವನ್ನು ಹೊರಹಾಕಿ ಅನ್ನನಾಳ – ಹೊಟ್ಟೆ – ಕರುಳನ್ನು ಸ್ವಚ್ಛಗೊಳಿಸಬಹುದು. ನಂತರ ಪುನ: ಅಸಿಡಿಟಿ ಮರುಕಳಿಸದಿರಲು ನಿತ್ಯ ಔಷಧಿ ಹಾಗೂ ರಸಾಯನ ಔಷಧಿಗಳ ಸೇವನೆ ಅಗತ್ಯ.

ಡಾ|| ನಿತಿನ್ ವೀರನಾಗಪ್ಪ ಎಂ.ಡಿ (ಪಂಚಕರ್ಮ), ಸಹಾಯಕ ಪ್ರಾಧ್ಯಾಪಕರು ಹಾಗೂ ಪಂಚಕರ್ಮ ವಿಶೇಷ ತಜ್ಞರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಅಂಚೆಪಾಳ್ಯ, ಕೆಂಗೇರಿ, ಬೆಂಗಳೂರು - ಮೈಸೂರು ಹೆದ್ದಾರಿ, ಬೆಂಗಳೂರು - 560074

ಡಾ|| ನಿತಿನ್ ವೀರನಾಗಪ್ಪ
ಎಂ.ಡಿ (ಪಂಚಕರ್ಮ), ಸಹಾಯಕ ಪ್ರಾಧ್ಯಾಪಕರು ಹಾಗೂ ಪಂಚಕರ್ಮ ವಿಶೇಷ ತಜ್ಞರು

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ
ಅಂಚೆಪಾಳ್ಯ, ಕೆಂಗೇರಿ, ಬೆಂಗಳೂರು – ಮೈಸೂರು ಹೆದ್ದಾರಿ, ಬೆಂಗಳೂರು – 560074
Contact : +91-99018-65656     email: dr.nitin.v.89@gmail.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!