ಶ್ರೀ ಚೌಡೇಶ್ವರಿ ತಿಂಡಿ ಮನೆ – ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲೊಂದು ವಿನೂತನ ರೀತಿಯ ಆಹಾರ ಗಳ ಮಿನಿ ಹೋಟೆಲ್

ಶ್ರೀ ಚೌಡೇಶ್ವರಿ ತಿಂಡಿ ಮನೆ ಬೆಂಗಳೂರಿನ ರಾಜ ರಾಜೇಶ್ವರಿ ನಗರದ ವಿನೂತನ ರೀತಿಯ ಆಹಾರಗಳ ಮಿನಿ ಹೋಟೆಲ್. ಅತೀ ಮಾಮೂಲಿ ತಿಂಡಿ ತಿನಿಸುಗಳನ್ನು ಬದಿಗಿರಿಸಿ ಉತ್ತಮ ಗುಣಮಟ್ಟದ ಸಾವಯವ ಪದಾರ್ಥಗಳನ್ನು ಬಳಸಿ ಮನುಷ್ಯ ಶರೀರಕ್ಕೆ ಬಿ ವಿಟಮಿನ್ ಕೊಡುವ ಆಹಾರಗಳನ್ನು ಒದಗಿಸುವ ಶುದ್ಧ ಸಸ್ಯಾಹಾರಿ ಹೋಟೆಲ್ ‘ಶ್ರೀ ಚೌಡೇಶ್ವರಿ ತಿಂಡಿ ಮನೆ’  ಜನಪ್ರಿಯತೆ ಪಡೆಯುತ್ತಿದೆ.

Shri-Choedeshwari-Tindimane-hotel-Raja-rajeshwarinagar ಶ್ರೀ ಚೌಡೇಶ್ವರಿ ತಿಂಡಿ ಮನೆ - ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲೊಂದು ವಿನೂತನ ರೀತಿಯ ಆಹಾರ ಗಳ ಮಿನಿ ಹೋಟೆಲ್

ತಾನು ತಿಂದ ತಟ್ಟೆಯನ್ನು ತಾನೇ ಎತ್ತಿಇಡುವುದು, ಕುಳಿತುಕೊಂಡರೆ ಮಾತ್ರ ತಿಂಡಿ ಮತ್ತು ಊಟದ ಲಭ್ಯತೆ, ಸಮಯ ವ್ಯರ್ಥಗೊಳಿಸದೆ ತಿಂದು ಇತರರರಿಗೆ ಕುಳಿತುಕೊಳ್ಳಲು ಜಾಗ ಮಾಡಿ ಕೊಡುವುದು, ರುಚಿ ವ್ಯತ್ಯಾಸವಿದ್ದಲ್ಲಿ ಕೂಡಲೇ ತಿಳಿಸುವುದು, ಹೋಟೆಲ್ ಒಳಗೆ ಪಾನ್ ಪರಾಗ, ತಂಬಾಕು, ದೂಮಪಾನದಂತ ಜೀವಹಾನಿ ಅಭ್ಯಾಸಗಳ ತಡೆ, ಹೀಗೆ ಅನೇಕ ಸಭ್ಯತೆ ಮತ್ತು ಶಿಸ್ತಿನ ಸೂಚನ ಫಲಕದೊಂದಿಗೆ ಆಹಾರದ ಮಹತ್ವ ತೋರುವ ಹಾಗೂ ಆರೋಗ್ಯಕ್ಕೆ ಬಿ ವಿಟಮಿನ್ ಕೊಡುವ ತಿಂಡಿ ಪಟ್ಟಿಯೊಂದಿಗೆ ಶಿಸ್ತುಬದ್ಧವಾಗಿ ತಿಂಡಿ ಮತ್ತು ಊಟ ವಿತರಿಸುವ ಸರಳ ಯೋಚನೆಯ ಸಾವಯವ ಮತ್ತು ಅಪ್ಪಟ ದೇಸಿ ಉತ್ಪನ್ನಗಳ ಶುದ್ಧ ಸಸ್ಯಾಹಾರಿ ಹೋಟೆಲ್ ‘ಶ್ರೀ ಚೌಡೇಶ್ವರಿ ತಿಂಡಿ ಮನೆ’ ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲಿ ಜನಪ್ರಿಯತೆ ಪಡೆಯುತ್ತಿದೆ.

ಅಶೋಕ ಜೀವನ ಪುಟ

 ಅತೀ ಮಾಮೂಲಿ ತಿಂಡಿ ತಿನಿಸುಗಳನ್ನು ಬದಿಗಿರಿಸಿ ಉತ್ತಮ ಗುಣಮಟ್ಟದ ಸಾವಯವ ಪದಾರ್ಥಗಳನ್ನು ಬಳಸಿ ಮನುಷ್ಯ ಶರೀರಕ್ಕೆ ಬಿ ವಿಟಮಿನ್ ಕೊಡುವ ಆಹಾರಗಳನ್ನು ಒದಗಿಸುವುದು ನಮ್ಮ ಮುಖ್ಯ ಕಾಯಕ ಎನ್ನುತ್ತಾರೆ ಈ ಹೋಟೆಲಿನ ಮಾಲೀಕರಾದ ಟಿ.ಅರ್. ಅಶೋಕ. ಮಂಡ್ಯ ಜಿಲ್ಲೆಯಲ್ಲಿರುವ ಟಿ. ಎಂ. ದೊಡ್ಡಿ ಎಂಬ ಚಿಕ್ಕ ಗ್ರಾಮದ ಸಾಮಾನ್ಯ ರೈತ ಕುಟುಂಬದಿಂದ ಬಂದ ಟಿ. ಆರ್. ಅಶೋಕ ಒಬ್ಬ ಶ್ರಮಜೀವಿ. ಆರಂಭದಲ್ಲಿ 250 ರೂಪಾಯಿಗಳಿಗೆ ಕಾಂಡಿಮೆಂಟ್ ಒಂದರಲ್ಲಿ ಗಂಟೆಯ ಲೆಕ್ಕ ನೋಡದೆ ದುಡಿಯುತ್ತಿದ್ದ ಈತನ ಪ್ರಾಮಾಣಿಕ ಮತ್ತು ಅಚ್ಚುಕಟ್ಟಾದ ದುಡಿತದ ಶ್ಯೆಲಿಯನ್ನು ನೋಡಿ ಅಂಗಡಿ ಸಮೀಪದಲ್ಲಿದ್ದ ಬಹು ರಾಷ್ಟ್ರಿಯ ಕಂಪನಿಯೊಂದು ಈತನನ್ನು ಕೈ ಬೀಸಿ ಕರೆದಿದ್ದು ಉತ್ತಮ ವ್ಯವಸ್ಥಾಪಕರು ಮತ್ತು ಕೆಲಸಗಾರರ ಸಹಕಾರದಿಂದ ಅಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದರೂ ಜೀವನದಲ್ಲಿ ಅನಿವಾರ್ಯವಾಗಿದ್ದ ಏಳು ಬೀಳುಗಳ ಸುಳಿಯಲ್ಲಿ ಸಿಲುಕಿ ತಾತ್ಕಾಲಿಕವಾಗಿ ಎಲ್ಲವುದರಿಂದ ದೂರ ಉಳಿಯುವಂತೆ ಮಾಡಿತು.

TR-Ashok-shri-Chowdeshwari-Tindimaneಕತ್ತಲಿನ ನಂತರ ಬೆಳಕು ಬರುವಂತೆ ಹೊಸ ಆಲೋಚನೆಯೊಂದಿಗೆ ಗುರು ರಾಯರ ದಯೆಯಿಂದ ಮತ್ತೆ ನೆಲೆ ಸಿಕ್ಕಿದೆ ಎಂದು ಸಿಹಿ ಮತ್ತು ಕಹಿ ಅನುಭವಗಳನ್ನು ಅಶೋಕ ಚೊಕ್ಕವಾಗಿ ವಿವರಿಸುತ್ತಾರೆ. ಪ್ರಯೋಗಾತ್ಮಕ ಮನಸ್ಸುಳ್ಳ ಅಶೋಕ ಅನೇಕ ವ್ಯವಹಾರಗಳಲ್ಲಿ ಕೈಯಾಡಿಸಿದ್ದು ಭೂತಕಾಲದಲ್ಲಿ ಕೆಲವು ಪತ್ರಿಕಾ ವಿತರಣೆ ಯ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಸರಳ ಮತ್ತು ಹಳ್ಳಿ ಸೊಗಡನ್ನು ನೆನಪಿಸುವ ಮಾದರಿಯಲ್ಲಿರುವ ‘ಶ್ರೀ ಚೌಡೇಶ್ವರಿ ತಿಂಡಿ ಮನೆ‘ ಯನ್ನು ಇವರ ಚಿಕ್ಕ ಕುಟುಂಬವೇ ಮನೆಯ ರುಚಿಯೊಂದಿಗೆ ಉಣಬಡಿಸಿ ನಿರ್ವಹಿಸುತ್ತಿದೆ.”ಪ್ರತಿ ಗ್ರಾಹಕರು ನಾವು ಪ್ರೀತಿಯಿಂದ ತಯಾರಿಸಿದ ತಿನಿಸುಗಳನ್ನು ಸವಿದು ತೃಪ್ತಿಯ ನಗುಮುಖ ಮತ್ತು ಧನ್ಯತೆಯಿಂದ ಹೊರಹೋದಾಗ ನನಗದು ಅತೀವ ತೃಪ್ತಿ” ಎನ್ನುವ ಟಿ. ಆರ್.ಅಶೋಕ. ಹೊಸ ಬಗೆಯ ಯೋಚನೆಯೊಂದಿಗೆ ಹೊಸ ಹೊಸ ರುಚಿಗಳ ಪ್ರಯೋಗಗಳನ್ನು ದಿನ ನಿತ್ಯ ಮಾಡುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣ ಯೂ ಟ್ಯೂಬ್ ನಲ್ಲೂ ‘ಶ್ರೀ ಚೌಡೇಶ್ವರಿ ತಿಂಡಿ ಮನೆ’ ಬಗ್ಗೆ ವಿವರಗಳು ಕಾಣಸಿಗುತ್ತದೆ.

Shri-Choedeshwari-Tindimane-hotel ಶ್ರೀ ಚೌಡೇಶ್ವರಿ ತಿಂಡಿ ಮನೆ - ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲೊಂದು ವಿನೂತನ ರೀತಿಯ ಆಹಾರ ಗಳ ಮಿನಿ ಹೋಟೆಲ್

ಕನ್ನಡ ಪ್ರೇಮಿ
ತಕ್ಕ ಮಟ್ಟಿಗೆ ಸಂತೃಪ್ತಿಯಿಂದ ಓದಿರುವ ಅಶೋಕ ನೈಜ ಜೀವನದಲ್ಲಿ ಕಲಿತ ಪಾಠಗಳು ಅಪಾರ, ವ್ಯವಹಾರದ ಜೊತೆ ಜೊತೆಗೆ ಕನ್ನಡ ಬೆಳೆಸುವ ಕಾರ್ಯಗಳಲ್ಲಿ ತನ್ನನು ತೊಡಗಿಸುತ್ತಿರುವ ಈತನ ಸರಳ ಕನ್ನಡ ಪ್ರೀತಿಯ ಶ್ಯೆಲಿ ಗ್ರಾಹಕರಿಗೆ ಹೋಟೆಲು ಪ್ರವೇಶದಲ್ಲೇ ಸ್ಪರ್ಶಿಸುತ್ತದೆ. ಹಣಕ್ಕೆ ಭಾರಿ ಮಹತ್ವ ನೀಡದೆ, ಶುದ್ಧ ಆಹಾರದೊಂದಿಗೆ ಗ್ರಾಹಕರಿಗೆ ಶುದ್ಧ ಮನಸ್ಸಿನಿಂದ ಉಣ ಬಡಿಸುವುದರೊಂದಿಗೆ ಕಾಯಕವೇ ಕೈಲಾಸ ಎಂಬುದು ಅಶೋಕ ಜಪಿಸುವ ನಿತ್ಯ ಮಂತ್ರ.

shri-chowdeshwari-tindimane/ ಶ್ರೀ ಚೌಡೇಶ್ವರಿ ತಿಂಡಿ ಮನೆ - ಬೆಂಗಳೂರಿನ ರಾಜ ರಾಜೇಶ್ವರಿ ನಗರದಲ್ಲೊಂದು ವಿನೂತನ ರೀತಿಯ ಆಹಾರ ಗಳ ಮಿನಿ ಹೋಟೆಲ್

ದಯವಿಟ್ಟು ಭೇಟಿ ನೀಡಿ: ಶ್ರೀ ಚೌಡೇಶ್ವರಿ ತಿಂಡಿ ಮನೆ, ರಾಜರಾಜೇಶ್ವರಿ ದೇವಸ್ಥಾನದ ಹತ್ತಿರ, ಕೆಂಚೇನಹಳ್ಳಿ, ರಾಜರಾಜೇಶ್ವರಿನಗರ, ಬೆಂಗಳೂರು-560098
ದೂರವಾಣಿ: 74064 06918

NEETHA

ನೀತಾ ಡಿ. ಪ್ರಭು , ಬೆಂಗಳೂರು

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!