ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆ ಮತ್ತು ಡಯಟ್ ಅಂಡ್ ಫಿಟ್‍ನೆಸ್

ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆ ಸ್ತ್ರೀ-ಪುರುಷರು ತಿಳಿದುಕೊಳ್ಳುವುದು ಮುಖ್ಯ.ಗರ್ಭಧರಿಸುವ ಸಾಮಥ್ರ್ಯ ದಂಪತಿಗಳಿಬ್ಬರಿಗೂ ಸಹಜವಾಗಿದ್ದಾಗ್ಯೂ, ಗರ್ಭಧಾರಣೆಯ ಸಾಧ್ಯತೆ ಆ ಒಂದು ತಿಂಗಳಿನಲ್ಲಿ ಶೇಕಡ 25ರಷ್ಟು ಮಾತ್ರ ಇರುತ್ತದೆ.ಆರೋಗ್ಯಕರ ಆಹಾರ ಸೇವನೆ ಹಾಗೂ ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ  ಹೆರಿಗೆಯಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಕಾರಿ. 

ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆ ಮತ್ತು ಡಯಟ್ ಅಂಡ್ ಫಿಟ್‍ನೆಸ್ಗರ್ಭಧರಿಸುವ ಸಾಮಥ್ರ್ಯ ದಂಪತಿಗಳಿಬ್ಬರಿಗೂ ಸಹಜವಾಗಿದ್ದಾಗ್ಯೂ, ಗರ್ಭಧಾರಣೆಯ ಸಾಧ್ಯತೆ ಆ ಒಂದು ತಿಂಗಳಿನಲ್ಲಿ ಶೇಕಡ 25ರಷ್ಟು ಮಾತ್ರ ಇರುತ್ತದೆ. ಆದ್ದರಿಂದ ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆಯನ್ನು ಸ್ತ್ರೀ-ಪುರುಷರು ತಿಳಿದುಕೊಳ್ಳುವುದು ಮುಖ್ಯ.

ಸ್ತ್ರೀ ಸಂತಾನೋತ್ಪತ್ತಿಯ ವ್ಯವಸ್ಥೆ:

ಗರ್ಭಕೋಶದ ಮುಂದಿನ ಗರ್ಭಕೊರಳಿನ ಭಾಗದಲ್ಲಿ ಯೋನಿ ದ್ವಾರದ ರೂಪದಲ್ಲಿ ಬಾಹ್ಯ ಶರೀರಕ್ಕೆ ತೆರೆದುಕೊಂಡಿರುತ್ತದೆ. ಒಂದು ಚಿಕ್ಕ ಪೇರಲ ಹಣ್ಣನ್ನು ಹೋಲುವ ಆಕಾರ ಮತ್ತು ಗಾತ್ರದಲ್ಲಿರುವ ಗರ್ಭಕೋಶವು ಸ್ನಾಯು ಅಂಗವಾಗಿದೆ. ಇದರ ಸುತ್ತಲು ದಪ್ಪನಾದ ಪೋಷಕ ಒಳಪದರ (ಎಂಡೋಮೆಟ್ರಿಯಂ) ಇರುತ್ತದೆ. ಗರ್ಭಕೋಶದ ಗೋಡೆಗೆ ಅಂಟಿಕೊಂಡೇ ಭ್ರೂಣ ವಿಕಸನ ಹೊಂದುತ್ತದೆ.ಗರ್ಭಕೋಶದ ಮೇಲ್ಭಾಗದಲ್ಲಿ ಎರಡೂ ಕಡೆಗಳಿಂದ ಗರ್ಭನಾಳಗಳು ರಚನೆಯಾಗಿದ್ದು, ಇದು ಅಂಡಾಶಯಗಳನ್ನು ತಲುಪುತ್ತವೆ.

ಅಂಡಾಶಯಗಳು ಬಾದಾಮಿಯ ಆಕಾರದಲ್ಲಿದ್ದು, ಇದರೊಳಗೇ ಅಂಡಾಣು ಅಥವಾ ತತ್ತಿಗಳಿರುತ್ತವೆ. ಪ್ರತಿ ಸ್ತ್ರೀಯರಲ್ಲೂ ಹುಟ್ಟುವಾಗಲೇ ಅವರವರ ಅಂಡಾಣುಗಳ ಲೆಕ್ಕ ನಿಗದಿಯಾಗಿರುತ್ತದೆ. ಇದು ಮೂರು ದಶಲಕ್ಷಕ್ಕಿಂತ ಹೆಚ್ಚಾಗಿರುತ್ತದೆಂದು ಅಂದಾಜು ಮಾಡಲಾಗಿದೆ. ಅಂಡಾಶಯಗಳೊಂದಿಗೆ ಕೋಶದ್ರವದಲ್ಲಿ ಅಂಡಾಣುಗಳಿರುತ್ತವೆ. ಹದಿ ಹರೆಯದ ವೇಳೆಗೆ ಸುಮಾರು 4,50,000ರಷ್ಟು ಅಂಡಾಣುಗಳಿರುತ್ತವೆ. ಇಡೀ ಸಂತಾನೋತ್ಪತ್ತಿಯ ಜೀವಮಾನದಲ್ಲಿ ಕೇವಲ ಸುಮಾರು 400 ಅಂಡಾಣುಗಳಷ್ಟೇ ಬಳಕೆಯಾಗುತ್ತದೆ.

ಮಹಿಳೆ ತನ್ನ ಫಲವತ್ತತೆಯ ವರ್ಷದಲ್ಲಿ ಅಂದರೆ ಋತುಮತಿಯಾದಾಗಿನಿಂದ ಋತುಬಂಧವಾಗುವ ತನಕ ಪ್ರತಿ ತಿಂಗಳೂ (ಸುಮಾರು 28-30 ದಿನಗಳ ಚಕ್ರ) ಋತುಚಕ್ರ ಹೊಂದುತ್ತಾರೆ. ಪ್ರತಿ ಮಾಸಿಕ ಚಕ್ರದಲ್ಲೂ ಸಾಧಾರಣವಾಗಿ ಒಂದೇ ಒಂದು ಅಂಡಾಣು ಅಥವಾ ಮೊಟ್ಟೆ ಪಕ್ವವಾಗುತ್ತದೆ. ಪಕ್ವಗೊಂಡ ಅಂಡಾಣು ಮಾಸಿಕ ಚಕ್ರದ ಮಧ್ಯದ ಅವಧಿಯಲ್ಲಿ ಕೋಶದ್ರವದಿಂದ ಬಿಡುಗಡೆಯಾಗುತ್ತದೆ. ಈ ಪ್ರಕ್ರಿಯೆಯನ್ನು ಅಂಡಾಣು ಬಿಡುಗಡೆ ಎಂದು ಕರೆಯಲಾಗುತ್ತದೆ. ಹೀಗೆ ಬಿಡುಗಡೆಯಾದ ಅಂಡಾಣು ಗರ್ಭನಾಳದೊಳಗೆ ತೂರಿಕೊಂಡು ಸಾಗುವಾಗ ವೀರ್ಯಾಣುವಿನೊಂದಿಗೆ ಮಿಲನ ಹೊಂದುತ್ತದೆ. ಫಲೀಕೃತವಾದ ಅಂಡಾಣು ಅಥವಾ ಭ್ರೂಣವು ಗರ್ಭನಾಳದಿಂದ ಕೆಳಗೆ ಸಾಗುತ್ತಾ ಒಂದು ಗರ್ಭಕೋಶವನ್ನು ತಲುಪಿ ಒಳಪದರಕ್ಕೆ ಅಂಟಿಕೊಳ್ಳುತ್ತದೆ.

ಮಾಸಿಕ ಚಕ್ರವು ಈ ಎಲ್ಲ ಘಟನೆಗಳನ್ನೂ ಹೈಫೋಥಲಾಮಸ್ ಮತ್ತು ಪಿಟ್ಯೂಟರಿ ಸ್ರವಿಸುವ ಎಫ್‍ಎಸ್‍ಎಚ್ ಮತ್ತು ಎಲ್‍ಎಚ್ ಎಂಬ ಹಾರ್ಮೋನುಗಳು ನಿಯಂತ್ರಿಸುತ್ತವೆ.ಒಂದು ವೇಳೆ ಗರ್ಭಧಾರಣೆಯಾಗದಿದ್ದರೆ ಗರ್ಭಕೋಶದ ಒಳ ಪದರವು ಛಿದ್ರವಾಗಿ ಮಾಸಿಕ ಋತು/ಮುಟ್ಟಿನ ರೂಪದಲ್ಲಿ ಸಾಧಾರಣವಾಗಿ 2-4 ದಿವಸಗಳ ಕಾಲ ಶರೀರದಿಂದ ಹೊರಗೆ ಹರಿದು ಹೋಗುತ್ತದೆ.

ಪುರುಷರ ಸಂತಾನೋತ್ಪತ್ತಿಯ ವ್ಯವಸ್ಥೆ:

ಪುರುಷ ಜನನಾಂಗಗಳು ಆಂತರಿಕ ಮತ್ತು ಬಾಹ್ಯ ಎರಡೂ ಕಡೆಗೂ ರಚಿತವಾಗಿದೆ. ವೃಷಣಗಳ ಒಳಗಿರುವ ವೀರ್ಯ ಚೀಲದಲ್ಲಿ ವೀರ್ಯಾಣುಗಳು ಉತ್ಪತ್ತಿಯಾಗುತ್ತದೆ. ಮೆದುಳಿನಲ್ಲಿರುವ ಪಿಟ್ಯೂಟರಿ ಗ್ರಂಥಿ ಸ್ರವಿಸುವ ಟೆಸ್ಟೋಸ್ಟೀರಾನ್, ಎಫ್‍ಎಸ್‍ಎಚ್ ಮತ್ತು ಎಲ್‍ಎಚ್ ಹಾರ್ಮೋನುಗಳು ವೀರ್ಯೋತ್ಪಾದನೆಯನ್ನು ನಿಯಂತ್ರಿಸುತ್ತದೆ. ವೃಷಣದಲ್ಲಿ ಉತ್ಪತ್ತಿಯಾಗುವ ವೀರ್ಯಾಣುಗಳು ಎಪಿಡಿಡಿಮಸ್ ನಾಳಗಳಿಗೆ ಬಂದು ಪೋಷಣೆ ಪಡೆಯುತ್ತದೆ.

ಇಲ್ಲಿ ಪಕ್ವಗೊಂಡ ವೀರ್ಯಾಣುಗಳು ವ್ಯಾಸ್ ಡಿಫರೆನ್ಸ್ ಎಂಬ ಮತ್ತೊಂದು ನಾಳಕ್ಕೆ ಹರಿದು ಬಂದು ಅಲ್ಲಿಂದ ಸೆಮಿನಲ್ ವೆನಿಕಲ್ಸ್ ಎಂಬ ನಾಳಗಳಿಗೆ ಬರುತ್ತದೆ. ಇಲ್ಲೇ ಪಕ್ವಗೊಂಡ ವೀರ್ಯಾಣುಗಳು ಸಂಗ್ರಹಗೊಳ್ಳುತ್ತವೆ. ವೀರ್ಯೋತ್ಪಾದನೆಯಿಂದ ಪಕ್ವತೆಯ ಹಂತದವರೆಗೆ ಇಡೀ ಪ್ರಕ್ರಿಯೆ ಅಂದಾಜು 72 ದಿನಗಳ ಕಾಲ ನಡೆಯುತ್ತದೆ. ಪುರುಷರ ವೀರ್ಯ ಸ್ಖಲನವಾದಾಗ ಅಥವಾ ವೀರ್ಯ ಶಿಶ್ನದಿಂದ ಹೊರ ಚೆಲ್ಲಿದಾಗ ಅಥವಾ ಸಂಭೋಗದ ಸಮಯದಲ್ಲಿ ಸಿಮೆನಲ್ ವೆನಿಕಲ್‍ನಿಂದ ಹೊರಬರುವ ವೀರ್ಯಾಣುಗಳು ಪ್ರೋಸ್ಟೇಟ್ ಗ್ರಂಥಿಯಲ್ಲಿನ ಜಿಗುಟು ದ್ರವದೊಂದಿಗೆ ಬರುತ್ತದೆ. ಇದೇ ವೀರ್ಯ ಅಥವಾ ಧಾತು. ಈ ವೀರ್ಯವೇ ಸ್ತ್ರೀ ಯೋನಿಯಲ್ಲಿ ಶೇಖರವಾಗುತ್ತದೆ.

ಗರ್ಭಧಾರಣೆ

ಲೈಂಗಿಕ ಸಮಾಗಮದ ವೇಳೆ ಯೋನಿಯಲ್ಲಿ ಲಕ್ಷಗಟ್ಟಲೆ ಸಂಖ್ಯೆಯ ವೀರ್ಯಾಣುಗಳು ಶೇಖರವಾಗುತ್ತದೆ. ಗರ್ಭಕೊರಳಿನ ಮೂಲಕ ಗರ್ಭಕೋಶ ತಲುಪಿ, ಅಲ್ಲಿಂದ ಗರ್ಭನಾಳಗಳೆಡೆಗೆ ಸಾಗುತ್ತವೆ. ಸುಮಾರು 200 ವೀರ್ಯಾಣುಗಳು ಗರ್ಭನಾಳಗಳನ್ನು ತಲುಪುತ್ತವೆ. ಬಹಳಷ್ಟು ವೀರ್ಯಾಣುಗಳು ಮಾರ್ಗಮಧ್ಯದಲ್ಲೇ ಸಾವನ್ನಪುತ್ತವೆ. ಗರ್ಭನಾಳಗಳನ್ನು ತಲುಪಿದ ವೀರ್ಯಾನುಗಳು ರಾಸಾಯನಿಕವಾಗಿ ದ್ರವವನ್ನು ಹೊರಸೂಸುತ್ತಾ ಅಂಡಾಣುವನ್ನು ಆಕರ್ಷಿಸುತ್ತದೆ. ಅಂಡಾಣುವನ್ನು ಜೋನಾ ಪೆಲ್ಲಸಇಡಾ ಎಂಬ ರಕ್ಷಕ ಪೊರೆ ಸುತ್ತುವರೆದಿದ್ದು, ಇದು ಕೇವಲ ಒಂದು ವೀರ್ಯಾಣುವನ್ನು ಮಾತ್ರ ಒಳ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಅಂಡಾಣುವಿನೊಳಗೆ ಪ್ರವೇಶಿಸಿದ ನಂತರ ಗರ್ಭಧರಿಸಲು ಕಾರಣವಾಗುವ ಆ ವೀರ್ಯಾಣುವಿನ ತಲೆಯ ಭಾಗದಿಂದ ವಂಶವಾಹಿಗಳು ಬಿಡುಗಡೆಯಾಗಿ ಅದು ಅಂಡಾಣುವಿನ ಕೋಶಕೇಂದ್ರದೊಡನೆ ಸಮ್ಮಿಳಿತವಾಗುತ್ತದೆ.

ಫಲೀಕೃತಗೊಂಡ ಅಂಡಾಣು-ಭ್ರೂಣ ಬೆಳವಣಿಗೆ:

ಅಂಡಾಣು ಫಲಿತಗೊಂಡ ನಂತರ ಅನೇಕ ವಿಭಜನೆಗಳಾಗಿ 5-7 ದಿನಗಳಲ್ಲಿ ಗರ್ಭಕೋಶವನ್ನು ಸೇರಿದಾಗ ಅದನ್ನು ಭ್ರೂಣ ಎನ್ನುತ್ತಾರೆ. ಗರ್ಭಕೋಶದ ಒಳಪದರದಲ್ಲಿ ವಿಲೀನಗೊಂಡು ಅಂಟಿಕೊಂಡು ಭ್ರೂಣವು ಬೆಳೆಯತೊಡಗುತ್ತದೆ. ಹೀಗೆ ಗರ್ಭಕಟ್ಟಿದ ನಂತರ ಭ್ರೂಣವು ಎಚ್‍ಸಿಜಿ ಎಂಬ ಹಾರ್ಮೋನನ್ನು ಸ್ರವಿಸಿ ಗರ್ಭಧಾರಣೆ ಮುಂದುವರೆಸುತ್ತದೆ. ಗರ್ಭಾವಸ್ಥೆಯನ್ನು ಕಂಡುಹಿಡಿಯಲು ಅಥವಾ ಖಚಿತಪಡಿಸಲು ರಕ್ತ ಪರೀಕ್ಷೆಯ ಮೂಲಕ ಎಚ್‍ಸಿಜಿ ಹಾರ್ಮೋನಿನ ವಿಶ್ಲೇಷಣೆ ಮಾಡಲಾಗುತ್ತದೆ.

ಡಯಟ್ ಅಂಡ್ ಫಿಟ್‍ನೆಸ್:

ಗರ್ಭಧಾರಣೆ ಮತ್ತು ಶಿಶುವಿಗೆ ಜನ್ಮ ನೀಡುವುದು ಸ್ತ್ರೀ ಕುಲದ ಅತ್ಯಂತ ಮುಖ್ಯ ಘಟ್ಟಗಳಲ್ಲಿ ಒಂದು. ಶಿಶುವನ್ನು ಮಾತೆಯರು 9 ತಿಂಗಳ ಕಾಲ ಗರ್ಭದೊಳಗೆ ಇಟ್ಟುಕೊಂಡಿರುತ್ತಾರೆ. ಧರೆಗೆ ಬಂದ ಕಂದ ಐದು ತಿಂಗಳ ಕಾಲ ಅಮ್ಮನ ಮಡಿಲಿನಲ್ಲಿ ಇರುತ್ತದೆ ಹಾಗೂ ಅದು ಮಾತೆ ಮಡಿಯುವ ತನಕ ಆಕೆಯ ಕೋಮಲ ಹೃದಯದಲ್ಲಿರುತ್ತದೆ. ಮಾತೆಯ ಜೀವನವು ಮಗುವಿನ ಜೀವನ. ಆರೋಗ್ಯಕರ ಮತ್ತು ಪೌಷ್ಠಿಕಾಂಶ ಜೀವನಶೈಲಿ ಹೊಂದಿರುವ ಮಹಿಳೆ ಆರೋಗ್ಯಕರ ಶಿಶುವನ್ನು ಹೊಂದುತ್ತಾಳೆ. ಹಾಗಾಗಿ ಗರ್ಭಧಾರಣೆ ವೇಳೆ ಮತ್ತು ಹೆರಿಗೆ ನಂತರ ಆರೋಗ್ಯಕರ ತೂಕ ಹೊಂದುವುದು ವನಿತೆಯರಿಗೂ ಮತ್ತು ಶಿಶುವಿಗೂ ಪ್ರಯೋಜನಕಾರಿ.

ನವ ಮಾಸಗಳ ಸಂತೋಷದ ಗರ್ಭಧಾರಣೆ ನಂತರ, ಪ್ರತಿ ಮಾತೆಯೂ ತಾನು ಈ ಹಿಂದೆ ಇದ್ದಂತೆ ಇರಬೇಕೆಂದು ಉತ್ಸುಕಳಾಗುತ್ತಾಳೆ ಹಾಗೂ ತನ್ನ ಹೆಚ್ಚುವರಿ ತೂಕದಲ್ಲಿ ಸ್ವಲ್ಪ ಭಾಗವನ್ನು ಕಳೆದುಕೊಳ್ಳುವ ಆಶಾ ಭಾವನೆಯೊಂದಿಗೆ ಪಥ್ಯಾಹಾರದ ಬಗ್ಗೆಯೂ ಯೋಚಿಸುತ್ತಾಳೆ. ಮೊಟ್ಟ ಮೊದಲನೆಯದಾಗಿ ನವಮಾತೆಯರು ಮಾಡಬೇಕಾದ ಕೆಲಸವೆಂದರೆ ತಮ್ಮ ದೇಹದೊಂದಿಗೆ ಸಹನೆಯಿಂದ ಇರುವುದು. ನೀವು ಶಿಶುವಿಗೆ ಜನ್ಮ ನೀಡಲು 9 ತಿಂಗಳು ತೆಗೆದುಕೊಂಡಿರುವಾಗ ನಿಮ್ಮ ಹಿಂದಿನ ಶರೀರದ ಆಕಾರ ಹೊಂದಲು ದೀರ್ಘ ಸಮಯ ಬೇಕಾಗುತ್ತದೆ ಎಂಬುದನ್ನು ಮರೆಯಬಾರದು.

ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಟದ ಕೆಲಸವಾದರೂ, ಅದನ್ನು ಇಳಿಸಿಕೊಳ್ಳಲೇಬೇಕಾಗುತ್ತದೆ. ಏಕೆಂದರೆ ತೂಕ ಕಡಿಮೆ ಮಾಡಿಕೊಳ್ಳದಿದ್ದರೆ ಅತಿಯಾದ ತೂಕ, ಸ್ಥೂಲಕಾಯ ಮತ್ತು ಬೊಜ್ಜು  ಜೀವನವಿಡೀ ಕಾಡುತ್ತದೆ. ಅಂದರೆ ಮಗು ಸ್ತನಪಾನ ಮಾಡುವುದನ್ನು ನಿಲ್ಲಿಸುವುದಕ್ಕೂ ಮುನ್ನ  ಪಥ್ಯಾಹಾರ ಆರಂಭಿಸಬೇಕೆಂಬುದು ಇದರ ಅರ್ಥವಲ್ಲ.ದೇಹವು ಮೊದಲು ಹೆರಿಗೆ ಮತ್ತು ಬಾಣಂತನದಿಂದ ಚೇತರಿಸಿಕೊಳ್ಳಬೇಕು. ಹಾಗಾಗಿ ಆಹಾರದಲ್ಲಿನ ಕ್ಯಾಲೋರಿ ಸೇವನೆ ಬಗ್ಗೆ ಗಮನಹರಿಸಲು ಆರಂಭಿಸುವುದಕ್ಕೂ ಮುನ್ನ 6 ವಾರಗಳ ಕಾಲಾವಕಾಶ ನೀಡಬೇಕು.

ಎಷ್ಟು ತೂಕ ಕಳೆದುಕೊಳ್ಳುತ್ತೀರಾ ಎಂಬುದು ಇಲ್ಲಿ ಮುಖ್ಯವಲ್ಲ.  ನಿರ್ದಿಷ್ಟವಾಗಿ ಸ್ತನಪಾನ ಮಾಡಿಸುತ್ತಿದ್ದರೆ ಪ್ರತಿ ದಿನ 1,800-2,000 ಕ್ಯಾಲೋರಿಗಿಂತ ಕಡಿಮೆ ಇರದಂತೆ  ಆಹಾರ ಸೇವಿಸಲು ಯತ್ನಿಸಿ. ಕ್ಯಾಲೋರಿಗಳ ಹಠಾತ್ ಇಳಿಕೆ ಹಾಲು ಪೂರೈಕೆಯನ್ನು ಕಡಿಮೆ ಮಾಡಬಹುದು. ಆರೋಗ್ಯಕರ ಆಹಾರ ಸೇವನೆ ಹಾಗೂ ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ  ಹೆರಿಗೆಯಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಕಾರಿ. ಅಲ್ಲದೇ ಇದು  ಬಾಣಂತನದ ಆರೈಕೆ ಹಾಗೂ ಮಗುವಿಗೆ ಬೇಕಾದ ಶಕ್ತಿಯನ್ನು ಸಹ ನೀಡುತ್ತದೆ.

Dr.B-Ramesh Altius hospital

ಡಾ. ಬಿ. ರಮೇಶ್- ಆಲ್ಟಿಯಸ್ ಹಾಸ್ಪಿಟಲ್
ಶಾಖೆ: ರಾಜಾಜಿನಗರ: 6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
Ph: 9900031842/ 080-23151873

ಶಾಖೆ:ರಾಜರಾಜೇಶ್ವರಿನಗರ : 915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು-560098.

Ph:o80-28606789/9663311128

E-mail : endoram2006@yahoo.co.in , altiushospital@yahoo.com

www.altiushospital.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!